Tag: ಹಲ್ಲೆ

  • ಅತ್ತಿಗೆಗೆ ಚಾಕು ಇರಿದ ಮೈದುನ

    ಅತ್ತಿಗೆಗೆ ಚಾಕು ಇರಿದ ಮೈದುನ

    ಮೈಸೂರು: ಆಸ್ತಿ ವಿಚಾರದಲ್ಲಿ ಮೈದುನ ಅತ್ತಿಗೆಗೆ ಚಾಕು ಇರಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಿವೇಣಿ ಸರ್ಕಲ್ ನಲ್ಲಿ ನಡೆದಿದೆ.

    ಶುಭ ಹಲ್ಲೆಗೊಳಗಾದ ಅತ್ತಿಗೆ. ಮೈದುನ ರವಿಕುಮಾರ್‌ಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ್ದಾರೆ. ಗಾಯಗೊಂಡ ಅತ್ತಿಗೆಯನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈದುನ ರವಿಕುಮಾರ್ ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇವರು ಮೈಸೂರಿನ ಎನ್.ಆರ್ ಮೊಹಲ್ಲಾದ ಕುರಿಮಂಡಿ ನಿವಾಸಿಗಳು. ಆಸ್ತಿ ವಿಚಾರದಲ್ಲಿ ಇಂದು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಉಪನೊಂದಣಾಧಿಕಾರಿಗಳ ಕಚೇರಿಗೆ ಆರೋಪಿ ರವಿಕುಮಾರ್ ಹಾಗೂ ಅವರ ಅಣ್ಣ ಸುರೇಶ್ ಹಾಗೂ ಅತ್ತಿಗೆ ಶುಭ ಬಂದಿದ್ದರು. ಆಸ್ತಿ ನೋಂದಣಿ ವೇಳೆ ಸಹಿ ಹಾಕಲು ರವಿಕುಮಾರ್ ನಿರಾಕರಣೆ ಮಾಡಿದ್ದಾನೆ.

    ಈ ವೇಳೆ ಅತ್ತಿಗೆ ಶುಭ ಹಾಗೂ ಮೈದುನನ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೋಪಗೊಂಡ ರವಿಕುಮಾರ್ ಅತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮಧ್ಯಪ್ರವೇಶಿಸಿದ ಸ್ಥಳೀಯರು ರವಿಕುಮಾರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉದಯಗಿರಿ ಠಾಣಾ ಪೊಲೀಸರು ಚಾಕು ಇರಿದ ಮೈದುನ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸ್ವಾಮೀಜಿ ಕಾರ್ ಅಡ್ಡಗಟ್ಟಿ ಚಾಲಕನ ಮೇಲೆ ಪುಂಡರಿಂದ ಹಲ್ಲೆ

    ಸ್ವಾಮೀಜಿ ಕಾರ್ ಅಡ್ಡಗಟ್ಟಿ ಚಾಲಕನ ಮೇಲೆ ಪುಂಡರಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಓವರ್ ಟೇಕ್ ಮಾಡಿದರು ಎಂದು ಸ್ವಾಮೀಜಿಗಳಿದ್ದ ಕಾರಿನ ಚಾಲಕನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇನಹಳ್ಳಿ ಬಳಿ ನಡೆದಿದೆ.

    ಭೋವಿ ಸಮುದಾಯದ ಶರಣಬಸವೇಶ್ವರ ಮಠದ ಸ್ವಾಮೀಜಿಗಳು ತಮ್ಮ ಹೊಸ ಇನ್ನೋವಾ ಕಾರಿನಲ್ಲಿ ಡಾಬಸ್ ಪೇಟೆ ದೊಡ್ಡಬಳ್ಳಾಪುರ ಮಾರ್ಗವಾಗಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಡಾಬಸ್ ಪೇಟೆ ದೊಡ್ಡಬಳ್ಳಾಪುರ ಮಾರ್ಗ ಮಧ್ಯೆ ಕಿಡಿಗೇಡಿಗಳು ಚಲಿಸುತ್ತಿದ್ದ ಇನ್ನೋವಾ ಕಾರನ್ನ, ಸ್ವಾಮೀಜಿಗಳು ಚಲಿಸುತ್ತಿದ್ದ ಇನ್ನೋವಾ ಕಾರು ಓವರ್ ಟೇಕ್ ಮಾಡಿತ್ತು.

    ಹೀಗಾಗಿ ಕುಡಿದ ಅಮಲಿನಲ್ಲಿ ಕಾರಿನಲ್ಲಿದ್ದ ಇಬ್ಬರು ಕಿಡಿಗೇಡಿಗಳು ಮತ್ತೆ ಸ್ವಾಮೀಜಿಗಳ ಇನ್ನೋವಾ ಕಾರನ್ನ ಓವರ್ ಟೇಕ್ ಮಾಡಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕಾರ್ ಚಾಲಕನ ಜೊತೆ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸ್ವಾಮೀಜಿಗಳು ಕಿಡಿಗೇಡಿಗಳಿಗೆ ಬುದ್ಧಿ ಮಾತು ಹೇಳಿ ಸೇಬು ಹಣ್ಣು ಕೊಟ್ಟು ಆಶೀರ್ವಾದ ಮಾಡಿ ಕಾರು ಬಿಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೊಪ್ಪದ ಕಿಡಿಗೇಡಿಗಳು ಚಾಲಕನ ಜೊತೆ ಕಿರಿಕ್ ಮಾಡಿ ಕೆನ್ನೆಗೆ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಸ್ಥಳೀಯ ದೊಡ್ಡಬೆಳವಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಬ್ಬರು ಕಿಡಿಗೇಡಿಗಳನ್ನ ದೊಡ್ಡಬೆಳವಂಗಲ ಪಿಎಸ್‍ಐ ಗಜೇಂದ್ರ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕಿಡಿಗೇಡಿಗಳ ಇನ್ನೋವಾ ಕಾರನ್ನು ಸಹ ವಶಪಡಿಸಿಕೊಂಡಿದ್ದಾರೆ.

    ಇಬ್ಬರು ಪುಂಡರು ಹೊಸಕೋಟೆ ಮೂಲದವರು ಎಂದು ತಿಳಿದು ಬಂದಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಹಕರೊಂದಿಗೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಹಲ್ಲೆ

    ಗ್ರಾಹಕರೊಂದಿಗೆ ಸೆಕ್ಸ್ ಗೆ ಒಪ್ಪದ ಬಾರ್ ಡ್ಯಾನ್ಸರ್ ಮೇಲೆ ಹಲ್ಲೆ

    ಹೈದರಾಬಾದ್: ಗ್ರಾಹಕನೊಂದಿಗೆ ಸೆಕ್ಸ್ ಗೆ ನಿರಾಕರಿಸಿದ ಕಾರಣ ಬಾರ್ ಡ್ಯಾನ್ಸರ್ ಮೇಲೆ ಸಹದ್ಯೋಗಿಗಳು ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ನಗರದಲ್ಲಿ ನಡೆದಿದೆ.

    ಹಲ್ಲೆಗೊಳಗಾಗಿರುವ ಮಹಿಳೆ ಹೈದಾರಾಬಾದ್‍ನ ಬೇಗಂಪೇಟೆ ಪ್ರದೇಶದ ಪಬ್‍ವೊಂದರಲ್ಲಿ ಡ್ಯಾನ್ಸರ್ ಆಗಿ ಕೆಲ ತಿಂಗಳ ಹಿಂದೆ ಸೇರಿಕೊಂಡಿದ್ದಳು. ಆದರೆ ಕೆಲ ಸಮಯದ ನಂತರ ಅಲ್ಲಿನ ಮಾಲೀಕರು ಆಕೆಗೆ ಗ್ರಾಹಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆಕೆ ಗ್ರಾಹಕರೊಂದಿಗೆ ಸೆಕ್ಸ್ ಗೆ ನಿರಾಕರಿಸಿದಾಗ ಆಕೆಯ ನಾಲ್ಕು ಮಂದಿ ಮಹಿಳಾ ಸಹದ್ಯೋಗಿಗಳು ಸೇರಿದಂತೆ ಓರ್ವ ಡ್ಯಾನ್ಸರ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಈ ಸಂಬಂಧ ಐಪಿಸಿ ಸೆಕ್ಷನ್ 354, 509, 506, 323 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ನಾಲ್ವರು ಮಹಿಳೆಯರನ್ನು ಬಂಧಿಸಿ, ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ. ಓರ್ವ ಆರೋಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆಗೆ ಸಂಬಂಧಪಟ್ಟಂತೆ ತೆಲಂಗಾಣದ ಪೊಲೀಸ್ ಮಹಾ ನಿರ್ದೇಶಕ ಮಹೇಂದರ್ ರೆಡ್ಡಿ, ಪಂಜ್ಜಗುಟ್ಟ ಠಾಣೆಯ ಪೊಲೀಸರಿಂದ ವರದಿ ಕೇಳಿದ್ದಾರೆ.

  • ಜಮೀನಿಗಾಗಿ ಬೆಂಗ್ಳೂರಿಂದ ಪುಂಡರನ್ನ ಕರೆಸಿ ಮಹಿಳೆ ಮೇಲೆ ಹಲ್ಲೆ

    ಜಮೀನಿಗಾಗಿ ಬೆಂಗ್ಳೂರಿಂದ ಪುಂಡರನ್ನ ಕರೆಸಿ ಮಹಿಳೆ ಮೇಲೆ ಹಲ್ಲೆ

    ತುಮಕೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಮಹಿಳೆಯೋರ್ವಳ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಆದಿನಾಯಕನಹಳ್ಳಿಯಲ್ಲಿ ಜರುಗಿದೆ.

    ಅರುಣ್ ಕುಮಾರ್ ಹಾಗೂ ನಾಗಬಾಯಮ್ಮ ನಡುವೆ ಜಮೀನು ವಿವಾದ ಇತ್ತು. ಹಾಗಾಗಿ ಅರುಣ್ ಕುಮಾರ್ ಬೆಂಗಳೂರಿನಿಂದ ಪುಂಡ ಯುವಕರನ್ನು ಕರೆದುಕೊಂಡು ಬಂದು ವೃದ್ಧೆ ನಾಗಬಾಯಮ್ಮರ ವಿರುದ್ಧ ಛೂ ಬಿಟ್ಟಿದ್ದಾನೆ.

    ಅದರಂತೆಯೇ ಮಚ್ಚು ಹಿಡಿದು ಯುವಕನೊರ್ವ ಕೊಲೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ನಾಗಬಾಯಮ್ಮರ ಮಗಳು ಸುಜಾತಾಗೆ ಗಾಯವಾಗಿದೆ. ಗಾಯಾಳು ಸುಜಾತಾ ಅವರನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಚ್ಚು ಹಿಡಿದು ಬೆದರಿಸಿದ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಈ ಕುರಿತು ಹೊನ್ನವಳ್ಳಿ ಪೊಲೀಸರಿಗೆ ವಿಡಿಯೋ ಸಮೇತ ದೂರು ಕೊಟ್ಟಿದ್ದೇವೆ. ಆದರೆ ಅವರು ಕೊಲೆಯತ್ನ ಕೇಸ್ ಹಾಕದೇ ಕಾಟಾಚಾರದ ಎಫ್‍ಐಆರ್ ದಾಖಲು ಮಾಡಿದ್ದಾರೆ ಎಂದು ವೃದ್ಧೆ ಆರೋಪಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಮಾಜಿ ಮೇಯರ್‌ನಿಂದ ಅಮಾಯಕರ ಮೇಲೆ ಹಲ್ಲೆ

    ಹುಬ್ಬಳ್ಳಿಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ – ಮಾಜಿ ಮೇಯರ್‌ನಿಂದ ಅಮಾಯಕರ ಮೇಲೆ ಹಲ್ಲೆ

    ಹುಬ್ಬಳ್ಳಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪಗಳ ನಡುವೆ ಘರ್ಷಣೆ ನಡೆದಿದ್ದು, ಮಾಜಿ ಮೇಯರ್ ಸೇರಿದಂತೆ ಅವರ ಬೆಂಬಲಿಗರು ಕಲ್ಲು ತೂರಾಟ ನಡೆಸಿರುವ ಘಟನೆ ಹುಬ್ಬಳ್ಳಿಯ ತೊರವಿಹಕ್ಕಲ್‍ದಲ್ಲಿ ನಡೆದಿದೆ.

    ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಮರಿಪೇಟ್‍ನಲ್ಲಿ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಗುಂಪು ಹಾಗೂ ಅವರ ಸಮುದಾಯದ ಇನ್ನೊಂದು ಗುಂಪಿನ ಮಧ್ಯೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ಕೈದು ಬೈಕ್‍ಗಳು ಜಖಂಗೊಂಡಿದ್ದು, ಐದಾರು ಜನರಿಗೆ ಪೆಟ್ಟು ಬಿದ್ದಿದೆ.

    ಕಮರಿಪೇಟ್‍ನಲ್ಲಿನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ 10-15 ವರ್ಷಗಳಿಂದ ಈ ಗುಂಪುಗಳ ಮಧ್ಯೆ ವಿವಾದವಿತ್ತು. ಈ ವಿಷಯ ಈಗಾಗಲೇ ನ್ಯಾಯಾಲಯ ಮೆಟ್ಟಿಲೇರಿದೆ. ಆಗಾಗ ಎರಡು ಗುಂಪುಗಳ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಇವರ ನಡುವೆ ಗಲಾಟೆ ನಡೆದಿತ್ತು.

    ಈ ವಿಚಾರವನ್ನು ಮರು ಪ್ರಶ್ನಿಸಲು ಶುಕ್ರವಾರ ಒಂದು ಗುಂಪು ತೊರವಿಹಕ್ಕಲದಲ್ಲಿ ರಾತ್ರಿ ಆಗಮಿಸಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಮಾರಾಮಾರಿ, ಕಲ್ಲು ತೂರಾಟ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಗಲಾಟೆ ನಡೆದರೂ ಪೊಲೀಸರು ಮಾತ್ರ ಮೂಖ ಪ್ರೇಕ್ಷಕರಾಗಿದ್ದರು.

    ಈ ಘಟನೆಯಲ್ಲಿ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ ಸಲಿಂಗಕಾಮಿ

    ಚೆನ್ನೈ: ಸಲಿಂಗಕಾಮಿಯೊಬ್ಬ ಸೆಕ್ಸ್ ಗೆ ನಿರಾಕರಿಸಿದ್ದಕ್ಕೆ ಇಬ್ಬರು ಪುರುಷರ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಮನಾಮಧುರೈನ ನಿವಾಸಿ ಮುನುಸ್ವಾಮಿ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಇಬ್ಬರು ಪುರುಷರ ಜೊತೆ ಸೆಕ್ಸ್ ಮಾಡಲು ಯತ್ನಿಸಿದ್ದಾನೆ. ಇದಕ್ಕೆ ಇಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಇಬ್ಬರ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಈಗಾಗಲೇ ಮದುವೆಯಾಗಿದ್ದು, ಇಬ್ಬರ ಮಕ್ಕಳಿದ್ದಾರೆ. ಈತ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ವಿಡಿಯೋ ಪರಿಶೀಲನೆ ಮಾಡಿದಾಗ ಅದರಲ್ಲಿ ಆರೋಪಿ ಚೆನ್ನೈನ ರೆಟ್ಟೇರಿಯ ಫ್ಲೈಓವರ್ ಅಡಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜೂನ್ 11 ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ರೆಟ್ಟೇರಿಯ ಫ್ಲೈಓವರ್ ನಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರು ಕಂಡು ಬಂದರು. ತಕ್ಷಣ ನಾವು ಆತನನ್ನು ಆಸ್ಪತ್ರೆಗೆ ದಾಖಲಿಸಿ ತನಿಖೆ ಶುರು ಮಾಡಿದೇವು. ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಇಬ್ಬರಿಗೂ ಒಂದೇ ಗಾಯವಾಗಿತ್ತು. ಆಗ ನಾವು ಈ ಕೃತ್ಯವನ್ನು ಆರೋಪಿಯೊಬ್ಬನೆ ಎಸಗಿದ್ದಾನೆ ಎಂದು ತಿಳಿದು ಬಂದಿತ್ತು. ಸದ್ಯಕ್ಕೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ಇಬ್ಬರ ಮೇಲೆ ದಾಳಿ ಮಾಡಲು ಮದ್ಯ ಬಾಟಲಿ ಮತ್ತು ಬ್ಲೇಡ್ ಅನ್ನು ಉಪಯೋಗಿಸಿದ್ದಾನೆ ಎಂದು ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ. ಆರೋಪಿ ರೆಟ್ಟೇರಿಯ ಫ್ಲೈಓವರ್ ನಲ್ಲಿ ಓಡಾಡುತ್ತಾ ಇಬ್ಬರನ್ನು ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಆಮಿಷವೊಡ್ಡಿದ್ದಾನೆ. ಆದರೆ ಇಬ್ಬರು ವ್ಯಕ್ತಿಗಳು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡು ಅವರ ಮರ್ಮಾಂಗವನ್ನು ಕಟ್ ಮಾಡಿದ್ದಾನೆ. ಆರೋಪಿ ಆಗಾಗ ರೆಟ್ಟೇರಿ ಫ್ಲೈಓವರ್ ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

    ವಿಡಿಯೋ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನೇ ಈ ಕೃತ್ಯ ಎಸಗಿರುವುದು ಎಂದು ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಗಾರ್ಡನ್ ಕ್ಲೀನ್ ಮಾಡೋಕೆ ಹೇಳಿದ್ದಕ್ಕೆ ಮಹಿಳಾ ಎಂಜಿನಿಯರ್‌ಗೆ ಮಚ್ಚಿನೇಟು

    ಹಾಸನ: ಗಾರ್ಡನ್ ಸ್ವಚ್ಛಗೊಳಿಸು ಎಂದು ಹೇಳಿದಕ್ಕೆ ಸಹಾಯಕನೋರ್ವ ಸೆಸ್ಕಾಂ ಎಇಇ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಹಾಸನದ ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಡೆದಿದೆ.

    ಸೆಸ್ಕಾಂ ಎಇಇ ಸ್ವಾತಿ ದೀಕ್ಷಿತ್ ಅವರ ಮೇಲೆ ಸ್ಟೇಷನ್ ಅಟೆಂಡೆಂಟ್ ಮಂಜುನಾಥ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಸಂತೆಪೇಟೆ ವಿದ್ಯುತ್ ವಿತರಣಾ ಕೇಂದ್ರದ ಗಾರ್ಡನ್ ಸ್ವಚ್ಛಗೊಳಿಸುವಂತೆ ಸ್ವಾತಿ ಅವರು ಮಂಜುನಾಥ್‍ಗೆ ಹೇಳಿದ್ದಾರೆ. ಆದರೆ ಈ ಚಿಕ್ಕ ವಿಷಯಕ್ಕೆ ಕೋಪಗೊಂಡ ಮಂಜುನಾಥ್, ಸ್ವಾತಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ತಡೆಯಲು ಬಂದ ಸಹೋದ್ಯೋಗಿ ವೆಂಕಟೇಗೌಡನಿಗೂ ಕೂಡ ಮಚ್ಚಿನೇಟು ಬಿದ್ದಿವೆ.

    ಗಲಾಟೆಯಲ್ಲಿ ಸ್ವಾತಿ ಅವರ ಕುತ್ತಿಗೆ, ತಲೆಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಎರಡು ಬೆರಳು ತುಂಡಾಗಿದೆ. ಸದ್ಯ ಹಲ್ಲೆಗೊಳಗಾದ ಸಿಬ್ಬಂದಿ ಹಾಗೂ ಮಹಿಳಾ ಎಂಜಿನಿಯರ್ ಇಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಆರೋಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದು, ನಗರಠಾಣೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • ಸಾಲದ ಹಣ ಕೊಟ್ಟಿಲ್ಲ ಅಂತ ಮಹಿಳೆ ಮೇಲೆ ದೌರ್ಜನ್ಯ – ಕಂಬಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ಜನ

    ಸಾಲದ ಹಣ ಕೊಟ್ಟಿಲ್ಲ ಅಂತ ಮಹಿಳೆ ಮೇಲೆ ದೌರ್ಜನ್ಯ – ಕಂಬಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದ ಜನ

    ಬೆಂಗಳೂರು: ಸಾಲದ ಹಣವನ್ನು ವಾಪಸ್ ಕೊಟ್ಟಿಲ್ಲ ಎಂದು ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಹೊರವಲಯದ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

    ಕೊಳ್ಳೆಗಾಲದ ಮೂಲದ ರಾಜಮ್ಮ ಹಲ್ಲೆಗೊಳಗಾದ ಮಹಿಳೆ. ರಾಜಮ್ಮ ತನ್ನ ಮಗಳೊಂದಿಗೆ ಕೊಡಿಗೆಹಳ್ಳಿಯಲ್ಲಿ ವಾಸವಿದ್ದರು. ಅಲ್ಲದೇ ಅದೇ ಏರಿಯಾದಲ್ಲಿ ಸಣ್ಣ ಹೊಟೇಲ್ ನಡೆಸುತ್ತಿದ್ದು, ಜೀವನ ಮಾಡುತ್ತಿದ್ದರು.

    ಹಣದ ಸಮಸ್ಯೆ ಬಂದಾಗ ರಾಜಮ್ಮ ನೆರೆಹೊರೆಯವರ ಬಳಿ ಸಾಲವನ್ನು ಪಡೆದುಕೊಂಡಿದ್ದಾರೆ. ಆದರೆ ಅದನ್ನು ವಾಪಸ್ ಕೊಟ್ಟಿಲ್ಲ. ಇದರಿಂದ ಸಾಲಗಾರರು ಪ್ರತಿದಿನ ಸಾಲ ಮರುಪಾತಿಸುವಂತೆ ಕಾಟಕೊಡುತ್ತಿದ್ದರು. ಕೊನೆಗೆ ಸಾಲಗಾರರ ಕಾಟಕ್ಕೆ ಕಳೆದ ಒಂದು ತಿಂಗಳ ಹಿಂದೆ ರಾಜಮ್ಮ ಊರು ಬಿಟ್ಟು ಹೋಗಿದ್ದರು.

    ಇಂದು ಮರಳಿ ಕೊಡಿಗೆಹಳ್ಳಿಯ ತಮ್ಮ ಮನೆ ಬಳಿ ಬಂದಾಗ ಸಾಲಗಾರರ ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣ ರಾಜಮ್ಮನನ್ನು ಹಿಡಿದ ಸಾಲಗಾರರು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಬೆಳಗ್ಗಿನಿಂದಲೂ ಮಹಿಳೆಯನ್ನು ಸ್ಥಳೀಯರು ಕಟ್ಟಿ ಹಿಂಸಿಸಿದ್ದಾರೆ. ಆದರೆ ಸುತ್ತಮುತ್ತಲಿನ ಜನರು ಮಹಿಳೆಯನ್ನು ರಕ್ಷಿಸದೆ ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಹಗ್ಗದಿಂದ ಕಂಬಕ್ಕೆ ಕಟ್ಟಿ ಹಾಕಿದ್ದು, ಆಕೆಯ ಸುತ್ತಲು ಜನರು ನಿಂತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಈ ಘಟನೆ ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಪತ್ರಕರ್ತನ ಮೇಲೆ ಹಲ್ಲೆಗೈದು, ಬಟ್ಟೆಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿದ್ರು

    ಪತ್ರಕರ್ತನ ಮೇಲೆ ಹಲ್ಲೆಗೈದು, ಬಟ್ಟೆಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿದ್ರು

    ಲಕ್ನೋ: ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಧೀಮಾನ್ಪುರಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಸಂದರ್ಭದಲ್ಲಿ ಪತ್ರಕರ್ತ ವರದಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ಸರ್ಕಾರಿ ರೈಲ್ವೇ ಪೊಲೀಸ್(ಜಿಆರ್ ಪಿ) ಅಧಿಕಾರಿ ರಾಕೇಶ್ ಕುಮಾರ್ ನೇತೃತ್ವದ ಸಿಬ್ಬಂದಿ ಪತ್ರಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಪತ್ರಕರ್ತನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಪತ್ರಕರ್ತನಿಗೆ ಚಿತ್ರಹಿಂಸೆ ಕೊಟ್ಟಿರುವುದನ್ನು ಕಾಣಬಹುದಾಗಿದೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪತ್ರಕರ್ತ, ಸಿಬ್ಬಂದಿ ಯೂನಿಫಾರ್ಮ್ ನಲ್ಲಿ ಇರಲಿಲ್ಲ. ವರದಿ ಮಾಡಲು ತೆರಳಿದಾಗ ಅವರು ಏಕಾಏಕಿ ಬಂದು ನನ್ನ ಕ್ಯಾಮೆರಾವನ್ನು ಕಸಿದುಕೊಂಡು ಬಿಸಾಕಿದರು. ಈ ವೇಳೆ ಬಿದ್ದ ಕ್ಯಾಮೆರಾವನ್ನು ಎತ್ತಿಕೊಳ್ಳಲೆಂದು ಬಗ್ಗಿದಾಗ ನನ್ನ ಮೇಲೆ ಮನಸ್ಸೋ ಇಚ್ಛೆ ಥಳಿಸಿ ನಿಂದಿಸಿದರು. ಅಷ್ಟೇ ಅಲ್ಲದೆ ನನ್ನನ್ನು ಲಾಕಪ್‍ಗೆ ಹಾಕಿದರು. ಈ ವೇಳೆ ಅವರು ಬಲವಂತವಾಗಿ ನನ್ನ ಬಟ್ಟೆ ಬಿಚ್ಚಿಸಿ ಬಾಯಿಗೆ ಮೂತ್ರ ಕುಡಿಸಿದರು ಎಂದು ಪತ್ರಕರ್ತ ತನ್ನ ಅಳಲು ತೋಡಿಕೊಂಡಿದ್ದಾರೆ.

    ಪೊಲೀಸರು ಪತ್ರಕರ್ತನನ್ನು ಶಾಮ್ಲಿಯಲ್ಲಿರುವ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಇಡೀ ಅಲ್ಲೆ ಇರಿಸಿಕೊಂಡು ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಪತ್ರಕರ್ತ ಕಂಬಿಯ ಹಿಂದೆ ನಿಂತಿದ್ದಾಗ ರಾಕೇಶ್ ಕುಮಾರ್ ಹೊರಗೆ ಕುರ್ಚಿಯ ಮೇಲೆ ಕುಳಿತುಕೊಂಡಿರುವುದನ್ನು ಕಾಣಬಹುದಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದು ಸಹೋದ್ಯೋಗಿಗಳು ಪೊಲೀಸ್ ಠಾಣೆಯ ಮುಂದೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರಲ್ಲಿ ಪತ್ರಕರ್ತ, ರೈಲ್ವೇ ಪೊಲೀಸ್ ಪಡೆಯ ವಿರುದ್ಧ ವರದಿ ಮಾಡಿದೆ ಎಂದು ಆರೋಪಿಸಿ ನನಗೆ ಹಿಂಸೆ ನೀಡುತ್ತಾರೆ ಎಂದು ಹೇಳಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ರಾಕೇಶ್ ಕುಮಾರ್ ಮತ್ತು ಪೇದೆ ಸುನೀಲ್ ಕುಮಾರ್ ನನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇತ್ತೀಚೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಪ್ರಶಾಂತ್ ಕನೋಜಿಯಾ ವಿರುದ್ಧ ಹಜರತ್ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕನೋಜಿಯಾ ಅವರ ಪತ್ನಿ ಸುಪ್ರೀಂನಲ್ಲಿ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು. ಆದರೆ ಪ್ರಶಾಂತ್ ಕನೋಜಿಯಾ ಅವರನ್ನು ಕೂಡಲೇ ಬಿಡುಗಡೆ ಮಾಡಿ ಎಂದು ಆದೇಶಿಸಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಚಾಟಿ ಬೀಸಿತ್ತು.

  • ಮೆಡಿಸಿನ್ ಕಂಪನಿಯಿಂದ ತೊಂದರೆ – ವರದಿಗೆ ತೆರಳಿದ್ದ ಮಾಧ್ಯಮಗಳ ಮೇಲೆ ಹಲ್ಲೆ

    ಮೆಡಿಸಿನ್ ಕಂಪನಿಯಿಂದ ತೊಂದರೆ – ವರದಿಗೆ ತೆರಳಿದ್ದ ಮಾಧ್ಯಮಗಳ ಮೇಲೆ ಹಲ್ಲೆ

    ತುಮಕೂರು: ಕೈಗಾರಿಕಾ ಪ್ರದೇಶಗಳಿಂದ ಸ್ಥಳೀಯರಿಗೆ ಉಂಟಾಗುವ ತೊಂದರೆ ಕುರಿತು ವರದಿ ಮಾಡಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ.

    ತುಮಕೂರು ಸತ್ಯಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ಸಿಬ್ಬಂದಿ ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ. ಪರಿಣಾಮ ಪಬ್ಲಿಕ್ ಟಿವಿ ವರದಿಗಾರ ಸೇರಿದಂತೆ ಇತರ ಮೂರು ಖಾಸಗಿ ವಾಹಿನಿಯ ವರದಿಗಾರರು ಹಾಗೂ ಕ್ಯಾಮೆರಾಮೆನ್‍ಗಳು ಗಾಯಗೊಂಡಿದ್ದಾರೆ.

    ಕ್ಯಾಮೆರಾಮೆನ್‍ಗಳಾದ ಚಂದನ್ ಮತ್ತು ದೇವರಾಜ್‍ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಕ್ಯಾಮರಾ ಮತ್ತು ಟ್ರೈಪಾಡ್ ಸೇರಿದಂತೆ ಇತರ ಪರಿಕರಗಳನ್ನು ಜಖಂಗೊಳಿಸಿದ್ದಾರೆ. ಬೇಳೂರು ಬಾಯರ್ ಮಾಲೀಕರ ಸೂಚನೆಗೆ ಮೇರೆಗೆ ವೆಂಕಟರಮಣ ಅವರ ಕುಮ್ಮಕ್ಕಿನಿಂದ ಪ್ರಚೋದನೆಗೊಂಡ ಸಿಬ್ಬಂದಿ ಏಕಾಏಕಿ ದಾಳಿ ನಡೆಸಿ, ರೂಮಿನಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇಳೂರು ಬಾಯರ್ ನ ಎಚ್.ಆರ್ ಮ್ಯಾನೇಜರ್ ವೆಂಕಟರಮಣ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೂನ್ 08ರಂದು ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡು ಸ್ಥಳೀಯರ ಮನೆಗಳಿಗೆ ಹಾನಿಯುಂಟಾಗಿ ಹಲವರಿಗೆ ಗಾಯವಾಗಿತ್ತು.

    ಈ ಹಿನ್ನೆಲೆಯಲ್ಲಿ ಇಲ್ಲಿಯ ಕೈಗಾರಿಕಾ ಪ್ರದೇಶದಿಂದ ಸ್ಥಳೀಯರಿಗೆ ಉಂಟಾಗುತಿದ್ದ ತೊಂದರೆ ಕುರಿತು ಮಾಧ್ಯಮದವರು ವರದಿ ಮಾಡಲು ತೆರಳಿದ್ದರು. ಯಾರು ಕೂಡ ಫ್ಯಾಕ್ಟರಿಗಳ ಒಳಪ್ರವೇಶ ಮಾಡದೇ ಸಾರ್ವಜನಿಕ ರಸ್ತೆಯಲ್ಲೇ ನಿಂತು ಕಾರ್ಖಾನೆಯ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ.