Tag: ಹರ್ಷ ಕೊಲೆ

  • ಶಿವಮೊಗ್ಗ ಹರ್ಷ ಕೊಲೆ ಕೇಸ್‌| ಸಾಕ್ಷಿಗೆ ಬೆದರಿಕೆ ಹಾಕಿದ ಯುವಕನ ಮೇಲೆ ಎಫ್‌ಐಆರ್‌

    ಶಿವಮೊಗ್ಗ ಹರ್ಷ ಕೊಲೆ ಕೇಸ್‌| ಸಾಕ್ಷಿಗೆ ಬೆದರಿಕೆ ಹಾಕಿದ ಯುವಕನ ಮೇಲೆ ಎಫ್‌ಐಆರ್‌

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ (Harsha Murder Case) ಸಂಬಂಧಿಸಿಂತೆ ಸಾಕ್ಷಿಗೆ (Witness) ಬೆದರಿಕೆ ಹಾಕಿದ ಯುವಕನ ವಿರುದ್ಧ ಕೇಸ್‌ ದಾಖಲಾಗಿದೆ.

    ಎನ್‌ಐಎ ನ್ಯಾಯಾಲಯದ ಸೂಚನೆ ಮೇರೆಗೆ ಶಿವಮೊಗ್ಗದ (Shivamogga) ತುಂಗಾನಗರ ಠಾಣೆಯಲ್ಲಿ ಅನಾಮಿಕ ವ್ಯಕ್ತಿಯ ಮೇಲೆ ಸಾಕ್ಷಿಯೊಬ್ಬರು ದೂರು ನೀಡಿದ ನಂತರ ಎಫ್‌ಐಆರ್‌ (FIR) ದಾಖಲಾಗಿದೆ.

    ಏನಿದು ಪ್ರಕರಣ?
    ಶಿವಮೊಗ್ಗದ ಸೀಗೆಹಟ್ಟಿ ಬಳಿ ಎರಡು ವರ್ಷದ ಹಿಂದೆ ಹರ್ಷ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷಿಯಾಗಿ ಪರಿಗಣಿಸಿತ್ತು.  ಇದನ್ನೂ ಓದಿ: ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು

    ಈಗ ಆತನಿಗೆ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹರ್ಷ ಹತ್ಯೆಯಾದ ದಿನ ಆರೋಪಿಗಳು ಶಿವಮೊಗ್ಗದ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಸಿಕೊಂಡಿದ್ದರು. ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್‌ ಭರ್ತಿ ಮಾಡಿದ್ದ. ಈ ಕಾರಣಕ್ಕೆ ಆತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು.

    ಸದ್ಯ ಆ ಯುವಕ ಪೆಟ್ರೋಲ್‌ ಬಂಕ್‌ ತೊರೆದು ಬೇರೆ ಕೆಲಸ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದೆ ಪೆಟ್ರೋಲ್‌ ಬಂಕ್‌ಗೆ ಸ್ಕೂಟಿಯಲ್ಲಿ ತೆರಳಿದ್ದ ವ್ಯಕ್ತಿಯೊಬ್ಬ ಆ ಯುವಕ ಯಾರು ಎಂದು ವಿಚಾರಿಸಿದ್ದ. ಆತ ಕೆಲಸ ಬಿಟ್ಟಿರುವುದಾಗಿ ತಿಳಿಸಿದಾಗ, ‘ಕೋರ್ಟ್‌ಗೆ ಹೋಗುವುದು ಬೇಡ ಎಂದು ಹೇಳಿ’ ಎಂದು ಬಂಕ್‌ ಸಿಬ್ಬಂದಿಗೆ ತಿಳಿಸಿ ಹೋಗಿದ್ದ ಎಂದು ಆರೋಪಿಸಲಾಗಿದೆ.

    ಈ ವಿಷಯ ಸ್ನೇಹಿತರಿಂದ ಯುವಕನಿಗೆ ಗೊತ್ತಾಗಿದೆ. ಡಿ.12ರಂದು ಎನ್‌ಐಎ ನ್ಯಾಯಾಲಯದಲ್ಲಿ ಯುವಕ ಸಾಕ್ಷಿ ನುಡಿದಿದ್ದಾನೆ. ಮರುದಿನ ಕೋರ್ಟ್‌ ಸೂಚನೆ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ಮಂಜೂರು

    ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ಮಂಜೂರು

    ಶಿವಮೊಗ್ಗ: ಶಿವಮೊಗ್ಗ (Shivamogga) ನಗರದಲ್ಲಿ ಫೆ.20 ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ (Harsha) ಹತ್ಯೆ ಪ್ರಕರಣದ ಆರೋಪಿ ಜಾಫರ್ ಸಾಧಿಕ್ (52) ಎಂಬಾತನಿಗೆ ಎನ್‍ಐಎ (NIA) ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು (Bail) ನೀಡಿದೆ.

    ಸೆಕೆಂಡ್ ಹ್ಯಾಂಡ್ ಕಾರ್ (Car) ಡೀಲರ್ ಆಗಿರುವ ಸಾಧಿಕ್‍ನನ್ನು ಫೆ. 24 ರಂದು ಪೊಲೀಸರು (Police) ಬಂಧಿಸಿದ್ದರು. ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ಈತ, ಪ್ರಕರಣದ 6ನೇ ಆರೋಪಿ ಜಿಲಾನ್‍ನ ತಂದೆ. ಸಾಧಿಕ್, ಜಾಮೀನು ಕೋರಿ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಾಧಿಕ್ ಪರ ವಕೀಲರು, ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್‍ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು. ಇದನ್ನೂ ಓದಿ: ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆ, ಮಸೀದಿ ಧ್ವಂಸ- 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ

    ಎನ್‍ಐಎ ಪರ ವಾದ ಮಂಡಿಸಿದ ವಕೀಲರು, ಸಾದಿಕ್ ಖರೀದಿಸಿದ್ದ ಕಾರುಗಳನ್ನು ಇತರೆ ಆರೋಪಿಗಳು ಅಪರಾಧ ಕೃತ್ಯ ಎಸಗಲು ಮತ್ತು ಕೃತ್ಯದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದಾರೆ. ಜೊತೆಗೆ ಸಾಧಿಕ್, ತಮ್ಮ ಮಗನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಮತ್ತು ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದಾನೆ. ಹೀಗಾಗಿ, ಇತರೆ ಆರೋಪಿಗಳ ಅಪರಾಧ ಕೃತ್ಯವು ಸಾಧಿಕ್‍ಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣಕ್ಕೆ ಸಾಧಿಕ್‍ಗೆ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಅರ್ಜಿಯ ವಿಚಾರಣೆ ನಡೆಸಿದ ಎನ್‍ಐಎ ವಿಶೇಷ ನ್ಯಾಯಾಲಯ ಆರೋಪಿಯು 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು. ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

    ಹಿಜಬ್ ಹಾಕಿದಂತೆ ಶಾಲೆಗಳಲ್ಲಿ ಕೇಸರಿ ಹಾಕಿಸುತ್ತೇವೆ, ನಮ್ಮ ಅನ್ನ ತಿಂದು ನಮಗೆ ದ್ರೋಹ: ಬಸವರಾಜ್

    – ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಪ್ರತಿಭಟನೆ
    – ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ

    ಬೆಂಗಳೂರು: ನಮ್ಮ ಅನ್ನ ತಿಂದು ನಮಗೆ ದ್ರೋಹ ಮಾಡುತ್ತಿರುವ ನೀವು ಕುನ್ನಿಗಳು. ಶಾಲೆಗಳಲ್ಲಿ ಕೋಮು ತರುತ್ತಿದ್ದೀರಿ. ಹಿಜಬ್ ಹಾಕಿದ ಹಾಗೇ ಕೇಸರಿಯನ್ನು ಹಾಕಿಸುತ್ತೇವೆ ಎಚ್ಚರ ಇರಲಿ ಎಂದು ವಿಹೆಚ್‍ಪಿ ನಾಯಕ ಬಸವರಾಜ್ ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗ ಹರ್ಷ ಹತ್ಯೆ ಖಂಡಿಸಿ ಇಂದು ಸಂಜೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ನಡೆದ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಸವರಾಜ್ ಹಿಂದೂ ಸಮಾಜ ಎಚ್ಚರವಾಗಿದೆ. ಹಿಂದೂಗಳ ಬಿಸಿ ರಕ್ತ ಕುದಿಯುತ್ತಿದೆ. ಹಿಂದೂ ಸಮಾಜದ ಮೇಲೆ ಕಣ್ಣು ಹಾಕಿದ್ರೆ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಸಿದ್ದರಾಮಯ್ಯನಿಗೂ ಕೇಸರಿ ಶಾಲು ಹಾಕಿಸುತ್ತೇವೆ. ಸಿದ್ದರಾಮಯ್ಯನವರ ಕೈಯಲ್ಲಿ ಕೇಸರಿ ಧ್ವಜ ಇಡಿಸುತ್ತೆವೆ ಇದು ಸತ್ಯ ಸತ್ಯ ಬಸವರಾಜ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ನಾವು ಹಿಜಬ್ ತೆಗೆಯೋದಿಲ್ಲ ಹೇಳಿಕೆ ಸುಳ್ಳು – ಆಧಾರ್ ಕಾರ್ಡ್‍ನಲ್ಲಿ ಹಿಜಬ್ ಧರಿಸಿಲ್ಲ

    ಇದೇ ಸಂದರ್ಭದಲ್ಲಿ ಮಾತನಾಡಿದ ವಿಹೆಚ್‍ಪಿ ನಾಯಕ ಉಲ್ಲಾಸ್ ರಾಜ್ಯವನ್ನು ಇಸ್ಲಾಮಿಕರಣ ಮಾಡಲು ಅಡ್ಡಿಯಾಗುತ್ತಿರುವುದು ಕೇಸರಿ. ಕೇಸರಿಯನ್ನು ಭೀತಿಗೊಳಿಸುವ ಹುನ್ನಾರ ಪಿಎಫ್‍ಐ ಮಾಡುತ್ತಿದೆ. ಪಿಎಫ್‍ಐ ಇಲ್ಲಿ ವರೆಗೆ ತುಂಬಾ ಹತ್ಯೆಗಳನ್ನು ಮಾಡಿದೆ. ಹೀಗಿದ್ದರೂ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಇವರು ಕೊಲೆ ಮಾಡುತ್ತಿಲ್ಲ. ಭಯೋತ್ಪಾದಕ ಕೃತ್ಯ ಮಾಡುತ್ತಾ ಇದ್ದಾರೆ. ಪಿಎಫ್‍ಐ ಹಿಂದೆ ಭಯೋತ್ಪಾದಕ ಶಕ್ತಿಯಿದೆ. ಇದು ರಾಷ್ಟ್ರಕ್ಕೆ ಮಾರಕ. ಪಿಎಫ್‍ಐ ಮುಸಲ್ಮಾನ ಸಮುದಾಯದ ಮಧ್ಯೆ ಗೊಂದಲ ಸೃಷ್ಟಿ ಮಾಡಿ ಸಿಎಎ ಕಾಯ್ದೆ ವಿರುದ್ದ ಹೋರಾಡುವ ಹಾಗೆ ಮಾಡಿದ್ದಾರೆ. ಕೋಮು-ಗಲಭೆ ಸೃಷ್ಟಿ ಮಾಡುವುದೇ ಅವರ ಉದ್ದೇಶ ಎಂದು ಹೇಳಿದರು.

    ಈ ರಾಜ್ಯದಲ್ಲಿ ಬರೀ ಹಿಂದೂಗಳ ಹತ್ಯೆ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಕೃತ್ಯ ಗೊತ್ತಿದೆಯಲ್ಲ. ಅದು ಯಾರ ಮೇಲೆ ಮಾಡಿದ್ದು ತಿಳಿದಿದೆಯಲ್ಲ. ಸುರಕ್ಷತಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಶ್ರೀನಗರದಲ್ಲಿ ಹಿಮಪಾತ – ಕೊಡಗು ಮೂಲದ ಯೋಧ ಹುತಾತ್ಮ

    ಹಿಜಬ್ ಪ್ರಕರಣ ಶುರುವಾಗಿದ್ದು ಪಿಎಫ್‍ಐಯಿಂದ. ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿಯೇ ಬರುತ್ತಿದ್ದರು ಎಂದು ಕಾಲೇಜಿನವರೇ ಹೇಳಿದ್ದಾರೆ. 6 ಹೆಣ್ಣುಮಕ್ಕಳ ತಲೆಯಲ್ಲಿ ಮತೀಯತೆ ತುಂಬಿ, ಮುಸ್ಲಿಂ ಹೆಣ್ಣು ಮಕ್ಕಳಲ್ಲಿ ಪ್ರತ್ಯೇಕತಾ ಭಾವನೆ ಮೂಡುವಂತೆ ಮಾಡಿದರು ಎಂದು ಕಿಡಿಕಾರಿದರು.

    ಹರ್ಷ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆ ಬೃಹತ್ ಪ್ರತಿಭಟನೆಗೂ ಮುನ್ನ ಒಂದು ನಿಮಿಷ ಮೌನಾಚರಣೆ ಮೂಲಕ ಹರ್ಷನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟೌನ್ ಹಾಲ್‍ನಲ್ಲಿ ಭದ್ರತೆಗೆ 250 ಕ್ಕೂ ಹೆಚ್ಚು ಪೊಲೀಸರನ್ನು ನೇಮಿಸಲಾಗಿತ್ತು. ಬೇರೆ ಬೇರೆ ಭಾಗದಿಂದ ಪ್ರತಿಭಟನಕಾರರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟ್ರಾಫಿಕ್ ಪೊಲೀಸ್ ನಿಯೋಜನೆ ಮಾಡಲಾಗಿತ್ತು.

  • ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

    ಈಶ್ವರಪ್ಪನವರಿಗೆ ಹಾಗೂ ಸುಪಾರಿ ಕೊಟ್ಟವರಿಗೆ ಏನೋ ಸಂಬಂಧ ಇದೆ: ಎಸ್‍ಡಿಪಿಐ

    – ಪೊಲಿಸರಿಗೆ ಎಸ್‍ಡಿಪಿಐ ಸವಾಲು

    ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪರಿಗೂ, ಸುಪಾರಿ ಕೊಟ್ಟವರಿಗೂ ಏನೋ ಸಂಬಂಧ ಇದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಗರಂ ಆಗಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟವರಿಗೆ ಹಾಗೂ ಈಶ್ವರಪ್ಪಗೂ ಏನೋ ಸಂಬಂಧ ಇದೆ. ಮೊದಲು ಅದರ ಬಗ್ಗೆ ತನಿಖೆ ಮಾಡಲಿ. ಈಶ್ವರಪ್ಪನವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ ಸತ್ಯ ಹೊರಗಡೆ ಬರುತ್ತೆ. ಸಂಘ ಪರಿವಾರದವರು ಈವರೆಗೆ 36 ಕೊಲೆ ಮಾಡಿದ್ದಾರೆ. 13 ಜನ ಹಿಂದೂ ಯುವಕರ ಕೊಲೆಯಲ್ಲಿ ಸಂಘ ಪರಿವಾರದ ಪಾತ್ರ ಇದೆ ಎಂದು ಆರೋಪ ಮಾಡಿದರು.

    ಶಿವಮೊಗ್ಗ ಯುವಕನ ಕೊಲೆ ಪ್ರಕರಣದ ನಂತರ ಆದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ ದೇಶದಲ್ಲಿ ಕೊಲೆ ಪ್ರಕರಣಗಳು ಹೊಸದೇನಲ್ಲ. ಮಾಧ್ಯಮದ ವರದಿಯ ಪ್ರಕಾರ ಈ ಹತ್ಯೆಯಾದ ವ್ಯಕ್ತಿ ರೌಡಿಶೀಟರ್ ಅಂತಾ ಗೊತ್ತಾಗಿದೆ. ಈ ಕೊಲೆ ನಡೆದ ಸರ್ಕಾರದ ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರ ಮಾತುಗಳು ಖಂಡನೀಯ. ಕೊಲೆ ನಡೆದ ತಕ್ಷಣ ಪೊಲೀಸರ ತನಿಖೆ ಆರಂಭವಾಗುವ ಮುನ್ನ ಸಚಿವ ಈಶ್ವರಪ್ಪ, ರಾಘವೇಂದ್ರ, ಪ್ರತಾಪ್ ಸಿಂಹ ಮುಸ್ಲಿಮರ ತಲೆಗೆ ಕಟ್ಟುತ್ತಾರೆ ಎಂದು ಆಕ್ರೊಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಇವರ ಪ್ರಚೋದನಾಕಾರಿ ಹೇಳಿಕೆಯಿಂದ ಮುಸ್ಲಿಂ ಮನೆಯ ಮೇಲೆ, ಅಂಗಡಿಯ ಮೇಲೆ, ವಾಹನದ ಮೇಲೆ ಬೆಂಕಿ ಹಚ್ಚಲಾಗಿದೆ. 143 ಸೆಕ್ಷನ್ ಇದ್ರೂ ಮೆರವಣಿಗೆ ಮಾಡಿದ್ರು. ಪೊಲೀಸರ ಕಣ್ಣಮುಂದೆಯೇ ಈಶ್ವರಪ್ಪ ಕಡೆಯ ಐನೂರು ಜನ ಹುಡುಗರು ದಾಂಧಲೆ ಮಾಡ್ತಾರೆ. ಕಫ್ರ್ಯೂ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿರೋದು ಈಶ್ವರಪ್ಪ, ಈಶ್ವರಪ್ಪ – ಎ1, ರಾಘವೇಂದ್ರ, ಗೃಹಸಚಿವರು ಇವರೆಲ್ಲ ನೇರ ಹೊಣೆ. ಎರಡು ದಿನದ ಮುಂಚೆ ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗಿತ್ತು ಎಂದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಶವಯಾತ್ರೆಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ: ಸಿದ್ದರಾಮಯ್ಯ

    ಪೊಲೀಸ್ ಇಲಾಖೆಯನ್ನು ವಿಸರ್ಜನೆ ಮಾಡಿ. ನೇರವಾಗಿ ಇವರ ದಾಂಧಲೆ ಮಾಡಿದ್ರೆ ಪೊಲೀಸರು ಯಾಕೆ ಬೇಕು. ನರಗುಂದದ ಮೇಲೆ ಮುಸ್ಲಿಂ ಯುವಕನ ಮೇಲೆ ಹಲ್ಲೆಯಾಗಿದೆ. ಸಮೀರ್ ಸಾವನ್ನಪ್ಪಿದ. ನಾಲ್ಕು ಜನ ಸಂಘಪರಿವಾರವದವರು ಜೈಲಿನಲ್ಲಿ ಇದ್ದಾರೆ. ಆದರೆ ರಾಜ್ಯದ ಮುಸ್ಲಿಮರು ಗಲಾಟೆ ಮಾಡಲಿಲ್ಲ. ಯಾರ ಮನೆಗೂ ಕಲ್ಲು ಎಸೆಯಲಿಲ್ಲ. ಈ ನಾಯಕರು ಮುಸ್ಲಿಂ ಯುವಕರ ಸಾವಿಗೆ ಸಂತಾಪ ಸೂಚಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ತಾ ಮುಂದು ನಾ ಮುಂದು ಅಂತಾ ಹರ್ಷ ಸಾವಿಗೆ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಇದೇ ಕರುಣೆ ಸಂಘ ಪರಿವಾರದವರು ಗದಗ ನರಗುಂದದಲ್ಲಿ ಮುಸ್ಲಿಂ ಯುವಕನನ್ನು ಹತ್ಯೆ ಮಾಡಿದಾಗ ಯಾಕೆ ಮಾತಾನಾಡಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧ್ವಜ ಹಿಡಿದು ಹೋದವರನ್ನ ಕೊಂದವರು ಕಾಂಗ್ರೆಸ್‍ನವರು: ಸಿ.ಟಿ ರವಿ ಕಿಡಿ

    ಮಿಸ್ಟರ್ ಪ್ರತಾಪ್ ಸಿಂಹ ನಾಲಿಗೆ ಬಿಗಿ ಹಿಡಿದು ಮಾತಾನಾಡಿ. ಕರ್ನಾಟಕದಲ್ಲಿ ಏನೇ ಆದ್ರೂ ಈ ಪ್ರತಾಪ್ ಸಿಂಹ, ನಳಿನ್ ಎಸ್‍ಡಿಪಿಐ ಮೇಲೆ ಎತ್ತಾಕಿ ಬಿಡ್ತಾರೆ. ನೀವೊಬ್ಬ ಜವಾಬ್ದಾರಿ ಸಂಸದಾರ..!? ಸಂಘಪರಿವಾರವದವರು ಕೊಲೆ ಮಾಡಿದ್ರಲ್ಲ, ಆಗ ಭಜರಂಗದಳ, ಶ್ರೀರಾಮ ಸೇನೆ, ಆರ್‍ಎಸ್‍ಎಸ್ ನಿಷೇಧಕ್ಕೆ ಒತ್ತಾಯ ಮಾಡಿಲ್ಲ. ಯಾಕೆ ಈ ದ್ವಿಮುಖ ನೀತಿ. ನಿಮಗೆ ಕೊಡಗಿನಲ್ಲಿ ಹಿಂದೂ ಯುವಕ ಕಾರ್ತಿಕ್ ಮೇಲೆ ಕೇಸರಿ ಶಾಲು ಹಾಕಿಲ್ಲ ಅಂತಾ ಹಿಂದೂ ಯುವಕರೇ ಚಾಕು ಹಾಕಿದ್ರು. ಆಗ ಯಾಕೇ ಇವರು ಮಾತಾನಾಡಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ – ಈಶ್ವರಪ್ಪ ಹೇಳಿಕೆಗೆ ಜೆ.ಪಿ ನಡ್ಡಾ ಛೀಮಾರಿ

    ನೀವು ಎಸ್‍ಡಿಪಿಐಗೆ ಪಾಠ ಮಾಡಬೇಕಾಗಿಲ್ಲ. ನಾವು ಪ್ರಬುದ್ಧ ರಾಜಕಾರಣದ ಮೇಲೆ ನಂಬಿಕೆ ಇಟ್ಟವರು. ಕ್ಷುಲ್ಲಕ ಕಾರಣಕ್ಕೆ ರಾಜಕಾರಣ ಮಾಡಲ್ಲ. ಶಿವಮೊಗ್ಗ ಪ್ರಕ್ಷುಬ್ಧ ವಾತಾವರಣಕ್ಕೆ ಈಶ್ವರಪ್ಪ, ರಾಘವೇಂದ್ರ ಗೃಹಸಚಿವರು ಕಾರಣ. ಖಾಕಿ ಧರ್ಮಕ್ಕೆ ಪೊಲೀಸರು ಮರ್ಯಾದೆ ಕೊಟ್ರೆ ಇವರ ಮೇಲೆ ಕೇಸ್ ಹಾಕಿ ಎಂದು ಗರಂ ಆದರು. ಇದೇ ವೇಳೆ ಎಸ್‍ಡಿಪಿಐ ಬ್ಯಾನ್ ಗೆ ಒತ್ತಾಯ ಕೇಳಿಬರುತ್ತಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಇದು ಅಲ್ಪಸಂಖ್ಯಾತ ವಿರೋಧಿ ನೀತಿ. ಇವರ ಷಡ್ಯಂತ್ರಗಳನ್ನು ನಾವು ಬಯಲಿಗೆ ಎಳೆಯುತ್ತೇವೆ. ನಾವು ಸೈದ್ಧಾಂತಿಕ ಹೋರಾಟ ಮಾಡುತ್ತಿದ್ದೇವೆ. ಇದಕ್ಕಾಗಿ ಬ್ಯಾನ್ ಮಾತು ಕೇಳಿಬರುತ್ತಿದೆ ಎಂದರು.

    ಹಿಜಾಬ್‍ಗೂ ಈ ಕೊಲೆಗೂ ನೇರ ಲಿಂಕ್ ಈ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲಾರೆ. ತನಿಖೆ ನಡೆಯುತ್ತಿದೆ, ನೈಜ್ಯ ಕಾರಣ ಬರಲಿ. ನಾಯಕರ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸೋದು ಅಲ್ಲ. ಹಿಜಬ್ ವಿಚಾರದಲ್ಲಿ ಸರ್ಕಾರ ವೈಫಲ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳೋಕೆ ಈ ರೀತಿಯ ಕೆಲಸ ಮಾಡಿರಬಹುದು. ಪೊಲೀಸರಿಗೆ ಫ್ರೀ ಹ್ಯಾಂಡ್ ಬಿಡಲಿ. ಮೊದಲು ಸಚಿವರು ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೃತ ಹರ್ಷ ಕುಟುಂಬಕ್ಕೆ 6 ಲಕ್ಷ ರೂ. ಕೊಟ್ಟು ಬರುತ್ತೇನೆ: ರೇಣುಕಾಚಾರ್ಯ

  • ಮುಸ್ಲಿಮರೇ ಹರ್ಷನನ್ನು ಹೊಡೆದಿರೋದು ಸಾಬೀತಾಗಿದೆ: ಈಶ್ವರಪ್ಪ

    ಮುಸ್ಲಿಮರೇ ಹರ್ಷನನ್ನು ಹೊಡೆದಿರೋದು ಸಾಬೀತಾಗಿದೆ: ಈಶ್ವರಪ್ಪ

    ಬೆಂಗಳೂರು: ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮುಸ್ಲಿಮರೇ ಹೊಡೆದಿರುವುದು ಸಾಬೀತಾಗಿದೆ. ಈಗಲಾದರೂ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ನನ್ನ ಮಾತನ್ನು ಒಪ್ಪಿಕೊಳ್ಳಲಿ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಮತ್ತೆ ಹೇಳಿಕೆಯೊಂದನ್ನು ನೀಡಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷ ಕೊಲೆ ಮಾಡಿರುವವರು ಮುಸ್ಲಿಂ ಗೂಂಡಾಗಳು ಅಂತ ನಾನು ಹೇಳಿದ್ದೆ. ನಾನು ನಿನ್ನೆ ಎಸ್ ಪಿ ಬಳಿ ಮಾಹಿತಿ ಪಡೆದು ಹೇಳಿಕೆ ಕೊಟ್ಟಿದ್ದೆ. ಅರೆಸ್ಟ್ ಆಗಿರೋರು ಎಲ್ಲರೂ ಮುಸ್ಲಿಮರೇ ಆಗಿದ್ದಾರೆ ಎಂದು ನಿನ್ನೆ ನೀಡಿರುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

    ಈ ಪ್ರಕರಣದ ತನಿಖೆ ಎನ್‍ಐಎಯಿಂದ ಆಗಬೇಕು. ಎನ್‍ಐಎ ತನಿಖೆ ಆದರೆ ಎಲ್ಲಾ ಸತ್ಯ ಹೊರ ಬರುತ್ತೆ. ಮುಸ್ಲಿಂ ಅವ್ರೆ ಹೊಡೆದಿರೋದು ಸಾಬೀತಾಗಿದ್ದು, ಈಗಲಾದ್ರು ಹರಿಪ್ರಸಾದ್ ಒಪ್ಪಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ

    ಈಗಾಗಲೇ ಹಲವರ ಬಂಧನ ಆಗಿದೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆ ಆಗಿತ್ತು. ಗೋಹತ್ಯೆ ತಡೆಗೆ ಮುಂದಾದವರನ್ನ ಕೊಲೆ ಮಾಡಲಾಗಿತ್ತು. ಈಗ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸ್ರು ತರಲು ಕಗ್ಗೊಲೆ ಆಗ್ತಿದೆ. ಉದ್ದೇಶ ಪೂರ್ವಕವಾಗಿ ಇಂತಹ ಕೊಲೆ ಆಗ್ತಿದೆ. ಹೀಗಾಗಿ ನಾನು ಎನ್‍ಐಎ ತನಿಖೆಗೆ ಒತ್ತಾಯ ಮಾಡ್ತೀನಿ. ಸಿಎಂ ಬಳಿ ಎನ್‍ಐಎ ತನಿಖೆಗೆ ಮನವಿ ಮಾಡ್ತಿನಿ. ತನಿಖೆಯಿಂದ ಯಾರ್ ಯಾರ್ ಇದರ ಹಿಂದೆ ಇದ್ದಾರೆ ಅಂತ ಗೊತ್ತಾಗುತ್ತೆ ಎಂದು ಈಶ್ವರಪ್ಪ ಒತ್ತಾಯಿಸಿದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

  • ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಬೆಂಗಳೂರು: ಶಿವೆಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತನನ್ನು ವಿದೇಶಿ ಪತ್ರಕರ್ತನೊಬ್ಬ ಟೆರರಿಸ್ಟ್ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಣೆ ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಸಿಜೆ ವಾರ್ಲೆನ್ ಎಂಬಾತ ತನ್ನ ಟ್ವಿಟ್ಟರ್ ಖಾತೆಯಲ್ಲಿ, ನವೆಂಬರ್ ತಿಂಗಳಲ್ಲಿ ತ್ರಿಪುರಾದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿರುವ ಹಿಂದೂ ಉಗ್ರಗಾಮಿ ಸಂಘಟನೆಯಾಗಿರುವ ಭಜರಂಗದಳಕ್ಕೆ ಸೇರಿದ ಭಯೋತ್ಪಾದಕನನ್ನು ಭಾನುವಾರ ರಾತ್ರಿ ಕೊಲ್ಲಲಾಗಿದೆ ಎಂದು ಬರೆದುಕೊಂಡಿದ್ದನು.

    ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಸೂದ್, ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ. ಹತ್ಯೆಯಾದ ವ್ಯಕ್ತಿಗೆ ಭಯೋತ್ಪಾದನೆ ಅಥವಾ ತ್ರಿಪುರ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ. ಈ ವ್ಯಕ್ತಿಯ ಸಾವಿಗೂ, ಭಯೋತ್ಪಾದನೆಗೂ ಹಾಗೂ ತ್ರಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸುವ ಮೂಲಕ ವಾರ್ಲೆನ್ ಆರೋಪವನ್ನು ಡಿಜಿಪಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    https://twitter.com/DgpKarnataka/status/1495715992361926658

    ಭಾನುವಾರ ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕಫ್ರ್ಯೂ ಜಾರಿ ಮಾಡಲಾಗಿದೆ.

  • ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದ್ದು, ಇದೀಗ ಪೊಳೀಸರ ಭದ್ರಕೋಟೆಯಾಗಿದೆ.

    ಹರ್ಷನ ಹತ್ಯೆ ಬೆನ್ನಲ್ಲೇ ಖಾಕಿ ಫುಲ್ ಅಲರ್ಟ್ ಆಗಿದೆ. ಶಿವಮೊಗ್ಗ ನಗರದಾದ್ಯಂತ ನಾಳೆ ಬೆಳಗ್ಗೆ 6 ಗಂಟೆವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಮುನ್ನೆಚ್ಚರಿಕೆಗಾಗಿ ಶಾಲೆ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ನಾಳೆ ಮುಂಜಾನೆ 6 ಗಂಟೆಯವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕರ್ಫ್ಯೂ ಜಾರಿ ನಡುವೆಯೂ ಮನೆ ಮುಂದೆ ನಿಲ್ಲಿಸಿದ್ದ ಒಂದು ಆಟೋ ಹಾಗು ಒಂದು ಬೈಕ್ ಗೆ ಬೆಂಕಿ ಹಚ್ಚಿದ ಘಟನೆ ಶಿವಮೊಗ್ಗದ ತುಂಗಾನಗರದಲ್ಲಿ ನಡೆದಿದೆ.

    ನಡೆದಿದ್ದೇನು..?
    ಭಾನುವಾರ ರಾತ್ರಿ ಹರ್ಷ ಕೊಲೆ ನಡೆದಿತ್ತು. ಮೃತ ಯುವಕನ ಅಂತಿಮ ಮೆರವಣಿಗೆ ಸಾಗುತ್ತಿದ್ದ ಉದ್ರಿಕ್ತರಿಂದ ಕಟ್ಟಡ, ಅಂಗಡಿಗಳಿಗೆ ಕಲ್ಲುತೂರಾಟ ನಡೆದಿದೆ. ಮೆರವಣಿಗೆ ವೇಳೆ ಮುಸ್ಲಿಂ ಪತಾಕೆ ಹಾರಿಸಿದ್ದರಿಂದ ಯುವಕರು ಪ್ರಚೋದನೆ ಒಳಗಾಗಿ ಮೆರವಣಿಗೆ ವೇಳೆಯೇ ಹಿಂಸೆ, ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ಟ್ರೆಕ್ಕಿಂಗ್ ಹೋಗಿ ಅಪಾಯಕ್ಕೆ ಸಿಲುಕಿದ್ದ ಯುವಕನ ವಿರುದ್ಧ ಕೇಸ್ ದಾಖಲು!

    ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್ ರಸ್ತೆಯಲ್ಲಿ ಪರಸ್ಪರ ಕಲ್ಲು ತೂರಾಟ ನಡೆದಿದ್ದು, ಉದ್ರಿಕ್ತರನ್ನು ಚದುರಿಸಲು ಆಶ್ರುವಾಯು ಪ್ರಯೋಗ ನಡೆಯಿತು. ಆಜಾದ್ ನಗರದಲ್ಲಿ ಬೈಕ್, ಕಾರುಗಳು ಧ್ವಂಸಗೊಂಡಿದ್ದು, ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಅಂಗಡಿಯತ್ತ ಉದ್ರಿಕ್ತರು ಕಲ್ಲು ತೂರಿದ್ದರಿಂದ ಗಾಜುಗಳು ಪುಡಿ ಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಬೈಕ್ ಹೊತ್ತಿ ಉರಿದಿದೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

    ಜಲ್ಲಿಕಲ್ಲು ತುಂಬಿದ ಲಾರಿಯಿಂದ ಉದ್ರಿಕ್ತರು ಕಲ್ಲುಗಳನ್ನು ಎಸೆದಿದ್ದಾರೆ. ಮನೆಗೆ ನುಗ್ಗಿ ಅಟ್ಟಹಾಸ, ಫ್ರಿಡ್ಜ್, ಬೀರು ಜಖಂಗೊಂಡಿದ್ದು ಕಾರುಗಳ ಗಾಜುಗಳು ಪುಡಿಪುಡಿಯಾಗಿದೆ. ಪೊಲೀಸರ ಮುಂದೆಯೇ ದೊಣ್ಣೆ ಪ್ರದರ್ಶನ ನೀಡಿದ್ದು ಮಚ್ಚು, ಲಾಂಗ್ ಹಿಡಿದು ಕೊಟ್ಟಿದ್ದಾರೆ. ಹಣ್ಣಿನ ತಳ್ಳುಗಾಡಿ ಧ್ವಂಸವಾಗಿದ್ದು ಕಲ್ಲುತೂರಾಟದ ವೇಳೆ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

    ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

    ಬೆಂಗಳೂರು: ಶಿವಮೊಗ್ಗದಲ್ಲಿ ಯುವಕನ ಕೊಲೆ ಮಾಡಿಸಿರುವುದೇ ಕೆ.ಎಸ್ ಈಶ್ವರಪ್ಪ. ತನ್ನ ಕುರ್ಚಿ ಉಳಿಸಿಕೊಳ್ಳಲು ಈ ಕೊಲೆ ಮಾಡಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.

    ಪರಿಷತ್ ನಲ್ಲಿ ಇಂದು ಮಾತನಾಡಿದ ಅವರು, ಶಿವಮೊಗ್ಗ ಕೊಲೆ ಪ್ರಕರಣ ಸಂಬಂಧ ಮಾತನಾಡುತ್ತಾ ಪರೋಕ್ಷವಾಗಿ ಈಶ್ವರಪ್ಪನವರೇ ಈ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿದರು. ತಮ್ಮ ಸ್ಥಾನ ಉಳಿಸಿಕೊಳ್ಳಲು ಈಶ್ವರಪ್ಪ ಕೊಲೆ ಮಾಡಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಇದನ್ನೂ ಓದಿ: ಕೋಮು ಬಣ್ಣ ಕಟ್ಟಿ ಯಾರನ್ನೋ ಖಳನಾಯಕ ಮಾಡುವುದು ಈಶ್ವರಪ್ಪ, ಬಿಜೆಪಿಗೆ ಹೊಸದಲ್ಲ: ಬಿ.ಕೆ ಹರಿಪ್ರಸಾದ್

    ನಿನ್ನೆ ಶಿವಮೊಗ್ಗದಲ್ಲಿ ನಿನ್ನೆ ಒಂದು ಘಟನೆ ಆಗಿದೆ. ಕೊಲೆ ಆದ ಯುವಕನ ತಾಯಿ, ತನ್ನ ಮಗ ಎರಡು ವರ್ಷಗಳಿಂದ ಭಜರಂಗದಳದಲ್ಲಿ ಇಲ್ಲ ಅಂತ ಹೇಳಿದ್ದಾರೆ. ಇತ್ತ ಈಶ್ವರಪ್ಪ ಇದು ಮುಸ್ಲಿಂ ಗೂಂಡಾಗಳಿಂದ ಕೊಲೆ ಆಗಿದೆ ಅಂತಾರೆ. ಗೃಹ ಸಚಿವರು ಇದ್ದಾಗ ಇವರು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಈ ಕೊಲೆಯನ್ನು ಈಶ್ವರಪ್ಪನೇ ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹರ್ಷ ಮೃತದೇಹ ಮೆರವಣಿಗೆ ವೇಳೆ ಕೇಸರಿ ಧ್ವಜ ಹಿಡಿದು ಕಲ್ಲು ತೂರಾಟ

    ಈಶ್ವರಪ್ಪ ಪರೋಕ್ಷವಾಗಿ ಈ ಕೊಲೆ ಮಾಡಿಸಿದ್ದಾರೆ. ಪೊಲೀಸರ ತನಿಖೆ ಮುನ್ನ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳುತ್ತಾ ಪೆರೆಸ್ ಮೆಸ್ತಾ ವಿಷಯವನ್ನು ಹರಿಪ್ರಸಾದ್ ಪ್ರಸ್ತಾಪ ಮಾಡಿದರು. ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೆದಿದ್ದು, ಹರಿಪ್ರಸಾದ್ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ