Tag: ಹರ್ ಘರ್ ತಿರಂಗಾ

  • ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ

    ಸಿದ್ದರಾಮಯ್ಯರಿಂದ ನಾವು ರಾಷ್ಟ್ರಭಕ್ತಿ ಪಾಠ ಕಲಿಯೋ ಅವಶ್ಯಕತೆ ಇಲ್ಲ: ಆರಗ ಜ್ಞಾನೇಂದ್ರ

    ಬೆಂಗಳೂರು: ಸಿದ್ದರಾಮಯ್ಯನಿಂದ ನಾವು ರಾಷ್ಟ್ರಭಕ್ತಿ ಕಲಿಯುವ ಅವಶ್ಯಕತೆ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.

    ಹರ್ ಘರ್ ತಿರಂಗಾ ಅಭಿಯಾನ ಬಿಜೆಪಿಯ ನಾಟಕ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರಿಗೆ ಹಕ್ಕು ಇರೋದು? ಸಿದ್ದರಾಮಯ್ಯಗೆ ವಯಸ್ಸು ಈಗ 75. ಸಿದ್ದರಾಮಯ್ಯ ಏನಾದರೂ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ನಾನು ಏನ್ ಹೇಳಿದರೂ ಜನ ಕೇಳುತ್ತಾರೆ ಅಂತ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಜನರು ನಂಬುವುದಿಲ್ಲ. ರಾಷ್ಟ್ರಭಕ್ತಿ ಪಾಠ ನಾವು ಇವರಿಂದ ಕಲಿಯಬೇಕಿಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ

    ನಾವು ಚಿಕ್ಕವಯಸ್ಸಿನಿಂದ ಬಿಜೆಪಿ, ಆರ್‌ಎಸ್‍ಎಸ್‍ನಲ್ಲಿ ಇದ್ದು ಸಂಸ್ಕಾರದಲ್ಲಿ ಎದ್ದು ಬಂದಿದ್ದೇವೆ. ಸ್ವಾತಂತ್ರದ ನಂತರ ಹುಟ್ಟಿದವರಿಗೆ ರಾಷ್ಟ್ರದ ಕಲ್ಪನೆ ಬರಲು ಮೋದಿ ತಿರಂಗ ಅಭಿಯಾನಕ್ಕೆ ಕರೆ ಕೊಟ್ಟರು. ಸಿದ್ದರಾಮಯ್ಯ ಅಂತಹವರಿಗೆ ರಾಷ್ಟ್ರದ ಪರಿಕಲ್ಪನೆ ಗೊತ್ತಾಗಬೇಕು. ಹೀಗಾಗಿ ಮೋದಿ ಅವರು ಕರೆ ಕೊಟ್ಟಿದ್ದಾರೆ ಎಂದಿದ್ದಾರೆ.

    ಮನೆ ಮನೆಯಲ್ಲಿ 75 ವರ್ಷದ ಸಂಭ್ರಮ ನಡೆಯುತ್ತಿದೆ. ಸಾವಿರಾರು ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ ತಂದುಕೊಟ್ಟಿದ್ದಾರೆ. ಅವರನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಹೀಗಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ ಅಂತ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದೃಷ್ಟಿ ವಿಕಲಚೇತನರಿಗಾಗಿ ಚೆಸ್ ಪಂದ್ಯಾಟ – 35 ಸಾವಿರ ರೂ. ಬಹುಮಾನ

    Live Tv
    [brid partner=56869869 player=32851 video=960834 autoplay=true]

  • 2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    2,500 ಅಡಿ ಉದ್ದದ ತಿರಂಗಾ ವಾಕಥಾನ್‍ಗೆ ಸುಧಾಕರ್ ಚಾಲನೆ

    ಚಿಕ್ಕಬಳ್ಳಾಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಜನರಲ್ಲಿ ಜಾಗೃತಿ ಹಾಗೂ ಪ್ರೇರೇಪಣೆ ಮೂಡಿಸುವ ಸಲುವಾಗಿ ಇಂದು ಚಿಕ್ಕಬಳ್ಳಾಪುರ ನಗರದಲ್ಲಿ 2,500 ಅಡಿ ಉದ್ದದ ತಿರಂಗಾ ಯಾತ್ರೆ ನಡೆಸಲಾಯಿತು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ 2,500 ಅಡಿ ಉದ್ದದ ತ್ರಿವರ್ಣ ಧ್ವಜದ ವಾಕಥಾನ್ ನಡೆಸಲಾಗಿಯಿತು. ನಗರದ ಎಂಜಿ ರಸ್ತೆಯ ಜೈ ಭೀಮ್ ವಿದ್ಯಾರ್ಥಿನಿಲಯದಿಂದ ಬಿಬಿರಸ್ತೆಯ ಮೂಲಕ ಸಾಗಿ ಒಕ್ಕಲಿಗರ ಕಲ್ಯಾಣಮಂಟಪದ ಬಳಿ ವಾಕಥಾನ್ ಅಂತ್ಯವಾಯಿತು. ಈ ವಾಕಥಾನ್‍ನಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನೂ ಓದಿ: ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಆಗಸ್ಟ್ 13 ರಿಂದ 15 ರವರೆಗೆ ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇಂದು ಆಯೋಜಿಸಿದ್ದ ವಾಕಥಾನ್ ಇಡೀ ನಗರದಲ್ಲಿ ಸಂಚಲನವನ್ನೇ ಮೂಡಿಸಿತ್ತು. ಸುಮಾರು 2,500 ಅಡಿಗಳ ಉದ್ದದ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿದ ಸಾವಿರಾರು ಶಾಲಾ-ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಬೆಳ್ಳಂ ಬೆಳಗ್ಗೆ ಆರೋಗ್ಯ ಸಚಿವರು ಹೆಜ್ಜೆ ಹಾಕಿ ಹುರುಪು ತುಂಬಿದರು. ಹೆಜ್ಜೆ ಹೆಜ್ಜೆಗೂ ಭಾರತ್ ಮಾತಾಕಿ ಜೈ ಉದ್ಘೋಷ ಅನುಕರಣಿಸುತ್ತಿದ್ದ ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬ್ಯಾಂಡ್ ಸೆಟ್‌ಗಳು, ಡಿಜೆ ಶಬ್ದದ ಅಬ್ಬರದ ನಡುವೆ ರಾಷ್ಟ್ರಪ್ರೇಮ ಉಕ್ಕೇರಿಸುವ ಘೋಷಣೆಗಳು ಮೊಳಗಿದವು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ರಸ್ತೆಯುದ್ದಕ್ಕೂ ತ್ರಿವರ್ಣ ಧ್ವಜಗಳ ಹಾರಾಟ ಯುವ ವಿದ್ಯಾರ್ಥಿಗಳ ಜೈಕಾರದ ಅರ್ಭಟ ಕೇಳಿಬಂತು. ನಾಗರಿಕರು, ಅಧಿಕಾರಿಗಳು, ಶಿಕ್ಷಕರು ವಾಕಥಾನ್‍ನಲ್ಲಿ ಭಾಗವಹಿಸಿ ತಿರಂಗಾ ಅಭಿಯಾನ ಜಾಗೃತಿ ನಡಿಗೆಗೆ ಮೆರುಗು ತುಂಬಿದರು.

    Live Tv
    [brid partner=56869869 player=32851 video=960834 autoplay=true]

  • ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ಹರ್ ಘರ್ ತಿರಂಗಾ ಅಭಿಯಾನ – ಅಂಚೆ ಇಲಾಖೆಯಿಂದ 10 ದಿನಗಳಲ್ಲಿ 1 ಕೋಟಿ ಧ್ವಜ ಮಾರಾಟ

    ನವದೆಹಲಿ: 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಆಗಿರುವುದರಿಂದ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಸದ್ದು ಮಾಡುತ್ತಿದೆ. ವಿಶೇಷವಾಗಿ ಈ ಅಭಿಯಾನಕ್ಕೆ ಭಾರತೀಯ ಅಂಚೆ ಸೇವೆಯು ಕೈಜೋಡಿಸಿದ್ದು, ರಾಷ್ಟ್ರಧ್ವಜವನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ 10 ದಿನಗಳಲ್ಲಿ 1 ಕೋಟಿ ಧ್ವಜವನ್ನು ಆನ್‍ಲೈನ್ ಮೂಲಕ ಮನೆಗಳಿಗೆ ತಲುಪಿಸಿ ದಾಖಲೆ ಬರೆದಿದೆ.

    ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುನ್ನ, ಭಾರತೀಯ ಅಂಚೆ ಸೇವೆಯು ರಾಷ್ಟ್ರಧ್ವಜವನ್ನು ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿತ್ತು. ತ್ರಿವರ್ಣ ಧ್ವಜವನ್ನು 25 ರೂ. ದರದಲ್ಲಿ ಇಂಡಿಯಾ ಪೋಸ್ಟ್‌ನ  ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಖರೀದಿಸಬಹುದಾಗಿದೆ. ಈಗಾಗಲೇ ದೇಶಾದ್ಯಂತ 1 ಕೋಟಿ ರಾಷ್ಟ್ರಧ್ವಜವನ್ನು ಮನೆಮನೆಗಳಿಗೆ 4.2 ಲಕ್ಷ ಅಂಚೆ ನೌಕರರು ತಲುಪಿಸುವ ಕಾರ್ಯ ಮಾಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ

    ಈಗಾಗಲೇ 4.2 ಲಕ್ಷ ಅಂಚೆ ನೌಕರರು ನಗರ, ಪೇಟೆ, ಪಟ್ಟಣ, ಗ್ರಾಮೀಣಭಾಗ, ಗಡಿ ಪ್ರದೇಶಗಳನ್ನು ಸೇರಿದಂತೆ ದೇಶದ ಮೂಲೆ ಮೂಲೆಗೂ ತಲುಪಿಸುವ ಕಾರ್ಯ ಮಾಡುತ್ತಿದ್ದು, ಆಗಸ್ಟ್ 15ರ ವರೆಗೆ ಈ ಸೇವೆಯನ್ನು ಅಂಚೆ ಇಲಾಖೆ ಮಾಡುತ್ತಿದೆ.

    ಅಂಚೆ ಇಲಾಖೆ ರಾಷ್ಟ್ರಧ್ವಜ ತಲುಪಿಸುತ್ತಿರುವುದರಿಂದ ಈ ಸೇವೆಗೆ ಯಾವುದೇ ಜಿಎಸ್‍ಟಿ ಅನ್ವಯಿಸುವುದಿಲ್ಲ. ಧ್ವಜವನ್ನು ಖರೀದಿಸಲು ಆಸಕ್ತಿಯುಳ್ಳವರು ePostoffice ಪೋರ್ಟಲ್‍ನಿಂದ ಆರ್ಡರ್ ಮಾಡಬಹುದು. ಪರ್ಯಾಯವಾಗಿ, ರಾಷ್ಟ್ರಧ್ವಜವನ್ನು ಖರೀದಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದಾಗಿದೆ. ಇಂಡಿಯಾ ಪೋಸ್ಟ್ ಈ ಕುರಿತು ಟ್ವಿಟ್ಟರ್‌ನಲ್ಲಿ, ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ತಿರಂಗಾ ಮಾರಾಟ ಮತ್ತು ವಿತರಣೆಯನ್ನು ಸುಲಭಗೊಳಿಸಲಾಗುವುದು. 2022ರ ಸ್ವಾತಂತ್ರ್ಯ ದಿನಾಚರಣೆಯ ಮೊದಲ ರಜಾದಿನಗಳಲ್ಲಿ ಎಲ್ಲ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ ಎಂದು ಬರೆದು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

    ಕೇಂದ್ರ ಸರ್ಕಾರದ ಬಜೆಟ್ ಡಾಕ್ಯುಮೆಂಟ್ ಪ್ರಕಾರ, ಭಾರತವು 1,55,000 ಅಂಚೆ ಕಛೇರಿಗಳೊಂದಿಗೆ ವಿಶ್ವದ ಅತಿದೊಡ್ಡ ಅಂಚೆ ಜಾಲವನ್ನು ಹೊಂದಿದೆ. 89 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ಕಚೇರಿಗಳು ಸ್ಥಾಪನೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಹರ್ ಘರ್ ತಿರಂಗಾ ಅಭಿಯಾನ- ಎಲ್ಲರ ಮನೆ ಮೇಲೆ ತಿರಂಗಾ ಹಾರಿಸುವಂತೆ ಸಿಎಂ ಮನವಿ

    ಹರ್ ಘರ್ ತಿರಂಗಾ ಅಭಿಯಾನ- ಎಲ್ಲರ ಮನೆ ಮೇಲೆ ತಿರಂಗಾ ಹಾರಿಸುವಂತೆ ಸಿಎಂ ಮನವಿ

    ಬೆಂಗಳೂರು: ಆಜಾದಿ ಕಾ ಅಮೃತಮಹೋತ್ಸವಕ್ಕೆ ಎಲ್ಲಾ ಕಡೆ ಭರ್ಜರಿ ತಯಾರಿಗಳು ನಡೀತಿವೆ. ರಾಜ್ಯ ಸರ್ಕಾರ ಹರ್ ಘರ್ ತಿರಂಗ ಅಭಿಯಾನಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಅಭಿಯಾನ ಯಶಸ್ವಿಗೊಳಿಸುವಂತೆ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಿಗೆ ಸಿಎಂ ಪತ್ರ ಬರೆದಿದ್ದಾರೆ.

    ಎಲ್ಲರ ಮನೆಯ ಮೇಲೆ ತಿರಂಗಾ ಹಾರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಹರ್ ಘರ್ ತಿರಂಗಾ ಅಭಿಯಾನವನ್ನು ಬಿಜೆಪಿಯ ನಾಟಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಜರಿದಿದ್ದಾರೆ. ಮೊದಲು ಧ್ವಜದ ಬಣ್ಣ ಕೆಂಪು ಇತ್ತು, ಅದಕ್ಕೆ ಕೇಸರಿ ಬದಲು ಕೆಂಪು ಅಂತಾ ಹೇಳಿದ್ದೇ. ಅದೇನು ದೊಡ್ಡ ಅಪರಾಧನಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಇದೇ ವೇಳೆ ಧ್ವಜ ಖರೀದಿಗೆ ತಾಲೂಕು ಕಚೇರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ದೋಷಯುಕ್ತ ಧ್ವಜಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಪೂರಕವಾಗಿ ಹೊಳೆನರಸೀಪುರದಲ್ಲಿ ಮಾರಾಟ ಮಾಡಲಾಗಿರುವ ದೋಷಯುಕ್ತ ಧ್ವಜದ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್- ಆ.15ರಂದು ಬಿಎಂಟಿಸಿ ಬಸ್‍ನಲ್ಲಿ ಫ್ರೀ ಪ್ರಯಾಣ

    ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ರಜತ ಮಹೋತ್ಸವ ಪ್ರಯುಕ್ತ ಬೆಂಗಳೂರಿಗರಿಗೆ ಬಿಎಂಟಿಸಿ ಗಿಫ್ಟ್ ನೀಡಿದೆ. ಆಗಸ್ಟ್ 15ರಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಅಂದ ಹಾಗೇ ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತ್ಯೇಕ ರ್ಯಾಲಿ ಹಮ್ಮಿಕೊಂಡಿದ್ದು, ಲಕ್ಷಾಂತರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸರು ಪ್ಲಾನ್ ಮಾಡ್ತಾ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ: ಸಿದ್ದರಾಮಯ್ಯ

    ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ: ಸಿದ್ದರಾಮಯ್ಯ

    ಹುಬ್ಬಳ್ಳಿ: ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ವಿಷಯದಲ್ಲಿ ನಮ್ಮದು ರಾಜಕೀಯವಿಲ್ಲ. ಡೋಂಗಿ ರಾಜಕೀಯ ಇರಬಾರದು ಅಂತ ಹೇಳಿದ್ದೇನೆ. ಹಿಂದೆ ಆರ್‌ಎಸ್‍ಎಸ್‍ನ ಕೆಲವರು ರಾಷ್ಟ್ರಧ್ವಜ ಬೇಡ ಎಂದಿದ್ದರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ ವಿರೋಧ ಮಾಡಿದ್ದರು. ಆರ್‌ಎಸ್‍ಎಸ್‍ನವರು ನಾಗ್ಪುಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ ಎಂದು ಪ್ರಶ್ನಿಸಿದರು.

    bjP

    ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಂತ್ಯ ವಿಚಾರವಾಗಿ ಮಾತನಾಡಿದ ಅವರು, ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಇವಾಗ ಎನ್‍ಡಿಎ ತೊರಿದಿದ್ದಾರೆ. ಅವರಿಬ್ಬರ ಮನಸ್ತಾಪದ ಬಗ್ಗೆ ನಂಗೆ ಗೊತ್ತಿಲ್ಲ. ಅವರೊಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದರು. ಕೋಮುವಾದದ ಪಕ್ಷ ಬಿಟ್ಟಿದ್ದು ಒಳ್ಳೆಯದು ಎಂದರು. ಇದನ್ನೂ ಓದಿ: ನಾವೆಲ್ಲಾ ಸಚಿವರು, ನಮಗೆ ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ: ನಿತಿನ್ ಗಡ್ಕರಿ

    ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮೂರನೇಯವರಾದ್ರು ಬರಲಿ ನಾಲ್ಕನೇಯವರಾದ್ರು ಬರಲಿ ನಮಗೇನು ಸಂಬಂಧವಿಲ್ಲ. ಬಿಎಸ್‍ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ. ಈ ಬಗ್ಗೆ ಟ್ವೀಟ್ ಮಾಡಿದವರನ್ನ ಕೇಳಿ,ನಾನಂತು ಟ್ವೀಟ್ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

    ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದದ ಬಗ್ಗೆ ನಂಗೆ ಗೊತ್ತಿಲ್ಲ. ಅದರ ಕಾನೂನು ವಿವಾದದ ಬಗ್ಗೆಯೂ ಮಾಹಿತಿ ಇಲ್ಲ. ಅಲ್ಲಿ ಮೊದಲಿನಂತೆ ಏನು ನಡೆಯುತ್ತಿತ್ತು ಎನ್ನುವುದು ಗೊತ್ತಿಲ್ಲ ಎಂದ ಅವರು, ಬದಾಮಿಯಲ್ಲಿ ನಾನು ಸ್ಪರ್ಧಿಸೋದು ಇನ್ನು ನಿರ್ಧರಿಸಿಲ್ಲ. ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ. ಅಲ್ಲೆಲ್ಲಾ ಚುನಾವಣೆಗೆ ನಿಲ್ಲೊಕ್ಕಾಗುತ್ತಾ, ಸದ್ಯ ಬಾದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ

    Live Tv
    [brid partner=56869869 player=32851 video=960834 autoplay=true]

  • ಸ್ವತಂತ್ರ ಭಾರತ ತಿರಸ್ಕರಿಸಿ, ಭಗವಾಧ್ವಜವೇ ರಾಷ್ಟ್ರಧ್ವಜ ಎಂದಿತ್ತು ಆರ್‌ಎಸ್‌ಎಸ್‌: ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಓವೈಸಿ ಟಾಂಗ್‌

    ಸ್ವತಂತ್ರ ಭಾರತ ತಿರಸ್ಕರಿಸಿ, ಭಗವಾಧ್ವಜವೇ ರಾಷ್ಟ್ರಧ್ವಜ ಎಂದಿತ್ತು ಆರ್‌ಎಸ್‌ಎಸ್‌: ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಓವೈಸಿ ಟಾಂಗ್‌

    ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರೆ ನೀಡಿರುವ ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ತಿರುಗೇಟು ನೀಡಿದ್ದಾರೆ.

    ಆರ್‌ಎಸ್‌ಎಸ್‌ ಸ್ವತಂತ್ರ ಭಾರತವನ್ನು ತಿರಸ್ಕರಿಸಿತ್ತು. ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡಬೇಕೆಂದು ಒತ್ತಾಯಿಸಿತ್ತು ಎಂದು ಟ್ವೀಟ್‌ ಮಾಡಿ ಆರ್‌ಎಸ್‌ಎಸ್‌ ಮತ್ತು ಪ್ರಧಾನಿ ಮೋದಿ ಅವರಿಗೆ ಓವೈಸಿ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ ಏನು ಮಾಡಿದರೂ ನಾವು ಹೆದರುವುದಿಲ್ಲ: ರಾಹುಲ್ ಗಾಂಧಿ

    ದೇಶಭಕ್ತರು ಭಾರತದ ಸ್ವಾತಂತ್ರ್ಯವನ್ನು ಆಚರಿಸಿದರೆ ಆರ್‌ಎಸ್‌ಎಸ್ ಕಹಿಯಾಗುತ್ತದೆ. ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ. ಅಲ್ಲದೇ ಸಂಘಟಕರು, 1947ರ ಆಗಸ್ಟ್‌ 14ರಂದು ಹಿಂದೂ ರಾಷ್ಟ್ರದ ಬೇಡಿಕೆಯಿಟ್ಟಿದ್ದರು ಮತ್ತು ತಿರಂಗಾವನ್ನು ಬಹಿರಂಗವಾಗಿ ಅವಮಾನಿಸಿದ್ದರು. ತ್ರಿವರ್ಣ ಧ್ವಜವನ್ನು ಎಂದಿಗೂ ಗೌರವಿಸಲಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿತ್ತು ಎಂದು ಓವೈಸಿ ತಿಳಿಸಿದ್ದಾರೆ.

    ಆರ್‌ಎಸ್‌ಎಸ್ ನಮಗೆ ಅಡಿಪಾಯ. ರಾಷ್ಟ್ರಕ್ಕಾಗಿ ಬದುಕಲು ಸ್ಫೂರ್ತಿ ನೀಡಿದೆ ಎಂದು ಪ್ರಧಾನಿ ಮೋದಿ ಅವರು ಹೊಗಳಿದ್ದಾರೆ. ತಿರಂಗಾವನ್ನು ಪ್ರೊಫೈಲ್‌ಗಳಲ್ಲಿ ಹಾಕಲು ಮತ್ತು ರ‍್ಯಾಲಿಗಳನ್ನು ನಡೆಸಲು ಕರೆ ನೀಡಿದ್ದಾರೆ. ಆದರೆ ಸ್ವತಂತ್ರ ಭಾರತವನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿತ್ತು ಎಂದು ಅಸಾದುದ್ದೀನ್‌ ಓವೈಸಿ ಕುಟುಕಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ

    Live Tv
    [brid partner=56869869 player=32851 video=960834 autoplay=true]

  • ‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಯಶ್, ಸುದೀಪ್ ಸೇರಿದಂತೆ ಹಲವು ಗಣ್ಯರು ಸಾಥ್

    ‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಯಶ್, ಸುದೀಪ್ ಸೇರಿದಂತೆ ಹಲವು ಗಣ್ಯರು ಸಾಥ್

    ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಕರೆ ಕೊಟ್ಟಿದ್ದಾರೆ. ಅವರ ಮನ್ ಕೀ ಬಾತ್ ಸರಣಿಯಲ್ಲಿ ಈ ಕುರಿತು ವಿಶೇಷವಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಭಕ್ತಿ ಸಾರುವಂತೆ ಕರೆ ನೀಡಿದ್ದಾರೆ.

    ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಸಾಕ್ಷಿಯಾಗಲು ಕನ್ನಡದ ಅನೇಕ ಸಿಲೆಬ್ರಿಟಿಗಳು ಮುಂದೆ ಬಂದಿದ್ದು, ತಮ್ಮ ಅಭಿಮಾನಿಗಳಿಗೆ  ಈ ಆಂದೋಲನದಲ್ಲಿ ಭಾಗಿ ಆಗುವಂತೆ ಕರೆ ನೀಡಿದ್ದಾರೆ. ಕಿಚ್ಚ ಸುದೀಪ್, ಯಶ್, ನಟ ಜಗ್ಗೇಶ್, ತಾರಾ, ಪ್ರಣೀತಾ ಸೇರಿದಂತೆ ಅನೇಕ ಕಲಾವಿದರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿಪಿ ಕೂಡ ಬದಲಾಯಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ಅಕ್ಷಯ್ ಕುಮಾರ್, ಸೋನು ನಿಗಮ್, ಆಶಾ ಭೋಂಸ್ಲೆ, ಅಮಿತಾಭ್ ಬಚ್ಚನ್, ಪ್ರಭಾಸ್, ಕೀರ್ತಿ ಸುರೇಶ್, ಅಜಯ್ ದೇವಗನ್, ಅನುಷ್ಕಾ ಶರ್ಮಾ ಹೀಗೆ ಬಾಲಿವುಡ್ ನ ಅನೇಕ ತಾರೆಯರು ಈ ಆಂದೋಲನದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ದೇಶಭಕ್ತಿ ಸಾರುವಂತಹ ಮತ್ತು ಧ್ವಜದ ಮಹತ್ವವನ್ನು ತಿಳಿಸುವಂತಹ ಹಾಡೊಂದನ್ನು ರಿಲೀಸ್ ಆಗಿದ್ದು, ಈ ಹಾಡಿನಲ್ಲಿ ಸಿನಿಮಾ ರಂಗದ ಗಣ್ಯರು ಮತ್ತು ಕ್ರೀಡಾ ಪಟುಗಳು ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜ ಕೊಳ್ಳುವಂತೆ ಸ್ಥಳೀಯ ಆಡಳಿತದಿಂದಲೇ ಜನರಿಗೆ ಒತ್ತಾಯ

    ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜ ಕೊಳ್ಳುವಂತೆ ಸ್ಥಳೀಯ ಆಡಳಿತದಿಂದಲೇ ಜನರಿಗೆ ಒತ್ತಾಯ

    ಶ್ರೀನಗರ: ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲೇಬೇಕೆಂಬ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಕೊಂಡುಕೊಳ್ಳುವಂತೆ ಅಲ್ಲಿನ ಆಡಳಿತವೇ ಜನರನ್ನು ಒತ್ತಾಯಿಸುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಆಗಸ್ಟ್ 13 ರಿಂದ ಆಗಸ್ಟ್ 15ರ ನಡುವೆ ದೇಶದ ನಾಗರಿಕರು ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಪ್ರೇರೇಪಿಸುತ್ತಿದೆ. ಆದರೆ ಕಾಶ್ಮೀರ ಆಡಳಿತ ತ್ರಿವರ್ಣ ಧ್ವಜವನ್ನು ಕೊಂಡುಕೊಳ್ಳುವಂತೆ ಜನತೆಗೆ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ಧ್ವಜಕ್ಕೆ 20 ರೂ. ನೀಡಿ ಎಂದು ಘೋಷಣೆ..?
    ಈ ಕುರಿತು ಪ್ರಚಾರದ ವೀಡಿಯೋ ಒಂದನ್ನು ಹಂಚಿಕೊಂಡಿರುವ ಮುಫ್ತಿ ಅವರು, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹಾರಾದಲ್ಲಿ ನಗರಪಾಲಿಕೆಯೇ ತ್ರಿವರ್ಣ ಧ್ವಜ ಕೊಂಡುಕೊಳ್ಳುವಂತೆ ಒತ್ತಾಯಿಸುತ್ತಿದೆ. ಪ್ರತಿ ಅಂಗಡಿಯವರೂ ಅಭಿಯಾನಕ್ಕಾಗಿ ಒಂದು ಧ್ವಜವನ್ನಾದರೂ ಕೊಂಡುಕೊಳ್ಳಿ. ಅದಕ್ಕಾಗಿ 20 ರೂ. ಡೆಪಾಸಿಟ್ ಮಾಡಿ ಎಂದು ಸಾರ್ವಜನಿಕವಾಗಿ ವಾಹನವೊಂದರ ಮೇಲೆ ಲೌಡ್‌ಸ್ಪೀಕರ್ ಮೂಲಕ ಸಾರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಎ ಬೆಂಬಲಿಸಿ ಗದಗದಲ್ಲಿ ಬೃಹತ್ ತಿರಂಗಾ ರ‍್ಯಾಲಿ

    ವಿದ್ಯಾರ್ಥಿಗಳು, ಅಂಗಡಿಯವರಿಗೆ ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ ಹಾರಿಸುವಂತೆ ಜಮ್ಮು ಕಾಶ್ಮೀರ ಆಡಳಿತ ಒತ್ತಾಯಿಸುತ್ತಿರುವ ರೀತಿ ಹೇಗಿದೆ ಎಂದರೆ, ಕಾಶ್ಮೀರ ವಶಪಡಿಸಿಕೊಳ್ಳಬೇಕಾದ ಶತ್ರು ಪ್ರದೇಶ ಎನ್ನುವಂತಿದೆ ಎಂದು ಮುಫ್ತಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

    ಸಿಪಿಐಎಂ ನಾಯಕ ಎಂ.ವೈ.ತಾರಿಗಾಮಿ ಸಹ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಧ್ವಜ ಕೊಂಡುಕೊಳ್ಳಲು 20 ರೂ. ಹಣ ಡೆಪಾಸಿಟ್ ಮಾಡಿ ಎಂದು ಆಡಳಿತ ಘೋಷಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದಡಿ ಧ್ವಜ ಹಾರಾಡಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ನವದೆಹಲಿ: ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಹರ್ ಘರ್ ತಿರಂಗಾ(ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನವನ್ನು ಪ್ರಾರಂಭಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದು, ದೇಶಾದ್ಯಂತ ಬರೋಬ್ಬರಿ 20 ಕೋಟಿ ಮನೆಗಳ ಮೇಲೆ ಧ್ವಜವನ್ನು ಹಾರಿಸಲು ಸಿದ್ಧತೆ ನಡೆಸಲಾಗುತ್ತಿದೆ.

    ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ಮುಂದಿನ ತಿಂಗಳು 3 ದಿನಗಳ ಕಾಲ ದೇಶಾದ್ಯಂತ 20 ಕೋಟಿಗೂ ಹೆಚ್ಚು ಮನೆಗಳ ಮೇಲೆ ತ್ವಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

    ಈ ಅಭಿಯಾನವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದ್ದು, ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಾರರೊಂದಿಗೆ ಸಿದ್ಧತೆಗಳು ನಡೆಯುತ್ತಿವೆ.

    ಕಾರ್ಯಕ್ರಮದ ಭಾಗವಾಗಿ ಸಾರ್ವಜನಿಕ ಸಹಭಾಗಿತ್ವದ ಮೂಲಕ ಆಗಸ್ಟ್ 13 ರಿಂದ 15 ರವರೆಗೆ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗುವುದು. ಈ ಅಭಿಯಾನದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳೂ ಭಾಗಿಯಾಗಲಿವೆ ಎಂದು ಕೇಂದ್ರದ ಅಧಿಕೃತ ವರದಿ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ಮತ ಚಲಾಯಿಸಿದ ಪ್ರಧಾನಿ ಮೋದಿ

    2022ರ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಜುಲೈ 22 ರಿಂದ ಎಲ್ಲಾ ರಾಜ್ಯ ಸರ್ಕಾರದ ವೆಬ್‌ಸೈಟ್ ಮುಖಪುಟಗಳಲ್ಲಿ ರಾಷ್ಟ್ರಧ್ವಜ ಕಾಣಿಸಿಕೊಳ್ಳಬೇಕು. ನಾಗರಿಕರೂ ತಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ತ್ರಿವರ್ಣ ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

    ತ್ರಿವರ್ಣ ಧ್ವಜದೊಂದಿಗಿನ ಫೋಟೋಗಳನ್ನು ತೆಗೆದುಕೊಂಡು ಸಂಸ್ಕೃತಿ ಸಚಿವಾಲಯದ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ಸ್ವಾತಂತ್ರ್ಯದ ಅಮೃತ ಮೋತ್ಸವವನ್ನು ಹೊಸ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಇದನ್ನೂ ಓದಿ: ಮದರಸಾಗಳಲ್ಲೂ ತ್ರಿವರ್ಣಧ್ವಜ ಹಾರಲೇಬೇಕು – ರಾಜ್ಯ ಸರ್ಕಾರದಿಂದ ಖಡಕ್ ಆದೇಶ

    Amith

    ಹರ್ ಘರ್ ತಿರಂಗಾ ಅಭಿಯಾನದ ಉದ್ದೇಶ ದೇಶಭಕ್ತಿಯ ಮನೋಭಾವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು. ಜನರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಮೂಲಕ ಅಭಿಯಾನವನ್ನು ಯಶಸ್ಸಿನತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದರಸಾಗಳಲ್ಲೂ ತ್ರಿವರ್ಣಧ್ವಜ ಹಾರಲೇಬೇಕು – ರಾಜ್ಯ ಸರ್ಕಾರದಿಂದ ಖಡಕ್ ಆದೇಶ

    ಮದರಸಾಗಳಲ್ಲೂ ತ್ರಿವರ್ಣಧ್ವಜ ಹಾರಲೇಬೇಕು – ರಾಜ್ಯ ಸರ್ಕಾರದಿಂದ ಖಡಕ್ ಆದೇಶ

    ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು ಮುಂದಿನ ಆಗಸ್ಟ್ 15ಕ್ಕೆ 75 ವರ್ಷ ಆಗ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು, ವಿವಿಗಳಲ್ಲಿ ಕಡ್ಡಾಯವಾಗಿ ತಿರಂಗ ಹಾರಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.

    MADRASA

    ಶಾಲಾ ಶಿಕ್ಷಣ ಇಲಾಖೆ ಕೂಡ ಮಹತ್ವದ ಆದೇಶ ಹೊರಡಿಸಲು ಮುಂದಾಗಿದೆ. ಅಮೃತಮಹೋತ್ಸವ ಹಿನ್ನೆಲೆ ಆಗಸ್ಟ್ 11 ರಿಂದ 17ರ ವರೆಗೆ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಿಯುಸಿ ಕಾಲೇಜುಗಳು, ಮದರಸಾಗಳ ಮೇಲೂ ಕಡ್ಡಾಯವಾಗಿ ತಿರಂಗಾ ಹಾರಿಸಲೇಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ

    ಸರ್ಕಾರಿ, ಅನುದಾನಿತ, ಅನದಾನ ರಹಿತ ಶಾಲಾ-ಕಾಲೇಜುಗಳು, ಎಲ್ಲಾ ಮದರಸಾಗಳು ಈ ಅದೇಶವನ್ನು ಪಾಲಿಸಬೇಕು. ತ್ರಿವರ್ಣ ಧ್ವಜದ ಜೊತೆಗೆ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ ಮೆಲುಕು ಹಾಕುವ ಗೀತ ಗಾಯನ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಬೇಕು. ಕ್ವಿಜ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ ಮಾಡಬೇಕು ಎಂದು ಸೂಚಿಸುವಂತೆ ಹೇಳಿದ್ದಾರೆ. ಮುಖ್ಯವಾಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಸೂಚನೆ ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]