Tag: ಹರ್ಜಿತ್ ಸಿಂಗ್

  • ನಾಪತ್ತೆ ಆಗಿದ್ದ ಕಿರುತೆರೆ ನಟ ಸಿಸಿಟಿವಿಯಲ್ಲಿ ಪತ್ತೆ

    ನಾಪತ್ತೆ ಆಗಿದ್ದ ಕಿರುತೆರೆ ನಟ ಸಿಸಿಟಿವಿಯಲ್ಲಿ ಪತ್ತೆ

    ಕಿರುತೆರೆಯ ಜನಪ್ರಿಯ ನಟ ಗುರುಚರಣ್ ಸಿಂಗ್ (Gurcharan Singh) ಏಪ್ರಿಲ್ 22ರಿಂದ ನಾಪತ್ತೆಯಾಗಿದ್ದರು (Missing). ಚಿತ್ರೀಕರಣಕ್ಕಾಗಿ ಮುಂಬೈಗೆ ಹೋಗುವುದಾಗಿ ದೆಹಲಿ ಮನೆಯಿಂದ ಹೊರಟಿದ್ದ ಗುರುಚರಣ್, ಆನಂತರ ನಾಟ್ ರಿಚೇಬಲ್ ಆಗಿದ್ದರು. ಹಾಗಾಗಿ ಕುಟುಂಬಸ್ಥರು ಪೊಲೀಸರಿಗೆ (Police) ಮೊರೆ ಹೋಗಿದ್ದರು.

    ದೂರು ದಾಖಲಾಗುತ್ತಿದ್ದಂತೆಯೇ ದೆಹಲಿ ಪೊಲೀಸರು ತಂಡಗಳನ್ನು ರಚಿಸಿ, ನಟನೆ ಹುಡುಕಾಟ ಆರಂಭಿಸಿದ್ದರು. ಪೊಲೀಸರಿಗೆ ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಏಪ್ರಿಲ್ 22ರಂದು ರಾತ್ರಿ 9.14ಕ್ಕೆ ದೆಹಲಿಯ ಪಾಲಂ ಪ್ರದೇಶದ ಪರುಶುರಾಮ್ ಚೌಕ್ ನಲ್ಲಿ ನಟ ಸಿಂಗ್ ತಮ್ಮ ಬೆನ್ನಿನ ಮೇಲೆ ಬ್ಯಾಗ್ ನೇತಾಕಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

    ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟರಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ಪೋರ್ಟ್ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ (Harjit Singh) ದೂರು ದಾಖಲಿಸಿದ್ದಾರೆ.

     

    ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನಾವೆಲ್ಲರೂ ನಿಮ್ಮೊಂದಿಗಿದ್ದೇವೆ- ಹರ್ಜಿತ್ ಸಿಂಗ್‍ಗೆ ಧನ್ಯವಾದ ತಿಳಿಸಿದ ಯುವಿ

    ನವದೆಹಲಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪಂಜಾಬ್‍ನ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಅವರನ್ನು ಬೆಂಬಲಿಸಿ ಭಾರತೀಯ ತಂಡದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಹರ್ಜಿತ್ ಸಿಂಗ್ ಅವರ ಶೌರ್ಯ ಮತ್ತು ಉತ್ಸಾಹಕ್ಕೆ ಧನ್ಯವಾದ ತಿಳಿಸಲು ಪಂಜಾಬ್ ಪೊಲೀಸರು ಸೋಮವಾರ ‘ಮೇನ್ ಭೀ ಹರ್ಜಿತ್ ಸಿಂಗ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳು ಹರ್ಜಿತ್ ಸಿಂಗ್ ಹೆಸರಿರುವ ಬ್ಯಾಡ್ಜ್ ಅನ್ನು ತಮ್ಮ ಸಮವಸ್ತ್ರದ ಮೇಲೆ ಹಾಕಿಕೊಂಡಿದ್ದರು.

    ಇದೇ ಅಭಿಯಾನದಲ್ಲಿ ಅಡಿ 2011ರ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ತಂಡದ ಆಲ್‍ರೌಂಡರ್ ಯುವಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. “ನಮ್ಮ ಪಂಜಾಬ್ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ತಮ್ಮ ಜೀವನವನ್ನು ಲೆಕ್ಕಿಸದೇ ನಮ್ಮನ್ನು ರಕ್ಷಿಸುತ್ತಿದ್ದಾರೆ. ಪಂಜಾಬ್‍ನ ಪ್ರತಿಯೊಬ್ಬರು ಹರ್ಜಿತ್ ಸಿಂಗ್ ಅವರೊಂದಿಗಿದೆ. ನಾನು ಕೂಡ ಅವರೊಂದಿಗೆ ಇದ್ದೇನೆ” ಎಂದು ಯುವರಾಜ್ ಹೇಲಿದ್ದಾರೆ.

    “ಹರ್ಜಿತ್ ಸಿಂಗ್ ಅವರ ಧೈರ್ಯ ಮತ್ತು ಪರಿಶ್ರಮ ದೇಶಾದ್ಯಂತ ಅನೇಕರಿಗೆ ಸ್ಫೂರ್ತಿ ನೀಡಿದೆ. ಎಲ್ಲಾ ಪೊಲೀಸ್ ಪಡೆಗಳಿಗೆ ತುಂಬು ಹೃದಯದ ಧನ್ಯವಾದಗಳು. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಯುವಿ ತಿಳಿಸಿದ್ದಾರೆ.

    https://twitter.com/YUVSTRONG12/status/1255164717854715904

    ಏನಿದು ಪ್ರಕರಣ?
    ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಏಪ್ರಿಲ್ 12ರಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.

    ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.

    ಇತ್ತೀಚಿಗೆ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿದ್ದ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ಈ ಕುರಿತು ವಿಡಿಯೋ ಟ್ವೀಟ್ ಮಾಡಿದ್ದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ಕೊಂಡಿದ್ದರು.