Tag: ಹರ್ಷ

  • ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ: ಈಶ್ವರಪ್ಪ

    ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ: ಈಶ್ವರಪ್ಪ

    ಶಿವಮೊಗ್ಗ: ಹರ್ಷ ಮತ್ತು ಪ್ರವೀಣ್ ಕೊಲೆಯಾಗಿರುವುದು ಎಲ್ಲರಿಗೂ ನೋವಾಗಿದೆ. ಆದರೆ ನೋವಿಗೆ ರಾಜೀನಾಮೆಯೇ ಪರಿಹಾರವಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ನಾಯಕರು ಬೇಕಾದಷ್ಟು ಜನರು ಬರುತ್ತಾರೆ, ಕಾರ್ಯಕರ್ತರು ಬರುವುದಿಲ್ಲ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಹೇಳಿರುವುದು ಸರಿ ಇದೆ. ನಾನು ಒಬ್ಬ ಕಾರ್ಯಕರ್ತ. ಹಿಂದೂ ಕಾರ್ಯಕರ್ತರಾದ ಹರ್ಷ ಮತ್ತು ಪ್ರವೀಣ್ ಕೊಲೆಯಾಗಿರುವ ಸಂದರ್ಭದಲ್ಲಿ ಎಲ್ಲರಿಗೂ ನೋವಿದೆ. ರಾಜ್ಯದಲ್ಲಿರುವ ಎಲ್ಲಾ ಕಾರ್ಯಕರ್ತರಿಗೆ ನೋವಿದೆ. ಸಿಟ್ಟಿನಲ್ಲಿ ರಾಜೀನಾಮೆ ನೀಡುವುದೊಂದೇ ಪರಿಹಾರವಲ್ಲ. ನೋವಿಗೆ ರಾಜೀನಾಮೆ ಉತ್ತರವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಬೀದಿಗಿಳಿದ ಹಿಂದೂ ಕಾರ್ಯಕರ್ತರು, ಅನ್ನದಾತರು!

    ನೋವನ್ನು ಪಕ್ಷ ಮತ್ತು ಹಿಂದುತ್ವದ ಮೇಲೆ ತೀರಿಸಿಕೊಳ್ಳುವುದು ಪರಿಹಾರವಲ್ಲ. ಮುಂದೆ ನಮ್ಮ ಕಾರ್ಯಕರ್ತರು ಯಾರು ರಾಜೀನಾಮೆ ನೀಡಬಾರದೆಂಬ ಕಾಳಜಿಯಿಂದಾಗಿ ಈ ರೀತಿ ಹೇಳಿಕೆ ನೀಡಿದ್ದೇನೆ. ಆಕ್ರೋಶಕ್ಕೆ ನಮ್ಮ ಬುದ್ಧಿ ನೀಡಿದರೆ, ನಮ್ಮ ಸಂಘಟನೆಗೆ ಪೆಟ್ಟಾಗುತ್ತದೆ. ರಾಜೀನಾಮೆ ನೀಡಿರುವ ನಮ್ಮ ಕಾರ್ಯಕರ್ತರು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅಲ್ಲೊಂದು, ಇಲ್ಲೊಂದು ಜಿಲ್ಲೆಯಲ್ಲಿ ಒಟ್ಟು 13 ಜನ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆಂದು ನಮ್ಮ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಜೆಡಿಎಸ್ ನಾಯಕರ ಕಣ್ಣೀರಿನ ಮಳೆ ತಪ್ಪದು: ಬಿಜೆಪಿ

    ಅವರೆಲ್ಲರ ಮನವೊಲಿಸಿ ರಾಜೀನಾಮೆ ವಾಪಾಸ್ ತೆಗೆದುಕೊಂಡಿದ್ದಾರೆ. ಆಕ್ರೋಶಕ್ಕೆ, ಸಿಟ್ಟಿಗೆ ನಮ್ಮ ಬುದ್ದಿ ನೀಡಿದರೆ, ಸಂಘಟನೆಗೆ ಪೆಟ್ಟಾಗುತ್ತದೆ ಎಂದು ನಾನು ಹೇಳಿಕೆ ನೀಡಿದ್ದೇನೆ. ಯಾವುದೇ ಕಾರ್ಯಕರ್ತನಿಗೆ ನೋವಾಗುವಂತೆ ನಾನು ಹೇಳಿಕೆ ನೀಡಿಲ್ಲ. ಈ ರೀತಿ ರಾಜೀನಾಮೆ ನೀಡಿದರೆ, ಬೇರೆಯವರಿಗೆ ನಿಮ್ಮ ಸ್ಥಾನ ನೀಡಬೇಕಾಗುತ್ತದೆ ಎಂಬ ನಿಟ್ಟಿನಲ್ಲಿ ನಮ್ಮ ರಾಜ್ಯಾಧ್ಯಕ್ಷರ ಅನುಮತಿ ಪಡೆದೇ ಮಾತನಾಡಿದ್ದೇನೆ. ನಾನೊಬ್ಬ ಹಿರಿಯನಾಗಿ ಹೇಳಿದ್ದ ಮಾತಿಗೆ ನೋವಾಗಿದೆ. ಚಕ್ರವರ್ತಿ ಸೂಲಿಬೆಲೆ ಮಾಡುತ್ತಿರುವುದು ಕೂಡ ಹಿಂದುತ್ವದ ಕೆಲಸ, ನಾನು ಕೂಡ ಹಿಂದುತ್ವಕ್ಕೆ ಕೆಲಸ ಮಾಡುತ್ತಿದ್ದೇನೆ. ಯಾರು ರಾಜೀನಾಮೆ ನೀಡಬಾರದೆಂಬ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದೇನೆ ಅಷ್ಟೆ. ಚಕ್ರವರ್ತಿ ಸೂಲಿಬೆಲೆ ಇದರಲ್ಲಿ ತಲೆ ಹಾಕಿಲ್ಲ. ಯುವಕರು ದಾರಿ ತಪ್ಪಬಾರದೆಂಬ ಉದ್ದೇಶದಿಂದ ಅವರು ಈ ರೀತಿ ಹೇಳಿದ್ದಾರೆ ಅಂತ ವಿವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ ತನಿಖೆ ಚುರುಕು

    ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ ತನಿಖೆ ಚುರುಕು

    ಬೆಂಗಳೂರು: ಕೆಲ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ರಾಜ್ಯವನ್ನು ದಂಗಾಗಿಸಿತ್ತು. ಇದೀಗ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

    ಹರ್ಷನ ಕೊಲೆ ಕೇವಲ ರಸ್ತೆ ಜಗಳ, ವೈಯಕ್ತಿಕ ದ್ವೇಷದಿಂದಾಗಿ ಆಗಿದ್ದಲ್ಲ. ಬದಲಿಗೆ ಉಗ್ರ ಸಂಘಟನೆಯೊಂದರ ಕೈವಾಡ ಇರುವುದಾಗಿ  (ರಾಷ್ಟ್ರೀಯ ತನಿಖಾ ದಳ) ಎನ್‍ಐಎ ತನಿಖೆ ವೇಳೆ ತಿಳಿದುಬಂದಿದೆ. ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳಿಂದ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ. ಆರೋಪಿಗಳ ಹೇಳಿಕೆ ಮತ್ತು ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಶೀಘ್ರದಲ್ಲೇ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಎನ್‍ಇಎ ಸಿದ್ಧತೆ ನಡೆಸಿದೆ. ದೋಷಾರೋಪ ಪಟ್ಟಿಯಲ್ಲಿ ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದ ಉಗ್ರ ಸಂಘಟನೆಯ ಹೆಸರನ್ನೂ ಉಲ್ಲೇಖಿಸಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

    ಹರ್ಷ ಕೊಲೆ:
    ಫೆಬ್ರವರಿ 20ರಂದು ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿತ್ತು. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಬಳಿಕ ಹತ್ಯೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಜೈಲಿನಲ್ಲಿದ್ದಾರೆ. ಈ ನಡುವೆ ಪ್ರಕರಣವನ್ನು ಸರ್ಕಾರ ಎನ್‍ಐಎಗೆ ತನಿಖೆಗೆ ವರ್ಗಾಹಿಸಿತ್ತು. ಎನ್‍ಐಎ ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಈವರೆಗೆ ಒಟ್ಟು 450 ಹೆಚ್ಚು ಮಂದಿಯನ್ನು ಎನ್‍ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಕೇಸ್ – ತಪ್ಪು ಮಾಹಿತಿಯಿಂದ ನಡೀತಾ ಕೊಲೆ?

    Live Tv
    [brid partner=56869869 player=32851 video=960834 autoplay=true]

  • ಬಾನಂಗಳದಲ್ಲಿ ಹಾರಿದ ಹರ್ಷನ ಭಾವಚಿತ್ರವಿರುವ ಗಾಳಿಪಟ- ಭಾವುಕರಾದ ಹರ್ಷನ ತಾಯಿ

    ಬಾನಂಗಳದಲ್ಲಿ ಹಾರಿದ ಹರ್ಷನ ಭಾವಚಿತ್ರವಿರುವ ಗಾಳಿಪಟ- ಭಾವುಕರಾದ ಹರ್ಷನ ತಾಯಿ

    ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಘದ ವತಿಯಿಂದ ಗಾಳಿಪಟ ಉತ್ಸವದ ಅಂಗವಾಗಿ, ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ, ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಗಾಳಿಪಟ ಬಾನಿಗೇರಿತು.

    ವಿಶ್ವ ಹಿಂದುಪರಿಷತ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದಿಂದ ಹರ್ಷ ಭಾವಚಿತ್ರವುಳ್ಳ ಗಾಳಿಪಟವನ್ನು ತಯಾರಿಸಲಾಗಿದ್ದು, ಗಾಳಿಪಟ ಉತ್ಸವದಲ್ಲಿ ಮುಗಿಲೆತ್ತರದಲ್ಲಿ ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಿತು. ಇದನ್ನು ನೋಡಲು ಶಿವಮೊಗ್ಗದಿಂದ ಮೃತ ಹರ್ಷ ಸಹೋದರಿ ಅಶ್ವಿನಿ ಹಾಗೂ ತಾಯಿ ಪದ್ಮ ಅವರು ಆಗಮಿಸಿ, ಮಗನ ನೆನೆದು ಭಾವುಕರಾದರು.

    ಈ ವೇಳೆ ಶಾಸಕ ಟಿ.ವೆಂಕಟರಮಣಯ್ಯ ಹರ್ಷ ಕುಟುಂಬದವರೊಂದಿಗೆ ಮಾತುಕತೆ ನಡೆಸಿ, ಆರ್ಥಿಕ ನೆರವು ನೀಡಲು ಮುಂದಾದರಾದರು. ಹರ್ಷ ಕುಟುಂಬದವರು ಸ್ವೀಕರಿಸಲು ನಿರಾಕರಿಸಿ ಜನರ ಪ್ರೀತಿ ವಿಶ್ವಾಸ ಸಾಕೆಂದರು. ನಗರದ ಕಲಾಸಿಪಾಳ್ಯ ನಿವಾಸಿ ಹವ್ಯಾಸಿ ಕಲಾವಿದ ನಿಶ್ಚಿತ್ ಗಾಳಿಪಟದ ಮೇಲೆ ಹರ್ಷ ಅವರ ಭಾವಚಿತ್ರವನ್ನು ಚಿತ್ರಿಸಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಜೀವ ಬೆದರಿಕೆ, ಮಾನಸಿಕ ಚಿತ್ರಹಿಂಸೆ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR

    ಫೆಬ್ರವರಿ 20ರಂದು ಶಿವಮೊಗ್ಗದ ಕಾಮತ್ ಪೆಟ್ರೋಲ್ ಬಂಕ್ ಬಳಿ, ಬಜರಂಗದಳ ಕಾರ್ಯಕರ್ತ ಹರ್ಷ (28)ನನ್ನು  ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಇದನ್ನೂ ಓದಿ: ಇಲಿ, ಹೆಗ್ಗಣಗಳ ಕಾಟಕ್ಕೆ ಫುಟ್‍ಪಾತ್ ಕಿತ್ತೋಗಿದೆ ಎಂದ ಬಿಬಿಎಂಪಿ

    Live Tv
    [brid partner=56869869 player=32851 video=960834 autoplay=true]

  • ರಾಷ್ಟ್ರಮಟ್ಟದ ಗಾಳಿಪಟ ಉತ್ಸವ – ಬಾನಂಗಳದಲ್ಲಿ ಹಾರಲಿದೆ ಹರ್ಷ ಗಾಳಿಪಟ

    ರಾಷ್ಟ್ರಮಟ್ಟದ ಗಾಳಿಪಟ ಉತ್ಸವ – ಬಾನಂಗಳದಲ್ಲಿ ಹಾರಲಿದೆ ಹರ್ಷ ಗಾಳಿಪಟ

    ಚಿಕ್ಕಬಳ್ಳಾಪುರ: ಜಿಲ್ಲೆಯ ಗಾಳಿಪಟ ಕಲಾಸಂಘದ 15ನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 17 ರಂದು ರಾಷ್ಟ್ರಮಟ್ಟದ ಗಾಳಿಪಟ ಉತ್ಸವ ಮತ್ತು ಜುಲೈ 18 ರಂದು ಗಾಳಿಪಟ ಸ್ಪರ್ಧೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

    ಈ ಗಾಳಿಪಟ ಉತ್ಸವದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಗಾಳಿ ಪಾಟ ಬಾನಿಗೇರಲಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ದೊಡ್ಡಬಳ್ಳಾಪುರ ಪ್ರಖಂಡದಿಂದ ಹರ್ಷ ಭಾವಚಿತ್ರವುಳ್ಳ ಗಾಳಿಪಟವನ್ನು ತಯಾರಿಸಲಾಗಿದ್ದು, ಗಾಳಿಪಟ ಉತ್ಸವದಲ್ಲಿ ಮುಗಿಲೆತ್ತರಕ್ಕೆ ಹಾರಿಸಿ ಶ್ರದ್ಧಾಂಜಲಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಇದನ್ನೂ ಓದಿ: ಬೆಳಿಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗ್ಬೋದಾದ್ರೆ, ನ್ಯಾಯಾಧೀಶರೇಕೆ 9 ಗಂಟೆಗೆ ಬರಬಾರದು – ಯು.ಯು.ಲಲಿತ್ ಪ್ರಶ್ನೆ

    ನಗರದ ಕಲಾಸಿಪಾಳ್ಯ ನಿವಾಸಿ ಹವ್ಯಾಸಿ ಕಲಾವಿದ ನಿಶ್ಚಿತ್ ಗಾಳಿಪಟದ ಮೇಲೆ ಹರ್ಷ ಅವರ ಭಾವ ಚಿತ್ರವನ್ನು ಚಿತ್ರಿಸಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಬ್ರವರಿ 20 ರಂದು ಬಜರಂಗದಳ ಕಾರ್ಯಕರ್ತ ಹರ್ಷ(28)ರನ್ನು ಶಿವಮೊಗ್ಗದ ಕಾಮತ್ ಪೆಟ್ರೋಲ್ ಬಂಕ್ ಬಳಿ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಇದನ್ನೂ ಓದಿ: ಮುಸ್ಲಿಂ ಮಹಿಳೆಯರು ಶಾಂತಿ ಕೇಳುವುದರಲ್ಲಿ ತಪ್ಪಿಲ್ಲ: ಡಿ.ಕೆ ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]

  • ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

    ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

    – ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ
    – ಆರೋಪಿಗಳಿಗೆ ಸೌಲಭ್ಯ ಕೊಟ್ಟ ಅಧಿಕಾರಿಗಳ ಅಮಾನತು ಮಾಡಬೇಕು

    ಶಿವಮೊಗ್ಗ: ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ ಎಂದು ಹರ್ಷನ ತಾಯಿ ಪದ್ಮ ಆಕ್ರೋಶ ವ್ಯಕ್ತಪಡಿಸಿದರು.

    ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಹರ್ಷನ ಕೊಲೆ ಆರೋಪಿಗಳು ಮೊಬೈಲ್ ಬಳಕೆ ವಿಚಾರವಾಗಿ ಪದ್ಮ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಈ ಪ್ರಕರಣ ನೋಡಿದರೆ ನಮ್ಮ ಮಗನ ಸಾವಿಗೆ ನ್ಯಾಯ ಸಿಗುವ ನಂಬಿಕೆ ಇಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಆರೋಪಿಗಳಿಗೆ ಸೌಲಭ್ಯ ಕೊಟ್ಟ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

    ಅಧಿಕಾರಿಗಳಿಂದ ಆರೋಪಿಗಳಿಗೆ ಶಿಕ್ಷೆ ಕೊಡಲು ಸಾಧ್ಯವಾಗದಿದ್ದರೆ ನಮಗೆ ಒಪ್ಪಿಸಿ. ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ. ಆ ಮೂಲಕ ನಮ್ಮ ಮಗನ ಸಾವಿಗೆ ನ್ಯಾಯ ಪಡೆಯುತ್ತೇನೆ. ಹಿಂದುತ್ವ ಪರವಾಗಿ ಹೋರಾಡುವುದೇ ತಪ್ಪಾ? ಆರೋಪಿಗಳಿಗೆ ಜೈಲಿನಲ್ಲಿ ಈ ರೀತಿ ಸೌಲಭ್ಯ ನೋಡಿದರೆ ನ್ಯಾಯ ಸಿಗುವ ವಿಶ್ವಾಸವಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಜೈಲಿನಲ್ಲಿ ಮೊಬೈಲ್ ಬಳಸಿ ರೀಲ್ಸ್, ಟಿಕ್‍ಟಾಕ್ ಮಾಡಿದ ಹರ್ಷನ ಹಂತಕರು

    ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಯಾವುದೂ ಸರಿಯಿಲ್ಲ. ಇಂದಿಗೂ ಅಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಅಂಶ ಈ ಮೂಲಕ ಬಹಿರಂಗವಾಗಿದೆ. ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳನ್ನು ಕೇವಲ ವರ್ಗಾವಣೆ ಮಾಡದೇ ಸೇವೆಯಿಂದಲೇ ಅಮಾನತು ಮಾಡಬೇಕು ಎಂದು ಹರ್ಷ ಕುಟುಂಬಸ್ಥರ ಆಗ್ರಹವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜೈಲಿನಲ್ಲಿ ಮೊಬೈಲ್ ಬಳಸಿ ರೀಲ್ಸ್, ಟಿಕ್‍ಟಾಕ್ ಮಾಡಿದ ಹರ್ಷನ ಹಂತಕರು

    ಜೈಲಿನಲ್ಲಿ ಮೊಬೈಲ್ ಬಳಸಿ ರೀಲ್ಸ್, ಟಿಕ್‍ಟಾಕ್ ಮಾಡಿದ ಹರ್ಷನ ಹಂತಕರು

    – ಕುಟುಂಬಸ್ಥರ ಜೊತೆ ವೀಡಿಯೋ ಕಾಲ್, ವಾಟ್ಸಾಪ್ ಕಾಲ್
    – ಪರಪ್ಪನ ಅಗ್ರಹಾರದಲ್ಲಿರುವ 10 ಮಂದಿ ಹಂತಕರು
    – ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ದೊರೆತಿದ್ದಕ್ಕೆ ಹರ್ಷ ಕುಟುಂಬಸ್ಥರ ಆಕ್ರೋಶ

    ಶಿವಮೊಗ್ಗ: ಸೀಗೆಹಟ್ಟಿ ಬಡಾವಣೆಯಲ್ಲಿ ಕಳೆದ ಫೆ.20 ರಂದು ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ 10 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎನ್‍ಐಎ ತನಿಖೆಗೆ ವಹಿಸಿತ್ತು. ಆದರೆ ಪರಪ್ಪನ ಅಗ್ರಹಾರ ಜೈಲಿನಿಂದ ಮೊಬೈಲ್ ಫೋನ್ ಬಳಕೆ ಮಾಡುವ ಮೂಲಕ ಆರೋಪಿಗಳು ಸುದ್ದಿಯಲ್ಲಿದ್ದಾರೆ. ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಕಾರಣ ನಮ್ಮ ಮಗನ ಸಾವಿಗೆ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ಹರ್ಷ ಕುಟುಂಬಸ್ಥರಿಗೆ ಬಂಧಿದೆ.

    ಹರ್ಷನ ಹತ್ಯೆ ನಂತರ ಇಡೀ ಶಿವಮೊಗ್ಗದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಹರ್ಷನ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸಹ ಸೆಳೆದಿತ್ತು. ನಂತರ ಫೀಲ್ಡ್‌ಗೆ ಇಳಿದ ಪೊಲೀಸರ ತಂಡ ಘಟನೆ ನಡೆದ 24 ಗಂಟೆಯೊಳಗೆ ಪ್ರಕರಣದಲ್ಲಿ ಭಾಗಿಯಾಗಿದ್ದ, 10 ಮಂದಿ ಆರೋಪಿಗಳಿಗೆ ಎಡೆಮುರಿ ಕಟ್ಟಿತ್ತು. ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಹರ್ಷ ಹತ್ಯೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಈ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಿತ್ತು. ಎನ್ ಐಎ ತಂಡ ಸಹ ಇದೀಗ ತನಿಖೆ ಕೈಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 450 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಎನ್‍ಐಎ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗಕ್ಕೆ ಹಲವು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದೆ.

    ಪ್ರಕರಣ ಇಷ್ಟೊಂದು ಗಂಭೀರ ಸ್ವರೂಪ ಇರುವಾಗ ಆರೋಪಿಗಳು ಮಾತ್ರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಿಂದಾಸ್ ಆಗಿ ಜೀವನ ಮಾಡುತ್ತಿದ್ದಾರೆ. ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿಗಳಿಗೆ ಜೈಲಿನೊಳಗೆ ಮೊಬೈಲ್ ಫೋನ್ ದೊರೆತಿದ್ದು, ಮೊಬೈಲ್ ಮೂಲಕ ಕುಟುಂಬಸ್ಥರ ಜೊತೆ ವೀಡಿಯೋ ಕಾಲ್, ವಾಟ್ಸಾಪ್ ಕಾಲ್ ಮಾಡುವ ಜೊತೆಗೆ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

    ಪ್ರಕರಣದ ಬಗ್ಗೆ ತಿಳಿದ ಹರ್ಷ ಕುಟುಂಬಸ್ಥರು ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ನಮ್ಮ ಮಗನ ಕೊಲೆ ಪ್ರಕರಣವನ್ನು ಎನ್ ಐಎಗೆ ವಹಿಸಿದೆ. ನಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇತ್ತು. ಆದರೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಸುದ್ದಿ ಕೇಳಿ ನಮ್ಮ ನಂಬಿಕೆ ಕಳೆದು ಹೋಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಫೋನ್ ಬಳಕೆ ಮಾಡಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ ಭಾನುವಾರ ಮುಂಜಾನೆಯೇ ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ರೈಡ್ ಮಾಡಿಸಲಾಗಿದೆ. ಈ ವೇಳೆ ಕೆಲವು ಮೊಬೈಲ್ ಸಹ ಪತ್ತೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಲುಷಿತ ನೀರು ಕುಡಿದು ಎರಡು ಗ್ರಾಮಗಳ 40 ಜನ ಅಸ್ವಸ್ಥ – ಮಹಿಳೆ ಸಾವು

    ಕೆಲವು ಅಧಿಕಾರಿಗಳು ಹಲವು ವರ್ಷಗಳಿಂದ ಅಲ್ಲಿಯೇ ಬೀಡು ಬಿಟ್ಟಿದ್ದಾರೆ. ಹೀಗಾಗಿ ಇಂತಹ ಸಮಸ್ಯೆ ಎದುರಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಹಲವು ವರ್ಷಗಳಿಂದ ಇರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಿಲ್ಲೆ ಹಲವೆಡೆ ಕ್ಷಿಪ್ರ ದಾಳಿ ನಡೆಸಿದ್ದಾರೆ.

    ಶಿವಮೊಗ್ಗಕ್ಕೆ ಎನ್‌ಐಎ ಅಧಿಕಾರಿಗಳು ನಿನ್ನೆ ರಾತ್ರಿ ಬಂದಿಳಿದಿದ್ದರು. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳಿಂದ ದಾಳಿ ನಡೆದಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ಇಂದು ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ದಾಳಿ ನಡೆಸಿ ವಿಚಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ಆಗಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೆ ಒಟ್ಟು 450 ಮಂದಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ

    Live Tv

  • ಜನರಲ್ ಚೆಕಪ್ ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ ನಟ ಶಿವಣ್ಣ : ಗಾಳಿ ಸುದ್ದಿಗೆ ಕಿವಿಗೊಡಬೇಡಿ

    ಜನರಲ್ ಚೆಕಪ್ ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ ನಟ ಶಿವಣ್ಣ : ಗಾಳಿ ಸುದ್ದಿಗೆ ಕಿವಿಗೊಡಬೇಡಿ

    ವೇದಾ ಶೂಟಿಂಗ್ ವೇಳೆ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದಕ್ಕೆ ಸಂಬಂಧ ಪಟ್ಟಂತೆ ವೇದಾ ಸಿನಿಮಾ ನಿರ್ದೇಶಕ ಹರ್ಷಾ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿ, ‘ನಾನು ಈಗ ತಾನೆ ಶಿವಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಅವರು ಆಗಾಗ್ಗೆ ಜನರಲ್ ಚೆಕಪ್ ಮಾಡಿಸುತ್ತಾರೆ.  ಈ ಬಾರಿಯೂ ಆಸ್ಪತ್ರೆಗೆ ಹೋಗಿದ್ದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಅಷ್ಟೆ. ಉಳಿದಂತೆ ಏನೂ ಇಲ್ಲ’ ಎಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ಸದ್ಯ ಶಿವರಾಜ್ ಕುಮಾರ್ ಅವರು ತಮ್ಮದೇ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ‘ವೇದಾ’ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಹಲವು ದಿನಗಳಿಂದ ವೇದಾ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲೇ ನಡೆಯುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಫೋಟೋ ಶೇರ್ ಮಾಡಿ ಭಾವುಕರಾದ ಆಲಿಯಾ ತಾಯಿ

    ನಿನ್ನೆಯಷ್ಟೇ ಮೈಸೂರಿನ ಶಕ್ತಿಧಾಮಕ್ಕೆ ಕುಟುಂಬ ಸಮೇತ ಹೋಗಿದ್ದ ಶಿವರಾಜ್ ಕುಮಾರ್, ಶಕ್ತಿಧಾಮದ ಬೇಸಿಗೆ ಶಿಬಿರ ಉದ್ಘಾಟಿಸಿದ್ದರು. ಮಕ್ಕಳ ಜೊತೆ ಕೆಲ ಗಂಟೆಗಳು ಕಾಲ ಕಳೆದಿದ್ದರು. ಜೊತೆಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಇದ್ದರು. ವೇದಾ ಸಿನಿಮಾದ ಶೂಟಿಂಗ್ ಗಾಗಿ ಮೈಸೂರಿನಲ್ಲೇ ಇರುವುದರಿಂದ ಆಗಾಗ್ಗೆ ಅವರು ಶಕ್ತಿಧಾಮಕ್ಕೆ ಹೋಗಿ ಬರುತ್ತಿದ್ದಾರೆ.

  • ಜೈಲಿನಲ್ಲಿ ಶಿವಮೊಗ್ಗ ಹರ್ಷ ಕೊಲೆ ಕೇಸ್ ಆರೋಪಿಗಳ ಹುಚ್ಚಾಟ – ಬ್ಯಾರಕ್‍ನಲ್ಲಿ ಪುಂಡಾಟ

    ಜೈಲಿನಲ್ಲಿ ಶಿವಮೊಗ್ಗ ಹರ್ಷ ಕೊಲೆ ಕೇಸ್ ಆರೋಪಿಗಳ ಹುಚ್ಚಾಟ – ಬ್ಯಾರಕ್‍ನಲ್ಲಿ ಪುಂಡಾಟ

    ಶಿವಮೊಗ್ಗ: ಹಿಂದೂ ಸಮಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳು ಸೆಂಟ್ರಲ್ ಜೈಲಿನಲ್ಲಿ ಪುಂಡಾಟಿಕೆ ಮಾಡಿದ್ದಾರೆ.

    ಸೆಂಟ್ರಲ್ ಜೈಲಿನಲ್ಲಿದ್ರೂ ಬ್ಯಾರಕ್‍ನಲ್ಲಿ ಪುಂಡಾಟಿಕೆ ನಡೆಸುತ್ತಿರುವ ಆರೋಪಿಗಳು ಜೈಲಿನ ಭದ್ರತಾ ಸಿಬ್ಬಂದಿಗಳಿಗೇ ಅವಾಜ್ ಹಾಕತ್ತಿದ್ದಾರೆ. ಈ ಮೊದಲು ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ತುಮಕೂರು ಜೈಲಿನಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು ಆ ಬಳಿಕ ಇತ್ತೀಚೆಗಷ್ಟೇ ಹತ್ತು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಹತ್ತು ಮಂದಿ ಆರೋಪಿಗಳು ಒಂದೇ ಬ್ಯಾರಕ್‍ನಲ್ಲಿದ್ದು, ಕ್ವಾರಂಟೈನ್ ಸೆಲ್‍ನಿಂದ ಸೆಂಟ್ರಲ್ ಜೈಲಿನ ಒಳಗೆ ಕಳುಹಿಸುವಂತೆ ಆರೋಪಿಗಳು ಜೈಲಾಧಿಕಾರಿಗಳಿಗೆ ಅವಾಜ್ ಹಾಕುತ್ತಿರುವ ಬಗ್ಗೆ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

    jail

    ಜೈಲಿನ ನಿಯಮಾವಳಿಯಂತೆ 14 ದಿನ ಕ್ವಾರಂಟೈನ್ ಕಡ್ಡಾಯಕ್ಕೆ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ನಮಗೇನು ಕೊರೊನಾ ಇದೆಯಾ? ಒಳಗೆ ಕಳುಹಿಸಿ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಜೈಲಿನಲ್ಲಿರುವ ಟೈಲ್ಸ್ ಕಲ್ಲನ್ನು ಒಡೆದು ಕಲ್ಲಿನ ಚೂರ್‌ನಿಂದ ಕೈ ಕೊಯ್ದುಕೊಂಡು ಹುಚ್ಚಾಟ ನಡೆಸುತ್ತಿದ್ದಾರೆ. ಆರು ಮಂದಿ ಆರೋಪಿಗಳು ಪರಸ್ಪರ ತಮ್ಮಷ್ಟಕ್ಕೆ ಟೈಲ್ಸ್ ಚೂರ್‌ನಿಂದ ಮೈ, ಕೈ ರಕ್ತ ಬರುವಂತೆ ಕೊಯ್ದುಕೊಂಡು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ಪ್ರಮುಖ ಆರೋಪಿ ಮಹಮ್ಮದ್ ಖಾಸಿಫ್, ಅಬ್ದುಲ್ ರೋಷನ್ ಸೇರಿ ಆರು ಮಂದಿ ಆರೋಪಿಗಳು ಮೈ, ಕೈ ಕೊಯ್ದುಕೊಂಡು ಹುಚ್ಚಾಟ ನಡೆಸುತ್ತಿದ್ದಂತೆ ಕೂಡಲೇ ಜೈಲಿನ ಆಸ್ಪತ್ರೆ ಸಿಬ್ಬಂದಿಯಿಂದ ಆರು ಮಂದಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಜೈಲಿನ ಒಳಗೆ ಬ್ಯಾರಕ್‍ಗೆ ಶಿಫ್ಟ್ ಮಾಡಲಾಗಿದ್ದು, ಉಳಿದವರನ್ನು ಪ್ರತ್ಯೇಕವಾಗಿ ಬೇರೆ ಬೇರೆ ಕ್ವಾರಂಟೈನ್ ಸೆಲ್‍ಗೆ ಶಿಫ್ಟ್ ಮಾಡಲಾಗಿದೆ.

    ಈ ಘಟನೆ ಬಳಿಕ ಜೈಲಾಧಿಕಾರಿಗಳು ಕೂಡಲೇ ಪರಪ್ಪನ ಅಗ್ರಹಾರ ಪೊಲೀಸ್ ಸ್ಟೇಷನ್‍ಗೆ ಪ್ರಾಥಮಿಕ ರಿಪೋರ್ಟ್ ನೀಡಿದ್ದಾರೆ. ಹರ್ಷ ಕೊಲೆ ಕೇಸ್ ಆರೋಪಿಗಳದ್ದೇ ಇದೀಗ ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದು, ಸದ್ಯ ಎನ್‍ಐಎ ಟೀಂ ತನಿಖೆ ನಡೆಸ್ತಿದೆ. ಆರೋಪಿಗಳನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಘಟನೆ ಬಳಿಕ ಆರೋಪಿಗಳ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದ್ದು ಯಾವುದೇ ವಸ್ತು ಸಿಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕಾರಾಗೃಹ ಇಲಾಖೆಗೂ ಆರೋಪಿಗಳ ನಡವಳಿಕೆ ಮತ್ತು ಘಟನೆ ಬಗ್ಗೆ ಮಾಹಿತಿ ರವಾನೆಯಾಗಿದೆ.

  • ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

    ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

    ಶಿವಮೊಗ್ಗ: ಹರ್ಷನ ಕೊಲೆ ನಂತರ ಮತ್ತೊಂದು ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಸೀಗೆಹಟ್ಟಿಯಲ್ಲಿ ಫೆ.20 ರಂದು ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ನಡೆದಿತ್ತು. ಹರ್ಷನ ಕೊಲೆಗೆ ಪ್ರತೀಕಾರವಾಗಿ ಅನ್ಯಕೋಮಿನ ರೌಡಿಶೀಟರ್ ಓರ್ವನ ಹತ್ಯೆಗೆ 13 ಮಂದಿ ಯುವಕರ ತಂಡ ಸಂಚು ರೂಪಿಸಿತ್ತು ಎಂಬ ಅಂಶ ಪೊಲೀಸರ ತನಿಖೆ ಮೂಲಕ ಬಹಿರಂಗವಾಗಿದೆ. ಇದನ್ನೂ ಓದಿ: ಯುವತಿಯನ್ನು ಚುಡಾಯಿಸಿದಕ್ಕೆ ಬುದ್ದಿ ಹೇಳಿದವನನ್ನೆ ಕೊಂದ ಪಾಪಿ

    ತನಿಖೆಯಲ್ಲಿ ತಿಳಿದಿದ್ದೇನು?
    ಹರ್ಷನ ಕೊಲೆ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಾಸ್‍ನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಪೊಲೀಸರ ಮುಂದೆ ಹರ್ಷನ ಹತ್ಯೆಗೆ ಪ್ರತೀಕಾರವಾಗಿ ಮತ್ತೊಂದು ಹತ್ಯೆಯ ಸಂಚು ರೂಪಿಸಿರುವುದನ್ನು ಬಾಯ್ಬಿಟ್ಟಿದ್ದಾನೆ. ಈ ವಿಷಯ ತಿಳಿದ ನಂತರ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಅವರು ಕುಂಸಿ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚಿಸಿ ಫೀಲ್ಡ್‌ಗೆ ಇಳಿಸಿದ್ದರು.

    ಯಾರಿಗೂ ಅನುಮಾನವೇ ಬಾರದ ರೀತಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಈ ಬಗ್ಗೆ ಅಗತ್ಯ ಮಾಹಿತಿ ದಾಖಲೆ ಸಂಗ್ರಹಿಸಿತ್ತು. ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ರಾಖಿ, ವಿಶ್ವಾಸ್, ನಿತಿನ್, ಯಶವಂತ್, ಕಾರ್ತಿಕ್, ಆಕಾಶ್, ಪ್ರವೀಣ್, ಸುಹಾಸ್, ಸಚಿನ್, ಸಂಕೇತ್, ರಾಘು, ಮಂಜು, ವಿಶ್ವಾಸ್ ಆರೋಪಿಗಳನ್ನು ವಶಕ್ಕೆ ಪಡೆದು ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೇ ಬಂಧಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

    ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ಸದ್ಯದಲ್ಲಿಯೇ ಮತ್ತೊಂದು ಕೊಲೆ ನಡೆಯಬೇಕಿತ್ತು. ಕೊಲೆಗೆ ವ್ಯವಸ್ಥಿತವಾಗಿ ಸಂಚು ಸಹ ನಡೆದಿತ್ತು. ಆದರೆ ಎಸ್.ಪಿ ಅವರೇ ಫೀಲ್ಡ್‍ಗೆ ಇಳಿದು ಕಾರ್ಯಾಚರಣೆ ನಡೆಸಿದ್ದರಿಂದ ನಡೆಯಬೇಕಿದ್ದ ಕೊಲೆ ತಪ್ಪಿಸಿದ್ದಾರೆ. ಇದನ್ನೂ ಓದಿ: ಭಾರತೀಯತೆಗೆ ಯಾರೆಲ್ಲಾ ವಿರೋಧ ಮಾಡುತ್ತಾರೋ ಇಲ್ಲಿ ಇರಬಾರದು: ಅದಮಾರು ಶ್ರೀ