Tag: ಹಲಸಿನ ಹಣ್ಣು

  • ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ

    ಹಲಸಿನ ಹಣ್ಣಿಗಾಗಿ ಗಜರಾಜನ ಸರ್ಕಸ್ – ಕೊನೆಗೆ ಏನಾಯ್ತು ನೋಡಿ

    ನವದೆಹಲಿ: ಆನೆಗಳ ವೀಡಿಯೋಗಳು ಸಾಮಾನ್ಯವಾಗಿ ಆಕರ್ಷಕವಾಗಿರುತ್ತೆ. ಅವುಗಳು ಮಾಡುವ ಮುದ್ಧದ ಕಳ್ಳತನವು ನೋಡುಗರಿಗೆ ಇಷ್ಟವಾಗುತ್ತೆ. ಆ ರೀತಿಯ ವೀಡಿಯೋ ನೋಡಲು ನೆಟ್ಟಿಗರು ಫುಲ್ ಖುಷ್ ಆಗುತ್ತಾರೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋವೊಂದು ನೆಟ್ಟಿಗರ ಆನಂದಕ್ಕೆ ಕಾರಣವಾಗಿದೆ. ಹಲಸು ತಿನ್ನಲು ಆನೆಯೊಂದು ಮಾಡಿದ ಸರ್ಕಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹಲಸಿನ ವಸನೆಗೆ ಬಂದರೆ ಎಲ್ಲ ಮನುಷ್ಯರು ಆ ಕಡೆಗೆ ಹೆಚ್ಚು ಆಕರ್ಷಕರಾಗುತ್ತಾರೆ. ಅದರಂತೆ ಆನೆ ಸಹ ಹಲಸಿನ ಮರದಲ್ಲಿ ಬಿಟ್ಟ ಹಣ್ಣಿನತ್ತ ಆಕರ್ಷಣೆಯಾಗಿದ್ದು, ಅದನ್ನು ಕಿತ್ತು ತಿನ್ನುವವರೆಗೂ ತನ್ನ ಪ್ರಯತ್ನವನ್ನು ಮಾತ್ರ ಬಿಟ್ಟಿಲ್ಲ. ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸುಪ್ರಿಯಾ ಸಾಹು ಅವರು 30 ಸೆಕೆಂಡುಗಳ ಕ್ಲಿಪ್‍ನ ಆನೆಯ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಧರಣಿ ಸತ್ಯಾಗ್ರಹ ನಿರತ ವಯೋವೃದ್ಧ ಏಕಾಏಕಿ ಅಸ್ವಸ್ಥ 

    ವೀಡಿಯೋದಲ್ಲಿ ಏನಿದೆ?
    ಆನೆ ಹಲಸಿನ ಮರದಲ್ಲಿದ್ದ ಹಣ್ಣನ್ನು ಕಂಡು ಮರವನ್ನು ಅಲುಗಿಸಿ ಬೀಳಿಸಲು ಪ್ರಯತ್ನ ಮಾಡುತ್ತೆ. ಆದರೆ ಆಗ ಹಣ್ಣು ಕೇಳಗೆ ಬೀಳುವುದಿಲ್ಲ. ನಂತರ ತನ್ನ ಎರಡು ಕಾಲುಗಳನ್ನು ಮೇಲಕ್ಕೆತ್ತಿ ಹಣ್ಣನ್ನು ತನ್ನ ಸೊಂಡಲಿನಿಂದ ಬೀಳಿಸಲು ಪ್ರಯತ್ನ ಮಾಡುತ್ತೆ. ಈ ಪ್ರಯತ್ನದಲ್ಲಿ ಕೊನೆಗೂ ಆನೆ ಯಶಸ್ವಿಯಾಗುವುದನ್ನು ನಾವು ನೋಡಬಹುದು. ಆನೆ ಯಶಸ್ವಿಯಾಗಿ ಹಲಸನ್ನು ಕಿತ್ತ ನಂತರ ವೀಡಿಯೋ ಮಾಡುತ್ತಿದ್ದವರು ಹರ್ಷದಿಂದ ಚಪ್ಪಾಳೆ ತಟ್ಟುತ್ತಿರುವುದನ್ನು ನಾವು ಕೇಳಿಸಿಕೊಳ್ಳಬಹುದು.

    ವೀಡಿಯೋವನ್ನು ಪೋಸ್ಟ್ ಮಾಡಿದ ಸುಪ್ರಿಯಾ, ಹಲಸಿನ ಹಣ್ಣು ಆನೆಗಳಿಗೆ ಮಾವಿನ ಹಣ್ಣುಗಳು ಮನುಷ್ಯರಿಗೆ. ಹಲಸಿನ ಹಣ್ಣುಗಳನ್ನು ಪಡೆಯಲು ಈ ಆನೆಯ ಯಶಸ್ವಿ ಪ್ರಯತ್ನಕ್ಕೆ ಮಾನವರ ಚಪ್ಪಾಳೆ ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪೊಲೀಸರಿಗಿಂತ ಇಡಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ: ಮೋದಿ ವಿರುದ್ಧ ಅಶೋಕ್ ಗೆಹ್ಲೋಟ್ ಕಿಡಿ 

    ಟ್ವಿಟ್ಟರ್‌ನಲ್ಲಿ ವೀಡಿಯೋ ನೋಡಿದ ನೆಟ್ಟಿಗರು, ಅಷ್ಟು ಎತ್ತರದವರೆಗೆ ಆನೆ ತನ್ನನ್ನು ತಾನು ವಿಸ್ತರಿಸಿಕೊಳ್ಳು ಪ್ರಚಂಡ ಶಕ್ತಿಯನ್ನು ಹೊಂದಿದೆ. ಒಂದೇ ಬಾರಿಗೆ ಮರವನ್ನು ಉರುಳಿಸುವ ಶಕ್ತಿಯೂ ಆನೆಗೆ ಇದೆ ಎಂದುಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ವೀಡಿಯೋ ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಹಾಪ್‌ಕಾಮ್ಸ್‌ನಲ್ಲಿ ಇಂದಿನಿಂದ ಮಾವು ಮೇಳ – ಸಚಿವ ಮುನಿರತ್ನ ಚಾಲನೆ

    ಬೆಂಗಳೂರು: ಒಂದು ಕಡೆ ಬಗೆಬಗೆಯ ಮಾವು, ಮತ್ತೊಂದು ಕಡೆ ಹಣ್ಣುಗಳ ರಾಜ ಹಲಸಿನ ಹಣ್ಣು, ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್‌ಕಾಮ್ಸ್ ಮತ್ತೆ ಈ ವರ್ಷ ಮಾವು ಮತ್ತು ಹಲಸಿನ ಮೇಳಕ್ಕೆ ಚಾಲನೆ ನೀಡಿದೆ.

    MUNIRATHNA (1

    ಹಾಪ್‌ಕಾಮ್ಸ್ ನಲ್ಲಿ ಇಂದಿನಿಂದ ನಡೆಯುವ ಮಾವು ಮತ್ತು ಹಲಸು ಮೇಳಕ್ಕೆ ತೋಟಾಗಾರಿಕೆ ಸಚಿವ ಮುನಿರತ್ನ ಚಾಲನೆ ನೀಡಿದ್ದು, ಸೀಸನ್ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.30 ರಷ್ಟು ಮಾತ್ರ ಪಸಲು ಬಂದಿದೆ. ಆದರೂ, ಬಗೆಬಗೆಯ 14 ಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದನ್ನೂ ಓದಿ: KPCC ಸಭೆಗೆ ಶಾಸಕಿ ಹೆಬ್ಬಾಳ್ಕರ್, ನಿಂಬಾಳ್ಕರ್ ಗೈರು

    Mango

    ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿವೆ. ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗ್ತಿದೆ. ಜೊತೆಗೆ 7 ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿವೆ. ಇದನ್ನೂ ಓದಿ: ನಮ್ಮಲ್ಲಿ ಯಾವುದೇ ಬಣ ಇಲ್ಲ, ಹೈಕಮಾಂಡ್‌ ಹೇಳಿದ್ದೇ ಅಂತಿಮ: ಪರಿಷತ್‌ ಟಿಕೆಟ್‌ ಬಗ್ಗೆ ಡಿಕೆಶಿ ಮಾತು

    ವಿವಿಧ ಬಗೆಯ ಮಾವಿನ ಹಣ್ಣು ಕೆಜಿಗೆ 32 ರಿಂದ 215 ರೂಪಾಯಿ ವರೆಗೆ, ಹಲಸಿನ ಹಣ್ಣು ಪ್ರತಿ ಕೆಜಿಗೆ 25ರೂ. ನಿಗದಿಯಾಗಿದೆ.

  • ಲಂಡನ್ ಮಾರುಕಟ್ಟೆಯಲ್ಲಿ ಒಂದು ಹಲಸಿನ ಹಣ್ಣಿಗೆ 16,000 ರೂ!

    ಲಂಡನ್ ಮಾರುಕಟ್ಟೆಯಲ್ಲಿ ಒಂದು ಹಲಸಿನ ಹಣ್ಣಿಗೆ 16,000 ರೂ!

    ಲಂಡನ್: ಹಲಸಿನ ಹಣ್ಣು ಎಂದರೆ ಹಲವು ಜನರಿಗೆ ಬಾಯಲ್ಲಿ ನೀರು ಬರುತ್ತೆ. ಈ ಹಣ್ಣಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಹೆಚ್ಚು ಬೇಡಿಕೆ ಇದೆ ಎಂಬುದಕ್ಕೆ ಇದೇ ಒಂದು ದೊಡ್ಡ ಉದಾಹರಣೆಯಾಗಿದೆ.

    ಗ್ರಾಹಕರೊಬ್ಬರು ಟ್ವಿಟ್ಟರ್ ನಲ್ಲಿ ಹಲಸಿನ ಹಣ್ಣಿಗೆ ಲಂಡನ್ ನಲ್ಲಿ ಎಷ್ಟು ಬೆಲೆ ಇದೆ ಎಂಬ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಸಖತ್ ವೈರಲ್ ಆಗಿದೆ. ಈ ಫೋಟೋವನ್ನು ಹಲವು ಜನರು ಶೇರ್ ಮಾಡಿಕೊಂಡಿದ್ದಾರೆ. ಲಂಡನ್‍ನ ಅತಿ ದೊಡ್ಡ ಮತ್ತು ಹಳೆಯ ಮಾರುಕಟ್ಟೆಯಾದ ಬರೋ ಮಾರುಕಟ್ಟೆಯಲ್ಲಿ, ಒಂದು ಹಲಸು ಸುಮಾರು 16,000 ರೂಪಾಯಿಗಳಿಗೆ(160 ಪೌಂಡ್‍ಗಳು) ಮಾರಾಟವಾಗುತ್ತಿತ್ತು. ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಮಹಾ ಶಿವರಾತ್ರಿ: ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಭಕ್ತರಿಗಾಗಿ ಹೊಸ ಆ್ಯಪ್ ಬಿಡುಗಡೆ

    ಟ್ವಿಟ್ಟರ್ ನಲ್ಲಿ, ಹಲಸು ಮಾರುವವರು ಬ್ರಿಟನ್‍ಗೆ ಬಂದ್ರೆ ‘ಮಿಲಿಯನೇರ್’ ಆಗುತ್ತಾನೆ ಎಂದು ಕೆಲವರು ಲೇವಡಿ ಮಾಡಿದರು. ಅಂದಹಾಗೆ, ಬ್ರೆಜಿಲ್‍ನ ಹಲವು ಪ್ರದೇಶಗಳಲ್ಲಿ ತಾಜಾ ಹಲಸು 82 ರೂಪಾಯಿಗೆ ಲಭ್ಯವಿದೆ. ಕೆಲವೊಮ್ಮೆ ಹಲಸು ರಸ್ತೆಯಲ್ಲೇ ಕೊಳೆತು ನಾರುತ್ತಿರುವ ದೃಶ್ಯವೂ ಕಂಡುಬರುತ್ತೆ. ಅಲ್ಲದೆ ಹಲಸಿನ ಬೆಲೆ ಇತರ ದೇಶಗಳಿಯೂ ಕಡಿಮೆ ಇದೆ. ಆದರೆ ಇಂದು ಹಲಸಿನ ಬೆಲೆ ಕೇಳಿದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಹೀಗಿರುವಾಗ ಹಲಸಿನ ಹಣ್ಣಿನ ಬೆಲೆ ಇಷ್ಟೊಂದು ಏರಿಕೆಯಾಗಿದ್ದು ಹೇಗೆ? ಎಂಬ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    ಸರಳವಾಗಿ ಹೇಳಬೇಕಾದರೆ, ಸರಕುಗಳ ಬೇಡಿಕೆಯು ಅದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಬೇಡಿಕೆ ಹೆಚ್ಚು ಇದ್ರೆ ಹಣ ಸಹ ಹೆಚ್ಚಿರುತ್ತೆ. ಅದೇ ರೀತಿ ಇಲ್ಲಿ ಹಲಸಿನ ಬೇಡಿಕೆ ಹೆಚ್ಚಿದೆ. ಪರಿಣಾಮ ಈ ಬೆಲೆ ಇದೆ. ಇದನ್ನೂ ಓದಿ: ರೋಡ್ ಶೋ ವೇಳೆ ಕಾರಿನ ಮೇಲಿಂದ ಕೆಳಗೆ ಬಿದ್ದ ಪವನ್ ಕಲ್ಯಾಣ್!

    ಅದರಲ್ಲಿಯೂ ಬ್ರಿಟನ್ ನಂತಹ ಶೀತ ದೇಶಗಳಲ್ಲಿ ಹಲಸಿನ ಹಣ್ಣನ್ನು ಬೆಳೆಯುವಂತಿಲ್ಲ. ಹಲಸಿನ ಹಣ್ಣಿನ ಅಂತರಾಷ್ಟ್ರೀಯ ವ್ಯಾಪಾರವು ತುಂಬಾ ಸಂಕೀರ್ಣ ಮತ್ತು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆ ಲಂಡನ್ ನಲ್ಲಿ ಹಲಸಿಗೆ ಬೇಡಿಕೆ ಹೆಚ್ಚು. ಈ ಹಣ್ಣನ್ನು ಹೆಚ್ಚು ದಿನ ಇಟ್ಟುಕೊಳ್ಳುವಂತಿಲ್ಲ ಎಂದು ಸಹ ಇಲ್ಲಿ ನಿಯಮವಿದೆ.

  • ಮಳೆಗಾಲದ ಸ್ಪೆಷಲ್ ಹಲಸಿನ ಹಣ್ಣಿನ ಹಲ್ವ

    ಮಳೆಗಾಲದ ಸ್ಪೆಷಲ್ ಹಲಸಿನ ಹಣ್ಣಿನ ಹಲ್ವ

    ಕೆಲವು ಹಣ್ಣುಗಳು ಒಂದೊಂದು ಸೀಸನ್‍ಅಲ್ಲಿ ಮಾತ್ರ ಸಿಗುತ್ತವೆ. ಹಣ್ಣುಗಳನ್ನು ಹಾಗೆ ತಿನ್ನುವುದು ಮಾತ್ರವಲ್ಲ. ಹಣ್ಣುಗಳಿಂದ ಬಗೆಬಗೆಯ ತಿಂಡಿಗಳನ್ನು ಮಾಡಿ ಸವಿಯಬೇಕು ಎಂದು ಬೋಜನ ಪ್ರಿಯರು ಇಷ್ಟ ಪಡುತ್ತಾರೆ.

    ಹಲಸಿನ ಹಣ್ಣಿನ ಸೀಸನ್ ಇದಾಗಿದೆ. ಹಲಸಿನ ಹಣ್ಣಿನ ಇಡ್ಲಿ, ಕಡುಬು ಎಂದು ನೀವು ಮಡಿರುತ್ತೀರಿ. ಆದರೆ ಇಂದು ಹಲಸಿನ ಹಣ್ಣಿನ ಹಲ್ವಮಾಡಲು ಇಲ್ಲಿದೆ ಮಾಡುವ ವಿಧಾನ. ಹಲ್ವಾ ಪ್ರಿಯರಿಗೆ ಹಲಸಿನ ಹಣ್ಣಿನ ಹಲ್ವಾವು ಇಷ್ಟವಾಗದಿರಲು ಸಾಧ್ಯವಿಲ್ಲ. ಹಲಸಿನ ಹಣ್ಣಿನ ಹಲ್ವ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ ಬಹಳ ರುಚಿಯಾದ ತಿಂಡಿಗಳಲ್ಲಿ ಇದು ಒಂದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹಲಸಿನ ಹಣ್ಣು- 4ಕಪ್
    * ಬೆಲ್ಲ- 2 ಕಪ್
    * ತುಪ್ಪ- ಅರ್ಧ ಕಪ್
    * ಏಲಕ್ಕಿ ಹಾಗೂ ಗೋಡಂಬಿ ಪುಡಿ

    ಮಾಡುವ ವಿಧಾನ:
    * ಮೊದಲು ಬೀಜ ತೆಗೆದ ಹಲಸಿನ ಹಣ್ಣನ್ನು ನೀರು ಸೇರಿಸದೆ ರುಬ್ಬಿಕೊಳ್ಳಬೇಕು.

    * ನಂತರ ರುಬ್ಬಿಕೊಂಡ ಮಿಶ್ರಣವನ್ನು ಬಾಣಲೆಗೆ ಹಾಕಬೇಕು. ಹಣ್ಣಿನ ಪ್ರಮಾಣಕ್ಕೆ ಸರಿದೂಗುವಂತೆ ಬೆಲ್ಲವನ್ನು ಹಾಕಬೇಕು.

    * ಈ ಮಿಶ್ರಣವನ್ನು ಕುದಿಸುತ್ತೀರ ಬೇಕು. ಬಣ್ಣ ಬದಲಾಗುತ್ತಾ ಬರುತ್ತದೆ. ಮೊದಲು ಕಂದು ಬಣ್ಣ, ನಂತರ ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡುತ್ತೀರಬೇಕು.

    * ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ. ಗಟಗಟಗಿ ಹದಕ್ಕೆ ಬರುವ ವರೆಗು ಬೇಯಿಬೇಕು.

    * ನಂತರ ತುಪ್ಪ ಹಚ್ಚಿದ ಬಟ್ಟಲಿಗೆ ಹಾಕಬೇಕು. ಸುಮಾರು ಒಂದು ಗಂಟೆಗಳ ನಂತರ ಹಲಸಿನ ಹಣ್ಣಿನ ಹಲ್ವ ಸವಿಯಲು ಸಿದ್ಧವಾಗುತ್ತದೆ.

  • ಇಂದು ಮಾಡಿ ಹಲಸಿನ ಹಣ್ಣಿನ ಕಡುಬು

    ಇಂದು ಮಾಡಿ ಹಲಸಿನ ಹಣ್ಣಿನ ಕಡುಬು

    ಲಸಿನ ಹಣ್ಣಿನ ಕಡುಬು ಕರಾವಳಿಯ ಭಾಗದಲ್ಲಿ ಹೆಚ್ಚಾಗಿ ಮಾಡುತ್ತಾರೆ. ಇದು ಹಲಸಿನ ಹಣ್ಣಿನ ಸೀಸನ್‍ಅಲ್ಲಿ ಮಾತ್ರ ಮಾಡಬಹುದಾದ ತಿಂಡಿಯಾಗಿದೆ. ಮಳೆಗಾಲದಲ್ಲಿ ಬಿಸಿಬಿಸಿಯಾದ ಈ ಕುಡುಬು ಜೊತೆಗೆ ತುಪ್ಪ ಹಾಕಿ ತಿನ್ನಬೇಕು. ಹೆಚ್ಚು ಸಿಹಿ ಇರದೆ ಇರುವುದರಿಂದ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ.

    ಬೇಕಾಗುವ ಸಾಮಗ್ರಿಗಳು:

    * ಹಲಸಿನ ಹಣ್ಣು- 2 ಕಪ್
    * ಬೆಲ್ಲ – ಅರ್ಧ ಕಪ್
    * ಏಲಕ್ಕಿ ಪುಡಿ – ಕಾಲು ಚಮಚ
    * ತೆಂಗಿನಕಾಯಿ – 2 ಕಪ್
    * ಅಕ್ಕಿ – 2 ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಬಾಳೆ ಎಲೆ

    ಮಾಡುವ ವಿಧಾನ:
    * 2 ಕಪ್ ಅಕ್ಕಿ ತೊಳೆದು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
    * ಹಲಸಿನ ಹಣ್ಣನ್ನು ಬಿಡಿಸಿಕೊಂಡು, ರುಬ್ಬಲು ಸುಲಭವಾಗುವ ರೀತಿಯಲ್ಲಿ ಕತ್ತರಿಸಿಟ್ಟುಕೊಳ್ಳಿ.

    * ರುಬ್ಬುವ ಜಾರ್ ತೆಗೆದುಕೊಂಡು 2 ಕಪ್ ಕತ್ತರಿಸಿದ ಹಲಸಿನ ಹಣ್ಣು, ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಬೇಕು.

    * ಈಗ ತಯಾರಾದ ಹಲಸಿನ ಹಣ್ಣಿನ ಮಿಶ್ರಣಕ್ಕೆ ತೆಂಗಿನಕಾಯಿ ಮತ್ತು ನೆನೆಸಿದ ಅಕ್ಕಿಯನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ನೀರು ಸೇರಿಸದೇ ಎಲ್ಲವನ್ನೂ ರುಬ್ಬಿಕೊಳ್ಳಬೇಕು.

    * ಮಿಶ್ರಣ ಸಿದ್ಧವಾದ ನಂತರ, ಬಾಳೆ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಮಿಶ್ರಣವನ್ನು ಎಲೆಯ ಮೇಲೆ ಹರಡಿ. ಈಗ 4 ಬದಿಗಳಿಂದ ಎಲೆಗಳನ್ನು ಮುಚ್ಚಿ. ಇಡ್ಲಿ ಸ್ಟೀಮರ್ ನಲ್ಲಿ ಎಲ್ಲಾ ಎಲೆಗಳನ್ನು ಇದೇ ರೀತಿ ಮಾಡಿ ಒಳಗಿಟ್ಟು ಚೆನ್ನಾಗಿ ಬೇಯಿಸಿದರೆ ರುಚಿಯಾದ ಹಲಸಿನ ಹಣ್ಣು ಕಡುಬು ಸವಿಯಲು ಸಿದ್ಧವಾಗುತ್ತದೆ.

  • ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ಬೆಂಗಳೂರು: ಒಂದು ರೂಪದಲ್ಲಿ ಗಣೇಶನ ಆಕೃತಿ, ಮತ್ತೊಂದು ಕಡೆಯಿಂದ ಗರುಡನ ರೀತಿ, ತಾಯಿ ಮಗುವಿನ ಆಕೃತಿ, ಜಾಂಬವಂತ ಕರಡಿ ಹೀಗೆ ನಾನಾ ರೂಪದಲ್ಲಿ ಕಾಣುವ ಹಲಸಿನ ಅಪರೂಪದ ಹಣ್ಣು ವಿಸ್ಮಯಕಾರಿ ರೀತಿಯಲ್ಲಿ ಬೆಳವಣಿಗೆಯಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕನಹಳ್ಳಿ ನಿವಾಸಿ ಶಿವಕುಮಾರ್ ಎಂಬವರ ತೋಟದಲ್ಲಿ ಒಂದು ಪುರಾತನವಾದ ಹಲಸಿನ ಮರ ಇದೆ. ಈ ಮರದಲ್ಲಿ ಬಿಟ್ಟ ಹಣ್ಣು ನಾನಾ ಆಕೃತಿಯಲ್ಲಿ ಆ ಹಲಸಿನ ಹಣ್ಣನ್ನ ತಮ್ಮ ಊಹೆಯಂತೆ ಕಾಣತೊಡಗಿದೆ. ಮರದಲ್ಲಿ ಕಂಡ ಈ ಅಪರೂಪದ ಹಣ್ಣನ್ನು ಮಾಲೀಕ ಶಿವಕುಮಾರ್ ಮನೆಗೆ ತಂದು ದೇವರ ಹಣ್ಣು ಎಂದು ಮನೆಯವರಿಗೆ ಮತ್ತು ಸ್ನೇಹಿತರಿಗೆ ತೋರಿಸಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ನಮ್ಮ ತೋಟದಲ್ಲಿ ಸಾಕಷ್ಟು ವರ್ಷದ ಹಳೆಯ ಮರ ಇದೆ. ಈ ಹಲಸಿನ ಮರದಲ್ಲಿ ಈ ಹಣ್ಣು ನೋಡಿದಾಗ ನನಗೆ ನಾಲ್ಕೈದು ರೂಪದಲ್ಲಿ ಗೋಚರವಾಗಿದೆ, ಒಂದು ರೀತಿಯಲ್ಲಿ ಈ ಹಣ್ಣು ನೋಡಲು ಖುಷಿಯಾಗಿದೆ ಎಂದಿದ್ದಾರೆ. ಇನ್ನೂ ಈ ಹಣ್ಣು ಅವರವರ ಮನಸ್ಥಿತಿಗೆ ನೋಡುವ ರೀತಿಯಲ್ಲಿ ಗೋಚರವಾಗುವ ದೃಷ್ಟಿಯಲ್ಲಿ ಕಾಣಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಹೊತ್ತು ಹೊರಟ ಕಿಸಾನ್ ರೈಲು

  • ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಲಸಿನ ಹಣ್ಣುಗಳ ಸಿಗುವ ಸಮಯ ಇದು. ಈ ಹಣ್ಣಿನಿಂದ ಬೇರೆ ಬೇರೆ ರೀತಿಯ ಅಡುಗೆಯನ್ನು ಮಾಡಬಹುದು. ಆದರೆ ಇಂದು ಹಲಸಿನ ಹಣ್ಣಿನ ಇಡ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಂಡು ನೀವು ಮನೆಯಲ್ಲಿಯೇ ರುಚಿಯಾಗಿ ಹಲಸಿನ ಹಣ್ಣಿನ ಇಡ್ಲಿ ಮಾಡಿ ಸಿವಿಯಿರಿ..

    ಬೇಕಾಗುವ ಸಾಮಗ್ರಿಗಳು:

    * ಏಲಕ್ಕಿ – 4-5
    * ಅಕ್ಕಿ ರವೆ – 1 ಕಪ್
    * ಹಲಸಿನ ಹಣ್ಣು- 2ಕಪ್
    * ರಚಿಗೆ ತಕ್ಕಷ್ಟು ಉಪ್ಪು
    * ಕೊಬ್ಬರಿ ತುರಿ- ಅರ್ಧ ಕಪ್
    * ಬಾಳೆ ಎಲೆ- 4
    * ತುಪ್ಪ- ಅರ್ಧ ಕಪ್

    * ಬೆಲ್ಲ-  1 ಕಪ್

    ಮಾಡುವ ವಿಧಾನ:
    * ಹಲಸಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಸಕ್ಕರೆ ಹಾಕಿ ಕಲಸಿಕೊಳ್ಳಬೇಕು.

    * ಬಳಿಕ ಅದಕ್ಕೆ ಉಪ್ಪು, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ, ಅಕ್ಕಿರವೆ ಹಾಕಿ ಕಲಸಬೇಕು. ಒಂದು ಗಂಟೆ ಅದನ್ನು ಹಾಗೆ ಇಡಬೇಕು.

    * ನಂತರ ಇಡ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದರ ಮೇಲೆ ಒಂದು ತಟ್ಟೆ ಇಟ್ಟು, ಬಾಳೆ ಎಲೆಗೆ ತುಪ್ಪವನ್ನು ಸವರಿ ಸಿದ್ಧಪಡಿಸಿಕೊಂಡ ಹಲಸಿನಕಾಯಿ ಹಿಟ್ಟನ್ನು ಅದರೊಳಗೆ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಹಾಕಿ.

    * ಬಳಿಕ ಮುಚ್ಚಳವನ್ನು ಮುಚ್ಚಿ. 25 ನಿಮಿಷ ಬೇಯಿಸಬೇಕು. ನಂತರ ರುಚಿಕರವಾದ ಹಲಸಿನ ಹಣ್ಣಿನ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.

  • ಹಲಸಿನ ಹಣ್ಣಿನಲ್ಲಿ ವಿಷವಿಕ್ಕಿದ ಪಾಪಿಗಳು- ಹಣ್ಣು ತಿಂದ ಹಸುಗಳು ರಕ್ತಕಾರಿ ಸಾವು

    ಹಲಸಿನ ಹಣ್ಣಿನಲ್ಲಿ ವಿಷವಿಕ್ಕಿದ ಪಾಪಿಗಳು- ಹಣ್ಣು ತಿಂದ ಹಸುಗಳು ರಕ್ತಕಾರಿ ಸಾವು

    ಹಾಸನ: ವಿಷಪೂರಿತ ಹಲಸಿನ ಹಣ್ಣು ತಿಂದ ಹಸುಗಳು ರಕ್ತಕಾರಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗಾವೆ ಗ್ರಾಮದಲ್ಲಿ ನಡೆದಿದೆ.

    ಹೆಗ್ಗಾವೆ ಗ್ರಾಮದ ಮೂವರು ರೈತರ ಆರು ಹಸುಗಳು ಸಾವನ್ನಪ್ಪಿದ್ದು, ಜಾನುವಾರಗಳನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಅನ್ನದಾತರು ಕಂಗಾಲಾಗಿದ್ದಾರೆ. ಎರಡು ಹಸುಗಳು ವಿಷ ಮಿಶ್ರಿತ ಹಣ್ಣು ತಿಂದ ಸ್ಥಳದಲ್ಲಿ ಸಾವನ್ನಪ್ಪಿವೆ. ಉಳಿದ ಹಸುಗಳು ಕೊಟ್ಟಿಗೆಗೆ ಬಂದು ಪ್ರಾಣ ಬಿಟ್ಟಿವೆ.

    ಹಸುಗಳನ್ನು ವಿಷ ಹಾಕಿ ಕೊಂದವರಿಗೆ ಆ ದೇವರು ಖಂಡಿತ ಒಳ್ಳೆಯದು ಮಾಡಲ್ಲ. ಅವರೂ ಕೂಡ ನರಳಿ ನರಳಿ ಸಾಯುತ್ತಾರೆ ಎಂದು ಹಸುವಿನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

    ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

    ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.