Tag: ಹರ್ಷ್ ಲಿಂಬಾಚಿ

  • ಡ್ರಗ್ಸ್ ಪತ್ತೆ- ಭಾರತಿ ಸಿಂಗ್, ಪತಿ ಹರ್ಷ್ ಎನ್‍ಸಿಬಿ ವಶಕ್ಕೆ

    ಡ್ರಗ್ಸ್ ಪತ್ತೆ- ಭಾರತಿ ಸಿಂಗ್, ಪತಿ ಹರ್ಷ್ ಎನ್‍ಸಿಬಿ ವಶಕ್ಕೆ

    ಮುಂಬೈ: ಇಂದು ಬೆಳಗ್ಗೆ ಹಾಸ್ಯ ಕಲಾವಿದೆ ಭಾರತಿ ಸಿಂಗ್ ನಿವಾಸದ ಮೇಲೆ ಎನ್‍ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ನಡೆಸಿತ್ತು. ಹೆಚ್ಚಿನ ವಿಚಾರಣೆ ಹಿನ್ನೆಲೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾನನ್ನು ವಶಕ್ಕೆ ಪಡೆದು ಎನ್‍ಸಿಬಿ ಕಚೇರಿಗೆ ಕರೆತರಲಾಗಿದೆ.

    ದಾಳಿ ವೇಳೆ ಭಾರತಿ ನಿವಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಎನ್‍ಸಿಬಿ ಅಧಿಕಾರಿಗಳು ಹರ್ಷನನ್ನು ತಮ್ಮ ವಾಹನದಲ್ಲಿ ಕರೆ ತಂದ್ರೆ, ಹಿಂದೆ ತಮ್ಮ ಕಾರಿನಲ್ಲಿ ಭಾರತಿ ಎನ್‍ಸಿಬಿ ಕಚೇರಿಗೆ ಆಗಮಿಸಿದರು. ಕಚೇರಿ ಪ್ರವೇಶಿಸುವ ವೇಳೆ ತಮ್ಮನ್ನು ಕೇವಲ ವಿಚಾರಣೆಗಾಗಿ ಕರೆ ತರಲಾಗಿದೆ ಎಂಬ ಸಂದೇಶವನ್ನು ಸನ್ನೆ ಮೂಲಕ ಮಾಧ್ಯಮಗಳಿಗೆ ರವಾನಿಸಿದರು.

    ಎನ್‍ಸಿಬಿ ವಿಚಾರಣೆ ಹಿನ್ನೆಲೆ ಭಾರತಿ ಮತ್ತು ಅವರ ಪತಿಯನ್ನ ಕಚೇರಿಗೆ ಕರೆ ತರಲಾಗಿದೆ ಎಂದು ಎನ್‍ಸಿಬಿ ಜೋನಲ್ ಡೈರೆಕ್ಟರ್ ಸಮೀರ್ ವಾಂಖೇಡ್ ಹೇಳಿದ್ದಾರೆ. ಡ್ರಗ್ ಪೆಡ್ಲರ್ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದರಿಂದ ದಾಳಿ ನಡೆದಿದೆ ಎನ್ನಲಾಗಿದೆ.