Tag: ಹಲ್ಲೆ

  • ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ನನಗೆ ನೀನು ಬೇಕು ಬಾ ಎಂದ ಇನ್ಸ್‌ಪೆಕ್ಟರ್ ವಿರುದ್ಧವೇ ದೂರು

    ಬೆಂಗಳೂರು: ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಲು ಹೋದವರಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಕಿರುಕುಳ ನೀಡಿದ ಘಟನೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಹೆಣ್ಣೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಸಂತಕುಮಾರ್ ಆರೋಪಿ. ಹೆಣ್ಣೂರಿನ ಶಕ್ತಿ ನಗರ ನಿವಾಸಿಯೊಬ್ಬರು ತಮ್ಮ ಮನೆಯನ್ನು ಕೆಲ ವರ್ಷಗಳ ಹಿಂದೆ ವರಲಕ್ಷ್ಮಿಗೆ ಲೀಸ್ ನೀಡಿದ್ದರು. ಲೀಸ್ ಹಣವಾಗಿ 7 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ನೀರಿನ ಬಿಲ್ ಮಾತ್ರ 1 ವರ್ಷದಿಂದ ಕಟ್ಟಿರಲಿಲ್ಲ. ವಾಟರ್ ಬಿಲ್ ಕೇಳಲು ಮನೆ ಮಾಲೀಕರಾದ ಸಂತ್ರಸ್ತೆ ಹೋಗಿದ್ದರು.

    ಈ ವೇಳೆ ಗಲಾಟೆ ತೆಗೆದು ವರಲಕ್ಷ್ಮೀ ಹಾಗೂ ಅವರ ಗುಂಪು ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಕು ಹಾಕಿ, ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿಗಳಿಂದ ಸಂತ್ರಸ್ತೆ ತಪ್ಪಿಸಿಕೊಂಡು ಬಂದಿದ್ದಾರೆ.

    ನೊಂದ ಸಂತ್ರಸ್ತೆ ಕೆ.ಸಿ. ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದು ದೂರು ನೀಡಲು ಹೆಣ್ಣೂರು ಪೊಲೀಸ್ ಠಾಣೆಗೆ ಹೋದರೆ, ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಬದಲಿಗೆ ಇನ್ಸ್‌ಪೆಕ್ಟರ್ ವಸಂತ ಕುಮಾರ್ ದುರ್ವತನೆ ತೋರಿದ್ದಾರೆ. ಇದನ್ನೂ ಓದಿ: ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    POLICE JEEP

    ಮಹಿಳೆ ಅನ್ನೋದು ನೋಡದೇ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ನನಗೆ ನೀನು ಬೇಕು ಬಾ ಎಂದು ಅಸಭ್ಯ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನೊಂದ ಮಹಿಳೆ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ. ಘಟನೆ ಕುರಿತು ನ್ಯಾಯಕ್ಕಾಗಿ ನೊಂದ ಮಹಿಳೆ ಅಲೆಯುತ್ತಿದ್ದಾಳೆ. ಇದನ್ನೂ ಓದಿ:  ಗಾಂಜಾ ಮಾರುತ್ತಿದ್ದ ಪೊಲೀಸರನ್ನು ಅರೆಸ್ಟ್ ಮಾಡಿದ್ದ ಇನ್‌ಸ್ಪೆಕ್ಟರ್ ಸಸ್ಪೆಂಡ್

  • ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ಸಾಲ ವಸೂಲಿಗಾಗಿ ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿದ ಆಸಾಮಿ

    ವಿಜಯಪುರ: ಸಾಲದ ಹಣ ವಾಪಸ್ ಕೊಡಲಿಲ್ಲ ಎಂದು ವೃದ್ಧೆಗೆ ಬಂದೂಕು ತೋರಿಸಿ ಹೆದರಿಸಿರುವ ಘಟನೆ ನಗರದ ತಿಕೋಟ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.

    ಶಾಂತಾಬಾಯಿ ರಾಠೋಡ (65) ವೃದ್ಧೆಯನ್ನು ಸಾಲಗಾರ ಹೆದರಿಸಿದ್ದಾನೆ. ಶಾಂತಾಬಾಯಿ, ಜಾಲಗೇರಿ ನಿವಾಸಿ ಮಾದಣ್ಣ ಲಾಲಿಯಿಂದ 30 ಸಾವಿರ ಕೈಸಾಲ ಪಡೆದಿದ್ದರು. ವೃದ್ಧೆ ಹಣ ನೀಡಲು ವಿಳಂಬ ಮಾಡಿದ ಹಿನ್ನಲೆ, ವೃದ್ಧೆಯ ಸೀರೆ ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಲ್ಲದೇ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

     

    ಈ ಕುರಿತು ಶಾಂತಾಬಾಯಿ, ನನಗೆ ನ್ಯಾಯ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ವೃದ್ಧೆಯು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ತಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ

  • ಮಾನಸಿಕ ಅಸ್ವಸ್ಥನಿಂದ ಬಾಟಲಿ ಹಿಡಿದು ಹುಚ್ಚಾಟ

    ಮಾನಸಿಕ ಅಸ್ವಸ್ಥನಿಂದ ಬಾಟಲಿ ಹಿಡಿದು ಹುಚ್ಚಾಟ

    ಹಾವೇರಿ: ಮಾನಸಿಕ ಅಸ್ವಸ್ಥನೊಬ್ಬ ಕೈಯಲ್ಲಿ ಬಾಟಲಿ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಯತ್ನ ನಡೆಸಿ ಹುಚ್ಚಾಟ ನಡೆಸಿದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ.

    ಬಸವೇಶ್ವರ ನಗರ ಹಾಗೂ ವಿದ್ಯಾನಗರದ ಜನರು ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದ ಆತಂಕಗೊಂಡಿದ್ದಾರೆ. ಪ್ರಭು ಹಿರೇಮಠ ಎಂಬ ಮಾನಸಿಕ ಅಸ್ವಸ್ಥ ಹುಚ್ಚಾಟ ನಡೆಸಿದ್ದಾನೆ. ಕೆಲವು ವರ್ಷಗಳಿಂದ ನಗರದಲ್ಲಿ ಓಡಾಡಿಕೊಂಡಿರುವ ಮಾನಸಿಕ ಅಸ್ವಸ್ಥ, ಇಂದು ಬಾಟಲಿ ಹಿಡಿದು ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ.

    ಅದೃಷ್ವಶಾತ್ ಯಾರ ಮೇಲೆಯೂ ಹಲ್ಲೆ ಆಗಿಲ್ಲ. ಮಾನಸಿಕ ಅಸ್ವಸ್ಥನಾದ್ದರಿಂದ ಪ್ರಭು, ಮೆಡಿಕಲ್ ಶಾಪ್ ಸೇರಿದಂತೆ ಕೆಲವೆಡೆ ನಿಂತವರ ಮೇಲೆ ಬಾಟಲ್‍ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಬಸವೇಶ್ವರ ನಗರ ಮತ್ತು ವಿದ್ಯಾನಗರದ ಜನರು ಗಾಬರಿಗೊಂಡಿದ್ದಾರೆ. ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

  • 5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ

    5 ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸಿದ್ದು ಪಕ್ಕ ಪ್ರತ್ಯಕ್ಷ

    ಚಾಮರಾಜನಗರ: 5 ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಯೊಬ್ಬ ಬುಧವಾರ ಮೇಕೆದಾಟು ಪಾದಯಾತ್ರೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಕ ಪ್ರತ್ಯಕ್ಷನಾಗಿದ್ದಾನೆ.

    ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ತಲೆ ಮರಸಿಕೊಂಡಿರುವ ಪ್ರಮುಖ ಆರೋಪಿ. ಜಾತಿನಿಂದನೆ ಪ್ರಕರಣ ಸೇರಿದಂತೆ ಇನ್ನಿತರ ಪ್ರಕರಣಗಳ ಆಧಾರದ ಮೇಲೆ ಈತನ ವಿರುದ್ಧ ಸಮನ್ಸ್ ಜಾರಿಯಾಗಿತ್ತು. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಬೇಗೂರು ಮಹಿಳಾ ಪಿಎಸ್‍ಐ, ಎಎಸ್‍ಐ ಮತ್ತು 3 ಕಾನ್‍ಸ್ಟೇಬಲ್‍ಗಳು ತೆರಳಿದ್ದರು. ಈ ವೇಳೆ ಆರೋಪಿ ಸೇರಿದಂತೆ 15 ಕ್ಕೂ ಹೆಚ್ಚು ಮಂದಿ ಪೊಲೀಸರ ಮೇಲೆ ಮಂಗಳವಾರ ತಡರಾತ್ರಿ ಗುಂಪು ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ಹಲ್ಲೆ ಬಳಿಕ ಪರಾರಿಯಾಗಿದ್ದ ಸಿದ್ದರಾಜು ನೇರ ಮೇಕೆದಾಟು ಪಾದಯಾತ್ರೆಗೆ ಹೋಗಿದ್ದು, ಸಿದ್ದರಾಮಯ್ಯ ಬಳಿ ತೆರಳಿ ನಿಂತಿದ್ದ ಫೋಟೋ ಈಗ ಲಭ್ಯವಾಗಿದೆ.

  • ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಮೀನುಗಾರರ 2 ಗುಂಪುಗಳ ನಡುವೆ ಕಿತ್ತಾಟ- 7 ಮಂದಿಗೆ ಗಾಯ

    ಅಮರಾವತಿ: ಮೀನುಗಾರರ 2 ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ 7 ಮಂದಿ ಗಾಯಗೊಂಡಿದ್ದು, 6 ದೋಣಿಗಳಿಗೆ ಬೆಂಕಿ ಹಚ್ಚಿ ಸುಟ್ಟಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಬಂಗಾಳಕೊಲ್ಲಿಯ ನಿರ್ಬಂಧಿತ ಪ್ರದೇಶದಲ್ಲಿ ರಿಂಗ್ ನೆಟ್ ಬಳಕೆಗೆ ಸಂಬಂಧಿಸಿ ವಾದ ನಡೆದಿತ್ತು. ವಾದ ಮಿತಿ ಮೀರಿ ಪರಸ್ಪರ ಕಿತ್ತಾಟ ನಡೆದಿದೆ. ಜೊತೆಗೆ ಒಬ್ಬರ ದೋಣಿ ಮೇಲೆ ಇನ್ನೊಬ್ಬರು ದಾಳಿ ನಡೆಸಿದ್ದಾರೆ. ಇದರಿಂದಾಗಿ ಹಲವರು ದೋಣಿಯಿಂದ ಕೆಳಗೆ ಬಿದ್ದು ಗಾಯಗಳಾಗಿದೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು, ಮೀನುಗಾರರನ್ನು ಸಮಾಧಾನಪಡಿಸಿ ಹೆಚ್ಚಿನ ಅನಾಹುತಗಳನ್ನು ತಡೆದಿದ್ದಾರೆ.

    POLICE JEEP

    ಈ ಹಿಂದೆಯೂ ಸಾಂಪ್ರದಾಯಿಕ ಬಲೆ ಬಳಸುವ ಮೀನುಗಾರರು ಮತ್ತು ರಿಂಗ್ ನೆಟ್‌ಗಳನ್ನು ಬಳಸುವವರ ನಡುವೆ ಗಲಾಟೆ ನಡೆದಿತ್ತು. ಕರಾವಳಿಯ 8 ಕಿಮೀ ವ್ಯಾಪ್ತಿಯಲ್ಲಿ ರಿಂಗ್ ನೆಟ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೂ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕುಮಾರ್ ಸಿನ್ಹಾ ಮಾತನಾಡಿ, ಗಲಾಟೆ ನಡೆದ ವಾಸವಾನಿಪಾಲೆಂ ಮತ್ತು ಜಲಾರಿಪೇಟಾ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆರಿಗೆಗಾಗಿ ಗರ್ಭಿಣಿಯನ್ನು ಮಂಚದ ಮೇಲೆ ಮಲಗಿಸಿ ಹೊತ್ತೊಯ್ದ ಗ್ರಾಮಸ್ಥರು!

    ಸಾಂಪ್ರದಾಯಿಕ ಮೀನುಗಾರರು ಈ ಬಲೆಗಳ ಬಳಕೆಯನ್ನು ವಿರೋಧಿಸುತ್ತಾರೆ. ಏಕೆಂದರೆ ಅದು ಸುತ್ತಲಿರುವ ಎಲ್ಲಾ ಮೀನುಗಳನ್ನು ಸೆರೆಹಿಡಿಯುತ್ತದೆ. ಇದರಿಂದಾಗಿ ಸ್ಥಳೀಯ ಮೀನುಗಾರರಿಗೆ ನಷ್ಟವಾಗುತ್ತದೆ. ಇದರಿಂದಾಗಿ 2020ರ ಡಿಸೆಂಬರ್‌ನಲ್ಲಿ ಆಂಧ್ರಪ್ರದೇಶ ಸರ್ಕಾರವು ರಿಂಗ್ ನೆಟ್‌ಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಇದನ್ನೂ ಓದಿ: ಆಸ್ತಿ ವಿವಾದಕ್ಕೆ 70ರ ತಂದೆಯ ಕತ್ತು ಸೀಳಿ ಹತ್ಯೆಗೈದ ಮಗ

  • ತೆಂಗಿನಕಾಯಿ ಕಳ್ಳನಿಗೆ ದೊಣ್ಣೆ ಏಟು

    ತೆಂಗಿನಕಾಯಿ ಕಳ್ಳನಿಗೆ ದೊಣ್ಣೆ ಏಟು

    ತುಮಕೂರು: ತೆಂಗಿನ ಕಾಯಿ ಕದ್ದ ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ತುರುವೇಕೆರೆ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ನಡೆದಿದೆ.

    ಹರೀಶ್ ತೆಂಗಿನಕಾಯಿ ಕದ್ದ ಕಳ್ಳ. ಈತ ರಾಜು ಎಂಬವರ ತೋಟದ ತೆಂಗಿನ ಕಾಯಿಯನ್ನು ಕಳ್ಳತನ ಮಾಡುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಳಿಕ ರಾಜು ಕಳ್ಳನನ್ನು ತೋಟದಲ್ಲಿದ್ದ ಕಂಬಕ್ಕೆ ಕಟ್ಟಿ ಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಆರ್‌ಬಿಐ ಪರಿಶೀಲನೆ ವೇಳೆ ನಕಲಿ ನೋಟುಗಳು ಪತ್ತೆ

    ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾಠಿ ಚಾರ್ಜ್ ಪ್ರಕರಣ ಸಿಐಡಿಗೆ ಒಪ್ಪಿಸುತ್ತೇನೆ: ಆರಗ ಜ್ಞಾನೇಂದ್ರ

    ಲಾಠಿ ಚಾರ್ಜ್ ಪ್ರಕರಣ ಸಿಐಡಿಗೆ ಒಪ್ಪಿಸುತ್ತೇನೆ: ಆರಗ ಜ್ಞಾನೇಂದ್ರ

    ಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಠಿ ಚಾರ್ಜ್ ಮಾಡಿರುವ ಪ್ರಕರಣವನ್ನು ಸಿಐಡಿಗೆ ಒಪ್ಪಿಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

    ಕೋಟತಟ್ಟು ಗ್ರಾಮಕ್ಕೆ ಭೇಟಿ ನೀಡಿದ ಅವರು, ಪ್ರಕರಣದ ಕುರಿತು ಸಿಐಡಿ ಸಂಸ್ಥೆಯ ಮೂಲಕ ಸಮಗ್ರ ತನಿಖೆ ಮಾಡುತ್ತೇವೆ. ಪೊಲೀಸ್ ಪ್ರತಿ ದೂರಿನ ಬಗ್ಗೆ ಚರ್ಚೆ ಮಾಡುತ್ತೇವೆ. ಸಂತ್ರಸ್ತ ಸಮುದಾಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    araga jnanendra

    ಎರಡು ದಿನ ಸುಮ್ಮನಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮೂರನೇ ದಿನ ಕೇಸು ಮಾಡಿದ್ದಾನೆ. ಸರ್ಕಾರಿ ನೌಕರಿಗೆ ಅಡ್ಡಿ ಎಂದು ಪ್ರತಿ ದೂರು ನೀಡಿದ್ದಾರೆ. ಇದು ಮೇಲ್ನೋಟಕ್ಕೆ ಸುಳ್ಳು ಕೇಸ್ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಈ ರೀತಿ ಒಬ್ಬ ಪೋಲೀಸ್ ಸುಳ್ಳು ಕೇಸು ಕೊಡಬಾರದು. ಇದು ಬಹಳ ದೊಡ್ಡ ಅಪರಾಧ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು

    ಸಾಮಾನ್ಯ ಜನ ಇದನ್ನೆಲ್ಲ ಮಾಡುತ್ತಾರೆ ನಿಜ. ಆದರೆ ಒಬ್ಬ ಪೊಲೀಸ್ ಈ ಕೆಲಸ ಮಾಡಬಾರದಿತ್ತು. ಕೋಟ ಎಸ್‌ಐ ಮೇಲಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ಮನುಷ್ಯತ್ವವನ್ನೇ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸ್ ನೇಮಕ ಮಾಡುತ್ತೇವೆ. ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯೋರು ಯಾರು ಎಂದ ಅವರು, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾರೆ. ಹತ್ತು ಲಕ್ಷ ಪೊಲೀಸ್ ಸಿಬ್ಬಂದಿ ಇದ್ದಾರೆ. ಇಂಥ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಅವಮಾನ ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವಸ್ಥಾನಗಳಿಗೆ ಸ್ವತಂತ್ರ ಕೊಟ್ಟರೆ ಇವರಿಗೇಕೆ ಉರಿ – ಡಿಕೆಶಿ ವಿರುದ್ಧ ಈಶ್ವರಪ್ಪ ವಾಗ್ದಾಳಿ

    ನಮ್ಮಲ್ಲಿ ಕೆಟ್ಟವರಿಲ್ಲ ಅಂತ ನಾನು ಸಮರ್ಥನೆ ಮಾಡಿಕೊಳ್ಳಲು ಹೋಗೋದಿಲ್ಲ. ಆದರೆ ಒಳ್ಳೆಯ ಹಾಗೂ ದಕ್ಷ ಪೊಲೀಸ್ ಅಧಿಕಾರಿಗಳು ಇದ್ದಾರೆ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದನ್ನೂ ಓದಿ: PM ಕಿಸಾನ್ ಯೋಜನೆ 10ನೇ ಕಂತಿನಡಿ ಕರ್ನಾಟಕಕ್ಕೆ 685 ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ

    ರಾಜ್ಯ ಸರ್ಕಾರ ಕೊರಗ ಕುಟುಂಬದ ಜೊತೆ ಇದೆ ಎಂದ ಅವರು, ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡುತ್ತೇವೆ ಎಂದ ಅವರು, ಈಗಾಗಲೇ ಸಂತ್ರಸ್ತರ 6 ಕುಟುಂಬಕ್ಕೆ 50 ಸಾವಿರ ಚೆಕ್ ಹಸ್ತಾಂತರಿಸಿದರು. ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಸಚಿವ ಕೋಟ ಉಪಸ್ಥಿತರಿದ್ದರು.

  • ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಚಿಕ್ಕಬಳ್ಳಾಪುರ: ನೈಟ್ ಕರ್ಪ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿಯ ವೈಟ್ ನಿರ್ವಾಣ ಬೈ ಜಡೆ ರೆಸಾರ್ಟ್ ನಲ್ಲಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಈ ರೆಸಾರ್ಟ್ ನಲ್ಲಿ ತಡರಾತ್ರಿ ಡಿಜೆ ಹಾಕಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್ ಹಾಗೂ ಮೂವರು ಸಿಬ್ಬಂದಿ ಭೇಟಿ ನೀಡಿದ್ದರು. ಆದರೆ ಗೇಟ್ ಗೆ ಬೀಗ ಹಾಕಿದ್ದ ರೆಸಾರ್ಟ್ ಮಾಲೀಕರು ಸಾಕಷ್ಟು ಸಮಯ ಬೀಗ ತೆಗೆದಿಲ್ಲ. ನಂತರ ಗೇಟ್ ಬೀಗ ತೆಗೆದಾಗ ಕೆಲ ಪಾನಮತ್ತ ಯುವಕರು ಹೊರ ಬಂದು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಗೇಟ್ ಬಳಿಯೇ ಪೊಲೀಸರು ಹಾಗೂ ಯುವಕರ ನಡುವೆ ತಳ್ಳಾಟ, ನೂಕಾಟ ಆಗಿದೆ. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

    ಈ ವೇಳೆ ಪೊಲೀಸರ ಮೇಲೆಯೇ ಪಾನಮತ್ತ ಯುವಕರ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಚಿಕ್ಕಬಳ್ಳಾಪುರ ಇನ್ಸ್ಪೆಕ್ಟರ್ ಅವರೊಂದಿಗೆ ಗಲಾಟೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ಎಸ್ಪಿ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಪಾನಮತ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: 3 ಕೋಟಿ ವೆಚ್ಚದ ರಸ್ತೆ ನಿರ್ಮಾಣ, 1 ಕೋಟಿಯ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ: ಜಗದೀಶ್ ಶೆಟ್ಟರ್

  • ವಿಮಾನದಲ್ಲಿ ಮಾಸ್ಕ್ ಇಲ್ಲದೇ ಊಟ ಮಾಡಿದ್ದಕ್ಕೆ ವೃದ್ಧನ ಮೇಲೆ ಮಹಿಳೆ ಹಲ್ಲೆ!

    ಟಿಬಿಲಿಸಿ: ಜಾರ್ಜಿಯಾದ ಅಟ್ಲಾಂಟಾ ಕಡೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳು, ವೃದ್ಧನ ಜೊತೆ ವಾಗ್ವಾದ ನಡೆಸಿ ಹಲ್ಲೆ ಮಾಡಿದ್ದು, ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಬಂಧಿಸಲಾಗಿದೆ.

    ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಮಹಿಳೆ, ಮಾಸ್ಕ್ ಧರಿಸದೇ ಊಟ ಮಾಡುತ್ತಿದ್ದ ವೃದ್ಧರೊಬ್ಬರ ಜೊತೆ ವಾಗ್ವಾದ ನಡೆಸಿದ್ದಾಳೆ. ಅಲ್ಲದೆ ಹಲ್ಲೆ ಕೂಡ ಮಾಡಿದ್ದಾಳೆ. ಆದರೆ ಹಲ್ಲೆ ನಡೆಸಿದ ಮಹಿಳೆ ಕೂಡಾ ಸರಿಯಾಗಿ ಮಾಸ್ಕ್ ಧರಿಸಿಲ್ಲ ಎಂಬುದು ಹಾಸ್ಯಕರ ಸಂಗತಿ.

    ಊಟ ಮಾಡುತ್ತಿದ್ದ ವೃದ್ಧನಿಗೆ ಮಹಿಳೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾಳೆ. ಆಗ ವೃದ್ಧ ತಾನು ಊಟ ಮಾಡುತ್ತಿರುವುದನ್ನು ಆಕೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಮಹಿಳೆ ಆತನ ಮೆಲೆ ಎಗರಾಡಿ ಹಲ್ಲೆ ಮಾಡಿದ್ದಾಳೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!

    ಇಬ್ಬರೂ ಅವಹೇಳನಕಾರಿ ಪದಗಳಿಂದ ವಾಗ್ವಾದ ನಡೆಸುತ್ತಿದ್ದಾಗ ವಿಮಾನದ ವ್ಯವಸ್ಥಾಪಕಿ ಹಾಗೂ ಫ್ಲೈಟ್‌ನ ಅಟೆಂಡರ್ ಅವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ಅದನ್ನು ನಿರ್ಲಕ್ಷಿಸಿ ವೃದ್ಧನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ.

     

    View this post on Instagram

     

    A post shared by TRILLBILLY ????️ (@whiskeytattoo)

    ಫ್ಲೈಟ್‌ನ ಅಟೆಂಡರ್ ಮಹಿಳೆಯನ್ನು ಅಲ್ಲಿಂದ ಬಿಡಿಸಿ, ಆಕೆಯ ಆಸನದಲ್ಲಿ ಕೂರಿಸುವಲ್ಲಿ ಕೊನೆಗೂ ಸಫಲನಾಗುತ್ತಾನೆ. ವಿಮಾನ ಲ್ಯಾಂಡ್ ಆದಾಗ ಆಕೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

  • ರಿಕ್ಷಾ ಕೊಡಿಸೆಂದು ತಾಯಿ ಜೊತೆ ಜಗಳವಾಡ್ತಿದ್ದವ ಸಹೋದರನಿಂದ್ಲೇ ಕೊಲೆಯಾದ!

    ರಿಕ್ಷಾ ಕೊಡಿಸೆಂದು ತಾಯಿ ಜೊತೆ ಜಗಳವಾಡ್ತಿದ್ದವ ಸಹೋದರನಿಂದ್ಲೇ ಕೊಲೆಯಾದ!

    ಶಿವಮೊಗ್ಗ: ಆಟೋ ಕೊಡಿಸಿ ಎಂದು ತಾಯಿ ಜೊತೆ ಜಗಳವಾಡುತ್ತಿದ್ದವನನ್ನು ಸಹೋದರನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

    ಗುರುಪ್ರಸಾದ್ (26) ಕೊಲೆಯಾಗಿರುವ ಯುವಕ. ಈ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಗುರುಪ್ರಸಾದ್ ನನ್ನು ಸಹೋದರ ವಿಶ್ವನಾಥ್ ಕೊಲೆ ಮಾಡಿದ್ದಾನೆ.

    ತನಗೆ ಆಟೋ ಕೊಡಿಸಿ ಇಲ್ಲವಾದರೆ ಆಸ್ತಿಯಲ್ಲಿ ಭಾಗ ಮಾಡಿಕೊಡಿ ಎಂದು ಗುರುಪ್ರಸಾದ್ ತನ್ನ ತಾಯಿ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಸಹೋದರ ವಿಶ್ವನಾಥ್, ನೀನೇ ದುಡಿದು ಆಟೋ ಕೊಂಡುಕೊಳ್ಳುವಂತೆ ಬುದ್ಧಿಮಾತು ಹೇಳಿದ್ದಾನೆ. ಅಲ್ಲದೆ ಅಮ್ಮ ಏಕೆ ನಿನಗೆ ಆಟೋ ಕೊಡಿಸಬೇಕು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ವಿಶ್ವನಾಥ್, ಗುರುಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ.

    ಗಾರೆ ಕೆಲಸಕ್ಕೆ ಬಳಸುವ ಆಯುಧದಿಂದ ಹಲ್ಲೆಗೈದಿದ್ದು, ಈ ವೇಳೆ ಮಟ್ಟಗೋಲು ಆತನ ತಲೆಗೆ ತಾಗಿದೆ. ಪರಿಣಾಮ ತಲೆ ಮತ್ತು ಕಿವಿ ಭಾಗದಲ್ಲಿ ರಕ್ತಸ್ರಾವವಾಗಿ ಗುರುಪ್ರಸಾದ್ ಮೃತಪಟ್ಟಿದ್ದಾನೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಡಿಲು ಬಡಿತದಿಂದ ವ್ಯಕ್ತಿ ಜಸ್ಟ್ ಮಿಸ್ – ಬೆಚ್ಚಿ ಬೀಳಿಸುವ ವೀಡಿಯೋ ವೈರಲ್

    POLICE JEEP