Tag: ಹರ್ಷ್ ಲಿಂಬಾಚಿಯಾ

  • ಮಗನನ್ನು ಪರಿಚಯಿಸಿದ ಕಾಮಿಡಿ ಕ್ವೀನ್ ಭಾರತಿ ಸಿಂಗ್ ದಂಪತಿ

    ಮಗನನ್ನು ಪರಿಚಯಿಸಿದ ಕಾಮಿಡಿ ಕ್ವೀನ್ ಭಾರತಿ ಸಿಂಗ್ ದಂಪತಿ

    ಕಿರುತೆರೆಯ ಖ್ಯಾತ ಹಾಸ್ಯ ನಟಿ ಭಾರತಿ ಸಿಂಗ್ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದರು. ಏಪ್ರಿಲ್‌ನಲ್ಲಿ ಗಂಡು ಮಗುವಿಗೆ ತಾಯಿಯಾದ ನಟಿ ಭಾರತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ದಂಪತಿ ಈಗ ಸಾಮಾಜಿಕ ಜಾಲತಾಣದ ಮೂಲಕ ಮುದ್ದು ಮಗನನ್ನು ಪರಚಯಿಸಿದ್ದಾರೆ.

    ಖಾಸಗಿ ಶೋವೊಂದರಲ್ಲಿ ಭಾರತಿ ಮತ್ತು ಹರ್ಷ್ ಪರಿಚಯವಾಗಿ ನಂತರ ಪ್ರೀತಿಯಲ್ಲಿದ್ದ ಈ ಜೋಡಿ 7 ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈಗ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಏಪ್ರಿಲ್‌ನಲ್ಲಿ ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈಗ ಚೆಂದದ ಫೋಟೋಶೂಟ್ ಮೂಲಕ ಮಗನನ್ನು ಈ ಜೋಡಿ ಪರಿಚಯಿಸಿದ್ದಾರೆ. ಇದನ್ನೂ ಓದಿ:ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ

     

    View this post on Instagram

     

    A post shared by Bharti Singh (@bharti.laughterqueen)

    ಅಂದಹಾಗೆ ಭಾರತಿ ಸಿಂಗ್ ದಂಪತಿಯ ಮುದ್ದಾದ ಮಗುವಿಗೆ ಲಕ್ಷ್ ಎಂದು ನಾಮಕರಣ ಮಾಡಿದ್ದಾರೆ. ಸದ್ಯ ಮಗ ಲಕ್ಷ್ ಫೋಟೋಗೆ ಅಭಿಮಾನಿಗಳು ಮತ್ತು ಸಿನಿರಂಗದ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ಈ ಫೋಟೋಗಳ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜೈಲಿನಿಂದ ಬಂದ ಬಳಿಕ ಭಾರತಿ ಸಿಂಗ್ ಮೊದಲ ಪ್ರತಿಕ್ರಿಯೆ

    ಜೈಲಿನಿಂದ ಬಂದ ಬಳಿಕ ಭಾರತಿ ಸಿಂಗ್ ಮೊದಲ ಪ್ರತಿಕ್ರಿಯೆ

    ಮುಂಬೈ: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಏಳು ದಿನಗಳ ನಂತರ ಹಾಸ್ಯ ಕಲಾವಿದೆ ಭಾರತಿ ಸಿಂಗ್ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾರನ್ನ ನವೆಂಬರ್ 21ರಂದು ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಬಂಧಿಸಿತ್ತು. ನವೆಂಬರ್ 23ರಂದು ದಂಪತಿಗೆ ಜಾಮೀನು ಸಿಕ್ಕಿತ್ತು.

    ಇನ್‍ಸ್ಟಾಗ್ರಾಂನಲ್ಲಿ ಪತಿ ಹರ್ಷ್ ಜೊತೆಗಿನ ಸುಂದರ ಫೋಟೋಗಳನ್ನ ಹಂಚಿಕೊಂಡಿರುವ ಭಾರತಿ ಸಿಂಗ್ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. ಕೆಲವೊಮ್ಮೆ ನಮ್ಮಲ್ಲಿರುವ ಆತ್ಮಸ್ಥೈರ್ಯವನ್ನ ಪ್ರದರ್ಶಿಸಲು ಕೆಲ ಪರೀಕ್ಷೆಗಳು ಎದುರಾಗುತ್ತವೆ. ಈ ಪರೀಕ್ಷೆಗಳಲ್ಲಿ ನಮ್ಮ ನ್ಯೂನ್ಯತೆಗಳನ್ನ ಪಕ್ಕಕ್ಕಿರಿಸಿ ಹೋರಾಡಬೇಕಾಗುತ್ತದೆ. ನನ್ನ ಶಕ್ತಿ, ಆತ್ಮಸ್ಥೈರ್ಯ, ಬೆನ್ನಲುಬು, ಬೆಸ್ಟ್ ಫ್ರೆಂಡ್ ಎಲ್ಲವೂ ಒನ್ ಆ್ಯಂಡ್ ಓನ್ಲಿ ಪತಿ ಹರ್ಷ್ ಲಿಂಬಾಚಿಯಾ. ಐ ಲವ್ ಯು ಎಂದು ಬರೆದು ಪತಿಯ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸಿದ್ದಾರೆ.

    ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ಬಳಿಕ ಭಾರತಿಯನ್ನ ಕಪಿಲ್ ಶರ್ಮಾ ಶೋನಿಂದ ಕೈ ಬಿಡಲಾಗುವುದು ಎಂದು ವರದಿಯಾಗುತ್ತಿದ್ದು, ಆದ್ರೆ ಈ ಕುರಿತು ವಾಹಿನಿ ಸ್ಪಷ್ಟನೆ ನೀಡಿಲ್ಲ. ಈ ವದಂತಿಗಳ ಬೆನ್ನಲ್ಲೇ ಭಾರತಿ ಸಿಂಗ್ ಬೆಂಬಲಕ್ಕೆ ನಿಂತಿರುವ ಕೃಷ್ಣ ಅಭಿಷೇಕ್ ಆಕೆಗೆ ಎರಡನೇ ಅವಕಾಶ ನೀಡಬೇಕು. ಕಪಿಲ್ ಮತ್ತು ನಾನು ಸದಾ ಭಾರತಿ ಸಿಂಗ್ ಜೊತೆಯಲ್ಲಿರುತ್ತೇವೆ. ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾರದು ಎಂಬ ನಮಗಿದೆ ಎಂದು ಹೇಳಿದ್ದಾರೆ.

  • ಡ್ರಗ್ಸ್ ಕೇಸ್ – ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾಗೆ ಜಾಮೀನು

    ಡ್ರಗ್ಸ್ ಕೇಸ್ – ಭಾರತಿ ಸಿಂಗ್, ಹರ್ಷ್ ಲಿಂಬಾಚಿಯಾಗೆ ಜಾಮೀನು

    ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    ಶನಿವಾರ ಭಾರತಿ ಸಿಂಗ್ ನಿವಾಸ ಮತ್ತು ಕಚೇರಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿ ದಂಪತಿಯನ್ನು ಬಂಧಿಸಿದ್ದರು. ಭಾನುವಾರ ಇಬ್ಬರನ್ನ ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

    ಇದೇ ವೇಳೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮತ್ತಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ದಂಪತಿಗೆ ಡಿಸೆಂಬರ್ 4ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಭಾರತಿ ಕಲ್ಯಾಣದ ಜೈಲಿಗೂ ಮತ್ತು ಹರ್ಷ್ ಟಲೇಜಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದಾದ ಬಳಿಕ ದಂಪತಿ ಕಿಲಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಕಿಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ಅರ್ಜಿ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ದಂಪತಿಗೆ ಷರತ್ತು ಬದ್ಧ ಜಾಮೀನು ನೀಡಿದೆ.

    ಶನಿವಾರ ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿತಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು.

    ನವೆಂಬರ್ 21ರಂದು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಯುವಕನಿಂದ 40 ಗ್ರಾಂ ಗಾಂಜಾ ಮತ್ತು ಇನ್ನಿತರ ನಶೆ ಪದಾರ್ಥಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೇ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿಒವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.

  • ಡ್ರಗ್ಸ್ ಸೇವನೆ ಒಪ್ಪಿಕೊಂಡ ಭಾರತಿ ಸಿಂಗ್, ಹರ್ಷ್ – 86.5 ಗ್ರಾಂ ಗಾಂಜಾ ವಶಕ್ಕೆ

    ಡ್ರಗ್ಸ್ ಸೇವನೆ ಒಪ್ಪಿಕೊಂಡ ಭಾರತಿ ಸಿಂಗ್, ಹರ್ಷ್ – 86.5 ಗ್ರಾಂ ಗಾಂಜಾ ವಶಕ್ಕೆ

    ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋನಿಂದ ಬಂಧನಕ್ಕೊಳಗಾಗಿರುವ ಖ್ಯಾತ ಹಾಸ್ಯ ಕಲಾವಿದೆ, ನಿರೂಪಕಿ ಭಾರತಿ ಸಿಂಗ್ ಮತ್ತು ಪತಿ ಹರ್ಷ ಲಿಂಬಾಚಿಯಾ ಡ್ರಗ್ಸ್ ಸೇವನೆ ಮಾಡುತ್ತಿರೋದರ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

    ಶನಿವಾರ ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿತಯ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್‍ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು. ಇಂದು ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

    ನವೆಂಬರ್ 21ರಂದು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಯುವಕನಿಂದ 40 ಗ್ರಾಂ ಗಾಂಜಾ ಮತ್ತು ಇನ್ನಿತರ ನಶೆ ಪದಾರ್ಥಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೇ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿಒವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.