ಮೈಸೂರು: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ವ್ಯಕ್ತಿ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
ಮೈಸೂರಿನ ರಾಮಾನುಜ ರಸ್ತೆಯ 12 ಕ್ರಾಸ್ ಬಳಿ ಕಾರಿನಲ್ಲಿ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಆಟೋದಲ್ಲಿದ್ದ ಮಹಿಳೆಯರು ಹಾಗೂ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಚಲಿಸುತ್ತಿದ್ದ ಆಟೋವನ್ನು ಕಾರಿನಲ್ಲಿ ಬಂದು ದುಷ್ಕರ್ಮಿಗಳು ಅಡ್ಡ ಹಾಕಿದ್ದಾರೆ. ನಂತರ ಕಾರಿನಿಂದ ಇಳಿದು ಏಕಾಏಕಿ ಲಾಂಗ್ ತೆಗೆದು ಆಟೋದಲ್ಲಿದ್ದವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸುತ್ತಮುತ್ತ ಜನರು ಭಯಭೀತರಾಗಿ ಘಟನೆ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಯಚೂರು: ಅನೈತಿಕ ಸಂಬಂಧದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಿ ಮೃತನ ಕಡೆಯವರು ಮಹಿಳೆಯೊರ್ವಳನ್ನು ಮರಕ್ಕೆ ಕಟ್ಟಿ ಥಳಿಸಿರುವ ಅಮಾನವೀಯ ಘಟನೆ ರಾಯಚೂರು (Raichuru) ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
20 ದಿನಗಳ ಹಿಂದೆ ರಂಗಪ್ಪ ಎಂಬಾತ ಮೂರ್ಛೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವಿಗೆ ಈ ಮಹಿಳೆ ಕಾರಣ ಎಂದು ಶಂಕಿಸಿದ್ದಾರೆ. ಮಹಿಳೆಯ ಮನೆಗೆ ಬಂದು ಆಕೆಯ ಮನೆಯ ಎದುರಿಗಿದ್ದ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ನೂರಾರು ಜನರ ಮುಂದೆಯೇ ದೌರ್ಜನ್ಯ ಎಸಗಿದ್ದರೂ ಕೂಡ ಯಾರು ರಕ್ಷಣೆಗೆ ಮುಂದಾಗಿಲ್ಲ.
ಮಂಡ್ಯ: ವಿಚಾರಣೆಗೆ ಕರೆದ ಎಎಸ್‌ಐ (ASI) ಮೇಲೆ ನಡುರಸ್ತೆಯಲ್ಲೇ ಹಲ್ಲೆಗೆ ಯತ್ನಿಸಿ ರಂಪಾಟ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲದಲ್ಲಿ (Nagamangala) ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್‌ಐ ರಾಜು ಮೇಲೆ ಮಜ್ಜನಕೊಪ್ಪಲು ಪೂಜಾರಿ ಕೃಷ್ಣ ಹಲ್ಲೆಗೆ ಯತ್ನಿಸಿ ದರ್ಪ ತೋರಿದ್ದಾನೆ. ಆರೋಪಿ ಕೃಷ್ಣನ ವಿರುದ್ಧ ಆತನ ತಾಯಿ ಠಾಣೆಗೆ ದೂರು ನೀಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ಸಲ್ಲಿಸಲಾಗಿತ್ತು. ದೂರಿನ ಹಿನ್ನೆಲೆ ಕೃಷ್ಣನನ್ನು ಠಾಣೆಗೆ ಕರೆತರಲು ಎಎಸ್‌ಐ ರಾಜು ತೆರಳಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್‌ಐ ರಾಜು ಠಾಣೆಗೆ ಕರೆದಿದ್ದರು. ಇದನ್ನೂ ಓದಿ: ಆನೇಕಲ್| ತಾಯಿ ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ
ಠಾಣೆಗೆ ಬರಲು ಒಪ್ಪದಿದ್ದಾಗ ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಎಎಸ್‌ಐ ಯತ್ನಿಸಿದ್ದಾರೆ. ಈ ವೇಳೆ ಎಎಸ್‌ಐ ರಾಜುವನ್ನು ಕೃಷ್ಣ ತಳ್ಳಿದ್ದಾನೆ. ತಳ್ಳಾಡಿದಾಗ ರಾಜು ಕೆಳಗೆ ಬಿದ್ದಿದ್ದಾರೆ. ಬಳಿಕ ಕೃಷ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಎಲ್ಲಾ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಕೋಲಾರ | ಮದುವೆ ಮಾಡ್ಕೊಡಿ ಎಂದಿದ್ದಕ್ಕೆ ವಿವಾಹಿತನನ್ನು ಅಟ್ಟಾಡಿಸಿ ಕೊಂದ ಪ್ರೇಯಸಿ ಮನೆಯವ್ರು!
ಯಾದಗಿರಿ: ಅಂತರ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಯುವತಿಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ (Yadagiri) ಗ್ರಾಮೀಣ ಭಾಗದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ನಿಂಗಪ್ಪ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಇಬ್ಬರು ಪ್ರೀತಿಯಲ್ಲಿ ಬಿದ್ದು ಓಡಾಡುವುದನ್ನ ಯುವತಿಯ ಕುಟುಂಬಸ್ಥರು ಗಮನಿಸಿದ್ದರು. ನಿಂಗಪ್ಪನನ್ನು ಕರೆದು ಯುವತಿಯ ಸಹವಾಸ ಬಿಡುವಂತೆ ಆಕೆಯ ಕುಟುಂಬಸ್ಥರು ತಾಕೀತು ಮಾಡಿದ್ದರು. ಇದಾದ ಬಳಿಕ ಆಕೆಯಿಂದ ನಿಂಗಪ್ಪ ಅಂತರ ಕಾಯ್ದುಕೊಂಡಿದ್ದ. ಇದನ್ನು ಸಹಿಸಲಾಗದೇ ಯುವತಿ, ನೀನು ನನ್ನ ಬಿಟ್ಟರೆ ನಾನು ಸಾಯುತ್ತೇನೆಂದು ಹೇಳಿ ನಿಂಗಪ್ಪನೊಂದಿಗೆ ಓಡಿಹೋಗಿದ್ದಳು.ಇದನ್ನೂ ಓದಿ: ಫ್ಯಾನ್ಸ್‌ಗೆ ಸೃಜನ್ ಲೋಕೇಶ್ ಗುಡ್ ನ್ಯೂಸ್- ಮತ್ತೆ ಶುರುವಾಗಲಿದೆ ‘ಮಜಾ ಟಾಕೀಸ್’
ಓಡಿ ಹೋಗಿ ಗುಜರಾತ್‌ನಲ್ಲಿ ವಾಸವಾಗಿದ್ದರು. ಬಳಿಕ ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿ ಯುವತಿಯನ್ನು ಆಕೆ ಮನೆಗೆ ಕಳುಹಿಸಿದ್ದರು. ತದನಂತರ ನಿಂಗಪ್ಪ ಕೂಲಿ ಕೆಲಸಕ್ಕಾಗಿ ಚಿತ್ತಾಪುರಕ್ಕೆ ತೆರಳಿದ. ಆದ ಯುವತಿ ನಿಂಗಪ್ಪನಿಗೆ ಕರೆಮಾಡಿ ಮತ್ತೆ ಆತನೊಂದಿಗೆ ಪರಾರಿಯಾಗಿದ್ದಳು. ಇದರಿಂದ ಸಿಟ್ಟಿಗೆದ್ದ ಯುವತಿಯ ಕುಟುಂಬಸ್ಥರು ನಿಂಗಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್‌ವೊಂದರ (Apartment) ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅಪಾರ್ಟ್‌ಮೆಂಟ್ ಮಾಲೀಕರೂ ಆಗಿರುವ ಕೆಂಪೇಗೌಡ (Kempegowda) ಅವರು ನೀಡಿದ ಹೇಳಿಕೆಯಲ್ಲಿ ಹಲವು ರಹಸ್ಯಗಳು ಬೆಳಕಿಗೆ ಬಂದಿವೆ.
ಹಲ್ಲೆ ಆರೋಪಕ್ಕೆ ಒಳಗಾಗಿರುವ ಮಂಜುನಾಥ್ ಗೌಡನ ತಂದೆ ಕೆಂಪೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಯುವತಿ ಹಲವು ತಿಂಗಳಿಂದ ಫ್ಲಾಟ್‌ನಲ್ಲಿ ವಾಸವಾಗಿದ್ದಾಳೆ. ಆಕೆ ಮನೆ ಬಾಡಿಗೆ ಕೊಡುವಾಗಲೇ ಬೇರೆ ಗಂಡಸರನ್ನು ಕರೆದುಕೊಂಡು ಬರದಂತೆ ಹೇಳಿದ್ದೆವು. ಆರಂಭದಲ್ಲಿ ಒಂದು ತಿಂಗಳು ಸುಮ್ಮನಿದ್ದಳು. ನಂತರ ಗಂಡಸರನ್ನ ಕರೆದುಕೊಂಡು ಬರೋದಕ್ಕೆ ಶುರು ಮಾಡಿದಳು ಎಂದಿದ್ದಾರೆ.
ಅಪಾರ್ಟ್‌ಮೆಂಟ್ ಮುಂಭಾಗಕ್ಕೆ ಬಂದು, ಸಿಗರೇಟ್ ಸೇದುತ್ತಿದ್ದಳು, ಹುಡುಗರೊಂದಿಗೆ ಸೇರಿಕೊಂಡು ಶಬದ್ಧ ಮಾಡುತ್ತಿದ್ದಳು. ಸಾಕು ನಾಯಿಯನ್ನು ಮನೆಯಲ್ಲೇ ಗಲೀಜುಮಾಡಿಸುತ್ತಿದ್ದಳು. ಇದರಿಂದ ಸ್ಥಳೀಯರು ರೋಹಿಹೋಗಿದ್ದರು ಬಂದ 6 ತಿಂಗಳಲ್ಲೇ ಇಷ್ಟೊಂದು ರಂಪಾಟ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದು ಬಂದು ಯುವತಿ ಜೊತೆ ಅಸಭ್ಯ ವರ್ತನೆ – ಅಪಾರ್ಟ್ಮೆಂಟ್ ಮಾಲೀಕನ ಪುತ್ರನ ವಿರುದ್ಧ ದೂರು
ರಾತ್ರಿ ಆದ್ರೆ ಹುಡುಗರು ಬರ್ತಾ ಇದ್ದರು, ದಿನ ರಾತ್ರಿ ಇಬ್ಬರು, ಮೂವರು ಹುಡುಗರನ್ನ ಕರೆದುಕೊಂಡು ಬರ್ತಿದ್ಲು. ರಾತ್ರಿ ವೇಳೆ ತುಂಬಾ ಲೇಟಾಗಿ ಮನೆಗೆ ಬರ್ತಿದ್ಲು. ಸೆಕ್ಯೂರಿಟಿಗೆ ಬಾಯಿಗೆ ಬಂದ ಹಾಗೆ ಬೈದು ಗೇಟ್ ಓಪನ್ ಮಾಡಿಸ್ತಿದ್ಲು. ಹುಡುಗರ ಜೊತೆ ಮನೆಯಲ್ಲೇ ಕುಡಿದು ಗಲಾಟೆ ಮಾಡ್ತಾ ಇದ್ದಳು. ಅಕ್ಕಪಕ್ಕದ ಫ್ಲ್ಯಾಟ್ ನವರು ನಮಗೆ ಹೇಳಿದ್ರು. ಹಾಗಾಗಿ ಈ ಹಿಂದೆಯೂ ಮನೆ ಕಾಲಿ ಮಾಡುವಂತೆ ತಿಳಿಸಿದ್ವಿ. ಖಾಲಿ ಮಾಡಲ್ಲ ಅಂತ ಗಲಾಟೆ ಮಾಡಿದ್ಲು, ಹಲ್ಲೆ ಮಾಡೋಕೆ ಬರ್ತಿದ್ಲು ಎಂದು ಯುವತಿ ರಂಪಾಟಗಳನ್ನ ಬಿಚ್ಚಿಟ್ಟಿದ್ದಾರೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯೆ ನೀಡಿದ್ದು, ಮನೆ ಮಾಲೀಕ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆಂದು ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಯುವತಿಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥ ಗೌಡನನ್ನ ಬಂಧನ ಮಾಡಲಾಗಿದೆ. ಆರೋಪಿ ಯುವತಿ ಬೇರೆ ಹುಡುಗರನ್ನ ಕರೆದುಕೊಂಡು ಪಾರ್ಟಿ ಮಾಡ್ತಾ ಇದ್ದರು, ಪಾರ್ಟಿ ಮಾಡಿ ಗಲಾಟೆ ಮಾಡಿದ್ದನ್ನ ಅಕ್ಕಪಕ್ಕದ ಮನೆಯವರು ನಮಗೆ ದೂರು ಹೇಳ್ತಾ ಇದ್ದರು. ಹಾಗಾಗಿ ಹೇಳಲು ಹೋದಾಗ ನನಗೆ ತಳ್ಳಿದ್ದರಿಂದ ನಾನು ಕೇಳಗಡೆ ಬಿದ್ದೆ, ಆದಾದ ಬಳಿಕ ನಾನು ಹಲ್ಲೆ ಮಾಡಿದ್ದಾಗಿ ಪೊಲೀಸರ ತನಿಖೆಯ ವೇಳೆ ಆರೋಪಿ ಹೇಳಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಯುವತಿ ಫ್ಲಾಟ್‌ನಲ್ಲಿ ಬಾಡಿಗೆಗೆ ಇದ್ದಳು. ಪಾರ್ಸೆಲ್ ತೆಗೆದುಕೊಳ್ಳಲು ಗೇಟ್ ಬಳಿ ಬಂದವಳನ್ನ ಫ್ಲ್ಯಾಟ್‌ಗೆ ಎಳೆದೊಯ್ಯಲು ಆರೋಪಿ ಯತ್ನಿಸಿದ್ದ. ಅವಾಶ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ ಫ್ಲಾಟ್‌ಗೆ ಎಳೆದೊಯ್ಯಲು ಯತ್ನಿಸಿದ್ದಾಗಿ ಯುವತಿ ದೂರು ನೀಡಿದ್ದಾರೆ.
ಡಿ.3ರ ರಾತ್ರಿ 10:30ಕ್ಕೆ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಯುವತಿ ಹೋಗಿದ್ದಳು. ಆಗ ಆರೋಪಿ ಮಂಜುನಾಥ್ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕುಡಿದಿದ್ದರಿಂದ ಏನೂ ಮಾತನಾಡದೇ ಯುವತಿ ಸುಮ್ಮನಾಗಿದ್ದಳು. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೇ ಬಿಗಿಯಾಗಿ ಕುತ್ತಿಗೆ ಹಿಡಿದಿದ್ದ, ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ಆಗ ಆತನ ಮನೆಯೊಳಗೆ ಯುವತಿಯನ್ನ ಎಳೆದುಕೊಂಡು ಹೋಗಲು ಯತ್ನಿಸಿದ. ತಪ್ಪಿಸಿಕೊಂಡು ಹೋಗುವಾದ ಮತ್ತೆ ಬಲವಾಗಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ದುಸ್ಥಿತಿ ತಲುಪಿದ 25 ವರ್ಷಗಳ ಹಳೇ ಸೇತುವೆ – ನಿತ್ಯ ಜೀವ ಭಯದಲ್ಲೇ ಸವಾರರ ಸಂಚಾರ
ಗಲಾಟೆಯಾದ ಬೆಳಗ್ಗೆ ಕಿಟಕಿಯಲ್ಲಿ ಇಣುಕಿ ಮಂಜುನಾಥ್ ನೋಡಿದ್ದನಂತೆ. ಆಗ ಮನೆ ಒಳಗೆ ಬರ್ತೀನಿ ಎಂದಿದ್ದಾನೆ. ಯುವತಿ ಒಳಗೆ ಬಿಡದಿದ್ದಕ್ಕೆ ಮತ್ತೆ ನಿಂದನೆ ಮಾಡಿದ್ದಾನೆ. ಈ ಹಿಂದೆಯೂ ತನ್ನ ಜೊತೆ ಗಲಾಟೆ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.
ಬೆಳಗಾವಿ: ನಗರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ (Assault) ಮಾಡಿದ ಘಟನೆ ನಗರದ ವಡ್ಡರವಾಡಿಯಲ್ಲಿ ನಡೆದಿದೆ.
ಮಗಳು ವೇಶ್ಯಾವಾಟಿಕೆ (Prostitution) ಮಾಡುತ್ತಿದ್ದಾಳೆ ಎಂದು ಆರೋಪಿಸಿ ಮನೆಗೆ ನುಗ್ಗಿ ಎಳೆದು ತಂದು ತಾಯಿ, ಮಗಳ ಮೇಲೆ ಮನೆಯ ಪಕ್ಕದ ಅಷ್ಟೇಕರ್ ಕುಟುಂಬ ಹಲ್ಲೆ (Assault) ಮಾಡಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ತಾಯಿ ಮತ್ತು ಮಗಳು ಎರಡು ದಿನ ಮಾಳಮಾರುತಿ ಠಾಣೆಗೆ ದೂರು ನೀಡಿದ್ದಾರೆ. ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದ ಕಾರಣ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಬಿಎನ್‌ಎಸ್ ಕಾಯ್ದೆಯಡಿ ಮೂವರ ವಿರುದ್ದ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಉತ್ತರ ಪ್ರದೇಶ ಆಸ್ಪತ್ರೆಯಲ್ಲಿ ಅಗ್ನಿ ಅವಘಡ – 10 ಮಕ್ಕಳು ಸಜೀವ ದಹನ
ಬಾಲಕಿಯ ಜೊತೆಗೆ ನಾಲ್ಕು ವರ್ಷದಿಂದ ತಾಯಿ ಮಗಳು ಮನೆಯಲ್ಲಿ ವಾಸವಾಗಿದ್ದಾರೆ. ಸಾರ್ವಜನಿಕವಾಗಿ ವೃದ್ಧೆಯ ಬ್ಲೌಸ್ ಹರಿದು ಹಾಕಿ ಅಮಾನವೀಯವಾಗಿ ವರ್ತನೆ ತೋರಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದೆ.
ದೂರಿನಲ್ಲಿ ಏನಿದೆ?
ಸಂಬಂಧ ಇಲ್ಲದವರು ಮನೆಗೆ ಬಂದು ಹೋಗುತ್ತಿದ್ದಾರೆ. ವೇಶ್ಯಾವಾಟಿಕೆ ಮಾಡುತ್ತಿದ್ದೀರಿ ಎಂದು ಆರೋಪಿಸಿ ನಮ್ಮ ಮೇಲೆ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾರೆ. ನಾವು ಇರುವ ಮನೆಯನ್ನು ತೊರೆಯುವಂತೆ ಮಾಡಲು ಸುಖಾಸುಮ್ಮನೆ ಜಗಳ ತೆಗೆದು ಹಲ್ಲೆ ಮಾಡುತ್ತಿದ್ದಾರೆ. ಹೀಗಾಗಿ ನಮಗೆ ಜೀವ ಭಯ ಇದೆ ರಕ್ಷಣೆ ನೀಡಿ ಎಂದು ತಾಯಿ ಮತ್ತು ಮಗಳು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮೂವರು ಅರೆಸ್ಟ್:
ಬೆಳಗಾವಿ ನಗರದ ವಡ್ಡರವಾಡಿಯಲ್ಲಿ ಮಹಿಳೆ ಮೇಲೆ ಅಮಾನವೀಯ ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧನ ಮಾಡಲಾಗಿದೆ ಎಂದು ಕಮಿಷನರ್ ಯಡಾ ಮಾರ್ಟಿನ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ವಿಷಯಕ್ಕೆ ದೂರುದಾರರು ಮತ್ತು ಅಕ್ಕ ಪಕ್ಕದ ಮನೆಯವರ ಮಧ್ಯೆ ಜಗಳ ನಡೆದಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಡಿಸಿಪಿ ಅವರಿಗೆ ಸೂಚಿಸಿದ್ದೇನೆ. ಇನ್ನು ದೂರು ತೆಗೆದುಕೊಳ್ಳಲು ವಿಳಂಬ ಆಗಿರುವುದಕ್ಕೆ ಮತ್ತು ದೂರು ವಾಪಸ್ಸು ಪಡೆಯಲು ಪಂಚರು ಒತ್ತಡ ಹಾಕಿರುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಸ್ಪಷ್ಟಪಡಿಸಿದರು.
ಚಿಕ್ಕಮಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವೈದ್ಯರ (Doctor) ಮೇಲೆ ಮಹಿಳೆ (Woman) ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ಮೂಳೆ ತಜ್ಞ ವೆಂಕಟೇಶ್ ಮೇಲೆ ಮಹಿಳೆ ಏಕಾಏಕಿ ಹಲ್ಲೆ ನಡೆಸಿದ್ದು, ಶರ್ಟ್, ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಯುವಕನೋರ್ವ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆ ನೀಡುವ ಸಮಯದಲ್ಲಿ ಮಹಿಳೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾಳೆ. ರೋಗಿಯ ಅಕ್ಕನಿಗೆ ವೈದ್ಯರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆ ಆಕೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಇದನ್ನೂ ಓದಿ: Valmiki Scam| ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ನಾಗೇಂದ್ರ – ಇಡಿ ಚಾರ್ಜ್‌ಶೀಟ್ ಸಲ್ಲಿಕೆ
ಘಟನೆಯ ಬಳಿಕ ರಕ್ಷಣೆ ನೀಡುವಂತೆ ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನ್ಯಾಯ ಕೊಡಿಸುವಂತೆ ಆಸ್ಪತ್ರೆ ಸಿಬ್ಬಂದಿ ಆಗ್ರಹಿಸಿದ್ದಾರೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೈಲು ಹಳಿ ಮೇಲೆ ಸಿಮೆಂಟ್ ಬ್ರಿಕ್ಸ್ – ಮತ್ತೊಂದು ದುಷ್ಕೃತ್ಯಕ್ಕೆ ಸಂಚು
ಬೆಂಗಳೂರು: ಕುಡಿದ ನಶೆಯಲ್ಲಿ ಕ್ಲುಲ್ಲಕ ಕಾರಣಕ್ಕೆ ಮಹಿಳೆ ಮತ್ತ ಯುವತಿಯನ್ನು ಎಳೆದಾಡಿ ಪುಂಡರು ಹಲ್ಲೆ ನಡೆಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ತಲಗಟ್ಟಪುರ ಠಾಣಾ ವ್ಯಾಪ್ತಿಯ ಆವಲಹಳ್ಳಿಯಲ್ಲಿ ಭಾನುವಾರ ಸಂಜೆ 6 ಗಂಟೆ ವೇಳೆಗೆ ಘಟನೆ ನಡೆದಿದೆ. ಬಾಲಾಜಿ ಮತ್ತು ಯೋಗಿ ಮತ್ತು ಮೂವರ ಗ್ಯಾಂಗ್ ನಿಂದ ಈ ಕೃತ್ಯ ಎಸೆಯಲಾಗಿದೆ. ಇದನ್ನೂ ಓದಿ: ಇಂದು ಪ್ರಜ್ವಲ್ ರೇವಣ್ಣ ಎಸ್‍ಐಟಿ ಕಸ್ಟಡಿ ಅಂತ್ಯ
ಮಹಿಳೆ ಮತ್ತು ಯುವತಿ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಬಳಿಕ ನೆರೆಹೊರೆಯವರ ಸಹಾಯದಿಂದ ಯುವತಿ ಮತ್ತು ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ.
ರಸ್ತೆಯಲ್ಲಿ ಮಗ ಮಕ್ಕಳೊಂದಿಗೆ ಆಟವಾಡಿದ್ದನು. ಈ ವೇಳೆ ಮನೆ ಬಳಿ ಬಂದ ಗ್ಯಾಂಗ್ ನಿಂದಿಸಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಪುಂಡರು ಯುವತಿಯ ಕೂದಲು ಹಿಡಿದೆಳೆದು ಅಟ್ಟಾಡಿಸುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದಿದ್ದಾರೆ.
ಸದ್ಯ ಆರೋಪಿಗಳಾದ ಬಾಲಾಜಿ ಮತ್ತು ಯೋಗಿ ಇತರರ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಐಪಿಸಿ ಸೆಕ್ಷನ್ 506 (ಬೆದರಿಕೆ), 34, 504 (ಶಾಂತಿ ಕದಡುವ ಪ್ರಯತ್ನ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 354 (ಮಹಿಳೆಯ ಮೇಲೆ ದೌರ್ಜನ್ಯ) ಅಡಿ ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.