Tag: ಹಲ್ಲೆ

  • ಅಂಕೋಲಾ ಟೋಲ್ ಸಿಬ್ಬಂದಿ ಮೇಲೆ ಬೆಂಗಳೂರು ಪೊಲೀಸರಿಂದ ಹಲ್ಲೆ

    ಅಂಕೋಲಾ ಟೋಲ್ ಸಿಬ್ಬಂದಿ ಮೇಲೆ ಬೆಂಗಳೂರು ಪೊಲೀಸರಿಂದ ಹಲ್ಲೆ

    ಕಾರವಾರ: ಹಣ ಕಟ್ಟಲು ತಕರಾರು ತೆಗೆದು ಟೋಲ್ ಸಿಬ್ಬಂದಿ ಮೇಲೆ ಬೆಂಗಳೂರಿನ ಪೊಲೀಸರು ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಗೋವಾಕ್ಕೆ ಪೊಲೀಸರು ಕುಟುಂಬದೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್‌ನಲ್ಲಿ ಹಣ ಕಟ್ಟದೇ ತಕರಾರು ತೆಗೆದಿದ್ದಾರೆ. ಇದಲ್ಲದೇ ಖಾಸಗಿ ವಾಹನಕ್ಕೆ ಪೊಲೀಸ್ ಎಂದು ಸ್ಟಿಕರ್ ಸಹ ಹಾಕಿದ್ದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ಖಾಸಗಿ ವಾಹನವಾದ್ದರಿಂದ ಟೋಲ್ ಸಿಬ್ಬಂದಿ ತಡೆದಿದ್ದು, ಟೋಲ್ ಕಟ್ಟುವಂತೆ ಕೇಳಿದ್ದಾರೆ. ಇದಕ್ಕೆ ತಕರಾರು ತೆಗೆದ ಪೊಲೀಸರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 7ರ ಬಾಲಕಿ ಮೇಲೆ ಅತ್ಯಾಚಾರ- ಹತ್ಯೆಗೈದವರಿಗಾಗಿ ಶೋಧ ಕಾರ್ಯ

  • ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ನೀರಿನ ವಿಚಾರಕ್ಕೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ ರೌಡಿಗಳು

    ಆನೇಕಲ್: ನೀರು ಹಿಡಿಯುವ ವಿಚಾರಕ್ಕೆ ಮನೆಗೆ ನುಗ್ಗಿ ರೌಡಿಗಳು ದಾಂಧಲೆ ನಡೆಸಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಪತ್ರಿಕಾ ಏಜೆಂಟ್ ಆಗಿರುವ ರಾಜಪ್ಪ ಹಾಗೂ ಅವರ ಮನೆಯವರು ಹಲ್ಲೆಗೊಳಗಾದವರು. ಆನೇಕಲ್ ತಾಲೂಕಿನ ಕಾಳನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ನೀರು ಹಿಡಿಯುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡ ರೌಡಿಗಳು ಪೇಪರ್ ಏಜೆಂಟ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

    ಮೇರಿ ಹಾಗೂ ಅರುಣ್, ಬೇಬಿ ಎಂಬುವವರು ಗಲಾಟೆ ನಡೆಸಿದ್ದಾರೆ. ಮನೆಯ ವಸ್ತುಗಳನ್ನು ಬಿಸಾಡಿ, ಮಹಿಳೆಯರ ಮೇಲೂ ದರ್ಪ ತೋರಿದ್ದಾರೆ. ಗಲಾಟೆ ಬಳಿಕ ಬೇಬಿ, ಯುವಕರನ್ನು ಕರೆಸಿಕೊಂಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಮನೆ ಧ್ವಂಸ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ರೌಡಿಗಳು ದಾಂಧಲೆ ನಡೆಸಿದ್ದರು. ಇದನ್ನೂ ಓದಿ: ಅನಾರೋಗ್ಯದಿಂದ ಜಾಮೀನಿನ ಮೇಲೆ ಹೊರಬಂದಿರೋ ಪ್ರಜ್ಞಾ ಸಿಂಗ್‌ರಿಂದ ಕ್ರಿಕೆಟ್, ಡ್ಯಾನ್ಸ್ – ವೀಡಿಯೋ ವೈರಲ್

    ಪ್ರಕರಣ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ದೂರು ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ದೆಹಲಿಯಲ್ಲಿ ಮೂಲಸೌಕರ್ಯ ಸುಧಾರಿಸಿದೆ: ಅಮಿತ್ ಶಾ

  • ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಚಾಲಕ, ಕಂಡಕ್ಟರ್ ಮೇಲೆ ಹಲ್ಲೆ!

    ವಾಹನವನ್ನು ಓವರ್ ಟೇಕ್ ಮಾಡಿದ್ದಕ್ಕೆ ಕೆಎಸ್‌ಆರ್‌ಟಿಸಿ ಚಾಲಕ, ಕಂಡಕ್ಟರ್ ಮೇಲೆ ಹಲ್ಲೆ!

    ರಾಯಚೂರು: ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ಡ್ರೈವರ್, ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಲಿಂಗಸೂಗುರು ತಾಲೂಕಿನ ಗುರುಗುಂಟಾದ ಬಳಿ ನಡೆದಿದೆ.

    ಮಹಿಬೂಬ್, ಶರ್ಮೊದ್ದೀನ್ ಹಲ್ಲೆ ನಡೆಸಿದ ಆರೋಪಿಗಳು. ಯಾದಗಿರಿ ಡಿಪೋಗೆ ಸೇರಿದ ಬಸ್ ನಂ. ಎ033ಎ 0254 ಮೇಲೆ ದಾಳಿ ಮಾಡಿದ್ದಾರೆ. ಬಸ್ ತಮ್ಮ ವಾಹನವನ್ನು ಓವರ್‌ಟೇಕ್ ಮಾಡಿದಕ್ಕೆ ಕೋಪಗೊಂಡು ಬಸ್ಸನ್ನು ಅಡ್ಡಗಟ್ಟಿ, ನಿರ್ವಾಹಕ ಲಿಂಗರಾಜ್ ಮತ್ತು ಚಾಲಕ ಸಂಗಮೇಶ್ ಅವರನ್ನು  ಮನಬಂದಂತೆ  ಥಳಿಸಿದ್ದಾರೆ. ಇದನ್ನೂ ಓದಿ: ಲುಧಿಯಾನ ಕೋರ್ಟ್ ಸ್ಫೋಟ – ಡ್ರಗ್ ಕೇಸ್‌ನಲ್ಲಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೇ ಬಾಂಬರ್


    ಪ್ರಯಾಣಿಕರು ಎಷ್ಟೇ ಬೇಡಿಕೊಂಡರು ಯುವಕರು ಹಲ್ಲೆ ನಡೆಸುವುದನ್ನು ನಿಲ್ಲಿಸಿಲ್ಲ. ಕೊನೆಗೆ ಪ್ರಯಾಣಿಕರೊಬ್ಬರು ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ 

    POLICE JEEP

  • ಕೇವಲ 3,000 ಹಣಕ್ಕಾಗಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ – ಯುವಕ ಸಾವು

    ಕೇವಲ 3,000 ಹಣಕ್ಕಾಗಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ – ಯುವಕ ಸಾವು

    ನವದೆಹಲಿ: ಕೇವಲ 3,000 ರೂ. ಹಣಕ್ಕಾಗಿ ಇಬ್ಬರ ಮೇಲೆ ದಾಳಿಕೋರರು ಹಲ್ಲೆ ನಡೆಸಿ ಒಬ್ಬನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ಸಂಗಮ್‌ ವಿಹಾರ ಬಳಿ ನಡೆದಿದೆ. ದಾಳಿಕೋರರು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹಲ್ಲೆಗೊಳಗಾದವರು ಪಂಕಜ್‌, ಜತಿನ್‌ ಎಂದು ಗುರುತಿಸಲಾಗಿದೆ. ಇಬ್ಬರೂ ಕಂಪೆನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು. ಇದನ್ನೂ ಓದಿ: ಕೆಎಫ್‍ಸಿ ಚಿಕನ್‍ನಲ್ಲಿ ಮಹಿಳೆಗೆ ಸಿಕ್ತು ಕೋಳಿ ತಲೆ

    ಇಬ್ಬರೂ ಸ್ನೇಹಿತರೊಬ್ಬರ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ವೇಳೆ ಬರುತ್ತಿದ್ದರು. ಈ ವೇಳೆ ಗುಂಪೊಂದು ಇವರ ಮೇಲೆ ದಾಳಿ ನಡೆಸಿದೆ. ಅವರ ಬಳಿಯಿರುವ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಕೇಳಿದ್ದಾರೆ. ವಸ್ತುಗಳನ್ನು ಕೊಡಲು ನಿರಾಕರಿಸಿದಕ್ಕೆ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಇಬ್ಬರಲ್ಲಿ ಜತಿನ್ ಸಾವಿಗೀಡಾಗಿದ್ದಾನೆ.

    ಸುಮಾರು 7 ಮಂದಿ ಗುಂಪು ಯುವಕರ ಮೇಲೆ ಹಲ್ಲೆ ನಡೆಸಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭೀಕರ ಹಲ್ಲೆ ನಡೆಸಿದ ನಂತರ ಯುವಕನ ಜೇಬಿನಲ್ಲಿದ್ದ 3,000 ರೂ. ಹಣವನ್ನು ಕಸಿದುಕೊಂಡು ಗುಂಪು ಪರಾರಿಯಾಗಿದೆ. ಇದನ್ನೂ ಓದಿ: ವಿಗ್ ಒಳಗಡೆ ಡಿವೈಸ್ – ಪೊಲೀಸ್ ಪರೀಕ್ಷೆಯ ವೇಳೇ ಸಿಕ್ಕಿ ಬಿದ್ದ ಭೂಪ

    ಹಲ್ಲೆಯಿಂದ ಗಾಯಗೊಂಡು ಬಳಲುತ್ತಿದ್ದ ಜತಿನ್‌ ಮತ್ತು ಪಂಕಜ್‌ನನ್ನು ಜತಿನ್‌ ಸಹೋದರ ಮನೆಗೆ ಕರೆದೊಯ್ದಿದ್ದಾನೆ. ನಂತರ ಇಬ್ಬರನ್ನೂ ಏಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾನೆ. ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾನೆ. ಇದಾದ ಬಳಿಕ ಭೀಕರ ಹಲ್ಲೆಗೊಳಗಾಗಿದ್ದ ಜತಿನ್‌ ಸಾವಿಗೀಡಾಗಿದ್ದಾನೆ.

  • ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಕೈಗಳನ್ನು ಮುರಿದು, ಕಾಲುಗಳಿಗೆ ಮೊಳೆ ಚುಚ್ಚಿ ಆರ್‌ಟಿಐ ಕಾರ್ಯಕರ್ತನಿಗೆ ಚಿತ್ರಹಿಂಸೆ

    ಜೈಪುರ: ಆರ್‌ಟಿಐ ಕಾಯಕರ್ತನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಆರ್‌ಟಿಐ ಕಾಯಕರ್ತ ಅಮರರಾಮ್ ಗೋದಾರ್ ಹಲ್ಲೆಗೊಳಗಾದ ವ್ಯಕ್ತಿ. ಇವರು ಭ್ರಷ್ಟಾಚಾರ ಮತ್ತು ಗ್ರಾಮಪಂಚಾಯಿತಿ ಏರಿಯಾದಲ್ಲಿ ನಡೆಯತ್ತಿದ್ದ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋದಾರ್ ಅವರ ಮೇಲೆ ಎಂಟು ಜನ ದುಷ್ಕರ್ಮಿಗಳು ಹಲ್ಲೆ ನಡೆಸಿ, ಅವರ ಮೇಲೆ ಕಬ್ಬಿಣ ಸಲಾಕೆಯಿಂದ ಬಡಿದು ಕೈಗಳನ್ನು ಮುರಿದಿದ್ದಾರೆ. ಅಲ್ಲದೆ, ಮೊಳೆಗಳಿಂದ ಕೈಕಾಲುಗಳಿಗೆ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ.

    ನಂತರ ತೀವ್ರ ಗಾಯಗೊಂಡಿದ್ದ ಅವರನ್ನು ನೋಡಿ ಗೋದಾರ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಗೊದಾರ್ ಅವರನ್ನು ಜೋದ್‌ಪುರ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    POLICE JEEP

    ಬರ್ಮರ್ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭಾಗವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೋದಾರ್ ಆರೋಗ್ಯವನ್ನು ವಿಚಾರಿಸಿದ್ದಾರೆ. ಜೊತೆಗೆ ಘಟನೆ ಕುರಿತು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

  • ಫ್ರೀ ಫುಡ್‌ ಇಲ್ಲ ಎಂದಿದ್ದಕ್ಕೆ ರೆಸ್ಟೋರೆಂಟ್‌ ಮ್ಯಾನೇಜರ್‌ ಮೇಲೆ ಪೊಲೀಸ್‌ ಅಧಿಕಾರಿಯಿಂದ ಹಲ್ಲೆ

    ಫ್ರೀ ಫುಡ್‌ ಇಲ್ಲ ಎಂದಿದ್ದಕ್ಕೆ ರೆಸ್ಟೋರೆಂಟ್‌ ಮ್ಯಾನೇಜರ್‌ ಮೇಲೆ ಪೊಲೀಸ್‌ ಅಧಿಕಾರಿಯಿಂದ ಹಲ್ಲೆ

    ಮುಂಬೈ: ಉಚಿತವಾಗಿ ಊಟ ನೀಡಲು ನಿರಾಕರಿಸಿದ್ದಕ್ಕೆ ರೆಸ್ಟೋರೆಂಟ್‌ ಮ್ಯಾನೇಜರ್‌ ಮೇಲೆ ಮುಂಬೈ ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿರುವ ಘಟನೆಯ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ.

    ಸಾಂತಾಕ್ರೂಜ್ ಪೂರ್ವದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್‌ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಪೊಲೀಸ್‌ ಅಧಿಕಾರಿ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೆಸ್ಟೋರೆಂಟ್‌ ಮ್ಯಾನೇಜರ್‌ ಗಣೇಶ್‌ ಪಾಟಿಲ್‌ ಮೇಲೆ ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ವಿಕ್ರಮ್‌ ಪಾಟೀಲ್‌ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

    ರೆಸ್ಟೋರೆಂಟ್‌ ಆಗಮಿಸಿದ ಪೊಲೀಸ್‌ ಅಧಿಕಾರಿ ಕಿಚನ್‌ಗೆ ನೇರವಾಗಿ ತೆರಳಿ ಊಟ ನೀಡುವಂತೆ ಕೇಳಿದ್ದಾರೆ. ಆಗಾಗಲೇ ಪೊಲೀಸ್‌ ಅಧಿಕಾರಿ ಕುಡಿಲ ಅಮಲಿನಲ್ಲಿದ್ದರು. ಆಗ ಮ್ಯಾನೇಜರ್‌, ರಾತ್ರಿ 12:35 ಗಂಟೆಯಾಗಿದೆ. ಕಿಚನ್‌ ಬಾಗಿಲು ಮುಚ್ಚಲಾಗಿದ್ದು, ಊಟ ಇಲ್ಲ ಎಂದು ಮನವರಿಕೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್‌ ಅಧಿಕಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಹಲ್ಲೆ ನಡೆಸುತ್ತಿರುವ ಪೊಲೀಸ್‌ ಅಧಿಕಾರಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಆಲಿಸಬಹುದು!

  • ವಿಚಾರಣೆಗೆ ಕೋರ್ಟ್‌ಗೆ ಬಂದವರ ಮೇಲೆ ತಹಶೀಲ್ದಾರ್‌ ಹಲ್ಲೆ!

    ವಿಚಾರಣೆಗೆ ಕೋರ್ಟ್‌ಗೆ ಬಂದವರ ಮೇಲೆ ತಹಶೀಲ್ದಾರ್‌ ಹಲ್ಲೆ!

    ಧಾರವಾಡ: ತಹಶೀಲ್ದಾರ್ ಕಚೇರಿ ಕೋರ್ಟ್‌ಗೆ ವಿಚಾರಣೆಗೆ ಬಂದಿದ್ದವರ ಮೇಲೆ ತಹಶೀಲ್ದಾರ್ ಸೇರಿ 5 ಜನ ಹಲ್ಲೆ ನಡೆಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

    ತಹಶೀಲ್ದಾರ್ ನವೀನ್ ಹುಲ್ಲೂರ ಹಲ್ಲೆ ಮಾಡಿದ ಆರೋಪಿ. ನವಲಗುಂದ ತಾಲೂಕಾ ತಹಶೀಲ್ದಾರ್‌ರಾಗಿ ಹುಲ್ಲೂರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    jail

    ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಹಶೀಲ್ದಾರ್ ಕೋರ್ಟ್‌ಗೆ ಮಲ್ಲಿಕಾರ್ಜುನ ಹಂಪಿಹೋಳಿ ಬಂದಿದ್ದರು. ಈ ವೇಳೆ ಮಲ್ಲಿಕಾರ್ಜುನ ಮೇಲೆ ತಹಶೀಲ್ದಾರ್ ಸೇರಿದಂತೆ 5 ಜನ ಹಲ್ಲೆ ನಡೆಸಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಸಹೋದರ ಸಿದ್ದಲಿಂಗಪ್ಪ ಹಾಗೂ ಆತನ ಸಹೋದರಿಗೂ ತಹಶೀಲ್ದಾರ್ ಬೂಟುಗಾಲಿನಿಂದ ಒದ್ದಿದ್ದರು.

    ಹಲ್ಲೆಗೆ ಒಳಗಾದ ಮಲ್ಲಿಕಾರ್ಜುನ ಹಾಗೂ ಸಿದ್ಧಲಿಂಗಪ್ಪನ ವಿರುದ್ಧ ನವಲಗುಂದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಆದರೆ ತಹಶೀಲ್ದಾರ್ ಸೇರಿ 5 ಜನ ಮಲ್ಲಿಕಾರ್ಜುನ ಹಾಗೂ ಸಿದ್ಧಲಿಂಗಪ್ಪನಿಗೆ ಹಲ್ಲೆ ಮಾಡಿದವರನ್ನು ವಿಚಾರಣೆಗೆ ಒಳಪಡಿಸದೇ ಹಾಗೆಯೇ ಬಿಟ್ಟು ಕಳುಹಿಸಿದ್ದರು.

    POLICE JEEP

    ಮಲ್ಲಿಕಾರ್ಜುನ ಸಹೋದರಿ ಗೀತಾ ಹಂಪಿಹೋಳಿ ಬೂಟುಗಾಲಿನಿಂದ ಒದ್ದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೆ ಈ ಕುರಿತು ಠಾಣೆಯಲ್ಲಿ ತಹಶೀಲ್ದಾರ್ ವಿರುದ್ಧ ದೂರು ಕೊಡಲು ಹೋದಾಗ ಇನ್‌ಸ್ಪೆಕ್ಟರ್ ಧಮ್ಕಿ ಹಾಕಿದ್ದಾರೆ ಎಂದು ಗೀತಾ ಆರೋಪಿಸಿದ್ದಾರೆ. ಎಸ್‌ಪಿ ಕರೆ ಮಾಡಿದ ನಂತರ ಬೆಳಗಿನ ಜಾವ ಪ್ರಕರಣದ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 21 ವಯಸ್ಸಿನವರೂ ʻಎಣ್ಣೆʼ ಹೊಡಿಯಬಹುದು – ಹರಿಯಾಣ

     

    ತಹಶೀಲ್ದಾರ ಜೊತೆ ಕೂಡಿ ಹಲ್ಲೆ ಮಾಡಿದ್ದ ಸೋಮವ್ವ ಹಂಪಿಹೋಳಿ, ಗುಳ್ಳಪ್ಪ ಹಂಪಿಹೋಳಿ, ಪ್ರೇಮವ್ವ, ನಾಗಪ್ಪ ಹಾಗೂ ಈರಪ್ಪ ಹೊಂಬಳ ಎಂಬವರ ವಿರುದ್ಧ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗೋಣಿಚೀಲದಲ್ಲಿ ನವಜಾತ ಶಿಶುವಿನ ಶವ ಪತ್ತೆ – ತಾಯಿ, ಪ್ರಿಯಕರನ ಬಂಧನ

  • ಸಿಖ್‌ ಧರ್ಮಕ್ಕೆ ಅಪಚಾರ ಎಸಗಿದರೆಂದು ಉದ್ರಿಕ್ತರ ಗುಂಪಿನಿಂದ ಹಲ್ಲೆ- ಇಬ್ಬರು ಸಾವು

    ಸಿಖ್‌ ಧರ್ಮಕ್ಕೆ ಅಪಚಾರ ಎಸಗಿದರೆಂದು ಉದ್ರಿಕ್ತರ ಗುಂಪಿನಿಂದ ಹಲ್ಲೆ- ಇಬ್ಬರು ಸಾವು

    ಚಂಡೀಗಢ: ಕಳೆದ 24 ಗಂಟೆಗಳ ಅವಧಿಯಲ್ಲಿ ಪ್ರತ್ಯೇಕ ಎರಡು ಕಡೆ ಕೋಪೋದ್ರಿಕ್ತ ಜನರ ಗುಂಪು ಇಬ್ಬರು ವ್ಯಕ್ತಿಗಳನ್ನು ಹೊಡೆದು ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ.

    ಅಮೃತಸರದ ಸ್ವರ್ಣ ಮಂದಿರವನ್ನು ಅಪವಿತ್ರಗೊಳಿಸಲು ಯತ್ನಿಸಿದ ಎಂದು ಆರೋಪಿಸಿ ಉದ್ರಿಕ್ತರ ಗುಂಪು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದ ಘಟನೆ ಶನಿವಾರ ನಡೆದಿತ್ತು. ಇದಾದ 24 ಗಂಟೆಯೊಳಗಡೆ ಮತ್ತೊಂದು ಕಡೆ ಇದೇ ಕಾರಣಕ್ಕೆ ವ್ಯಕ್ತಿಯನ್ನು ಹೊಡೆದು ಕೊಲ್ಲಲಾಗಿದೆ. ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ

    ಪಂಜಾಬ್‌ನ ಕಪುರ್ತಲಾದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿ ಸಿಖ್‌ ಬಾವುಟವನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ವೇಳೆ ಗುಂಪೊಂದು ಆತನನ್ನು ಹಿಡಿದಿದೆ. ಗಲಾಟೆ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ ಕೋಪೋದ್ರಿಕ್ತ ಗುಂಪು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಪೊಲೀಸರು ತಕ್ಷಣ ಹಲ್ಲೆಗೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರೊಳಗೆ ವ್ಯಕ್ತಿ ಮೃತಪಟ್ಟಿದ್ದಾನೆ.

    ಮೃತ ವ್ಯಕ್ತಿ ಸಿಖ್‌ ಬಾವುಟ ತೆರವುಗೊಳಿಸಿ ಅಪವಿತ್ರಗೊಳಿಸಲು ಬಂದಿರಲಿಲ್ಲ. ಆತ ಕಳ್ಳತನ ಮಾಡಲು ಬಂದಿದ್ದ. ಆದರೆ ಜನರು ತಪ್ಪು ತಿಳಿದು ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 43 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    POLICE JEEP

    ಇದೇ ರೀತಿಯ ಘಟನೆ ಶನಿವಾರ ಸಂಜೆ ಅಮೃತಸರದ ಸ್ವರ್ಣ ಮಂದಿರದಲ್ಲಿ ಶನಿವಾರ ನಡೆದಿತ್ತು. ನಿನ್ನೆ ಸಂಜೆ ವ್ಯಕ್ತಿಯೊಬ್ಬ ಖಡ್ಗವನ್ನು ಹಿಡಿದುಕೊಂಡು ಪ್ರಾರ್ಥನೆಯ ಸಂದರ್ಭದಲ್ಲಿ ಗರ್ಭಗುಡಿಯೊಳಗೆ ಜಿಗಿದು, ಗುರು ಗ್ರಂಥ ಸಾಹೀಬ್‌ ಪಠಿಸುತ್ತಿದ್ದ ಸ್ಥಳದ ಸಮೀಪ ತಲುಪಿದ್ದ. ಈ ವೇಳೆ ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ ಕಾರ್ಯಪಡೆ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದಿತ್ತು. ಆದರೆ ಕೋಪೋದ್ರಿಕ್ತ ಗುಂಪು ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದ.

  • ಲವ್ವರ್ ಮಾತಾಡಲು ನಿರಾಕರಿಸಿದಳೆಂದು ಆಸ್ಪತ್ರೆ ವೈದ್ಯ, ರೋಗಿಗಳಿಗೆ ಚಾಕುವಿನಿಂದ ಇರಿದ!

    ಲವ್ವರ್ ಮಾತಾಡಲು ನಿರಾಕರಿಸಿದಳೆಂದು ಆಸ್ಪತ್ರೆ ವೈದ್ಯ, ರೋಗಿಗಳಿಗೆ ಚಾಕುವಿನಿಂದ ಇರಿದ!

    ಗ್ಯಾಂಗ್ಟಾಕ್: ಫೋನ್ ಕರೆಯನ್ನು ಸ್ವೀಕರಿಸದೆ ಇರುವ ಪ್ರಿಯಕರ, ಆಕೆ ಕೆಲಸ ಮಾಡುವ ಆಸ್ಪತ್ರೆಯ ವೈದ್ಯ ಹಾಗೂ ರೋಗಿಗಳಿಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿರುವ ಘಟನೆ ಸಿಕ್ಕಿಂ ಎಸ್‌ಟಿಎನ್‌ಎಂ ಆಸ್ಪತ್ರೆಯಲ್ಲಿ ನಡೆದಿದೆ.

    ತಂಗಚ್ಚಿನ್ ಹಲ್ಲೆ ಮಾಡಿದ ಆರೋಪಿ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಚೂರಿ ಇರಿತಕ್ಕೆ ವೈದ್ಯರು ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

    ಇಬ್ಬರು ನಡುವೆ ಹಲವು ದಿನಗಳಿಂದ ಮುನಿಸು ಇತ್ತು. ಅವಳು ಆತನೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಕೋಪಗೊಂಡ ಆತ ಆಸ್ಪತ್ರೆಯಲ್ಲಿರುವವರ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದಾನೆ. ಚೂರಿ ಇರಿತಕ್ಕೊಳಗಾದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ!

    ಗೆಳತಿಯನ್ನು ಭೇಟಿಯಾಗಲು ಹೋದಾಗ ಚಾಕುವನ್ನು ಏಕೆ ಹಿಡಿದುಕೊಂಡಿದ್ದೀಯಾ ಎಂದು ಕೇಳಿದಾಗ, ಆಕೆಯ ಸೋದರಮಾವನನ್ನು ಕೊಲ್ಲಲು ಯೋಜಿಸಿದ್ದಾಗಿ ತಂಗಚ್ಚಿನ್ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಪ್ಪು ಸಮಾಧಿಗೆ ಧಾರವಾಡದಿಂದ ನಡೆದೇ ಬಂದ ಅಭಿಮಾನಿ

  • ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ರೋಮ್: ಟಿವಿ ವರದಿಗಾರ್ತಿಯೊಬ್ಬರಿಗೆ ಲೈವ್ ವರದಿಯನ್ನು ನೀಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ಕಿರುಕುಳ ಘಟನೆ ಇಟಲಿಯಲ್ಲಿ ನಡೆದಿದೆ.

    ಎಂಪೋಲಿಯಾದ ಕಾರ್ಲೋ ಕ್ಯಾಸ್ಟೆಲ್ಲಾನಿ ಕ್ರೀಡಾಂಗಣದ ಹೊರಗಿನಿಂದ ಟೋಸ್ಕಾನಾ ಟಿವಿಯ ಪತ್ರಕರ್ತೆ ಬೆಕಾಗ್ಲಿಯಾ ನೇರ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಹಲ್ಲೆಗೆ ಒಳಗಾಗಿದ್ದಾರೆ.

    ಬೆಕಾಗ್ಲಿಯಾ ಫುಟ್‍ಬಾಲ್ ಆಟ ಮುಗಿದ ಬಳಿಕ ಕ್ರೀಡಾಂಗಣದ ಹೊರಭಾಗದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕೈಗೆ ಉಗುಳಿ, ನೇರ ಪ್ರಸಾರದಲ್ಲೇ ಬೆಕಾಗ್ಲಿಯಾಳ ಕಪಾಳಕ್ಕೆ ಹೊಡೆದಿದ್ದಾನೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

    ಈ ಘಟನೆ ವರದಿಗಾರ್ತಿಗೆ ಅಸಹ್ಯವನ್ನು ಉಂಟುಮಾಡಿದ್ದು, ಕೋಪಗೊಂಡು ಹಲ್ಲೆ ಮಾಡಿದಾತನಿಗೆ ಬೈದಿದ್ದಾಳೆ. ಲೈವ್‍ನಲ್ಲಿದ್ದ ಟಿವಿ ನಿರೂಪಕರು ಆಕೆಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

    ಬೆಕಾಗ್ಲಿಯಾ ತನಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದು, ಆ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಟೋಸ್ಕಾನಾ ಟೀವಿ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ವೆಚ್ಚಗಳನ್ನು ಭರಿಸುವುದಾಗಿ ಒಪ್ಪಿಕೊಂಡಿದೆ.

    ನನಗೆ ಏನಾಯಿತು ಎಂಬುವುದು ಮುಖ್ಯವಲ್ಲ. ನಾನು ನನ್ನ ಕೆಲಸದಲ್ಲಿದ್ದ ಕಾರಣ ಕ್ಯಾಮೆರಾ ಅದನ್ನು ಚಿತ್ರೀಕರಿಸಿದೆ. ಹೀಗಾಗಿ ಘಟನೆ ಬೆಳಕಿಗೆ ಬಂದಿದೆ. ಆದರೆ ಇತರ ಮಹಿಳೆಯರ ವಿಚಾರಕ್ಕೆ ಬಂದಾಗ ಅದನ್ನು ಚಿತ್ರೀಕರಿಸಲು ಯಾವುದೇ ಕ್ಯಾಮೆರಾಗಳು ಇರುವುದಿಲ್ಲ. ಇದರಿಂದ ನಡೆದ ಅನ್ಯಾಯ ಗೋಚರಿಸದೇ ಹೋಗುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಯಾವ ಮಹಿಳೆಯರಿಗೂ ಆಗಬಾರದು ಎಂದು ಘಟನೆಯ ಕುರಿತು ಬೆಕಾಗ್ಲಿಯಾ ಹೇಳಿದ್ದಾಳೆ. ಇದನ್ನೂ ಓದಿ: ತೋಡಿನಲ್ಲಿ ಮರಿಗೆ ಜನ್ಮವಿತ್ತ ಕಾಡಾನೆ