ಬೆಂಗಳೂರು: ಮುಖದ ತುಂಬಾ ಗಾಯಗಳು, ಕಣ್ಣು ಮೂಗು ಅನ್ನದೇ ಮುಖಕ್ಕೆ ಹೊಡೆದಿರೋ ಗ್ಯಾಂಗ್. ರಕ್ತದ ಮಡುವಿನಲ್ಲಿದ್ದ ವ್ಯಕ್ತಿ ಯಾರು ಎಂದು ಗೊತ್ತಿಲ್ಲ. ಹೀಗೆ ರಕ್ತಸ್ರಾವ ಆಗ್ತಿದ್ದ ವ್ಯಕ್ತಿಯನ್ನ ಸ್ಥಳೀಯರು ನೋಡಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ರಾತ್ರಿ ರಾಜಾನಕುಂಟೆ ಸರ್ಕಲ್ (Rajanakunte Circle) ಬಳಿ ಹೀಗೆ ಈ ವ್ಯಕ್ತಿಯನ್ನ ಗುಂಪೊಂದು ಹಲ್ಲೆ ಮಾಡಿ ಎಸ್ಕೇಪ್ ಆಗಿದೆ. ಟೀ ಕುಡಿಯುತ್ತಾ ನಿಂತಿದ್ದ ವೇಳೆ ವ್ಯಕ್ತಿಯನ್ನ ಕುಡಿದ ಮತ್ತಿನಲ್ಲಿದ್ದವರು ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿರುವುದು ಯಾವ ಕಾರಣಕ್ಕೆ ಎಂದು ತಿಳಿದುಬಂದಿಲ್ಲ.
ಸಾಂದರ್ಭಿಕ ಚಿತ್ರ
ಗಲಾಟೆ ಬಗ್ಗೆಯ ಸ್ಥಳೀಯರು ಕೇಳಿದ್ರೂ ಏನು ಹೇಳದ ವ್ಯಕ್ತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಲಾಟೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಹಲ್ಲೆಗೆ ಒಳಗಾದ ವ್ಯಕ್ತಿ ಯಾರು, ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಯಾರು ಹಲ್ಲೆ ಮಾಡಿದ್ದು ಎಂಬ ಮಾಹಿತಿ ಕಲೆಹಾಕ್ತಿದ್ದಾರೆ. ಸದ್ಯ ಸ್ಥಳೀಯರ ಮಾಹಿತಿ ಪ್ರಕಾರ ಥಳಿತಕ್ಕೊಳಗಾಗಿರುವ ವಿದೇಶಿ ಪ್ರಜೆ ಎನ್ನುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದು, ಇದರಿಂದ 6 ವರ್ಷದ ತನ್ನ ಮಗನೇ (Son) ಸಾವನ್ನಪ್ಪಿದ್ದ. ಕುಡಿದ ನಶೆ ಇಳಿದ ಬಳಿಕ ವ್ಯಕ್ತಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ನೇಣಿಗೆ ಶರಣಾಗಿರುವ ಘಟನೆ ಹುಬ್ಬಳ್ಳಿ (Hubballi) ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಫಕ್ಕೀರಪ್ಪ ಮಾದರ ಬುಧವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಏಕಾಏಕಿ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಕೊಡಲಿಯಿಂದ ತನ್ನ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಗಂಡ ಹಲ್ಲೆ ಮಾಡುತ್ತಿದ್ದಂತೆ ಮುದಕವ್ವ ಜೋರಾಗಿ ಕಿರುಚಾಡಲು ಶುರು ಮಾಡಿದ್ದಾಳೆ. ಇದರಿಂದ ಮನೆಯಲ್ಲಿ ಮಲಗಿದ್ದ ಮೂವರು ಮಕ್ಕಳು ಎದ್ದು ಅಳಲು ಪ್ರಾರಂಭಿಸಿದ್ದರು. ಅಲ್ಲದೆ ತಾಯಿಯನ್ನು ಹಲ್ಲೆಯಿಂದ ಬಿಡಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಆದರೆ ಮಕ್ಕರು ಅಡ್ಡ ಬಂದಿದ್ದಕ್ಕೆ ಕೆರಳಿದ ಫಕೀರಪ್ಪ ಶ್ರಾವಣಿ (8), ಶ್ರೇಯಸ್ (6) ಹಾಗೂ ಸೃಷ್ಟಿ (4) ಮೇಲೆ ಕೈಯಲ್ಲಿದ್ದ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.
ಫಕ್ಕೀರಪ್ಪ ತನ್ನ ಹೆಂಡತಿ ಮತ್ತು ಮೂವರು ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಒಂದು ಕಡೆ ಹೆಂಡತಿ, ಮತ್ತೊಂದು ಕಡೆ ಮೂವರು ಮಕ್ಕಳು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದರು. ಕೃತ್ಯ ಎಸಗಿ ಸ್ವಲ್ಪ ಹೊತ್ತು ಸುಧಾರಿಸಿಕೊಂಡ ಫಕೀರಪ್ಪನಿಗೆ ಬಳಿಕ ತಾನು ಮಾಡಿದ ತಪ್ಪಿನ ಅರಿವಾಗಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಬೆಳ್ಳಂಬೆಳಗ್ಗೆ 6 ಗಂಟೆಯ ಸುಮಾರಿಗೆ ಫಕೀರಪ್ಪನ ಮನೆಯಿಂದ ಬರುತ್ತಿದ್ದ ಟಿವಿ ಶಬ್ದ ಕೇಳಿ ಅಕ್ಕ-ಪಕ್ಕದ ಮನೆಯವರು ಬಾಗಿಲು ಬಡಿದಿದ್ದಾರೆ. ಆದರೆ ಯಾರು ಕೂಡಾ ಬಾಗಿಯಲು ತೆರೆಯದ ಹಿನ್ನೆಲೆ ನೆರೆಹೊರೆಯವರು ಬಾಗಿಲು ಮುರಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮಾಡಿದ ತಪ್ಪಿನಿಂದ ಬಿಜೆಪಿ ಮೇಲೆ ರಾಜ್ಯದ ಜನರಿಗೆ ಸಿಂಪತಿ ಬಂತು: ಜಮೀರ್
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಮಕ್ಕಳ ಪೈಕಿ 6 ವರ್ಷದ ಶ್ರೇಯಸ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತಾಯಿ ಮುದಕವ್ವ ಮತ್ತು ಇನ್ನೂ 2 ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ.
ಫಕೀರಪ್ಪ ಮತ್ತು ಮುದಕವ್ವ ಮದುವೆಯಾಗಿ 10 ವರ್ಷಗಳಾಗಿದ್ದು, ಫಕೀರಪ್ಪ ತನ್ನ ಹೆಂಡತಿ ನಡತೆ ಮೇಲೆ ಅನುಮಾನಪಡುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಆತ ವಿಪರೀತವಾಗಿ ಕುಡಿದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆಗಾಗ ಈ ವಿಚಾರವಾಗಿ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದ. ಆದರೆ ಇದೀಗ ಜಗಳ ಅತಿರೇಕಕ್ಕೆ ತೆರಳಿ ಈ ಕೃತ್ಯ ನಡೆದಿದೆ ಎಂಬ ಅನುಮಾನ ಮೂಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಎಲ್ಲವನ್ನೂ ಕೊಟ್ಟಿರುವ ಬಿಜೆಪಿ ಬಿಡುವ ಮಾತೇ ಇಲ್ಲ – ಸಚಿವ ನಾರಾಯಣಗೌಡ ಸ್ಪಷ್ಟನೆ
Live Tv
[brid partner=56869869 player=32851 video=960834 autoplay=true]
ಜೈಪುರ: ದಲಿತ (Dalit) ವ್ಯಕ್ತಿಯೊಬ್ಬರು ತಾನು ಮಾಡಿದ ಕೆಲಸಕ್ಕೆ ಸಂಬಳ (Payment) ನೀಡುವಂತೆ ಕೇಳಿದ್ದಕ್ಕೆ ಕೆಲ ಕಿಡಿಗೇಡಿಗಳು ಅವರನ್ನು ಥಳಿಸಿ (Assault), ಚಪ್ಪಲಿಯ ಮಾಲೆ ಹಾಕಿ, ಮೂತ್ರ ಕುಡಿಯುವಂತೆ ಒತ್ತಾಯಿಸಿರುವ ವಿಕೃತ ಘಟನೆ ರಾಜಸ್ಥಾನದ (rajasthan) ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ದಲಿತ ವ್ಯಕ್ತಿ ಎಲೆಕ್ಟ್ರಿಷಿಯನ್ ಆಗಿದ್ದು, ತಾನು ಮಾಡಿದ ಕೆಲಸಕ್ಕೆ ಸಂಬಳ ಕೇಳಿದ್ದಾರೆ. ಈ ವೇಳೆ ಕಿಡಿಗೇಡಿಗಳು ವಿಕೃತ ಕೃತ್ಯ ಎಸಗಿದ್ದಾರೆ. ದಾಳಿ ಮಾಡಿದವರಲ್ಲಿ ಒಬ್ಬ ಇದರ ವೀಡಿಯೋವನ್ನೂ ರೆಕಾರ್ಡ್ ಮಾಡಿದ್ದಾನೆ. ವೀಡಿಯೋದಲ್ಲಿ ದಲಿತ ವ್ಯಕ್ತಿ ತನ್ನನ್ನು ಥಳಿಸದಂತೆ ಬೇಡಿಕೊಂಡಿದ್ದಾರೆ. ಬಳಿಕ ವೀಡಿಯೋವನ್ನು ದಾಳಿಕೋರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿ ಭರತ್ ಕುಮಾರ್ (28) ನವೆಂಬರ್ 23ರಂದು ಪೊಲೀಸರಿಗೆ ಮೂವರ ವಿರುದ್ಧ ದೂರು ನೀಡಿದ್ದಾರೆ. ಅವರು ಕೆಲವು ಎಲೆಕ್ಟ್ರಿಷಿಯನ್ ಕೆಲಸ ಮಾಡಿದ್ದು, 21,100 ರೂ. ಬಿಲ್ ಮಾಡಿದ್ದಾರೆ. ಕೆಲಸ ಮಾಡಿಸಿಕೊಂಡ ವ್ಯಕ್ತಿ ತಕ್ಷಣಕ್ಕೆ ಅವರಿಗೆ 5,000 ರೂ. ನೀಡಿ, ಉಳಿದ ಹಣವನ್ನು ನವೆಂಬರ್ 19ರಂದು ಡಾಬಾವೊಂದಕ್ಕೆ ಹೋಗಿ ಪಡೆಯಲು ತಿಳಿಸಿದ್ದಾನೆ. ಇದನ್ನೂ ಓದಿ: ಅಬಕಾರಿ ಹಗರಣ – ಸಿಬಿಐ ಸಲ್ಲಿಸಿದ ಚಾರ್ಜ್‍ಶೀಟ್‍ನಲ್ಲಿ ಮನೀಶ್ ಸಿಸೋಡಿಯಾ ಹೆಸರಿಲ್ಲ
ಅದರಂತೆ ಭರತ್ ಕುಮಾರ್ ಡಾಬಾಗೆ ತೆರಳಿ ಉಳಿದ ಹಣ ಕೇಳಿದ್ದಾರೆ. ಈ ವೇಳೆ ಅವರನ್ನು ರಾತ್ರಿ 9 ಗಂಟೆ ವೇಳೆಗೆ ಬರುವಂತೆ ಸೂಚಿಸಲಾಗಿದೆ. ಭರತ್ ಮತ್ತೆ 9 ಗಂಟೆಗೆ ಡಾಬಾ ಬಳಿ ಬಂದಿದ್ದು, 9:10ರ ವರೆಗೆ ಕಾದು ಕುಳಿತರೂ ಹಣ ನೀಡದಿದ್ದಾಗ ಪೊಲೀಸರಿಗೆ ದುರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಆರೋಪಿಗಳು ಭರತ್ ಅವರನ್ನು ಹಿಡಿದು ಥಳಿಸಿದ್ದಾರೆ. ಅಮಾನುಷವಾಗಿ ಹೊಡೆದಿದ್ದಲ್ಲದೇ ಚಪ್ಪಲಿಯ ಮಾಲೆ ಹಾಕಿದ್ದಾರೆ. ಆರೋಪಿಗಳಲ್ಲೊಬ್ಬ ಕೃತ್ಯದ ವೀಡಿಯೋ ಮಾಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ಆರೋಪಿಗಳು ತಮ್ಮ ಮೇಲೆ ಸುಮಾರು 5 ಗಂಟೆಗಳ ಕಾಲ ಹಲ್ಲೆ ನಡೆಸಿದ್ದಾರೆ ಎಂದು ಭರತ್ ಆರೋಪಿಸಿದ್ದಾರೆ. ಇದನ್ನೂ ಓದಿ: ಎಸ್ಕೇಪ್ ಆಗುತ್ತಿದ್ದ ಸರಗಳ್ಳನನ್ನು ಚಾಣಕ್ಷತನದಿಂದ ಹಿಡಿದ ಪೊಲೀಸ್ – ವೀಡಿಯೋ ವೈರಲ್
Live Tv
[brid partner=56869869 player=32851 video=960834 autoplay=true]
ಕೋಲ್ಕತ್ತಾ: ಇಬ್ಬರು ಮಹಿಳೆಯರನ್ನು (Women) ಸಲಿಂಗಕಾಮಿಗಳು (Lesbian) ಎಂದು ಶಂಕಿಸಿ, ಮೂವರು ಪರುಷರ ಗುಂಪು ಅವರಿಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಬಿಸಿ ಕಬ್ಬಿಣದ ರಾಡ್‌ನಿಂದ ಖಾಸಗಿ ಭಾಗವನ್ನು ಸುಟ್ಟಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಆಘಾತಕಾರಿ ಘಟನೆ ಅಕ್ಟೋಬರ್ 25ರಂದು ಜಿಲ್ಲೆಯ ಸಾಗರ್ದಿಘಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರನ್ನು ಪುರುಷರು ಲೈಂಗಿಕ ಪ್ರವೃತ್ತಿಗಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಪುರುಷರು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಸಂತ್ರಸ್ತೆಯರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿ, ಹೊಲದಲ್ಲಿ ಅಡಗಿ ಕೂತಿದ್ದಾರೆ. ಇಬ್ಬರ ಮೇಲೆ ಬೆಂಕಿ ಕಡ್ಡಿ ಹಾಗೂ ಮದ್ಯದ ಬಾಟಲಿಗಳಿಂದಲೂ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯರು ನವೆಂಬರ್ 3 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬ ಮಹಿಳೆ ಮತ್ತೊಬ್ಬಳೊಂದಿಗೆ ಸಂಬಂಧ ಇದ್ದುದಾಗಿಯೂ ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲೊಬ್ಬ ಸಂತ್ರಸ್ತೆಯೊಬ್ಬರ ಸಂಬಂಧಿಯೂ ಇದ್ದ ಎಂದು ಮಹಿಳೆಯರು ದೂರು ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ – ಪತಿ ವಿರುದ್ಧ ಪತ್ನಿ ದೂರು
ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ತನ್ನ ತಂದೆಗೆ ಬೈದ ಅನ್ನೋ ಕಾರಣಕ್ಕೆ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಳೆ ಹುಬ್ಬಳ್ಳಿ (Hubballi) ಯ ಅರವಿಂದ ನಗರದದಲ್ಲಿ ಬುಧವಾರ ತಡ ರಾತ್ರಿ ಈ ಘಟನೆ ನಡೆದಿದೆ. ಶಿವರಾಜ್ ಹೊಸಮನಿ ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿ. ಬಾಷಾ ಹಾಗೂ ಆತನ ಸ್ನೇಹಿತರು ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಶಿವರಾಜ್ ಬಾಷಾ ತಂದೆ (Father) ಯನ್ನು ಬೈದಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಬಾಷಾ ತನ್ನ ಸ್ನೇಹಿತರ ಜೊತೆ ಸೇರಿ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಶಿವಸೇನೆ ಮುಖಂಡ ಗುಂಡಿನ ದಾಳಿಗೆ ಬಲಿ
ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಕಿಮ್ಸ್ (KIIMS) ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ಹಳೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: ಅಮೆರಿಕ (America) ಹೌಸ್ ಆಫ್ ಸ್ಪೀಕರ್ ನ್ಯಾನ್ಸಿ ಪೆಲೋಸಿ (Nancy Pelosi) ಅವರ ಪತಿ ಪೌಲ್ ಪೆಲೋಸಿ (Paul Pelosi) ಅವರ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ (Assault) ನಡೆಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಶುಕ್ರವಾರ ಮುಂಜಾನೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಪಾಲ್ ಅವರ ಮನೆಗೆ ಕೆಲ ದುಷ್ಕರ್ಮಿಗಳು ನುಗ್ಗಿದ್ದು, ಅವರ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಏರಿಕೆ – ಚೀನಾದಲ್ಲಿ ಮತ್ತೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ
ಲಕ್ನೋ: ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬನನ್ನು (Dalit) ಸ್ಥಳೀಯರೇ ಥಳಿಸಿ, ತಲೆ ಬೋಳಿಸಿ, ಮುಖಕ್ಕೆ ಮಸಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ನಡೆದಿದೆ.
ದಿನಗೂಲಿ ಕೆಲಸ ಮಡುತ್ತಿದ್ದ ರಾಜೇಶ್ ಕುಮಾರ್ ಜಿಲ್ಲೆಯ ಹಾರ್ಡಿ ಪ್ರದೇಶದಲ್ಲಿ ಮನೆಯೊಂದರಲ್ಲಿ ಶೌಚಾಲಯದ ಸೀಟ್ ಕದ್ದಿದ್ದಾನೆ ಎಂದು ಆರೋಪಿಸಿ, ಸ್ಥಳೀಯ ಬಿಜೆಪಿ (BJP) ನಾಯಕ ರಾಧೇಶ್ಯಾಮ್ ಮಿಶ್ರಾ ಹಾಗೂ ಅವರ ಇಬ್ಬರು ಸಹಾಯಕರು ರಾಜೇಶ್ ಕುಮಾರ್‌ನನ್ನು ಕಂಬಕ್ಕೆ ಕಟ್ಟಿ, ಆತನ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದಿದ್ದಾರೆ. ಇದರ ವೀಡಿಯೋ ಸಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಒಂದೂವರೆ ವರ್ಷದ ಅವಧಿಯಲ್ಲಿ ಮೂವರು ಪ್ರಭಾವಿ ಬಿಜೆಪಿ ನಾಯಕರ ನಿಧನ
ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ರಾಧೇಶ್ಯಾಮ್ ಮಿಶ್ರಾನ ಇಬ್ಬರು ಸಹಾಯಕರನ್ನು ಬಂಧಿಸಿದ್ದಾರೆ. ಆದರೆ ಮಿಶ್ರಾ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಹಾಗೂ ಬೆಂಬಲಿಗರು ಜಾತಿವಾದಿ ಟೀಕೆಗಳನ್ನು ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್
ರಾಜೇಶ್ ಕುಮಾರ್ ಮೇಲೆ ಕಳ್ಳತನದ ಆರೋಪ ಹೊರಿಸಿದ್ದು, ಅವರನ್ನು ಪೊಲೀಸರ ಕೈಗೆ ಒಪ್ಪಿಸಬೇಕಿತ್ತು. ಆದರೆ ಸ್ಥಳೀಯರು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಹಲ್ಲೆ, ಕ್ರಿಮಿನಲ್ ಬೆದರಿಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ಅಪರಾಧಗಳನ್ನು ಶಿಕ್ಷಿಸಲು ಕಠಿಣ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಂಡೀಗಢ: ಮಸೀದಿಯಲ್ಲಿ (Mosque) ನಮಾಜ್ (Namaz) ಮಾಡುತ್ತಿದ್ದವರ ಮೇಲೆ ಹಲ್ಲೆ (Assault) ನಡೆಸಿ, ಮಸೀದಿಯನ್ನು ಧ್ವಂಸಗೊಳಿಸಿದ ಆರೋಪದಲ್ಲಿ ಗುರುಗ್ರಾಮದ ಪೊಲೀಸರು (Gurugram Police) 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಗುರುಗ್ರಾಮದ ಭೋರಾ ಕಲನ್ ಪ್ರದೇಶದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಮಸೀದಿಗೆ ನುಗ್ಗಿ, ಅಲ್ಲಿ ನಮಾಜ್ ಮಾಡಲು ಬಂದಿದ್ದವರನ್ನು ಥಳಿಸಿದ್ದಾರೆ. ಬಳಿಕ ಜೀವ ಬೆದರಿಕೆ ಒಡ್ಡಿದ್ದು, ಮಸೀದಿಯ ಗೇಟ್‌ಗೆ ಬೀಗ ಹಾಕಿ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಧಾರ್ಮಿಕ ಧ್ವಜ ಸುಟ್ಟ ಪ್ರಕರಣ- ಇಬ್ಬರ ಬಂಧನ
ಈ ಬಗ್ಗೆ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸುಬೇದಾರ್ ನಾಜರ್ ಮೊಹಮ್ಮದ್, ಭೋರಾ ಕಲನ್ ಪ್ರದೇಶದಲ್ಲಿ ಕೇವಲ 4 ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಬುಧವಾರ ನಮಾಜ್ ಮಾಡುತ್ತಿದ್ದ ವೇಳೆ ಮಸೀದಿಗೆ ನುಗ್ಗಿದ ಗುಂಪೊಂದು ನಮ್ಮ ಮೇಲೆ ಹಲ್ಲೆ ನಡೆಸಿದೆ. ಮಾತ್ರವಲ್ಲದೇ ನಮಗೆ ಈ ಪ್ರದೇಶ ತೊರೆಯುವಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ
ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕವಾಗಿ ಧಾರ್ಮಿಕ ನಂಬಿಕೆಗಳನ್ನು ಆಕ್ರೋಶಗೊಳಿಸುವುದು), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 506 (ಕ್ರಿಮಿನಲ್ ಬೆದರಿಕೆ), 147 (ಗಲಭೆ), 148 (ಆಯುಧಗಳನ್ನು ಹಿಡಿದು ಗಲಭೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇಲ್ಲಿಯವರೆಗೆ ರಾಜೇಶ್ ಚೌಹಾಣ್, ಅನಿಲ್ ಭದೌರಿಯಾ ಮತ್ತು ಸಂಜಯ್ ವ್ಯಾಸ್ ಎಂಬ ಮೂವರು ಆರೋಪಿಗಳನ್ನು ಗುರುತಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಿಜಯಪುರ: ಪ್ರೇಮಿಗಳು (Lovers) ಓಡಿ ಹೋಗಿದ್ದಕ್ಕೆ ಯುವಕನ ತಂದೆ-ತಾಯಿ (Father- Mother) ಮೇಲೆ ಯುವತಿ ಮನೆಯವರು ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.
ವೀಡಿಯೋ (Video) ದಲ್ಲಿ ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ನಮ್ಮ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬದವರನ್ನು ರಕ್ಷಣೆ (Protection) ಮಾಡಿ ಎಂದು ಅಮರ್ ಮನವಿ ಮಾಡಿದ್ದಾನೆ. ಇತ್ತ ಅರ್ಚನಾ ಕೂಡ ಮಾತನಾಡಿದ್ದು, ನಾನು ಪ್ರೀತಿಸಿದ ಹುಡುಗನ ಜೊತೆಗೆ ಬಂದಿದ್ದೇನೆ. ನಮ್ಮ ಕುಟುಂಬದವರನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ವಾರದ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗಿದ್ದರು. ಇದಾದ ಬಳಿಕ ಅಂದರೆ ಸೆಪ್ಟೆಂಬರ್ 11 ರಂದು ವಿಜಯಪುರ ತಾಲೂಕಿನ ಜಾಲಗೇರಿಯಲ್ಲಿ ಅರ್ಚನಾ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಅಮರ್ ತಂದೆ ಗೋರಖನಾಥ್ ಚೌಹಾಣ್, ತಾಯಿ ಕವಿತಾ ಮೇಲೆ ಹಲ್ಲೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಯುವರಾಜ್ ಗಾಯಕ್ವಾಡ್ ಅವರ ಮನೆಯಿಂದ ಹೊರಗಿರುವ ಕ್ಲಿನಿಕ್‍ನಲ್ಲಿ ಈ ಘಟನೆ ನಡೆದಿದೆ. ವೈದ್ಯರು(Doctor) ಕ್ಲಿನಿಕ್‍ನ ಬಾಗಿಲನ್ನು ಸ್ವಲ್ಪ ತಡವಾಗಿ ತೆರೆದಿದ್ದರಿದ್ದಾರೆ. ಇದರಿಂದಾಗಿ ರೋಗಿಯ ಸಂಬಂಧಿಗಳು ಸೇರಿ ವೈದ್ಯರಿಗೂ ಹಾಗೂ ಅವರ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧಿಸಿ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಘಟನೆಗೆ ಸಂಬಂಧಿಸಿ ಗಾಯಕ್ವಾಡ್ ಕುಟುಂಬಸ್ಥರು ದೂರು ನೀಡಿದ್ದಾರೆ. ದೂರಿನಲ್ಲಿ ಗಾಯಕ್ವಾಡ್ ಅವರು, ತಮ್ಮ ಕುಟುಂಬದೊಂದಿಗೆ ರಾತ್ರಿ ಊಟ ಮಾಡುತ್ತಿದ್ದಾಗ ಅವರ ಮನೆಯ ಬಾಗಿಲನ್ನು ಯಾರೋ ಜೋರಾಗಿ ಬಡಿಯುತ್ತಿರುವುದು ಕೇಳಿದ್ದಾರೆ. ಆದರೆ ಬಾಗಿಲು ತೆರೆಯಲು ತಡವಾಗಿತ್ತು. ಇದರಿಂದಾಗಿ ಗುಂಪೊಂದು ಕಿಟಕಿಯ ಗಾಜು ಒಡೆದರು. ಆದರೂ ವೈದ್ಯರು ಬಾಗಿಲನ್ನು ತೆರೆದಾಗ, ಆನಂದ್ ಅಲಿಯಾಸ್ ಅನಿಲ್ ಜಗತಾಪ್, ವಿಶ್ವಜೀತ್ ಜಗತಾಪ್, ಅಶೋಕ್ ಜಗತಾಪ್ ಮತ್ತು ಭೂಷಣ್ ಜಗತಾಪ್ ಅವರ ಮನೆಗೆ ನುಗ್ಗಿ ಅವರನ್ನು ಥಳಿಸಲು ಪ್ರಾರಂಭಿಸಿದರು. ಇದನ್ನೂ ಓದಿ: ರಸ್ತೆ ಪಕ್ಕದ ಚರಂಡಿಗೆ ಬಿದ್ದು ಯುವತಿ ದುರ್ಮರಣ
कैसे- कैसे लोग…!?
बारामती के सांगवी में एक आयुर्वेदिक #Doctor ने देर से दरवाजा खोला तो मरीज के साथ आए लोगों ने डॉक्टर और उनके बेटे की जमकर पिटाई कर दी!
मालेगांव पुलिस #FIR दर्ज कर जांच कर रही है। @ndtvvideos@ndtvindiapic.twitter.com/9deiLBsopZ
ಸಿಸಿಟಿವಿಯಲ್ಲಿ ಏನಿದೆ?: ಗಾಯಕ್ವಾಡ ತಮ್ಮ ಕ್ಲಿನಿಕ್ ಬಾಗಿಲನ್ನು ತೆರೆದಿದ್ದಾರೆ. ಆಗ ಕ್ಲಿನಿಕ್‍ನೊಳಗೆ ಪ್ರವೇಶಿಸಿದ 4-5 ಮಂದಿ ಗಾಯಕ್ವಾಡ್‍ಗೆ ಹೊಡೆಯಲು ಪ್ರಾರಂಭಿಸುತ್ತಾರೆ. ಅಧೆ ಸಮಯಕ್ಕೆ ಮನೆಯಿಂದ ಹೊರ ಬಂದ ಮಗನನ್ನು ನೋಡಿ ಅವನ ಶರ್ಟ್‍ನ್ನು ಹಿಡಿದು ಅವನ ಮೇಲೂ ಹಲ್ಲೆ ನಡೆಸುತ್ತಾರೆ. ಇಬ್ಬರೂ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಅಷ್ಟೇ ಅಲ್ಲದೇ ಕೊಣೆಯಲ್ಲಿ ಇಬ್ಬರು ಮಹಿಳೆಯರು ಘಟನೆಯನ್ನು ವೀಕ್ಷಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿ ಮಾಲೆಗಾಂವ್ ಪೊಲೀಸರು ವೈದ್ಯರ ಮೇಲೆ ಹಲ್ಲೆ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:‘ಕುದುರೆ ವ್ಯಾಪಾರ’ ಆರೋಪ – ಕಾಂಗ್ರೆಸ್ ಶಾಸಕ, ಬಿಜೆಪಿ ನಾಯಕಿಯ ಹಾದಿಬೀದಿ ರಂಪಾಟ
Live Tv
[brid partner=56869869 player=32851 video=960834 autoplay=true]