Tag: ಹರ್ಷ ಸಂಘವಿ

  • ಮಹಿಳಾ ದಿನಾಚರಣೆ – ಪ್ರಧಾನಿ ಕಾರ್ಯಕ್ರಮಕ್ಕೆ ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯಿಂದ ಭದ್ರತೆ

    ಮಹಿಳಾ ದಿನಾಚರಣೆ – ಪ್ರಧಾನಿ ಕಾರ್ಯಕ್ರಮಕ್ಕೆ ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯಿಂದ ಭದ್ರತೆ

    ಅಹಮದಾಬಾದ್: ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Narendra Modi) ಭಾಗಿಯಾಗಲಿದ್ದು, ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯೇ ನಿರ್ವಹಿಸಲಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ (Harsh Sanghavi) ಹೇಳಿದ್ದಾರೆ.

    ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ನಡೆಯುತ್ತಿದೆ. ಪ್ರಧಾನ ಮಂತ್ರಿಗಳು ವಂಶಿ ಬೋರ್ಸಿ ಗ್ರಾಮದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸುವುದರಿಂದ ಹಿಡಿದು ಕಾರ್ಯಕ್ರಮದ ಸ್ಥಳದವರೆಗೆ ಅವರ ಭದ್ರತೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿಭಾಯಿಸಲಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ಮಹಿಳಾ ಭದ್ರತಾ ತಂಡದಲ್ಲಿ 2,100 ಮಹಿಳಾ ಕಾನ್‌ಸ್ಟೆಬಲ್‌ಗಳು, 187 ಸಬ್-ಇನ್ಸ್ಪೆಕ್ಟರ್‌ಗಳು, 61 ಪೊಲೀಸ್ ಇನ್ಸ್ಪೆಕ್ಟರ್‌ಗಳು, 16 ಉಪಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್ಪಿಗಳು), 5 ಪೊಲೀಸ್ ಸೂಪರಿಂಟೆಂಡೆಂಟ್‌ಗಳು, 1 ಪೊಲೀಸ್ ಮಹಾನಿರ್ದೇಶಕರು (ಐಜಿಪಿ), 1 ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಇರಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಗೃಹ ಕಾರ್ಯದರ್ಶಿ ನಿಪುನಾ ತೊರವಾನೆ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ.

    ರಾಜ್ಯ ಸರ್ಕಾರದ ಈ ಕ್ರಮದ ಮಹತ್ವವನ್ನು ಒತ್ತಿ ಹೇಳಿದ ಹರ್ಷ ಸಂಘವಿ, ಸಂಪೂರ್ಣ ಮಹಿಳೆಯರೇ ಇರುವ ಭದ್ರತಾ ಪಡೆಗಳ ನಿಯೋಜನೆಯು ಸುರಕ್ಷತೆ ಮತ್ತು ಭದ್ರತೆಗೆ ಮಹಿಳೆಯರ ಕೊಡುಗೆಯನ್ನು ಮಹಿಳಾ ದಿನಾಚರಣೆಯಂದು ಜಗತ್ತಿಗೆ ಬಲವಾದ ಸಂದೇಶವನ್ನು ನೀಡುತ್ತದೆ. ಮಹಿಳಾ ಶಕ್ತಿ ಗುಜರಾತ್ ಅನ್ನು ಹೇಗೆ ಸುರಕ್ಷಿತ ಮತ್ತು ಸುಭದ್ರ ರಾಜ್ಯವನ್ನಾಗಿ ಮಾಡಲು ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

    ಪ್ರಧಾನಿ ಮೋದಿ ಮಾರ್ಚ್ 8 ಮತ್ತು 9 ರಂದು ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಚ್ 8 ರಂದು ವಂಶಿ ಬೋರ್ಸಿ ಗ್ರಾಮದಲ್ಲಿ ನಡೆಯಲಿರುವ `ಲಖ್ಪತಿ ದೀದಿ ಸಮ್ಮೇಳನ’ದಲ್ಲಿ ಅವರು ಮಾತನಾಡಲಿದ್ದಾರೆ. ಇದು ಆರ್ಥಿಕ ಸ್ವಾತಂತ್ರ‍್ಯ ಮತ್ತು ಸ್ವಾವಲಂಬನೆ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣ ಅಭಿಯಾನವಾಗಿದೆ.ಇದನ್ನೂ ಓದಿ: ಪುತ್ತೂರಿಗೆ ಮೆಡಿಕಲ್ ಕಾಲೇಜು: ಬಜೆಟ್‌ನಲ್ಲಿ ವೈದ್ಯಕೀಯ, ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?

     

     

  • ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ ಸುಲಭವಾಗಿ ಸಿಗುವುದರಿಂದ ಅತ್ಯಾಚಾರವಾಗುತ್ತಿದೆ: ಗುಜರಾತ್ ಸಚಿವ ಹರ್ಷ ಸಂಘವಿ

    ಮೊಬೈಲ್‍ನಲ್ಲಿ ಅಶ್ಲೀಲ ವೀಡಿಯೋ ಸುಲಭವಾಗಿ ಸಿಗುವುದರಿಂದ ಅತ್ಯಾಚಾರವಾಗುತ್ತಿದೆ: ಗುಜರಾತ್ ಸಚಿವ ಹರ್ಷ ಸಂಘವಿ

    ಗಾಂಧೀನಗರ: ಮೊಬೈಲ್ ಫೋನ್‍ಗಳಲ್ಲಿ ಸುಲಭವಾಗಿ ಆಶ್ಲೀಲ ವೀಡಿಯೋ ಸಿಗುವುದರಿಂದಾಗಿ ರೇಪ್ ಹೆಚ್ಚಾಗುತ್ತಿದೆ ಎಂದು ಗುಜರಾತ್ ಸಚಿವ ಹರ್ಷ ಸಂಘವಿ ಅಭಿಪ್ರಾಯಪಟ್ಟಿದ್ದಾರೆ.

    STOP RAPE

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಮೊಬೈಲ್ ಫೋನ್‍ಗಳಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡುವುದರಿಂದ ರೇಪ್ ಮತ್ತು ಇತರ ಅಪರಾಧ ಕೃತ್ಯಗಳು ಭಾರತದಲ್ಲಿ ಹೆಚ್ಚಾಗುತ್ತಿದೆ ಎಂಬ ಅಂಶ ಸರ್ವೇಯೊಂದರ ಮುಖಾಂತರ ತಿಳಿದು ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

    ರೇಪ್ ನಡೆದಾಗ ಪ್ರತಿಯೊಬ್ಬರು ಪೊಲೀಸರ ಮೇಲೆ ಗೂಬೆ ಕೂರಿಸುತ್ತಾರೆ. ಇಂತಹ ಘಟನೆ ಬಳಿಕ ರಾಜ್ಯದಲ್ಲಿ ಅಥವಾ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ ಎನ್ನುತ್ತೇವೆ. ಪೊಲೀಸರನ್ನು ದೂರಿ ಯಾವುದೇ ಪ್ರಯೋಜನವಿಲ್ಲ. ಕೆಲದಿನಗಳ ಹಿಂದೆ ಗುಜರಾತ್‍ನಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಇದರ ಹಿಂದೆ ಮೊಬೈಲ್ ಫೋನ್ ಕಾರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ