ತುಮಕೂರು: ಕ್ಷುಲ್ಲಕ ವಿಚಾರಕ್ಕೆ ಬಿಜೆಪಿ(BJP) ಪುರಸಭಾ ಸದಸ್ಯ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿರುವ ಘಟನೆ ತುಮಕೂರು(Tumakuru) ಜಿಲ್ಲೆಯ ಗುಬ್ಬಿ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.
ನಗರದಲ್ಲಿ ಯುವಕರು ಗಣಪತಿ ವಿಸರ್ಜನೆ ಮಾಡಿ, ವಾಪಸ್ಸಾಗುತ್ತಿದ್ದ ವೇಳೆ ಕಾರ್ಪೋರೇಟರ್ ಕೃಷ್ಣಮೂರ್ತಿ ಹಾಗೂ ಆತನ ಪತ್ನಿ ಯುವಕನೊಬ್ಬನಿಗೆ ಥಳಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!
ರಾಯಚೂರು: ಕ್ರೈಂ ವಿಚಾರದಲ್ಲಿ ಅಷ್ಟು ಸದ್ದು ಮಾಡದ ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದೆಡೆ ನಿಲ್ಲದ ಸರಣಿ ಕಳ್ಳತನಗಳಿಂದ ಜನ ಕಂಗೆಟ್ಟಿದ್ದರೆ, ಇನ್ನೊಂದೆಡೆ ಹಾಡಹಗಲೇ ನಗರದ ನಡುರಸ್ತೆಯಲ್ಲಿ ಗ್ಯಾಂಗ್ ಒಂದು ಯುವಕನ ಮೇಲೆ ಹಲ್ಲೆ ಮಾಡಿ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.
ಹರಿಜನವಾಡದ ನಿವಾಸಿ ಅಭಿಷೆಕ್ ಹಲ್ಲೆಗೊಳಗಾದ ಯುವಕ. ಮುನ್ನೂರುವಾಡಿ ನಿವಾಸಿಗಳಾದ ಪವನ್, ಸಂಕೇತ್ ಸೇರಿ ಇತರರು ಹಲ್ಲೆ ಮಾಡಿದ್ದಾರೆ. ಹಳೇ ವೈಷಮ್ಯ, ಪ್ರೇಮ ಪ್ರಕರಣ ಹಲ್ಲೆಗೆ ಕಾರಣ ಎನ್ನಲಾಗಿದೆ.
ಆಗಸ್ಟ್ 28 ರಂದು ಮಧ್ಯಾಹ್ನ 2:30 ರ ಸುಮಾರಿಗೆ ನಗರದ ರಿಲಯನ್ಸ್ ಮಾರ್ಟ್ ಮುಂದೆ ನಡುರಸ್ತೆಯಲ್ಲಿ ಯುವಕನ ಮೇಲೆ ಗ್ಯಾಂಗ್ ದಾಳಿ ಮಾಡಿದೆ. ಇದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಈ ಘಟನೆಯಿಂದ ಜಿಲ್ಲೆಯಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅನುಮಾನ ಹುಟ್ಟುವಂತೆ ಮಾಡಿದೆ. ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಜೀವ ಬಲಿ
ಸೂಪರ್ ಮಾರ್ಕೆಟ್‌ನಿಂದ ಬೈಕ್‌ನಲ್ಲಿ ಹೊರಬಂದ ಯುವಕನನ್ನು 6-7 ಜನರ ಗುಂಪೊಂದು ಬೈಕ್‌ನಿಂದ ಕೆಳಗೆ ಬೀಳಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಅಜ್ಞಾತ ಸ್ಥಳಕ್ಕೆ ಹೊತ್ತೊಯ್ದ ಗ್ಯಾಂಗ್ ಅಲ್ಲಿಯೂ ಹಲ್ಲೆಮಾಡಿ, ಬಲವಂತವಾಗಿ ಬಿಯರ್ ಕುಡಿಸಿ ಕಿರುಕುಳ ನೀಡಿದ್ದಾರೆ. ಜನಜಂಗುಳಿಯಿರುವ ರಿಲಯನ್ಸ್ ಮಾರ್ಟ್ ಮುಂದೆಯೇ ಘಟನೆ ನಡೆಯುತ್ತಿದ್ದರೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿಯೇ ನೋಡುತ್ತಾ ನಿಂತಿದ್ದಾರೆ. ಹಲ್ಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಬಗ್ಗೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ. ಓರ್ವ ಆರೋಪಿಯನ್ನು ಬಂಧಿಸಿರುವ ಸದರ ಬಜಾರ್ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪೊಲೀಸ್, ಬಿಜೆಪಿ ಮುಖಂಡನ ಹೆಸರು ಬರೆದಿಟ್ಟು, ರಮೇಶ್ ಜಾರಕಿಹೊಳಿ ಆಪ್ತ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
ಸದ್ಯ ಹಲ್ಲೆ ನಡೆಸಿದ ತಂಡದ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಮಹಮ್ಮದ್ ಸನೀಫ್ ದೂರು ನೀಡಿದ್ದು, ಹಲ್ಲೆ ನಡೆಸಿದ 7 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಪಾಕಿಸ್ತಾನ ಧ್ವಜ ಮಾದರಿಗೆ ಸಿಂಹದ ಚಿತ್ರ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಬಳಿ ಘಟನೆ ನಡೆದಿದೆ.
ಹೊನವಾಡ ಗ್ರಾಮದ ಪೈಲ್ವಾನ್ ಉಮೇಶ ಹರಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಜತ್ತ ತಾಲ್ಲೂಕಿನ ಆಸಂಗಿ ಗ್ರಾಮದ ಅಫ್ಜಲ್ ಖಾನ್ ಮುಜಾವರ ಹಾಗೂ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊ ಳಗಾದ ಉಮೇಶ್ ಆರೋಪಿಸಿದ್ದಾನೆ. ಇದನ್ನೂ ಓದಿ: ಶಿರಸಿಯಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 1 ರೂ. ಇಳಿಕೆ
ಪೈಲ್ವಾನ್ ಅಫ್ಜಲ್, ಹಸಿರು ಸಿಂಹದ ಮೇಲೆ ಅರ್ಧ ಚಂದ್ರನ ಫೋಟೋವನ್ನು ವಾಟ್ಸ್ಆ್ಯಪ್‌ನಲ್ಲಿ ಪೋಸ್ಟ್ ಮಾಡಿದ್ದ. ಇದನ್ನು ಪೈಲ್ವಾನ್ ಉಮೇಶ ಹರಗಿ ವಾಟ್ಸಪ್‌ನಲ್ಲಿ ಪ್ರಶ್ನಿಸಿದ್ದ.
ಐಜ್ವಾಲ್: ಮಿಜೋರಾಂ ಮುಖ್ಯಮಂತ್ರಿಯ ಪುತ್ರಿ ಏಕಾಏಕಿ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ಆಕೆಯ ತಂದೆ, ಮಿಜೋರಾಂನ ಸಿಎಂ ಝೋರಂತಂಗ ಅವರು ಖುದ್ದಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಸಿಎಂ ಪುತ್ರಿ ಮಿಲಾರಿ ಚಾಂಗ್ಟೆ ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ಚರ್ಮರೋಗ ತಜ್ಞನನ್ನು ಭೇಟಿಯಾಗಲು ಬಯಸಿದ್ದರು. ಆದರೆ ಭೇಟಿಗೂ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರುವಂತೆ ಸೂಚಿಸಲಾಗಿತ್ತು. ಇದರಿಂದ ಕೋಪಗೊಂಡ ಚಾಂಗ್ಟೆ ವೈದ್ಯನ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಬುಧವಾರ ನಡೆದಿರುವುದಾಗಿ ತಿಳಿದುಬಂದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಮುಖ್ಯಮಂತ್ರಿಗಳ ಮಗಳು ವೈದ್ಯರ ಬಳಿ ಹೋಗುವುದು ಹಾಗೂ ವೈದ್ಯನಿಗೆ ಹೊಡೆದಿರುವುದು ಕಂಡುಬಂದಿದೆ. ಈ ವೀಡಿಯೋ ಕಳೆದ 2 ದಿನಗಳಿಂದ ವೈರಲ್ ಆಗುತ್ತಿದ್ದು, ಬಳಿಕ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಸದಸ್ಯರು ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಜೀವ ಬೆದರಿಕೆ- ತನಿಖೆ ಮಾಡಿಸ್ತೀವಿ ಎಂದ ಸಿಎಂ
ಈ ಘಟನೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಿಜೋರಾಂ ಘಟಕ ಪ್ರತಿಭಟನೆ ಆರಂಭಿಸಿದ್ದು, ವೈದ್ಯರು ಕಪ್ಪು ಬ್ಯಾಡ್ಜ್ ಧರಿಸಿ ಕೆಲಸ ಮಾಡಿರುವುದಾಗಿ ವರದಿಯಾಗಿದೆ.
ಅಂತಿಮವಾಗಿ ಮಿಜೋರಾಂ ಸಿಎಂ ಇನ್‌ಸ್ಟಾಗ್ರಾಮ್‌ನ ಅಧಿಕೃತ ಖಾತೆ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಐಜ್ವಾಲ್ ಮೂಲದ ಚರ್ಮರೋಗ ವೈದ್ಯರೊಂದಿಗೆ ತಮ್ಮ ಮಗಳು ತೋರಿದ ದುರ್ವರ್ತನೆಗೆ ನಾನು ಕ್ಷಮೆ ಯಾಚಿಸುತ್ತೇನೆ. ನಾನು ಯಾವುದೇ ರೀತಿಯಲ್ಲೂ ಆಕೆಯ ನಡವಳಿಕೆಯನ್ನು ಸಮರ್ಥಿಸುವುದಿಲ್ಲ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ
Live Tv
[brid partner=56869869 player=32851 video=960834 autoplay=true]
ಪತಿ, ನಟ ಚಂದನ್ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ. ಚಂದನ್ ಬರುತ್ತಾರೋ ಇಲ್ಲವೋ ಅದಕ್ಕಾಗಿ ನಾನು ಕಾಯುವುದಿಲ್ಲ. ನನ್ನ ಪತಿ ಮೇಲಿನ ಹಲ್ಲೆ ಎನ್ನುವುದಕ್ಕಿಂತ, ಒಬ್ಬ ಕಲಾವಿದನ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ ಎಂದು ನಟಿಯೂ ಆಗಿರುವ ಚಂದನ್ ಪತ್ನಿ ಕವಿತಾ ಗೌಡ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಈ ವಿಷಯ ನಿನ್ನೆಯಷ್ಟೇ ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ.
‘ನಾನು ಯಾರಿಗೂ ಹೊಡೆದಿಲ್ಲ. ಚಿಕ್ಕ ಹುಡುಗನ ಮೇಲೆ ಕೈ ಮಾಡುವವನೂ ನಾನಲ್ಲ. ಆ ಹುಡುಗನನ್ನು ಎಡಗೈಯಿಂದ ಜಸ್ಟ್ ತಟ್ಟಿದೆ. ಅದನ್ನೇ ಹೊಡೆದ್ರು ಅಂತ ಹೇಳ್ತಿದ್ದಾರೆ ಎಂದು ಚಂದನ್ ನನಗೆ ಹೇಳಿದರು. 10 ವರ್ಷದಿಂದ ಇರುವ ನಟನನ್ನ ಅವರು ಹಾಗೆ ಟ್ರೀಟ್ ಮಾಡಿದ್ದು ಸರಿ ಅಲ್ಲ. ಮೊದಲು ಅಲ್ಲಿ ಮೂರು ಜನ ಮಾತ್ರ ಇದ್ರಂತೆ. ಆಮೇಲೆ ಎಲ್ಲರನ್ನೂ ಕರೆಸಿ ಗಲಾಟೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎನ್ನುತ್ತಾರೆ ಕವಿತಾ ಗೌಡ. ಇದನ್ನೂ ಓದಿ:ಡಿವೋರ್ಸ್ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ
ನಡೆದಿರೋದು ನಡೆದೋಗಿದೆ. ಆದರೂ, ಯಾರೂ ಅಲ್ಲ ಸಂಯಮ ತಗೆದುಕೊಂಡಿಲ್ಲ. ಕೆಟ್ಟದ್ದಾಗಿಯೇ ಮಾತನಾಡುತ್ತಾ ಕೇಳೋ ಸ್ವಾರಿ ಕೇಳೋ ಅಂತ ಟ್ರೀಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ನನಗಂತೂ ಬೇಸರವಾಯಿತು. ಕೆಲವರು ಕನ್ನಡದವರೂ ಅಲ್ಲಿದ್ದರು. ಅವರು ಯಾರೂ ಸಹಾಯಕ್ಕೆ ಬಂದಿಲ್ಲ. ನಾನೂ ತೆಲುಗು ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದೀನಿ. ಆದರೆ, ಇಂತಹ ಘಟನೆಯನ್ನು ಯಾವತ್ತೂ ಕಂಡಿಲ್ಲ ಎನ್ನುವುದು ಕವಿತಾ ಗೌಡ ಮಾತು.
Live Tv
[brid partner=56869869 player=32851 video=960834 autoplay=true]
ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯ ಶೂಟಿಂಗ್ ವೇಳೆ ಕನ್ನಡದ ಹೆಸರಾಂತ ಕಿರುತೆರೆ ನಟ ಚಂದನ್ ಮೇಲಿನ ಹಲ್ಲೆಗೆ ಹೊಸ ತಿರುವು ಸಿಕ್ಕಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ವಿಶೇಷವಾಗಿ ಮಾತನಾಡಿರುವ ಅವರು, ಇದು ತಿಂಗಳು ಹಿಂದೆ ನಡೆದ ಘಟನೆಯಲ್ಲ ನಿನ್ನೆಯಷ್ಟೇ ನಡೆದದ್ದು ಎಂದು ತಿಳಿಸಿದ್ದಾರೆ.
‘ನಿನ್ನೆ ನನ್ನ ಕಾಲ್ ಶೀಟ್ ಇರಲಿಲ್ಲ. ಆದರೂ, ಶೂಟಿಂಗೆಗೆ ಹೋಗಿದ್ದೆ. ಅದು ನನ್ನ ವೃತ್ತಿ ಬದ್ಧತೆ ಆಗಿತ್ತು. ನನ್ನ ತಾಯಿಗೆ ಹುಷಾರಿಲ್ಲ ಎಂದರೂ, ನಾನು ಚಿತ್ರೀಕರಣದಲ್ಲಿ ಭಾಗಿ ಆಗುವ ಮೂಲಕ ಒಬ್ಬ ನಟನಾಗಿ ಮಾಡಬೇಕಾದ ಕರ್ತವ್ಯ ಮಾಡಿದೆ. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನನ್ನ ಮೇಲಿನ ಘಟನೆಯು ಪ್ರೀಪ್ಲ್ಯಾನ್ಡ್ ಅನ್ಸುತ್ತೆ. ಘಟನೆ ಏನೇ ನಡೆದಿದ್ದರೂ, ಕುಳಿತು ಮಾತನಾಡಬಹುದಿತ್ತು. ಹಾಗೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ನನ್ನ ಮೇಲೆ ದುರ್ವರ್ತನೆ ತೋರಿದ್ದಾರೆ. ಹೊಡೆದಿದ್ದು ಸರಿ ಇಲ್ಲ ಅಂತ ಅಲ್ಲಿ ಯಾರೊಬ್ಬ ತಂತ್ರಜ್ಞರೂ ಹೇಳಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಿದ್ದರು’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ ಚಂದನ್. ಇದನ್ನೂ ಓದಿ:ಡಿವೋರ್ಸ್ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ
‘ನಿನ್ನೆ ಶೂಟಿಂಗ್ ಸಮಯದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಬಂದು ಎದ್ದೇಳಿಸಿ ಏನೇನೋ ಮಾತನಾಡಿದ್ರು. ಹೋಗೋ ಬರ್ತೀನಿ ಅಂತ ತಳ್ಳಿದೆ ಅಷ್ಟೇ. ಆಮೇಲೆ ಆತ ಹೋಗಿ ಎಲ್ಲರನ್ನೂ ಸೇರಿಸಿ ಈ ರೀತಿ ವರ್ತಿಸಿದ್ದಾನೆ. ಧಾರಾವಾಹಿಯಲ್ಲಿ ನಟಿಸಲ್ಲ ಅಂತ ಹೇಳಿದಾಗಲೂ ಅವರೇ ನನ್ನನ್ನು ಕರೆದು ಆಕ್ಟ್ ಮಾಡಲು ಕೇಳಿಕೊಂಡಿದ್ದರು. ಹಾಗಾಗಿ ಹೋಗಿದ್ದೆ, ನಾನಾಗಿಯೇ ಅವಕಾಶ ಹುಡುಕಿಕೊಂಡು ಹೋಗಿಲ್ಲ. ಈ ಘಟನೆ ನಡೆದು ಬೆಂಗಳೂರಿಗೆ ವಾಪಸ್ ಬರಬೇಕು ಎಂದಾಗ ಮತ್ತೆ ಕಷ್ಟ ಕೊಟ್ಟರು. ಕ್ಯಾಬ್ ಬುಕ್ ಮಾಡಿಕೊಂಡು ಹೋಗೋಕೂ ಬಿಡಲಿಲ್ಲ. ರೂಮ್ ಕೊಡ್ಲಿಲ್ಲ’ ಎಂದು ಘಟನೆಯನ್ನು ವಿವರಿಸಿದರು ಚಂದನ್.
Live Tv
[brid partner=56869869 player=32851 video=960834 autoplay=true]
ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಧಾರಾವಾಹಿ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಗಲಾಟೆಯ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ. ಒಂದು ತಿಂಗಳ ಹಿಂದೆ ನಟ ಚಂದನ್ ಮೇಲೆ ಹಲ್ಲೆ ಮಾಡುವ ಈ ವಿಡಿಯೋ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿ ಬಂದಿದ್ದವು. ಸ್ವತಃ ಚಂದನ್ ಅವರೇ ಧಾರಾವಾಹಿಯ ಕ್ಯಾಮೆರಾಮನ್ ಮತ್ತು ಕ್ಯಾಮೆರಾಮನ್ ಸಹಾಯಕನಿಗೆ ಹೊಡೆದರು, ಆನಂತರ ಸೆಟ್ ನಲ್ಲಿ ಗಲಾಟೆ ನಡೆಯಿತು ಎಂದು ಹೇಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಂದನ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಗಲಾಟೆ ಆಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು ಆದರೆ, ಅಲ್ಲಿ ಹೊಡೆದಾಟ ನಡೆದಿಲ್ಲ. ಯಾರೂ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದಿದ್ದಾರೆ. ‘ಈ ಘಟನೆ ನಡೆದಾಗ ನನ್ನ ತಾಯಿಯು ಅನಾರೋಗ್ಯದಲ್ಲಿದ್ದರು. ನಾನು ಟೆನ್ಷನ್ ನಲ್ಲಿದ್ದೆ. ಈ ಸಮಯದಲ್ಲಿ ಕ್ಯಾಮೆರಾಮನ್ ಸಹಾಯಕ ನನ್ನ ಸಹಾಯಕನಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ನಾನು ಆ ಹುಡುಗನಿಗೆ ಹಾಗೆ ಮಾತನಾಡುವುದು ತಪ್ಪು ಎಂದು ತಳ್ಳಿದ್ದೆ. ಇದರ ಹೊರತಾಗಿ ಅಲ್ಲಿ ಏನೂ ನಡೆದಿಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್
ಆದರೆ, ವಿಡಿಯೋದಲ್ಲಿ ಇರುವುದು ಬೇರೆಯಾಗಿದೆ. ಶೂಟಿಂಗ್ ಸ್ಥಗಿತಗೊಳಿಸಿ ಚಂದನ್ ಅವರನ್ನು ಸುತ್ತುವರೆದಿದ್ದಾರೆ. ವಾತಾವರಣ ಬಿಸಿಯಾಗಿದೆ. ಚಂದನ್ ಮತ್ತು ಅಲ್ಲಿ ನೆರೆದಿದ್ದವರ ಮಧ್ಯ ಮಾತಿನ ಚಕಮಕಿ ಕೂಡ ನಡೆದಿದೆ. ಕ್ಷಮೆ ಕೇಳಲು ಕೆಲವರು ಚಂದನ್ ಅವರನ್ನು ಒತ್ತಾಯಿಸುತ್ತಾರೆ. ಈ ಮಧ್ಯೆ ಅಲ್ಲಿ ನಿಂತದ್ದ ಒಬ್ಬನು ಚಂದನ್ ಅವರ ಮುಖಕ್ಕೆ ಹೊಡೆಯುತ್ತಾನೆ. ಇಷ್ಟೆಲ್ಲ ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಅಂದಹಾಗೆ ಚಂದನ್ ಅವರು ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಅವರು ಈ ಹಿಂದೆ ಲಕ್ಷ್ಮೀ ಬಾರಮ್ಮ, ‘ರಾಧಾ ಕಲ್ಯಾಣ’, ‘ಸರ್ವ ಮಂಗಳ ಮಾಂಗಲ್ಯೇ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಲವ್ ಯು ಅಲಿಯಾ, ಅರ್ಜುನ್ ಸರ್ಜಾ ನಿರ್ದೇಶನದ “ಪ್ರೇಮ ಬರಹ” ಸೇರಿ ಕನ್ನಡದ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ’ ಮರಳಿ ಮನಸಾಗಿದೆ ‘ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಬಂದ ಅನಾಮಿಕ ಯುವಕನೊಬ್ಬ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿದೆ.
ಸ್ಕೂಟಿಯಲ್ಲಿ ಜರ್ಸಿ ಧರಿಸಿ, ತಲೆಗೆ ಹೆಲ್ಮೆಟ್ ಹಾಕಿಕೊಂಡು ಬಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದರಿಂದ ಸದ್ಯ ಚಿಕ್ಕಬಳ್ಳಾಪುರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ನಿಮ್ಮ ಬರ್ತ್‌ಡೇ ಇದ್ರೆ ಹೇಳಿ ಅದಕ್ಕೂ ಬರ್ತೀವಿ: ಡಿಕೆಶಿ
ಯುವಕ 8ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅವರಲ್ಲಿ 7ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಘಟನಾ ಸ್ಥಳಕ್ಕೆ ಹಾಗೂ ಖಾಸಗಿ ಆಸ್ಪತ್ರೆ ಎಸ್‌ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿದ್ದು ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಒಡಿಸ್ಸಾದ ಹೆಸರಾಂತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಕೃತಿ ಮಿಶ್ರಾ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿದ ಘಟನೆ ನಡೆದಿದೆ. ತನ್ನ ಗಂಡನೊಂದಿಗೆ ಪ್ರಕೃತಿ ಸಲುಗೆಯಿಂದ ಇದ್ದಾರೆ ಮತ್ತು ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದ್ದ ಆ ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪ್ರಕೃತಿ ಜೊತೆ ಹೊರಟಿದ್ದ ಗಂಡನನ್ನು ತಡೆದು ನಟಿಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿ ನೆರೆದಿದ್ದವರು ಹಲ್ಲೆ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಪ್ರಕೃತಿ ಮಿಶ್ರಾ ಮತ್ತು ಒಡಿಸ್ಸಾದ ನಟ ಬಾಬುಶಾಜ್ ಮೊಹಂತಿ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವುದು ಮೊಹಂತಿ ಪತ್ನಿಯ ಆರೋಪ. ಹಾಗಾಗಿ ಗಂಡನನ್ನು ಯಾವಾಗಲೂ ಹಿಂಬಾಲಿಸಿಕೊಂಡು ಹೋಗುತ್ತಿದ್ದರಂತೆ. ತಾವು ಅಂದುಕೊಂಡಂತೆ ನಟಿಯೊಂದಿಗೆ ಪತಿ ಕಾರಿನಲ್ಲಿ ಹೋಗುತ್ತಿರುವುದು ಗೊತ್ತಾಗಿ, ಕಾರು ಅಡ್ಡಗಟ್ಟಿದ್ದಾರೆ ಮೊಹಂತಿ ಪತ್ನಿ. ಕಾರಿನಲ್ಲಿ ತನ್ನ ಗಂಡನೊಂದಿಗೆ ಕೂತಿದ್ದ ನಟಿ ಪ್ರಕೃತಿಯನ್ನು ತಲೆಗೂದಲು ಕಿತ್ತು ಬರುವಂತೆ ಎಳೆದಾಡಿದ್ದಾರೆ. ಇವರಿಂದ ತಪ್ಪಿಸಿಕೊಂಡು ಹೋಗಲು ನಟಿ ಓಡುತ್ತಾರೆ. ಅವರನ್ನು ಹಿಂಬಾಲಿಸುವ ನಟನ ಪತ್ನಿಯು ಅಲ್ಲಿಯೂ ಅಲ್ಲೇ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆಯನ್ನು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಪ್ರಕೃತಿ, ಈ ಘಟನೆಯ ಕುರಿತು ಹಲವರು ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಆದರೂ, ನನ್ನ ಮೇಲೆ ಹಲ್ಲೆಯಾಗಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಘಟನೆಯನ್ನು ನಾನು ಸಮರ್ಥವಾಗಿ ಎದುರಿಸುತ್ತೇನೆ. ಕಾನೂನು ಮೂಲಕವೇ ಉತ್ತರಿಸುತ್ತೇನೆ. ಮಾಡಲು ನನಗೆ ಸಾಕಷ್ಟು ಕೆಲಸಗಳಿಗೆ. ಅವುಗಳಲ್ಲಿ ತೊಡಗಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.
ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರಕೃತಿ ಮತ್ತು ನಟ ಬಾಬುಶಾನ್ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ಹಾಗಾಗಿ ಸ್ನೇಹ ಬೆಳೆದಿದೆ ಎನ್ನಲಾಗುತ್ತಿದೆ. ಅಂದಹಾಗೆ ಪ್ರಕೃತಿ ಒಡಿಸ್ಸಾ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲೋ ಅರ್ಸಿ ಸಿನಿಮಾದ ನಟನೆಗಾಗಿ ಅವರಿಗೆ ಸ್ಪೆಷಲ್ ಜ್ಯೂರಿ ರಾಷ್ಟ್ರಪ್ರಶಸ್ತಿ ಕೂಡ ಬಂದಿದೆ.
Live Tv
[brid partner=56869869 player=32851 video=960834 autoplay=true]