Tag: ಹರ್ಷ

  • ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ: ಸಿಟಿ ರವಿ

    ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ: ಸಿಟಿ ರವಿ

    ಚಿಕ್ಕಮಗಳೂರು: ಶಿವಮೊಗ್ಗದ ಸಿಗೇಹಟ್ಟಿಯಲ್ಲಿ ಆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ ಎಂದು ಎನ್‌ಐಎ ದೃಢೀಕರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಶಿವಮೊಗ್ಗಕ್ಕೆ ಆಗಮಿಸಿರುವ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಹರ್ಷನ ಕೊಲೆ ಹಿಂದೆ ಕೋಮು ದಳ್ಳುರಿಯ ಉದ್ದೇಶವಿದೆ ಎನ್ನುವ ಅಂಶ ಬಹಿರಂಗವಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹರ್ಷನ ಕೊಲೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಮುಲಾಜಿಲ್ಲದೇ ಖಂಡಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದ ಆಗಿಲ್ಲ ಎಂದು ಅಂದೇ ಮೇಲ್ನೋಟಕ್ಕೆ ಕಾಣಿಸಿತ್ತು. ಹರ್ಷನ ಕೊಲೆ ಹರ್ಷನಿಗಾಗಲಿ-ಆಪಾದಿತರಿಗಾಗಲಿ ಇದ್ದ ಹಳೇ ವೈಷಮ್ಯದಿಂದ ಅಲ್ಲ ಎಂಬುದನ್ನ ಎನ್‌ಐಎ ದೃಢೀಕರಿಸಿದೆ. ಈ ಕಾರಣಕ್ಕಾಗಿ ಸರ್ಕಾರ ಸಮಗ್ರ ತನಿಖೆಗೆ ಆದೇಶ ಮಾಡಿತ್ತು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದು, ಇದು ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರ ಅಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಅದೇ ಕಾರಣಕ್ಕೆ ಸರ್ಕಾರ ಎನ್‌ಐಎ ತನಿಖೆಗೆ ಕೇಸ್ ಒಪ್ಪಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂದಿದ್ದಾರೆ. ಈ ಕೊಲೆ ಹಿಂದೆ ವ್ಯವಸ್ಥಿತಿ ಜಾಲ ಕೆಲಸ ಮಾಡಿರುವ ಸಾಧ್ಯತೆ ಇದೆ. ಈ ಹತ್ಯೆಗೆ ಫೈನಾನ್ಸ್ ಮಾಡುವವರು ಯಾರು? ಪ್ರಚೋದನೆ ಕೊಟ್ಟವರು ಯಾರು? ಹಣದ ವ್ಯವಸ್ಥೆ ಮಾಡುವವರು ಯಾರು? ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.

    ಈ ಹತ್ಯೆಯ ಹಿಂದೆ ಯಾವ ನೆಟ್ವರ್ಕ್ ಇದೆ ಎನ್ನುವುದನ್ನು ನೋಡಬೇಕು. ಅದು ರಾಜ್ಯದ್ದೋ ಅಥವ ಹೊರರಾಜ್ಯದ್ದೋ ಗೊತ್ತಾಗಲಿ ಎಂದು ಹೇಳಿದರು.

  • ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸುವ ಉದ್ದೇಶದಿಂದ ಹತ್ಯೆ ನಡೆದಿದೆ. ಜನರಿಗೆ ಭಯವುಂಟು ಮಾಡೋದು ಆರೋಪಿಗಳ ಯೋಜನೆಯಾಗಿತ್ತು ಎಂದು ಎಫ್‌ಐಆರ್‌ನ ಸಾರಾಂಶದಲ್ಲಿ ಎನ್‌ಐಎ ಉಲ್ಲೇಖಿಸಿದೆ. ಇದನ್ನೂ ಓದಿ: ಕುರಿದೊಡ್ಡಿಗೆ ನುಗ್ಗಿ 30 ಕುರಿಗಳನ್ನು ಕದ್ದೊಯ್ದ ಖದೀಮರು – ಕುರಿಗಾಯಿ ಕಣ್ಣೀರು

    ಶಿವಮೊಗ್ಗ ಹರ್ಷನ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಕೊಲೆಯ ಉದ್ದೇಶ ಸಮಾಜದಲ್ಲಿ ಭಯವನ್ನುಂಟು ಮಾಡೋದಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶ ಆಗಿತ್ತು. ಮಾರಕಾಸ್ತ್ರವನ್ನು ಬಳಸಿ ಜನರಿಗೆ ಭಯ ಉಂಟು ಮಾಡುವ ಉದ್ದೇಶವನ್ನು 11 ಮಂದಿ ಆರೋಪಿಗಳು ಹೊಂದಿದ್ದರು. ಈ ವಿಚಾರ ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ. ಇದನ್ನೂ ಓದಿ: 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

  • ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗನ ಶಿಕ್ಷಣದ ಜವಾಬ್ದಾರಿ ವಹಿಸಿದ ಅಶ್ವಿನಿ

    ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗನ ಶಿಕ್ಷಣದ ಜವಾಬ್ದಾರಿ ವಹಿಸಿದ ಅಶ್ವಿನಿ

    ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಅವರು 2015ರಲ್ಲಿ ಕೊಲೆಯಾಗಿದ್ದ ವಿಶ್ವನಾಥ್ ಶೆಟ್ಟಿ ಮಗನ ಓದಿನ ಜವಾಬ್ದಾರಿ ಹೊತ್ತಿದ್ದಾರೆ.

    2015ರಲ್ಲಿ ಪಿಎಫ್‍ಐ ಸಂಸ್ಥಾಪನಾ ದಿನಾಚರಣೆ, ಸಮಾವೇಶ ಅಂಗವಾಗಿ ಶಿವಮೊಗ್ಗದಲ್ಲಿ ನಡೆದ ಮೆರವಣಿಗೆ ಮತ್ತು ಆನಂತರದಲ್ಲಿ ಉಂಟಾದ ಗಲಭೆಯಲ್ಲಿ ಮೃತಪಟ್ಟ ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮಗ ಯಶಸ್ ಓದಿನ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡಿದ್ದಾರೆ. ಯಶಸ್ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದಲ್ಲಿ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜೊತೆ ಇದ್ದು, ಕೊಪ್ಪದಲ್ಲೇ 8ನೇ ತರಗತಿ ಓದುತ್ತಿದ್ದಾನೆ. ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ

    2015ರ ಫೆಬ್ರವರಿ 19 ರಂದು ಶಿವಮೊಗ್ಗದಲ್ಲಿ ನಡೆದ ಪಿಎಫ್‍ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನು ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು. ವಿಶ್ವನಾಥ್ ಶೆಟ್ಟಿಯ ಮಗ ಯಶಸ್ ಅಪ್ಪ-ಅಮ್ಮ ಇಬ್ಬರೂ ಇಲ್ಲದೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಜ್ಜಿಯ ಜೊತೆ ವಾಸವಿದ್ದನು.

    2022ರ ಫೆಬ್ರವರಿ 20ರಂದು ಹರ್ಷ ರಾತ್ರಿ 10 ಗಂಟೆ ವೇಳೆಯಲ್ಲಿ ಊಟಕ್ಕೆ ಹೋಗುವಾಗ ಶಿವಮೊಗ್ಗ ನಗರದ ಸೀಗೆಹಟ್ಟಿಯಲ್ಲಿ ಏಳೆಂಟು ಜನ ಹರ್ಷ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದರು. ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಯಶಸ್ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರಿ ಅಶ್ವಿನಿ ಆ ಬಾಲಕನ ಓದಿನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.

    ಅವನ ಓದಿನ ಜೊತೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ. ನನಗೆ ಒಂಬತ್ತನೇ ತರಗತಿ ಓದುತ್ತಿರುವ ಮಗಳು ಇದ್ದಾಳೆ. ಇವನನ್ನು 8ನೇ ತರಗತಿ ಓದುತ್ತಿರುವ ಮಗ ಎಂದು ಭಾವಿಸಿಕೊಳ್ಳುತ್ತೇನೆ. ಅವನಿಗೆ ಏನು ಬೇಕು ಎಲ್ಲಾ ಮಾಡುತ್ತೇನೆ. ನೀವು ಅವನ ಬಗ್ಗೆ ಚಿಂತೆಯನ್ನೇ ಮಾಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    ಅವನಿಗೆ ಏನೇ ಸಮಸ್ಯೆಯಾದರೂ ನನಗೆ ಕರೆ ಮಾಡಿ, ನಾನು ಬಂದು ಅವನನ್ನ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಅಜ್ಜಿ ಹಾಗೂ ಅವನನ್ನು ನೋಡಿಕೊಂಡು ಅವನ ಓದಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಉಳಿದದ್ದು ನನಗೆ ಬಿಡಿ. ಅವನ ಓದು ಹಾಗೂ ಹಣದ ಬಗ್ಗೆ ಯೋಚನೆಯನ್ನೇ ಮಾಡಬೇಡಿ. ಅವನು ನನಗೆ ಹರ್ಷನಿದ್ದಂತೆ, ನೀವು ಯೋಚನೆ ಮಾಡಬೇಡಿ ಎಂದು ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿಗೆ ಧೈರ್ಯ ತುಂಬಿದ್ದಾರೆ.

    ನಿಮಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡಿ. ಅಜ್ಜಿ ಹಾಗೂ ಯಶಸ್ ಅವರ ಇಬ್ಬರ ಜವಾಬ್ದಾರಿ ನನ್ನದು ಎಂದು ಮೃತ ಹರ್ಷ ಅಕ್ಕ ಅಶ್ವಿನಿ ಹೇಳಿದ್ದಾರೆ. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದರು.

  • ಹರ್ಷ ಕೊಲೆ ಪ್ರಕರಣ NIA ಹೆಗಲಿಗೆ

    ಹರ್ಷ ಕೊಲೆ ಪ್ರಕರಣ NIA ಹೆಗಲಿಗೆ

    ಬೆಂಗಳೂರು: ಶಿವಮೊಗ್ಗದ ಹರ್ಷ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ತನಿಖೆಗೆ ಸರ್ಕಾರ ವಹಿಸಿದೆ.

    ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಕೆಲ ದಿನಗಳ ಹಿಂದೆಯೇ ಎನ್‍ಐಎಗೆ ಪ್ರಕರಣ ಹಸ್ತಾಂತರವಾಗಲಿದೆ ಎಂದು ತಿಳಿಸಿದ್ದರು. ಈಗಾಗಲೇ ಎನ್‍ಐಎ ಈ ಪ್ರಕರಣದ ಕುರಿತು ಎಫ್‍ಐಆರ್ ದಾಖಲಿಸಿಕೊಂಡಿದೆ.

    ಫೆಬ್ರವರಿ 20 ರಂದು ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಮಂದಿ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೀಘ್ರದಲ್ಲಿಯೇ ಶಿವಮೊಗ್ಗಕ್ಕೆ ಎನ್‍ಐಎ ಅಧಿಕಾರಿಗಳು ಆಗಮಿಸಲಿದ್ದಾರೆ. ಇದನ್ನೂ ಓದಿ:  ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಸೆಮಿಸ್ಟರ್ ಪರೀಕ್ಷೆಗೆ ಗೈರು

    ಇಷ್ಟು ದಿನ ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಪ್ರತ್ಯೇಕ ಸೆಲ್‍ನಲ್ಲಿರಿಸಲಾಗಿತ್ತು. ಇದೀಗ ಕಳೆದ ಮೂರು ದಿನದ ಹಿಂದೆ ನಾಲ್ಕು ಮಂದಿ ಮೈಸೂರು ಕಾರಾಗೃಹಕ್ಕೆ, ನಾಲ್ಕು ಮಂದಿ ಬಳ್ಳಾರಿ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಉಳಿದ ಇಬ್ಬರು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದು, ಅವರನ್ನು ಶೀಘ್ರದಲ್ಲೇ ಬೆಳಗಾವಿ ಕಾರಾಗೃಹಕ್ಕೆ ಸ್ಥಳಾಂತರಿಸಲಿದ್ದಾರೆ.

    ಸಾಧಾರಣವಾಗಿ ಉಗ್ರರ ಕೃತ್ಯ, ಭದ್ರತೆಗೆ ಸಂಬಂಧಿಸಿದ ಪ್ರಕರಣವನ್ನು ಎನ್‍ಐಎ ತನಿಖೆ ನಡೆಸುತ್ತಿದೆ. ಆದರೆ ಹರ್ಷ ಪ್ರಕರಣದ ಹಿಂದೆ ದೇಶ ವಿರೋಧಿ ಶಕ್ತಿಗಳ ಪಾತ್ರವಿದೆ ಎಂದು ಬಿಜೆಪಿ ಆರೋಪಿಸಿತ್ತು. ಆರಂಭದಲ್ಲಿ ಪೊಲೀಸ್ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈಗ ಪ್ರಕರಣ ಗಂಭೀರವಾದ ಹಿನ್ನೆಲೆಯಲ್ಲಿ ಸರ್ಕಾರ ಎನ್‍ಐಎಗೆ ವಹಿಸಿದೆ. ಇದನ್ನೂ ಓದಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನಟ ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?

  • ಹರ್ಷ ಕೊಲೆ ಪ್ರಕರಣ- ಎಲ್ಲಾ ಆರೋಪಿಗಳಿಗೂ ಮತ್ತೆ ನ್ಯಾಯಾಂಗ ಬಂಧನ

    ಹರ್ಷ ಕೊಲೆ ಪ್ರಕರಣ- ಎಲ್ಲಾ ಆರೋಪಿಗಳಿಗೂ ಮತ್ತೆ ನ್ಯಾಯಾಂಗ ಬಂಧನ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳಿಗೂ ಮತ್ತೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಬಂಧಿತ 10 ಮಂದಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಫೆ.25 ರಿಂದ 11 ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ಘಟನೆಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಆರೋಪಿಗಳು ಪೊಲೀಸರ ಮುಂದೆ ಬಾಯಿಬಿಟ್ಟಿದ್ದರು ಎನ್ನಲಾಗಿದೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಪೊಲೀಸರ ಕಸ್ಟಡಿ ಅವಧಿ ಸೋಮವಾರ ಮುಗಿದ ಹಿನ್ನೆಲೆ, ಆರೋಪಿಗಳನ್ನು ಮತ್ತೆ ಎರಡನೇ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಆರೋಪಿಗಳಿಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದ್ದಾರೆ. ಹೀಗಾಗಿ ಎಲ್ಲಾ 10 ಮಂದಿ ಆರೋಪಿಗಳು ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲದೇ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ವಿರುದ್ದ ಕಾನೂನುಬಾಹಿರ ಚಟುವಟಿಕೆ ನಿರ್ಬಂಧ (ಯುಎಪಿಎ) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಫೆ.20 ರಂದು ಭಜರಂಗದಳ ಕಾರ್ಯಕರ್ತ ಹರ್ಷನನ್ನು ಯುವಕರ ಗುಂಪು ಹತ್ಯೆ ಮಾಡಿತ್ತು. ಹರ್ಷನ ಕುಟುಂಬಸ್ಥರಿಗೆ ವಿವಿಧ ಪಕ್ಷಗಳ ನಾಯಕರು ಹಾಗೂ ಸರ್ಕಾರ ಸಾಂತ್ವನ ಹೇಳಿದ್ದು, ಪರಿಹಾರ ನೀಡಿದೆ. ಇದನ್ನೂ ಓದಿ: ನೀರು ಕುಡಿಯೋಕೆ ಹೊರಟ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಯಡಿಯೂರಪ್ಪ..!

  • ಹರ್ಷ ಕೇಸ್‍ನ ಪ್ರಮುಖ ಆರೋಪಿಗಳು ಅರೆಸ್ಟ್: ಆರಗ ಜ್ಞಾನೇಂದ್ರ

    ಹರ್ಷ ಕೇಸ್‍ನ ಪ್ರಮುಖ ಆರೋಪಿಗಳು ಅರೆಸ್ಟ್: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಹರ್ಷ ಕೇಸ್‍ನಲ್ಲಿ ಪ್ರಮುಖ ಆರೋಪಿಗಳ ಅರೆಸ್ಟ್ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರ್ಷ ಕೇಸ್‍ನಲ್ಲಿ ಪ್ರಮುಖ ಆರೋಪಿಗಳ ಅರೆಸ್ಟ್ ಆಗಿದೆ. ಬಂಧಿತರ ವಿಚಾರಣೆ ನಡೆಯುತ್ತಿದೆ. ಶಿವಮೊಗ್ಗ ಶಾಂತವಾಗಿದೆ. ಶಾಲಾ ಕಾಲೇಜುಗಳು ಆರಂಭವಾಗಿವೆ. ಶಿವಮೊಗ್ಗ ಜನತೆ ತಾಳ್ಮೆ ಕಳೆದುಕೊಳ್ಳದೇ ಸಹಕರಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ: ಹಾಲಪ್ಪ ಆಚಾರ್

    ಹರ್ಷ ಕೊಲೆ ವ್ಯರ್ಥ ಆಗಲಿಕ್ಕೆ ಬಿಡದೇ, ಯಾರು ಈ ರೀತಿಯ ಕೊಲೆ ಮಾಡುವ ಮಾನಸಿಕತೆ ಇರುವವರು ಇದ್ದಾರೆ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಎಸ್‍ಡಿಪಿಐ, ಸಿಎಫ್‍ಐ ನಿಷೇಧ ಕುರಿತ ವಿಷಯ ಚರ್ಚೆಯಲ್ಲಿದೆ. ಆ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವ, ಯಾವ ವರದಿ ನೀಡಬೇಕೋ ಅದಕ್ಕೆ ಎಲ್ಲಾ ತಯಾರಿ ನಡೆಯುತ್ತಿದೆ. ಹರ್ಷ ಕೊಲೆ ಪ್ರಕರಣದ ಬಗ್ಗೆ ಪೊಲೀಸರೆ ಒಳ್ಳೆಯ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಗತ್ಯ ಇದ್ದರೆ ಎನ್‍ಐಎ ತನಿಖೆಗೆ ಬರೆಯುತ್ತೇವೆ. ಸದ್ಯಕ್ಕೆ ಪೊಲೀಸ್ ತನಿಖೆ ಬಿಟ್ಟು ಬೇರೆ ಯಾವುದೇ ತನಿಖೆ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ

    ಕಳೆದ ಮೂರು ದಿನದ ಹಿಂದೆ ಹೊಸನಗರದಲ್ಲಿ ಪಿಎಸ್‍ಐ ಹಾಗು ಕಾನ್ಸ್‌ಟೇಬಲ್‌, ಬುದ್ದಿ ಮ್ಯಾಂದನ ಮೇಲೆ ಹಲ್ಲೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಈ ಘಟನೆಯ ವೀಡಿಯೋವನ್ನು ನೋಡಿದ್ದೇನೆ. ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡುತ್ತೇನೆ. ನಂತರ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ತಿಳಿಸುತ್ತೇನೆ. ಈ ಘಟನೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಸ್ವಲ್ಪ ಇದೆ. ಇದಕ್ಕೆ ಸಾರ್ವಜನಿಕರು ಸಹಕಾರ ಕೊಡಬೇಕು. ಗಾಂಜಾ ಮಾರಾಟಗಾರರು, ವ್ಯವಸಿಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸರ್ಕಾರ ಮಾದಕ ವಸ್ತುಗಳ ವಿರುದ್ಧ ದೊಡ್ಡ ಆಂದೋಲನ ಮಾಡಿದೆ. ಶಿವಮೊಗ್ಗ ನಗರದ ಎರಡು ಠಾಣೆಗಳ ವಿರುದ್ಧ ತನಿಖೆ ನಡೆಸುತ್ತಿದ್ದೇವೆ. ಪ್ರಕರಣದ ಹಿಂದೆ ಪೊಲೀಸರು ಯಾರು ಶಾಮೀಲು ಆಗಿದ್ದಾರೆ ಎಂಬುದು ಪತ್ತೆಯಾದರೆ ಬಿಡುವುದಿಲ್ಲ. ಪೊಲೀಸರಿಗೆ ಒಂದು ಕಾಯ್ದೆ, ಸಾಮಾನ್ಯ ಜನರಿಗೊಂದು ಕಾಯ್ದೆ ಇಲ್ಲ ಎಂದು ಹೇಳಿದ್ದಾರೆ.

  • ಕೊಲೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ನೆರವು: ಸಚಿವ ಈಶ್ವರಪ್ಪ

    ಕೊಲೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ನೆರವು: ಸಚಿವ ಈಶ್ವರಪ್ಪ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೃತ ಹರ್ಷನ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ‌. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇದೇ ಭಾನುವಾರದಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗದ ಹರ್ಷನ ನಿವಾಸಕ್ಕೆ ಭೇಟಿ‌ ನೀಡಲಿದ್ದಾರೆ. ಈ ವೇಳೆ ನಾನು ಹಾಗೂ ಯಡಿಯೂರಪ್ಪ ಅವರು ಸರ್ಕಾರದ ಪರವಾಗಿ 25 ಲಕ್ಷ ರೂ. ಪರಿಹಾರದ ಚೆಕ್ ನೀಡುತ್ತೇವೆ ಎಂದರು. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

    ಅಲ್ಲಾಹು ಅಕ್ಬರ್ ಅಂತ ಕೂಗಿದವರ ಮನೆಗೆ ಕಾಂಗ್ರೆಸ್ ನಾಯಕರ ತಂಡವೇ ಭೇಟಿ ನೀಡಿತ್ತು. ಮಹಾರಾಷ್ಟ್ರದಿಂದಲೂ ಕೆಲವು ನಾಯಕರು ಭೇಟಿ‌ ನೀಡಿ ಆ ಯುವತಿಗೆ ಬಹುಮಾನ ನೀಡಿದರು. ಹಿಂದೂಗಳ ಹತ್ಯೆಯಾದಾಗ ಏಕೆ ನಿಮಗೆ ಭೇಟಿ ನೀಡುವ ನೆನಪು ಆಗಲಿಲ್ಲವಾ? ಕೊಲೆ ಮಾಡಿದ ಮುಸಲ್ಮಾನ್ ಗೂಂಡಾಗಳ ಕೃತ್ಯದ ಬಗ್ಗೆ ಕಾಂಗ್ರೆಸ್ ಇದುವರೆಗೂ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಟೀಕಿಸಿದರು.

    ಯು.ಟಿ.ಖಾದರ್ ನೇತೃತ್ವದಲ್ಲಿ ಎಲ್ಲಾ ಮುಸಲ್ಮಾನ್ ಶಾಸಕರು ಸಭೆ ನಡೆಸಿದ್ದಾರೆ. ಇಂತಹ ಘಟನೆಗೆ ಪಿಎಫ್‌ಐ ಹಾಗು ಎಸ್‌ಡಿಪಿಐ ಸಂಘಟನೆಯೇ ಕಾರಣ. ಸಂಘಟನೆ ವಿರುದ್ದ ಕ್ರಮ ಕೈಗೊಳ್ಳಿ. ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ನಿಷೇಧ ಮಾಡಿ ಎಂದು ಸ್ವತಃ ಮುಸಲ್ಮಾನ್ ಶಾಸಕರೇ ಆಗ್ರಹಿಸಿದ್ದಾರೆ. ಆದರೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಾತ್ರ ಆರ್‌ಎಸ್‌ಎಸ್‌ ಕಾರಣ ಅಂತಿದ್ದಾರೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹೆಣ ಬಿದ್ದ ಜಾಗದಲ್ಲಿ ಮತ್ತೊಬ್ಬ ಹೋಗಿ ಹೆಣ ಆಗಲು ಯಾರೂ ತಯಾರಿಲ್ಲ: ಶಿವರಾಮ್ ಹೆಬ್ಬಾರ್

  • ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಎಲೆಕ್ಷನ್ ಟಿಕೆಟ್ ವಿಚಾರ- ಗೃಹ ಸಚಿವರು ಹೇಳಿದ್ದೇನು..?

    ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಎಲೆಕ್ಷನ್ ಟಿಕೆಟ್ ವಿಚಾರ- ಗೃಹ ಸಚಿವರು ಹೇಳಿದ್ದೇನು..?

    ತುಮಕೂರು: ಕಾಂಗ್ರೆಸ್‍ನವರ ಕಾಲದಲ್ಲಿ ಮೃತಪಟ್ಟವರಿಗೆಲ್ಲಾ ಟಿಕೆಟ್ ಕೊಟ್ಟಿದ್ದಾರಾ?. ಕಾಂಗ್ರೆಸ್ ಆಧಾರ ರಹಿತ ಟೀಕೆ ಮಾಡುತ್ತದೆ. ಹರ್ಷ ಕುಟುಂಬಕ್ಕೆ ಎಲ್ಲಾ ರೀತಿಯ ಸಹಕಾರ ಕೊಡುತಿದ್ದೇವೆ ಎಂದು ಶಿವಮೊಗ್ಗ ಹರ್ಷ ಕುಟುಂಬಕ್ಕೆ ಟಿಕೆಟ್ ಕೊಡುವ ವಿಚಾರ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಕಿಂತ ಮುಖ್ಯವಾಗಿ ಹರ್ಷನ ತಾಯಿ ನನಗೆ ಒಂದು ಮಾತು ಹೇಳಿದ್ದಾರೆ. ಮಗನ ಪ್ರಾಣ ತಂದುಕೊಡುವಂತೆ ಕೇಳಲ್ಲ. ಅವನ ಸಾವು ಅರ್ಥ ಹೀನ ಆಗಬಾರದು, ವ್ಯರ್ಥ ಆಗಬಾರದು. ಅವನು ಒಂದು ಉದ್ದೇಶಕೋಸ್ಕರ ಸತ್ತಿದ್ದಾನೆ. ಅದಕ್ಕೆ ನ್ಯಾಯ ದೊರಕಿಸಿ ಕೊಡಿ ಎಂದು ಕೇಳಿದ್ದಾರೆ. ಅದನ್ನ ನಾವು ಮಾಡುತ್ತಾ ಇದ್ದೇವೆ ಎಂದರು.

    ಇದೇ ವೇಳೆ ಉಕ್ರೇನ್ ನಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳಿಗೆ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಒಂದು ವಾರದೊಳಗೆ 1 ಮಿಲಿಯನ್ ಜನ ಉಕ್ರೇನ್‍ನಿಂದ ಪಲಾಯನ: ವಿಶ್ವಸಂಸ್ಥೆ

    ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಆಗುವ ಅನ್ಯಾಯದ ಬಗ್ಗೆ ಸಂಬಂಧಿಸಿ ಮಾತನಾಡಿದ ಸಚಿವರು, ಔರಾಧಕರ್ ವರದಿ ಅನುಷ್ಠಾನ ಬಜೆಟ್ ನಲ್ಲಿ ಬರಬೇಕಂತಿಲ್ಲ. ಆವತ್ತಿನ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಹಿರಿಯ ಪೊಲೀಸರಿಗೆ- ಅಧಿಕಾರಿಗಳಿಗೆ ಇದರಿಂದ ತೊಂದರೆಯಾಗಿದೆ. ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

  • ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ: ನವೀನ್ ಅತ್ತಿಗೆ ಕಣ್ಣೀರು

    ಹಾವೇರಿ: ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ ಎಂದು ನವೀನ್ ಗ್ಯಾನಗೌಡರ್ ಅತ್ತಿಗೆ ಗೀತಾ ಕಣ್ಣೀರು ಹಾಕಿದ್ದಾರೆ.

    ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಮೈದುನನ ಮೃತದೇಹವನ್ನಾದರೂ ನಮಗೆ ನೀಡಿ. ನಮ್ಮ ಕುಟುಂಬಸ್ಥರಲ್ಲಿ ಅವನೊಬ್ಬನೇ ಓದಿರುವ ಯುವಕ. ಆತನ ಮೇಲೆ ತುಂಬಾ ಕನಸು ಕಂಡಿದ್ದೆವು. ಎಲ್ಲಾ ನುಚ್ಚುನೂರಾಯ್ತು. ಜೀವಂತವಾಗಿ ಆತನನ್ನು ಕೊನೆಗೂ ನೋಡಲಾಗಲಿಲ್ಲ. ಕನಿಷ್ಟ ಪಕ್ಷ ನನ್ನ ಮೈದುನನ ಮೃತದೇಹವನ್ನಾದರೂ ನೀಡಿ ಎಮದು ಅವರು ಅಂಗಲಾಚಿದರು. ಇದನ್ನೂ ಓದಿ: ನನ್ನ ತಮ್ಮನಿಗೆ ಬಹಳಷ್ಟು ಕನಸುಗಳಿದ್ದವು: ನವೀನ್ ಸಹೋದರ

    ಇತ್ತ ನವೀನ್ ಸಹೋದರ ಮಾತನಾಡಿ, ನನ್ನ ತಮ್ಮನಿಗೆ ಬಹಳಷ್ಟು ಕನಸು ಇದ್ದವು. ಆತನ ಜೊತೆಗೆ ಹೋದವರು ಎಲ್ಲರೂ ವಾಪಸು ಜೀವಂತವಾಗಿ ಬರುತ್ತಿದ್ದಾರೆ. ಆದರೆ ನನ್ನ ತಮ್ಮ ಬರಲೇ ಇಲ್ಲ. ಒಂದು ಕಡೆ ಅಪ್ಪ ಅಮ್ಮನನ್ನು ಸಮಾಧಾನ ಮಾಡಬೇಕು. ನಾನೇ ಹಿರಿಯ ಮಗ ಅವರ ಮುಂದೆ ನಾನು ಅತ್ತರೇ ನನಗೆ ನೋವು ತಡೆಯಲು ಆಗುತ್ತಿಲ್ಲ ಎಂದು ತಮ್ಮನ್ನು ಕಳೆದುಕೊಂಡು ಅಣ್ಣ ಹರ್ಷ ಬೇಸರ ವ್ಯಕ್ತಡಪಡಿಸಿದರು.

  • ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಶ್ರೀಗಳಿಂದ ಧನ ಸಹಾಯ

    ಭಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಶ್ರೀಗಳಿಂದ ಧನ ಸಹಾಯ

    ರಾಯಚೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಹಿನ್ನೆಲೆ ಕೊಲೆಯಾದ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧನ ಸಹಾಯ ಮಾಡಿದ್ದಾರೆ.

    ಭಜರಂಗದಳದ ಮೃತ ಹರ್ಷ ಕುಟುಂಬಕ್ಕೆ ರಾಯರ ಪ್ರಸಾದ ರೂಪವಾಗಿ 50 ಸಾವಿರ ರೂಪಾಯಿಗಳನ್ನು ಶ್ರೀಗಳು ನೀಡಿದ್ದಾರೆ. ಸದ್ಯ ಆ ಹಣವನ್ನು ಹರ್ಷ ಕುಟುಂಬಸ್ಥರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಹತ್ಯೆಯಾಗಿರುವ ಹರ್ಷ ಕುಟುಂಬಸ್ಥರಿಗೆ 10ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸಾಂತ್ವನ

    ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಈಗಾಗಲೇ ಹತ್ಯೆ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಗಲಭೆ ಬಳಿಕ ಶಿವಮೊಗ್ಗದಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭ