Tag: ಹಳದಿ ಮಾರ್ಗ

  • ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ಸಂಚಾರದಲ್ಲಿ ವ್ಯತ್ಯಯ

    ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ, ಸಂಚಾರದಲ್ಲಿ ವ್ಯತ್ಯಯ

    ಬೆಂಗಳೂರು: ಹೊಸದಾಗಿ ಆರಂಭಗೊಂಡಿರುವ ನಮ್ಮ ಮೆಟ್ರೋ ಹಳದಿ ಮಾರ್ಗದ ಮೆಟ್ರೋದಲ್ಲಿ (Yellow Line Metro) ತಾಂತ್ರಿಕ ಸಮಸ್ಯೆ ಎದುರಾಗಿದೆ.

    ತಾಂತ್ರಿಕ ಸಮಸ್ಯೆಯಿಂದ (Techinical Problem) ಪ್ರತಿ 25 ನಿಮಿಷಕ್ಕೆ ಒಂದರಂತೆ ರೈಲುಗಳು ಸಂಚಾರ ನಡೆಸುತ್ತಿವೆ. ಸಾರ್ವಜನಿಕರು ಸಹಕರಿಸಬೇಕೆಂದು ಬಿಎಂಆರ್‌ಸಿಎಲ್‌ (BMRCL) ಮನವಿ ಮಾಡಿದೆ.  ಇದನ್ನೂ ಓದಿ:  ಸೈಬರ್‌ ಕ್ರೈಮ್‌ ಹಬ್‌ ಆಗ್ತಿದ್ಯಾ ಬೆಂಗಳೂರು? – ಮೆಟ್ರೋ ನಗರಗಳ ಪೈಕಿ 50% ಕೇಸ್‌ ಸಿಲಿಕಾನ್‌ ಸಿಟಿಯದ್ದೇ!

    ಆರ್‌ವಿ ಕಾಲೇಜ್‌ ರಸ್ತೆಯಿಂದ (RV College Road) ಬೊಮ್ಮಸಂದ್ರದವರೆಗೆ ಸಾಗುವ ಹಳದಿ ಮಾರ್ಗದ ಮೆಟ್ರೋ ಸೇವೆಗೆ ಇದೇ ಆಗಸ್ಟ್‌ 10 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

    19.15 ಕಿ.ಮೀ ಉದ್ದದ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿದ್ದು 3 ಮೆಟ್ರೋ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು ನಾಲ್ಕು ರೈಲುಗಳು ಈಗ ಸಂಚಾರ ನಡೆಸುತ್ತಿದ್ದು ಶೀಘ್ರವೇ 5ನೇ ರೈಲು ಸೇರ್ಪಡೆಯಾಗುವ ಸಾಧ್ಯತೆಯಿದೆ.

  • ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

    ಬಹುನಿರೀಕ್ಷಿತ ಯೆಲ್ಲೋ ಲೈನ್ ಮೆಟ್ರೋ ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತ

    – ಆರ್‌ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ

    ಬೆಂಗಳೂರು: ಸಿಲಿಕಾನ್ ಸಿಟಿ (Silicon City) ಜನರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋದ (Namma Metro) ಹಳದಿ ಮಾರ್ಗ (Yellow Line) ಇಂದಿನಿಂದ ಕಾರ್ಯಾರಂಭಿಸಿದೆ. ಭಾನುವಾರ (ಆ.10) ಪ್ರಧಾನಿ ಮೋದಿಯವರಿಂದ (PM Modi) ಚಾಲನೆಯಾದ ಬಳಿಕ ಸೋಮವಾರ (ಆ.11) ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ.

    ಬೆಂಗಳೂರಿನ ಟ್ರಾಫಿಕ್ ಜಂಗುಳಿಗೆ ಕೊಂಚ ಬ್ರೇಕ್ ಹಾಕಿರೋ ರೈಲುಗಾಡಿಯೇ ನಮ್ಮ ಮೆಟ್ರೋ. ಇದೀಗ ಸುಗಮ ಸಂಚಾರದ ಮತ್ತೊಂದು ಕನಸು ನನಸಾಗಿದೆ. ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಅದರ ಬೆನ್ನಲ್ಲೇ ಸೋಮವಾರ ಬೆಳಿಗ್ಗೆ 6:30ರಿಂದಲೇ ಮೊದಲ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಿದೆ.ಇದನ್ನೂ ಓದಿ: ಮೆಟ್ರೋ ಕ್ರೆಡಿಟ್‌ ವಾರ್‌ – ಕೇಂದ್ರದ್ದೆಷ್ಟು? ರಾಜ್ಯದ್ದೆಷ್ಟು?

    ಬೆಳಿಗ್ಗೆ 6:30ಕ್ಕೆ ಬೊಮ್ಮಸಂದ್ರದಿಂದ ಮೊದಲ ಮೆಟ್ರೋ ಪ್ರಾರಂಭವಾದರೆ, ಬೆಳಿಗ್ಗೆ 7:10ಕ್ಕೆ ಆರ್‌ವಿ ರಸ್ತೆಯಿಂದ ಮೊದಲ ಮೆಟ್ರೋ ಆರಂಭವಾಗಿದೆ. ಪ್ರತಿ 25 ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಆರ್‌ವಿ ರಸ್ತೆ ಟು ಬೊಮ್ಮಸಂದ್ರದವರೆಗೆ ಸಂಚರಿಸಲಿವೆ. ರಾತ್ರಿ 10:42ಕ್ಕೆ ಬೊಮ್ಮಸಂದ್ರದಿಂದ ಹಾಗೂ ರಾತ್ರಿ 11:55ಕ್ಕೆ ಆರ್‌ವಿ ರಸ್ತೆಯಿಂದ ಕೊನೆಯ ರೈಲು ಸಂಚರಿಸಲಿದೆ. ಇನ್ನೂ ಪ್ರತಿದಿನ ರಾತ್ರಿ 10 ಗಂಟೆ ನಂತರ ರೈಲು ಸಂಚಾರದ ಅವಧಿ ಕಡಿಮೆಯಾಗಲಿದೆ.

    ಪ್ರತಿ ಭಾನುವಾರದಂದು ಬೆಳಿಗ್ಗೆ 6:30ರ ಬದಲಾಗಿ 7ಕ್ಕೆ ಹಳದಿ ಮಾರ್ಗದ ಮೆಟ್ರೋ ಪ್ರಾರಂಭವಾಗಲಿದ್ದು, ಈ ನಿಲ್ದಾಣಗಳ ನಡುವಿನ ಪ್ರಯಾಣ ದರ 60 ರೂ. ನಿಗದಿಪಡಿಸಲಾಗಿದೆ.

    ಐಪೋನ್ ಬಳಸುವ ಗ್ರಾಹಕರು ಆಪಲ್ ಸ್ಟೋರ್‌ನಿಂದ ಮೆಟ್ರೋ ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಕ್ಯೂಆರ್ ಟಿಕೆಟ್ ಖರೀದಿಸಲು ಅವಕಾಶವಿದೆ. ಒಟ್ಟು 16 ಮೆಟ್ರೋ ನಿಲ್ದಾಣಗಳು ಈ ಮಾರ್ಗದ ಅಡಿಯಲ್ಲಿವೆ. ಇನ್ನೂ ಸದ್ಯಕ್ಕೆ ಮೂರು ರೈಲು ಸೆಟ್‌ಗಳು ಸಂಚರಿಸುತ್ತಿದ್ದು, ಹೆಚ್ಚು ರೈಲು ಸೆಟ್‌ಗಳು ಸೇವೆಗೆ ಸೇರ್ಪಡೆಯಾಗುತ್ತಿದ್ದಂತೆ ರೈಲು ಸಂಚಾರದ ಅವಧಿ ಹೆಚ್ಚಳ ಮಾಡಲಾಗುವುದೆಂದು ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

    ಒಟ್ಟಿನಲ್ಲಿ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ ಭಾಗದ ಟ್ರಾಫಿಕ್ ಕಿರಿಕಿರಿಗೆ ಈ ಯೆಲ್ಲೋ ಲೈನ್ ಮೆಟ್ರೋ ಬ್ರೇಕ್ ಹಾಕುವ ನಿರೀಕ್ಷೆಯಿದೆ.ಇದನ್ನೂ ಓದಿ: ಶಕ್ತಿ ಯೋಜನೆ ಉಲ್ಲೇಖಿಸಿ ಮೋದಿ ಸಿಡಿಸಿದ ಚಟಾಕಿಗೆ ನಕ್ಕಿದ ಸಿಎಂ, ಡಿಸಿಎಂ

     

  • ಬೆಂಗಳೂರಿನಲ್ಲಿ ಮೋದಿ – ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರಿನಲ್ಲಿ ಮೋದಿ – ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಇಲ್ಲಿದೆ ಪೂರ್ಣ ವಿವರ

    ಬೆಂಗಳೂರು: ಸಿಲಿಕಾನ್‌ ಸಿಟಿ ಜನರ ಬಹುದಿನಗಳ ಕನಸು ನನಸಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹಳದಿ ಮಾರ್ಗವನ್ನು (Yellow Line) ಉದ್ಘಾಟಿಸಲಿದ್ದಾರೆ.

    ಬೆಳಿಗ್ಗೆ 10:30ಕ್ಕೆ ಬೆಂಗಳೂರಿಗೆ (Bengaluru) ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 3 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದರಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಸಂಚರಿಸುವ ರೈಲು ಕೂಡ ಸೇರಿದೆ. ಬಳಿಕ 11:50ರ ಸುಮಾರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.

    ಸುಮಾರು 5,057 ಕೋಟಿ ವೆಚ್ಚದ ಮೆಟ್ರೋ ಹಳದಿ ಮಾರ್ಗ ಇದಾಗಿದ್ದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಯೆಲ್ಲೋ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲು ಸಿದ್ಧವಾಗಿದೆ. ಪ್ರಧಾನಿ ಮೋದಿ ಸ್ವಾಗತಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಇಂದು ‌ತಾತ್ಕಾಲಿಕವಾಗಿ ಬಂದ್‌ ಆಗಲಿದೆ ಹಸಿರು ಮಾರ್ಗದ 4 ನಿಲ್ದಾಣಗಳು

     
    ಮೋದಿ ಟೈಮ್‌ಲೈನ್‌
    10:30 – ದೆಹಲಿಯಿಂದ ಹೊರಟ ಮೋದಿ ಹೆಚ್‌ಎಎಎಲ್‌ ನಿಲ್ದಾಣಕ್ಕೆ ಆಗಮನ.
    10:55 – ಎಚ್‌ಎಎಲ್‌ನಿಂದ ಎಂಐ 17 ಹೆಲಿಕಾಪ್ಟರ್‌ ಮೂಲಕ ಮೇಖ್ರಿ ಸರ್ಕಲ್ ಬಳಿಯ ಸೇನಾಧಿಕಾರಿ ಕಚೇರಿ ಎಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ.
    11:00 – ರಸ್ತೆ ಮಾರ್ಗದ ಮೂಲಕ ಮೆಜೆಸ್ಟಿಕ್‌ ಬಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮನ, 3 ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ.

    11:45 – ಕಾರಿನಲ್ಲಿ ರಾಗಿ ಗುಡ್ಡ ಮೆಟ್ರೋ ನಿಲ್ದಾಣಕ್ಕೆ ಆಗಮನ. ಹಳದಿ ಮಾರ್ಗದ ಮೆಟ್ರೋಗೆ ಹಸಿರು ನಿಶಾನೆ ತೋರಿ ಬಳಿಕ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲಿ ಸಂಚಾರ.
    12:55 – ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಎಲೆಕ್ಟ್ರಾನಿಕ್‌ ಸಿಟಿಯ ಐಐಟಿ ಆಡಿಟೋರಿಯಂನಲ್ಲಿ ಆಯೋಜನೆಗೊಂಡ ಕಾರ್ಯಕ್ರಮಕ್ಕೆ ಆಗಮನ. ಕೆಂಪಾಪುರ- ಜೆಪಿ ನಗರ ನಮ್ಮ ಮೆಟ್ರೋ ಕಿತ್ತಳೆ ಮಾರ್ಗ ಮತ್ತು ಹೊಸಹಳ್ಳಿ – ಕಡಬಗೆರೆ ಬೂದು ಮಾರ್ಗದ 3ನೇ ಹಂತದ ಮೆಟ್ರೋಗೆ ಶಂಕುಸ್ಥಾಪನೆ. ಈ ವೇದಿಕೆ ಕಾರ್ಯಕ್ರಮ ಸುಮಾರು ಒಂದು ಗಂಟೆ ನಡೆಯಲಿದೆ.

    02:15 – ಎಲೆಕ್ಟ್ರಾನಿಕ್‌ ಸಿಟಿಯಿಂದ ರಸ್ತೆ ಮಾರ್ಗದ ಮೂಲಕ ಮೇಖ್ರಿ ಸರ್ಕಲ್ ಬಳಿಯ ಸೇನಾಧಿಕಾರಿ ಕಚೇರಿ ಎಚ್‌ಕ್ಯೂಟಿಸಿಯ ಹೆಲಿಪ್ಯಾಡ್‌ ಆಗಮನ.
    02:40 – ಹೆಲಿಕಾಪ್ಟರ್‌ ಮೂಲಕ ಹೆಚ್‌ಎಎಲ್‌ಗೆ ತೆರಳಿ ಅಲ್ಲಿಂದ ದೆಹಲಿಗೆ ನಿರ್ಗಮನ.

    ಬಿಜೆಪಿಯಿಂದ ಸ್ವಾಗತ
    ಪ್ರಧಾನಿ ಮೋದಿ ಸ್ವಾಗತಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಚಾಲುಕ್ಯ ವೃತ್ತದಲ್ಲಿ 2,500 ಕಾರ್ಯಕರ್ತರು, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ 3,750 ಕಾರ್ಯಕರ್ತರು, ಸೌತ್ ಎಂಡ್ ವೃತ್ತದಲ್ಲಿ 3,550 ಕಾರ್ಯಕರ್ತರು, ರಾಗಿಗುಡ್ಡ ವೃತ್ತದಲ್ಲಿ 3,000 ಕಾರ್ಯಕರ್ತರು, ಎಲೆಕ್ಟ್ರಾನಿಕ್ ಸಿಟಿ ವೃತ್ತದಲ್ಲಿ 4,000 ಕಾರ್ಯಕರ್ತರು ಪ್ರಧಾನಿ ಮೋದಿಗೆ ಸ್ವಾಗತ ಕೋರಲಿದ್ದಾರೆ.

  • ಇಂದು ‌ತಾತ್ಕಾಲಿಕವಾಗಿ ಬಂದ್‌ ಆಗಲಿದೆ ಹಸಿರು ಮಾರ್ಗದ 4 ನಿಲ್ದಾಣಗಳು

    ಇಂದು ‌ತಾತ್ಕಾಲಿಕವಾಗಿ ಬಂದ್‌ ಆಗಲಿದೆ ಹಸಿರು ಮಾರ್ಗದ 4 ನಿಲ್ದಾಣಗಳು

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮನದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಸಿರು ಮಾರ್ಗದ (Green Line) ನಾಲ್ಕು ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಲಿದೆ.

    ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ, ಆರ್ ವಿ ರಸ್ತೆ ಮೆಟ್ರೋ ನಿಲ್ದಾಣಗಳು ತಾತ್ಕಾಲಿಕ ಮುಚ್ಚಲಾಗುತ್ತದೆ ಎಂದು ಎಂದು ಬಿಎಂಆರ್‌ಸಿಎಲ್‌ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.  ಇದನ್ನೂ ಓದಿ: ಬೆಂಗಳೂರಿಗೆ ಬರಲಿದ್ದಾರೆ ಮೋದಿ ಹಲವೆಡೆ ವಾಹನ ಸಂಚಾರ ಬಂದ್‌, ಪರ್ಯಾಯ ಮಾರ್ಗ ಯಾವುದು?

     

    ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 10:30ಕ್ಕೆ ಬೆಂಗಳೀರಿಗೆ ಆಗಮಿಸಲಿರುವ ಮೋದಿ 3 ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದು, ಇದರಲ್ಲಿ ಬೆಳಗಾವಿಯಿಂದ ಬೆಂಗಳೂರು ರೈಲು ಕೂಡ ಸೇರಿದೆ. ಬಳಿಕ 11:50 ರ ಸುಮಾರಿಗೆ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ

    5,057 ಕೋಟಿ ವೆಚ್ಚದ ಮೆಟ್ರೋ ಹಳದಿ ಮಾರ್ಗ ಇದಾಗಿದ್ದು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗದಲ್ಲಿ ಹಳದಿ ಮೆಟ್ರೋ ರೈಲು ಸಂಚರಿಸಲು ಸಿದ್ಧವಾಗಿದೆ. ಉದ್ಘಾಟನೆ ಮಾಡಿದ ಬಳಿಕ ರಾಗಿಗುಡ್ಡ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಯವರೆಗೆ ಮೋದಿ ಮೆಟ್ರೋದಲ್ಲಿ ಸಂಚಾರ ಮಾಡಲಿದ್ದಾರೆ. ಹಳದಿ ಮಾರ್ಗ ಒಟ್ಟು 16 ನಿಲ್ದಾಣಗಳನ್ನು ಒಳಗೊಂಡಿದೆ.

  • ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

    ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ ಖಚಿತ – ಬಿಜೆಪಿ ಕಾರ್ಯಕರ್ತರ ಸಮಾವೇಶ, ರೋಡ್ ಶೋಗೆ ಕೊಕ್

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದ (Yellow Line) ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು (PM Modi) ಬೆಂಗಳೂರಿಗೆ (Bengaluru)ಬರುವುದು ಖಚಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಆ.10ರಂದು ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲು ಬರುತ್ತಿದ್ದಾರೆ. ಪ್ರಧಾನಿಯವರು ಬರುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಸಂಬಂಧ ತಯಾರಿ ನಡೆಯುತ್ತಿರುವ ಬಗ್ಗೆ ಇಂದು ಪರಿಶೀಲನೆ ಮಾಡುತ್ತಿದ್ದೇನೆ. ಪ್ರಧಾನಿಯವರ ಬೇರೆ ಬೇರೆ ಕಾರ್ಯಕ್ರಮಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ದೊರೆತಿಲ್ಲ. ಬರುತ್ತೀವಿ ಎಂದು ಹೇಳಿದ್ದಾರಷ್ಟೇ. ಟೈಮ್ ಟು ಟೈಮ್ ಪ್ರೋಗ್ರಾಮ್ ಬಗ್ಗೆ ಇನ್ನೂ ಮಾಹಿತಿ ತಿಳಿಸಿಲ್ಲ ಎಂದರು.ಇದನ್ನೂ ಓದಿ: ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಆಗಸ್ಟ್ 10ರ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಆಗಸ್ಟ್ 10ರಂದು ಪ್ರಧಾನಿಯವರು ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಮತ್ತು ವಂದೇ ಭಾರತ್ ರೈಲು ಉದ್ಘಾಟನೆಯಷ್ಟೇ ಮಾಡಲಿದ್ದಾರೆ. ಉಳಿದಂತೆ ಜಯನಗರ ಶಾಲಿನಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಹಾಗೂ ರಾಗಿಗುಡ್ಡ ಟು ಜಯನಗರದವರೆಗೆ ರೋಡ್ ಶೋ ಇರುವುದಿಲ್ಲ. ಇವರೆಡೂ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಭಾಗವಹಿಸುವುದಿಲ್ಲ ಎಂದು ಹೇಳಿದರು.

    ಒಂದು ವರ್ಷದ ನಂತರ ಮೋದಿಯವರ ಆಗಮನದ ನಿರೀಕ್ಷೆಯಲ್ಲಿದ್ದ (BJP) ಬಿಜೆಪಿ, ಕಾರ್ಯಕರ್ತರ ಸಮಾವೇಶ ಹಾಗೂ ರೋಡ್ ಶೋಗೆ ಸಿದ್ಧತೆ ಮಾಡಿಕೊಂಡಿತ್ತು. ಈ ಕಾರ್ಯಕ್ರಮಗಳು ರದ್ದಾದ ಹಿನ್ನೆಲೆ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ.ಇದನ್ನೂ ಓದಿ: ನಿಜವಾದ ಭಾರತೀಯ ಯಾರೆಂದು ನಿರ್ಧರಿಸೋದು ಸುಪ್ರೀಂಕೋರ್ಟ್ ನ್ಯಾಯಾಧೀಶರ ವ್ಯಾಪ್ತಿಗೆ ಬರಲ್ಲ – ಪ್ರಿಯಾಂಕಾ ಗಾಂಧಿ

  • Namma Metro: ಹಳದಿ ಮಾರ್ಗಕ್ಕೆ 3ನೇ ರೈಲು – ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

    Namma Metro: ಹಳದಿ ಮಾರ್ಗಕ್ಕೆ 3ನೇ ರೈಲು – ಜೂನ್‌ನಲ್ಲಿ ಸಂಚಾರ ಆರಂಭ ಸಾಧ್ಯತೆ

    – ಪ.ಬಂಗಾಳದ ಟಿಟಾಗಢದಿಂದ ಬೆಂಗಳೂರಿಗೆ ಆಗಮಿಸಿದ ಒಂದು ಸೆಟ್‌ ಬೋಗಿ ರೈಲು

    ಬೆಂಗಳೂರು: ಹಳದಿ ಮಾರ್ಗಕ್ಕೆ (Yellow Metro) 3ನೇ ರೈಲು ಸಿದ್ಧಗೊಂಡಿದ್ದು, ಇದೇ ಜೂನ್‌ನಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದೆ. ನಮ್ಮ ಮೆಟ್ರೋ ಅಳದಿ ಮಾರ್ಗಕ್ಕೆ ಪಶ್ಚಿಮ ಬಂಗಾಳದ ಟಿಟಾಗಢದಿಂದ ಒಂದು ಸೆಟ್‌ ರೈಲು ಬೋಗಿಗಳು ಬೆಂಗಳೂರಿಗೆ (Bengaluru) ಆಗಮಿಸಿವೆ.

    ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿದೆ. ಅಂತಿಮ ಪರೀಕ್ಷೆ ಪೂರ್ಣಗೊಳಿಸಿ ಇನ್ನೊಂದು ತಿಂಗಳಲ್ಲಿ ಮೆಟ್ರೊ ಸಂಚಾರ ಆರಂಭಿಸಲು ಯೋಜಿಸಿದೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮಂಗಳೂರು ಭೇಟಿ ‘ಬಂದ ಪುಟ್ಟ ಹೋದ ಪುಟ್ಟ’ ಆಗದಿರಲಿ: ಕ್ಯಾ.ಬ್ರಿಜೇಶ್ ಚೌಟ

    ಹೆಬ್ಬಗೋಡಿಯಲ್ಲಿರುವ ನಮ್ಮ ಮೆಟ್ರೊ ಡಿಪೊಗೆ ಎಲ್ಲ ಆರು ಕೋಚ್‌ಗಳು ತಲುಪಿವೆ. ಬೃಹತ್‌ ಲಾರಿಯಿಂದ ಇಳಿಸಿ ಜೋಡಣೆ ಮಾಡಲಾಗಿದೆ. ಬೊಮ್ಮಸಂದ್ರ–ಆರ್‌.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಮಾರ್ಗ ಇದಾಗಿದೆ.

    ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯಕತೆ ಇತ್ತು. ಚಾಲಕರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ. ಇದನ್ನೂ ಓದಿ: 327 ಕೋಟಿ ವೆಚ್ಚದ ನವಲಗುಂದ ಬೈಪಾಸ್ ರಸ್ತೆ ಕಾಮಗಾರಿಗೆ ಕೇಂದ್ರ ಅಸ್ತು

    ಪರೀಕ್ಷೆಗಳು ನಡೆದ ಬಳಿಕ ಪ್ರತಿ 30 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ರೈಲುಗಳ ಸಂಖ್ಯೆ ಹೆಚ್ಚಳವಾದಂತೆ ಟ್ರಿಪ್‌ಗಳ ನಡುವಿನ ಅವಧಿ ಕಡಿಮೆಯಾಗಲಿದೆ. ಈ ಮಾರ್ಗಕ್ಕೆ ಒಟ್ಟು 14 ರೈಲುಗಳ ಅಗತ್ಯವಿದೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸಲು 8 ರೈಲುಗಳು ಇರಬೇಕಿದೆ.

  • ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ – ಬೆಂಗಳೂರು ತಲುಪಿದ 2ನೇ ಡ್ರೈವರ್‌ಲೆಸ್‌ ಮೆಟ್ರೋ

    ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ – ಬೆಂಗಳೂರು ತಲುಪಿದ 2ನೇ ಡ್ರೈವರ್‌ಲೆಸ್‌ ಮೆಟ್ರೋ

    – 1,900 ಕಿಮೀ ದೂರದಿಂದ ಸಂಚರಿಸಿ ಬೆಂಗಳೂರು ತಲುಪಿದ ಹಳದಿ ಮಾರ್ಗದ ರೈಲು

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಎರಡನೇ ಚಾಲಕ ರಹಿತ ಮೆಟ್ರೋ (Driver Less Metro)  ಬೆಂಗಳೂರು ತಲುಪಿದೆ.

    ಟಿಟಾಗರ್‌ದಿಂದ 1,900 ಕಿ.ಮೀ ದೂರದಿಂದ ಸಂಚರಿಸಿ ಭಾನುವಾರ ಬೆಳಿಗ್ಗೆ 8:30ರ ಸುಮಾರಿಗೆ ಎರಡನೇ ಚಾಲಕ ರಹಿತ ಮೆಟ್ರೋ ಬೆಂಗಳೂರು ಹೆಬ್ಬಗೋಡಿ ಡಿಪೋಗೆ ತಲುಪಿದೆ. ಸಂವಹನ ಆಧಾರಿತ ರೈಲು ಇದಾಗಿದ್ದು, ಯೆಲ್ಲೋ ಲೈನ್‌ನಲ್ಲಿ ಚಾಲಕ ರಹಿತ ಮೆಟ್ರೋದ ವಾಣಿಜ್ಯ ಕಾರ್ಯಚರಣೆ ಆರಂಭಿಸಲು ಬಳಸಲಾಗುತ್ತದೆ.ಇದನ್ನೂ ಓದಿ: Aeroindia 2025 | ಬೆಂಗಳೂರಿಗೆ ಬಂದಿಳಿದ ಅಮೆರಿಕ – ರಷ್ಯಾ ಜೆಟ್

    ಇದಕ್ಕಾಗಿ ಸದ್ಯ ಕನಿಷ್ಟ 5 ಚಾಲಕ ರಹಿತ ಮೆಟ್ರೋಗಳ ಅವಶ್ಯಕತೆಯಿದ್ದು, ಇಂದು 2ನೇ ಮೆಟ್ರೋ ನಗರಕ್ಕೆ ಬಂದು ತಲುಪಿದೆ. ಇದಕ್ಕೂ ಮುನ್ನ ಕೆಲ ತಿಂಗಳ ಹಿಂದೆ ಮೊದಲ ಚಾಲಕ ರಹಿತ ಬೆಂಗಳೂರಿಗೆ ಬಂದಾಗಿದೆ.

    ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿ.ಮೀ ಚಲಿಸಲಿದೆ. ಕಳೆದ ನಾಲ್ಕು ವರ್ಷದಿಂದ ಯೆಲ್ಲೋ ಲೈನ್‌ಗಾಗಿ ಜನ ಕಾಯುತ್ತಿದ್ದು, ಇದರಿಂದ ಐಟಿಬಿಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು – ಮೊಬೈಲ್‌ನಲ್ಲಿ ದೃಶ್ಯ ಸೆರೆ

  • ಈ ವರ್ಷದ ಅಂತ್ಯಕ್ಕಿಲ್ಲ ಯೆಲ್ಲೋ ಲೈನ್ ಮೆಟ್ರೋ – 14 ದಿನಗಳ ಕಾಲ ಟೆಕ್ನಿಕಲ್ ಟೆಸ್ಟ್

    ಈ ವರ್ಷದ ಅಂತ್ಯಕ್ಕಿಲ್ಲ ಯೆಲ್ಲೋ ಲೈನ್ ಮೆಟ್ರೋ – 14 ದಿನಗಳ ಕಾಲ ಟೆಕ್ನಿಕಲ್ ಟೆಸ್ಟ್

    ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಯೆಲ್ಲೋ ಲೈನ್ (Bengaluru Namma Metro Yellow Line) ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇಂದಿನಿಂದ 14 ದಿನಗಳ ಕಾಲ ಆರ್‌ಡಿಎಸ್‌ಓ (RDSO) ರೈಲ್ವೆ ಅಧಿಕಾರಗಳಿಂದ ಟೆಕ್ನಿಕಲ್ ಟೆಸ್ಟ್ (Technical Test) ಆರಂಭಿಸಿದ್ದಾರೆ.

    ಇದಕ್ಕೂ ಮುನ್ನ ಈ ವರ್ಷದ ಅಂತ್ಯದಲ್ಲಿ ಯೆಲ್ಲೋ ಲೈನ್ ಕಾರ್ಯಾರಂಭಿಸುವ ಕುರಿತು ಮಾಹಿತಿ ನೀಡಿದ್ದ ಬಿಎಂಆರ್‌ಸಿಎಲ್ (BMRCL), ನಿರೀಕ್ಷೆ ಇಟ್ಟಿದ್ದ ಜನರಲ್ಲಿ ನಿರಾಸೆಯನ್ನುಂಟು ಮಾಡಿದೆ.ಇದನ್ನೂ ಓದಿ: ‘ಫೈರ್‌ ಫ್ಲೈ’ ಟೀಸರ್ ರಿಲೀಸ್- ವಿಕ್ಕಿಯಾಗಿ ವಂಶಿಯನ್ನು ಪರಿಚಯಿಸಿದ ಚಿತ್ರತಂಡ

    ಆರ್‌ವಿ ರಸ್ತೆಯಿಂದ (RV Road) ಬೊಮ್ಮಸಂದ್ರವರೆಗೆ (Bommasandra) ಹಳದಿ ಮಾರ್ಗದ ನಿರ್ಮಾಣ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿವೆ. ಆದರೆ ಹಲವಾರು ಟೆಕ್ನಿಕಲ್ ಕೆಲಸಗಳು ಬಾಕಿ ಇರುವ ಕಾರಣ ಇಂದಿನಿಂದ ಸುಮಾರು 14 ದಿನಗಳ ಕಾಲ ಪ್ರಾಯೋಗಿಕ ಟೆಸ್ಟ್ ನಡೆಯಲಿದೆ. ಈಗಾಗಲೇ ಆರ್‌ಡಿಎಸ್‌ಓ ರೈಲ್ವೆ ಆರ್ಗನೈಸೇಷನ್ ಅಧಿಕಾರಿಗಳು ಟೆಕ್ನಿಕಲ್ ಟೆಸ್ಟ್ ಆರಂಭಿಸಿದ್ದಾರೆ.

    ಇದಾದ ಬಳಿಕ ರೈಲ್ವೆ ಮಂಡಳಿಗೆ ಟೆಕ್ನಿಕಲ್ ರಿಪೋರ್ಟ್ ಸಲ್ಲಿಸಬೇಕು. ರಿಪೋರ್ಟ್‌ನ ಪರಿಶೀಲನೆ ನಡೆಸಿ, ಮಂಡಳಿಯು ತಾಂತ್ರಿಕ ಮಂಜೂರಾತಿಯನ್ನು ನೀಡುತ್ತದೆ. ಆ ಮೂಲಕ ಯೆಲ್ಲೋ ಲೈನ್ ಮೆಟ್ರೋ ಆರಂಭದ ಕುರಿತು ಬಿಎಂಆರ್‌ಸಿಎಲ್ ತಿಳಿಸುತ್ತದೆ. ಟೆಕ್ನಿಕಲ್ ಕೆಲಸಗಳು ಇರುವ ಕಾರಣ ಮುಂದಿನ ವರ್ಷ 2025 ಜನವರಿ ಅಥವಾ ಫೆಬ್ರವರಿಗೆ ಆರಂಭ ಆಗುವ ಸಾಧ್ಯತೆ ಇದೆ.ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ಯಾವೆಲ್ಲಾ ಟೆಸ್ಟ್‌ಗಳು ನಡೆಯಲಿವೆ?
    ಸ್ಪೀಡ್ ಟೆಸ್ಟ್, ಬ್ರೇಕ್ ಟೆಸ್ಟ್, ಮರಳಿನ ಮೂಟೆಗಳನ್ನು ಹಾಕಿ ತೂಕದ ಟೆಸ್ಟ್, ಹೆಚ್ಚು ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಕಡಿಮೆ ತೂಕ ಇದ್ದಾಗ ಸ್ಪೀಡ್ ಟೆಸ್ಟ್, ಟೆಕ್ನಿಕಲ್ ತಾಂತ್ರಿಕ ಪ್ರಯೋಗ ಪರೀಕ್ಷೆ , ಮೆಟ್ರೋ ಸ್ಟೇಷನ್ ಬಳಿ ಸ್ಟಾಪ್ ಪ್ರಮಾಣ ಟೆಸ್ಟ್ ನಡೆಯಲಿದೆ

  • ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    ಚೆನ್ನೈ: ಬಹುನಿರೀಕ್ಷಿತ ಚಾಲಕ ರಹಿತ ಹಳದಿ ಮೆಟ್ರೋ ರೈಲು (Driverless Yellow Metro Train) ಚೀನಾದಿಂದ (China) ಹೊರಟು ಮಂಗಳವಾರ ಚೆನ್ನೈ ಬಂದರು (Chennai Port) ತಲುಪಿದೆ. ಮಂಗಳವಾರ ಬೆಳಗ್ಗೆ ಬೋಗಿಗಳು ಚೆನ್ನೈ ಬಂದರಿಗೆ ಆಗಮಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಈ ಬೋಗಿಗಳನ್ನು ಚೀನಾದಿಂದ ತರಿಸಲಾಗಿದೆ.

    ಚೆನ್ನೈ ಬಂದರಿನಲ್ಲಿ ಕಾರ್ಗೋ ಶಿಪ್‌ನಿಂದ (Cargo Ship) ಬೋಗಿಗಳನ್ನು ಅನ್‌ಲೋಡ್ ಮಾಡಲಾಗಿದೆ. ಇದಾದ ಬಳಿಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರೈಲು ಆಗಮಿಸಲಿದೆ. ಚೀನಾದಿಂದ ರವಾನೆಯಾದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರಿಗೆ ಆಗಮಿಸಿರುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಖಚಿತಪಡಿಸಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಈ ಬೋಗಿಗಳನ್ನು ರಸ್ತೆ ಮೂಲಕ ಬೆಂಗಳೂರಿಗೆ (Bengaluru) ಸಾಗಿಸಲಾಗುತ್ತದೆ. ಕಸ್ಟಮ್ ಕ್ಲಿಯರೆನ್ಸ್ ಸುಮಾರು 5 ದಿನಗಳನ್ನು ತೆಗೆದುಕೊಳ್ಳಬಹುದು. ಫೆಬ್ರವರಿ 18ರ ಒಳಗೆ ರೈಲು ಬೆಂಗಳೂರಿಗೆ ತಲುಪುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವ್ಹಾಣ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ

    ರಾತ್ರಿಯ ವೇಳೆಗೆ ಮಾತ್ರ ಈ ಬೋಗಿಗಳನ್ನು ರಸ್ತೆ ಮುಖಾಂತರ ಸಾಗಿಸಬಹುದು. ಹೆಬ್ಬಗೋಡಿಗೆ ತಲುಪಿದ ಬಳಿಕ ಟ್ರ್ಯಾಕ್‌ನಲ್ಲಿ ಚಲಿಸುವ ಮೊದಲು ಕೆಲವೊಂದು ಪರೀಕ್ಷೆಗಳನ್ನು ನಡೆಸಬೇಕಿದೆ. ಇದಾದ ಬಳಿಕ ಟ್ರ್ಯಾಕ್‌ನಲ್ಲಿ 15 ಪರೀಕ್ಷೆಗಳನ್ನು ಮಾಡಬೇಕಿದೆ. ನಂತರ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆ ಅಗತ್ಯವಿದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

    ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ. ಇದನ್ನೂ ಓದಿ:  ಅಯೋಧ್ಯೆಯಲ್ಲಿ ಹೊಸ ಮಸೀದಿ – ಮೆಕ್ಕಾದಿಂದ ಬಂದಿದೆ ಪವಿತ್ರ ಇಟ್ಟಿಗೆ

  • ಹಳದಿ ಮಾರ್ಗದಲ್ಲಿ ಶೀಘ್ರವೇ ಸಂಚರಿಸಲಿದೆ ಚಾಲಕ ರಹಿತ ನಮ್ಮ ಮೆಟ್ರೋ

    ಹಳದಿ ಮಾರ್ಗದಲ್ಲಿ ಶೀಘ್ರವೇ ಸಂಚರಿಸಲಿದೆ ಚಾಲಕ ರಹಿತ ನಮ್ಮ ಮೆಟ್ರೋ

    ಬೆಂಗಳೂರು: ಚಾಲಕ ರಹಿತ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗದಲ್ಲಿ (Yellow Line) ಸಂಚರಿಸಿ ಶೀಘ್ರದಲ್ಲೇ ಇತಿಹಾಸ ಸೃಷ್ಟಿಸಲಿದೆ. ಈ ಚಾಲಕ ರಹಿತ ಮೆಟ್ರೋ ಬೋಗಿಗಳು ಚೀನಾದಿಂದ ಬರಲಿದೆ. ಇದರ ಬೋಗಿಗಳು ಯಾವ ರೀತಿ ಇರಲಿವೆ ಎಂಬ ಬಗ್ಗೆ ಸಣ್ಣ ಮಾಹಿತಿ ಇಲ್ಲಿದೆ.

    ಚಾಲಕ ರಹಿತ ಮೆಟ್ರೋ ಶೀಘ್ರವೇ ಹಳಿಗೆ ಬರಲಿದ್ದು, ಈ ಮೆಟ್ರೋ ಹೇಗಿರಬಹುದು ಎಂಬ ಕುತೂಹಲ ಜೋರಾಗಿತ್ತು. ಹಳದಿ ಮಾರ್ಗದಲ್ಲಿ ಮೋಡಿ ಮಾಡಲಿರುವ ಚಾಲಕ ರಹಿತ ಮೆಟ್ರೋ ಚೀನಾದಿಂದ ಬೆಂಗಳೂರು (Bengaluru) ಕಡೆ ಹೊರಟಿದೆ. ಇದರ ಎಕ್ಸ್‌ಕ್ಲ್ಯೂಸಿವ್ ದೃಶ್ಯವೂ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಮೊದಲ ಆರು ಬೋಗಿಗಳ ರೈಲನ್ನು ಜನವರಿ 20ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಹಡಗು ಮೆಟ್ರೋ ರೈಲು ಹೊತ್ತು ಸದ್ಯ ಚೆನ್ನೈನತ್ತ ತೆರಳುತ್ತಿದೆ. ಫೆಬ್ರವರಿ 7ಕ್ಕೆ ಕಾರ್ಗೋಶಿಪ್ ಮೂಲಕ ಚೆನ್ನೈ (Chennai) ಬಂದರಿಗೆ ಬರಲಿದೆ. ಇದನ್ನೂ ಓದಿ: ಇಂದು ಬಹುನಿರೀಕ್ಷಿತ ಮಧ್ಯಂತರ ಬಜೆಟ್ – ನಿರ್ಮಲಾ ಸೀತಾರಾಮನ್‌ರಿಂದ 6ನೇ ಬಾರಿಗೆ ಆಯವ್ಯಯ ಮಂಡನೆ

    ಬಂದರಿಗೆ ಬಂದ ನಂತರ ಚೆನ್ನೈನಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ರವಾನೆಯಾಗಲಿದ್ದು, ಈ ಚಾಲಕ ರಹಿತ ಮೆಟ್ರೋ ರೈಲಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಜೋಡಣೆ ಮಾಡಿದ ಬಳಿಕ ಎಲೆಕ್ಟ್ರಾನಿಕ್ ಸಿಟಿ-ಆರ್‌ವಿ ರಸ್ತೆಗೆ ಸಂಪರ್ಕಿಸುವ 19-ಕಿಮೀ ಹಳದಿ ಮಾರ್ಗದಲ್ಲಿ ಓಡಾಡಲಿದೆ. ಈ ಮೆಟ್ರೋ ಸೆಪ್ಟೆಂಬರ್ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ಸಂತ್ರಸ್ತ ಕುಟುಂಬಕ್ಕೆ ಗುಡ್ ನ್ಯೂಸ್ – 36 ಕುಟುಂಬಗಳಲ್ಲಿ 32 ಕುಟುಂಬಗಳಿಗೆ ಉದ್ಯೋಗ