Tag: ಹಲ್ಲೆ

  • ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

    ಕಾರಿಗೆ ಸೈಡ್ ಕೊಡದ ಬಸ್ ಚಾಲಕ, ನಿರ್ವಾಹಕನ ಮೇಲೆ ಪುಂಡರ ಗೂಂಡಾಗಿರಿ

    ಶಿವಮೊಗ್ಗ: ರಸ್ತೆಯಲ್ಲಿ ಬರುತ್ತಿದ್ದಾಗ ತಮ್ಮ ಕಾರಿಗೆ ಸೈಡ್ ಕೊಡದ ಖಾಸಗಿ ಬಸ್ಸೊಂದರ ಚಾಲಕ ಹಾಗೂ ನಿರ್ವಾಹಕನ ಮೇಲೆ ಕಾರಿನಲ್ಲಿದ್ದ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೆಬ್ರಿ ಬಳಿ ನಡೆದಿದೆ.

    ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್ ಶೆಟ್ಟಿ ಹಾಗೂ ಚಾಲಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ. ಪರಿಣಾಮ ನಿರ್ವಾಹಕ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಸ್ ಆಗುಂಬೆ ಘಾಟಿಯಲ್ಲಿ ಬರುವಾಗ ಹಿಂದೆ ಬರುತ್ತಿದ್ದ ಕಾರಿನವರು ನಿರಂತರ ಹಾರ್ನ್ ಮಾಡಿದ್ದಾರೆ. ಈ ವೇಳೆ ತಿರುವುಗಳು ಇದ್ದ ಕಾರಣ ಚಾಲಕ ವಾಹನಕ್ಕೆ ಸೈಡ್ ಕೊಟ್ಟಿರಲಿಲ್ಲ. ಅಲ್ಲದೆ ಬಸ್ ಬಾಗಿಲ ಬಳಿ ಇದ್ದ ನಿರ್ವಾಹಕ ಕಾರಿನಲ್ಲಿ ಇದ್ದವರಿಗೆ `ಸ್ವಲ್ಪ ತಾಳಿ, ಹಾರ್ನ್ ಮಾಡಬೇಡಿ’ ಎಂದಿದ್ದಾರೆ.

    ಇಷ್ಟಕ್ಕೆ ಕಾರಿನಲ್ಲಿ ಇದ್ದವರು ಕೋಪಗೋಡಿದ್ದಾರೆ. ವಾಹನ ಸೋಮೇಶ್ವರ ದಾಟಿದ ನಂತರ ಕಾಡು ಪ್ರದೇಶದಲ್ಲಿ ಬಸ್ ಅಡ್ಡ ಗಟ್ಟಿ ನಿರ್ವಾಹಕನನ್ನು ಬಸ್ಸಿನಿಂದ ಹೊರಗೆಳೆದು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ. ಅಲ್ಲದೆ ಬಸ್ಸಿನ ಒಳಗಡೆ ಹಲ್ಲೇ ನಡೆಸಿದ್ದಾರೆ. ಈ ಪುಂಡರ ಆರ್ಭಟಕ್ಕೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಸುಮ್ಮನೆ ಕುಳಿತ್ತಿದ್ದರು.

    ಈ ಪುಂಡರು ಬೇರೆ ಊರಿನಿಂದ ಈ ಭಾಗಕ್ಕೆ ಪ್ರವಾಸ ಬಂದವರು ಎನ್ನಲಾಗಿದ್ದು, ಹಲ್ಲೆಯ ದೃಶ್ಯಾವಳಿಗಳು ಬಸ್ಸಿನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಲಿತನನ್ನು ಪ್ರೀತಿಸಿದ್ದೇ ತಪ್ಪಾಯ್ತು? ಕುಟುಂಬಸ್ಥರಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

    ದಲಿತನನ್ನು ಪ್ರೀತಿಸಿದ್ದೇ ತಪ್ಪಾಯ್ತು? ಕುಟುಂಬಸ್ಥರಿಂದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ

    -ಕೈ, ಕಾಲು ಮುಗಿದ್ರೂ, ಎಳೆದಾಡಿ, ಒದ್ದು ದೊಣ್ಣೆಯಿಂದ ಹೊಡೆದ್ರು

    ಭೋಪಾಲ: ದಲಿತ ಯುವಕನನ್ನು ಪ್ರೀತಿಸಿ ಓಡಿ ಹೋಗಿದ್ದ 21 ವರ್ಷದ ಯುವತಿಯನ್ನು ಕುಟುಂಬಸ್ಥರು ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡಿದಿದೆ.

    ಯುವತಿ ದಲಿತ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಕ್ಕೆ ಆಕೆಯ ಕುಟುಂಬಸ್ಥರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ದೃಶ್ಯದಲ್ಲಿ ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡಿದ್ದು, ಯುವತಿಯನ್ನು ಒಂದು ಬೆಟ್ಟದಲ್ಲಿ ಯುವಕರ ಗುಂಪೊಂದು ದೊಣ್ಣೆಯಿಂದ ಹೊಡೆಯುತ್ತಿದ್ದಾರೆ. ಯುವತಿಯನ್ನು ಕಾಲಿನಿಂದ ಒದೆಯುತ್ತಿರುವುದು, ಎಳೆದಾಡುತ್ತಿರುವುದು ಕಂಡು ಬಂದಿದೆ. ಯುವತಿಯು ನಿಲ್ಲಿಸುವಂತೆ ಕೇಳಿಕೊಂಡರು ಬಿಡದ ಯುವಕರು ಅವಳನ್ನು ಕಾಲಿನಿಂದ ಒದ್ದಿದ್ದಾರೆ.

    ಈ ಘಟನೆ ಜೂನ್ 25 ರಂದು ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂರು ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ವಿಡಿಯೋದಲ್ಲಿರುವ ಯುವಕರು ಯುವತಿಯ ಸಹೋದರರು ಮತ್ತು ನೆರೆಹೊರೆಯವರು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣಿಸುವ ವಾಹನದ ಸಂಖ್ಯೆಯ ಆಧಾರದ ಮೇಲೆ ಯುವಕರನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಯುವತಿಯು ದಲಿತ ಯುವಕನ ಜೊತೆ ಓಡಿಹೋಗಿದ್ದಳು. ಆಗ ಮನೆಯವರು ದೂರು ನೀಡಿದ ನಂತರ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದಾರೆ. ನಂತರ ಯುವತಿಯನ್ನು ಮನೆಗೆ ಕರೆದುಕೊಂಡ ಹೋದ ಕುಟುಂಬದವರು ಯುವತಿಯನ್ನು ತಮ್ಮದೇ ಕುಟುಂಬದ ಭಿಲಾಲ ಬುಡಕಟ್ಟಿನ ಯುವಕನನ್ನು ಮದುವೆಯಾಗಲು ಹೇಳಿದ್ದಾರೆ. ಇದಕ್ಕೆ ಒಪ್ಪದ ಯುವತಿಯ ಮೇಲೆ ಈ ರೀತಿಯ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಘಟನೆ ಸಂಬಂಧ ಪ್ರಮುಖ ಆರೋಪಿಗಳ ವಿರುದ್ಧ ಹಲವು ಪ್ರಕರಣ ದಾಖಲಿಸಿರುವ ಪೊಲೀಸರು, ಸದ್ಯ ಯುವತಿಯ ನಾಲ್ಕು ಜನ ಸಹೋದರರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಆಟೋದಲ್ಲಿ ಹಾಡು ಹಾಕಿದ್ದಕ್ಕೆ ಯುವಕರ ಗುಂಪಿನಿಂದ ಹಲ್ಲೆ

    ಆಟೋದಲ್ಲಿ ಹಾಡು ಹಾಕಿದ್ದಕ್ಕೆ ಯುವಕರ ಗುಂಪಿನಿಂದ ಹಲ್ಲೆ

    ವಿಜಯಪುರ: ಆಟೋದಲ್ಲಿ ಹಾಡು ಹಾಕಿದ್ದಕ್ಕೆ ತಡರಾತ್ರಿ ಯುವಕರ ಗುಂಪೊಂದು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಆಟೋ ಚಾಲಕ ಭೀಮಾತೀರದ ಹಂತಕ ಧರ್ಮರಾಜ ಚಡಚಣ ಬೆಂಬಲಿಗ ಬಾಬು ಬಿರಾದಾರ್ ಎಂದು ಹೇಳಲಾಗಿದೆ. ರಫೀಕ್ ಇನಾಮದಾರ್, ಪುಟ್ಟು ಹಡಪದ, ಮುಬಾರಕ್ ಮತ್ತು ರಾಜು ಎಂಬವರು ಹಲ್ಲೆ ಮಾಡಿದ್ದಾರೆಂದು ಬಾಬು ಬಿರಾದಾರ್ ಆರೋಪ ಮಾಡಿದ್ದಾರೆ.

    ಏನಿದು ಘಟನೆ?
    ತಡರಾತ್ರಿ ಗಾಂಧಿ ನಗರದಲ್ಲಿ ಆಟೋದಲ್ಲಿ ಭೀಮಾತೀರದ ಹಂತಕ ಧರ್ಮರಾಜ ಚಡಚಣಗೆ ಸಂಬಂಧಿಸಿದ್ದ ಹಾಡನ್ನು ಹಾಕಿಕೊಂಡು ಬಾಬೂ ಬಿರಾದಾರ್ ಹೊರಟಿದ್ದರು. ಈ ವೇಳೆ ಆಟೋವನ್ನು ಅಡ್ಡಗಟ್ಟಿದ ಯುವಕರು ಗುಂಪು ಕ್ಯಾತೆ ತೆಗೆದು ಹಾಡು ಹಾಕಿದರೆ ಧರ್ಮರಾಜ ಹಾಗೂ ಗಂಗಾಧರ ಚಡಚಣನಿಗೆ ಬಂದ ಗತಿ ನಿನಗೂ ಬರುತ್ತೆ ಎಂದು ಧಮ್ಕಿ ಹಾಕಿ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಬಾಬು ಬಿರಾದಾರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಂದು ಬಿರಾದಾರ್ ದೂರು ದಾಖಲಿಸಲು ಮುಂದಾಗಿದ್ದಾರೆ.

  • ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

    -ಪಾಗಲ್ ಪ್ರೇಮಿಯ ಭಯಾನಕ ಹುಚ್ಚಾಟ ಮೊಬೈಲ್‍ನಲ್ಲಿ ಸೆರೆ

    ಮಂಗಳೂರು: ಪಾಗಲ್ ಪ್ರೇಮಿಯೊಬ್ಬ ನಡುರಸ್ತೆಯಲ್ಲೇ ಪ್ರೇಯಸಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದು, ಕೊನೆಗೆ ತಾನೂ ಕೂಡ ಕತ್ತು ಕೊಯ್ದುಕೊಂಡಿರುವ ಘಟನೆ ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಹಿಂಭಾಗ ನಡೆದಿದೆ.

    ಶಕ್ತಿನಗರದ ನಿವಾಸಿ ಸುಶಾಂತ್ ಪ್ರೇಯಸಿಗೆ ಚಾಕು ಇರಿದು, ತಾನು ಕತ್ತು ಕೊಯ್ದುಕೊಂಡ ಪಾಗಲ್ ಪ್ರೇಮಿ. ಸುಶಾಂತ್ ಹೈಸ್ಕೂಲ್‍ನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದನು. ಬಗಲಂಬಿ ನಿವಾಸಿ ಯುವತಿಯೊಬ್ಬಳು ಹೈಸ್ಕೂಲ್ ಓದುವಾಗ ಪರಿಚಯವಾಗಿತ್ತು. ನಂತರ ಆಕೆ ಕಾಲೇಜು ಮೆಟ್ಟಿಲೇರಿದಾಗ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷ ಪರಸ್ಪರ ಪ್ರೀತಿಸಿ ಸುತ್ತಾಡಿದ್ದರು. ಆದರೆ ಎಂಬಿಎಗೆ ಬಂದ ಮೇಲೆ ಯುವತಿ ಸುಶಾಂತ್ ಪ್ರೀತಿಯನ್ನು ತಿರಸ್ಕರಿಸಿ ದೂರ ತಳ್ಳಿದ್ದಳು. ಇದರಿಂದ ಸಿಟ್ಟಿಗೆದ್ದ ಸುಶಾಂತ್ ಯುವತಿ ಕಾಲೇಜಿನಿಂದ ಮನೆಗೆ ಬರುವುದನ್ನೇ ಕಾದು ಕುಳಿತು ಆಕೆಯನ್ನು ಅಡ್ದಗಡ್ಡಿ ಕೊಲೆಗೆ ಯತ್ನಿಸಿದ್ದಾನೆ.

    ಈ ಭಯಾನಕ ಘಟನೆ ನಡೆಯುವಾಗ ಸುತ್ತಲೂ ತುಂಬಾ ಜನ ನಿಂತಿದ್ದರು. ಎಲ್ಲರೂ ನೋಡುತ್ತಿದ್ದಂತೆಯೇ ಯುವತಿಗೆ ಪದೇ ಪದೇ ಚಾಕುವಿನಿಂದ ಇರಿದಿದ್ದಾನೆ. ಯುವತಿ ಪ್ಲೀಸ್ ನನ್ನ ಬಿಟ್ಟು ಬಿಡು ಎಂದು ಅಂಗಲಾಚಿ ಬೇಡಿದರು ಸುಶಾಂತ್ ಬಿಡಲೇ ಇಲ್ಲ. ಬಳಿಕ ತಾನೂ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಇಷ್ಟೆಲ್ಲಾ ಆಗುತ್ತಿದ್ದರೂ ಅಲ್ಲಿದ್ದ ಜನ ಮಾತ್ರ ಎಲ್ಲವನ್ನೂ ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಿದ್ದರು ವಿನಃ ತಡೆಯುವ ಪ್ರಯತ್ನ ಮಾಡಲಿಲ್ಲ.

    ಸುಮಾರು 10 ನಿಮಿಷ ಆಗಿತ್ತು. ಬಳಿಕ ಯಾರೋ ಸ್ಥಳದಲ್ಲಿದ್ದವರು ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದರು. ನಂತರ ಸ್ಥಳಕ್ಕೆ ಬಂದ ನರ್ಸ್ ಯುವಕ ಚಾಕು ಹಿಡಿದು ಬೆದರಿಸುತ್ತಿದ್ದರು ಮುಂದೆ ಹೋಗಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಆಗ ಯುವಕ ಅಲ್ಲಿದ್ದವರನ್ನು ಚಾಕು ತೋರಿಸಿ ಹತ್ತಿರ ಬರುತ್ತಿದ್ದವರನ್ನು ಬೆದರಿಸುತ್ತಿದ್ದನು. ಕೊನೆಗೆ ಪ್ರೇಯಸಿಯ ಪಕ್ಕ ಹೋಗಿ ಆಕೆಯ ಮೇಲೆ ಮಲಗಿಕೊಂಡನು. ಆಗ ಸ್ಥಳದಲ್ಲಿದ್ದವರು ನರ್ಸ್ ಗೆ ಸಹಾಯ ಮಾಡಿದ್ದಾರೆ. ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ವರದಕ್ಷಿಣೆ ತರಲು ಒಪ್ಪದ ಪತ್ನಿಗೆ ಬೆಲ್ಟ್ ನಿಂದ ಬಾಸುಂಡೆ ಬರುವಂತೆ ಹೊಡೆದ ಪತಿ

    ಚಿಕ್ಕಬಳ್ಳಾಪುರ: ವರದಕ್ಷಿಣೆ ಯಾಕೆ ತರಬೇಕು ಎಂದು ಕೇಳಿದ್ದಕ್ಕೆ ಪತಿಯೊರ್ವ ಪತ್ನಿಗೆ ಬಾಸುಂಡೆ ಬರುವಂತೆ ಬೆಲ್ಟ್ ನಿಂದ ಹೊಡೆದಿರುವ ಪೈಶಾಚಿಕ ಕೃತ್ಯ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ.

    ಪತ್ನಿ ಸಿಮ್ರಾನ್ ಹಲ್ಲೆಗೊಳಗಾದಾಕೆ. ಅಬ್ದುಲ್ ರಜಾಕ್ ಹಲ್ಲೆ ಮಾಡಿರುವ ಪಾಪಿ ಪತಿಮಹಾಶಯ. ಅಂದಹಾಗೆ ವೃತ್ತಿಯಲ್ಲಿ ಚಾಲಕನಾಗಿದ್ದ ಅಬ್ದುಲ್ ರಜಾಕ್ 3 ವರ್ಷಗಳ ಹಿಂದೆ ಸಿಮ್ರಾನ್‍ಳನ್ನು ಮದುವೆಯಾಗಿದ್ದ.

    ಮದುವೆಯಾಗಿ ಇಬ್ಬರು ಮಕ್ಕಳಾದರೂ ಪದೇ ಪದೇ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಮದುವೆ ಸಮಯದಲ್ಲೂ ಸಹ 1 ಲಕ್ಷ ವರದಕ್ಷಿಣೆ ಕೊಟ್ಟು ಸಿಮ್ರಾನ್ ತಂದೆ ತಾಯಿ ವಿವಾಹ ಮಾಡಿಕೊಟ್ಟಿದ್ದರು. ನಂತರವೂ ಎರಡು ಮೂರು ಬಾರಿ ಹಣ ಕೊಟ್ಟಿದ್ದಾರೆ. ಇನ್ನೂ ಪದೇ ಪದೇ ಇದೇ ರೀತಿ ವರದಕ್ಷಿಣೆಗಾಗಿ ಅಬ್ದುಲ್ ರಜಾಕ್ ಪೀಡಿಸುತ್ತಿದ್ದು ಎಷ್ಟು ಸಾರಿ ದುಡ್ಡು ತರೋದು ಎಂದು ಸಿಮ್ರಾನ್ ಪ್ರಶ್ನೆ ಮಾಡಿದ್ದಾಳೆ.

    ಇದರಿಂದ ಕೆರಳಿದ ಗಂಡ ಅಬ್ದುಲ್ ರಜಾಕ್ ನನಗೆ ಎದುರು ಜವಾಬು ಕೊಡುತ್ತೀಯ ಎಂದು ಮನೆಯಲ್ಲಿ ಕೂಡಿ ಹಾಕಿ ಬೆಲ್ಟ್ ನಿಂದ ಮನಸ್ಸೋ ಇಚ್ಚೆ ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಇದರಿಂದ ಸಿಮ್ರಾನ್ ಮೈ ಕೈ ಎಲ್ಲಾ ರಕ್ತ ಹೆಪ್ಪುಗಟ್ಟಿ ಕೆಂಪಾಗಿ ಬಾಸುಂಡೆ ಬಂದಿದೆ. ಸದ್ಯ ಅಸ್ವಸ್ಥಗೊಂಡಿರುವ ಸಿಮ್ರಾನ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪತ್ನಿ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ – ಉಪ್ಪು ಹಾಕಿ ವಿಕೃತಿ ಮೆರೆದ ಪತಿ

    ಪತ್ನಿ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ – ಉಪ್ಪು ಹಾಕಿ ವಿಕೃತಿ ಮೆರೆದ ಪತಿ

    ರಾಂಚಿ: ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ಉಪ್ಪಿನಿಂದ ಉಜ್ಜಿ ವಿಕೃತಿ ಮೆರೆದ ಘಟನೆ ಗುರುವಾರ ಜಾರ್ಖಂಡ್‍ನ ರಾಮ್‍ಗರ್ ನಲ್ಲಿ ನಡೆದಿದೆ.

    ಶಿವ ಶಂಕರ್ ಹಲ್ಲೆ ಮಾಡಿದ ಪತಿ. ಶಿವ ಶಂಕರ್ ಸೆಂಟ್ರಲ್ ಕೋಲ್‍ಫಿಲ್ಡ್ ನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಗುರುವಾರ ಯಾವುದೋ ವಿಷಯಕ್ಕೆ ಶಿವ ಶಂಕರ್ ಪತ್ನಿಯ ಖಾಸಗಿ ಅಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಸಾಲದು ಎಂದು ಉಪ್ಪಿನಿಂದ ಉಜ್ಜಿ ವಿಕೃತಿ ಮೆರೆದಿದ್ದಾನೆ.

    ಪತಿಯ ಹಲ್ಲೆಯ ಬಳಿಕ ಪತ್ನಿ ರಾಮ್‍ಗರ್ ಪೊಲೀಸ್ ಠಾಣೆಗೆ ಹೋಗಿ ಡಿಎಸ್‍ಪಿ ಪ್ರಕಾಶ್ ಸಾಯ್ ಬಳಿ ತನ್ನ ಪತಿ ಶಿವ ಶಂಕರ್ ವಿರುದ್ಧ ದೂರು ದಾಖಲಿಸಿದ್ದಾಳೆ. ಮಹಿಳೆಯ ದೂರಿನ ಮೆರೆಗೆ ಪೊಲೀಸರು ಶಿವ ಶಂಕರ್ ನನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ.

    ಶಿವಶಂಕರ್‍ ನನ್ನು ಗುರುವಾರ ಬೆಳಗ್ಗೆ ಬಂಧಿಸಿದ್ದೇವೆ. ಸದ್ಯ ಮಹಿಳೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವ ಹಾಗೂ ಮಹಿಳೆಗೆ ಮಗಳು ಸೇರಿ ಮೂವರು ಅಪ್ರಾಪ್ತ ಮಕ್ಕಳಿದ್ದಾರೆ ಎಂದು ಡಿಎಸ್‍ಪಿ ಪ್ರಕಾಶ್ ಸಾಯ್ ತಿಳಿಸಿದ್ದಾರೆ.

  • ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ತಪ್ಪು ಮಾಡಿ ಅಮಾಯಕ ಯುವಕನಿಗೆ ರಾಡ್‍ನಿಂದ ಥಳಿಸಿದ ಮಹಿಳೆ!

    ಚಂಡೀಗಢ: ಮಹಿಳೆಯೊಬ್ಬಳು ತಾನೇ ತಪ್ಪು ಮಾಡಿ, ಅಮಾಯಕ ಯುವಕನ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಪೊಲೀಸ್ ಬಂಧನದಲ್ಲಿದ್ದ ಆರೋಪಿ ಮಹಿಳೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾಳೆ.

    ಮೊಹಾಲಿ ನಿವಾಸಿ ಶೀತಲ್ ಶರ್ಮಾ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪಿ. ಚಂಡೀಗಢ ನಿವಾಸಿ ನಿತೀಶ್ ಹಲ್ಲೆಗೆ ಒಳಗಾದ ಯುವಕ. ಗಂಭೀರವಾಗಿ ಗಾಯಗೊಂಡಿರುವ ನಿತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆಗಿದ್ದೇನು?:
    ಶೀತಲ್ ಟ್ರಿಬ್ಯೂನ್ ಚೌಕ್ ಬಳಿ ರ್ಯಾಶ್ ಆಗಿ ಕಾರನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದ ನಿತೀಶ್, ನಿಧಾನವಾಗಿ ಕಾರನ್ನು ರಿವರ್ಸ್ ಮಾಡುವಂತೆ ಬುದ್ಧಿ ಹೇಳಿದ್ದಾನೆ. ಇದರಿಂದಾಗಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಶೀತಲ್ ತನ್ನ ಕಾರಿನಲ್ಲಿದ್ದ ಕಬ್ಬಿಣದ ರಾಡ್ ತಂದು ನಿತೀಶ್‍ಗೆ ಥಳಿಸಿದ್ದಾಳೆ. ಶೀತಲ್ ವರ್ತನೆಯಿಂದ ಕೋಪಗೊಂಡ ನಿತೀಶ್ ಕೂಡ ಕೈಗೆ ಸಿಕ್ಕ ವಸ್ತುವಿನಿಂದ ಮಹಿಳೆಯ ಕಾರಿಗೆ ಹೊಡೆದು ಗಾಜನ್ನು ಪುಡಿ ಮಾಡಿದ್ದಾರೆ.

    ನಿತೀಶ್ ಹಾಗೂ ಶೀತಲ್ ಮಧ್ಯೆ ನಡೆಯುತ್ತಿದ್ದ ಗಲಾಟೆ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆಯ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗಿದೆ.

    ಈ ವಿಡಿಯೋವನ್ನು ಆಧಾರಿಸಿ ಪೊಲೀಸರು ಆರೋಪಿ ಶೀತಲ್‍ಳನ್ನು ಬಂಧಿಸಿ, ಐಪಿಸಿ ಸೆಕ್ಷನ್ 279 (ರ್ಯಾಸ್ ಡ್ರೈವಿಂಗ್), 323 (ಉದ್ದೇಶಪೂರ್ವಕವಾಗಿ ಹಲ್ಲೆ), 506 (ಜೀವ ಬೆದರಿಕೆ) ಮತ್ತು 336 (ಅನ್ಯರ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಶೀತಲ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

  • ಪ್ರಿಯಕರನನ್ನು ಕಿಡ್ನಾಪ್‍ಗೈದು ಯುವತಿ ಮನೆಯವರಿಂದ ಶಾಕ್ ಟ್ರೀಟ್‍ಮೆಂಟ್

    ಪ್ರಿಯಕರನನ್ನು ಕಿಡ್ನಾಪ್‍ಗೈದು ಯುವತಿ ಮನೆಯವರಿಂದ ಶಾಕ್ ಟ್ರೀಟ್‍ಮೆಂಟ್

    ಬೆಳಗಾವಿ: ಪ್ರೀತಿಸಿದ ತಪ್ಪಿಗೆ ಯುವತಿ ಮನೆಯವರು ಯುವಕನನ್ನು ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಯುವಕ ಮಡಿವಾಳ ರಾಯಬಾಗಕರ ಮೇಲೆ ಹಲ್ಲೆ ಮಾಡಲಾಗಿದೆ. ಯುವಕ ಧಾರವಾಡ ತಾಲೂಕಿನ ಗರಗ ಗ್ರಾಮದವನಾಗಿದ್ದು, ಎರಡು ವರ್ಷದ ಹಿಂದೆ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಕೆಲವು ತಿಂಗಳ ಹಿಂದೆ ಯುವಕ ಪ್ರೀತಿ ಮಾಡುತ್ತಿದ್ದ ವಿಚಾರ ಯುವತಿ ಮನೆಯಲ್ಲಿ ಗೊತ್ತಾಗಿದೆ. ನಂತರ ಯುವಕನಿಗೆ ಧಮ್ಕಿ ಹಾಕಿ ಊರನ್ನೇ ಬಿಡಿಸಿದ್ದಾರೆ.

    ಊರು ತೊರೆದ ಬಳಿಕ ಯುವಕ ಬೆಳಗಾವಿಯ ಮಾರುತಿ ಗಲ್ಲಿಯಲ್ಲಿ ವಾಸವಾಗಿದ್ದ. ಊರು ತೊರೆದಿದ್ದರೂ ಯುವಕ ಯುವತಿಯೊಂದಿಗೆ ಸಂಪರ್ಕದಲ್ಲಿದ್ದ. ಇದನ್ನು ತಿಳಿದು ಯುವತಿ ಮನೆಯರು ಬೆಳಗಾವಿಗೆ ಬಂದ ಮಡಿವಾಳನನ್ನು ಕಿಡ್ನಾಪ್ ಮಾಡಿದ್ದಾರೆ. ಯುವತಿಯ ಚಿಕ್ಕಪ್ಪ ಉಳಪ್ಪ, ಸಿದ್ದಪ್ಪ, ಮಡಿವಾಳ ಕಾಳೆ ಉಪಾಶಿ ನಾಧಾಪ್ ಮೂವರು ಒಂದು ವಾರದ ಹಿಂದೆ ಕಿಡ್ನಾಪ್ ಮಾಡಿ ಯುವಕನಿಗೆ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಶಾಕ್ ಟ್ರೀಟ್ ಮೆಂಟ್ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಚಿತ್ರಹಿಂಸೆ ನೀಡಿದ ಬಳಿ ಯುವಕನನ್ನು ವಾಪಸ್ ಬಿಟ್ಟು ಹೋಗಿದ್ದಾರೆ. ನಂತರ ನೆರೆಹೊರೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಯುವಕನ ಎರಡು ಕಿಡ್ನಿ ಹಾಳಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಸದ್ಯಕ್ಕೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಆಸ್ಪತ್ರೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಭೇಟಿ ನೀಡಿದ್ದು, ಬಳಿಕ ಪೊಲೀಸ್ ಆಯುಕ್ತರ ಸಹಾಯದಿಂದ ಯುವಕನ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಾಸಕ ಅಮೃತ ದೇಸಾಯಿ ಅವರಿಗೆ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಕೂಡ ಸಾಥ್ ನೀಡಿದ್ದರು.

    ಹಲ್ಲೆ ಮಾಡಿದವರು ಮಾಜಿ ಶಾಸಕ ವಿನಯ ಕುಲಕರ್ಣಿ ಬೆಂಬಲಿಗರೆಂದು ಯುವಕನ ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಕಾಮುಕರಿಗೆ ಲಾಠಿ ರುಚಿ

    ಮಡಿಕೇರಿ: ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಕೇರಳ ಮೂಲದ ಇಬ್ಬರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ. ಕೇರಳದ ಮಲಪುರಂ ಮಹಮ್ಮದ್ ಫುತಾಲಿಕ್ (32), ಶರೀಫ್ (30) ಇಬ್ಬರಿಗೂ ಪೊಲೀಸರು ಚೆನ್ನಾಗಿ ಥಳಿಸಿದ್ದಾರೆ. ಜೂ. 18 ರಂದು ಪಾಲಿಬೆಟ್ಟದ ಪದವಿ ಪೂರ್ವ ಕಾಲೇಜಿನ ಮುಂಭಾಗ ಇಬ್ಬರು ಕೇರಳದಿಂದ ಕಾರಿನಲ್ಲಿ ಬಂದು ನಿಂತಿದ್ದರು.

    ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ್ದರು. ಕಾಲೇಜು ಪ್ರಾಂಶುಪಾಲರು ದೂರಿನ ಮೇರೆಗೆ ಪಾಲಿಬೆಟ್ಟ ಉಪಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಲಾಠಿ ರುಚಿ ತೋರಿಸಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯಲ್ಲಿದ್ದ ವಿದ್ಯಾರ್ಥಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಇದೀಗ ಆ ವಿಡಿಯೋ ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ವೈರಲ್ ಆಗಿದೆ.

    ವಿದ್ಯಾರ್ಥಿನಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ಕೇರಳ ಮೂಲದ ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪತ್ನಿಯ ಕಪಾಳಮೋಕ್ಷಕ್ಕೆ ಪತಿ ಸಾವು

    ಪತ್ನಿಯ ಕಪಾಳಮೋಕ್ಷಕ್ಕೆ ಪತಿ ಸಾವು

    ಚಾಮರಾಜನಗರ: ಕುಡಿದು ಬಂದ ಪತಿಗೆ ಪತ್ನಿ ಕಪಾಳಮೋಕ್ಷ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರಭುಸ್ವಾಮಿ ಮೃತ ಪತಿ. ಈತ ಆಗಾಗ್ಗೆ ಕುಡಿದು ಬಂದು ಪತ್ನಿ ಅಂಬಿಕಾ ಜೊತೆ ಜಗಳ ಮಾಡುತ್ತಿದ್ದನು. ಶನಿವಾರ ಕೂಡ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಆಗ ಪತ್ನಿ ಅಂಬಿಕಾ ಕೋಪಗೊಂಡು ಪತಿ ಪ್ರಭುಸ್ವಾಮಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೇಳೆ ಪ್ರಭುಸ್ವಾಮಿ ಕುಸಿದುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಇದರಿಂದ ಹೆದರಿದ ಅಂಬಿಕಾ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪತಿಯ ಶವವನ್ನು ನೇಣು ಹಾಕಿದ್ದಾಳೆ. ಆದರೆ ಪ್ರಭುಸ್ವಾಮಿಯ ಸಹೋದರಿಯರಿಗೆ ಅನುಮಾನ ಬಂದು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಬಿಕಾಳನ್ನು ಬಂಧಿಸಿದ್ದಾರೆ. ಮೃತ ಪ್ರಭುಸ್ವಾಮಿಯ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]