Tag: ಹಲಸೂರು ಗೇಟ್

  • ಕುಡಿದು ಟೈಟ್ ಆಗಿ ಪೊಲೀಸರನ್ನೇ ತಳ್ಳಾಡಿ ಗಲಾಟೆ ಮಾಡಿದ್ರು!

    ಕುಡಿದು ಟೈಟ್ ಆಗಿ ಪೊಲೀಸರನ್ನೇ ತಳ್ಳಾಡಿ ಗಲಾಟೆ ಮಾಡಿದ್ರು!

    ಬೆಂಗಳೂರು: ಕಂಠಪೂರ್ತಿ ಕುಡಿದ ಇಬ್ಬರು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಘಟನೆ ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿ ನಡೆದಿದೆ.

    ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಇನ್ಸ್ ಪೆಕ್ಟರ್ ಮುಹಮ್ಮದ್ ಅಲಿಯವರು ತಮ್ಮ ಸಿಬ್ಬಂದಿಯೊಂದಿಗೆ ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡ್ತಿದ್ರು. ಈ ವೇಳೆ ಬೈಕ್‍ನಲ್ಲಿ ಬಂದ ನಾಗರಬಾವಿ ನಿವಾಸಿ ವಿಜಯ್ ಕುಮಾರ್ ಮತ್ತು ಲೋಕೇಶ್‍ಗೆ ಡ್ರಿಂಕ್ & ಡ್ರೈವ್ ಪರೀಕ್ಷಿಸುವ ಯಂತ್ರಕ್ಕೆ ಊದಲು ಪೊಲೀಸರು ಹೇಳಿದ್ದರು. ಆದ್ರೆ ರಾತ್ರಿ ಎಂ.ಜಿ.ರೋಡ್ ನಿಂದ ಪಾರ್ಟಿ ಮುಗಿಸಿ ಗಡದ್ದಾಗಿ ಕುಡಿದು ಬಂದಿದ್ದ ಇಬ್ಬರು ಡ್ರಿಂಕ್ & ಡ್ರೈವ್ ಪರಿಶೀಲಿಸುವ ಯಂತ್ರಕ್ಕೆ ಊದಲು ನಿರಾಕರಿಸಿದ್ರು.

    ಜೊತೆಗೆ ಜನಪ್ರತಿನಿಧಿಗಳ ಹೆಸರು ಹೇಳಿಕೊಂಡು ಇನ್ಸ್ ಪೆಕ್ಟರ್‍ರನ್ನೇ ತಳ್ಳಾಡಿದ್ರು. ಕುಡುಕರ ಉಪಟಳ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಹಲಸೂರು ಗೇಟ್ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

  • ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ನಕಲಿ ನೋಟು ಕೊಟ್ಟು 1 ಕೆಜಿ ಚಿನ್ನ ಖರೀದಿಸಿದ ಖದೀಮರು

    ಬೆಂಗಳೂರು: ಮಗಳ ಮದುವೆಗೆ ಎಂದು ಹೇಳಿ ನಕಲಿ ನೋಟುಗಳನ್ನ ನೀಡಿ 1 ಕೆಜಿಯಷ್ಟು ಚಿನ್ನ ಖರೀದಿ ಮಾಡಿದ್ದ ಮೂವರು ಆರೋಪಿಗಳನ್ನ ಹಲಸೂರು ಗೇಟ್  ಪೊಲೀಸರು ಬಂಧಿಸಿದ್ದಾರೆ.

    ವಿನೋದ್, ಹೇಮಂತ್ ಹಾಗೂ ಹರೀಶ್ ಕುಮಾರ್ ಬಂಧಿತ ಆರೋಪಿಗಳು. ಈ ಮೂವರು 32 ಲಕ್ಷ ರೂ. ನಕಲಿ ನೋಟು ನೀಡಿ ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿದ್ದರು.

    ಆರೋಪಿಯೊಬ್ಬ ತಾನು ಚಿಕ್ಕಮಗಳೂರು ಮೂಲದ ಜುಂಗರಾಜ್ ಎಂದು ಪರಿಚಯ ಮಾಡಿಕೊಂಡಿದ್ದ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದಂಗಡಿ ಇಟ್ಟುಕೊಂಡಿದ್ದ ದಿನೇಶ್ ಕುಮಾರ್ ಅವರೊಂದಿಗೆ ಚಿನ್ನ ಕೊಟ್ಟು ಹಣ ಪಡೆಯುವಂತೆ ಫೋನ್ ಮೂಲಕವೇ ವ್ಯವಹಾರ ನಡೆಸಿದ್ದ.

    ಕಾರಿನಲ್ಲಿ ಬಂದು 2 ಸಾವಿರ ರೂ. ಮುಖಬೆಲೆಯ 32 ಲಕ್ಷ ರೂ. ಖೋಟಾ ನೋಟು ನೀಡಿ ಆರೋಪಿಗಳು ಚಿನ್ನದ ಗಟ್ಟಿ ಖರೀದಿಸಿದ್ದಾರೆ. ಅಲ್ಲದೆ ಕೋಟಕ್ ಮಹಿಂದ್ರ ಬ್ಯಾಂಕ್ ಸೀಲನ್ನು ದುರ್ಬಳಕೆ ಮಾಡಿದ್ದಾರೆ.

    https://www.facebook.com/publictv/videos/1682564341761311/