Tag: ಹಲ್ಲೆ

  • ಪ್ರೀತಿಸಿದ ಯುವತಿಗೆ ಮನಸ್ಸೋ ಇಚ್ಛೆ ಚಾಕು ಇರಿದ- ಪೊಲೀಸರಿಗೆ ಶರಣಾದ ಪ್ರಿಯಕರ

    ಪ್ರೀತಿಸಿದ ಯುವತಿಗೆ ಮನಸ್ಸೋ ಇಚ್ಛೆ ಚಾಕು ಇರಿದ- ಪೊಲೀಸರಿಗೆ ಶರಣಾದ ಪ್ರಿಯಕರ

    ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಜೋಡಿಯ ನಡುವೆ ಮಾತಿನ ಚಕಮಕಿ ನಡೆದು, ಯುವಕ ಚಾಕುವಿನಿಂದ ಇರಿದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಯೋಗಿ ನಾರಾಯಣಪ್ಪ ಬಡಾವಣೆಯಲ್ಲಿ ಸಂಭವಿಸಿದೆ.

    ಪ್ರಭ (28 ವರ್ಷ) ಹಲ್ಲೆಗೊಳಗಾದ ಪ್ರೀಯತಮೆಯಾಗಿದ್ದಾಳೆ. ಈಕೆ ಮೈಸೂರು ಮೂಲದವಳಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ತಾಯಿ ಮಗು ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಇದೇ ಆಸ್ಪತ್ರೆಯಲ್ಲಿ ಅಕೌಂಟೆಂಟ್ ಸ್ಟಾಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗಿರೀಶ್ (32 ವರ್ಷ) ಚಾಕುವಿನಿಂದ ಇರಿದಿರುವ ಆರೋಪಿಯಾಗಿದ್ದಾನೆ.

    POLICE JEEP

    ನಡೆದಿದ್ದೇನು?: ಪ್ರಭ ಮತ್ತು ಗಿರೀಶ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡು ಮನೆಯ ಕಡೆ ಮದುವೆಯ ಮಾತುಕತೆ ನಡೆದು ನಿಶ್ಚಿತಾರ್ಥದ ಸಿದ್ಧತೆ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರೆ ಗಿರೀಶ್ ಯಾಕೆ ಚಾಕು ಇರಿದ ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಕುರಿತಂತೆ ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪವರ್ ಫುಲ್ ಜೇಮ್ಸ್ ಟೀಸರ್ ಔಟ್ – ಅಪ್ಪು ಎಂಟ್ರಿಗೆ ಅಭಿಮಾನಿಗಳು ಫಿದಾ

    ಇಂದು ಬೆಳಗ್ಗೆ ಯುವತಿಯ ಮನೆಯಲ್ಲಿ ಘಟನೆ ನಡೆದಿದ್ದು, ರಕ್ತದ ನಡುವಿನಲ್ಲಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆರೋಪಿ ಗಿರೀಶ್ ಪೊಲೀಸರಿಗೆ ಶರಣಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ.

  • ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮಾರಾಮಾರಿ – ಚಾಕು ಇರಿತ

    ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮಾರಾಮಾರಿ – ಚಾಕು ಇರಿತ

    ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ವಿದ್ಯಾರ್ಥಿಯೋರ್ವನಿಗೆ ಕೈ ಹಾಗೂ ಬೆನ್ನಿನ ಭಾಗಕ್ಕೆ ಚಾಕು ಇರಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ.

    ಸಂದೀಪ್ ಹಲ್ಲೆಗೊಳಗಾದ ವಿದ್ಯಾರ್ಥಿ. ಇದೇ ಸಂದರ್ಭದಲ್ಲಿ ಧನುಷ್ ಹಾಗೂ ವಿಕ್ರಂ ಎಂಬವರಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಕುಶಾಲನಗರದ ಸುಂದರ ನಗರ ಕಾಲೇಜಿನಲ್ಲಿ ಹಿಜಬ್‌ಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಕ್ಲುಲ್ಲಕ ಕಾರಣಕ್ಕೆ ಗುಂಪಿನಲ್ಲಿ ಹೊಡೆದಾಟ ನಡಿದಿದೆ. ಅಷ್ಟೇ ಅಲ್ಲದೆ ಕೈ ಕೈಮಿಲಾಯಿಸಿದ ವಿದ್ಯಾರ್ಥಿಗಳು ಬಳಿಕ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ:  ಹಿಜಬ್ – ಕೇಸರಿ ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಿ: ರೇಣುಕಾಚಾರ್ಯ

    POLICE JEEP

    ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂದೀಪ್ ಎಂಬಾತನ ಕೈ ಹಾಗೂ ಬೆನ್ನಿನ ಭಾಗಕ್ಕೆ ಚಾಕು ಇರಿದಿದ್ದಾರೆ. ಹಾಗೂ ಧನುಷ್, ವಿಕ್ರಂ ಎಂಬವರಿಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಬಳಿಕ ಗಾಯಾಳುಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹುಡುಗಿಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲಹ ಏರ್ಪಾಟಿದೆ ಎಂದು ಹೇಳಲಾಗಿದೆ. ಸದ್ಯ ಕುಶಾಲನಗರ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ನೈಜ ಘಟನೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

  • ಪೊಲೀಸ್ ಮೇಲೆ ಪುಂಡನ ಹಲ್ಲೆ

    ಪೊಲೀಸ್ ಮೇಲೆ ಪುಂಡನ ಹಲ್ಲೆ

    ಮಂಡ್ಯ: ಮಾಸ್ಕ್, ಹೆಲ್ಮೆಟ್ ತಪಾಸಣೆ ಮಾಡುವ ಪೊಲೀಸರ ಮೇಲೆ ಪುಂಡರೊಬ್ಬ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

    ಎಸ್‍ಎಐ ಮಹೇಶ್ ಪ್ರಭು ಹಲ್ಲೆಗೊಳಗಾದ ಪೊಲೀಸ್ ಹಾಗು ನಾಗೇಶ್ ಹಲ್ಲೆ ಮಾಡಿದ ಆರೋಪಿ. ಶನಿವಾರ ಸಂಜೆ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದಲ್ಲಿ ಎಸ್‍ಎಐ ಮಹೇಶ್ ಪ್ರಭು ಎಂಬವರ ಮೇಲೆ ಶಾಂತಿನಗರದ ನಿವಾಸಿ ನಾಗೇಶ್ ಎಂಬಾತ ಹಲ್ಲೆ ಮಾಡಿದ್ದಾನೆ.

    ಎಸ್‍ಐ ಮಹೇಶ್ ಪ್ರಭು ತಮ್ಮ ಸಿಬ್ಬಂದಿಯೊಂದಿಗೆ ಪಾಂಡವಪುರ ಪಟ್ಟಣದಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ತಪಾಸಣೆ ಮಾಡಿ ದಂಡ ವಿಧಿಸುತ್ತಿದ್ದರು. ಈ ವೇಳೆ ನಾಗೇಶ್ ಹೆಲ್ಮೆಟ್, ಮಾಸ್ಕ್ ಎರಡನ್ನು ಹಾಕದೇ ಸ್ಥಳಕ್ಕೆ ಬಂದಿದ್ದಾರೆ.

    ಇದಕ್ಕೆ ಪ್ರಶ್ನಿಸಿದ ಮಹೇಶ್ ಪ್ರಭುಗೆ ನಾಗೇಶ್ ಏರು ಧ್ವನಿಯಲ್ಲಿ ಜೋರಾಗಿ ಮಾತನಾಡುತ್ತಾನೆ. ಆದರೂ ಪೊಲೀಸರು ಇದನ್ನು ಪ್ರಶ್ನೆ ಮಾಡಿ ದಂಡ ಕಟ್ಟುವಂತೆ ನಾಗೇಶ್‍ಗೆ ಹೇಳುತ್ತಾರೆ. ನಂತರ ನಾಗೇಶ್ ಕೊಪದಿಂದ ಪೊಲೀಸರಿಗೆ ಬೈಯ್ಯುವ ಕೆಲಸಕ್ಕೆ ಮುಂದಾಗುತ್ತಾರೆ. ಹೀಗಾಗಿ ಪೊಲೀಸರು ಪೊಲೀಸ್ ಠಾಣೆಗೆ ಅವರನ್ನು ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ವೇಳೆ ನಾಗೇಶ್ ಎಸ್‍ಎಸ್‍ಐ ಮಹೇಶ್ ಪ್ರಭು ಮೇಲೆ ಹಲ್ಲೆಗೆ ಮುಂದಾದರು. ಇದನ್ನೂ ಓದಿ:  ಪುನೀತ್ ಫೋಟೋಗಳಿಗೆ ಫುಲ್ ಡಿಮಾಂಡ್ – ಅಂಗಡಿ, ದೇವರ ಮನೆಯಲ್ಲಿಟ್ಟು ಪೂಜೆ

    POLICE JEEP

    ಅಲ್ಲೇ ಇದ್ದ ಸ್ಥಳೀಯರು ಪೊಲೀಸರು ಬಿಡಿಸಲು ಪ್ರಯತ್ನಿಸಿದರೂ, ಮಹೇಶ್ ಪ್ರಭು ಅವರ ಕಾಲರ್ ಹಿಡಿದು ನಾಗೇಶ್ ಹಲ್ಲೆಗೆ ಮುಂದಾಗುತ್ತಾನೆ. ಇದಾದ ಬಳಿಕ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ನಾಗೇಶ್‍ನನ್ನು ಬಂಧಿಸಿ ಈತನ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬೆಳಗಾವಿ ಮಾತ್ರವಲ್ಲ, ಬೆಂಗ್ಳೂರಲ್ಲೂ ಅನ್ಯಭಾಷಿಕರ ದರ್ಬಾರ್ – ಪಬ್‍ನಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಹಲ್ಲೆ ಯತ್ನ

  • ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

    ಬಿಜೆಪಿ ಶಾಸಕ ನಿತೇಶ್ ರಾಣೆಗೆ ಜಾಮೀನು ನಿರಾಕರಿಸಿದ ಕೋರ್ಟ್

    ಮುಂಬೈ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ ಬಿಜೆಪಿ ಶಾಸಕ ನಿತೇಶ್ ರಾಣೆಗೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

    ಜಿಲ್ಲಾ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್‌ಬಿ ರೋಟೆ ಅವರು ರಾಣೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. ಕಳೆದ ಡಿಸೆಂಬರ್ 2021ರಲ್ಲಿ ಸಿಂಧುದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶಿವಸೇನಾ ಕಾರ್ಯಕರ್ತ ಸಂತೋಷ್ ಪರಬ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣವನ್ನು ದಾಖಲಿಸಲಾಗಿತ್ತು.

    ಪ್ರಕರಣ ಸಂಬಂಧಿಸಿ ರಾಣೆಯನ್ನು 10 ದಿನಗಳ ಕಾಲ ಬಂಧಿಸದಂತೆ ಸುಪ್ರೀಂ ಕೋರ್ಟ್ ಕಳೆದ ಗುರುವಾರ ಮಹಾರಾಷ್ಟ್ರ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಶಾಸಕ ನಿತೇಶ್ ರಾಣೆ ಬಂಧನದ ಪೂರ್ವ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡುವಾಗ ಸುಪ್ರೀಂ ಕೋರ್ಟ್ ಮುಂದೆ ನಿಯಮಿತ ಜಾಮೀನು ಪಡೆಯಲು ಕೇಳಿಕೊಂಡಿದ್ದರು. ಇದಕ್ಕೂ ಮೊದಲು, ಬಾಂಬೆ ಹೈಕೋರ್ಟ್ ಜನವರಿ ೧೭ ರಂದು ಪ್ರಕರಣದಲ್ಲಿ ನಿತೇಶ್ ರಾಣೆಗೆ ಪೂರ್ವ ಬಂಧನ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನೂ ಓದಿ: UP Election: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲಿಲ್ಲ ಅಪರ್ಣಾ ಯಾದವ್ ಹೆಸರು

    ಕಳೆದ ತಿಂಗಳು ರಾಜ್ಯ ಶಾಸಕಾಂಗ ಸಂಕೀರ್ಣದ ಹೊರಗೆ ಅವಮಾನ ಮತ್ತು ನೋವನ್ನು ಅನುಭವಿಸಿದ ಶಾಸಕ ರಾಣೆ ಮಹಾರಾಷ್ಟ್ರದ ಸರ್ಕಾರ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಅನೇಕ ಬಾರಿ ಹೇಳಿಕೆ ನೀಡಿದ್ದರು. ರಾಣೆ ಕುಟುಂಬವು ಈ ಮೊದಲು ಶಿವಸೇನೆಯೊಂದಿಗೆ ದೀರ್ಘಕಾಲ ಸಂಬಂಧ ಹೊಂದಿತ್ತು. ಇದನ್ನೂ ಓದಿ: Budget 2022 : ಮೋದಿ ಸೂಚನೆಯಂತೆ ಜನರಿಂದ ಹೆಚ್ಚುವರಿ ತೆರಿಗೆ ಸಂಗ್ರಹ ಇಲ್ಲ

  • ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಅತ್ಯಾಚಾರ, ಹಲ್ಲೆ ಆರೋಪ – ಫುಟ್‍ಬಾಲ್ ಆಟಗಾರ ಅರೆಸ್ಟ್

    ಲಂಡನ್: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಭಾನುವಾರ ಫುಟ್‍ಬಾಲ್ ಆಟಗಾರ ಮೇಸನ್ ಗ್ರೀನ್‍ವುಡ್‍ನನ್ನು ಅಮಾನತುಗೊಳಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್, ಸಾಮಾಜಿಕ ಜಾಲತಾಣದಲ್ಲಿ ಗ್ರೀನ್‍ವುಡ್, ಮಹಿಳೆಯ ಮೇಲೆ ಹಲ್ಲೆ ಎಸೆಗಿದ್ದಾರೆಂಬ ಆರೋಪದ ಫೋಟೋಗಳು ವೈರಲ್ ಆಗಿವೆ. ಆಟಗಾರನ ಮೇಲೆ ಅತ್ಯಾಚಾರ ಆರೋಪವೂ ಕೇಳಿಬಂದಿದೆ. ಆರೋಪ ಸಾಬೀತಾಗುವವರೆಗೆ ಕ್ಲಬ್ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ಯಾವುದೇ ರೀತಿಯ ಹಿಂಸೆಯನ್ನು ಕ್ಷಮಿಸುವುದಿಲ್ಲ. ಆರೋಪವು ಸಾಬೀತಾಗುವವರೆಗೆ ಮೇಸನ್ ಗ್ರೀನ್‍ವುಡ್ ತರಬೇತಿಗೆ ಹಿಂತಿರುಗುವಂತಿಲ್ಲ. ಪೊಲೀಸ್ ತನಿಖೆಯ ಮುಂದಿನ ಸೂಚನೆ ಬರುವವರೆಗೆ ಪಂದ್ಯಗಳನ್ನು ಆಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಹಲ್ಲೆ ಆರೋಪದ ಕುರಿತು ಗ್ರೀನ್‍ವುಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೀಡಿಯೋ, ಛಾಯಾಚಿತ್ರಗಳು ಮತ್ತು ಆಡಿಯೋ ರಿಕಾರ್ಡಿಂಗ್ ಸೇರಿದಂತೆ ಗ್ರೀನ್‍ವುಡ್ ವಿರುದ್ಧದ ಆರೋಪಗಳನ್ನು ಭಾನುವಾರ ಬೆಳಿಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ನಂತರದಲ್ಲಿ ಅಳಿಸಲಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ಘಟನೆಯ ಕೆಲ ತುಣುಕುಗಳನ್ನು ಪೋಸ್ಟ್ ಮಾಡಿದ್ದಾರೆ. ನಂತರ ಅತ್ಯಾಚಾರ ಮತ್ತು ಹಲ್ಲೆ ಆರೋಪದ ಶಂಕೆಯ ಮೇಲೆ ಗ್ರೀನ್‍ವುಡ್‍ನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಆಟಗಾರನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೀದಿ ನಾಯಿ ಮೇಲೆ ಕಾರು ಹತ್ತಿಸಿದ FIR ಏನಾಯ್ತು: ಸಿಎಂ, ತೇಜಸ್ವಿ ಸೂರ್ಯಗೆ ರಮ್ಯಾ ಪ್ರಶ್ನೆ

    ಗ್ರೀನ್‍ವುಡ್ 24 ಪಂದ್ಯಗಳನ್ನಾಡಿದ್ದು, 6 ಗೋಲು ಮಾಡಿದ್ದಾರೆ. ಯುನೈಟೆಡ್‍ನ ಅಕಾಡೆಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಒಮ್ಮೆ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದರು.

  • ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ASI ಅಮಾನತು

    ವಿಕಲಚೇತನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ASI ಅಮಾನತು

    ಬೆಂಗಳೂರು: ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲೇಟು ನೀಡಿದ ವಿಕಲಚೇತನ ಮಹಿಳೆಯ ಮೇಲೆ ದರ್ಪ ತೋರಿದ ಎಎಸ್‍ಐ ನಾರಾಯಣ್ ಅಮಾನತು ಮಾಡಲಾಗಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೆ ಗೌಡ ಅವರು, ಹಲ್ಲೆ ಸಂಬಂಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳದೆ ಹಲ್ಲೆ ಮಾಡಿರೋದು ತಪ್ಪು. ಹಾಗಾಗಿ ಸದ್ಯಕ್ಕೆ ಹಲಸೂರು ಗೇಟ್‍ನಿಂದ ಎಎಸ್‍ಐರನ್ನು ಸ್ಥಳದಿಂದ ಮ್ಯಾನೆಜ್‍ಮೆಂಟ್ ಸೆಂಟರ್‌ಗೆ ನಿಯೋಜಿಸಲಾಗಿದೆ. ಘಟನೆ ಬಗ್ಗೆ ಇಲಾಖೆ ತನಿಖೆಗೆ ಕೂಡ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಘಟನೆಯೇನು?: ಟೋಯಿಂಗ್ ವಾಹನದಲ್ಲಿ ಕೂತಿದ್ದ ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್‍ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ. ಪರಿಣಾಮ ಎಎಸ್‍ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್‍ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.  ಇದನ್ನೂ ಓದಿ: ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

    ಜ.24 ರಂದು ನಡೆದಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಎಎಸ್‍ಐ ಮೇಲೆ ಮಹಿಳೆ ಎರಡು ಬಾರಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಮಹಿಳೆ ಹಲ್ಲೆಯಿಂದ ಕೋಪಗೊಂಡ ಎಎಸ್‍ಐ ನಿಂದಲೂ ಮಹಿಳೆ ಮೇಲೆ ರಸ್ತೆಯಲ್ಲೆ ಹಲ್ಲೆಗೈದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಎಎಸ್ ಐ ನಾರಾಯಣ್ ಅವರು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

  • ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

    ಗಾಡಿ ಟೋಯಿಂಗ್ ಮಾಡ್ತಿದ್ದ ASIಗೆ ಕಲ್ಲೇಟು- ವಿಕಲಚೇತನ ಮಹಿಳೆಗೆ ಬೂಟಿನಿಂದ ಒದ್ದ ನಾರಾಯಣ್

    ಬೆಂಗಳೂರು: ಗಾಡಿ ಟೋಯಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲೇಟು ನೀಡಿದ ವಿಕಲಚೇತನ ಮಹಿಳೆಯ ಮೇಲೆ ಎಎಸ್‍ಐ ದರ್ಪ ತೋರಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಸರ್ಕಾರಿ ಕೆಲಸಕ್ಕೆ ಅಡ್ಡಿ ಆರೋಪದಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.

    ಟೋಯಿಂಗ್ ವಾಹನದಲ್ಲಿ ಕೂತಿದ್ದ ಹಲಸೂರ್ ಗೇಟ್ ಸಂಚಾರಿ ಟೋಯಿಂಗ್ ಎಎಸ್ ಐ ನಾರಾಯಣ್ ಮೇಲೆ ವಿಕಲಚೇತನ ಮಹಿಳೆ ಕಲ್ಲೇಟು ನೀಡಿದ್ದಾರೆ. ಪರಿಣಾಮ ಎಎಸ್‍ಐ ಮುಖಕ್ಕೆ ಕಲ್ಲು ತಾಗಿ ರಕ್ತ ಬಂದಿದೆ. ಇದರಿಂದ ಸಿಟ್ಟಿಗೆದ್ದ ಎಎಸ್‍ಐ, ಕೂಡಲೇ ವಾಹನದಿಂದ ಕೆಳಗಿಳಿದು ಮಹಿಳೆಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ಬೂಟಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು

    ಜ.24 ರಂದು ನಡೆದಿರುವ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಅಂಗವಿಕಲ ಮಹಿಳೆ ಮೇಲೆ ಎಎಸ್‍ಐ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ. ಪೊಲೀಸ್ ಅಧಿಕಾರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಂಗವಿಕಲ ಮಹಿಳೆ ಮೇಲೆ ಹಲ್ಲೆ ಮಾಡಬಾರದಿತ್ತು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

    ಸ್ಥಳೀಯರ ಮಾಹಿತಿ ಪ್ರಕಾರ, ಎಎಸ್‍ಐ ಮೇಲೆ ಮಹಿಳೆ ಎರಡು ಬಾರಿ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಮಹಿಳೆ ಹಲ್ಲೆಯಿಂದ ಕೋಪಗೊಂಡ ಎಎಸ್‍ಐ ನಿಂದಲೂ ಮಹಿಳೆ ಮೇಲೆ ರಸ್ತೆಯಲ್ಲೆ ಹಲ್ಲೆಗೈದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಎಎಸ್ ಐ ನಾರಾಯಣ್ ಅವರು ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಹಲ್ಲೆ ಆರೋಪದಡಿ ಮಹಿಳೆಯನ್ನು ಬಂಧಿಸಲಾಗಿದೆ.

    ಮಹಿಳೆ ಕಲ್ಲಿನಿಂದ ಹಲ್ಲೆ ಮಾಡಿದ್ದೇಕೆ..?
    ಈ ವಿಕಲಚೇತನ ಮಹಿಳೆಗೆ ಟೋಯಿಂಗ್ ಮಾಡೋರು ಕಂಡ್ರೆ ಆಗುತ್ತಿರಲಿಲ್ಲವಂತೆ. ಹೀಗಾಗಿ ಟೋಯಿಂಗ್ ನವರು ಕಂಡ್ರೆ ಸಾಕು ಕಲ್ಲಿನಿಂದ ಹಲ್ಲೆ ಮಾಡುತ್ತಾರೆ. ಅದೇ ರೀತಿ ಎಎಸ್‍ಐ ಮೇಲೆಯೂ ಆಕೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ.

  • ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ

    ಮಾಜಿ ಆರ್‌ಸಿಬಿ ಆಟಗಾರನ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ

    ನವದೆಹಲಿ: ದಂಡ ಕಟ್ಟಲು ನಿರಾಕರಿಸಿದ್ದಕ್ಕೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಐಪಿಎಲ್ ಆಟಗಾರ ವಿಕಾಸ್ ಟೋಕಾಸ್ ಆರೋಪಿಸಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಹಮ್ಮದ್‍ಪುರದಲ್ಲಿರುವ ನನ್ನ ಮನೆಗೆ ಬರುತ್ತುದ್ದೆ. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಮೊಹಮ್ಮದ್‍ಪುರ ಗ್ರಾಮದ ಹೊರಗೆ ಬ್ಯಾರಿಕೇಡ್‍ಗಳ ಬಳಿ ನನ್ನನ್ನು ತಡೆದರು. ಮಾಸ್ಕ್ ಧರಿಸಿದ್ದಕ್ಕೆ 2,000 ರೂ. ದಂಡ ನೀಡಲು ಒತ್ತಾಯಿಸಿದರು. ಆದರೆ ನಾನು ನನ್ನ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡು, ದಂಡ ಪಾವತಿಸಲು ನಿರಾಕರಿಸಿದೆ ಎಂದರು.

    ಆದರೆ ಅವರು ನನ್ನ ಕಾರಿನೊಳಗೆ ಕುಳಿತು ನಿಂದಿಸಿದರು. ಅವರಲ್ಲಿ ಒಬ್ಬಾತ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಪೊಲೀಸ್ ಠಾಣೆಗೂ ಕರೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ಡಿಸಿಪಿ ಸೌತ್ ವೆಸ್ಟ್ ಗೌರವ್ ಶರ್ಮಾ ಮಾತನಾಡಿ, ವಿಕಾಸ್ ಟೋಕಾಸ್ ಅವರನ್ನು ತಪಾಸಣೆಗಾಗಿ ನಿಲ್ಲಿಸಲಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿರಲಿಲ್ಲ. ಇದಕ್ಕೆ ಸಹಕರಿಸುವ ಬದಲು, ಅವರು ದುರಹಂಕಾರದಿಂದ ವರ್ತಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

    ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಲಾಗಿತ್ತು. ಆದರೆ ವಿಕಾಸ್ ಅವರು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯಲು ಹೋದಾಗ ಆಕಸ್ಮಿಕವಾಗಿ ಅವರಿಗೆ ಗಾಯಾಗಳಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

    ವಿಕಾಸ್ ಟೋಕಾಸ್ ಅವರು ಬಲಗೈ ಬೌಲರ್ ಆಗಿರುವ ಅವರು ಆರ್‌ಸಿಬಿ ತಂಡದ ಪರ ಐಪಿಎಲ್‍ನಲ್ಲಿ ಆಡಿದ್ದರು. ಇದನ್ನೂ ಓದಿ: ಹೂ ಕಟ್ಟುತ್ತಿದ್ದ ಯುವತಿ ಈಗ ಪಿಎಸ್‍ಐ..!

  • ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

    ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

    ಹಾವೇರಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೀರೇಶ್ ಕುಪಗಡ್ಡಿ ಮತ್ತು ಶಿವಾನಂದ ಕೋಡಿಹಳ್ಳಿ ಕುಟುಂಬದ ನಡುವೆ ಗಲಾಟೆ ನಡೆದಿದೆ. ಈ ಎರಡು ಕುಟುಂಬದವರು ಜಮೀನಿನಲ್ಲಿಯೇ ಕಲ್ಲು ಹಾಗೂ ಮಣ್ಣಿನಹೆಂಟೆಯಿಂದ ಹೊಡೆದಾಡಿಕೊಂಡಿದ್ದಾರೆ. ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಮೀನಿಗೆ ಬಂದಿದ್ದ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಎಂಬುದನ್ನು ಲೆಕ್ಕಿಸದೇ ಹಲ್ಲೆ ನಡೆದಿದೆ. ಕಲ್ಲು, ಮಣ್ಣಿನ ಹೆಂಟೆಗಳ ಏಟಿಗೆ ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.

    POLICE JEEP

    ಈ ಘಟನೆಯಲ್ಲಿ ಗಾಯಗೊಂಡು ಅಸ್ವಸ್ಥರನ್ನು ಹಾನಗಲ್ ತಾಲೂಕಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕೋಡಿಹಳ್ಳಿ ಕುಟುಂಬದ ಹತ್ತು ಜನರ ವಿರುದ್ಧ ಜೀವ ಬೆದರಿಕೆ ದೂರನ್ನು ವೀರೇಶ್ ಕುಪಗಡ್ಡಿ ದಾಖಲು ಮಾಡಿದ್ದಾರೆ. ಜೊತೆಗೆ ಕುಪಗಡ್ಡಿ ಕುಟುಂಬದ 12 ಜನರ ವಿರುದ್ಧ ಜೀವ ಬೆದರಿಕೆ ಕೇಸ್‌ನ್ನು ಶಿವಾನಂದ ಕೋಡಿಹಳ್ಳಿ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆಡೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

  • ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಇನ್ನೋವಾ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಘಟನೆ ನಿನ್ನೆ ರಾತ್ರಿ ಆನೇಕಲ್ ತಾಲೂಕಿನ ಗುಡ್ಡನಹಳ್ಳಿಯಲ್ಲಿ ನಡೆದಿದೆ.

    ಕಾರಿನಲ್ಲಿದ್ದವರು ಕೆಳಗಿಳಿದು ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಪುಂಡರು ಪೆಟ್ರೋಲ್ ಹಾಕಿಸಿಕೊಂಡಿದ್ದರು. ಪೆಟ್ರೋಲ್ ಹಾಕಿಸಿಕೊಂಡ ಬಳಿಕ ನನ್ನ ಹಣವನ್ನು ನೀನೇ ಕೊಡು ಅಂತ ಇನ್ನೋವಾ ಕಾರಿನನವನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹಣ ಕೊಡದೆ ಇದ್ದಾಗ ಕಾರಿನಲ್ಲಿ ಕುಳಿತಿದ್ದ ಇಬ್ಬರ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಇದ್ದ ಚಾಕು ತೆಗೆದುಕೊಂಡು ಹಲ್ಲೆ ಎಸಗಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

    ಇತ್ತೀಚೆಗೆ ರಾಜ್ಯದ ಗಡಿಭಾಗದಲ್ಲಿನ ಯುವಕರ ಪುಂಡಾಟ ಹೆಚ್ಚಾಗಿದೆ. ಹೊರರಾಜ್ಯದಿಂದ ಬಂದವರೇ ಇವರ ಗುರಿಯಾಗಿದ್ದಾರೆ. ಇಂತಹ ಪುಂಡ ಪೋಕರಿಗಳು ಹಣಮಾಡಲು ಅಡ್ಡದಾರಿ ಹಿಡಿದಿದ್ದಾರೆ. ತಮಿಳುನಾಡು ಗಡಿ ಮೂಲಕ ಆನೇಕಲ್ಲಿನ ಮೂಲಕ ಬರುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸುತ್ತಾರೆ. ನಿರ್ಜನ ಪ್ರದೇಶದ ರಸ್ತೆ ಆಗಿರುವುದರಿಂದ ಇವರ ಕಳ್ಳಾಟ ಹೆಚ್ಚಾಗಿದ್ದು, ಇಂತಹ ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.