Tag: ಹಲ್ಲೆ

  • ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಕಲಬುರಗಿ: ರಾಮನವಮಿ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದಿದೆ.

    ವಿಶ್ವನಾಥ್ ಹಾಗೂ ನರೇಂದ್ರ ಗಾಯಾಳುಗಳು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ವಿವಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ರಾಮನವಮಿ ಆಚರಿಸುತ್ತಿದ್ದ ವೇಳೆ ವಿವಿ ವಿದ್ಯಾರ್ಥಿಗಳಿಂದಲೇ ಹಲ್ಲೆ ನಡೆದಿದೆ. ಆ ಸಂದರ್ಭದಲ್ಲಿ ವಿಶ್ವನಾಥ್ ಹಾಗೂ ನರೇಂದ್ರಗೆ ಗಾಯಗಳಾಗಿದೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಗೆ ಸೇರಿದವರಾಗಿದ್ದಾರೆ.

    ಈ ಬಗ್ಗೆ ಗಾಯಾಳು ಎಬಿವಿಪಿ ಕಾರ್ಯಕರ್ತ ವಿಶ್ವನಾಥ್ ಮಾತನಾಡಿ, ನಾವು ಎಬಿವಿಪಿ ಆರ್‌ಎಸ್‍ಎಸ್ ಎನ್ನುವ ಕಾರಣಕ್ಕೆ ನಮಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರು ಯಾವ ಸಂಘಟನೆಯವರು ಗೊತ್ತಿಲ್ಲ. ಆದರೆ ನಾವು ಎಬಿವಿಪಿ ಸಂಘಟನೆಯವರು ಅಂತ ಹಲ್ಲೆ ಮಾಡಿದ್ದಾರೆ. ಕ್ಯಾಂಪಸ್ ಆವರಣದಲ್ಲಿ ಯಾಕೆ ರಾಮನವಮಿ ಮಾಡಿದ್ದೀರಿ ಅಂತಾ ಹಲ್ಲೆ ಮಾಡಿದ್ದಾರೆ. ಮೊದಲಿನಿಂದಲೂ ನಮಗೆ ಧಮ್ಕಿ ಹಾಕ್ತಾನೇ ಬಂದಿದ್ದಾರೆ. ನಮಗೆ ವಿವಿಯಲ್ಲಿ ಈಗಲೂ ಜೀವ ಭಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಲೆಯೇರಿಕೆ ಬಗ್ಗೆ ಪ್ರತಿಭಟಿಸಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ:  ಬೊಮ್ಮಾಯಿ

    ಈ ಸಂಬಂಧ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ನರೋಣಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ತೆಲಂಗಾಣ ಮೂಲದ ಸಾಧಿಕ್ ಮತ್ತು ಕಲಬುರಗಿ ಮೂಲದ ರಾಹುಲ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪೊಲೀಸ್ ಕಮಿಷನರ್ ಹುದ್ದೆಗೆ ಸುಳ್ಳುಗಾರ ಎಂದು ಹೇಳುವ ನಡೆ ಸರಿಯಲ್ಲ: ಭಾಸ್ಕರ್ ರಾವ್

    ಈ ಬಗ್ಗೆ ಕಲಬುರಗಿ ಪೋಲೀಸ್ ವರಿಷ್ಠಾಧಿಕಾರಿ ಇಷಾ ಪಂಥ್ ಮಾತನಾಡಿ, ಕಲಬುರಗಿ ಸೆಂಟ್ರಲ್ ವಿವಿಯಲ್ಲಿ ರಾಮನವಮಿ ಗಲಾಟೆ ಪ್ರಕರಣದಲ್ಲಿ ಹಲ್ಲೆಗೊಳಗಾದವರು ಎಬಿವಿಪಿ ಕಾರ್ಯಕರ್ತರಿದ್ದಾರೆ. ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದೇವೆ. ಹಲ್ಲೆ ಮಾಡಿದವರು ಕೆಲವರು ಹೊರ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಗೆ ರಾಮನವಮಿ ಆಚರಣೆ ಹಿನ್ನಲೆ ಗೊತ್ತಾಗಿಲ್ಲ. ಸದ್ಯಕ್ಕೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

  • ಹೂ ಕಟ್ಟಲು ತೆರಳುತ್ತಿದ್ದ ಯುವಕನ ಮೇಲೆ 6 ಮಂದಿಯಿಂದ ಹಲ್ಲೆ

    ಹೂ ಕಟ್ಟಲು ತೆರಳುತ್ತಿದ್ದ ಯುವಕನ ಮೇಲೆ 6 ಮಂದಿಯಿಂದ ಹಲ್ಲೆ

    ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರದ ನ್ಯೂಮಂಡ್ಲಿ ಬಡಾವಣೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು ಮಧು (21) ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮೇಲುಕೋಟೆ ಚೆಲುವನಾರಾಯಣನಿಗೆ ದೀವಟಿಗೆ ಸಲಾಂ ಆರತಿ ವಿವಾದ – ಸಂಧ್ಯಾರತಿ ಎಂದು ಕರೆಯುವಂತೆ ಪಟ್ಟು

    ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡಿಕೊಂಡಿರುವ ಮಧು ಗುರುವಾರ ಮಧ್ಯಾಹ್ನ ನ್ಯೂ ಮಂಡ್ಲಿಯ 1ನೇ ಕ್ರಾಸ್‌ನಲ್ಲಿ ಹೂವು ಕಟ್ಟಲು ತೆರಳುತ್ತಿದ್ದ. ಈ ವೇಳೆ ಬೈಕ್‌ನಲ್ಲಿ ಬಂದವರು ಹಾಗೂ ಸ್ಥಳದಲ್ಲಿದ್ದ ಯುವಕರು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಒಟ್ಟು ಆರು ಮಂದಿ ಯುವಕರು ವಿನಾಃಕಾರಣ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಹಲ್ಲೆಗೊಳಗಾದ ಯುವಕನಿಗೆ ಈ ಹಿಂದೆ ಕಿಡ್ನಿ ಆಪರೇಷನ್ ಆಗಿತ್ತು. ಆ ಜಾಗಕ್ಕೂ ಹಲ್ಲೆ ನಡೆಸಲಾಗಿದ್ದು, ಯುವಕ ತೀವ್ರ ನೋವಿನಿಂದ ಬಳಲುತ್ತಿದ್ದಾನೆ. ಯುವಕನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ವಜಾಗೊಳಿಸಿ: ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

    ಘಟನೆ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಯುವಕನ ಹತ್ಯೆ

    ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಯುವಕನ ಹತ್ಯೆ

    ಬೆಳಗಾವಿ: ಮಾರಕಾಸ್ತ್ರಗಳಿಂದ ಹಲ್ಲೆಗೈದು ಯುವಕನನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

    ನಾಗೇಶ್ ಪಾಟೀಲ್ (30) ಮೃತ ಯುವಕ. ಹಳೆಯ ವೈಷಮ್ಯದ ಕಾರಣಕ್ಕೆ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

    ತಡರಾತ್ರಿ ಯುವಕನ ಮನೆಗೆ ನುಗ್ಗಿರುವ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿದ್ದಾರೆ. ಬಳಿಕ ಯುವಕನನ್ನು ಎಳೆದೊಯ್ದು ಮಾರಕಾಸ್ತ್ರಗಳಿಂದ ಹತ್ಯೆಗೈಯಲಾಗಿದೆ. ಶವವನ್ನು ಮನೆಯ ಬಳಿ ಎಸೆದು ಹಂತಕರು ಪರಾರಿಯಾಗಿದ್ದಾರೆ. ಬೆಳಗಾವಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮೈ ಮುಟ್ಟಿದ ವಕೀಲನಿಗೆ ಚೇರ್, ಕಲ್ಲಿನಿಂದ ಹಲ್ಲೆಗೆ ಮುಂದಾದ ಕೋಲಾರದ ವಕೀಲೆ

    ಮೈ ಮುಟ್ಟಿದ ವಕೀಲನಿಗೆ ಚೇರ್, ಕಲ್ಲಿನಿಂದ ಹಲ್ಲೆಗೆ ಮುಂದಾದ ಕೋಲಾರದ ವಕೀಲೆ

    ಕೋಲಾರ: ವಕೀಲರಿಬ್ಬರು ಕೋರ್ಟ್ ಆವರಣದಲ್ಲಿ ಹೈಡ್ರಾಮಾ ಮಾಡಿರುವ ಘಟನೆ ಕೆಜಿಎಫ್ ನ್ಯಾಯಾಲಯದ ಮುಂಭಾಗ ನಡೆದಿದೆ.

    ತನ್ನ ಮೈ ಮುಟ್ಟಿದ್ದಕ್ಕೆ ವಕೀಲೆಯೊಬ್ಬರು ವಕೀಲನಿಗೆ ಚೇರ್ ಹಾಗೂ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾರೆ. ವಕೀಲೆ ವೆನಿಲ್ಲಾ, ವಕೀಲ ಬಾಬುವಿಗೆ ಚೇರ್ ಎತ್ತೆಸೆದು ಹಲ್ಲೆಗೆ ಯತ್ನ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಈಜುಪಟುಗಳು ಅರೆಸ್ಟ್

    ಸ್ಥಳದಲ್ಲಿ ಇಬ್ಬರು ವಕೀಲರ ಹೈಡ್ರಾಮಾ ಕಂಡು ಜನರು ಕೆಲ ಕಾಲ ಚಕಿತಗೊಂಡಿದ್ದಾರೆ. ಇಬ್ಬರ ಗಲಾಟೆಯನ್ನು ಕಂಡ ಇತರ ವಕೀಲರು ಹಾಗೂ ಸ್ಥಳೀಯರು ಆಕೆಯನ್ನು ಪ್ರಶ್ನೆ ಮಾಡಿದಾಗ ವಕೀಲ ನನ್ನ ಮೈ ಮುಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಬರ್ಟ್ಸನ್ ಪೇಟೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದನ್ನೂ ಓದಿ: ಬ್ಯಾಂಕ್, ಎಟಿಎಂ ಬಾಗಿಲಿನಲ್ಲಿ ಮಲ ವಿಸರ್ಜನೆ ಮಾಡಿ ವಿಕೃತಿ

  • ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ನಕಲಿ ಛಾಪಾ ಕಾಗದ ಹಗರಣ ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

    ಬೆಳಗಾವಿ: ಖಾನಾಪುರದ ಸಾಮಾಜಿಕ ಕಾರ್ಯಕರ್ತ ಜಯಂತ್ ಮುಕುಂದ್ ತಿನೇಕರ್(62) ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಏಳೆಂಟು ಜನರ ಗುಂಪೊಂದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಜಯಂತ್ ಅವರನ್ನು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಖಾನಾಪುರ-ಬೆಳಗಾವಿ ಹೆದ್ದಾರಿಯ ಝಾಡ್ ಶಹಾಪುರ ಬಳಿ ಹಿಂಬಾಲಿಸಿಕೊಂಡು ಬಂದ ಮುಸುಕುಧಾರಿಗಳು ಜಯಂತ್ ಅವರ ಕಾರು ತಡೆದು ಕಬ್ಬಿಣದ ರಾಡ್‌ಗಳಿಂದ ಥಳಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೆಲ ಲಾರಿ ಚಾಲಕರು ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    POLICE JEEP

    ಹಲ್ಲೆ ಮಾಡಿದ ಆರೋಪಿಗಳು ಅಪರಿಚಿತರಾಗಿದ್ದು, ಮುಖಕ್ಕೆ ಸ್ಕಾರ್ಫ್ ಹಾಕಿಕೊಂಡಿದ್ದರು. ಹಲ್ಲೆ ವೇಳೆ ಜಯಂತ್ ಅವರ ಬಲಗಾಲು, ಮೊಣಕಾಲು, ಭುಜ ಹಾಗೂ ಬಲಗೈಗೆ ಗಂಭೀರ ಗಾಯಗಳಾಗಿವೆ. ಅವರಿಗೆ ಖಾನಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾ ಉಕ್ರೇನ್ ಯುದ್ಧ – ಗಗನಕ್ಕೇರಿದ ಅಡುಗೆ ಎಣ್ಣೆ ದರ

    ಜಯಂತ್ ತಿನೇಕರ್ ಹಿನ್ನೆಲೆ:
    ಬೆಳಗಾವಿ ಜಿಲ್ಲೆಯ ಖಾನಾಪೂರದ ನಿವಾಸಿ ಜಯಂತ್ ಮುಕುಂದ್ ತಿನೇಕರ್ ನಕಲಿ ಛಾಪಾ ಕಾಗದ ಹಗರಣವನ್ನು ಬೆಳಕಿಗೆ ತಂದು ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಉಳಿತಾಯ ಮಾಡುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದರು. ನಕಲಿ ಛಾಪಾ ಕಾಗದ ಹಗರಣದ ಕುರಿತು ಆಗಿನ ಡಿಜಿಪಿ ಸಾಂಗ್ಲಿಯಾನಾ ಅವರನ್ನು ಭೇಟಿಯಾಗಿ ಕರೀಂ ಲಾಲಾ ತೇಲಗಿ ನಡೆಸುತ್ತಿದ್ದ ನಕಲಿ ಛಾಪಾ ದಂಧೆಯ ಬಗ್ಗೆ ದೂರು ನೀಡಿದ್ದರು.

  • ಅಂಪೈರ್ ಮೇಲೆ ವಿಶ್ವದ ನಂ.3 ಆಟಗಾರನಿಂದ ಹಲ್ಲೆಗೆ ಯತ್ನ

    ಅಂಪೈರ್ ಮೇಲೆ ವಿಶ್ವದ ನಂ.3 ಆಟಗಾರನಿಂದ ಹಲ್ಲೆಗೆ ಯತ್ನ

    ಲಂಡನ್: ವಿಶ್ವದ ನಂ.3 ಟೆನಿಸ್‌ ಆಟಗಾರ ಅಲೆಕ್ಸಾಂಡರ್ ಜ್ವೆರೆವ್ ಟೂರ್ನ್‍ಮೆಂಟ್ ಸೋತಿದ್ದಕ್ಕೆ ಅಂಪೈರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಮೆಕ್ಸಿಕನ್ ಓಪನ್ ಟೂರ್ನಮೆಂಟ್‌ನಲ್ಲಿ ನಡೆದಿದೆ.

    ಡಬಲ್ಸ್ ಪಂದ್ಯದಲ್ಲಿ 24 ವರ್ಷದ ಜರ್ಮನ್‍ನ ಜ್ವೆರೆವ್ ಹಾಗೂ ಬ್ರೆಜಿಲ್‍ನ ಮಾರ್ಸೆಲೋ ಮೆಲೊ ಜೋಡಿ ಬ್ರಿಟನ್ ಲಾಯ್ಡ್ ಗ್ಲಾಸ್‍ಪೂಲ್ ಫಿನ್ ಲ್ಯಾಂಡ್‍ನ ಹ್ಯಾರಿ ಜೋಡಿ ವಿರುದ್ಧ 6-10 ಅಂತರದಲ್ಲಿ ಸೋಲನುಭವಿಸಿತು.

    ಇದರಿಂದ ತಾಳ್ಮೆ ಕಳೆದುಕೊಂಡ ಜ್ವೆರೆವ್ ಅಂಪೈರ್ ಕುಳಿತಿದ್ದ ಕುರ್ಚಿಗೆ ರಾಕೆಟ್‍ನಿಂದ ಬಡಿದಿದ್ದಾರೆ. ಅಂಪೈರ್ ಸಮೀಪಕ್ಕೆ ಹೋಗಿ ಹೊಡೆಯಲು ಹೋಗಿದ್ದಾರೆ. ಅಲ್ಲದೇ ಅಂಪೈರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ – 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

    ವಿಶ್ವದ ನಂ.3 ಆಟಗಾರನ ಈ ಅನುಚಿತ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಸಿಂಗಲ್ಸ್ ಟೂರ್ನಿಯಿಂದ ವಜಾಗೊಳಿಸಿ ಅವರನ್ನು ಟೂರ್ನಿಯಿಂದಲೇ ಹೊರಹಾಕಿದ್ದಾರೆ. ಜ್ವೆರೆವ್‍ಗೆ ಟೆನಿಸ್ ವೃತ್ತಿಪರ ನಿಷೇಧ ಹಾಗೂ ಭಾರೀ ಮೊತ್ತದ ದಂಡ ಬೀಳುವ ಸಾಧ್ಯತೆಯಿದೆ. ಇದನ್ನೂ ಓದಿ: ಮಗಳನ್ನು ಕೊಂದು, ಆತ್ಮಹತ್ಯೆಗೆ ಶರಣಾದ ತಂದೆ

  • ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಹಿಜಬ್ ಹೋರಾಟಗಾರ್ತಿ ಅಣ್ಣನ ಮೇಲೆ ಹಲ್ಲೆ

    ಉಡುಪಿ: ಹಿಜಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

    ಸೈಪ್ ಹಲ್ಲೆಗೊಳಗಾದ ಯುವಕ. ಮಲ್ಪೆಯಲ್ಲಿರುವ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೋಟೆಲ್‍ಗೆ ಆಗಮಿಸಿದ 70 -100 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳು ಹೊಟೇಲ್‍ನಲ್ಲಿದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ

    ಹಲ್ಲೆಗೆ ಒಳಗಾಗಿರುವ ಸೈಫ್‍ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹಿಜಬ್ ದೂರುದಾರೆ ಹಜ್ರಾ ಶಿಫಾ ಟ್ವೀಟ್ ಮಾಡಿ, ಹಿಜಬ್‍ನ್ನು ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ಹೊಟೇಲ್ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸಂಘಪರಿವಾರದ ಯುವಕರಿಂದ ಹಲ್ಲೆ ಎಂಬ ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

  • ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

    ಆಸ್ತಿಗಾಗಿ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

    ಅಮರಾವತಿ: ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಈ ಘಟನೆ ಸದ್ಯ ಭಾರೀ ವೈರಲ್ ಆಗುತ್ತಿದೆ.

    ನಾಗಮಣಿ ಹಲ್ಲೆಗೊಳಗಾದ ಮಹಿಳೆ ಹಾಗೂ ಶೇಷು ಆರೋಪಿ. ಆಂಧ್ರಪ್ರದೇಶದ ಗುಂಟುರು ಜಿಲ್ಲೆಯ ತಾಡಪಲ್ಲಿಯ ಬ್ರಹ್ಮಾನಂದಪುರಂನಲ್ಲಿ ಈ ಘಟನೆ ನಡೆದಿದೆ. ವರ್ಷಗಳ ಹಿಂದೆ ಅಂದಿನ ಆಂಧ್ರ ಸರ್ಕಾರ ನಾಗಮಣಿ ಅವರ ಪತಿ ವೆಂಕಟೇಶ್ವರರಾವ್ ಅವರಿಗೆ ಭೂಮಿ ಮಂಜೂರು ಮಾಡಿತ್ತು. ಕಷ್ಟಪಟ್ಟು ಅವರು ಮನೆ ಕಟ್ಟಿದ್ದರು. ಆದರೆ ನಾಗಮಣಿ ಅವರ ಪತಿ ಮೂರು ವರ್ಷಗಳ ಹಿಂದೆ ನಿಧನರಾದರು. ಈ ದಂಪತಿಗೆ ಮಗ ಹಾಗೂ ಮಗಳು ಇದ್ದಾರೆ.

    ತಂದೆಯ ನಿಧನದ ನಂತರ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ ಶೇಷು ಪತ್ನಿಯೊಂದಿಗೆ ತನ್ನ ಗ್ರಾಮಕ್ಕೆ ಬಂದು ವಾಸಿಸತೊಡಗಿನು. ಈ ಖುಷಿ ನಾಗಮಣಿಗೆ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಅವಳಿಗೆ ಶೇಷು ದಿನನಿತ್ಯ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದ. ಜೊತೆ ತಾಯಿಯ ಮೇಲೆ ಅಮಾನುಷವಾಗಿ ವರ್ತಿಸುತ್ತಿದ್ದ.  ಇದನ್ನೂ ಓದಿ: ಭದ್ರಾವತಿಯಲ್ಲಿ ಕಮಲ ಅರಳಿಸೋಕೆ ಎಲ್ಲರೂ ದುಡಿಯೋಣ : ನಾರಾಯಣಗೌಡ

    POLICE JEEP

    ಇದನ್ನು ಗಮನಿಸಿದ ಸ್ಥಳೀಯರು ಈ ಹಿಂದೆ ಶೇಷುಗೆ ಛೀಮಾರಿ ಹಾಕಿದರೂ ವರ್ತನೆ ಬದಲಿಸಿಕೊಳ್ಳಲಿಲ್ಲ. ಇರಿಂದಾಗಿ ಸ್ಥಳೀಯರು ಪೊಲೀಸರಿಗೆ ಆತನ ವಿರುದ್ಧ ತಾಯಿಗೆ ಹಲ್ಲೆ ಮಾಡುತ್ತಿರುವ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶೇಷುವನ್ನು ವಶಕ್ಕೆ ಪಡೆದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸ್ಟಾರ್ ಕಪಲ್

  • ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ವ್ಯಕ್ತಿಯ ಮೇಲೆ ಮಂಗಳಮುಖಿಯರಿಂದ ಹಲ್ಲೆಗೆ ಯತ್ನ

    ಮಂಗಳೂರು: ಮಂಗಳಮುಖಿಯರಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಸುರತ್ಕಲ್ ಎನ್.ಐ.ಟಿ.ಕೆ ಟೋಲ್ ಗೇಟ್ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.

    ಟೋಲ್ ಗೇಟ್ ತೆರವಿಗೆ ಪ್ರತಿಭಟಿಸುತ್ತಿರುವ ಆಸಿಫ್ ಎಂಬವರ ಮೇಲೆ ಹಲ್ಲೆಗೆ ಯತ್ನ. ವ್ಯಕ್ತಿಗೆ ಮಂಗಳಮುಖಿಯರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಅವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಮಾರ್ಚ್‌ನಲ್ಲಿ ಬೆಲ್ ಬಾಟಮ್ 2 ಪಕ್ಕಾ

    ದೂರು ದಾಖಲಿಸಿಕೊಂಡ ಪೊಲೀಸರು ವಾಸವಿ ಗೌಡ, ಲಿಪಿಕಾ, ಹಿಮಾ, ಆದ್ಯ, ಮಾಯಾ, ಮೈತ್ರಿ ಎಂಬ 6 ಮಂದಿ ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504(ಬೆದರಿಕೆ), 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಆಸಿಫ್ ಅಕ್ರಮವಾಗಿ ಟೋಲ್ ನಡೆಸುತ್ತಿರುವುದಾಗಿ ಆರೋಪಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.

  • ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ಲಾಂಗ್ ಬೀಸಿದ ಯುವಕ

    ಬೆಂಗಳೂರು: ಯುವಕನೊಬ್ಬ ಮದುವೆಯಾಗುವಂತೆ ಒತ್ತಾಯಿಸಿ ಯುವತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಗರದ ಕೆ ಆರ್ ಪುರಂ ಮಸೀದಿ ರಸ್ತೆಯಲ್ಲಿ ನಡೆದಿದೆ.

    ಕಳೆದ ನಾಲ್ಕು ದಿನಗಳ ಹಿಂದೆ ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಗ್ಮಾ ಎಂಬಾಕೆಯ ಮೇಲೆ ಆರೋಪಿ ಶಾರುಖ್ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಯುವಕ, ಯುವತಿ ಮೇಲೆ ಲಾಂಗ್ ಬೀಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯು ಮನೆ ಗೇಟ್ ಲಾಕ್ ಮಾಡಿಕೊಂಡಿದ್ದರು. ಏರಿಯಾದಲ್ಲಿ ಲಾಂಗ್ ಹಿಡಿದು ರಾಜಾರೋಷವಾಗಿ ಓಡಾಡಿದ್ದಾನೆ.

    ಶಾರುಖ್ ಮನಬಂದಂತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಮೇಲೆಯೂ ಲಾಂಗ್ ಬೀಸಿದ್ದಾನೆ. ಆರೋಪಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಗ್ಮಾರವರು ಕೆ ಆರ್ ಪುರಂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

    ಪ್ರಕರಣ ದಾಖಲಾದ ಬೆನ್ನಲ್ಲೇ ಕೆ ಆರ್ ಪುರಂ ಪೊಲೀಸರು ಆರೋಪಿ ಶಾರುಕ್‍ನನ್ನು ಬಂಧಿಸಿದ್ದಾರೆ.