ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಯುವಕನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಅರುಣ್ ಹಲ್ಲೆಗೊಳಗಾದ ವ್ಯಕ್ತಿ. ಅರುಣ್ ಸ್ನೇಹಿತನ ಬರ್ತ್ ಡೇ ಅಂಗವಾಗಿ ಕ್ಯಾಂಡಲ್ ತರಲು ಹೋಗಿದ್ದ. ಬಾಗೇಪಲ್ಲಿಯ ಮುಖ್ಯ ರಸ್ತೆಯ ಬಾರ್ ಬಳಿ ತನ್ನ ಸ್ನೇಹಿತ ರವಿ ನೋಡಿ ಮಾತನಾಡಲು ಬೈಕ್ ನಿಲ್ಲಿಸಿದ್ದಾನೆ.
ಈ ವೇಳೆ ರವಿ ಜೊತೆ ಸಲುಗೆಯಿಂದ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದನ್ನು ಕಂಡ ರವಿಯ ಭಾವ ಯಾಕೆ ಅವಾಚ್ಯ ಪದ ಬಳಸ್ತೀಯಾ ಅಂತ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿದ್ದಾನೆ. ಈ ವೇಳೆ ರವಿಯ ಭಾವ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ:ನೂತನ ಲೋಕಾಯುಕ್ತರಾಗಿ ಭೀಮನಗೌಡ ಸಂಗನಗೌಡ ಪಾಟೀಲ್ ನೇಮಕ
ಭೋಪಾಲ್: ಪಿಜ್ಜಾ ಚೈನ್‍ನ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮಹಿಳಾ ಉದ್ಯೋಗಿಯು ಈ ನಾಲ್ವರನ್ನು ದಿಟ್ಟಿಸಿ ನೋಡಿದ್ದಾಳೆ ಎಂದು ಆರೋಪಿಸಿ ಆಕೆಗೆ ಹೊಡೆದಿದ್ದಾರೆ. ಕೊನೆಗೆ ಆಕೆ ನೆಲದ ಮೇಲೆ ಬಿದ್ದರೂ ಸ್ವಲ್ಪವೂ ಕನಿಕರ ತೋರದೆ ಕೋಲಿನಿಂದ ಆಕೆಯನ್ನು ಥಳಿಸಿದ್ದಾರೆ.
A young woman was mercilessly thrashed, grabbed by the hair in full public view by a group of women in Indore. The video of the incident shows four women beating up the victim, a pizza chain employee, using sticks and fists, for allegedly staring at them @ndtv@ndtvindiapic.twitter.com/R6l2epYLpJ
ಘಟನೆ ನಡೆಯುತ್ತಿರುವ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿದ್ದರೂ, ಆ ಮಹಿಳಾ ಉದ್ಯೋಗಿ ಸಹಾಯಕ್ಕಾಗಿ ಅಂಗಲಾಚಿ ಕಣ್ಣಿರಿಟ್ಟರೂ ಯಾರೊಬ್ಬರು ಸಹಾಯ ಮಾಡಲು ಮುಂದಾಗಲಿಲ್ಲ. ಇದರಿಂದಾಗಿ ಅಲ್ಲೇ ಸಮೀಪವಿರುವ ಮನೆಯೊಂದಕ್ಕೆ ಹೋಗಿ ಅಲ್ಲೇ ಬಚ್ಚಿಟ್ಟುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಇದನ್ನೂ ಓದಿ:ತಡರಾತ್ರಿ ಬಸವಕಲ್ಯಾಣದಲ್ಲಿ ಮುಸ್ಲಿಮರಿಂದ ದಿಢೀರ್ ಪ್ರತಿಭಟನೆ – ವ್ಯಕ್ತಿ ಅರೆಸ್ಟ್
ಹೊಲದಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ಹೋದಾಗ, ಒಬ್ಬನೆ ಇರುವುದು ತಿಳಿದು ಹಲ್ಲೆ ಮಾಡಿದ್ದಾರೆ. ಪಿತ್ರಾರ್ಜಿತವಾಗಿ ಬಂದ ಐದುವರೆ ಎಕರೆ ಜಮೀನಿನ ವಿವಾದ ಹಿನ್ನೆಲೆ ಹೊಡೆದಾಟ ನಡೆದಿದೆ. ಮಂಜುನಾಥ್‍ನಿಗೆ ದೊಣ್ಣೆಯಿಂದ ಹೊಡೆದು ಒಂದು ಕಾಲು ಮುರಿದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್
ಗಾಯಾಳು ಮಂಜುನಾಥ್‍ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಯರಗೇರಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ: ಜನರ ಓಡಾಟಕ್ಕೆ ಅಡೆತಡೆ ಮಾಡದಂತೆ ಹೇಳಿದ್ದಕ್ಕೆ ಕರ್ತವ್ಯನಿರತ ಇಬ್ಬರು ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ನಡೆದಿದೆ.
ಬಂಕಾಪುರ ಪೊಲೀಸ್ ಠಾಣೆಯ ಗಂಗಾಧರ್ ಹರಿಜನ ಮತ್ತು ದುಂಡಪ್ಪ ಸಿಬ್ಬಂದಿ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಹಲ್ಲೆ ಮಾಡಿದ ಆರೋಪಿಗಳನ್ನು ಹಾನಗಲ್ ತಾಲೂಕಿನ ಹರವಿ ಗ್ರಾಮದ ಅರ್ಜುನ್ ಮತ್ತು ಶಿವಕುಮಾರ್ ಎಂದು ಗುರುತಿಸಲಾಗಿದೆ.
ಟೋಲ್ ಗೇಟ್ ಬಳಿ ಇರುವ ಚಹಾ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಅಂಗಡಿ ಮುಂದಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿ ತಿಂಡಿ-ತಿನ್ನಿಸುಗಳ ಪ್ಯಾಕೇಟ್ ಹಾಕಿ ವಾಹನಗಳ ಓಡಾಟಕ್ಕೆ ತೊಂದರೆ ಮಾಡುತ್ತಿದ್ದರು.
ರಸ್ತೆಯಲ್ಲಿ ಇಟ್ಟಿಗೆ ಇಟ್ಟು ಹಗ್ಗ ಕಟ್ಟಿದ್ದನ್ನು ತೆಗೆಯುವಂತೆ ಹೇಳಿದ್ದಕ್ಕೆ ಕಾನ್‍ಸ್ಟೇಬಲ್‍ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮತ್ತಿಬ್ಬರು ಪೊಲೀಸರು ಅಂಗಡಿ ಹತ್ತಿರ ಬರುವುದನ್ನು ನೊಡಿ ಆರೋಪಿಯೊಬ್ಬ ಓಡಿ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಲಕ್ನೋ: ಪ್ರೇಮಿಗಳಿಬ್ಬರ ಪ್ರೇಮ ಸಂಬಂಧವನ್ನು ಒಪ್ಪದ ಹುಡುಗಿಯ ಸಂಬಂಧಿಕರು ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿ, ವಿಷ ಕುಡಿಸಿದ ಘಟನೆ ಗ್ರೇಟರ್ ನೋಯ್ಡಾದ ಕೊತ್ವಾಲಿಯ ದಾದ್ರಿ ಪ್ರದೇಶದಲ್ಲಿ ನಡೆದಿದೆ.
ಅನಂಗ್‍ಪುರ ಗ್ರಾಮದ ನಿವಾಸಿ ವಿಶಾಲ್ ಪಾಂಡೆ ಹಲ್ಲೆಗೊಳಗಾಗಿದ್ದ ವ್ಯಕ್ತಿ. ಯುವಕನನ್ನು ಮಾರಣಾಂತಿಕ ಹಲ್ಲೆ ನಡೆಸಿ ಆತ ಮೃತಪಟ್ಟಿರಬಹುದು ಎಂದು ಭಾವಿಸಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನನ್ನು ಕಂಡ ದಾರಿಹೋಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಾಯಾಳುವನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಯುವಕ ವೀಡಿಯೋ ರೆಕಾರ್ಡ್ ಮಾಡಿ ಕುಟುಂಬ ಸದಸ್ಯರಿಗೆ ಕಳುಹಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸ್ಟೇರಿಂಗ್ ಕಟ್ ಆಗಿ ಕೆರೆಗೆ ಉರುಳಿದ ಗೂಡ್ಸ್ ವಾಹನ
ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಪ್ರಕಾರ, ಮೃತನನ್ನು ಮೊದಲಿಗೆ ಮಹಿಳೆಯ ಮನೆಯವರು ಸಂಚು ರೂಪಿಸಿ ಯುವತಿಗೆ ಆತನನ್ನು ದಂಕೌರ್‍ನ ಚಿಟಿ ಗ್ರಾಮದ ಕಾಲುವೆ ಬಳಿ ಕರೆಸುವಂತೆ ಒತ್ತಡ ಹೇರಿದ್ದಾರೆ. ನಂತರ ಕುಟುಂಬವು ಯುವಕನನ್ನು ಬರ್ಬರವಾಗಿ ಥಳಿಸಿ ವಿಷವನ್ನು ಕುಡಿಸಿ ಹಲ್ಲೆಗೈದಿದ್ದಾರೆ. ಈ ವೇಳೆ ಆತ ಸತ್ತಿದ್ದಾನೆ ಎಂದು ಭಾವಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ
ಮೃತನ ತಂದೆ ನೀಡಿದ ದೂರಿನ ಮೇರೆಗೆ ದಾದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬಾಗಲಕೋಟೆ: ವಕೀಲೆ ಸಂಗೀತಾ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದ್ದು ಮತ್ತೊಂದು ವೀಡಿಯೋ ತುಣಕು ವೈರಲ್ ಆಗಿದೆ.
ಈ ಹಿಂದೆ ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಆದರೆ ಈಗ ಮಹಾಂತೇಶ್ ಚೊಳಚಗುಡ್ಡ ಅವರ ಮೇಲೆ ಸಂಗೀತಾ ಅವರು ಚಪ್ಪಲಿಯಲ್ಲಿ ಹೊಡೆದ ವೀಡಿಯೋ ವೈರಲ್ ಆಗಿದೆ.
ನಿಜವಾಗಿ ನಡೆದಿದ್ದೇನು?
ಮಹಾಂತೇಶ್ ಚೊಳಚಗುಡ್ಡ ಅವರ ಗಿಫ್ಟ್ ಸೆಂಟರ್ ವಾಗ್ವಾದದಿಂದ ಜಗಳ ಶುರುವಾಗಿತ್ತು. ಮೊದಲು ಸಂಗೀತಾ, ಮಹಾಂತೇಶ್ ಅವರಿಗೆ ಚಪ್ಪಲಿಯಲ್ಲಿ ಹೊಡೆದು, ಚಪ್ಪಲಿ ಎಸೆದಿದ್ದಾರೆ. ಅದಾದ ಬಳಿಕ ಮಹಾಂತೇಶ್ ಸಹ ಮಹಿಳೆಗೆ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದರು. ಇದನ್ನೂ ಓದಿ: ನಡುರಸ್ತೆಯಲ್ಲೇ ವಕೀಲೆ, ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ
ಪ್ರಸ್ತುತ ಸಂಗೀತಾ ಚಪ್ಪಲಿಯಲ್ಲಿ ಹೊಡೆಯುವ ಹಾಗೂ ಮಹಾಂತೇಶ್ ಆಕೆಗೆ ಒದೆಯುವ ಎರಡೂ ವೀಡಿಯೋಗಳು ವೈರಲ್ ಆಗಿದೆ. ಬಾಗಲಕೋಟೆಯಲ್ಲಿ ಮೇ 14 ರಂದು ಈ ಪ್ರಕರಣ ನಡೆಯಿತ್ತು. ಆದರೆ ಈವರೆಗೂ ಮಹಾಂತೇಶ್ ಮಹಿಳೆಗೆ ಹಲ್ಲೆ ಮಾಡಿರುವ ವೀಡಿಯೋ ಅಷ್ಟೇ ವೈರಲ್ ಆಗಿತ್ತು. ಆರಂಭದಲ್ಲಿ ಸಂಗೀತಾ, ಮಹಾಂತೇಶ್ ಮೇಲೆ ಹಲ್ಲೆ ಮಾಡಿರುವ ತುಣುಕನ್ನು ಕಟ್ ಮಾಡಿ ವೀಡಿಯೋ ಹರಿಬಿಡಲಾಗಿತ್ತು.
ವಿನಾಯಕ ನಗರದ ನಿವಾಸಿ ಮಹಾಂತೇಶ್ ಚೊಳಚಗುಡ್ಡ ಎಂಬವನೇ ವಕೀಲೆ ಸಂಗೀತಾ ಶಿಕ್ಕೇರಿ ಹಾಗೂ ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಹಿಳೆ ಅಂತಾನೂ ನೋಡದೇ ಸಾರ್ವಜನಿಕರ ಎದುರಲ್ಲೇ ಜಾಡಿಸಿ ಒದ್ದು ನೀಚ ಕೃತ್ಯ ಎಸಗಿದ್ದಾನೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ
ಇದರಿಂದ ತೀವ್ರ ಗಾಯಗೊಂಡಿರುವ ದಂಪತಿಯ ಕಾಲು, ಎದೆಭಾಗ, ತಲೆಗೆ ಪೆಟ್ಟಾಗಿದೆ. ಆಕೆಯ ಪತಿಗೆ ಕಿವಿ ಹಾಗೂ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ರಕ್ತಸ್ರಾವವೂ ಆಗಿದೆ. ತೀವ್ರ ಪೆಟ್ಟಾಗಿರುವ ವಕೀಲೆಯನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ
ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ವಕೀಲೆ ಸಂಗೀತಾ ಶಿಕ್ಕೇರಿ ಆರೋಪಿಸಿದ್ದರು. ಅಲ್ಲದೆ ಬಿಜೆಪಿ ಮುಖಂಡ ರಾಜು ನಾಯ್ಕರ್ ಕಳೆದ ಮೇ 8 ರಂದು ನಸುಕಿನ ಜಾವ ಬುಲ್ಡೋಜರ್‌ನಿಂದ ತಮ್ಮ ಮನೆಯ ಮುಂದಿನ ಕಂಪೌಂಡ್ ಹಾಗೂ ಶೌಚಾಲಯ ಕೆಡವಿದ್ದರು. ಈ ಕುರಿತ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಬಿಜೆಪಿ ಮುಖಂಡ ರಾಜು ನಾಯ್ಕರ್‌ನ ಕುಮ್ಮಕ್ಕಿನಿಂದಲೇ ಮಹಾಂತೇಶ ಚೋಳಚಗುಡ್ಡ ಹಲ್ಲೆ ನಡೆಸಿದ್ದಾನೆ ಎಂದು ವಕೀಲೆ ಆರೋಪಿಸಿದ್ದಾರೆ.
ತಮ್ಮ ಮನೆಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿ ಇರೋದ್ರಿಂದ ರಾಜು ನಾಯ್ಕರ್ ಹಾಗೂ ವಕೀಲೆ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿತ್ತು. ರಾಜು ನಾಯ್ಕರ್ ವಿರುದ್ಧ ಠಾಣೆಯಲ್ಲಿ ದೂರು ಕೊಡುತ್ತಿರುವುದರಿಂದ ಮಹಾಂತೇಶ ಚೊಳಚಗುಡ್ಡ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ.
ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿರುವ ಮಹಾಂತೇಶ್ ಚೋಳಚಗುಡ್ಡ, ಬಿಜೆಪಿ ಮುಖಂಡ ರಾಜುನಾಯ್ಕರ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೆ ಪೊಲೀಸರು ಬಂದಾಗ ಸಂಗೀತಾ ಶಿಕ್ಕೇರಿ ಅವರ ಮನೆ ಎಲ್ಲಿ ಎಂದಾಗ ತೋರಿಸಿದ್ದೆ. ನಮ್ಮ ಮನೆಯ ಹತ್ತಿರವೇ ಇರೋದ್ರಿಂದ ತೋರಿಸಿದ್ದೆ. ಅದೇ ದ್ವೇಷದ ಹಿನ್ನೆಲೆ ನಮ್ಮ ಅಂಗಡಿಗೆ ಬಂದು ನನಗೆ ಚಪ್ಪಲಿಯಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಗಲಾಟೆಯಲ್ಲಿ ತಳ್ಳಾಟವಾಗಿದೆ. ಆದರೆ ನಾನು ಯಾರ ಕುಮ್ಮಕ್ಕಿನಿಂದ ಏನು ಮಾಡಿಲ್ಲ. ನಾನೂ ಕೂಡ ಪೊಲೀಸ್ ಠಾಣೆಗೆ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.
ಬೀದರ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ ಅನ್ಯ ಕೋಮಿನ ಗುಂಪೊಂದು ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ನೂರ್ ಖಾನ್ ಕಾಲೋನಿಯ ಜೈ ಭವಾನಿ ಪಾಸ್‍ಫುಡ್ ಹೋಟೆಲ್‍ನಲ್ಲಿ ನಡೆದಿದೆ.
ಗೋ ರಕ್ಷಣೆ ಸೇರಿದಂತೆ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಎಂಬ ಕಾರಣಕ್ಕೆ ಬಜರಂಗದಳದ ಕಾರ್ಯಕರ್ತನ ಮೇಲೆ ಗಂಭೀರವಾಗಿ ಅನ್ಯಕೋಮಿನ ಜನರು ಹಲ್ಲೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ತಡರಾತ್ರಿ ಹೋಟೆಲ್‍ಗೆ ಬಂದು ಊಟದ ವಿಚಾರಕ್ಕೆ ಗಲಾಟೆ ಮಾಡಿ ಅನ್ಯಕೋಮಿನ ಗುಂಪು ಹಿಂದೂ ಕಾರ್ಯಕರ್ತ ಬಲರಾಮ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದೆ.
ಹಲ್ಲೆ ಮಾಡುವ ಜೊತೆಗೆ ಹೋಟೆಲ್‍ನಲ್ಲಿ ಇದ್ದ ಶಿವಾಜಿ ಮೂರ್ತಿಯನ್ನು ಅನ್ಯ ಕೋಮಿನ ಗುಂಪು ಭಗ್ನ ಮಾಡಿದ್ದಾರೆ. ಘಟನೆಯಲ್ಲಿ ಹಿಂದೂ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಮ್ನಾಬಾದ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ:ವಿದ್ಯುತ್ ಅವಘಡ: ಮಕ್ಕಳನ್ನು ಉಳಿಸಲು ಹೋಗಿ ತಾಯಿಯೂ ಬಲಿ – ಒಂದೇ ಮನೆಯಲ್ಲಿ 3 ಸಾವು
ಸೋಷಿಯಲ್ ಮೀಡಿಯಾಗಳು ಮೂಲಕ, ಅದರಲ್ಲೂ ಲಿಪ್ ಸಿಂಕ್ ಕಲಾವಿದನಾಗಿದ್ದ ಕಿಲಿ ಪೌಲ್ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆಫ್ರಿಕಾದ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಆಗಿರುವ ಕಿಲಿ ಪೌಲ್, ಹೆಚ್ಚೆಚ್ಚು ರೀಲ್ಸ್ ಮತ್ತು ಲಿಪ್ ಸಿಂಕ್ ಹಾಡುಗಳ ಮೂಲಕ ಫೇಮಸ್ ಆಗಿದ್ದವರು. ಕನ್ನಡದ ಕೆಜಿಎಫ್ 2 ಸಿನಿಮಾದ ಹಾಡಿಗೂ ಅವರು ಲಿಪ್ ಸಿಂಕ್ ಮಾಡಿದ್ದರು. ಕಚ್ಚಾ ಬಾದಾಮ್ ಸೇರಿದಂತೆ ಹಲವು ಗೀತೆಗಳಿಗೆ ತುಟಿಚಲನೆ ಕೂಡಿಸಿ ಫೇಮಸ್ ಆದವರು. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ
ತಮ್ಮ ಮೇಲಿನ ದಾಳಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಿಲಿ ಪೌಲ್, ‘ಐದು ಜನ ದುಷ್ಕರ್ಮಿಗಳು ಏಕಾಏಕಿ ನನ್ನ ಮೇಲೆ ದಾಳಿ ಮಾಡಿದ್ದಾರೆ. ಕೈಗೆ ಪೆಟ್ಟಾಗಿದೆ. ದೇಹದ ವಿವಿಧ ಭಾಗಗಳಿಗೂ ಏಟಾಗಿದೆ. ಹಾಗಾಗಿ ನನಗಾಗಿ ಪ್ರಾರ್ಥಿಸಿ ಎಂದು ಅವರು ಕೇಳಿಕೊಂಡಿದ್ದಾರೆ. ಅಲ್ಲದೇ ಅವರು ಬಚಾವ್ ಆಗಿದ್ದು ಹೇಗೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
ಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ಇಬ್ಬರೂ ಭಾರತದ ಅದೆಷ್ಟೋ ಹಾಡುಗಳಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಭಾರತೀಯ ನಾನಾ ಭಾಷೆಗಳ ಹಾಡಿಗೆ ಅವರು ಸಂಭ್ರಮಿಸಿದ್ದಾರೆ. ಈ ಜೋಡಿಯ ಬಹುತೇಕ ಹಾಡುಗಳು ಫೇಮಸ್ ಕೂಡ ಆಗಿವೆ. ಅದರಲ್ಲೂ ಇನ್ಸ್ಟಾದಲ್ಲಿ ಅವರು ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ
ಇವರ ಜನಪ್ರಿಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮಾತನಾಡಿದ್ದರು. ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದ ಪ್ರಧಾನಿಗಳು ಕನ್ನಡದ ಹಾಡಿಗೂ ಲಿಪ್ ಸಿಂಕ್ ಮಾಡುವಂತೆ ಕೇಳಿದ್ದರು. ಪ್ರಧಾನಿ ಮನವಿ ಮೇರೆಗೆ ಭಾರತೀಯ ಭಾಷೆಯ ಅನೇಕ ಗೀತೆಗಳನ್ನು ಹಾಡಿದ್ದರು.
ತಮ್ಮ ಮೇಲಿನ ಹಲ್ಲೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಷ್ಟೇ ಅಲ್ಲ, ವಿಡಿಯೋ ಸಮೇತ ಶೇರ್ ಮಾಡಿದ್ದಾರೆ. ಅವರ ಬೆರಳಿಗೆ ಮತ್ತು ಇತರ ಕಡೆ ಗಾಯಗಳಾಗಿವೆ. ಅವರೇ ಹೇಳುವಂತೆ ಚಾಕುವಿನಿಂದ ಮತ್ತು ದೊಣ್ಣೆಯಿಂದಲೂ ಹಲ್ಲೆ ಮಾಡಲಾಗಿದೆಯಂತೆ. ಕೈಗೆ ಐದು ಹೊಲಿಗೆ ಹಾಕಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರು: ಗಾಂಜಾ ಮತ್ತಿನಲ್ಲಿ ಪತಿ ಮಹಾಶಯನೊಬ್ಬ ತಾನು ಪ್ರೀತಿಸಿ ಮದುವೆಯಾದ ಪತ್ನಿ ಮೇಲೆಯೇ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಈಕೆ ಜಗದೀಶ್‍ನನ್ನು ಪ್ರೀತಿಸಿ ಕೈಹಿಡಿದಿದ್ದಳು. ಆದರೆ ಇದೀಗ ಗಾಂಜಾ ಮತ್ತಿನಲ್ಲಿ ಪತ್ನಿ ಮೇಲೆ ಸಂಶಯಗೊಂಡು ಚಿತ್ರಹಿಂಸೆ ನೀಡಿದ್ದಾನೆ. ನೀನು ಚೆನ್ನಾಗಿದ್ರೆ ತಾನೇ ಬೇರೆಯವರು ನೋಡೋದು ಎಂದು ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.
ಕಳೆದ ಒಂದೂವರೆ ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ. ಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯೊಂದ್ರಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ಜಗದೀಶ್ ಗಾಂಜಾ ವ್ಯಸನಿಯಾಗಿದ್ದು, ಇದೀಗ ಆಕೆಯ ಶೀಲ ಶಂಕಿಸಿ ಪ್ರತಿನಿತ್ಯ ಹಲ್ಲೆ ಮಾಡುತ್ತಿದ್ದಾನೆ. ಬರಿಗೈಲಿ ಮಾತ್ರವಲ್ಲದೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಜಯಲಕ್ಷ್ಮಿ ಕಿವಿ, ಕುತ್ತಿಗೆ, ತಲೆಗೆ ಗಂಭೀರ ಗಾಯಗಳಾಗಿವೆ.