Tag: ಹಳದಿ ಆಮೆ

  • ಅಪರೂಪದ ಹಳದಿ ಬಣ್ಣದ ಆಮೆ ಪತ್ತೆ

    ಅಪರೂಪದ ಹಳದಿ ಬಣ್ಣದ ಆಮೆ ಪತ್ತೆ

    ಭುವನೇಶ್ವರ: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಅಪರೂಪದ ಹಳದಿ ಬಣ್ಣದ ಆಮೆ ಪತ್ತೆಯಾಗಿದೆ.

    ಬಾಲಸೋರ್ ಜಿಲ್ಲೆಯ ಸುಜನ್‍ಪುರ ಗ್ರಾಮದ ಸ್ಥಳೀಯರು ಭಾನುವಾರ ಈ ವಿಶಿಷ್ಟವಾದ ಆಮೆಯನ್ನು ನೋಡಿದ್ದಾರೆ. ನಂತರ ಸ್ಥಳೀಯರು ಆಮೆ ಹಳದಿ ಬಣ್ಣ ಇರುವುದನ್ನು ನೋಡಿ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

    ಹಿರಿಯ ವನ್ಯಜೀವಿ ಅಧಿಕಾರಿಯೊಬ್ಬರು ಇದು ಅಪರೂಪದ ಆಮೆಯಾಗಿದೆ ಎಂದು ತಿಳಿಸಿದ್ದಾರೆ. ಹಳದಿ ಆಮೆ ಬಾಲಸೋರ್ ಜಿಲ್ಲೆಯ ಸುಜನ್‍ಪುರ ಗ್ರಾಮದ ಸ್ಥಳೀಯರು ಭಾನುವಾರ ರಕ್ಷಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಆಮೆಯನ್ನು ತೆಗೆದುಕೊಂಡು ಹೋಗಿದ್ದಾರೆ.

    “ರಕ್ಷಿಸಿದ ಆಮೆಯ ಸಂಪೂರ್ಣ ಕವಚ ಮತ್ತು ದೇಹ ಹಳದಿಯಾಗಿದೆ. ಇದು ಅಪರೂಪದ ಆಮೆಯಾಗಿದ್ದು, ನಾನು ಇದುವರೆಗೂ ಈ ರೀತಿಯ ಆಮೆಯನ್ನು ನೋಡಿಲ್ಲ” ಎಂದು ವನ್ಯಜೀವಿ ವಾರ್ಡನ್ ಆಚಾರ್ಯ ಹೇಳಿದ್ದಾರೆ.

    “ಬಹುಶಃ ಇದು ಆಲ್ಬಿನೋ ಆಗಿರಬಹುದು. ಕೆಲವು ವರ್ಷಗಳ ಹಿಂದೆ ಸಿಂಧ್‍ನ ಸ್ಥಳೀಯರು ಇಂತಹ ಒಂದು ಅಪರೂಪದ ಆಮೆಯನ್ನು ಪತ್ತೆ ಮಾಡಿದ್ದರು ಎಂದು ಐಎಫ್‍ಎಸ್ ಅಧಿಕಾರಿ ಸುಸಂತಾ ನಂದಾ ಟ್ವಿಟ್ಟಿರಿನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆಮೆ ನೀರಿನಲ್ಲಿ ಈಜುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಕಳೆದ ತಿಂಗಳು ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಡಿಯುಲಿ ಅಣೆಕಟ್ಟಿನಲ್ಲಿ ಅಪರೂಪದ ಜಾತಿಯ Trionychidae (ಟ್ರಯೋನಿಚಿಡೆ) ಆಮೆಯನ್ನು ಮೀನುಗಾರರು ಹಿಡಿದಿದ್ದರು. ನಂತರ ಅರಣ್ಯ ಇಲಾಖೆಯವರು ಆ ಆಮೆಯನ್ನು ರಕ್ಷಿಸಿ ಡಿಯುಲಿ ಅಣೆಕಟ್ಟಿನ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿತ್ತು.

    ಈ ಆಮೆಗಳು ಸಾಫ್ಟ್ ಕವಚ ಹೊಂದಿದ್ದು, ಇದು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದಲ್ಲಿ ಕಂಡುಬರುತ್ತದೆ. ಈ ಆಮೆ 30 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವಿತ್ತು. ಅದರ ಗರಿಷ್ಠ ಜೀವಿತಾವಧಿ 50 ವರ್ಷಗಳು ಎಂದು ಅರಣ್ಯ ಇಲಾಖೆ ತಿಳಿಸಿತ್ತು.