Tag: ಹಲ್ಲಿ

  • ಬಿಸಿಯೂಟದಲ್ಲಿ ಹಲ್ಲಿ ಪತ್ತೆ – ವಿದ್ಯಾರ್ಥಿಗಳು ಅಸ್ವಸ್ಥ

    ಬಿಸಿಯೂಟದಲ್ಲಿ ಹಲ್ಲಿ ಪತ್ತೆ – ವಿದ್ಯಾರ್ಥಿಗಳು ಅಸ್ವಸ್ಥ

    -ಅಡುಗೆ ಸಿಬ್ಬಂದಿ ವಜಾ, ಶಿಕ್ಷಕರಿಗೆ ನೋಟಿಸ್

    ರಾಯಚೂರು: ಮಧ್ಯಾಹ್ನದ ಬಿಸಿಯೂಟದಲ್ಲಿ (Lunch) ಹಲ್ಲಿ (Lizard) ಪತ್ತೆಯಾಗಿದ್ದು, ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ರಾಯಚೂರು (Raichur) ತಾಲೂಕಿನ ಅಪ್ಪನದೊಡ್ಡಿ (Appanadoddi) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    50 ಜನ ಮಕ್ಕಳಲ್ಲಿ ಮೂರು ಜನ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಲಾಗಿತ್ತು. ಊಟ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥರಾಗಿದ್ದು, ಅಡುಗೆ ಪಾತ್ರೆಯ ತಳದಲ್ಲಿ ಹಲ್ಲಿ ಪತ್ತೆಯಾಗಿದೆ. ವಾಂತಿ, ಭೇದಿ, ತಲೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಮಕ್ಕಳನ್ನು ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ರಾಯಚೂರಿನ ರಿಮ್ಸ್ (RIMS) ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ‌ ಭಾನುವಾರ, ಸೋಮವಾರ ನಂದಿಬೆಟ್ಟ ಸಂಪೂರ್ಣ ಬಂದ್

    ಘಟನೆ ಹಿನ್ನೆಲೆ ಮೂರು ಜನ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾ (Dissmiss) ಮಾಡಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು ಸೇರಿ ಮೂರು ಜನ ಶಿಕ್ಷಕರಿಗೆ ನೋಟೀಸ್ ನೀಡಿ ತಾತ್ಕಾಲಿಕವಾಗಿ ಬೇರೆಡೆ ನಿಯೋಜನೆ ಮಾಡಲಾಗಿದೆ ಎಂದು ಡಿಡಿಪಿಐ ವೃಷಭೇಂದ್ರಯ್ಯ ತಿಳಿಸಿದ್ದಾರೆ. ಘಟನೆ ಹಿನ್ನೆಲೆ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಶಾಲಾ ಆವರಣದಲ್ಲಿ ಜಮಾಯಿಸಿದ್ದರು. ಸದ್ಯ ಪರಿಸ್ಥಿತಿ ತಿಳಿಗೊಂಡಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ, ಅದರ ಬುದ್ಧಿ ಎರಡೂ ಹ್ಯಾಕ್: ಪ್ರಲ್ಹಾದ್ ಜೋಶಿ

    ಮುನ್ನೆಚ್ಚರಿಕೆಯಾಗಿ ಮಕ್ಕಳನ್ನು ಪೋಷಕರು ಆಸ್ಪತ್ರೆಗಳಿಗೆ ಕರೆತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಶಾಲೆಗೆ ಯಾಪಲದಿನ್ನಿ ಠಾಣೆ ಪೊಲೀಸರು, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಶಾಲೆಯಲ್ಲೇ ಮೆಡಿಕಲ್ ಕ್ಯಾಂಪ್ ಹಾಕಿದ್ದು, ವಿದ್ಯಾರ್ಥಿಗಳ ತಪಾಸಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯದಿಂದ ಹೊರಗುಳಿಯುತ್ತಾರಾ 6 ಲಕ್ಷ ಜನ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ

    ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ

    ಚಿತ್ರದುರ್ಗ: ವ್ಯಕ್ತಿಯೊಬ್ಬ ಮೆಣಸಿನಕಾಯಿ ಬಜ್ಜಿಯಂತೆ ಹಲ್ಲಿಯನ್ನು ಸಲೀಸಾಗಿ ಅಗೆದು ತಿಂದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಹೊಸದುರ್ಗ ತಾಲೂಕು ದೊಡ್ಡ ಬ್ಯಾಲದಕೆರೆ ನಿವಾಸಿ ಉಮೇಶ್ ಹಲ್ಲಿ ತಿಂದು ಸುದ್ದಿಯಾಗಿದ್ದಾರೆ. ಅವರು ಸಾರ್ವಜನಿಕರ ಮುಂದೆ ಹಲ್ಲಿಯನ್ನು ಸಲೀಸಾಗಿ ತಿಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬರೀ ಎರಡೇ ಅಲ್ಲ, ಮೂರು ಗುಂಪುಗಳಿವೆ: ಕಾರಜೋಳ

    ಮದ್ಯ ಸೇವಿಸಿ, ನಶೆಯಲ್ಲಿ ಹಲ್ಲಿ ಸೇವಿಸಿರಬಹುದು ಅಂತ ಶಂಕೆ ವ್ಯಕ್ತವಾಗಿದೆ. ಹಲ್ಲಿ ತಿಂದರೆ ಅಸ್ವಸ್ಥರಾಗುತ್ತಾರೆ. ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಸಮಸ್ಯೆಯಾಗಬಹುದು ಎಂಬ ಮಾತುಗಳ ಮಧ್ಯೆ ಉಮೇಶ್ ಹಲ್ಲಿ ತಿಂದು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

  • ಫುಡ್ ಆರ್ಡರ್ ಮಾಡಿ ಹಲ್ಲಿ ಕಂಡು ಬೆಚ್ಚಿಬಿದ್ದಳು

    ಫುಡ್ ಆರ್ಡರ್ ಮಾಡಿ ಹಲ್ಲಿ ಕಂಡು ಬೆಚ್ಚಿಬಿದ್ದಳು

    ಮುಂಬೈ: ಆನ್‍ಲೈನ್‍ನಲ್ಲಿ ರೆಸ್ಟೋರೇಂಟ್‍ವೊಂದರಿಂದ ಫುಡ್ ಆರ್ಡರ್ ಮಾಡಿದ ಮಹಿಳೆಗೆ ಆಹಾರದಲ್ಲಿ ಹಲ್ಲಿಯೊಂದು ಕಂಡಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್ ಕುಮಾರ್ ಸಿನ್ಹಾ ಟ್ವಿಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾರೆ.

    ಜನವರಿ 14ರಂದು ಕೌಸ್ತವ್ ಕುಮಾರ್ ಸಿನ್ಹಾ ತಮ್ಮ ಟ್ವಿಟರ್ ಹ್ಯಾಂಡಲ್‍ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ನೋಯ್ಡಾದ ಗ್ರೆನೋ ವೆಸ್ಟ್‍ನಲ್ಲಿರುವ ಪಂಜಾಬಿ ರಸೋಯ್ ರೆಸ್ಟೊರೆಂಟ್‍ನಿಂದ ಆಹಾರವನ್ನು ಆರ್ಡರ್ ಮಾಡಿರುವುದಾಗಿ ವೀಡಿಯೊದಲ್ಲಿ ವ್ಯಕ್ತಿ ಹೇಳಿದ್ದಾನೆ. ಆಹಾರವನ್ನು ತೆರೆದ ತಕ್ಷಣ ಅದರೊಳಗಿನಿಂದ ಹಲ್ಲಿ ಹೊರಬಂದಿತು. ಸತ್ತ ಹಲ್ಲಿಯನ್ನು ನೋಡಿದ ಕೌಸ್ತವ್ ಟ್ವಿಟರ್ ಮೂಲಕ ದೂರು ದಾಖಲಿಸಿದ್ದಾರೆ. ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು

    ತನ್ನ ಟ್ವೀಟ್‍ನಲ್ಲಿ ಕೌಸ್ತವ್ ಕುಮಾರ್ ಸಿನ್ಹಾ, ತಿನ್ನುವ ಆಹಾರದಲ್ಲಿ ಸತ್ತ ಹಲ್ಲಿಯನ್ನು ನೋಡಿ ಆಘಾತವಾಗಿದೆ. ಕೋವಿಡ್‍ನ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ ಎಂದನಿಸುತ್ತಿದ್ದು, ಇದೊಂದು ತುಂಬಾ ಕೆಟ್ಟ ಅನುಭವ ಎಂದಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಪಂಜಾಬಿ ರಸೋಯ್ ಹೆಸರಿನ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್ ಮಾಡಿರುವುದಾಗಿ ಗ್ರಾಹಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಫೆÇೀನ್ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. ಆನ್‍ಲೈನ್ ಫುಡ್ ಸಮಸ್ಯೆ ಇದೆ ಮೊದಲೇನು ಅಲ್ಲ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ.

  • ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಶಾಲೆಯಲ್ಲಿ ಹಲ್ಲಿ ಬಿದ್ದಿದ್ದ ಬಿಸಿಯೂಟ ಸೇವಿಸಿ 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆಹಳ್ಳದಲ್ಲಿ ನಡೆದಿದೆ.

    ಹಲ್ಲಿ ಬಿದ್ದಿದ್ದ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಬಿಇಒ ಸ್ವಾಮಿ ಮಾಹಿತಿ ನೀಡಿದ್ದಾರೆ. ಅಸ್ವಸ್ಥ ಮಕ್ಕಳಿಗೆ ಹನೂರು ತಾಲೂಕಿನ ಕೌದಳ್ಳಿ, ರಾಮಾಪುರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ಬಳಿ ಬಂದಿದ್ದ ಎಡಿಸಿಗೆ ಕೊರೊನಾ ಪಾಸಿಟಿವ್

    ಅಸ್ವಸ್ಥಗೊಂಡ ಮಕ್ಕಳು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಬಿಇಒ ಟಿ.ಆರ್.ಸ್ವಾಮಿ ಭೇಟಿ ನೀಡಿ, ಕೆಲವರು ಮಕ್ಕಳನ್ನು ಕೌದಳ್ಳಿಯಿಂದ ರಾಮಾಪುರ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಕೇಂದ್ರದಲ್ಲೇ ಬೂಸ್ಟರ್ ಡೋಸ್ ಪಡೆದ ಬಿ.ಸಿ.ಪಾಟೀಲ್

    ಊಟದಲ್ಲಿ ಹಲ್ಲಿ ಬಿದ್ದಿದೆ ಎಂದ ಕೂಡಲೇ ಬಾಲಕನಿಗೆ ವಾಂತಿ ಕಾಣಿಸಿಕೊಂಡಿದೆ. ಒಬ್ಬ ಬಾಲಕನಿಗೆ ವಾಂತಿ ಆಗುತ್ತಿದ್ದಂತೆ ಗಾಬರಿಗೊಂಡು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಸದ್ಯ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆಂದು ಚಾಮರಾಜನಗರ ಡಿಡಿಪಿಐ ಮಂಜುನಾಥ್ `ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.

  • ಹಲ್ಲಿ ಬಿದ್ದ ಆಹಾರ ಸೇವಿಸಿ 10 ಮಕ್ಕಳು ಅಸ್ವಸ್ಥ

    ಹಲ್ಲಿ ಬಿದ್ದ ಆಹಾರ ಸೇವಿಸಿ 10 ಮಕ್ಕಳು ಅಸ್ವಸ್ಥ

    ಮಂಡ್ಯ: ಹಲ್ಲಿ ಬಿದ್ದಿರುವ ಆಹಾರವನ್ನು ಸೇವಿಸಿದ 10 ಮಕ್ಕಳು ಅಸ್ವಸ್ಥರಾದ ಘಟನೆ ಮಂಡ್ಯದ ಗಾಂಧಿನಗರದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

    10 ಮಂದಿ ಮಕ್ಕಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರನ್ನೆಲ್ಲ ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಂದಿನಂತೆ ಇಂದು ಕೂಡ ಅಂಗನವಾಡಿಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸಲಾಗಿತ್ತು. ಹೀಗೆ ಊಟ ಮಾಡಿದ ಕೆಲ ಕ್ಷಣದಲ್ಲೇ ಎಲ್ಲ ಮಕ್ಕಳು ಅಸ್ವಸ್ಥರಾಗಿದ್ದಾರೆ.

    ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಫ್ರೈಡ್ ರೈಸ್‍ನಲ್ಲಿ ಹಲ್ಲಿ ಪತ್ತೆ – ದೂರು ನೀಡಿದ ಗ್ರಾಹಕ

    ಫ್ರೈಡ್ ರೈಸ್‍ನಲ್ಲಿ ಹಲ್ಲಿ ಪತ್ತೆ – ದೂರು ನೀಡಿದ ಗ್ರಾಹಕ

    ತುಮಕೂರು: ಜಿಲ್ಲೆಯ ಶಿರಾದ ಅರಸು ಹೋಟೆಲ್ ನಲ್ಲಿ ಉಪಾಹಾರ ಸೇವಿಸುತ್ತಿದ್ದ ಗ್ರಾಹಕರೊಬ್ಬರ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಗಿದೆ.

    ರಮೇಶ್ ಎಂಬವರು ವೆಜ್ ಫ್ರೈಡ್ ರೈಸ್ ಆರ್ಡರ್ ಮಾಡಿ ಸೇವಿಸುತ್ತಿದ್ದರು. ಈ ವೇಳೆ ಇತರ ತರಕಾರಿಗಳೊಂದಿಗೆ ಹಲ್ಲಿಯನ್ನು ಫ್ರೈ ಮಾಡಲಾಗಿತ್ತು. ತಟ್ಟೆಯಲ್ಲಿ ಸತ್ತ ಹಲ್ಲಿಯನ್ನು ಕಂಡು ಗ್ರಾಹಕ ರಮೇಶ್ ಆತಂಕಗೊಂಡಿದ್ದರು.

    ರಮೇಶ್ ಸೇರಿದಂತೆ ಇತರ 20 ಜನರು ರವಿಶಂಕರ್ ಗುರೂಜಿಯನ್ನು ಭೇಟಿ ಮಾಡಲು ಮಹಾರಾಷ್ಟ್ರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಹೋಟೆಲ್‍ನಲ್ಲಿ ಉಪಾಹಾರ ಸೇವಿಸಲು ಹೋಗಿದ್ದರು. ರಮೇಶ್ ಫ್ರೈಡ್ ರೈಸ್ ಆರ್ಡರ್ ಮಾಡಿದರೆ, ಉಳಿದ ಮಂದಿ ಬೇರೆ ಬೇರೆ ತಿಂಡಿ ಆರ್ಡರ್ ಮಾಡಿ ಅದನ್ನು ಸೇವಿಸುತ್ತಿದ್ದರು.

    ಆಹಾರದಲ್ಲಿ ಹಲ್ಲಿ ಸಿಕ್ಕ ಪರಿಣಾಮ ಆಕ್ರೋಶಗೊಂಡ ಗ್ರಾಹಕರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆತಂಕಗೊಂಡ ಕೆಲವರು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬೆಂಗಳೂರಿಗೆ ತೆರಳಿದ್ದಾರೆ.

  • ರೈಲಿನಲ್ಲಿ ಕೊಟ್ಟ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ!

    ರೈಲಿನಲ್ಲಿ ಕೊಟ್ಟ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ!

    ಲಕ್ನೋ: ರೈಲಿನಲ್ಲಿ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಎಂದು ಭಾರತದ ಸಿಎಜಿ ವರದಿ ನೀಡಿದ ಒಂದು ವಾರದಲ್ಲೇ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯತನದ ಬಗ್ಗೆ ಘಟನೆಯೊಂದು ಬೆಳಕಿಗೆ ಬಂದಿದೆ.

    ಇಂದು ಬೆಳಿಗ್ಗೆ ಪೂರ್ವ ಎಕ್ಸ್ ಪ್ರೆಸ್‍ನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಯಾಣಿಕ ರೈಲ್ವೇ ಸಚಿವ ಸುರೇಶ್ ಪ್ರಭುಗೆ ಟ್ವಿಟ್ಟರ್‍ನಲ್ಲಿ ದೂರು ನೀಡಿದ್ದಾರೆ.

    ಮೊಕಾಮಾ ದಲ್ಲಿ ನಾನು ಊಟಕ್ಕೆ ಆರ್ಡರ್ ಮಾಡಿದೆ. ಅದರಲ್ಲಿ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಟಿಟಿಇ ಹಾಗೂ ಕ್ಯಾಂಟೀನ್ ಮ್ಯಾನೇಜರ್‍ಗೆ ದೂರು ನೀಡಿ ನಂತರ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದೆ ಎಂದು ಪ್ರಯಾಣಿಕ ಹೇಳಿದ್ದಾರೆ. ಉತ್ತರಪ್ರದೇಶದ ಚಾಂದೌಲಿ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಔಷಧಿ ನೀಡಲಾಯ್ತು ಎಂದಿದ್ದಾರೆ.

    ಟ್ವೀಟ್ ಮಾಡಿದ ಬಳಿಕ ಕಾನ್‍ಪುರ್‍ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ದಾನಾಪುರ್ ಡಿವಿಷನ್‍ನಲ್ಲಿ ಚೆಕ್ ಅಪ್ ಮಾಡಿ ಔಷಧಿ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಕಿಶೋರ್ ಕುಮಾರ್ ಹೇಳಿದ್ದಾರೆ.

    ಘಟನೆ ಬಗ್ಗೆ ವರದಿಯಾದ ಬಳಿಕ ಪೂರ್ವ ಎಕ್ಸ್ ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು ರೈಲ್ವೆ ಇಲಾಖೆ ರದ್ದು ಮಾಡಿದ್ದು, 48 ಗಂಟೆಗಳ ನೋಟಿಸ್ ನೀಡಿದೆ. ಪೂರ್ವ ಎಕ್ಸ್‍ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು 2014ರ ಮೇ 15ರಂದು ಆರ್‍ಕೆ ಅಸೋಸಿಯೇಟ್ಸ್‍ಗೆ 5 ವರ್ಷಗಳವರೆಗೆ ನೀಡಲಾಗಿತ್ತು. ಆದ್ರೆ ಈಗ ಒಪ್ಪಂದವನ್ನು ಅಂತ್ಯಗೊಳಿಸುತ್ತಿರುವ ಬಗ್ಗೆ ಸರಣಿ ಟ್ವೀಟ್‍ಗಳ ಮೂಲಕ ರೈಲ್ವೆ ಇಲಾಖೆ ತಿಳಿಸಿದೆ. ಈ ಕೇಟರಿಂಗ್‍ನವರಿಗೆ ಕಳೆದ ವರ್ಷ 10 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ವರ್ಷ 7.5 ಲಕ್ಷ ರೂ. ದಂಡ ವಿಧಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಟ್ವೀಟ್‍ವೊಂದರಲ್ಲಿ ತಿಳಿಸಿದೆ.

  • ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಅರೆಸ್ಟ್

    ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ ಅರೆಸ್ಟ್

    ಬೆಂಗಳೂರು: ಮಹಿಳೆಯರ ಮೇಲೆ ಹಲ್ಲಿ ಎಸೆದು ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮುರುಳಿ (35) ಬಂಧಿತ ಆರೋಪಿ. ಜೂನ್ 6ರಂದು ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿ ಮಹಿಳೆ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದು, ಅದನ್ನು ತೆಗೆಯುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದನು. ಇಬ್ಬರು ಮಕ್ಕಳ ತಂದೆಯಾಗಿರುವ ಮುರುಳಿ ಮಹಿಳೆಯ ಮೇಲೆ ಜೇನು ಹುಳು ಕುಳಿತಿತ್ತು. ಹೀಗಾಗಿ ಅದನ್ನು ತೆಗೆಯಲು ಆಕೆಯನ್ನು ಮುಟ್ಟಿದ್ದೇನೆ ಎಂದು ಸಬೂಬು ಹೇಳಿದ್ದ. ಕೊನೆಗೆ ಪೊಲೀಸ್ ವಿಚಾರಣೆ ವೇಳೆಯಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ಮುಂದುವರೆದಿದೆ.

     

  • ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

    ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

    ಬೆಂಗಳೂರು: ಯುವತಿಯರೇ ಎಚ್ಚರ. ನೀವು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತೀರಿ ಎಂದರೆ ಸ್ವಲ್ಪ ಎಚ್ಚರದಿಂದಿರಿ. ಯುವತಿಯರ ಮೇಲೆ ದೌರ್ಜನ್ಯವೆಸಗಲು ಬೆಂಗಳೂರಿನಲ್ಲಿ ಯುವಕರು ಹೊಸ ಟೆಕ್ನಿಕ್ ಬಳಸುತ್ತಿದ್ದಾರೆ.

    ತಮ್ಮ ವಾಂಛೆ ತೀರಿಸಿಕೊಳ್ಳಲು ಯುವಕರು ಯುವತಿಯರ ಮೇಲೆ ಹಲ್ಲಿಯನ್ನು ಎಸೆಯುತ್ತಾರೆ. ಬಳಿಕ ಅದನ್ನು ತೆಗೆಯುವ ನೆಪದಲ್ಲಿ ಬಂದು ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆಗಿದ್ದೇನು?: ಬಿಹಾರ ಮೂಲದ ಯುವತಿಯೊಬ್ಬಳು ಬೆಂಗಳೂರಿಗೆ 15 ದಿವಸದ ಟ್ರೈನಿಂಗ್ ಗೆಂದು ಆಗಮಿಸಿದ್ದಾಳೆ. ಎರಡು ದಿನಗಳ ಹಿಂದೆ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ ಕಚೇರಿಯಲ್ಲಿ ಯುವತಿ ಟ್ರೈನಿಂಗ್ ಮುಗಿಸಿ ತಾನು ವಾಸವಿದ್ದ ಕಡೆ ಹೊರಟಿದ್ದಾಳೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಟೀ ಶಾಪ್ ಬಳಿ ಬಂದಾಗ ಕಾಮುಕರ ಗುಂಪು ಯುವತಿಯ ಮೇಲೆ ಹಲ್ಲಿಯನ್ನು ಎಸೆದಿದ್ದಾರೆ. ಬಳಿಕ ಅದೇ ಹಲ್ಲಿಯನ್ನು ತೆಗೆಯುವ ನೆಪದಲ್ಲಿ ಈ ಗುಂಪು ಯುವತಿಯ ಅಂಗಾಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ.

    ಘಟನೆ ನಡೆದ ಬಳಿಕ ಯುವತಿ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ವೀಡಿಯೋ ವಶಪಡಿಸಿಕೊಂಡಿದ್ದು ಇದರ ನೆರವಿನಿಂದ ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ದೂರು ನೀಡಿದ ಯುವತಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.