Tag: ಹರೀಶ್ ಪೂಂಜಾ

  • ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌!

    ಶಾಸಕ ಹರೀಶ್‌ ಪೂಂಜಾ ವಿರುದ್ಧ ಎಫ್‌ಐಆರ್‌!

    ಮಂಗಳೂರು: ಬಿಜೆಪಿ ಶಾಸಕ ಹರೀಶ್‌ ಪೂಂಜಾ (Harish Poonja) ಮೇಲೆ ಎಫ್‌ಐಆರ್‌ ದಾಖಲಾಗಿದೆ.

    ಶಾಸಕರು ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದರು. ಅಲ್ಲದೇ ಪೊಲೀಸ್ ಠಾಣೆ ನಿಮ್ಮ‌ ಅಪ್ಪಂದಾ ಎಂದು ಬೆಳ್ತಂಗಡಿ PSI ಮುರುಳಿಧರ್ ನಾಯ್ಕ್ ಗೆ ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (Belthangaday Police Station)  ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ನಡೆದಿದ್ದೇನು..?: ಶಾಸಕ ಪೂಂಜಾ ಆಪ್ತರು ಅಕ್ರಮ ಕಲ್ಲುಗಣಿಕಾರಿಕೆ ನಡೆಸುತ್ತಿದ್ದ ಎಂಬ ಆರೋಪದ ಮೇಲೆ ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲಿನ ಕೋರೆಗೆ ತಹಶೀಲ್ದಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ ಗುರುವಾಯನಕೆರೆಯ ಬಿಜೆಪಿಯ ಯುವಮೋರ್ಚಾದ ತಾಲೂಕು ಅಧ್ಯಕ್ಷ, ರೌಡಿಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಲಾಗಿತ್ತು. ಇದಕ್ಕೆ ಕೆರಳಿದ್ದ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಬೆಳ್ತಂಗಡಿ ಠಾಣೆಯೆದುರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕಾನ್ಸ್ ಚಿತ್ರೋತ್ಸವ ಮುಗಿದ ನಂತರ ಐಶ್ವರ್ಯಾ ರೈ ಕೈಗೆ ಶಸ್ತ್ರ ಚಿಕಿತ್ಸೆ

    ಪ್ರತಿಭಟನೆಯ ವೇಳೆ ಅಮಾಯಕನ ಬಂಧನವಾಗಿದ್ದು, ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಪ್ರತಿಭಟನೆ ವೇಳೆ ಪೊಲೀಸ್ ಹಾಗೂ ಇಲಾಖೆ ವಿರುದ್ಧ ಶಾಸಕರು ಅವಹೇಳನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡರು.

  • ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ: ಹರೀಶ್ ಪೂಂಜಾ ಮತ್ತೆ ಕಿಡಿ

    ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ: ಹರೀಶ್ ಪೂಂಜಾ ಮತ್ತೆ ಕಿಡಿ

    ಬೆಂಗಳೂರು: ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ ಎಂದು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ಕಿಡಿಕಾರಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬಜೆಟ್ (karnataka Budget 2024) ಮಂಡನೆಯ ಸಂಬಂಧ ಬಿಜೆಪಿ ಇಂದು ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸುತ್ತಿದೆ. ಈ ಬೆನ್ನಲ್ಲೇ ಶಾಸಕರು ಪ್ರತಿಭಟನೆಯ ಫೋಟೋಗಳ ಜೊತೆ ‘ನಮ್ಮ ತೆರಿಗೆ ನಮ್ಮ ಹಕ್ಕು, ನಮ್ಮ ತೆರಿಗೆ ನಮಗೆ ಕೊಡಿ. ದಕ್ಷಿಣ ಕನ್ನಡದ ತೆರಿಗೆ ದಕ್ಷಿಣ ಕನ್ನಡಕ್ಕೆ ನೀಡಿ. ದಕ್ಷಿಣ ಕನ್ನಡದ ತೆರಿಗೆ ಮುಸ್ಲಿಮರ ಮನೆಗೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಆಗಿದ್ದ ವಿವಾದವೇನು?: ಈ ಹಿಂದೆ ಹರೀಶ್ ಪೂಂಜ ಅವರು ಫೇಸ್‍ಬುಕ್‍ನಲ್ಲಿ’ಹಿಂದೂಗಳ ತೆರಿಗೆ ಹಿಂದೂಗಳಿಗೆ ಸಲ್ಲಬೇಕು. ಈ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಸಲ್ಲಿಕೆಯಾಗಬೇಕು. ಹಿಂದೂಗಳು ಕಟ್ಟಿದ ತೆರಿಗೆ ಹಣ ಇತರ ಧರ್ಮದ ಜನರಿಗೆ ಸೇರುವುದು ಅನ್ಯಾಯ’ ಎಂದು ಪೆÇೀಸ್ಟ್ ಹಾಕಿದ್ದರು. ಇದು ರಾಜ್ಯಾದ್ಯಂತ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದನ್ನೂ ಓದಿ: Karnataka Budget 2024: ಅಲ್ಪಸಂಖ್ಯಾತರಿಗೆ ಬಂಪರ್‌ ಕೊಡುಗೆ – ವಕ್ಫ್ ಆಸ್ತಿ ಸಂರಕ್ಷಣೆಗೆ 100 ಕೋಟಿ ರೂ. ಘೋಷಣೆ

    ಹೇಳಿಕೆ ಬಗ್ಗೆ ಸಮರ್ಥನೆ: ತಮ್ಮ ಪೋಸ್ಟ್ ವಿವಾದವಾಗುತ್ತಿದ್ದಂತೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಾಸಕರು, ಸಂಸದ ಡಿ.ಕೆ. ಸುರೇಶ್ ಅವರ ದೇಶ ವಿಭಜನೆ ಹೇಳಿಕೆಗೆ ಸಾಮಾನ್ಯ ರೀತಿ ಖಂಡಿಸಿದ್ರೆ ಅವರಿಗೆ ಅರ್ಥ ಆಗಲ್ಲ. ಅದಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದೇನೆ. ಹಿಂದೂಗಳ ತೆರಿಗೆಯನ್ನು ಹಿಂದೂಗಳ ಅಭಿವೃದ್ಧಿಗೆ ನೀಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಕಿಕ್‍ ಪ್ರಿಯರಿಗೆ ಶಾಕ್- ಅಬಕಾರಿಗೆ ಬಿಗ್‌ ಟಾರ್ಗೆಟ್‌: ಹಿಂದಿನ ಬಜೆಟ್‌ನಲ್ಲಿ ಗುರಿ ಎಷ್ಟಿತ್ತು?

  • ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್

    ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್

    ಬೆಂಗಳೂರು: ತೆರಿಗೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಅಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

    ಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕು ಎಂಬ ಹರೀಶ್ ಪೂಂಜಾ (Harish Poonja) ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯದು, ಒಬೊಬ್ಬರು ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಮೌನವಾಗಿದ್ರು. ಇಂದು ಚರ್ಚೆ ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಇದನ್ನೂ ಓದಿ:  ನಮ್ಮದು ಹೆದರುವ ಬ್ಲಡ್ ಅಲ್ಲ, ತಂಟೆಗೆ ಬಂದವರಿಗೆ ಸೆಟ್ಲ್ಮೆಂಟ್ ಆಗುತ್ತಿದೆ: ಡಿಕೆಶಿ

    ನಮ್ಮ ತೆರಿಗೆ ಪಾಲು ಎಷ್ಟಿದೆ ಎಂದು ವರದಿ ಮಾಡ್ತೀದ್ದೀರಾ. ಬೇರೆ ರಾಜ್ಯಕ್ಕೆ ಎಷ್ಟು ಟ್ಯಾಕ್ಸ್ ಕೊಡ್ತೀರಾ? ಕರ್ನಾಟಕ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಬರುತಿದೆ? ಯಾವೆಲ್ಲ ಯೋಜನೆಗಳು ಕರ್ನಾಟಕಕ್ಕೆ ಸಿಕ್ಕಿದೆ. ಎಷ್ಟು ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗುತ್ತಿದೆ? ಎಲ್ಲದರಲ್ಲೂ ತಡೆದುಕೊಳ್ಳಬೇಕಾ ನಾವು? ನ್ಯಾಷನಲ್ ಹೈವೇ ಜಾಸ್ತಿ ಆಗಿದೆ. ಯೋಜನೆ ತಡೆದಿದ್ದಾರೆ ಅಂದರೆ ಯಾರನ್ನು ಕೇಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯವರ 10 ವರ್ಷ ರಾಜ್ಯಕ್ಕೆ ಅನ್ಯಾಯದ ಕಾಲ: ಸಿದ್ದರಾಮಯ್ಯ

    ನಾನೇನು ಭಾರತದ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಕೊಲ್ಲುವ ಇಚ್ಛಾಶಕ್ತಿ ಇದ್ದರೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ. ಈಶ್ವರಪ್ಪ  (Eshwarappa) ಅವರೇ ಖಂಡಿತ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ರೆಡಿಯಾಗಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

    ನಮಗೆ 13 ಪೈಸೆ ಸಾಕು ಅಂದರೆ ಅದನ್ನೇ ಹೇಳಲಿ. ನಾವೂ ಉದ್ಯೋಗ ಕೊಡ್ತಿದ್ದೇವೆ, ಬದುಕು ಕೊಡ್ತಿದ್ದೇವೆ, ನೀರು ಕೊಡ್ತಿದ್ದೇವೆ. ತೆರಿಗೆಯಲ್ಲಿ ಆಗುತ್ತಿರುವ ವಂಚನೆ ಎಷ್ಟು ದಿನ ಸಹಿಸಲಿ. ಬೇಕಾದರೆ ಆರ್.ಅಶೋಕ್ (R.Ashok)  ಚರ್ಚೆಗೆ ಬರಲಿ ಮಾತಾಡೋಣ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

  • ಶಾಸಕ ಹರೀಶ್ ಪೂಂಜಾರದ್ದು ಮೂರ್ಖತನದ ಹೇಳಿಕೆ: ಎಂ.ಬಿ. ಪಾಟೀಲ್

    ಶಾಸಕ ಹರೀಶ್ ಪೂಂಜಾರದ್ದು ಮೂರ್ಖತನದ ಹೇಳಿಕೆ: ಎಂ.ಬಿ. ಪಾಟೀಲ್

    ಬೆಂಗಳೂರು: ಹಿಂದೂಗಳ ತೆರಿಗೆ ಹಣ ಹಿಂದೂಗಳಿಗೆ ಕೊಡಿ ಎಂಬ ಶಾಸಕ ಹರೀಶ್ ಪೂಂಜಾ (Harish Poonja) ಹೇಳಿಕೆ ವಿಚಾರವಾಗಿ ಸಚಿವ ಎಂ.ಬಿ. ಪಾಟೀಲ್ (MB Patil) ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರೀಶ್ ಪೂಂಜಾ ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುವುದು ಗೊತ್ತಾಗುತ್ತದೆ. ಅವರ ಹೇಳಿಕೆ ಮೂರ್ಖತನದ ಪರಮಾವಧಿ. ದೇಶದ ಸಂವಿಧಾನ, ನಮ್ಮ ದೇಶದ ಫ್ಯಾಬ್ರಿಕ್ ಗೊತ್ತಿಲ್ಲದೆ ಇದ್ದರೆ ಇಂತಹವರು ಶಾಸಕರಾಗಲು ಅರ್ಹತೆ ಇಲ್ಲ. ಈ ರೀತಿ ಹಿಂದೂ ಟ್ಯಾಕ್ಸ್ ಎಂದು ಯಾವ ಮಟ್ಟಕ್ಕಾದ್ರು ಹೋಗಬಹುದಾ? ಇಂತಹ ಮೂರ್ಖತನ ಪ್ರಶ್ನೆಗಳಿಗೆ ಉತ್ತರ ಕೊಡದೇ ಇರೋದೆ ಒಳ್ಳೆಯದು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್

    ರಾಜ್ಯ ಅರ್ಥಿಕ ವ್ಯವಸ್ಥೆ ಬಗ್ಗೆ ನಾವು ಶ್ವೇತ ಪತ್ರ ಹೊರಡಿಸುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗಿಲ್ಲ. ರಾಜ್ಯ ಸರ್ಕಾರ ದಿವಾಳಿ ಆಗಿದ್ರೆ ಗ್ಯಾರಂಟಿ ಯೋಜನೆ ಕೊಡೋಕೆ ಆಗ್ತಿತ್ತಾ? ಅಭಿವೃದ್ಧಿಗೂ ಹಣ ಕೇಂದ್ರ ಕೊಡಬೇಕಲ್ಲವೇ? 15ನೇ ಹಣಕಾಸು ಆಯೋಗದ ಹಣ ನಮಗೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

    62 ಸಾವಿರ ಕೋಟಿ ರೂ. ಹಣ ಕೇಂದ್ರದಿಂದ ಬರಬೇಕು. 4.5 ಲಕ್ಷ ಕೋಟಿ ರೂ. ನಾವು ತೆರಿಗೆ ಕಟ್ಟುತ್ತೇವೆ, ಆದರೆ ನಮಗೆ ಕೇಂದ್ರ ಕೊಡ್ತಿರೋದು ಎಷ್ಟು? ದೆಹಲಿಯಲ್ಲಿ ಸಿಎಂ ಮಾತಾಡಿರೋದೆ ಶ್ವೇತಪತ್ರವೇ. ಆದಾಗಿಯೂ ಕೂಡಾ ನಾವು ಶ್ವೇತ ಪತ್ರ ಹೊರಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ಮಾತು ಕೇಳಿದರೆ ದೊಡ್ಡ ಅನಾಹುತಕ್ಕೆ ಹೋಗುತ್ತದೆ: ಎಂ.ಬಿ ಪಾಟೀಲ್

  • ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್

    ಮೊಂಡುವಾದ ಬಿಟ್ಟು ರಾಜ್ಯಕ್ಕೆ ಅನ್ಯಾಯವಾಗುತ್ತಿರೋದನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು: ದಿನೇಶ್ ಗುಂಡೂರಾವ್

    – ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು ಅಭಿಯಾನಕ್ಕೆ ಕರೆ ವಿಚಾರಕ್ಕೆ ಸಚಿವರ ಆಕ್ರೋಶ

    ಮಂಗಳೂರು: ನಾವು ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನ್ನುತ್ತಿದ್ದೇವೆ ಆದರೆ ಹರೀಶ್ ಪೂಂಜಾ (Harish Poonja) ಉದ್ದೇಶವೇ ಬೇರೆ ಇದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿರುವ ಸತ್ಯಾಂಶವನ್ನ ಅವರು ಒಪ್ಪಿಕೊಳ್ಳಬೇಕು. ಅದನ್ನು ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.

    ಮಂಗಳೂರಿನಲ್ಲಿ (Mangaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಹರೀಶ್ ಪೂಂಜಾ `ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಕರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಬರುವ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ಧಿಯಾಗಿಲ್ಲ. ಈ ವಿಚಾರ ಪೂಂಜಾ ಮಾತನಾಡಬೇಕು. ಇದರಲ್ಲೂ ಅವರು ಜನರನ್ನು ಒಡೆಯಲು ಹೊರಟಿರುವುದು ದುರ್ದೈವದ ವಿಚಾರ. ಇವರದ್ದೆಲ್ಲಾ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಏಪ್ರಿಲ್ 10ರ ಒಳಗಡೆ ವನ್ಯಜೀವಿ ಅಂಗಾಂಗಗಳ ವಾಪಸ್ ನೀಡಿ – ಸರ್ಕಾರದ ಡೆಡ್‌ಲೈನ್

    ಸ್ವಯತ್ತ ಸಂಸ್ಥೆಯ ಅಧಿಕಾರಿಗಳು ಕೂಡ ಇವರು ಹೇಳಿದಂತೆ ಕೇಳುತ್ತಿದ್ದಾರೆ. ಸಿಎಂನ್ನು ಅರೆಸ್ಟ್ ಮಾಡೋದು, ವಿರೋಧ ಪಕ್ಷಕ್ಕೆ ತೊಂದರೆ ಕೊಡೋದು, ಪತ್ರಕರ್ತರನ್ನು ಜೈಲಿಗೆ ಹಾಕಿಸೋ ಕೆಲಸ ಆಗುತ್ತಿದೆ. ಇದು ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಅವರು ಕೇಂದ್ರದ ವಿರುದ್ಧ ಆರೋಪ ಮಾಡಿದ್ದಾರೆ.

    ಕೆಂಪಣ್ಣ ಸಿಎಂ ಬಳಿ ಬಂದು ಹೇಳಲಿ: ಕಾಂಗ್ರೆಸ್ ಸರ್ಕಾರದ ವಿರುದ್ದ ಕೆಂಪಣ್ಣ 40% ಕಮಿಷನ್ ಆರೋಪ ವಿಚಾರವಾಗಿ, ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಕೆಂಪಣ್ಣರ ವಿಷಯ ನಿಜವಾಗಿದ್ರೆ ಬಂದು ಸಿಎಂಗೆ ಹೇಳಬಹುದು. ಅವರು ಯಾವ ವಿಚಾರ ಎಲ್ಲಿ, ಏನಾಗ್ತಿದೆ ಎಂದು ಸ್ಪಷ್ಟವಾಗಿ ಹೇಳಲಿ. ನನ್ನ ಇಲಾಖೆಯಲ್ಲಿ ನಡೆಯುತ್ತಿದ್ದರೆ ನಾನು ತನಿಖೆ ಮಾಡಿಸುತ್ತೇನೆ. ಕಳೆದ ಬಾರಿ ಅವರು ಅನೇಕ ವಿಷಯ ಪ್ರಸ್ತಾಪ ಮಾಡಿದ್ದರು. ಅದರಿಂದ ನಾವು ಅವರ ಆರೋಪಕ್ಕೆ ತನಿಖೆ ನಡೆಸುತ್ತಿದ್ದೇವೆ. ಅದೇ ರೀತಿ ಇವತ್ತು ಇದ್ದರೂ ಕ್ರಮ ತೆಗೆದುಕೊಳ್ಳೊಣ. ಭ್ರಷ್ಟಾಚಾರದ ವಿರುದ್ಧ ಯಾವುದೇ ಸಹನೆ ಇರಬಾರದು ಎಂದಿದ್ದಾರೆ.

    ಜೂಜು ಹೆಚ್ಚಾದ್ರೆ ಕ್ರಮ: ಜಿಲ್ಲೆಯ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧ ವಿಚಾರವಾಗಿ, ಕೋಳಿ ಅಂಕದ ವಿಚಾರ ನನಗೆ ಯಾವುದೇ ದೂರು ಬಂದಿಲ್ಲ. ನನ್ನ ಗಮನಕ್ಕೆ ಯಾರೂ ತಂದಿಲ್ಲ, ಯಾರಾದರೂ ಗಮನಕ್ಕೆ ತಂದರೆ ಚರ್ಚೆ ಮಾಡುತ್ತೇನೆ. ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತದೆ. ಆಟ ನಮ್ಮ ಕಲೆ ಮತ್ತು ಸಂಪ್ರದಾಯ, ಕ್ರೀಡೆ ಎಂದು ಒಪ್ಪಿಕೊಳ್ಳಬೇಕು. ಕಂಬಳ, ಜಲ್ಲಿಕಟ್ಟು ಮಾಡ್ತಾರೆ, ಆದರೆ ಜೂಜು ಹೆಚ್ಚಾದಾಗ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್‌ ದಾಖಲು

  • ಅಂಬೇಡ್ಕರ್ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಹರೀಶ್ ಪೂಂಜಾ

    ಅಂಬೇಡ್ಕರ್ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಹರೀಶ್ ಪೂಂಜಾ

    ಮಂಗಳೂರು: ಡಾ.ಬಿ.ಆರ್.ಅಂಬೇಡ್ಕರ್(B.R.Ambedkar) ಅವರ ಆಶಯದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ( Harish Poonja) ಅಭಿಪ್ರಾಯಪಟ್ಟಿದ್ದಾರೆ.

    ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಸರ್ಕಾರಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಿದೆ. ಭಾರತ ಸಂವಿಧಾನದ ಮೂಲ ಪ್ರತಿಯಲ್ಲಿ ರಾಮಾಯಣದ ಉಲ್ಲೇಖವಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ರಚನೆಯಲ್ಲಿ ಮೂಲಭೂತ ಹಕ್ಕುಗಳನ್ನು ವಿವರಿಸುವ ಮೂಲ ಪ್ರತಿಯ ಮೊದಲ ಪುಟದಲ್ಲಿ ರಾಮ, ಸೀತೆ ಮತ್ತು ಲಕ್ಷ್ಮಣ ಭಾವಚಿತ್ರ ಇಡಲಾಗಿದೆ. ಈ ಮೂಲಕ ರಾಮನೇ ಜನರ ಹಕ್ಕು ರಕ್ಷಿಸುವ ರಕ್ಷಕ ಎಂದು ಅಂಬೇಡ್ಕರ್ ಅವರೇ ಸಾರಿದ್ದಾರೆ. ಬಹಳ ಸ್ಪಷ್ಟವಾಗಿ ರಾಮರಾಜ್ಯ ಮತ್ತು ರಾಮ ಈ ದೇಶಕ್ಕೆ ಪೂರಕ ಅಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರಾ ನಿತೀಶ್?

    ಈ ದೇಶದಲ್ಲಿ 65 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ರಾಮನ ಪ್ರತಿಷ್ಠೆ ಬಹಿಷ್ಕಾರ ಮಾಡುತ್ತೆ. ಗಾಂಧೀಜಿಯವರ ರಾಮ ಬೇಕು, ನಿಮ್ಮ(ಬಿಜೆಪಿ) ರಾಮ ಬೇಡ ಅಂದಿದ್ದಾರೆ. ಆದರೆ ವಾಲ್ಮೀಕಿ ನಂಬಿದ, ಗಾಂಧೀಜಿ ಹೇಳಿದ, ಹಿಂದೂ ಸಮಾಜದ ಮರ್ಯಾದ ಪುರುಷೋತ್ತಮ ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಕಾಂಗ್ರೆಸ್ ನಾಯಕರ ಹೊರತುಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪೂಜಿಸೋ ರಾಮ ಹುಟ್ಟಿದ್ದು ಕೂಡ ಅಯೋಧ್ಯೆಯಲ್ಲಿ. ಆದರೆ ಕಾಂಗ್ರೆಸ್ ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಸಂವಿಧಾನದ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ವಿವೇಕಾನಂದರ ವಿಶ್ವ ವಂದ್ಯ ಭಾರತದ ಹೊಸ್ತಿಲಲ್ಲಿ ನಾವಿದ್ದೇವೆ. ಅಭಿವೃದ್ಧಿ ವಂಚಿತ ಕರ್ನಾಟಕ ಇದೆ, ಅಭಿವೃದ್ಧಿ ಮಾಡದ ಸರ್ಕಾರ ಇದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲ ಪ್ರದರ್ಶಿಸಿದ ಮಕ್ಕಳು – ಶಾಸಕ ಶಿವಲಿಂಗೇಗೌಡ ಗರಂ

  • ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

    ಮುಸ್ಲಿಮರ ಜನಸಂಖ್ಯೆ ಹೆಚ್ಚಾದ್ರೆ ಹಿಂದೂಗಳ ಪರಿಸ್ಥಿತಿ ಹೇಗಿರತ್ತೆ ಯೋಚ್ನೆ ಮಾಡಿ: ಹರೀಶ್ ಪೂಂಜಾ ಭಾಷಣ ವೈರಲ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Belthangady MLA Harish Poonja) ಪ್ರಚೋದನಾಕಾರಿ ಭಾಷಣದ ಕ್ಲಿಪ್ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಜ.7 ರಂದು ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದಲ್ಲಿ ತುಳುವಿನಲ್ಲಿ ಭಾಷಣ (Tulu Speech) ಮಾಡಿದ ಶಾಸಕರು, ಇವತ್ತು ಒಂದು ಮಕ್ಕಳು ಎರಡು ಮಕ್ಕಳು. ಅದುವೇ ಬೇರೆ ಧರ್ಮದವರು ಮಕ್ಕಳು ಎಷ್ಟು ಅಂತ ನೋಡಿದ್ರೆ ನಮ್ಮ ಸಂಖ್ಯೆ ಎಷ್ಟು ಇದೆ. ಕೆಲವರು ಹೇಳ್ತಾರೆ ನಮ್ಮ ಸಂಖ್ಯೆ 80 ಕೋಟಿ ಇದೆ ಅವರದ್ದು 20 ಕೋಟಿ ಇರೋದಲ್ವಾ ಅಂತಾ. ಈ 20 ಕೋಟಿಗೆ ನಾಲ್ಕು ಮಕ್ಕಳು ಹುಟ್ಟಿದ್ರೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ ಎಂದರು.

    ನಮಗೆ ಹುಟ್ಟೋದು ಒಂದು…ತಪ್ಪಿದ್ರೆ ಎರಡು…ನಮ್ಮದು ಎಷ್ಟಾಗುತ್ತೆ ಲೆಕ್ಕ ಹಾಕಿ. ಒಂದು ಸ್ವಲ್ಪ ಹೊತ್ತು ಮನೆಯಲ್ಲಿ ಕೂತು ಯೋಚನೆ ಮಾಡಿ. ಎಷ್ಟು ವರ್ಷಕ್ಕೆ ನಮ್ಮ ಜನಸಂಖ್ಯೆ ಕಡಿಮೆಯಾಗಬಹುದು, ಎಷ್ಟು ವರ್ಷಕ್ಕೆ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಬಹುದು. ಒಂದು ವೇಳೆ ಮುಸ್ಲಿಮರ ಸಂಖ್ಯೆ 80 ಕೋಟಿ ಆಗಿ ನಮ್ಮ ಜನಸಂಖ್ಯೆ 20 ಕೋಟಿಯಾಗುವಾಗ ನಮ್ಮ ದೇಶದಲ್ಲಿರುವ ಹಿಂದೂಗಳ ಪರಿಸ್ಥಿತಿ ಏನಾಗಬಹುದು ಅನ್ನೋದನ್ನ ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; ಮುಸ್ಲಿಮರ ಮೇಲಿನ ದ್ವೇಷ ಕೊನೆಗೊಳ್ಳುವ ವಿಶ್ವಾಸವಿದೆ: ಫಾರೂಕ್‌ ಅಬ್ದುಲ್ಲಾ

    ಸದ್ಯ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪೂಂಜಾ ಪರ- ವಿರೋಧ ಕಾಮೆಂಟ್‍ಗಳು ಬರುತ್ತಿವೆ.

  • ಹರೀಶ್ ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ: ಸಿದ್ದರಾಮಯ್ಯ

    ಹರೀಶ್ ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ: ಸಿದ್ದರಾಮಯ್ಯ

    ಮಂಗಳೂರು: ಸಿಎಂ ಬಗ್ಗೆ ಶಾಸಕ ಹರೀಶ್ ಪೂಂಜಾ (Harish Poonja)  ‘ಕಲೆಕ್ಷನ್ ಮಾಸ್ಟರ್’ ಎಂಬ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಮಂಗಳೂರು (Mangaluru) ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು 83 ರಿಂದ ಶಾಸಕನಾಗಿ, 85ರಲ್ಲೇ ಮಿನಿಸ್ಟರ್ ಆಗಿದ್ದವನು. ಯಾರೂ ನನ್ನನ್ನು ಈ ರೀತಿ ಕರೆದಿರಲಿಲ್ಲ. ಇವರು ಪಾಪ ಇನ್ನೂ ರಾಜಕೀಯದಲ್ಲಿ (Politics) ಬಚ್ಚಾ. ಇದನ್ನು ಹಿಂದಿನ ಬಿಜೆಪಿ (BJP) ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಕಿಡಿಕಾರಿದರು. ಇದನ್ನೂ ಓದಿ: Rozgar Mela: 51,000 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಪ್ರಧಾನಿ ಮೋದಿ

    50 ಕೋಟಿ ಆಫರ್ ಬಗ್ಗೆ ನನಗೆ ಗೊತ್ತಿಲ್ಲ, ರವಿ ಹತ್ತಿರ ಕೇಳಿ. ಯಾರು ಹೇಳಿದ್ದಾರೋ ಅವರ ಹತ್ತಿರ ಕೇಳಿ. ನನಗೆ ಯಾವುದೇ ಮಾಹಿತಿ ಬಂದಿಲ್ಲ. ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. 50 ಕೋಟಿ ಕೊಟ್ಟು ಅಧಿಕಾರದ ಆಫರ್ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: 50 ಅಲ್ಲ 100 ಕೋಟಿ ಕೊಟ್ರೂ ಕಾಂಗ್ರೆಸ್ ಶಾಸಕರು ಬಿಜೆಪಿ ಗಾಳಕ್ಕೆ ಬೀಳಲ್ಲ: ಗಣಿಗ ರವಿ

    ಪರಮೇಶ್ವರ್ (G Parameshwar) ಮನೆಯಲ್ಲಿ ಡಿನ್ನರ್ ಪಾರ್ಟಿ ಕುರಿತಾಗಿ ಮಾತನಾಡಿದ ಅವರು, ಪರಮೇಶ್ವರ್ ಊಟಕ್ಕೆ ಕರೆದಿದ್ದರು, ಹೋಗಿದ್ದೇವೆ. ಅದಕ್ಕೆ ಮಸಾಲೆ ಯಾಕೆ ಹಾಕ್ತೀರಾ? ಅವರು ನನಗೆ, ಮಹಾದೇವಪ್ಪ, ಸತೀಶ್ ಜಾರಕಿಹೊಳಿಗೆ ಊಟಕ್ಕೆ ಕರೆದಿದ್ದರು. ಅಲ್ಲಿ ಯಾವುದೇ ರಾಜಕೀಯ ಇಲ್ಲ. ಅದೆಲ್ಲಾ ಸುಳ್ಳು. ಬಣ್ಣ ಕಟ್ಟಲಾಗ್ತಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಕೆಲವರಿಗೆ ದುರಹಂಕಾರ ಬಂದಿದೆ: ರೇಣುಕಾಚಾರ್ಯ

    ಮೊದಲ ಹಂತದಲ್ಲಿ ಕೆಲ ಶಾಸಕರಿಗೆ ನಿಗಮ ಮಂಡಳಿ ಕೊಡುತ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರು, ನಾಯಕರಿಗೆ ಶೀಘ್ರವಾಗಿ ಹಂಚಿಕೆ ಮಾಡಲಾಗುತ್ತದೆ. ನಾವು ಬರ ಪರಿಹಾರ 7,900 ಕೋಟಿ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಒಂದು ರೂ. ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದರು. ಇನ್ನು ಕಾರ್ಕಳದ ಪರಶುರಾಮ ಮೂರ್ತಿ ಅಸಲಿನಾ? ನಕಲಿನಾ ಎಂಬುದರ ಕುರಿತು ತನಿಖೆ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೊಡಿಸೋದಾಗಿ ಚೈತ್ರಾ ಮಾದರಿಯಲ್ಲೇ ಕೋಟಿ ಕೋಟಿ ವಂಚನೆ- ಆರೋಪಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಡವರ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ಧ: ಹರೀಶ್ ಪೂಂಜಾ

    ಬಡವರ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ಧ: ಹರೀಶ್ ಪೂಂಜಾ

    ಮಂಗಳೂರು: ಅರಣ್ಯಾಧಿಕಾರಿ ನೀಡಿದ ದೂರಿನ ಮೇರೆಗೆ ಹರೀಶ್ ಪೂಂಜಾ (Harish Poonja) ಮೇಲೆ ಎಫ್‍ಐಆರ್ ದಾಖಲಾಗಿದ್ದು, ಇದೀಗ ಶಾಸಕರು ಬಂಧನದ ಭೀತಿಯಲ್ಲಿದ್ದಾರೆ. ಈ ಬೆನ್ನಲ್ಲೇ ಶಾಸಕರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಬಡವರ ರಕ್ಷಣೆಗಾಗಿ ಜೈಲಿಗೆ ಹೋಗಲು ಸಿದ್ಧ ಎಂದು ತಿಳಿಸಿದ್ದಾರೆ.

    ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ. ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ಇದನ್ನೂ ಓದಿ: ಅರಣ್ಯಾಧಿಕಾರಿಗಳ ಎದುರೇ ಮನೆ ನಿರ್ಮಾಣಕ್ಕೆ ಸೂಚನೆ ಕೊಟ್ಟ ಶಾಸಕ

    ಪೋಸ್ಟ್ ನಲ್ಲಿ ಏನಿದೆ..?: ನೋಡೇ ಬಿಡೋಣ. ನಾನು ಶಾಸಕನಾಗಿರುವುದು ನನ್ನ ಜನರ ಸೇವೆಗೆ ಮತ್ತು ಅವರ ರಕ್ಷಣೆಗೆ ಜೈಲಿಗೆ ಹೋಗಲು ಸಿದ್ಧ. ಬಾಲ್ಯದಿಂದಲೂ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್, ವೀರ ಸಾವರ್ಕರ್, ಭಗತ್ ಸಿಂಗ್ ಮುಂತಾದವರನ್ನು ಆದರ್ಶವಾಗಿ ಇಟ್ಟುಕೊಂಡು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ (ಂಃಗಿP) ದಿನಗಳಿಂದ ಜನ ಸೇವೆ, ಜನರಿಗಾಗಿ ಸಂಘರ್ಷ ಮಾಡಿಕೊಂಡು ನಾಯಕನಾದವನು. ನಾನು ಜನರಿಂದ ಶಾಸಕನಾಗಿ ಜನರಿಗೋಸ್ಕರ ಇರುವವನು ಅದಕ್ಕಾಗಿ ಯಾವ ಬೆಲೆ ತೆರಲು ಸಿದ್ಧ.

    ನನ್ನ ವಿಧಾನಸಭಾ ಕ್ಷೇತ್ರದಲ್ಲಿ, ಅರಣ್ಯದ ಅಂಚಿನಲ್ಲಿ, ನೂರು ವರ್ಷಕ್ಕಿಂತಲೂ ಹಿಂದಿನಿಂದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದ ಕಳೆಂಜದ ಶ್ರೀ ದೇವಣ್ಣ ಗೌಡ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಯತ್ನಿಸಿದ ಅರಣ್ಯ ಇಲಾಖೆಯ ವಿರುದ್ಧ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕ ಮಿತ್ರರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಸೇರಿ ಪ್ರತಿಭಟಿಸಿ ಬಡ ಕುಟುಂಬವನ್ನು ಒಕ್ಕಲೆಬ್ಬಿಸುವುದರಿಂದ ತಡೆದಿದ್ದೆವು.

    ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದ ಮನೆಯವರ ಪರವಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ಧ್ವನಿ ಎತ್ತಿದ್ದು ತಪ್ಪಾಯಿತೇ? ನನ್ನ ಕ್ಷೇತ್ರದ ಜನರ ಪರವಾಗಿ ಹೋರಾಡುವ ಹಕ್ಕು ನನಗಿಲ್ಲವೇ? ನನ್ನ ಜನ ನನ್ನಲ್ಲಿ ಸಮಸ್ಯೆ ಹೇಳಿಕೊಂಡಾಗ ಸುಮ್ಮನಿರಬೇಕೆ? ಹೀಗಾದರೆ ಸಾಮಾನ್ಯ ಜನರ ಗತಿಯೇನು? ಜನರ ಸಮಸ್ಯೆಗೆ ಧ್ವನಿಯಾದ ಒಬ್ಬ ಜನಪ್ರತಿನಿಧಿಯನ್ನು ಹೀಗೆಲ್ಲ ಕಾಡುವುದಾದರೆ ಜನಸಾಮಾನ್ಯರು ಕಾಂಗ್ರೆಸ್ ಸರ್ಕಾರದಡಿಯಲ್ಲಿ ಹೇಗೆ ಬದುಕಬೇಕು? ಮಾನ್ಯ ಮುಖ್ಯಮಂತ್ರಿಗಳೇ, ಅರಣ್ಯ ಸಚಿವರೇ ನಿಮ್ಮ ಈ ಬೆದರಿಕೆ ತಂತ್ರಗಳಿಗೆ ನಾನು ಬೆದರುವುದಿಲ್ಲ. ಮತ್ತೆ ಹೇಳುತ್ತಿದ್ದೇನೆ ಬಡವರಿಗಾಗಿ ಇಂತಹ ನೂರು ಕೇಸು ಹಾಕಿಸಿಕೊಳ್ಳುವುದಕ್ಕೂ ಸಿದ್ಧನಿದ್ದೇನೆ, ಜೈಲು ಸೇರಲೂ ತಯಾರಿದ್ದೇನೆ.

    ಏನಿದು ಘಟನೆ..?: ಕೆಲ ದಿನಗಳ ಹಿಂದೆ ಅಂದರೆ ಅ. 8ರಂದು ಚಾರ್ಮಾಡಿ ಅರಣ್ಯದಲ್ಲಿ ಮನೆ ನಿರ್ಮಾಣ-ತೆರವು ಸಂಬಂಧ ಅರಣ್ಯಾಧಿಕಾರಿಗಳು-ಶಾಸಕರ ನಡುವೆ ಭಾರೀ ಜಟಾಪಟಿ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್ ಗೆ ‘ಲೋಫರ್ ನನ್ ಮಗ’ ಅಂತಾ ಶಾಸಕರು ಬೈದಿದ್ದಾರೆ. ಇದರಿಂದ ಬೇಸರಗೊಂಡ ಅರಣ್ಯಾಧಿಕಾರಿ ಶಾಸಕ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ 1860(ಯು/ಎಸ್-143, 353, 504, 149) ಅಡಿ ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ FIR ದಾಖಲು

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ FIR ದಾಖಲು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (MLA Harish Poonja) ಅವರ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳ  ಪೊಲೀಸ್ ಠಾಣೆಯಲ್ಲಿ (Dharmasthala Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅರಣ್ಯಾಧಿಕಾರಿಗಳ ಎದುರೇ ಮನೆ ನಿರ್ಮಾಣಕ್ಕೆ ಸೂಚನೆ ಕೊಟ್ಟ ಶಾಸಕ

    ಕೆಲ ದಿನಗಳ ಹಿಂದೆ ಅಂದರೆ ಅ. 8ರಂದು ಚಾರ್ಮಾಡಿ (Charmadi Ghat) ಅರಣ್ಯದಲ್ಲಿ ಮನೆ ನಿರ್ಮಾಣ-ತೆರವು ಸಂಬಂಧ ಅರಣ್ಯಾಧಿಕಾರಿಗಳು-ಶಾಸಕರ ನಡುವೆ ಭಾರೀ ಜಟಾಪಟಿ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್ ಗೆ ‘ಲೋಫರ್ ನನ್ ಮಗ’ ಅಂತಾ ಶಾಸಕರು ಬೈದಿದ್ದಾರೆ ಎಂದು ದೂರು ನೀಡಲಾಗಿತ್ತು.

    ಇದರಿಂದ ಬೇಸರಗೊಂಡ ಅರಣ್ಯಾಧಿಕಾರಿ ಶಾಸಕ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ 1860(ಯು/ಎಸ್-143, 353, 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 149) ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಹರೀಶ್ ಪೂಂಜಾ ಅವರು ಬಂಧನದ ಭೀತಿಯಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]