Tag: ಹಲಾಲ್ ಮಾಂಸ

  • ನಿಮ್ಮ ತರಹದ ಗಂಡಸ್ತನ ನಮಗ್ಯಾರಿಗೂ ಇಲ್ಲ: ಹೆಚ್​​ಡಿಕೆಗೆ ಸಿಟಿ. ರವಿ ಟಾಂಗ್

    ನಿಮ್ಮ ತರಹದ ಗಂಡಸ್ತನ ನಮಗ್ಯಾರಿಗೂ ಇಲ್ಲ: ಹೆಚ್​​ಡಿಕೆಗೆ ಸಿಟಿ. ರವಿ ಟಾಂಗ್

    ಬೆಂಗಳೂರು: ಕುಮಾಸ್ವಾಮಿ ಅವರಿಗಿರುವ ತರಹದ ಗಂಡಸ್ತನ ನಮಗ್ಯಾರಿಗೂ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ. ರವಿ ಅವರು ಟಾಂಗ್ ನೀಡಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಕುಮಾಸ್ವಾಮಿ ಅವರಿಗಿರುವ ತರಹದ ಗಂಡಸ್ತನದ ಸರ್ಟಿಫಿಕೇಟ್ ನಮಗ್ಯಾರಿಗೂ ಇಲ್ಲ. ಅವರ ಗಂಡಸ್ತನವನ್ನು ಬಹಳ ಸಾರಿ ಸಾಬೀತುಪಡಿಸಿದ್ದಾರೆ. ಆದರೆ ನಾವು ಆ ತರಹದವರಲ್ಲ. ಹಾಗಾಗಿ ಅವರಿಗಿರುವ ಗಂಡಸ್ತನದ ಬಗ್ಗೆ ನಾವು ಯಾರು ಸವಾಲು ಹಾಕುವುದಿಲ್ಲ. ನಾವು ಅವರೊಂದಿಗೆ ಕಾಂಪಿಟೇಷನ್ ಕೂಡ ಮಾಡುವುದಿಲ್ಲ. ನಾವು ನಿರ್ವಿವಾದವಾಗಿ ಒಪ್ಪಿಕೊಳ್ಳುತ್ತೇವೆ, ನಿಮಗಿರುವಂತಹ ಗಂಡಸ್ತನ ನಮಗ್ಯಾರಿಗೂ ಇಲ್ಲ ಎಂದಿದ್ದಾರೆ.

    ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ನಿಮ್ಮ ಆಟವನ್ನು ಇಲ್ಲಿ ಬಿಟ್ಟುಬಿಡಿ ಎಂಬ ಹೆಚ್‍ಡಿಕೆ ಹೇಳಿಕೆಗೆ, ಯಾರ ಆಟ ಎಲ್ಲ ನಡೆಯುತ್ತದೆ ಎಂಬುವುದನ್ನು ಜನ ತೀರ್ಮಾನ ಮಾಡುತ್ತಾರೆ. ಈ ಕುರಿತಂತೆ ನಾನು ಪ್ರಶ್ನಿಸುವುದಿಲ್ಲ. ಆದರೆ ಹಲಾಲ್ ಎಂದರೇನು? ಅದಕ್ಕೆ ಧಾರ್ಮಿಕ, ಮತದ ಸೋಂಕಿಲ್ಲವಾ, ಹಲಾಲ್ ಎಂದರೆ ಗುಣಮಟ್ಟಕ್ಕೆ ಪ್ರಮಾಣಿಸಿಕೊಡುವಂತಹ ಸರ್ಟಿಫೀಕೆಟಾ, ಐಎಸ್‍ಐ ಎಂಬುವುದು ಕ್ವಾಲಿಗೆ ಕೊಡುವಂತಹ ಸರ್ಟಿಫಿಕೇಟ್. ಅದೇ ರೀತಿ ಹಲಾಲ್ ಎಂಬುವುದು ಕ್ವಾಲಿಟಿಗೆ ನೀಡುವಂತಹ ಸರ್ಟಿಫಿಕೇಟಾ? ಇಲ್ಲ ಇದೊಂದು ಮತಂತರವನ್ನು ಚಲಾಯಿಸುವಂತಹ ಸರ್ಟಿಫಿಕೇಟಾ. ಇದನ್ನು ಯಾರು ಕೊಡುತ್ತಾರೆ? ಯಾವ ಸರ್ಕಾರದಲ್ಲಿ ಈ ನಿಯಮವಿದೆ. ದೇವೆಗೌಡರವರು ಪ್ರಧಾನಿಯಾಗಿದ್ದಾಗ ಈ ಸರ್ಟಿಫಿಕೇಟ್‍ನನ್ನು ತಂದರಾ, ಇಲ್ಲ ಬಸವರಾಜ್ ಬೊಮ್ಮಾಯಿ ಅವರು ತಂದರಾ? ಇಲ್ಲ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಂದರಾ? ಹಲಾಲ್ ಎಂದರೇನು? ಈ ಬಗ್ಗೆ ಗಂಡಸ್ತನ ಇರುವವರು ಹೇಳಲಿ ಎಂದು ಹರಿಹಾಯ್ದಿದ್ದಾರೆ.

    ಇದೇ ವೇಳೆ, ಕೇಸರಿ ವಸ್ತ್ರ ಎಂದಿಗೂ ಸಮಾಜವನ್ನು ಒಡೆಯುವುದಿಲ್ಲ. ಬದಲಿಗೆ ಜೋಡಿಸುತ್ತದೆ. ಕೇಸರಿಯಲ್ಲಿ ಬಲವಿದೆ. ಕೇಸರಿ ಇರುವಂತಹ ಕಡೆ ಜಾತಿ ಜಗಳವಿಲ್ಲ. ಅಸ್ಪೃಶ್ಯತೆ ಇಲ್ಲ. ಇದ್ದರೂ ಸಣ್ಣ ಪ್ರಮಾಣದಲ್ಲಿ ಮಾತ್ರವಿದೆ. ಜಾತಿವಾದಿಗಳು ಎಲ್ಲಿರುತ್ತಾರೋ ಅಲ್ಲಿ ಅಸ್ಪೃಶ್ಯತೆ ಇದೆ. ಈ ದೇಶವನ್ನು ತುಂಡು ಮಾಡಿದ್ದ ಕೇಸರಿ ವಸ್ತ್ರ ಧರಿಸಿದವರಲ್ಲ ಎಂದು ಹೇಳಿದ್ದಾರೆ.

  • ದಲಿತರು, ಸವರ್ಣೀಯರ ಮಧ್ಯೆ ವಿವಾದ ಸೃಷ್ಟಿಸಲು ಕುಮಾರಸ್ವಾಮಿ ಯತ್ನ: ಆಂದೋಲಾ ಶ್ರೀ ಕಿಡಿ

    ದಲಿತರು, ಸವರ್ಣೀಯರ ಮಧ್ಯೆ ವಿವಾದ ಸೃಷ್ಟಿಸಲು ಕುಮಾರಸ್ವಾಮಿ ಯತ್ನ: ಆಂದೋಲಾ ಶ್ರೀ ಕಿಡಿ

    ಕಲಬುರಗಿ: ರಾಜ್ಯದಲ್ಲಿ ದಲಿತರ ಮತ್ತು ಸವರ್ಣೀಯರ ಮಧ್ಯೆ ದೊಡ್ಡ ವಿವಾದ ಸೃಷ್ಟಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಹಾಗೂ ಕರುಣೇಶ್ವರ ಮಠದ ಆಂದೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಿಡಿಕಾರಿದ್ದಾರೆ.

    ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಎಷ್ಟು ಜನ ದಲಿತ ಮತ್ತು ಹಿಂದೂಳಿದ ವರ್ಗದವರನ್ನು ನಿಮ್ಮ ಮನೆಗೆ ಮತ್ತು ದೇವರ ಕೋಣೆಗೆ ಕರೆಸಿಕೊಂಡಿದ್ದಿರಿ? ಬಹಿರಂಗಪಡಿಸಿ ಎಂದು ಸವಾಲೆಸೆದರು. ಸರ್ಕಾರವನ್ನು ಟೀಕಿಸುವ ಭರದಲ್ಲಿ ಮಠ-ಮಾನ್ಯಗಳನ್ನು ಎಳೆದು ತಂದು ವಿವಾದ ಸೃಷ್ಟಿ ಮಾಡುತ್ತಿದ್ದಿರಿ ಇದು ಸರಿಯಲ್ಲ ಎಂದರು. ಇದನ್ನೂ ಓದಿ: ಮುಸ್ಲಿಂ ಶಿಲ್ಪಿಗಳನ್ನು ಯಾವಾಗ ಬಹಿಷ್ಕರಿಸುತ್ತೀರಿ: ಹೆಚ್‌ಡಿಕೆ ಪ್ರಶ್ನೆ

    ನೀವು ನಿಮ್ಮ ಮನೆಗಳನ್ನು ಮತ್ತು ರೆಸಾರ್ಟ್‍ಗಳನ್ನು ದಲಿತರಿಂದ ಕಟ್ಟಿಸಿಕೊಂಡಿದ್ದಿರಿ. ದೇವಸ್ಥಾನ ನಾವು ಕಟ್ಟಿದ್ದೇವೆ ಎಂದು ದಲಿತರು ದೇವಸ್ಥಾನಕ್ಕೆ ಪ್ರವೇಶ ಮಾಡುತ್ತೇವೆ ಎಂದು ಬಂದಿಲ್ಲ ಎಂದರು. ನೀವು ಮುಖ್ಯಮಂತ್ರಿ ಇದ್ದಾಗ ಮುಜರಾಯಿ ಇಲಾಖೆಯಿಂದ ದಲಿತರಿಗೆ ಪ್ರವೇಶ ಕೊಟ್ಟಿದ್ದಿರಿ ಎಂದರು.

    ಹಲಾಲ್ ವಿರುದ್ಧ ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಹೋರಾಟ ಸ್ವಾಗತಾರ್ಹ. ಹಿಂದೂಗಳು ಯಾವುದೇ ಕಾರಣಕ್ಕೂ ಮುಸ್ಲಿಂರ ಹಲಾಲ್ ಅಂಗಡಿಗೆ ಹೋಗಿ ಮಾಂಸ ಖರೀದಿಸಬಾರದು ಎಂದರು. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ

    ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಿದರೆ, ಹಿಂದೂ ವಿರೋಧಿಗಳ ಶಕ್ತಿ ಕೈ ಬಲಪಡಿಸಿದಂತಾಗುತ್ತದೆ. ಹಿಂದೂಗಳಿಗೆ ದ್ರೋಹ ಬಗೆದಂತಾಗುತ್ತದೆ ಎಂದರು. ಮುಸ್ಲಿಂ ವ್ಯಕ್ತಿ ಚೂರಿ ಹಾಕಿದ ಮಾಂಸ, ಮುಸ್ಲಿಂರಿಗೆ ಮಾತ್ರ ಶ್ರೇಷ್ಠವಾಗಿರುತ್ತದೆ. ಅದು ಹಿಂದೂಗಳಿಗೆ ಎಂಜಲಾಗುತ್ತದೆ ಎಂದು ಹೇಳಿದ್ದಾರೆ.

  • ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ

    ಹಲಾಲ್ ಮಾಂಸ ಮುಸ್ಲಿಮರ ದೇವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು : ಸಿ.ಟಿ ರವಿ

    ಬೆಂಗಳೂರು: ಮುಸ್ಲಿಮರು ಅವರ ದೇವರಿಗೆ ಒಪ್ಪಿಸಿದ ಹಲಾಲ್ ಮಾಂಸ ಅವರ ದೇವರಿಗೆ ಪ್ರಿಯ ನಮ್ಮ ದೇವರಿಗೆ ಎಂಜಲು ಎಂದು ಶಾಸಕ ಸಿ.ಟಿ ರವಿ ಹೇಳಿದ್ದಾರೆ.

    ಹಲಾಲ್ ಮಾಂಸಕ್ಕೆ ಹಿಂದು ಸಂಘಟನೆಗಳು ಬಹಿಷ್ಕಾರ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ಹೇಳುವ ರೈಟ್ಸ್ ಇದೆಯೋ ಹಾಗೇ. ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮಗಿದೆ. ಹಲಾಲ್ ಅಂದರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತದೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಏನಾದರೂ ಇದ್ಯಾ? ಸಮಾರಸ್ಯವನ್ನು ಹೇರುವುದಕ್ಕೆ ಬರುವುದಿಲ್ಲ. ಹಾಗಂತ ಸಮಾರಸ್ಯ ಒನ್ ವೇ ಅಲ್ಲ, ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನುವುದಕ್ಕೆ ರೆಡಿಯಾದರೆ, ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲಾ ಈಗಲೂ ಒಪ್ಪಿಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಲಾಲ್ ಮಾಂಸ ಎಂದರೇನು? ಹಲಾಲ್ ಕಟ್ ಏನು?

    ಹಲಾಲ್ ಎನ್ನುವುದು ಒಂದು ಆರ್ಥಿಕ ಜಿಹಾದ್. ಆರ್ಥಿಕ ಜಿಹಾದ್ ಅಂದರೆ ಮುಸ್ಲಿಮರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಹಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ, ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಮರು ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತೆಗೆದುಕೊಳ್ಳಬೇಕು ಅಂತ ನೀವು ಯಾಕೆ ಹೇಳುತ್ತೀರಾ? ಹೇಳುವುದಕ್ಕೆ ಏನು ರೈಟ್ಸ್ ಇದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

    Eshwarappa

    ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ವಿಚಾರ: ರಾಜಕಾರಣದಲ್ಲಿ ಬಹಳ ಸಂಗತಿಗೆ ಆಧಾರ ಇರುವುದಿಲ್ಲ. ಆಧಾರ ಇದ್ದರೆ ಆಗಲೇ ಸಂಬಂಧಪಟ್ಟವರ ಮೇಲೆ ದೂರು ಕೊಡಬೇಕಿತ್ತು. ಈಶ್ವರಪ್ಪ ಕಳೆದ ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದವರು. ಹಿಂದೆ ಇಲ್ಲದ ಆರೋಪ ಈಗ ಮಾಡುತ್ತಿದ್ದಾರೆ ಅಂದರೆ ಭವಿಷ್ಯ ರಾಜಕಾರಣ ಇರಬಹುದು. ನೇರವಾಗಿ ಮಾತಾಡುವವರಿಗೆ ಶತ್ರುಗಳ ಹೆಚ್ಚಾಗಿರುತ್ತಾರೆ. ನಾನು ನಂಬುವುದಿಲ್ಲ, ಅವರ ಹೆಸರಲ್ಲಿ ಮೋಸ ಮಾಡಿರಬಹುದು. ಸತ್ಯಾಸತ್ಯತೆ ತಿಳಿದು ಆರೋಪ ಮಾಡಬೇಕು ಎಂದಿದ್ದಾರೆ.