Tag: ಹಲೋ ಗುರು ಪ್ರೇಮಂ ಕೋಸಮೇ

  • ಕಾಮಿಡಿಯನ್ ಸಪ್ತಗಿರಿ ಕೆನ್ನೆಗೆ ಬಾರಿಸಿದರಾ ಪ್ರಕಾಶ್ ರೈ?

    ಕಾಮಿಡಿಯನ್ ಸಪ್ತಗಿರಿ ಕೆನ್ನೆಗೆ ಬಾರಿಸಿದರಾ ಪ್ರಕಾಶ್ ರೈ?

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಹೋದಲ್ಲಿ ಬಂದಲ್ಲಿ ವಿವಾದಗಳೇ ಬೆಂಬೀಳುತ್ತಿವೆ. ಕರ್ನಾಟಕದಲ್ಲಂತೂ ಸೈದ್ಧಾಂತಿಕ ಸಂಘರ್ಷದಿಂದ ಒಂದು ವಿಚಾರಧಾರೆಯವರ ವಿರೋಧ ಕಟ್ಟಿಕೊಂಡಿರೋ ಪ್ರಕಾಶ್ ರೈ ತೆಲುಗಿನಲ್ಲೀಗ ಹೊಸ ವಿವಾದವೊಂದರ ಕೇಂದ್ರ ಬಿಂದುವಾಗಿದ್ದಾರೆ. ಸಹ ನಟನೋರ್ವನಿಗೆ ಕಪಾಳಕ್ಕೆ ಹೊಡೆದಿದ್ದಾರೆಂಬ ಗುರುತರ ಆರೋಪವೊಂದು ಅವರ ಸುತ್ತ ಗಿರಕಿ ಹೊಡೆಯಲಾರಂಭಿಸಿದೆ.

    ಪ್ರಕಾಶ್ ರೈ ಇದೀಗ ಹಲೋ ಗುರು ಪ್ರೇಮಂ ಕೋಸಮೆ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯುವ ಕಾಮಿಡಿಯನ್ ಸಪ್ತಗಿರಿ ಕೂಡಾ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ಒಂದನ್ನು ಹಾಕಲಾಗಿತ್ತು. ಅದರಲ್ಲಿಯೇ ಚಿತ್ರೀಕರಣವೂ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಸಿಟ್ಟಾದ ಪ್ರಕಾಶ್ ರೈ ಸಪ್ತಗಿರಿಯ ಕಪಾಳಕ್ಕೆ ಬಾರಿಸಿದ್ದಾರೆಂಬ ಸುದ್ದಿ ಎಲ್ಲೆಡೆ ಕೇಳಿ ಬರಲಾರಂಭಿಸಿತ್ತು.

    ಈ ಬಗ್ಗೆ ಮಾಧ್ಯಮಗಳು ಪ್ರಕಾಶ್ ರೈ ಅವರನ್ನು ಸಂಪರ್ಕಿಸಿದಾಗ ಖಂಡಿತಾ ನಾನು ಯಾರಿಗೂ ಹೊಡೆದಿಲ್ಲ ಎಂಬಂಥಾ ಉತ್ತರ ಬಂದಿದೆ. ಆದರೆ ನಿರ್ದೇಶಕ ತ್ರಿನಧ ರಾವ್ ಮಾತ್ರ ಈ ಬಗ್ಗೆ ಪ್ರಕಾಶ್ ರೈ ಅವರಷ್ಟು ನಿಖರವಾದ ಉತ್ತರ ನೀಡಿಲ್ಲ. ಆ ಬಗ್ಗೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ ಎಂಬಂಥಾ ಹಾರಿಕೆಯ ಉತ್ತರ ನೀಡಿದ್ದಾರೆ. ಇದುವೇ ಈ ಶೂಟಿಂಗ್ ಸ್ಪಾಟಲ್ಲಿ ಏನೋ ನಡೆದಿದೆ ಎಂಬ ಗುಮಾನಿ ಹುಟ್ಟಿಕೊಂಡು, ಪ್ರಕಾಶ್ ರೈ ಮೇಲೆ ಬಂದಿರೋ ಆರೋಪದಲ್ಲಿ ಸತ್ಯಾಂಶವಿದೆ ಎಂಬ ಸಂಶಯವೂ ಕಾಡುವಂತಾಗಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಎಂಬ ಕಾಯಿಲೆ ಎಲ್ಲ ಚಿತ್ರರಂಗಗಳನ್ನೂ ಸಾಂಕ್ರಾಮಿಕವೆಂಬಂತೆ ಆವರಿಸಿಕೊಂಡಿರೋದು ದುರಂತ ಸತ್ಯ. ಆಗಾಗ ಯಾರೋ ನಟಿ ಬೀದಿಯಲ್ಲಿ ನಿಂತು ಮಾತಾಡಿದಾಗ, ಅನಾಹುತಗಳಾದಾಗ ಮಾತ್ರವೇ ಈ ಬಗ್ಗೆ ಚರ್ಚೆಗಳಾಗಿ ತಣ್ಣಗಾಗುತ್ತಿತ್ತು. ಆದರೆ ಈ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ಅದುರುವಂತೆ ಮಾಡಿರೋದು ತೆಲುಗು ನಟಿ ಶ್ರೀರೆಡ್ಡಿಯ ದೆಸೆಯಿಂದ!

    ಇದೀಗ ಎಲ್ಲ ಭಾಷೆಗಳ ನಟಿಯರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಈಗಿನ ಸರದಿ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್ ಅವರದ್ದು!

    ಆದರೆ ಅನುಪಮಾ ಕಾಸ್ಟಿಂಗ್ ಕೌಚಿಂಗ್ ವಿಚಾರವಾಗಿ ಯಾರ ವಿರುದ್ಧವೂ ದೂರು ಹೇಳಿಲ್ಲ. ಅಂಥಾದ್ದೊಂದು ಇದ್ದರೂ ಇದ್ದೀತೆಂಬ ಮಾತನ್ನೂ ಆಡಿಲ್ಲ. ತನಗೆ ಇದುವರೆಗೂ ಅಂಥಾ ಅನುಭವಗಳಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇವರ ಈ ಅಭಿಪ್ರಾಯ ಯಾಕೆ ಮುಖ್ಯವೆಂದರೆ, ಅನುಪಮಾ 2016ರಿಂದಲೇ ತೆಲುಗು ಚಿತ್ರರಂಗದಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಹೆಮ್ಮಾರಿ ಸದ್ಯ ವಿರಾಟ್ ರೂಪ ತಾಳಿರೋದು ಕೂಡಾ ತೆಲುಗಿನಲ್ಲಿಯೇ ಆದ್ದರಿಂದ ಅನುಪಮಾ ಹೇಳಿಕೆ ಮುಖ್ಯವಾಗುತ್ತದೆ.

    ಈಗಲೂ ಕೂಡಾ ಅನುಪಮಾ ನಟಿಸಿರೋ ತೆಲುಗು ಚಿತ್ರ ಹಲೋ ಗುರು ಪ್ರೇಮಂ ಕೋಸಮೇ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾನು ನಟಿಸಿರೋ ತೆಲುಗು ಚಿತ್ರಕ್ಕೆ ಹಿನ್ನಡೆಯಾಗುತ್ತದೆ ಎಂಬ ಮುಲಾಜಿನಿಂದ ಅನುಪಮಾ ಕಾಸ್ಟಿಂಗ್ ಕೌಚ್ ಬಗ್ಗೆ ಇಂಥಾ ಅಭಿಪ್ರಾಯ ಹೇಳಿರಬಹುದೆಂಬ ಮಾತುಗಳೂ ಕೇಳಿ ಬರುತ್ತಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv