Tag: ಹರ್ನಾಜ್ ಸಂಧು

  • ಈ ಹುಡುಗರಿಗೆ ಅವಳ ತೂಕದ್ದೇ ಚಿಂತೆ- ಭುವನ ಸುಂದರಿ ಹೀಗೆಕಾದರು..?

    ಈ ಹುಡುಗರಿಗೆ ಅವಳ ತೂಕದ್ದೇ ಚಿಂತೆ- ಭುವನ ಸುಂದರಿ ಹೀಗೆಕಾದರು..?

    ಭುವನ ಸುಂದರಿ ಆಗುವುದು ಸಾಮಾನ್ಯ ಮಾತಲ್ಲ. ಕೇವಲ ದೇಹಸಿರಿ ಮಾತ್ರವಲ್ಲ, ಅವರ ಬುದ್ದಿಮತ್ತೆಯನ್ನೂ ತೂಕಕ್ಕಿಟ್ಟು ಅಳೆಯಲಾಗುತ್ತದೆ. ಹಾಗಾಗಿ ಭುವನ ಸುಂದರಿಯರು ಏಳು ಮಲ್ಲಿಗೆಯ ತೂಕದವರಾಗಿರುತ್ತಾರೆ. ಸದಾ ಬಳುಕುವ ಬಳ್ಳಿಯಂತೆಯೇ ಇರಬೇಕೆಂದು ಬಯಸುತ್ತಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    2021ರ ಭುವನ ಸುಂದರಿ ಹರ್ನಾಜ್ ಸಂಧು ಈ ಹಿಂದೆ ತಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾ, ‘ನಾನು ಸೌಂದರ್ಯಕ್ಕೆ ತುಂಬಾ ಮಹತ್ವ ಕೊಡುತ್ತೇನೆ. ಒಂದು ಕೆ.ಜಿ ತೂಕ ಹೆಚ್ಚಾದರೂ ನನಗೆ ಟೆನ್ಷನ್ ಆಗುತ್ತದೆ’ ಎಂದು ಹೇಳಿಕೊಂಡಿದ್ದರು. ಅಷ್ಟರ ಮಟ್ಟಿಗೆ ಅವರಲ್ಲಿ ಬ್ಯುಟಿ ಕಾನ್ಸಿಯಸ್ ಇತ್ತು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?

    ಇಂತಹ ಭುವನ ಸುಂದರಿಯು ಇದೀಗ ತೂಕದ ಕಾರಣಕ್ಕಾಗಿ ಟ್ರೋಲ್ ಆಗಿದ್ದಾರೆ. ಮೊನ್ನೆಯಷ್ಟೇ ನಡೆದ ಫ್ಯಾಶನ್ ಶೋನಲ್ಲಿ ಆಕರ್ಷಕ ಉಡುಪು ಧರಿಸಿ ಭಾಗಿಯಾಗಿದ್ದರು. ಶೋ ಸ್ಟಾಪರ್ ಆಗಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದರು. ಅವರು ತೊಟ್ಟಿದ್ದ ಕಾಸ್ಟ್ಯೂಮ್ ಎಲ್ಲರ ಗಮನ ಸೆಳೆದಿತ್ತು. ಆದರೆ, ಸೆರೆ ಹಿಡಿಯಲಾಗಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾಗೆ ಆಹಾರವಾಗಿ ಬಿಟ್ಟವು. ಇವರ ನಡಿಗೆ ಕಂಡ ನೆಟ್ಟಿಗರು ‘ಹರ್ನಾಜ್ ದಪ್ಪಗಾಗಿದ್ದಾರೆ. ಇಷ್ಟೊಂದು ತೂಕ ಏರಿಕೆ ಆಗಲು ಕಾರಣವೇನು? ಸಮಸ್ಯೆ ಏನು’ ಹೀಗೆ ನಾನಾ ರೀತಿಯಲ್ಲಿ ಪ್ರಶ್ನೆಗಳನ್ನು ಮಾಡಿದ್ದಾರೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

    ಆದರೆ, ಹರ್ನಾಜ್ ಈ ಬಗ್ಗೆ ಯಾವುದೇ ಪತ್ರಿಕ್ರಿಯೆಯನ್ನೂ ನೀಡಿಲ್ಲ. ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು ಅವರ ಗಮನಕ್ಕೂ ಬಂದಿದ್ದರೂ, ತಣ್ಣಗೆ ನಕ್ಕು ಸುಮ್ಮನಾಗಿದ್ದಾರೆ. ಅವರು ಸುಮ್ಮನಿದ್ದರೂ, ನೆಟ್ಟಿಗರು ಮಾತ್ರ ಪ್ರಶ್ನೆ ಮೇಲೆ ಪ್ರಶ್ನೆ ಮಾಡುವುದರ ಮೂಲಕ ಅವರನ್ನು ಟ್ರೋಲ್ ಮಾಡಿ, ಕಾಲೆಳೆಯುತ್ತಿದ್ದಾರೆ.

  • ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

    ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

    ಮುಂಬೈ: ನನಗೆ ಡೇಟಿಂಗ್ ಮಾಡಲು ವಯಸ್ಸಾದ ಶ್ರೀಮಂತ ಬೇಡ. ಕಷ್ಟದಲ್ಲಿರುವವನ ಜೊತೆ ನಾನು ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ನಾಜ್ ಸಂಧು ತಮ್ಮ ಬಾಯ್‍ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.

    ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಬಾಲಿವುಡ್ ಪ್ರಾಜೆಕ್ಟ್ ಮತ್ತು ಡೇಟಿಂಗ್ ವಿಚಾರವಾಗಿ ಮಾತನಾಡಿದ ಹರ್ನಾಜ್ ಸಖತ್ ಬೋಲ್ಡ್ ಆಗಿ ಉತ್ತರವನ್ನು ಕೊಟ್ಟಿದ್ದಾರೆ. ನಾನು ಕಷ್ಟದಲ್ಲಿರುವ ಯುವಕನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೇನೆ. ವಯಸ್ಸಾದ ಶ್ರೀಮಂತ ವ್ಯಕ್ತಿಯ ಜೊತೆಯಲ್ಲ. ಏಕೆಂದರೆ ನಾನು ಕಷ್ಟಪಟ್ಟಿದ್ದೇನೆ ಮತ್ತು ಕಷ್ಟಪಡುತ್ತೇನೆ. ಒಬ್ಬ ಮನುಷ್ಯ ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳಿಗೆ ಬೆಲೆ ನೀಡಬಹುದು ಎಂದು ಹೇಳಿದರು. ಇದನ್ನೂ ಓದಿ: ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

    ಗೆಲುವಿನ ಕುರಿತು ಮಾತನಾಡಿದ ಅವರು, ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ದಿ ಮಿಸ್ ಯೂನಿವರ್ಸ್ ಈಸ್… ಎಂಬ ಸಾಲಿನೊಂದಿಗೆ ಭಾರತ ಎಂಬ ಪದ ಮೊಳಗಿದಾಗ ನಾನು ಅಳಲು ಪ್ರಾರಂಭಿಸಿದ್ದೆ. ನನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದರು.

    ನಾನು ನಟಿಯಾಗಬೇಕು ಎಂದು ನಿರ್ಧರಿಸಿದ್ದೇನೆ. ಬಹಳಷ್ಟು ನಟ-ನಟಿಯರಿಂದ ನಾನು ಸ್ಫೂರ್ತಿಯನ್ನು ಪಡೆದಿದ್ದೇನೆ. ನಟನೆ ಮಾಡುವುದರಿಂದ ನನಗೆ ಖುಷಿ ಸಿಗುತ್ತೆ ಎಂದು ತಮಗಿರುವ ನಟನೆಯ ಮೇಲಿನ ಪ್ರೀತಿಯನ್ನು ಹೇಳಿಕೊಂಡರು.

    13 ಡಿಸೆಂಬರ್ 2021 ರಂದು ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ 70 ನೇ ಆವೃತ್ತಿಯಲ್ಲಿ ಹರ್ನಾಜ್ ‘ಭುವನ ಸುಂದರಿ ಪ್ರಶಸ್ತಿ’ ಯನ್ನು ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. 24 ವರ್ಷಗಳ ನಂತರ ನಮ್ಮ ಭಾರತಕ್ಕೆ ಭುವನ ಸುಂದರಿ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

    ಈ ಹಿಂದೆ ಸುಶ್ಮಿತಾ ಸೇನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತಾ ಭೂಪತಿ, ಪ್ರಿಯಾಂಕಾ ಚೋಪ್ರಾ, ದಿಯಾ ಮಿರ್ಜಾ ಮತ್ತು ಮಾನುಷಿ ಛಿಲ್ಲರ್ ಅವರು ಸಹ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬಾಲಿವುಡ್‍ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಈಗ ಹರ್ನಾಜ್ ಅವರು ನಟಿಯಾಗಿ ದೊಡ್ಡ ಹೆಸರು ಮಾಡಬೇಕು ಎಂದು ಕನಸನ್ನು ಹೊಂದಿದ್ದು, ಈಗಾಗಲೇ ಇವರು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?

    ಮಿಸ್ ಯುನಿವರ್ಸ್ ಕಿರೀಟದ ಬೆಲೆ 37 ಕೋಟಿ ರೂ.- ಏನೇನು ವಿಶೇಷತೆ ಇದೆ?

    ಡಿಸೆಂಬರ್ 12 ರಂದು ನಡೆದ ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಭಾರತೀಯ ಯುವತಿ ಹರ್ನಾಜ್ ಸಂಧು ಕಿರೀಟ ಅಲಂಕರಿಸಿದ್ದಾರೆ. ಭಾರತದ ನಾರಿ ಗೆದ್ದ ಕಿರೀಟದ ಬೆಲೆ ಬರೋಬ್ಬರಿ 37 ಕೋಟಿ ರೂ.

    ಹೌದು. ಈ ಹಿಂದೆ ನಡೆದಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಬಾರಿ ಕಿರೀಟಗಳನ್ನು ಬದಲಿಸಲಾಗಿದೆ. 2019ರಲ್ಲಿ ಮಿಸ್ ಯುನಿವರ್ಸ್ ಸಂಸ್ಥೆ ಕಿರೀಟವನ್ನು ವಿನ್ಯಾಸ ಗೊಳಿಸಲು ಮೌವದ್ ಆಭರಣ ಕಂಪನಿಯನ್ನು ಆಯ್ಕೆ ಮಾಡಿತ್ತು. ಮಹಿಳಾ ಸಬಲೀಕರಣ, ಶಕ್ತಿ, ಸಮುದಾಯಗಳನ್ನು ಒಂದುಗೂಡಿಸುವಂತಹ ಮಿಸ್ ಯುನಿವರ್ಸ್ ಸಂಸ್ಥೆಗೆ ಮೌವದ್ ವಿನ್ಯಾಸಕರು ಪವರ್ ಆಫ್ ಯುನಿಟ್ ಕ್ರೌನ್ ಅನ್ನು ತಯಾರಿಸಿದ್ದರು.

    ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಎಂದರೆ ಬರೋಬ್ಬರಿ 37 ಕೋಟಿ ರೂ. ಹಾಗೂ ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ ಎಂಬುದಾಗಿಯೂ ದಾಖಲೆಯಾಗಿದೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

    ಈ ಕಿರೀಟ ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಹಾಗೂ ಸೌಂದರ್ಯದ ಸಂಕೇತವಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ, 2020ರಲ್ಲಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಈ ವಿಶ್ವದ ದುಬಾರಿ ಕಿರೀಟವನ್ನು ತೊಟ್ಟಿದ್ದು, ಇದೀಗ ಭಾರತದ ಹೆಮ್ಮೆಯ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

     

    View this post on Instagram

     

    A post shared by MOUAWAD (@mouawad)

    ಕಿರೀಟದಲ್ಲಿ 1,725 ಬಿಳಿ ವಜ್ರಗಳು ಹಾಗೂ ಮೂರು ಗೋಲ್ಡನ್ ಕ್ಯಾನರಿ ವಜ್ರಗಳಿವೆ. ವಿನ್ಯಾಸದಲ್ಲಿ ಕಾಣಿಸುವ ಹೆಣೆದ ಬಳ್ಳಿ, ಎಲೆ, ದಳಗಳು ಏಳು ಖಂಡಗಳ ಸಮುದಾಯವನ್ನು ಪ್ರತಿನಿಧಿಸುತ್ತದೆ. ಕಿರೀಟದ ಮಧ್ಯಭಾಗದ ಗೋಲ್ಡನ್ ಕ್ಯಾನರಿ ವಜ್ರ 62.83 ಕ್ಯಾರೆಟ್ ತೂಕ ಹೊಂದಿದೆ. ಇದನ್ನೂ ಓದಿ: ನನ್ನ ತಮ್ಮನಿಗೆ ತಿಂಡಿ ತಿನ್ನಿಸಲು ಬಿಡಿ – ಐರಾ, ಯಥರ್ವ್ ಕ್ಯೂಟ್ ವೀಡಿಯೋ ವೈರಲ್

    ಹರ್ನಾಜ್ ಸಂಧು ಸದ್ಯ ಈ ದುಬಾರಿ ಕಿರೀಟಕ್ಕೆ ಒಡತಿಯಾಗಿದ್ದು, ಸುಶ್ಮಿತಾ ಸೇನ್, ಲಾರ ದತ್ತಾರ ನಂತರ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ.