Tag: ಹಲಸಿನಕಾಯಿ ಬಿರಿಯಾನಿ

  • ಹಲಸಿನಕಾಯಿ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?

    ಹಲಸಿನಕಾಯಿ ಬಿರಿಯಾನಿ ಮಾಡುವುದು ಹೇಗೆ ಗೊತ್ತಾ?

    ಬೆಳಗ್ಗಿನ ಉಪಹಾರಕ್ಕೆ ಏನು ಮಾಡುವುದು ಎಂದು ನೀವು ಯೋಚಿಸುತ್ತಿದ್ದಿರಾ? ಚಳಿ ಇರುವುದರಿಂದ ಬಿಸಿಯಾ ಟೀ, ಕಾಫಿ ಜೊತೆಗೆ ಹಲಸಿನಕಾಯಿ ಬಿರಿಯಾನಿ ಮಾಡಿದರೆ ಸಖತ್ ರುಚಿಯಾಗಿರುತ್ತದೆ. ಹಲಸಿನಕಾಯಿ ಬಿರಿಯಾನಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ.

    ಬೇಕಾಗುವ ಸಾಮಗ್ರಿಗಳು:
    * ಹಲಸಿನ ಕಾಯಿ- 2 ಕಪ್
    * ಈರುಳ್ಳಿ- 2
    * ತುಪ್ಪ- ಅರ್ಧ ಕಪ್
    * ಹಸಿಮೆಣಸಿನಕಾಯಿ- 4
    * ಅರಿಶಿಣ ಪುಡಿ- ಅರ್ಧ ಚಮಚ
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಬಿರಿಯಾನಿ ಪೌಡರ್- 4 ಚಮಚ
    * ಬಿರಿಯಾನಿ ಎಲೆ, ಚಕ್ಕೆ, ಲವಂಗ, ಏಲಕ್ಕಿ
    * ಮೊಸರು- 1 ಕಪ್
    * ಜೀರಿಗೆ- 1 ಚಮಚ
    * ಶುಂಠಿ, ಬೆಳ್ಳುಳ್ಳು ಪೇಸ್ಟ್
    * ಅಕ್ಕಿ- 2 ಕಪ್
    * ಪುದೀನಾ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಕುಕ್ಕರ್‌ಗೆ ತುಪ್ಪ, ಚಕ್ಕೆ, ಪಲಾವ್ ಎಲೆ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
    * ನಂತರ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ, ಹಲಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಬೇಯಿಸಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ಹಲಸಿನಕಾಯಿ ಸ್ವಲ್ಪ ಬೆಂದ ಮೇಲೆ ಅರಿಶಿಣ, ಬಿರಿಯಾನಿ ಪೌಡರ್, ಮೊಸರು, ಉಪ್ಪು ಸೇರಿಸಿ ಬೇಯಿಸಬೇಕು.  ಇದನ್ನೂ ಓದಿ: ಫಟ್​ ಅಂತ ಮಾಡಬಹುದು ಮೈದಾ ದೋಸೆ

    * ನಂತರ ಕುಕ್ಕರ್‌ಗೆ ಅಕ್ಕಿಯನ್ನು ಸೇರಿಸಿ ಅಳತೆಗೆ ಹೊಂದುವಷ್ಟು ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ 2 ವಿಶಲ್ ಕೂಗಿಸಿದರೆ ರುಚಿಯಾದ ಹಲಸಿನಕಾಯಿ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.