Tag: ಹಲ್ಲೆಗೆ ಯತ್ನ

  • ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆಗೆ ಯತ್ನ

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆಗೆ ಯತ್ನ

    ಬೆಂಗಳೂರು: ಇಲ್ಲಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಪಿಎ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

    ಈ ಘಟನೆ ನಿನ್ನೆ ರಾತ್ರಿ 12:30 ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯ್ ಸೇತುಪತಿ ಜೊತೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ಇದ್ದರು ಎನ್ನಲಾಗ್ತಿದೆ. ಸಹ ಪ್ರಯಾಣಿಕ ಹಾಗೂ ಸೇತುಪತಿಯ ಪಿಎಗೂ ಜಗಳ ಆಗಿದೆ. ಇದೇ ಸಿಟ್ಟಿನಲ್ಲಿ ಏರ್ ಪೋರ್ಟ್ ನಲ್ಲಿ ಇಳಿದು ಬರೋವಾಗ ಪಿಎ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

    ನಟ ನಿನ್ನೆ ರಾತ್ರಿ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿಗೆ ಬಂದಿದ್ದರು. ಬಿಡದಿ ಬಳಿಯ ಇನೋವೆಟಿವ್ ಫಿಲಂ ಸಿಟಿಯಲ್ಲಿ ತಮಿಳಿನ ರಿಯಾಲಿಟಿ ಶೋ ಶೂಟಿಂಗ್‍ಗೆಂದು ವಿಮಾನದಲ್ಲಿ ಬರುವ ವೇಳೆ ಪ್ರಯಾಣಿಕನ ಜೊತೆ ಕಿರಿಕ್ ಆಗಿದೆ. ಕಿರಿಕ್ ನಂತರ ವಿಮಾನ ನಿಲ್ದಾಣದಿಂದ ವಿಜಯ್ ಸೇತುಪತಿ ಮತ್ತು ಪಿಎ ಹೊರ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದು ಹಲ್ಲೆಗೆ ಯತ್ನಿಸಲಾಗಿದೆ. ಇದನ್ನೂ ಓದಿ: ಪುನೀತ್ ಸಾವಿನ ರಹಸ್ಯ ಒಂದೊಂದೇ ಬಯಲು!

    ಘಟನೆಯಿಂದ ವಿಚಲಿತರಾಗಿ ವಿಜಯ್ ಸೇತುಪತಿ ಅವರು ದೇವನಹಳ್ಳಿ ಏರ್ಪೋರ್ಟ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಬಳಿಕ ಪ್ರಕರಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದಾರೆ. ಕುಡಿದು ಹಲ್ಲೆಗೆ ಯತ್ನಿಸಿರೋದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಕರಣ ವಿತ್ ಡ್ರಾ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಎತ್ತುಗಳ ಜೊತೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ ಶಿವಣ್ಣ, ರಾಘಣ್ಣ

  • ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಒಬ್ಬನು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಖಾಕಿ ಪಡೆ ಗುಂಡೇಟಿನ ರುಚಿ ತೋರಿಸಿದ್ದಾರೆ.

    ರಾಜಧಾನಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದ್ದು, ರೌಡಿ ಶೀಟರ್ ವಿನೋದ್ ಅಲಿಯಾಸ್ ಪಚ್ಚೆ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಪಚ್ಚಿ ರಾಬರಿ, ಸೇರಿದಂತೆ ಹಲವು ಕೊಲೆ ಯತ್ನದಲ್ಲಿ ಭಾಗಿಯಾಗಿದ್ದನು. ಹೀಗೆ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿನೋದ್‍ನನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಲು ಮುಂದಾದಾಗ ಖಾಕಿ ಪಡೆ ಶೂಟೌಟ್ ನಡೆಸಿದ್ದಾರೆ.

    ಶುಕ್ರವಾರ ರಾತ್ರಿ ಆರೋಪಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸೆರಮನಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸರೆಂಡರ್ ಆಗುವಂತೆ ಆರೋಪಿಗೆ ಹೇಳಿದ್ದಾರೆ. ಆದರೆ ಆತ ಪೊಲೀಸರ ಮೇಲೆಯೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಅಶೋಕ ನಗರ ಇನ್ಸ್‌ಪೆಕ್ಟರ್ ಶಶಿಧರ್, ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಪರಿಣಾಮ ಆರೋಪಿಯ ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ದಾವಣಗೆರೆ: ಕರ್ತವ್ಯ ನಿರತ ಸರ್ಕಾರಿ ವೈದ್ಯರೊಬ್ಬರ ಕೊರಳಪಟ್ಟಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ತಮ್ಮ ಪುತ್ರನಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿ ವೈದ್ಯ ಮಲ್ಲಪ್ಪ ಅವರ ಮೇಲೆ ಜಗಳೂರು ನಿವಾಸಿಗಳಾದ ಸುನಿಲ್ ಎಂಬವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸುನಿಲ್‍ಗೆ ಆತನ ಸಂಬಂಧಿ ಸೋಮಶೇಖರ್ ಕೂಡ ಸಾಥ್ ನೀಡಿದ್ದಾನೆ. ಇಬ್ಬರು ಸೇರಿ ಮಲ್ಲಪ್ಪ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಹಲ್ಲೆಯನ್ನು ತಡೆದಿದ್ದಾರೆ.

    ಈ ಘಟನೆಯು ಜನವರಿ 9ರಂದು ನಡೆದಿದ್ದು, ವೈದ್ಯರ ಮೇಲೆ ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ವೈದ್ಯ ಮಲ್ಲಪ್ಪ ಅವರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋಸವನ್ನು ಪತ್ತೆ ಮಾಡಿದಕ್ಕೆ ಮ್ಯಾನೇಜರ್ ಮೇಲೆ ಅಟ್ಯಾಕ್..!- ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

    ಮೋಸವನ್ನು ಪತ್ತೆ ಮಾಡಿದಕ್ಕೆ ಮ್ಯಾನೇಜರ್ ಮೇಲೆ ಅಟ್ಯಾಕ್..!- ಸಿಸಿಟಿವಿಯಲ್ಲಿ ಸೆರೆಯಾಯ್ತು ದುಷ್ಕೃತ್ಯ

    ಬೆಂಗಳೂರು: ರಾಜಧಾನಿಯಲ್ಲಿರುವ ಇಂಡಸ್ಟ್ರಿಯೊಂದರ ಮ್ಯಾನೇಜರ್ ಆ ಕಂಪನಿಯಲ್ಲಿ ಆದ ಮೋಸವನ್ನು ಎತ್ತಿ ತೋರಿಸಿದಕ್ಕೆ ಆತನ ಮೇಲೆ ಸಹೋದ್ಯೋಗಿಗಳೇ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ.

    ಅಶ್ವಿನ್ ಎಂಬವರು ಹಲ್ಲೆಗೊಳಗಾದ ಮ್ಯಾನೇಜರ್. ಅಶ್ವಿನ್ ಗರುಡಾಚಾರ್ ಪಾಳ್ಯದ ರಾಜ್‍ಮನೆ ಇಂಡಸ್ಟ್ರಿಸ್‍ನಲ್ಲಿ ಪರ್ಚೇಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾಲದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡೋರು ಸಿಗೋದೆ ಕಡಿಮೆ. ಅದರಲ್ಲು ಕೆಲಸ ಮಾಡ್ತಿರೊ ಜಾಗದಲ್ಲಿ ಆಗುವ ಮೋಸವನ್ನು ಬೆಳಕಿಗೆ ತರಲು ಯಾರು ಮುಂದೆ ಬರಲ್ಲ. ಆದ್ರೆ ಅಶ್ವಿನ್ ತನ್ನ ಕಂಪನಿಯಲ್ಲಿ ಕೆಲವರಿಂದ ಆಗುತ್ತಿದ್ದ ಮೋಸವನ್ನು ಪತ್ತೆ ಮಾಡಿ ಬೆಳಕಿಗೆ ತಂದಿದ್ದರು. ಹೀಗೆ ಬಿಟ್ಟರೇ ತಮಗೆ ಮುಂದೆ ತೊಂದರೆ ಗ್ಯಾರಂಟಿ ಅಂತಾ ಆಶ್ವಿನ್ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೇ ಅಶ್ವಿನ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಅಶ್ವಿನ್ ಹೇಗೋ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.

    ಡಿ. 25ರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಾಗ ಮೂವರು ವ್ಯಕ್ತಿಗಳು ಅಶ್ವಿನ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಬೈಕ್ ನಿಲ್ಲಿಸದೇ ಅದೇಗೊ ಅಶ್ವಿನ್ ಬಚಾವಾಗಿದ್ದರು. ಬಳಿಕ ಈ ಕುರಿತು ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶ್ವಿನ್ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಕಾಲ ಅಶ್ವಿನ್ ಮೇಲೆ ಹಲ್ಲೆ ನಡೆದಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಆತನ ಸಹೋದ್ಯೋಗಿಗಳೇ ಎಂಬ ಸತ್ಯಾಂಶ ಹೊರ ಬಂದಿದೆ. ಹಲ್ಲೆ ನಡೆಸಲು ಯತ್ನಿಸಿದವರನ್ನು ರಾಜ್‍ಮನೆ ಇಂಡಸ್ಟ್ರಿಸ್‍ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು, ಶ್ರೀಕಾಂತ್, ಪ್ರಕಾಶ್ ಎಂದು ಗುರುತಿಸಲಾಗಿದೆ.

    ಘಟನೆ ಕುರಿತು ಮಹದೇವಪುರ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

    https://www.youtube.com/watch?v=qM2yJKny7-s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುರಸಭೆ ಮುಖ್ಯಾಧಿಕಾರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಮುಖಂಡ

    ಪುರಸಭೆ ಮುಖ್ಯಾಧಿಕಾರಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ ಮುಖಂಡ

    ಗದಗ: ಮುಖಂಡನೊಬ್ಬ ರೋಣ ಪುರಸಭೆ ಮುಖ್ಯಾಧಿಕಾರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ್ದಾನೆ.

    ಶರಣಪ್ಪ ಪೂಜಾರ್ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿದ ಪ.ಜಾತಿ-ಪ.ಪಂಗಡ ಮುಖಂಡ. ಪೌರಕಾರ್ಮಿಕ ವೇತನ ಪಾವತಿ ವಿಳಂಬ ಪ್ರಶ್ನಿಸಿ, ಪುರಭೆಯ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರ ಕಚೇರಿಯಲ್ಲಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಅಧಿಕಾರಿಯೊಬ್ಬರು ಹಲ್ಲೆ ತಡೆದಿದ್ದಾರೆ.

    ಘಟನೆಯ ವಿವರ:
    ಬಾಕಿ ಇರುವ ವೇತನ ನೀಡುವಂತೆ ಒತ್ತಾಯಿಸಿ ರೋಣ ಪುರಸಭೆಯ ಪೌರಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅಲ್ಲಿಗೆ ಬಂದ ಕೆಲವು ಮುಖಂಡರು ಲಕ್ಷ್ಮಣ ಕಟ್ಟಿಮನಿ ಅವರ ಕಚೇರಿಗೆ ಹೋಗಿದ್ದಾರೆ. ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರ ಜೊತೆಗೆ ಶರಣಪ್ಪ ಪೂಜಾರ್ ವಾಗ್ದಾಳಿಗೆ ಇಳಿದಿದ್ದಾರೆ. ಅವಾಚ್ಯ ಪದಗಳಿಂದ ನಿಂದಿಸಿ, ವೇತನವಿಲ್ಲದೆ ಅನೇಕ ಸಮಸ್ಯೆಗಳನ್ನು ಪೌರಕಾರ್ಮಿಕರು ಎದುರಿಸಿದ್ದಾರೆ. ಇದೇ ಪರಿಸ್ಥಿತಿ ನಿಮ್ಮ ಮನೆಯಲ್ಲಿ ನಿರ್ಮಾಣವಾಗಿ ಯಾರಾದರೂ ಮೃತಪಟ್ಟರೆ ನಡೆಯುತ್ತಾ? ವೇತನ ವಿಳಂಭವಾಗಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

    ಸ್ವಲ್ಪ ವಿಳಂಬವಾಗಿದ್ದು, ಕೆಲವೇ ದಿನಗಳಲ್ಲಿ ವೇತನ ಪಾವತಿ ಮಾಡಲಾಗುತ್ತದೆ ಎಂದು ಲಕ್ಷ್ಮಣ ಕಟ್ಟಿಮನಿ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಅಸಮಾಧಾನ ಹೊರಹಾಕಿದ ಶರಣಪ್ಪ, ಟೇಬಲ್ ಮೇಲಿದ್ದ ಗ್ಲೋಬ್ ಎತ್ತಿಕೊಂಡು ಹಲ್ಲೆಗೆ ಯತ್ನಿಸಿದ್ದಾನೆ. ಆತನ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬರು ತಕ್ಷಣವೇ ಹಲ್ಲೆಯನ್ನು ತಪ್ಪಿಸಿದ್ದಾರೆ. ಬಳಿಕ ಪುರಸಭೆ ಅಧಿಕಾರಿಯೊಬ್ಬರು ಮಧ್ಯ ಪ್ರವೇಶಿಸಿ, ಮುಖಂಡರನ್ನು ಹಾಗೂ ಪೌರಕಾರ್ಮಿಕರನ್ನು ಮುಖ್ಯಾಧಿಕಾರಿಗಳ ಕಚೇರಿಯಿಂದ ಹೊರಗೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • `ಯುಗಪುರುಷ’ ಚಿತ್ರದ ನಟನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

    `ಯುಗಪುರುಷ’ ಚಿತ್ರದ ನಟನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ

    ರಾಮನಗರ: ಸ್ಯಾಂಡಲ್‍ವುಡ್‍ನ `ಯುಗಪುರುಷ’ ಚಿತ್ರದ ನಟ ಅರ್ಜುನ್ ದೇವ್ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಯತ್ನಸಿರುವ ಘಟನೆ ಇಂದು ರಾಮನಗರದಲ್ಲಿ ನಡೆದಿದೆ.

    ಜಮೀನು ವ್ಯಾಜ್ಯ ಪ್ರಕರಣವೊಂದರ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಹೊರಟಿದ್ದ ಸಂದರ್ಭದಲ್ಲಿ ನಟನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

    ರಾಮನಗರ ತಾಲೂಕಿನ ಮಾಯಗಾನಹಳ್ಳಿ ಸಮೀಪ ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಸಂಬಂಧ ಇಂದು ನ್ಯಾಯಾಲದ ವಿಚಾರಣೆಗೆ ನಟ ಅರ್ಜುನ್ ದೇವ್ ಬೆಂಗಳೂರಿನಿಂದ ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹೊರಟಿದ್ರು. ಬೆಂಗಳೂರು-ಮೈಸೂರು ಹೆದ್ದಾರಿಯ ಎಸ್‍ಬಿಐ ಬ್ಯಾಂಕ್ ಪಕ್ಕದ ಕೋರ್ಟ್‍ನ ಮುಂಭಾಗದ ಗೇಟ್ ಸಮೀಪ ಕಾರು ನಿಲ್ಲಿಸುತ್ತಿದ್ದಂತೆ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ರಾಡ್‍ನಿಂದ ಹಲ್ಲೆಗೆ ಮುಂದಾಗಿದ್ದಾರೆ.

    ಕಾರಿನ ಮುಂಭಾಗದ ಗ್ಲಾಸ್‍ಗೆ ರಾಡ್‍ನಿಂದ ಹೊಡೆದಿದ್ದು ಗ್ಲಾಸ್ ಜಖಂಗೊಂಡಿದೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಮತ್ತೋರ್ವ ದುಷ್ಕರ್ಮಿ ಲಾಂಗ್ ಹಿಡಿದಿದ್ದ ಎನ್ನಲಾಗ್ತಿದೆ.

    ಘಟನೆ ಸಂಬಂಧ ರಾಮನಗರದ ಐಜೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಟ ಅರ್ಜುನ್ ದೇವ್ ಅವರ ವಿಚಾರಣೆ ಮಾಡ್ತಿದ್ದಾರೆ.