Tag: ಹಲಸೂರು ಕೆರೆ

  • ಹಲಸೂರು ಗುರುದ್ವಾರಕ್ಕೆ ಬಾಂಬ್ ಬೆದರಿಕೆ – ಬಾತ್ರೂಮ್‌ನಲ್ಲಿ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖ

    ಹಲಸೂರು ಗುರುದ್ವಾರಕ್ಕೆ ಬಾಂಬ್ ಬೆದರಿಕೆ – ಬಾತ್ರೂಮ್‌ನಲ್ಲಿ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖ

    ಬೆಂಗಳೂರು: ಹಲಸೂರು (Ulsoor) ಮುಖ್ಯ ರಸ್ತೆಯಲ್ಲಿರುವ ಗುರುದ್ವಾರಕ್ಕೆ (Gurudwara) ಬಾಂಬ್ ಬೆದರಿಕೆ (Bomb Threat) ಬಂದಿದ್ದು, ಬಾತ್ರೂಮ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಹಲಸೂರು ಕೆರೆ ಬಳಿಯಿರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಕಳೆದ 4 ದಿನದ ಹಿಂದೆ `De-Brahminize Dravidistan’ ಎಂಬ ಸಂಘಟನೆಯಿಂದ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆ ಬಂದಿದೆ. ಮೇಲ್‌ನಲ್ಲಿ, ಶೀಘ್ರವೇ 4 RDX IED ನಿಮ್ಮ ಗುರುದ್ವಾರದ ಬಾತ್ರೂಮ್‌ನಲ್ಲಿ ಬಾಂಬ್ ಸ್ಫೋಟಿಸುತ್ತದೆ. 8 ಗಂಟೆಯೊಳಗೆ ಎಲ್ಲವನ್ನೂ ಸ್ಥಳಾಂತರಿಸಿ ಎಂದು ಬರೆದಿದ್ದಾರೆ.ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

    ಈ ಕುರಿತು ಋಷಿಪಾಲ್ ಸಿಂಗ್ ಎಂಬುವವರು ಹಲಸೂರು ಪೊಲೀಸ್ ಠಾಣೆಗೆ (Ulsoor Police Station) ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ಹಾಸನ | ರಸ್ತೆಗೆ ಮರ ಕೆಡವಿ ವಾಹನ ಸವಾರರನ್ನು ತಡೆದ ಗಜರಾಜ!

  • ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಸೂರ್ಯ ದೇವರ ಆರಾಧನೆಗೆ ವ್ಯವಸ್ಥೆ

    ಬೆಂಗಳೂರು: ಹಲಸೂರು ಕೆರೆಯಲ್ಲಿ (Halasuru Lake) ಸೂರ್ಯ ದೇವರ ಆರಾಧನೆಗೆ (Chhath Puja) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯವಸ್ಥೆ ಮಾಡಿದೆ. ನವೆಂಬರ್ 19 ರಿಂದ ನವೆಂಬರ್ 20 ರವರೆಗೆ ಹಲಸೂರು ಕೆರೆಯಲ್ಲಿ ‘ಛಠ್ ಪೂಜೆ’ (ಸೂರ್ಯದೇವರ ಆರಾಧನೆ) ನಡೆಯಲಿದೆ.

    ಹಲಸೂರು ಕೆರೆಯ ಗಣಪತಿ ವಿಸರ್ಜನೆ ಮಾಡುವ ಕಲ್ಯಾಣಿಯಲ್ಲಿ ಛಠ್ ಪೂಜೆಗೆ ಬಿಬಿಎಂಪಿ ವ್ಯವಸ್ಥೆಗೊಳಿಸಿದೆ. ಸದರಿ ಛಠ್ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಹಲಸೂರು ಕೆರೆಯ ಉತ್ತರ ದಿಕ್ಕಿನಲ್ಲಿರುವ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯ (ಕಾರಾ ಕೆಫೆ ರೆಸ್ಟೋರೆಂಟ್ ಮುಂಭಾಗದ) ಮುಖ್ಯ ದ್ವಾರದ ಮೂಲಕವೇ ಬಂದು, ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಮಾತ್ರವೇ ಛಠ್ ಪೂಜೆಯನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಸದರಿ ಪೂಜೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಯಾವುದೇ ರೀತಿಯ ಪ್ಲಾಸ್ಟಿಕ್ ಪೇಪರ್ ಮುಂತಾದ ವಿಷಯುಕ್ತ ವಸ್ತುಗಳನ್ನು ಕೆರೆಯ ಬಳಿ ತರಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಹಳಿಯಲ್ಲಿ ಕಬ್ಬಿಣದ ರಾಡ್, ದೊಡ್ಡ ಮರದ ದಿಮ್ಮಿ – ಮೈಸೂರಿನಲ್ಲಿ ತಪ್ಪಿತು ಭಾರೀ ರೈಲು ದುರಂತ

    ಹಲಸೂರು ಕೆರೆಯ ಬೇರೆ ದಿಕ್ಕಿನ ದ್ವಾರಗಳು ಮುಚ್ಚಿರುತ್ತದೆ. ಪೂರ್ವ ವಲಯದ ಬೇರೆ ಯಾವುದೇ ಸ್ಥಳದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಕಲ್ಪಿಸಿರುವುದಿಲ್ಲ ಎಂದು ಪೂರ್ವ ವಲಯ ಆಯುಕ್ತರಾದ ಶ್ರೀಮತಿ ಆರ್ ಸ್ನೇಹಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಲೋ ಅಪ್ಪ, ನಾನು ಕೊಟ್ಟಿರೋದು ನಾಲ್ಕೋ ಐದೋ ಅಷ್ಟು ಮಾತ್ರ ಮಾಡಿ – ಯತೀಂದ್ರ ಮಾತಿನ ಮರ್ಮ ಏನು?

  • ಗಬ್ಬೆದ್ದು ನಾರುತ್ತಿದೆ ಬೆಂಗಳೂರಿನ ಚೆಂದದ ಹಲಸೂರು ಕೆರೆ..!

    ಗಬ್ಬೆದ್ದು ನಾರುತ್ತಿದೆ ಬೆಂಗಳೂರಿನ ಚೆಂದದ ಹಲಸೂರು ಕೆರೆ..!

    ಬೆಂಗಳೂರು: ನಗರದ ಮೋಸ್ಟ್ ಫೇವರಿಟ್ ಹಾಟ್ ಸ್ಪಾಟ್ ಹಲಸೂರು ಕೆರೆ ಈಗ ಗಬ್ಬೆದ್ದು ಹೋಗಿದೆ. ಚಂದದ ಪ್ರವಾಸಿ ಸ್ಥಳವಾಗಿದ್ದ ಈ ಕೆರೆಗೆ ಈಗ ಕಾಲಿಟ್ಟರೆ ಸಾಕು. ಬೇಡಪ್ಪ ಇದರ ಸಹವಾಸ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

    ಹಲಸೂರು ಕೆರೆ ಬೆಂಗಳೂರಿಗರ ಪಾಲಿಗೆ ರಿಲ್ಯಾಕ್ಸ್ ನೀಡುವ ನೆಚ್ಚಿನ ತಾಣ. ಪ್ರವಾಸಿಗರ ಪಾಲಿಗೆ ಸದಾ ಸೆಳೆಯುವ ಪ್ರವಾಸಿ ಜಾಗ. ಕಣ್ಣು ಹಾಯಿಸಿದಷ್ಟು ಹಸಿರಿನ ಮಧ್ಯೆ ಕೆರೆಯ ವಿಹಂಗಮ ನೋಟ. ಆದರೆ ಈಗ ಹಲಸೂರು ಕೆರೆ ದಿನದಿಂದ ದಿನಕ್ಕೆ ಗಬ್ಬೆದ್ದು ಹೋಗುತ್ತಿದೆ. ರಮಣೀಯವಾಗಿದ್ದ ಕೆರೆಯಲ್ಲಿ ಈಗ ಜಲಚರಗಳಿಗಿಂತಲೂರ ಹೆಚ್ಚು ಪ್ಲ್ಯಾಸ್ಟಿಕ್, ಕಸ, ತ್ಯಾಜ್ಯಗಳೇ ಹೆಚ್ಚಾಗಿದೆ.

    ಇನ್ನೊಂದು ಕಡೆಯಲ್ಲಿ ರಾಜಕಾಲುವೆಯ ನೀರು ಕೂಡ ಮಿಕ್ಸ್ ಆಗಿ ಇಡೀ ಕೆರೆಯ ನೀರು ಕಲುಷಿತಗೊಂಡಿದೆ. ಈ ಕೆರೆಯಲ್ಲಿ ಕೋಟಿಗಟ್ಟಲೇ ಖರ್ಚು ಮಾಡಿ ಖಾಸಗಿ ಸಂಸ್ಥೆಯೊಂದು ಅತ್ಯಾಧುನಿಕ ಸೋಲರ್ ಪ್ಯಾನಲ್ ಕೂಡ ಹಾಕಲಾಗಿತ್ತು. ಆದ್ರೆ ಇದು ಕೂಡ ಕಸದಿಂದ ತುಂಬಿ ಹೋಗಿದ್ದು, ಅದು ಕೂಡ ಈಗ ಕೆಟ್ಟು ನಿಂತಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಒಕ್ಕಲಿಗ ಸಮರ – ಜಮೀರ್ ವಿರುದ್ಧ ಆಪ್ತ ಚೆಲುವರಾಯಸ್ವಾಮಿ ಸಂಧಾನ, ಸಿದ್ದು ಸೈಲೆಂಟ್

    ಒಟ್ಟಿನಲ್ಲಿ ಬಿಬಿಎಂಪಿಂಯ ಕೆರೆ ಸಂರಕ್ಷಣಾ ಪ್ರಾಧಿಕಾರ ಹಲಸೂರು ಕೆರೆಯನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಆದ್ರೆ ಬೆಂಗಳೂರಿನ ಪಾಲಿಗೆ ಇರೋದು ಕೆಲವೇ ಕೆಲವು ಕೆರೆಗಳು, ಅವುಗಳನ್ನು ಈ ರೀತಿ ಹಾಳು ಮಾಡಿದ್ರೇ ಹೇಗೆ ಅನ್ನೋದೇ ಸಿಲಿಕಾನ್ ಸಿಟಿ ಮಂದಿಯ ಪ್ರಶ್ನೆ.

    Live Tv
    [brid partner=56869869 player=32851 video=960834 autoplay=true]