Tag: ಹಲ್ಲೆ

  • ಕುಡಿದ ಮತ್ತಿನಲ್ಲಿ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಕುಡಿದ ಮತ್ತಿನಲ್ಲಿ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    ಆನೇಕಲ್: ಕುಡಿದ ಮತ್ತಿನಲ್ಲಿ ಯುವಕರ ಗುಂಪೊಂದು ಯುವಕನ ಮೇಲೆ ಬಿಯರ್ ಬಾಟಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಂದಗುಡಿಯಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಆನಂದ್ (23) ಬಿಯರ್ ಬಾಟಲಿನಿಂದ ಇರಿತಕ್ಕೊಳಗಾದ ಯುವಕ. ನಂದಗುಡಿ ಗ್ರಾಮದ ಪಲ್ಲವಿ ಬಾರ್ ಬಳಿ ಘಟನೆ ನಡೆದಿದೆ. ಬಾರ್ ಮುಂದೆ ಕಬಾಬ್ ತೆಗೆದುಕೊಳ್ಳಲು ಹೋದಾಗ ಆನಂದ್ ಮೇಲೆ ಯುವಕರ ಗುಂಪು ಪುಂಡಾಟ ನಡೆಸಿದೆ.

    ಕುಡಿದ ಅಮಲಿನಲ್ಲಿ ಅವಾಚ್ಯ ಪದಗಳಿಂದ ಆನಂದ್ ಮೇಲೆ ಕಿರಿಕ್ ತೆಗೆದು ಗಲಾಟೆ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ಬಿಯರ್ ಬಾಟಲಿ ಒಡೆದು ಯುವಕನ ಬೆನ್ನಿಗೆ ಚುಚ್ಚಿದ್ದಾರೆ. ನಂದಗುಡಿಯ ರೋಹನ್, ಮಧು, ಚಂದನ್ ಈ ಐವರು ಕೃತ್ಯ ಎಸಗಿದ್ದಾರೆ. ದನ್ನೂ ಓದಿ: ನಾಳೆಯಿಂದ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ಅನುಮತಿ- ವೀಕ್‍ಡೇಸ್‍ನಲ್ಲಿ ಅವಕಾಶ, ವೀಕೆಂಡ್‍ನಲ್ಲಿ ನಿರ್ಬಂಧ

    ಪುಂಡರ ಗುಂಪು ಆನಂದ್ ಮೇಲೆ ಹಲ್ಲೆ ನಡೆಸಿ ಬಿಯರ್ ಬಾಟಲಿನಿಂದ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಆನಂದ್ ಹೊಸಕೋಟೆ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಯುವಕನ ಮೇಲೆ ಬಿಯರ್ ಬಾಟಲಿನಿಂದ ಹಲ್ಲೆ ನಡೆಸಿದ ಗುಂಪಿಗಾಗಿ ಶೋಧ ನಡೆಸುತ್ತಿದ್ದಾರೆ. ದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಮಲತಂದೆಯಿಂದಲೇ ಅತ್ಯಾಚಾರ

  • ಆನೇಕಲ್‍ನಲ್ಲಿ ಜೆಡಿಎಸ್ ಯುವಘಟಕದ ಅಧ್ಯಕ್ಷನ ಮೇಲೆ ಹಲ್ಲೆ

    ಆನೇಕಲ್‍ನಲ್ಲಿ ಜೆಡಿಎಸ್ ಯುವಘಟಕದ ಅಧ್ಯಕ್ಷನ ಮೇಲೆ ಹಲ್ಲೆ

    ಆನೇಕಲ್(ಬೆಂಗಳೂರು): ಇಲ್ಲಿನ ಜೆಡಿಎಸ್ ಯುವಘಟಕದ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

    ಹಲ್ಲೆಗೊಳಗಾಗಿರುವವರನ್ನು ರುದ್ರೇಶ್ ಎಂದು ಗುರುತಿಸಲಾಗಿದೆ. ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಭಾನುವಾರ 8.30ರ ಸುಮಾರಿಗೆ ಮನೆಗೆ ತೆರಳುವ ಸಂದರ್ಭದಲ್ಲಿ ಘಟನೆ ನಡೆದಿದೆ.

    ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಹೆಲ್ಮೆಟ್ ನಿಂದ ಮನಬಂದಂತೆ ಥಳಿಸಿ ಮಾರಣಾಂತಿಕವಾ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ರುದ್ರೇಶ್ ಅವರನ್ನು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಗಮನಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ರಾಜಕೀಯ ಪ್ರೇರಿತರಾಗಿ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜಣ್ಣನ ಜೊತೆ ಗುರುತಿಸಿಕೊಂಡಿದ್ದ ರುದ್ರೇಶ್, ಇತ್ತೀಚೆಗೆ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿದ್ದರು. ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಆನಂದ್ ಬರ್ಬರ ಕೊಲೆ

    ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೈ ಸನ್ನೆ ಮಾಡಿ ಕರೆದೊಯ್ದೊಳು- ಹಲ್ಲೆ ಮಾಡಿ ಹಣ ದೋಚಿದ್ರು

    ಕೈ ಸನ್ನೆ ಮಾಡಿ ಕರೆದೊಯ್ದೊಳು- ಹಲ್ಲೆ ಮಾಡಿ ಹಣ ದೋಚಿದ್ರು

    ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.

    ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ಶಿರಡಿ ನಗರ ಹಾಸ್ಟೆಲ್‍ನಲ್ಲಿ ವಾಸವಿರುವ ಕುಮಾರ ಚವ್ಹಾಣ್ ಹಲ್ಲೆಗೀಡಾದ ಯುವಕ, ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಕುಮಾರ ಚವ್ಹಾಣ್, ಬಟ್ಟೆ ಖರೀದಿಸಿ ಹಾಸ್ಟೆಲ್‍ಗೆ ತೆರಳಲು ಹಳೇ ಬಸ್ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಈತನನ್ನು ನೋಡಿ ಮಹಿಳೆಯೊಬ್ಬಳು ಕೈಸನ್ನೆ ಮಾಡಿ ಕರೆದಿದ್ದಾಳೆ. ಬಳಿಕ ಆ ಮಹಿಳೆ ಈತನನ್ನು ಆಟೋದಲ್ಲಿ ಸುತ್ತಾಡಿಸಿ ಕೊನೆಗೆ ಬಂಜಾರ ಕಾಲನಿ ಕಡೆಗೆ ಕರೆದೊಯ್ದು. ಜೊತೆಗಿದ್ದ ಮೂವರು ಸಹಚರರು ಕುಮಾರನಿಗೆ ಹಲ್ಲೆ ಮಾಡಿ, 17 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಹಾಗೂ 5,000 ರೂಪಾಯಿ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದವಳು ನೆರೆ ಮನೆಯವನೊಂದಿಗೆ ಎಸ್ಕೇಪ್- ವೀಡಿಯೋ ಮಾಡಿ ಪತಿ ಆತ್ಮಹತ್ಯೆ

    ತನ್ನ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದಂತೆ ಕುಮಾರ ಆಟೋದಿಂದ ಜಿಗಿದು ತಪ್ಪಿಸಿಕೊಂಡು ಬಂದು, ಮುಜಮಿ, ವೆಂಕಟೇಶ್, ಗೀತಾ ಮತ್ತು ಶಬ್ಬಿರ್ ಹಲ್ಲೆ ನಡೆಸಿರುವ ಬಗ್ಗೆ ಗೋಕುಲ ರೋಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.  ಇದನ್ನೂ ಓದಿ: ಸಿನಿಮಾ ಸ್ಟೈಲ್‍ನಲ್ಲಿ ಪತ್ನಿ ಕೊಲೆಗೆ ಸ್ಕೆಚ್- ವಿಫಲವಾದ ನಂತ್ರ ಚಾಕುವಿಂದ ಇರಿದು ಕೊಂದ!

  • ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಜೋಡೆತ್ತುಗಳ ಮೇಲೆ ತಡರಾತ್ರಿ ಮಾರಣಾಂತಿಕ ಹಲ್ಲೆ: ದುಷ್ಕರ್ಮಿಗಳಿಗಾಗಿ ಪೊಲೀಸರ ಶೋಧ

    ಕಲಬುರಗಿ: ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ನಡೆದಿದೆ.

    ಬಳೂರ್ಗಿ ಗ್ರಾಮದ ರೈತ ಇರಸಂಗಪ್ಪ ಬಾಲಕುಂದಿ ಅವರಿಗೆ ಸೇರಿದ ಜೋಡೆತ್ತುಗಳ ಮೇಲೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಭಾರತ ದೇಶ ಪಾತಾಳಕ್ಕೆ ಕುಸಿಯಲು ಕಾಂಗ್ರೆಸ್ ಕಾರಣ: ಶ್ರೀ ರಾಮುಲು

    ರಾತ್ರಿ ಸುಮಾರು 12 ಗಂಟೆಗೆ ಯಾರೂ ಇಲ್ಲದ ಸಮಯದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳಿಗೆ ದುಷ್ಕರ್ಮಿಗಳು ಬಡಿಗೆಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಹಲ್ಲೆಯಿಂದ ಒಂದು ಎತ್ತಿನ ಮೂಗು, ಮೈಮೇಲೆ ರಕ್ತ ಬಂದಿದೆ. ಇನ್ನೊಂದು ಎತ್ತು ಸಂಪೂರ್ಣವಾಗಿ ಕುಸಿದು ಬಿದ್ದು ಮೇವನ್ನು ಸಹ ತಿನ್ನದಂತಾಗಿದೆ. ಇದನ್ನೂ ಓದಿ: ಸ್ಪೈಡರ್ ಮ್ಯಾನ್‍ನಂತೆ ಗೋಡೆ ಹತ್ತುವ ಬಾಲಕಿ – ವೀಡಿಯೋ ವೈರಲ್

    ಸ್ಥಳಕ್ಕೆ ಪಶು ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಸದ್ಯ ಜೋಡೆತ್ತುಗಳ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎತ್ತುಗಳ ಸ್ಥಿತಿಯನ್ನು ನೋಡಿ ರೈತ ಇರಸಂಗಪ್ಪ ಕಣ್ಣೀರು ಹಾಕುತ್ತಿದ್ದಾರೆ.

    ನಾನು ಎತ್ತುಗಳನ್ನೇ ನಂಬಿಕೊಂಡು ಬದುಕುತ್ತಿದ್ದೇನೆ. 2 ಲಕ್ಷ ಬೆಲೆಬಾಳುವ ಎತ್ತುಗಳಿಗೆ ಜೀವ ಹೋಗುವಂತೆ ಉದ್ದೇಶಪೂರ್ವಕವಾಗಿಯೇ ಹೊಡೆದಿದ್ದಾರೆ. ಮನುಷ್ಯರಿಗೆ ನೋವಾದರೆ ಹೇಳಿಕೊಳ್ಳುತ್ತಾರೆ. ಮೂಕ ಪ್ರಾಣಿಗಳು ತಮ್ಮ ವೇದನೆಯನ್ನು ಯಾರ ಮುಂದೆಯೂ ಹೇಳಿಕೊಳ್ಳಲಾಗದು. ಈ ಕೂಡಲೇ ಎತ್ತುಗಳ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ಗಲಾಟೆ- ಓರ್ವನ ಮೇಲೆ ನಾಲ್ವರಿಂದ ಹಲ್ಲೆ

    ಕ್ಷುಲ್ಲಕ ಕಾರಣಕ್ಕೆ ಗಲಾಟೆ- ಓರ್ವನ ಮೇಲೆ ನಾಲ್ವರಿಂದ ಹಲ್ಲೆ

    ಗದಗ: ಹಳೆ ವೈಷಮ್ಯದ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊರ್ವನಿಗೆ ಮಾರಕಾಸ್ತ್ರಗಳಿಂದ ನಾಲ್ವರು ಸೇರಿ ಓರ್ವನ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಪ್ರಶಾಂತ ಬಡಾರಿ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ನಿನ್ನೆ ರಾತ್ರಿ ಗಣೇಶ್ ವಿಸರ್ಜನೆಯ ವೇಳೆ ಪಟ್ಟಣದ ಹಿರೇ ಬಜಾರ್‌ನಲ್ಲಿ ಈ ಗಲಾಟೆಯಾಗಿದೆ. ಕುಡಿದ ಮತ್ತಿನಲ್ಲಿ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಗಲಾಟೆ ಮಾಡಿಕೊಂಡಿದ್ದಾರೆ.

    ಪ್ರಶಾಂತ್ ಬಡಾರಿ ಎಂಬಾತ ಹಲ್ಲೆಗೊಳಗಾಗಿದ್ದಾನೆ. ತಲೆಗೆ, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಶಾಂತ ಬಡಾರಿ ಹಾಗೂ ಅಭಿಷೇಕ್ ಮಧ್ಯೆ ಆಗಾಗ ಕಿರಿಕ್ ನಡೆಯುತ್ತಲೇ ಇತ್ತು. ನಿನ್ನೆಯೂ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದನ್ನೂ ಓದಿ:  ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಮುಯೂರಿ ಫೋಟೋಶೂಟ್

    ಮಾತಿಗೆ ಮಾತು ಬೆಳೆದು ಅಭಿಷೇಕ ಸ್ನೇಹಿತರಾದ ಅರುಣ್, ಸಾಗರ, ಕಿರಣ್ ಈ ನಾಲ್ವರು ಸೇರಿ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಲೆಗೆ ಖಾಕಿಪಡೆ ಬಲೆ ಬೀಸಿದೆ.

  • ಕಾಮಗಾರಿ ವಿಚಾರಕ್ಕೆ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ

    ಕಾಮಗಾರಿ ವಿಚಾರಕ್ಕೆ ಧ್ವನಿ ಎತ್ತಿದ್ದ ಸಾಮಾಜಿಕ ಹೋರಾಟಗಾರನ ಮೇಲೆ ಹಲ್ಲೆ

    ಬೆಂಗಳೂರು/ನೆಲಮಂಗಲ: ನರೇಗಾ ಕಾಮಗಾರಿ ನಡೆಸಿ ಅವ್ಯವಹಾರ ನಡೆಸುತ್ತಿರುವುದು ತಿಳಿದು ಸಾಮಾಜಿಕ ಹೋರಾಟಗಾರ ಧ್ವನಿ ಎತ್ತಿದ್ದಕ್ಕೆ ಅವರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸಂಕಿಘಟ್ಟ ಗ್ರಾಮದಲ್ಲಿ ನಡೆದಿದೆ.

    ಸಂಕಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನರೇಗಾ ಕಾಮಗಾರಿ ನಡೆಸಿ ಅವ್ಯವಹಾರ ನಡೆಸುತ್ತಿದ್ದರು. ಈ ಕುರಿತು ಪತ್ರಕರ್ತ, ಸಾಮಾಜಿಕ ಹೋರಾಟಗಾರ ದೇವೇಗೌಡ ಧ್ವನಿ ಎತ್ತಿ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದರು. ಇದಕ್ಕೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸಹ ನೀಡಿದ್ದರು.ಇದನ್ನೂ ಓದಿ:ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಟೀಲ್

    ಇದಾದ ಬಳಿಕ ಸಂಕಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಸದಸ್ಯರು ದೇವೇಗೌಡರ ಬಳಿ ರಾಜಿ ಸಂಧಾನಕ್ಕೆ ಯತ್ನಿಸಿ ವಿಫಲವಾಗಿದ್ದರು. ಇದರಿಂದ ಕೋಪಗೊಂಡ ನಾರಾಯಣಪುರ ಗ್ರಾಮದ ಕೆಲ ಸದಸ್ಯರು ಹಾಗೂ ಅವರ ಬೆಂಬಲಿಗರು ದೇವೇಗೌಡ ಅವರ ಮೇಲೆ ಏಕಏಕಿ ದಾಳಿ ನಡೆಸಿದ್ದಾರೆ. ನರೇಗಾ ಕಾಮಗಾರಿಗಳ ಅವ್ಯವಹಾರದ ಬಗ್ಗೆ ನೀಡಿರುವ ಮನವಿ ಪತ್ರವನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆಯನ್ನು ಹಾಕಿದ್ದಾರೆ.ಇದನ್ನೂ ಓದಿ:ಈ ಬಾರಿಯ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ: ಬಿ.ಸಿ.ಪಾಟೀಲ್

    ಹಲ್ಲೆಗೊಳಗಾದ ದೇವೇಗೌಡರು ಸ್ಥಳೀಯರ ನೆರೆವಿನಿಂದ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ:KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

  • ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ವೃದ್ಧೆ ನಿಧನ

    ಟಿಎಂಸಿ ಕಾರ್ಯಕರ್ತರಿಂದ ಹಲ್ಲೆಗೊಳಗಾದ ವೃದ್ಧೆ ನಿಧನ

    ಕೋಲ್ಕತ್ತಾ: ಟಿಎಂಸಿ ಸದಸ್ಯರಿಂದ ಹಲ್ಲೆಗೊಳಗಾಗಿದ್ದ ಬಿಜೆಪಿ ಮುಖಂಡನ ತಾಯಿ ನಿಧನರಾಗಿದ್ದಾರೆ.

    ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಮ್ದಾರ್ ಅವರ ತಾಯಿ ನಿಮ್ತಾ(85) ಸಾವನ್ನಪಿದ್ದಾರೆ. ಹಲ್ಲೆಗೊಳಗಾಗಿದ್ದ ನಿಮ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 4 ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದ ವೃದ್ಧೆ ಇಂದು ಕೊನೆಯುಸಿರೆಳದಿದ್ದಾರೆ.

    ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲೇ ವೃದ್ಧೆ ಮೇಲೆ ಹಲ್ಲೆ ನಡೆದಿತ್ತು. ಫೆ.27 ರಂದು ಮೂವರು ಟಿಎಂಸಿ ಸದಸ್ಯರು ವೃದ್ಧೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಧೆಯ ಕುಟುಂಬಸ್ಥರು ದೂರು ದಾಖಲಿಸಿದ್ದರು. ತನ್ನ ಮೇಲೆ ಆಗಿರುವ ಹಲ್ಲೆ ಕುರಿತಾಗಿ ವಿವರಿಸಿದ ವೃದ್ಧೆ ನನ್ನ ಕುತ್ತಿಗೆ, ಮುಖಕ್ಕೆ ಹೊಡೆದಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿರುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದಿದ್ದಾರೆ. ನನಗೆ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದರು.

    ಬಂಗಾಳದ ಮಗಳು ಸಾವನ್ನಪ್ಪಿದ್ದಾರೆ. ಇವರ ಮೇಲೆ ಟಿಎಂಸಿ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ವೃದ್ಧೆಯ ಬಗ್ಗೆ ಸಹಾನೂಭೂತಿಯ ಮಾತುಗಳನ್ನು ಆಡಲಿಲ್ಲ. ಇವರು ಕುಟುಂಬಸ್ಥರಿಗೆ ಆಗಿರುವ ನೋವನ್ನು ಯಾರು ಗುಣಪಡಿಸುತ್ತಾರೆ? ಎಂದು ಪ್ರಶ್ನಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.

    ಟಿಎಂಸಿ ಹಿಂಸಾಚಾರದ ರಾಜಕೀಯವನ್ನು ನಿಲ್ಲಿಸಬೇಕಾಗಿದೆ. ಮೃತರ ಆತ್ಮಕ್ಕಾಗಿ ಪ್ರಾರ್ಥನೆ ಮಾಡುತ್ತೇನೆ. ಓಂ ಶಾಂತಿ ಎಂದು ಬೆಂಗಳೂರಿನ ಬೆಜೆಪಿ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿದ್ದಾರೆ.

  • ಜೈಲು ಅಧೀಕ್ಷಕನಿಂದ ಸಿಬ್ಬಂದಿ ಮುಖ, ಮೂಗಿಗೆ ಹಲ್ಲೆಗೈದು ಬೆದರಿಕೆ

    ಜೈಲು ಅಧೀಕ್ಷಕನಿಂದ ಸಿಬ್ಬಂದಿ ಮುಖ, ಮೂಗಿಗೆ ಹಲ್ಲೆಗೈದು ಬೆದರಿಕೆ

    ಹಾವೇರಿ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿರುವ ಆರೋಪವೊಂದು ಜೈಲು ಅಧೀಕ್ಷಕ ಮೇಲೆ ಕೇಳಿಬಂದಿದೆ.

    ಹಾವೇರಿ ಜಿಲ್ಲಾ ಕಾರಾಗೃಹದಲ್ಲಿ ಪುಂಡಲೀಕ ಪವಾರ(26) ಎಂಬಾತನ ಮೇಲೆ ಜೈಲು ಅಧೀಕ್ಷಕ ಟಿ.ಬಿ.ಭಜಂತ್ರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಪುಂಡಲಿಕನನ್ನು ಭಜಂತ್ರಿ ತಮ್ಮ ಕಚೇರಿಗೆ ಕರೆಸಿಕೊಂಡು ಅವಾಚ್ಯ ಪದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

    ಜೈಲಿನಲ್ಲಿ ನಡೆಯೋ ವಿದ್ಯಮಾನಗಳನ್ನ ಮೇಲಾಧಿಕಾರಿಗಳಿಗೆ ಹೇಳುತ್ತೀಯಾ ಅಂತ ಕಚೇರಿಗೆ ಕರೆದು ಮುಖ ಮತ್ತು ಮೂಗಿಗೆ ಹಲ್ಲೆ ಮಾಡಲಾಗಿದೆ. ವಿಚಾರಣಾಧೀನ ಕೈದಿಯನ್ನು ಕರೆದು ಕೊಲೆ ಮಾಡು, ಬಂದಿದ್ದು ನೋಡಿಕೊಳ್ಳುತ್ತೇನೆ ಅಂತ ಬೆದರಿಕೆ ಹಾಕಿರೋ ಆರೋಪ ಕೇಳಿಬಂದಿದೆ.

    ಜೈಲು ಅಧೀಕ್ಷಕ ಭಜಂತ್ರಿ ಹಾಗೂ ಜೈಲಿನ ವಿಚಾರಣಾಧೀನ ಕೈದಿ ವಿನಾಯಕ ವಿರುದ್ಧ ಜೈಲು ವೀಕ್ಷಕ ಪವಾರ ಆರೋಪ ಮಾಡಿದ್ದು, ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ.

  • ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಹಲ್ಲೆ- ಪೊಲೀಸರ ವಿರುದ್ಧ ಗಾಯಾಳುಗಳು ಕಿಡಿ

    ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಹಲ್ಲೆ- ಪೊಲೀಸರ ವಿರುದ್ಧ ಗಾಯಾಳುಗಳು ಕಿಡಿ

    ವಿಜಯಪುರ: ಟ್ರ್ಯಾಕ್ಟರ್‌ನಲ್ಲಿ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ ಘಟನೆ ವಿಜಯಪುರ ಜಿ. ಕಲಕೇರಿ ಗ್ರಾಮದಲ್ಲಿ ನಡೆದಿದೆ.

    ಈ ಮಾರಾಮಾರಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕಲಕೇರಿಯ ಬಾಷಾಸಾಬ್ ವಠಾರ್, ಮಹ್ಮದ್‍ನಾಸೀರ್, ಮಹ್ಮದ್ ಶರೀಫ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಕಲಕೇರಿಯ ಮಹ್ಮದ್ ಶರೀಫ್ ಬಡೇಘರ್, ಹುಸೇನ್ ಬಡೇಘರ್, ರಫೀಕ್ ಸೇರಿದಂತೆ 12ಕ್ಕೂ ಅಧಿಕ ಜನರಿಂದ ಹಲ್ಲೆ ನಡೆದಿದೆ.

    ಟ್ರ್ಯಾಕ್ಟರ್‌ನಲ್ಲಿ ಜೋರಾದ ಸೌಂಡ್ ಮೂಲಕ ಡಿಜೆ ಸಾಂಗ್ ಹಾಕಿಕೊಂಡು ಹೊರಟಿದ್ದ ಮಹ್ಮದ್ ಶಾಹೀದ್ ಬಡೇಘರ್‍ಗೆ ಬಾಷಾಸಾಬ್ ವಠಾರ್ ಎಂಬವರು ಸೌಂಡ್ ಕಡಿಮೆ ಮಾಡು ಅಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಮ್ಮದ್ ಶಾಹೀದ್ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾನಂತೆ. ಹಲ್ಲೆಯಿಂದ ಮೂವರಿಗೆ ಗಂಭೀರಗಾಯ ಆಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಕಳೆದ 17 ರಂದು ಈ ಘಟನೆ ನಡೆದಿದ್ದು, ಇದುವರೆಗೂ ಕಲಕೇರಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಬಂದಿಲ್ಲ ಅಂತ ಕಲಕೇರಿ ಪಿಎಸ್ ರೇಣುಕಾ ಹಳ್ಳಿ ಮೇಲೆ ಹಲ್ಲೆಗೊಳಗಾದವರು ಆರೋಪಿಸಿದ್ದಾರೆ.

  • ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಯುವಕ!

    ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದ ಯುವಕ!

    ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಈ ಘಟನೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ನಡೆದಿದೆ. ಪ್ರೇಮ ವೈಫಲ್ಯದಿಂದ ಯುವಕ, ಯುವತಿಗೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ದೀಪಾವಳಿಯಂದೇ ಪತ್ನಿಯನ್ನು ಕೊಲೆ ಮಾಡಿ ಸೀಮೆಎಣ್ಣೆ ಸುರಿದು ಬೆಂಕಿಯಿಟ್ಟ!

    ಯುವಕನ ಕೃತ್ಯದಿಂದಾಗಿ ಗಂಭೀರ ಗಾಯಗೊಂಡಿರುವ ಯುವತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 10 ವರ್ಷದ ಲವ್ ಫೇಲ್- ಭಗ್ನ ಪ್ರೇಮಿ ಆತ್ಮಹತ್ಯೆ