Tag: ಹರ್ಷ

  • ಎಣ್ಣೆ ಕಿರಿಕ್ ಬಗ್ಗೆ ನಟ ಹರ್ಷ ಪ್ರತಿಕ್ರಿಯೆ

    ಎಣ್ಣೆ ಕಿರಿಕ್ ಬಗ್ಗೆ ನಟ ಹರ್ಷ ಪ್ರತಿಕ್ರಿಯೆ

    ಬೆಂಗಳೂರು: ಸೋಮವಾರ ತಡರಾತ್ರಿ ಕುಡಿದ ಮತ್ತಿನಲ್ಲಿ ನಗರದ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‍ವುಡ್ ನಟ ಹರ್ಷ ಪ್ರತಿಕ್ರಿಯಿಸಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಮನೆಯಲ್ಲಿ ಸ್ನೇಹಿತರು ಪಾರ್ಟಿ ಮಾಡಿದ್ದೆವು. ಊಟ ಆದ್ಮೇಲೆ ಅವರನ್ನ ಕಳಿಸಿ ಕೊಡಲು ಅಪಾಟ್ರ್ಮೆಂಟ್ ನಿಂದ ಹೊರಗೆ ಬಂದಿದ್ದೆ.ಈ ವೇಳೆ ಬೀಟ್ ಪೊಲೀಸರು ಬಂದ್ರು. ನೀವು ಡ್ರಗ್ಸ್ ತೆಗೆದುಕೊಂಡಿದ್ದೀರಿ ಅಂತ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದರು.

    ಠಾಣೆಯಲ್ಲಿ, ನಾವು ಮನೆಯಲ್ಲಿ ಡ್ರಿಂಕ್ಸ್ ಮಾಡಿದ್ವಿ. ಆದರೆ ನಮಗೂ ಡ್ರಗ್ಸ್‍ಗೂ ಸಂಬಂಧ ಇಲ್ಲ ಅಂತ ಹೇಳಿದ್ವಿ. ಹೀಗಾಗಿ ವಿಚಾರಣೆ ಮಾಡಿ ಮನೆಗೆ ಕಳಿಸಿದ್ರು. ಸದ್ಯ ನಾನು ಮನೆಯಲ್ಲಿ ಇದ್ದೀನಿ. ಯಾರು ಗಾಬರಿ ಆಗ್ಬೇಡಿ ಎಂದು ತಿಳಿಸಿದರು.

    ಏನಿದು ಪ್ರಕರಣ?:
    ರಾತ್ರಿ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‍ಮೆಂಟ್ ಮುಂಭಾಗ ಗೆಳೆಯರೊಂದಿಗೆ ನಟ ಹರ್ಷ ಕುಡಿಯುತ್ತಿದ್ದರು. ಅಪಾರ್ಟ್‍ಮೆಂಟ್ ಮುಂದೆ ಕುಡಿಯುತ್ತಿರುವ ವಿಚಾರ ತಿಳಿದು ರಾತ್ರಿ ಬೀಟ್‍ನಲ್ಲಿದ್ದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಕುಡಿದು ಇಲ್ಲಿ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಹರ್ಷ ಮತ್ತು ಗೆಳೆಯರು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಹೇಳಲಾಗಿತ್ತು.

    “ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಅವಾಜ್ ಹಾಕಿದ್ದಾರೆ. ಕಿರಿಕ್ ಮಾಡಿದ ಕೂಡಲೇ ಪೊಲೀಸರು ಸ್ನೇಹಿತರ ಜೊತೆ ಹರ್ಷರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆ ತಂದು ಬಿಸಿ ಮುಟ್ಟಿಸಿದ್ದರು ಎಂದು ವರದಿಯಾಗಿತ್ತು.

  • ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟು ಆಯ್ತು ಈಗ ಎಣ್ಣೆ ಕಿರಿಕ್

    ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಘಾಟು ಆಯ್ತು ಈಗ ಎಣ್ಣೆ ಕಿರಿಕ್

    ಬೆಂಗಳೂರು: ತಡರಾತ್ರಿ ಸ್ಯಾಂಡಲ್‌ವುಡ್‌ ನಟರೊಬ್ಬರು ಕುಡಿದ ಮತ್ತಿನಲ್ಲಿ ನಗರದ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

    ಹರ್ಷ ಕಿರಿಕ್‌ ಮಾಡಿಕೊಂಡ ನಟ. ರಾತ್ರಿ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್‌ ಮುಂಭಾಗ ಗೆಳೆಯರೊಂದಿಗೆ ನಟ ಹರ್ಷ ಕುಡಿಯುತ್ತಿದ್ದರು.

    ಅಪಾರ್ಟ್‌ಮೆಂಟ್‌ ಮುಂದೆ ಕುಡಿಯುತ್ತಿರುವ ವಿಚಾರ ತಿಳಿದು ರಾತ್ರಿ ಬೀಟ್‌ನಲ್ಲಿದ್ದ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಕುಡಿದು ಇಲ್ಲಿ ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಹರ್ಷ ಮತ್ತು ಗೆಳೆಯರು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

    “ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ, ನಮಗೆ ದೊಡ್ಡ ವ್ಯಕ್ತಿಗಳ ಪರಿಚಯವಿದೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಅವಾಜ್‌ ಹಾಕಿದ್ದಾರೆ. ಕಿರಿಕ್‌ ಮಾಡಿದ ಕೂಡಲೇ ಪೊಲೀಸರು ಸ್ನೇಹಿತರ ಜೊತೆ ಹರ್ಷರನ್ನು ವಶಕ್ಕೆ ಪಡೆದು ಕಾರಿನಲ್ಲಿ ಕುಳ್ಳಿರಿಸಿ ಠಾಣೆಗೆ ಕರೆ ತಂದು ಬಿಸಿ ಮುಟ್ಟಿಸಿದ್ದಾರೆ.

    ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ಹರ್ಷ ನಟಿಸಿದ್ದಾರೆ.

  • ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಸೇರಿದಂತೆ 13 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

    ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಸೇರಿದಂತೆ 13 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ಬೆಳಗಾವಿ ಹಾಗೂ ಮಂಗಳೂರು ಪೊಲೀಸ್‌ ಆಯುಕ್ತರು ಸೇರಿದಂತೆ ರಾಜ್ಯದ 13 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

    ಪೊಲೀಸ್ ಇಲಾಖೆ ಆಡಳಿತ ವಿಭಾಗದ ಐಜಿಪಿ ಆಗಿದ್ದ ಸೀಮಂತ್‌ಕುಮಾರ್‌ ಸಿಂಗ್ ಅವರನ್ನು ಕೇಂದ್ರ ವಿಭಾಗದ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಕೆ.ವಿ.ಶರತ್‌ಚಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಮಂಗಳೂರು ಕಮಿಷನರ್ ಆಗಿದ್ದ ಪಿ.ಎಸ್. ಹರ್ಷ ಅವರನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ವಿಕಾಸ್ ಕುಮಾರ್ ವರ್ಗಾವಣೆಗೊಂಡಿದ್ದಾರೆ. ವಾರ್ತಾ ಇಲಾಖೆ ಆಯುಕ್ತರಾಗಿದ್ದ ಎಸ್.ಎನ್.ಸಿದ್ದರಾಮಪ್ಪ ಅವರನ್ನು ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಡಿಐಜಿಪಿ ಆಗಿ ವರ್ಗಾಯಿಸಲಾಗಿದೆ.

    ಬೆಳಗಾವಿ ಪೊಲೀಸ್ ಕಮಿಷನರ್ ಆಗಿದ್ದ ಬಿ.ಎಸ್.ಲೋಕೇಶ್‌ಕುಮಾರ್ ಅವರನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿಐಜಿಪಿ ಆಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಕೆ.ತ್ಯಾಗರಾಜನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

    ಕೊಡಗು ಎಸ್‌ಪಿ ಸುಮನ್ ಪೆನ್ನೆಕರ್ ಅವರನ್ನು ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಜಿಪಿ ಆಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಕ್ಷಮಾ ಮಿಶ್ರಾ ಅವರನ್ನು ನೇಮಿಸಲಾಗಿದೆ.

    ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡ್ಯ ಅವರನ್ನು ಗುಪ್ತದಳದ ಎಸ್ಪಿಯಾಗಿ ವರ್ಗಾಯಿಸಲಾಗಿದ್ದು, ಅವರ ಜಾಗಕ್ಕೆ ಎಚ್‌. ಅಕ್ಷಯ್ ಮಚ್ಚಿಂದ್ರ ಅವರು ವರ್ಗಾವಣೆಗೊಂಡಿದ್ದಾರೆ.

    ಚಾಮರಾಜನಗರ ಎಸ್ಪಿ ಎಚ್‌.ಡಿ.ಆನಂದ್‌ಕುಮಾರ್ ಅವರನ್ನು ಆಂತರಿಕ ಭದ್ರತಾ ದಳದ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ದಿವ್ಯಾ ಸಾರಾ ಥಾಮಸ್ ಅವರನ್ನು ವರ್ಗಾಯಿಸಲಾಗಿದೆ.

  • FACT CHECK: ಮಂಗಳೂರು ಪೊಲೀಸರಿಗೆ 10 ಲಕ್ಷ ರೂ. ಬಹುಮಾನ

    FACT CHECK: ಮಂಗಳೂರು ಪೊಲೀಸರಿಗೆ 10 ಲಕ್ಷ ರೂ. ಬಹುಮಾನ

    ಮಂಗಳೂರು: ಕಳೆದ ವಾರ ನಡೆದ ಗಲಭೆ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಂಗಳೂರಿನ 148 ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಸ್ಪಷ್ಟಪಡಿಸಿದ್ದಾರೆ.

    ಈ ಸಂಬಂಧ ಹರ್ಷ ಅವರು, ಕೆಲ ಕಿಡಿಗೇಡಿಗಳು ಇಲಾಖೆಯ ಹೆಸರಿನಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಅಧಿಕೃತ ಸಂವಹನದಂತೆ ತಪ್ಪು ಮಾಹಿತಿಯನ್ನು ಕಳುಹಿಸಲಾಗುತ್ತದೆ. ಈ ಸುಳ್ಳು ಮಾಹಿತಿಗಳನ್ನು ಯಾರೂ ನಂಬಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ರಾಜ್ಯ ಪೊಲೀಸ್ ಮಹಾ ನಿರೀಕ್ಷರಿಗೆ ಪತ್ರವನ್ನು ಡಿ.25 ರಂದು ಬರೆಯಲಾಗಿದ್ದು, ಇದರಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿ/ ಸಿಬ್ಬಂದಿಗೆ ನಗದು ಬಹುಮಾನ ನೀಡಿದ ಬಗ್ಗೆ ಉಲ್ಲೇಖವಿತ್ತು. ಕರ್ನಾಟಕ ಪೊಲೀಸ್ ಲೆಟರ್ ಹೆಡ್ ಇದ್ದ ಕಾರಣ ಇದು ಅಧಿಕೃತ ಪತ್ರವೆಂದೇ ತಿಳಿದು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಪತ್ರದಲ್ಲಿ ಏನಿತ್ತು?
    ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಸಿಎಬಿ ಮತ್ತು ಎನ್‌ಆರ್‌ಸಿ ಮಸೂದೆಯ ವಿರುದ್ಧವಾಗಿ ದಿನಾಂಕ ಡಿ.19 ರಂದು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರವಾಗಿ ಭಂಗ ಉಂಟಾಗಿದ್ದು, ಪ್ರತಿಭಟನಾ ನಿರತ ವ್ಯಕ್ತಿಗಳು ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿರುತ್ತಾರೆ. ಆದ ಕಾರಣ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಗಲು ರಾತ್ರಿ ಅವಿರತ ಪರಿಶ್ರಮ ನಡೆಸಿರುತ್ತಾರೆ. ಆದ್ದರಿಂದ ಈ ಕೆಳಕಂಡ ಅಧಿಕಾರಿ/ ಸಿಬ್ಬಂದಿ ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ವಿಷಯವನ್ನು ಮಾನ್ಯರ ಅವಗಾಹನೆಗೆ ಈ ಮೂಲಕ ತರುತ್ತಿದ್ದೇನೆ.

     

  • ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.

    ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.

    ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.

    ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

    ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.

    https://www.youtube.com/watch?v=IgY3WB1V1wM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv