Tag: ಹರೀಶ್ ಶಂಕರ್

  • ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    ‘ಮಿಸ್ಟರ್ ಬಚ್ಚನ್’ ಸೋತಿದ್ದಕ್ಕೆ 4 ಕೋಟಿ ಸಂಭಾವನೆ ಹಿಂದಿರುಗಿಸಿದ ರವಿತೇಜ

    ಮಾಸ್ ಮಹಾರಾಜ ರವಿತೇಜ (Ravi Teja)  ನಟನೆಯ ‘ಮಿಸ್ಟರ್ ಬಚ್ಚನ್’ (Mr. Bachchan) ಸಿನಿಮಾ ಥಿಯೇಟರ್‌ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಿರ್ಮಾಪಕರಿಗೂ ಭಾರೀ ನಷ್ಟವಾದ ಹಿನ್ನೆಲೆ 4 ಕೋಟಿ ರೂ. ಸಂಭಾವನೆಯನ್ನು ರವಿತೇಜ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ:ಠಾಣೆಯಲ್ಲಿ ಕೊಲೆ ಆರೋಪಿ ಪವಿತ್ರಾಗೌಡ ಕಣ್ಣೀರು – ಫೋಟೋ ರಿವೀಲ್

    ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಚಿತ್ರವನ್ನು ಹರೀಶ್ ಶಂಕರ್ ನಿದೇಶನ ಮಾಡಿದ್ದು, ಆ.15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. 85 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಅರ್ಧ ಭಾಗದಷ್ಟು ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಇದರಿಂದ ನಿರ್ಮಾಣ ಸಂಸ್ಥೆ ನಷ್ಟ ಅನುಭವಿಸಿದೆ. ಈ ಹಿನ್ನೆಲೆ ತಾವು ಪಡೆದುಕೊಂಡ ಸಂಭಾವನೆಯಲ್ಲಿ 4 ಕೋಟಿ ರೂ. ನಟ ರವಿತೇಜ ಹಿಂದಿರುಗಿಸಿದ್ರೆ, ಇತ್ತ ನಿರ್ದೇಶಕ ಹರೀಶ್ ಕೂಡ 2 ಕೋಟಿ ರೂ.ವನ್ನು ನಿರ್ಮಾಪಕರಿಗೆ ನೀಡಿದ್ದಾರೆ.

    ಸಿನಿಮಾ ಸೋಲಿನ ಹೊರೆಯನ್ನು ನಿರ್ಮಾಪಕರಿಗೆ ಕಮ್ಮಿ ಮಾಡಲು ರವಿತೇಜ ಮತ್ತು ನಿರ್ದೇಶಕ ಹರೀಶ್ ಸಂಭಾವನೆಯನ್ನು ಹಿಂದಿರುಗಿಸುವ ಮೂಲಕ ಸಾಥ್ ನೀಡಿದ್ದಾರೆ. ಇದೀಗ ಇಬ್ಬರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಅಂದಹಾಗೆ, ರಾಮ್ ಪೋತಿನೇನಿ ನಟನೆಯ `ಇಸ್ಮಾರ್ಟ್ ಶಂಕರ್’ ಮುಂದೆ ‘ಮಿಸ್ಟರ್ ಬಚ್ಚನ್’ ಚಿತ್ರ ಆ.15ರಂದು ರಿಲೀಸ್ ಆಗಿತ್ತು. ರವಿತೇಜಗೆ ನಾಯಕಿಯಾಗಿ ಭಾಗ್ಯಶ್ರೀ ನಟಿಸಿದ್ದರು. ಇದು ಬಾಲಿವುಡ್‌ನ ‘ರೈಡ್’ ಸಿನಿಮಾದ ರಿಮೇಕ್ ಆಗಿದೆ.

  • ಆದಿಪುರುಷನಿಗೆ ಸೋಲಾದರೂ ಪ್ರಭಾಸ್ ಸಿನಿಮಾ ಹಣ ಹೂಡಲಿದೆ ಕನ್ನಡ ಸಂಸ್ಥೆ

    ಆದಿಪುರುಷನಿಗೆ ಸೋಲಾದರೂ ಪ್ರಭಾಸ್ ಸಿನಿಮಾ ಹಣ ಹೂಡಲಿದೆ ಕನ್ನಡ ಸಂಸ್ಥೆ

    ಪ್ರಭಾಸ್ ನಟನೆಯ ಆದಿಪುರುಷ (Adipurush) ಸಿನಿಮಾಗೆ ನಿರೀಕ್ಷೆ ಫಲಿತಾಂಶ ಬಾರದೇ ಇದ್ದರೂ, ಪ್ರಭಾಸ್ ಅವರ ಡಿಮಾಂಡ್ ಗೆ ಯಾವುದೇ ಧಕ್ಕೆ ಬಂದಿಲ್ಲ ಎಂದೇ ಹೇಳಬಹುದು. ಸದ್ಯ ಅವರು ಕೈಯಲ್ಲಿ ಎರಡು ಚಿತ್ರಗಳು ಇದ್ದರೂ, ಮತ್ತೊಂದು ಚಿತ್ರಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಕನ್ನಡದ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ವಿಶೇಷ.

    ಈಗಾಗಲೇ ಪ್ರಭಾಸ್ (Prabhas) ನಟನೆಯ ಸಲಾರ್ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಹಣ ಹೂಡಿಕೆ ಮಾಡಿದೆ. ಕನ್ನಡದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ನಂತರ ಪ್ರಭಾಸ್ ಪ್ರಾಜೆಕ್ಟ್ ಕೆ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ನಡುವೆ ಮತ್ತೊಂದು ಚಿತ್ರಕ್ಕೆ ಗ್ನಿನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್

    ಕೆಡಿ ಸೇರಿದಂತೆ ಹಲವು ಸಿನಿಮಾಗಳನ್ನು ಕನ್ನಡದಲ್ಲಿ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ (KVN Production) ಸಂಸ್ಥೆಯು ಪ್ರಭಾಸ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಪ್ರಭಾಸ್ ಜೊತೆ ಸಂಸ್ಥೆಯ ಮುಖ್ಯಸ್ಥರು ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಪ್ರಭಾಸ್ ಕೂಡ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ಕೇವಲ ಪ್ರಭಾಸ್ ಒಪ್ಪಿದ್ದಷ್ಟೇ ಅಲ್ಲ, ಈ ಸಿನಿಮಾದ ನಿರ್ದೇಶಕರು ಯಾರು ಎನ್ನುವ ಮಾಹಿತಿಯೂ ಸೋರಿಕೆಯಾಗಿದೆ. ಗಬ್ಬರ್ ಸಿಂಗ್ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಹರೀಶ್ ಶಂಕರ್ (Harish Shankar) ಈ ಸಿನಿಮಾಗೆ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಈ ಎಲ್ಲ ವಿಷಯಗಳು ಹರಿದಾಡುತ್ತಿದ್ದರೂ, ಯಾರೂ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]