Tag: ಹಲ್ಲೆ

  • ಮಸೀದಿ ಅಧ್ಯಕ್ಷ ಸ್ಥಾನದ ಕಿತ್ತಾಟಕ್ಕೆ ಬಿತ್ತು ಹೆಣ – ಮಾಜಿ ಕಾರ್ಪೋರೇಟರ್ ಪತಿ ಕೊಲೆ ರಹಸ್ಯ ಔಟ್‌

    ಮಸೀದಿ ಅಧ್ಯಕ್ಷ ಸ್ಥಾನದ ಕಿತ್ತಾಟಕ್ಕೆ ಬಿತ್ತು ಹೆಣ – ಮಾಜಿ ಕಾರ್ಪೋರೇಟರ್ ಪತಿ ಕೊಲೆ ರಹಸ್ಯ ಔಟ್‌

    ಬೆಂಗಳೂರು: ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ಕೊಲೆಗೆ ಮಸೀದಿಯೊಂದರ ಅಧ್ಯಕ್ಷಗಿರಿ ಪಟ್ಟಕ್ಕಾಗಿ ನಡೆದ ಘರ್ಷಣೆಯೇ ಕಾರಣ ಎನ್ನುವುದು ಇದೀಗ ಬಯಲಾಗಿದೆ.

    ಆಯೂಬ್ ಖಾನ್ ಕಳೆದ ಕೆಲ ವರ್ಷಗಳಿಂದ ಟಿಪ್ಪುನಗರದ ಖುದಾಯತ್ ಮಸೀದಿಗೆ ಅಧ್ಯಕ್ಷನಾಗಿದ್ದ. ಆದರೆ ಈ ಅಧ್ಯಕ್ಷ ಸ್ಥಾನದ ಮೇಲೆ ಆಯೂಬ್ ಖಾನ್ ಸಹೋದರ ಪ್ಯಾರೂಖಾನ್ ಮಗ ಮಥೀನ್ ಖಾನ್ ಕಣ್ಣಿಟ್ಟಿದ್ದ. ಅಷ್ಟೇ ಅಲ್ಲದೇ ಮಸೀದಿಯ ಪ್ರೆಸಿಡೆಂಟ್ ಹುದ್ದೆ ಬಿಟ್ಟುಕೊಡುವಂತೆ ಆಯೂಬ್ ಖಾನ್ ಬಳಿ ಹಲವು ಬಾರಿ ಕೇಳಿದ್ದ. ಇದಕ್ಕೆ ಆಯೂಬ್ ಖಾನ್ ನಿರಾಕರಿಸಿದ್ದ. ಅಷ್ಟೇ ಅಲ್ಲದೇ ಆಯೂಬ್ ಖಾನ್ ತನ್ನ ಮಗ ಸಿದ್ದಿಕ್ ಖಾನ್‌ನ್ನು ಮಸೀದಿಗೆ ಅಧ್ಯಕ್ಷನಾಗಿ ಮಾಡಲು ಬಯಸಿದ್ದ.

    POLICE JEEP

    ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ಇದೇ ವಿಚಾರಕ್ಕೆ ಆಯೂಬ್ ಹಾಗೂ ಮಥೀನ್ ನಡುವೆ ಜಗಳವಾಗುತ್ತಿತ್ತು. ನಿನ್ನೆ ಇದು ಜಗಳ ಮೀತಿ ಮೀರಿದ್ದು, ಟಿಪ್ಪುನಗರದ ಮಸೀದಿಯಿಂದ ನಮಾಜ್ ಮುಗಿಸಿ ಬರುವ ವೇಳೆ ಆಯೂಬ್‍ಗೆ ಮಥೀನ್‌ ಚಾಕು ಇರಿದು ಮನಸ್ಸೋ ಇಚ್ಛೆ ಥಳಿಸಿದ್ದ. ಅಲ್ಲದೆ ಆಯುಬ್‌ನ ಹೊಟ್ಟೆ ಹಾಗೂ ಮರ್ಮಾಂಗಕ್ಕೆ ಚಾಕುವಿನಿಂದ ಇರಿದಿದ್ದನು. ಚಾಕು ಇರಿದ ಜಾಗದಲ್ಲಿ ಸತತವಾಗಿ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದನ್ನೂ ಓದಿ: ಎದುರಾಳಿಯ ಒಂದೇ ಒಂದು ಏಟಿಗೆ ಕಿಕ್ ಬಾಕ್ಸರ್ ಪ್ರಾಣವೇ ಹೋಯ್ತು!

    crime

    ಘಟನೆಗೆ ಸಂಬಂಧಿಸಿ ಮೃತ ಆಯೂಬ್ ಖಾನ್ ಪತ್ನಿ ನಜೀಮಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರಿಂದ ಎಫ್.ಐ.ಆರ್ ದಾಖಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ

    Live Tv
    [brid partner=56869869 player=32851 video=960834 autoplay=true]

  • ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ

    ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೋರೇಟರ್ ಪತಿ ಆಯುಬ್ ಖಾನ್ ನಿಧನ

    ಬೆಂಗಳೂರು: ಸಹೋದರನಿಂದಲೇ ಹಲ್ಲೆಗೊಳಗಾಗಿದ್ದ ಮಾಜಿ ಕಾರ್ಪೊರೇಟರ್ ಪತಿ ಆಯುಬ್ ಖಾನ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

    ಬಿಬಿಎಂಪಿ 139 ವಾರ್ಡ್‍ನ ಮಾಜಿ ಕಾರ್ಪೋರೇಟರ್ ನಜೀಮಾ ಪತಿ ಆಯುಬ್ ಖಾನ್ ಮೇಲೆ ಸಹೋದರನಿಂದಲೇ ಮಾರಣಾಂತಿಕ ಹಲ್ಲೆ ನಡೆದಿತ್ತು. ಚಾಕು ಇರಿದು ಮನಸ್ಸೋ ಇಚ್ಛೆ ಥಳಿಸಿದ್ದರು. ಅಲ್ಲದೆ ಆಯುಬ್ ಸಹೋದರ ಹೊಟ್ಟೆ ಹಾಗೂ ಮೂತ್ರ ವಿಸರ್ಜನಾ ಸಂಚಿ ಭಾಗಕ್ಕೆ ಚಾಕುವಿನಿಂದ ಇರಿದಿದ್ದನು. ಚಾಕು ಇರಿದ ಜಾಗದಲ್ಲಿ ಸತತವಾಗಿ ರಕ್ತಸ್ರಾವವಾಗುತ್ತಿತ್ತು.

    ಘಟನೆ ನಡೆದ ಕೂಡಲೇ ಆಯುಬ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆ ಬಳಿ ಆಯುಬ್ ಖಾನ್ ಸಂಬಂಧಿಕರು ಜಮಾಯಿಸಿದ್ದಾರೆ. ಇದನ್ನೂ ಓದಿ: ಕರಾವಳಿ, ಮಲೆನಾಡಿನಲ್ಲಿ ಮುಂದುವರಿದ ಮಳೆ ಅವಾಂತರ – 10 ದಿನದ ಹಿಂದೆ ಕೊಚ್ಚಿಹೋದ ಬಾಲಕಿ ಸುಳಿವು ಇನ್ನೂ ಸಿಕ್ಕಿಲ್ಲ

    ಸದ್ಯ ಘಟನೆ ಸಂಬಂಧ ಆರೋಪಿ ಪತ್ತೆಗಾಗಿ ಚಾಮರಾಜಪೇಟೆ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ಆಯುಬ್ ಖಾನ್ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೂರು ಡಿ.ಆರ್ ಪೊಲೀಸ್ ವಾಹನ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗದಲ್ಲಿ ಮತ್ತೆ ಕೋಮಿನ ಬೆಂಕಿ – 2 ಪ್ರತ್ಯೇಕ ಪ್ರಕರಣದಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ

    ಶಿವಮೊಗ್ಗದಲ್ಲಿ ಮತ್ತೆ ಕೋಮಿನ ಬೆಂಕಿ – 2 ಪ್ರತ್ಯೇಕ ಪ್ರಕರಣದಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ

    ಶಿವಮೊಗ್ಗ: ಕಳೆದ ಫೆಬ್ರವರಿ ತಿಂಗಳಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣ ಕೆಂಡದಂತಾಗಿ ಬಳಿಕ ಶಾಂತ ಸ್ಥಿತಿಗೆ ತಲುಪಿದ್ದರೂ ಇದೀಗ ಮತ್ತೆ ಜಿಲ್ಲೆಯಲ್ಲಿ ಕೋಮು ಸಂಘರ್ಷಗಳು ಅಲ್ಲಲ್ಲಿ ನಡೆಯುತ್ತಿವೆ. ಕಾರುಗಳ ಮೇಲೆ ಕಲ್ಲು ತೂರಾಟ, ಕಾರುಗಳಿಗೆ ಬೆಂಕಿ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ಆಗ್ಗಾಗ್ಗೆ ನಡೆಯುತ್ತಲೇ ಇವೆ. ಇದೀಗ ಮತ್ತೆ ಅಂತಹುದೇ ಘಟನೆಯೊಂದು ಶಿವಮೊಗ್ಗದಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗದಲ್ಲಿ ಮತ್ತೆ ಕೋಮು ಸಂಘರ್ಷ ಎದುರಾಗುತ್ತದೆಯೋ ಎಂಬ ಆತಂಕ ಇದೀಗ ಎದುರಾಗಿದೆ.

    ಸೋಮವಾರ ಸಂಜೆ ಹಾಗೂ ರಾತ್ರಿ 2 ಪ್ರತ್ಯೇಕ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಇದು ಶಿವಮೊಗ್ಗ ಜನರ ನಿದ್ದೆಗೆಡಿಸಿದೆ. ನಿನ್ನೆ ಸಂಜೆ ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಡೈಸ್ ಮುಂಭಾಗದಲ್ಲಿ ಹಿಂದೂ ಯುವತಿಯರನ್ನು, ಅನ್ಯಕೋಮಿನ ಯುವಕರು ಚುಡಾಯಿಸುತ್ತಿದ್ದರು. ಈ ವೇಳೆ ಏಕೆ ಚುಡಾಯಿಸುತ್ತಿರಾ ಎಂದು ಕೇಳಿದ್ದಕ್ಕೆ ಹಿಂದೂ ಯುವಕ ಹರ್ಷನ ಮೇಲೆ ಅನ್ಯಕೋಮಿನ 8 ಯುವಕರು ಹಲ್ಲೆ ನಡೆಸಿದ್ದಾರೆ. ಹರ್ಷ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನಾಗಿದ್ದು, ಪ್ರಕರಣ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: PSI ಹಗರಣದ ಹಿಂದೆ ಬೊಮ್ಮಾಯಿ, ಗೃಹಸಚಿವರಿದ್ದಾರೆ – ಸರ್ಕಾರದ ಕುಮ್ಮಕ್ಕಿಲ್ಲದೇ ಇದೆಲ್ಲಾ ಸಾಧ್ಯವೇ ಎಂದ ಸಿದ್ದರಾಮಯ್ಯ

    ಈ ಘಟನೆಯ ಬೆನ್ನಲ್ಲೇ ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ, ಮತ್ತೊಂದು ಇಂತಹುದೇ ಘಟನೆ ನಡೆದಿದೆ. ಈ ಪ್ರಕರಣದಲ್ಲಿಯೂ ಕೂಡ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಹಿಂದೂ ಯುವಕ ಕಾಂತರಾಜ್ ಮೇಲೆ ಸುಯೇಬ್, ಜುನೈದ್ ಸೇರಿದಂತೆ ಇತರ ಮೂವರು ಹಲ್ಲೆ ನಡೆಸಿದ್ದಾರೆ. ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದಾತ ಭಜರಂಗದಳ ಕಾರ್ಯಕರ್ತ ಎಂದು ಹೇಳಲಾಗಿದೆ. ಕಾಂತರಾಜ್ ಮೇಲೆ ಮಚ್ಚು, ಬ್ಯಾಟ್‌ಗಳಿಂದ ಹಲ್ಲೆ ನಡೆಸಲಾಗಿದೆ. ಕೈ, ಕಾಲು, ಬೆನ್ನಿಗೆ ತೀವ್ರವಾದ ಗಾಯಗಳಾಗಿದ್ದು, ಕಾಂತರಾಜ್ ಇದೀಗ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ಎರಡೂ ಘಟನೆಗಳ ಸಂಬಂಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಕಾಂತರಾಜ್ ಮೇಲೆ ಹಲ್ಲೆ ನಡೆಸಿರುವ ಇಬ್ಬರನ್ನು ಬಂಧಿಸಲಾಗಿದೆ. ಹರ್ಷನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಪರಾರಿಯಾಗಿದ್ದಾರೆ. ಎರಡೂ ಪ್ರಕರಣಗಳನ್ನು ಶಿವಮೊಗ್ಗ ಪೊಲೀಸರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಮತ್ತೆ ಘಟನೆ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನ ವಿವಾದ – ಚಾಮರಾಜಪೇಟೆ ಬಂದ್ ಯಶಸ್ವಿ

    ಒಟ್ಟಿನಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗದಲ್ಲಿ ಈ ರೀತಿಯ ಘಟನೆಗಳು ಆಗ್ಗಾಗ್ಗೆ ಮರುಕಳಿಸುತ್ತಲೇ ಇದ್ದು, ಪೊಲೀಸ್ ಇಲಾಖೆ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳುವುದು ಇದೀಗ ಅನಿವಾರ್ಯವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಶಿವಮೊಗ್ಗ ಜಿಲ್ಲೆಯವರೇ ಆಗಿದ್ದು, ಈ ಪ್ರಕರಣಗಳು ರಾಜಕಾರಣಗೊಳ್ಳುವ ಮೊದಲೇ, ಪೊಲೀಸರು ಬಿಗಿ ಕ್ರಮ ತೆಗೆದುಕೊಳ್ಳಬೇಕಿದೆ. ಶಿವಮೊಗ್ಗ ಶಾಂತವಾಗಿ ಇರುವಂತೆ ನೋಡಿಕೊಳ್ಳಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಯುವತಿಯರನ್ನು ಏಕೆ ಚುಡಾಯಿಸುತ್ತೀರಾ ಎಂದ ಯುವಕನಿಗೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

    ಯುವತಿಯರನ್ನು ಏಕೆ ಚುಡಾಯಿಸುತ್ತೀರಾ ಎಂದ ಯುವಕನಿಗೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

    ಶಿವಮೊಗ್ಗ: ಹಿಂದೂ ಯುವತಿಯರನ್ನು ಅನ್ಯಕೋಮಿನ ಯುವಕರ ಗುಂಪೊಂದು ಚುಡಾಯಿಸುತಿತ್ತು. ಅಲ್ಲೇ ಇದ್ದ ಯುವಕನೋರ್ವ ಯುವತಿಯರನ್ನು ಏಕೆ ಚುಡಾಯಿಸುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯ ಮಥುರಾ ಪ್ಯಾರಡೈಸ್ ಹೋಟೆಲ್ ಬಳಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಹರ್ಷ(18) ಎಂದು ಗುರುತಿಸಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರ ಗುಂಪು ತಾವು ತಂದಿದ್ದ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆಟೋ ಹತ್ತಿಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಒಟ್ಟು 773 – ಬೆಂಗ್ಳೂರಲ್ಲಿ 621 ಕೇಸ್, ಗದಗದಲ್ಲಿ ಏಕೈಕ ಮರಣ ಪ್ರಕರಣ

    ಹಲ್ಲೆಗೊಳಗಾದ ಯುವಕ ಹರ್ಷನನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಲ್ಲೆ ಮಾಡಿದವರು ಒಟ್ಟು 8 ಮಂದಿ ಇದ್ದರು ಎಂದು ಹರ್ಷ ಪೊಲೀಸರ ಬಳಿ ತಿಳಿಸಿದ್ದಾರೆ. ಇದನ್ನೂ ಓದಿ: ಚಲಿಸುತಿದ್ದ ಕಾರಿನಲ್ಲೇ ಹೃದಯಾಘಾತ – ಸ್ಥಳದಲ್ಲೇ ಸಾವನ್ನಪ್ಪಿದ ಇಂಜಿನಿಯರ್

    Live Tv
    [brid partner=56869869 player=32851 video=960834 autoplay=true]

  • ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ

    ಸಿಧು ಮೂಸೆವಾಲಾ ಹತ್ಯಾ ಪ್ರಕರಣ- ಕಾರಾಗೃಹದಲ್ಲಿ ಆರೋಪಿಗೆ ಕೈದಿಗಳಿಂದ ಹಲ್ಲೆ

    ಚಂಡೀಗಢ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಕಾರಾಗೃಹದಲ್ಲಿ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ.

    ಪಂಜಾಬ್‌ನ ಲೂಧಿಯಾನಾ ಕಾರಾಗೃಹ ಸೇರಿದ್ದ ಆರೋಪಿ ಸತ್ಬೀರ್ ಸಿಂಗ್‌ಗೆ ಇತರ ಕೈದಿಗಳು ದೈಹಿಕವಾಗಿ ಹಲ್ಲೆ ನಡೆಸಿದ್ದು, ಆತನ ತಲೆಗೆ ಗಾಯಗಳಾಗಿವೆ. ಆತನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಗಾಯಗಳಿಗೆ ಹೊಲಿಗೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಯಿಯಿಂದ ನೀರು ಉಗುಳಿ ಬಟ್ಟೆ ಇಸ್ತ್ರಿ – ವೃದ್ಧನ ವೀಡಿಯೋ ವೈರಲ್

    ತಲ್ವಾಡಿಯ ಕುದುರೆ ವ್ಯಾಪಾರಿಯಾಗಿದ್ದ ಆರೋಪಿ ಸತ್ಬೀರ್, ಸಿಧು ಮೂಸೆವಾಲಾ ಹಂತಕರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವಲ್ಲಿ ಭಾಗಿಯಾಗಿದ್ದ. ಬಳಿಕ ಲೂಧಿಯಾನಾ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಭಾರೀ ಜನಪ್ರಿಯತೆ ಹೊಂದಿದ್ದ ಮೂಸೆವಾಲಾ ಹತ್ಯೆಯಿಂದ ಆಕ್ರೋಶಿತರಾಗಿದ್ದ ಕೈದಿಗಳು ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ಸತ್ಬೀರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಭಾರತ ಸೇರಿದಂತೆ 4 ದೇಶಗಳ ರಾಯಭಾರಿಗಳನ್ನು ವಜಾಗೊಳಿಸಿದ ಝೆಲೆನ್ಸ್ಕಿ

    ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಕಿಡಿಗೇಡಿ ಗುಂಪೊಂದು ಗುಂಡಿಕ್ಕಿ ಹತ್ಯೆ ನಡೆಸಿತ್ತು. ಹತ್ಯೆಗೂ 1 ದಿನ ಮುನ್ನ ಸಿಧು ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊAಡಿತ್ತು. ಈ ಕಾರಣಕ್ಕೆ ಹಂತಕರು ಯೋಜಿತ ಕಾರ್ಯಾಚರಣೆ ಮೂಲಕ ಹತ್ಯೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

    ಕೋರ್ಟ್ ಬಳಿ ಉದಯಪುರ ಟೈಲರ್ ಹಂತಕರ ಬಟ್ಟೆ ಹರಿದು ಥಳಿಸಿದ ಪ್ರತಿಭಟನಾಕಾರರು

    ಜೈಪುರ: ಟೈಲರ್ ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಹತ್ಯೆಗೈದ ಹಂತಕರ ಮೇಲೆ ಜೈಪುರ ನ್ಯಾಯಾಲಯದ ಬಳಿ ದೊಡ್ಡ ಗುಂಪೊಂದು ಶನಿವಾರ ದಾಳಿ ನಡೆಸಿದೆ.

    ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಉದಯಪುರ ಟೈಲರ್ ಹಂತಕರ ಮೇಲೆ ಹಲ್ಲೆ ನಡೆಸಿ, ಬಟ್ಟೆಯನ್ನೆಲ್ಲಾ ಹರಿದು ಹಾಕಿದ್ದಾರೆ. ಪೊಲೀಸರು ತಕ್ಷಣ ಆರೋಪಿಗಳನ್ನು ಪೊಲೀಸ್ ವ್ಯಾನ್‌ಗೆ ಹತ್ತಿಸಿ, ಅವರನ್ನು ರಕ್ಷಿಸಿದ್ದಾರೆ.

    ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಮಂಗಳವಾರ ಇಬ್ಬರು ಪಾತಕಿಗಳು ಭೀಕರವಾಗಿ ಹತ್ಯೆ ನಡೆಸಿ, ಅದರ ವೀಡಿಯೋವನ್ನೂ ಮಾಡಿದ್ದರು. ಬಳಿಕ ಅವರು ಹತ್ಯೆಗೆ ಬಳಸಿದ ಆಯುಧದಿಂದಲೇ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯನ್ನೂ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಆ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ – 14 ದಿನ ನ್ಯಾಯಾಂಗ ಬಂಧನ

    ವೀಡಿಯೋ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ಬೆಚ್ಚಿ ಬಿದ್ದ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ಹಂತಕರಾದ ಅಖ್ತಾರಿ ಹಾಗೂ ಮೊಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದರು. ಹತ್ಯೆಯಲ್ಲಿ ಭಾಗಿಯಾಗಿದ್ದ ಹಾಗೂ ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಇಬ್ಬರನ್ನು ಬಂಧಿಸಿದ್ದಾರೆ.

    Udaipur

    ನಾಲ್ಕೂ ಆರೋಪಿಗಳನ್ನು ಇಂದು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಆರೋಪಿಗಳ ಮೇಲೆ ಸ್ಥಳದಲ್ಲಿ ನೆರೆದಿದ್ದ ಗುಂಪು ಹಲ್ಲೆ ನಡೆಸಲು ಮುಂದಾಗಿದೆ. ಇದರೊಂದಿಗೆ ಕನ್ಹಯ್ಯ ಹಂತಕರಿಗೆ ಮರಣದಂಡನೆ ವಿಧಿಸಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರೊಂದಿಗೆ ಟೈಲರ್‌ ಹಂತಕರಿರೋ ಫೋಟೋ ವೈರಲ್‌ – BJPಗೂ ಹಂತಕರಿಗೂ ಇದ್ಯಾ ನಂಟು?

    Live Tv

  • ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ವ್ಯಕ್ತಿಯ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ

    ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ವ್ಯಕ್ತಿಯ ಮೇಲೆ ಪುಂಡರಿಂದ ಮಾರಣಾಂತಿಕ ಹಲ್ಲೆ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಪುಂಡರ ಅಟ್ಟಹಾಸ ನಿಂತಿಲ್ಲ. ಮಂಡ್ಯದ ಯಲಿಯೂರು ಬಳಿ ಹಾಡಹಗಲೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಲಾಂಗ್ ಹಿಡಿದು ಹಲ್ಲೆ ಮಾಡಿದ ಘಟನೆ ನಡೆದಿದೆ.

    ಶಂಕರೇಗೌಡ(60) ಹಲ್ಲೆಗೊಳಗಾದ ವ್ಯಕ್ತಿ. ಇವರು ತೂಬಿನಕೆರೆ ಗ್ರಾಮದ ನಿವಾಸಿ. ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ಇವರ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಇದೊಂದು ವ್ಯವಸ್ಥಿತ ಸಂಚು, ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರು: ಕಟೀಲ್

    ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪುಂಡರು ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದರು. ಈ ವೇಳೆ ಶಂಕರೇಗೌಡ ಅವರು ಬೈಕ್ ಸರಿಯಾಗಿ ಓಡಿಸಿ ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹೀಗೆ ಓಡಿಸಿದ್ರೆ ಬೇರೆಯವರು ಸಾಯುತ್ತಾರೆ ಸರಿಯಾಗಿ ಓಡಿಸಿ ಎಂದರು. ಆಗ ನಿನಗೇನೋ ಸುಮ್ಮನೆ ಹೋಗೋ ಎಂದು ಸರಿಯಾಗಿ ಮೀಸೆ ಚಿಗುರದ ಹುಡುಗರು ರೌಡಿಸಂ ಮಾಡಿದ್ದಾರೆ.

    ಅಲ್ಲದೆ ಶಂಕರೇಗೌಡ ಅವರನ್ನು ಅಡ್ಡಗಟ್ಟಿ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ. ಘಟನೆಯಿಂದ ಗಂಭೀರ ಗಾಯವಾಗಿರುವ ಶಂಕರೇಗೌಡರಿಗೆ ಮಿಮ್ಸ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    Live Tv

  • ನೆರೆಹೊರೆಯವರ ಗಲಾಟೆ – ಮಕ್ಕಳ ಮೇಲೆ ಹಲ್ಲೆ ತಡೆಯಲು ಹೋದ ತಾಯಿಯ ಕೊಲೆ

    ನೆರೆಹೊರೆಯವರ ಗಲಾಟೆ – ಮಕ್ಕಳ ಮೇಲೆ ಹಲ್ಲೆ ತಡೆಯಲು ಹೋದ ತಾಯಿಯ ಕೊಲೆ

    ಚಿಕ್ಕಬಳ್ಳಾಪುರ: ನರೇಗಾ ಕಾಮಗಾರಿ ಮಾಡಿ ಅಕ್ರಮ ಬಿಲ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹಾಗೂ ಶಾಸಕರಿಗೆ ದೂರು ನೀಡಿದ್ದಾರೆ ಎಂಬ ಅನುಮಾನಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಕ್ಕಳ ಮೇಲೆ ಹಲ್ಲೆ ತಡೆಯಲು ಮುಂದಾದ ತಾಯಿ ಕೊಲೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ನಿವಾಸಿ ಗೌರಮ್ಮ(60) ಮೃತ ಮಹಿಳೆ. ಗ್ರಾಮದ ಹನುಮಂತರಾಯಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದು, ಗ್ರಾಮ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದರು. ಕಾಮಗಾರಿ ಮಾಡಿದ ತದನಂತರ ನರೇಗಾ ಜಾಬ್ ಕಾರ್ಡ್ ಇರುವ ಗ್ರಾಮಸ್ಥರ ಖಾತೆಗೆ ಬಂದ ಹಣವನ್ನು ವಸೂಲಿ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: 7 ಭ್ರೂಣಗಳ ಪತ್ತೆ ಪ್ರಕರಣ – ಭ್ರೂಣಗಳನ್ನು ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ DHO

    ಈ ವಿಚಾರದ ಬಗ್ಗೆ ಗೌರಮ್ಮನ ಮಕ್ಕಳು ಹಿರಿಯ ಅಧಿಕಾರಿಗಳು ಹಾಗೂ ಶಾಸಕ ವೆಂಕಟರಮಣಯ್ಯನಿಗೆ ದೂರು ನೀಡಿದ್ದಾರೆ ಎಂದು ಅನುಮಾನಗೊಂಡು ಅಕ್ಕಪಕ್ಕದ ಮನೆಯವರು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಚನ್ನರಾಯಪ್ಪ, ಸುಧಾಕರ್, ಮಾರುತಿ ಹಾಗೂ ಗಂಗಮ್ಮನ ಮಕ್ಕಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ತನ್ನ ಮಕ್ಕಳ ಪರವಾಗಿ ಹಲ್ಲೆ ತಡೆಯಲು ಗೌರಮ್ಮ ಧಾವಿಸಿದ್ದರು. ಬಳಿಕ ಅವರೂ ಹಲ್ಲೆಗೆ ಒಳಗಾಗಿ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದ 9 ಕೈದಿಗಳಿಗೆ ಕೊರೊನಾ ಪಾಸಿಟಿವ್

    ಈ ಸಂಬಂಧ ಹನುಮಂತರಾಯಪ್ಪ, ಮಾರುತಿ, ಸುಧಾಕರ್, ಚಿನ್ನಕ್ಕ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಗ್ರಾಮ ತೊರೆದು ತಲೆಮರೆಸಿಕೊಂಡಿದ್ದಾರೆ. ಮೃತದೇಹವನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದು, ಜಿಲ್ಲಾಧಿಕಾರಿ ಶ್ರೀನಿವಾಸ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Live Tv

  • ಕಾಲೇಜು ಪ್ರಿನ್ಸಿಪಲ್‌ಗೆ ಜೆಡಿಎಸ್ ಶಾಸಕನಿಂದ ಕಪಾಳ ಮೋಕ್ಷ

    ಕಾಲೇಜು ಪ್ರಿನ್ಸಿಪಲ್‌ಗೆ ಜೆಡಿಎಸ್ ಶಾಸಕನಿಂದ ಕಪಾಳ ಮೋಕ್ಷ

    ಮಂಡ್ಯ: ಜೆಡಿಎಸ್ ಶಾಸಕ ಶ್ರೀನಿವಾಸ್ ಮಂಡ್ಯದ ಐಟಿಐ ಕಾಲೇಜಿನ ಪ್ರಾಂಶುಪಾಲರಿಗೆ ಕಪಾಳ ಮೋಕ್ಷ ಮಾಡಿರುವ ವೀಡಿಯೋ ವೈರಲ್ ಆಗಿದೆ.

     

    ಮಂಡ್ಯದ ಐಟಿಐ ಕಾಲೇಜು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗಾನಂದ್ ಮೇಲೆ ಜೆಡಿಎಸ್ ಶಾಸಕ ಎಂ ಶ್ರೀನಿವಾಸ್ ಕೈ ಮಾಡಿದ್ದಾರೆ. ಇದನ್ನೂ ಓದಿ: ಕಾರವಾರ, ಕುಮಟಾದಲ್ಲಿ ಅಬ್ಬರಿಸಿದ ವರುಣ – ಜನಜೀವನ ಅಸ್ತವ್ಯಸ್ತ

    ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ನೀಡಲಿಲ್ಲ ಹಾಗೂ ಕಾಲೇಜಿನ ಮೂಲಭೂತ ಸೌಕರ್ಯ ಸರಿಯಾಗಿ ಇಲ್ಲ ಎಂಬ ಕಾರಣಕ್ಕೆ ಶಾಸಕ ಪ್ರಿನ್ಸಿಪಲ್‌ಗೆ 2 ಬಾರಿ ಹೊಡೆದಿದ್ದಾರೆ. ಶಾಸಕ ಶ್ರೀನಿವಾಸ್ ವರ್ತನೆಗೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ MVA ಸರ್ಕಾರ ಪತನ? – ಶೀಘ್ರವೇ ಬಿಜೆಪಿ ಅಧಿಕಾರಕ್ಕೆ

    Live Tv

  • ಪೋಷಕರಿಲ್ಲದ ಸಮಯದಲ್ಲಿ ಬಾಲಕನನ್ನು ಥಳಿಸಿ ಚಿತ್ರಹಿಂಸೆ ನೀಡಿದ ಆಯಾ

    ಪೋಷಕರಿಲ್ಲದ ಸಮಯದಲ್ಲಿ ಬಾಲಕನನ್ನು ಥಳಿಸಿ ಚಿತ್ರಹಿಂಸೆ ನೀಡಿದ ಆಯಾ

    ಭೋಪಾಲ್: ಪೋಷಕರು ಕೆಲಸಕ್ಕೆ ಹೋದ ಸಮಯದಲ್ಲಿ ಆಯಾ 2 ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮಧ್ಯಪ್ರದೇಶದ ಜಬಲ್ಪುರದ ರಜಿನಿ ಚೌಧರಿ ಆರೋಪಿ. ಈಕೆಗೆ ಮಗುವನ್ನು ನೋಡಿಕೊಳ್ಳಲು ಪೋಷಕರು ಆಹಾರದ ಜೊತೆಗೆ ಮಾಸಿಕ 5,000 ರೂ. ನೀಡುತ್ತಿದ್ದರು. ಪೋಷಕರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಈಕೆಗೆ ವಹಿಸಲಾಗಿತ್ತು.

    ದಿನ ಕಳೆದಂತೆ ಎರಡು ವರ್ಷದ ಬಾಲಕ ಮಂಕಾಗಿ ಹಾಗೂ ದುರ್ಬಲನಾಗಿರುವುದನ್ನು ನೋಡಿದ್ದ ಪೋಷಕರು ಕಳವಳಗೊಂಡಿದ್ದರು. ಇದರಿಂದಾಗಿ ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ಅಂಗಾಂಗಗಳು ಊದಿಕೊಂಡಿರುವುದು ಕಂಡು ಬಂದಿತ್ತು. ಇದರಿಂದಾಗಿ ಪೋಷಕರು ತಾವು ಇಲ್ಲದಿರುವಾಗ ಏನೋ ತೊಂದರೆ ಆಗಿದೆ ಎಂದು ಶಂಕಿಸಿ ಮನೆಯಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದರು. ಇದನ್ನೂ ಓದಿ: ಕಾರಹುಣ್ಣಿವೆ ಕರಿ ಹರಿಯುವ ವೇಳೆ ಭೀಮಾನದಿಗೆ ಹಾರಿ ಪ್ರಾಣಬಿಟ್ಟ ಎತ್ತು

    POLICE JEEP

    ಇದಾದ ಬಳಿಕ ಸಿಸಿಟಿವಿಯ ದೃಶ್ಯಾವಳಿಗಳನ್ನು ನೋಡಿದ ಪೋಷಕರು ಭಯಭೀತರಾಗಿದ್ದಾರೆ. ದೃಶ್ಯದಲ್ಲಿ ರಜನಿ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ರಜನಿ ಮಗುವನ್ನು ಥಳಿಸುವುದು, ಕೂದಲಿಡಿದು ಎಳೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರೆಡು ದಿನ ಮಳೆ: ಹವಾಮಾನ ಇಲಾಖೆ