Tag: ಹರ್ಮನ್ ಪ್ರೀತ್‌ಕೌರ್

  • ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಬಲಿಷ್ಠ ಮುಂಬೈಗೆ ಮೊದಲ ಸೋಲು – ಯುಪಿ ವಾರಿಯರ್ಸ್‌ಗೆ 5 ವಿಕೆಟ್‌ಗಳ ರೋಚಕ ಜಯ

    ಮುಂಬೈ: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ಮುಂಬೈ ಇಂಡಿಯನ್ಸ್‌ಗೆ (Mumbai Indians) ಅಂತೂ ಯುಪಿ ವಾರಿಯರ್ಸ್‌ ತಂಡ ಸೋಲಿನ ರುಚಿ ತೋರಿಸಿದೆ. ಸೋಫಿ ಎಕ್ಲಿಸ್ಟೋನ್‌ ಮಿಂಚಿನ ಬೌಲಿಂಗ್‌ ಹಾಗೂ ಮೆಕ್‌ಗ್ರಾತ್‌, ಹ್ಯಾರಿಸ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಯುಪಿ ವಾರಿಯರ್ಸ್‌ (UP Warriorz) 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    ಶನಿವಾರ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹರ್ಮನ್‌ ಪ್ರೀತ್‌ ಕೌರ್‌ ಪಡೆ ನಿಗದಿತ ಓವರ್‌ಗಳಲ್ಲಿ 127 ರನ್‌ ಗಳಿಗೆ ಸರ್ವಪತನ ಕಂಡಿತು. 128 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್‌ 19.3 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 129 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ರಾಮ್‌ ಚರಣ್‌ಗೆ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುವಾಸೆಯಂತೆ

    ಚೇಸಿಂಗ್‌ ಆರಂಭಿಸಿದ ನಾಯಕಿ ಅಲಿಸ್ಸಾ ಹೀಲಿ (Alyssa Healy) ಹಾಗೂ ದೇವಿಕಾ ವೈದ್ಯ ಬೇಗನೆ ಔಟಾಗಿ ತಂಡಕ್ಕೆ ಆಘಾತ ನೀಡಿದರು. ದೇವಿಕಾ 1 ರನ್‌, ಹೀಲಿ 8 ರನ್‌ ಗಳಿಸಿದರೆ, ಈ ಬೆನ್ನಲ್ಲೇ ಕಿರಣ್ ನವಗಿರೆ 12 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ತಾಲಿಯಾ ಮೆಕ್‌ಗ್ರಾತ್‌ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ ಭರ್ಜರಿ ಬ್ಯಾಟಿಂಗ್‌ ಮಾಡುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು.

    ಮೆಕ್‌ಗ್ರಾತ್‌ 25 ಎಸೆತಗಳಲ್ಲಿ 38 ರನ್‌ (6 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ಹ್ಯಾರಿಸ್‌ 28 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 39 ರನ್‌ ಬಾರಿಸಿ ತಂಡಕ್ಕೆ ನೆರವಾದರು. ಕೊನೆಯಲ್ಲಿ ದೀಪ್ತಿ ಶರ್ಮಾ 13 ರನ್‌, ಸೋಫಿ ಎಕ್ಲಿಸ್ಟೋನ್‌ ಅಜೇಯ 16 ರನ್‌ ಗಳಿಸಿ ಜಯ ದಾಖಲಿಸಿದರು.

    ಮುಂಬೈ ಪರ ಅಮೇಲಿ ಕೇರ್‌ 2 ವಿಕೆಟ್‌ ಪಡೆದರೆ, ನಾಟ್‌ ಸ್ಕಿವರ್‌ ಬ್ರಂಟ್‌, ಹೇಲಿ ಮ್ಯಾಥಿವ್ಸ್‌, ಇಸ್ಸಿವಾಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: RCB ತಂಡಕ್ಕೆ ಆನೆ ಬಲ – ವಿಲ್‌ ಜಾಕ್ಸ್‌ ಬದಲಿಗೆ ಕಿವೀಸ್‌ ಸ್ಟಾರ್‌ ಆಲ್‌ರೌಂಡರ್‌ ಸೇರ್ಪಡೆ

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌, ಯುಪಿ ವಾರಿಯರ್ಸ್‌ ಬೌಲರ್‌ಗಳ ದಾಳಿಗೆ ತತ್ತರಿಸಿತು. ಹೇಲಿ ಮ್ಯಾಥಿವ್ಸ್‌ (Hayley Matthews) 30 ಎಸೆತಗಳಲ್ಲಿ 35 ರನ್‌ (1 ಬೌಂಡರಿ, 3 ಸಿಕ್ಸರ್‌), ಇಸ್ಸಿ ವಾಂಗ್‌ 19 ಎಸೆತಗಳಲ್ಲಿ ಸ್ಫೋಟಕ 32 ರನ್‌ (4 ಬೌಂಡರಿ, 1 ಸಿಕ್ಸರ್‌) ಹಾಗೂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur) 22 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 25 ರನ್‌ ಗಳಿಸಿದರೆ, ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದರು. ಅಂತಿಮವಾಗಿ ಮುಂಬೈ 127 ರನ್‌ ಗಳಿಗೆ ಓವರ್‌ ಸಮಾಪ್ತಿಯೊಂದಿಗೆ ಆಲೌಟ್‌ ಆಯಿತು.

    ಯುಪಿ ವಾರಿಯರ್ಸ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಸೋಫಿ ಎಕ್ಲಿಸ್ಟೋನ್‌ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 3 ವಿಕೆಟ್‌ ಕಿತ್ತರು. ದೀಪ್ತಿ ಶರ್ಮಾ ಹಾಗೂ ರಾಜೇಶ್ವರಿ ಗಾಯಕ್ವಾಡ್‌ ತಲಾ 2 ವಿಕೆಟ್‌ ಪಡೆದರೆ, ಅಂಜಲಿ ಸರ್ವಾನಿ 1 ವಿಕೆಟ್‌ ಪಡೆದು ಮಿಂಚಿದರು.

  • WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು

    ಮುಂಬೈ: ಇದೇ ಮೊದಲ ಬಾರಿಗೆ ನಡೆಯುತ್ತಿರುವ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿ ವೀಕ್ಷಿಸುವವರಿಗೆ ಬಿಸಿಸಿಐ (BCCI) ಬಂಪರ್ ಆಫರ್ ಕೊಟ್ಟಿದೆ. ಮಹಿಳಾ ಕ್ರಿಕೆಟ್ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಸ್ಟೇಡಿಯಂಗಳಲ್ಲಿ ಹೆಚ್ಚಿನ ಜನ ಸೇರುವಂತೆ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್ ಮಾಡಿದೆ.

    ಮಾರ್ಚ್ 4 ರಿಂದ ಮಾರ್ಚ್ 26ರ ವರೆಗೆ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಗೆ ಬರುವ ಎಲ್ಲ ಮಹಿಳೆಯರು (Womens) ಹಾಗೂ ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    WPL 2023 2

    ಚೊಚ್ಚಲ WPL ಆವೃತ್ತಿಯಲ್ಲಿ ಪ್ಲೆ ಆಫ್, ಫೈನಲ್ ಪಂದ್ಯಗಳು ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಅದಾನಿ ನೇತೃತ್ವದ ಗುಜರಾತ್ ಜೈಂಟ್ಸ್ (Gujarat Giants)  ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಸೆಣಸಲಿವೆ. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

    WPL 2023

    ಈ ಪಂದ್ಯಗಳನ್ನು ವೀಕ್ಷಿಸಲು ಮಹಿಳೆಯರು ಮತ್ತು ಹುಡುಗಿಯರಿಗೆ ಉಚಿತ ಪ್ರವೇಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಇತ್ತೀಚೆಗೆ ಭಾರತ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ನೀಡಿದ್ದ ತಮ್ಮ ನಿರ್ಧಾರಕ್ಕೆ ಅನುಗುಣವಾಗಿ ಡಬ್ಲ್ಯೂಪಿಎಲ್‌ ಸರಣಿಯಲ್ಲೂ ಉಚಿತಪ್ರವೇಶ ನೀಡಲು ನಿರ್ಧರಿಸಿದೆ. ಪುರುಷರು ಹಾಗೂ ಹುಡುಗರಿಗೆ ಕ್ರಮವಾಗಿ 100 ರೂ. ಹಾಗೂ 400 ರೂ. ಟಿಕೆಟ್ ದರ ನಿಗದಿಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

    ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿದ್ದ ಟಾಟಾ ಸಮೂಹ ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ನಮಗೆ ಸಂತೋಷ ಉಂಟುಮಾಡಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

  • ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    ನನ್ನ ದೇಶ ನನ್ನ ಕಣ್ಣೀರು ನೋಡಬಾರದು – ವಿಶ್ವಕಪ್ ಕನಸು ಭಗ್ನಗೊಂಡಿದ್ದಕ್ಕೆ ಕಣ್ಣೀರಿಟ್ಟ ಕೌರ್

    – ಕಣ್ಣೀರು ಮರೆಮಾಚಲು ಕನ್ನಡಕ ಧರಿಸಿ ಮಾತನಾಡಿದ ನಾಯಕಿ
    – ಮತ್ತೊಮ್ಮೆ ನನ್ನ ದೇಶ ಸೋಲಲು ಬಿಡುವುದಿಲ್ಲ

    ಕೇಪ್‌ಟೌನ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ (ICC Womens World Cup) ಸೆಮಿಫೈನಲ್ ಪಂದ್ಯದ ವಿರೋಚಿತ ಸೋಲಿನ ಬಳಿಕ ಟೀಂ ಇಂಡಿಯಾ (Team India) ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪಂದ್ಯದ ಸೋಲಿನ ಸುಳಿವು ಕಾಣುತ್ತಿದ್ದಂತೆ ಮಾಜಿ ನಾಯಕಿ ಅಂಜುಂ ಚೋಪ್ರಾ ಅವರನ್ನು ಬಿಗಿದಪ್ಪಿಕೊಂಡು ಅತ್ತಿದ್ದಾರೆ. ಈ ವೇಳೆ ಅಂಜುಂ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

    ಹೌದು, ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ (Australia) ವಿರುದ್ಧ 5 ರನ್‌ಗಳ ವಿರೋಚಿತ ಸೋಲು ಕಂಡಿತು. ಇದರಿಂದ ಮೈದಾನದಲ್ಲಿ ಬ್ಯಾಟ್ ಬಿಸಾಡಿ ಬೇಸರ ಹೊರಾಕಿದ ಕೌರ್ ಮೈದಾನದಿಂದ ಹೊರಬರುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಪಂದ್ಯದ ಸೋಲಿನ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ, ಕೌರ್ ತಮ್ಮ ಕಣ್ಣೀರನ್ನು ಮರೆಮಾಚಲು ಕೂಲಿಂಗ್ ಗ್ಲಾಸ್ ಧರಿಸಿಯೇ ಮಾತನಾಡಿದ್ದಾರೆ.

    ಈ ವೇಳೆ ಕಾಮೆಂಟೇಟರ್ ಏಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಾಗ ಹರ್ಮನ್‌ಪ್ರೀತ್ ತುಂಬಾ ಭಾವುಕರಾದರು. ತಾನು ಅಳುವುದನ್ನು ನನ್ನ ದೇಶ ನೋಡಬಾರದೆಂದು ಬಯಸುತ್ತೇನೆ. ಹಾಗಾಗಿ ನಾನು ಈ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬಂದಿದ್ದೇನೆ ಎಂದು ನಾಯಕಿ ಹೇಳಿದ್ದಾರೆ. ಇದನ್ನೂ ಓದಿ: ಅಂದು ಧೋನಿ, ಇಂದು ಕೌರ್ – ವಿಶ್ವಕಪ್ ಕನಸು ಭಗ್ನಗೊಳಿಸಿದ ಆ ಒಂದು ರನೌಟ್

    ಮುಂದುವರಿದು, ನಾವು ಇನ್ನಷ್ಟು ಸುಧಾರಣೆ ಕಂಡುಕೊಳ್ಳುತ್ತೇವೆ. ಮತ್ತೊಮ್ಮೆ ಈ ರೀತಿ ಸೋಲಲು ಅನುವು ಮಾಡಿಕೊಡುವುದಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಸೋಲುತ್ತೇವೆಂದು ನಾನು ಖಂಡಿತವಾಗಿಯೂ ಭಾವಿಸಿರಲಿಲ್ಲ. ನಾನು ರನೌಟ್ ಆದ ಹಾದಿ ನೋಡುತ್ತಿದ್ದರೇ, ಇದಕ್ಕಿಂತ ದುರಾದೃಷ್ಟ ಬೇರೆ ಯಾವುದೂ ಇಲ್ಲ ಎಂದು ಭಾವಿಸುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಧಿವೇಶನ ಮುಗಿಸಿ ಸಿಸಿಎಲ್ ಪಂದ್ಯ ವೀಕ್ಷಣೆಗೆ ಬಂದ ಸಿಎಂ ಬೊಮ್ಮಾಯಿ

    Harmanpreet Kaur 2

    ಗುರುವಾರ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ (Australia) ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳಿಸಿತ್ತು. 173 ರನ್‌ಗಳ ಗುರಿ ಬೆನ್ನತ್ತಿದ ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k