Tag: ಹರೀಶ್ ಗೌಡ

  • ಸಿಎಂ ತವರೂರಿನ ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್ ಚೇರ್ ಅವ್ಯವಸ್ಥೆ – ಶಾಸಕ ಹರೀಶ್‌ಗೌಡ ತೀವ್ರ ತರಾಟೆ!

    ಸಿಎಂ ತವರೂರಿನ ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್ ಚೇರ್ ಅವ್ಯವಸ್ಥೆ – ಶಾಸಕ ಹರೀಶ್‌ಗೌಡ ತೀವ್ರ ತರಾಟೆ!

    – ಎಂಎಲ್‌ಎ ಪ್ರಶ್ನಿಸಿದ್ದಕ್ಕೆ ರಾಜೀನಾಮೆ ಕೊಡ್ತೀನಿ ಎಂದ ಆಸ್ಪತ್ರೆ ಸೂಪರಿಂಟೆಂಡೆಂಟ್
    – ಆಸ್ಪತ್ರೆ ಅದ್ವಾನ ನೋಡಿಯೂ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವ‌ರು ಜಿಲ್ಲೆಯ ದೊಡ್ಡಾತ್ರೆಯಲ್ಲೇ ವ್ಹೀಲ್‌ ಚೇರ್‌ ಅವ್ಯವಸ್ಥೆ ಕಂಡುಬಂದಿದೆ. 4 ಜಿಲ್ಲೆಗಳ ಕೇಂದ್ರಬಿಂದು ಆಗಿರುವ ಮೈಸೂರಿನ ಕೆ.ಆರ್‌ ಆಸ್ಪತ್ರೆಯಲ್ಲೇ ವ್ಹೀಲ್‌ ಚೇರ್‌ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ವ್ಹೀಲ್‌ ಚೇರ್‌ ಇಲ್ಲದೇ ಪ್ಲಾಸ್ಟಿಕ್ ಚೇರ್‌ನಲ್ಲಿ ಚಿಕಿತ್ಸೆಗಾಗಿ ವೃದ್ಧೆಯೊಬ್ಬರನ್ನ ಕರೆದೊಯ್ದಿರುವ ದೃಶ್ಯ ಮನ ಕಲುಕುವಂತೆ ಮಾಡಿದೆ.

    ಹೌದು. ನಾಲ್ಕು ಜಿಲ್ಲೆಗಳಿಗೆ ಆಧಾರವಾಗಿರುವ ಪ್ರತಿಷ್ಠಿತ ಕೆ.ಆರ್ ಆಸ್ಪತ್ರೆಯಲ್ಲಿ ರೋಗಿಯನ್ನ ಚೇರ್‌ನಲ್ಲಿ ಕೂರಿಸಿಕೊಂಡು ಕರೆದೊಯ್ದಿರುವ ದೃಶ್ಯ ʻಪಬ್ಲಿಕ್‌ ಟಿವಿʼ ಕ್ಯಾಮೆರಾದಲ್ಲಿ ಸೆರೆಯಾಗಿದೆ. ʻಪಬ್ಲಿಕ್‌ ಟಿವಿʼ ಈ ಅವ್ಯವಸ್ಥೆಯನ್ನು ಬಯಲಿಗೆಳೆಯುತ್ತಿದ್ದಂತೆ ಸ್ಥಳೀಯ ಶಾಸಕ ಹರೀಶ್‌ ಗೌಡ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ವ್ಹೀಲ್‌ ಚೇರ್‌ ಇಟ್ಟಿದ್ದ ಕೊಠಡಿಯ ಬೀಗ ಒಡೆಸಿದ್ದಾರೆ. ದುಸ್ಥಿತಿಯಲ್ಲಿದ್ದ ವ್ಹೀಲ್‌ ಚೇರ್‌ಗಳನ್ನು ಕಂಡ ಶಾಸಕರು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಶೋಭಾರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಾನೇ ರಾಜೀನಾಮೆ ಕೊಡ್ತಿನಿ ಅಂತ ಸೂಪರಿಂಟೆಂಡೆಂಟ್ ಅಲ್ಲಿಂದ ತೆರಳಿದ್ದಾರೆ.

    ನಿರ್ಲಕ್ಷ್ಯ ಮಾಡಿದವರ ಮೇಲೆ 100ಕ್ಕೆ 100 ಕ್ರಮ:
    ಬಳಿಕ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಶಾಸಕ ಹರೀಶ್‌ ಗೌಡ, ಪ್ರಕರಣದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಈ ನಿರ್ಲಕ್ಷ್ಯ ಮಾಡಿದವರ ಮೇಲೆ 100ಕ್ಕೆ 100 ಕ್ರಮ ಜರುಗಿಸುತ್ತೇನೆ. ಕ್ರಮಕ್ಕೆ ಆಗ್ರಹಿಸಿ ಸಚಿವರಿಗೂ ಪತ್ರ ಬರೆಯುತ್ತೇನೆ ಎಂದು ಜೋರು ದನಿಯಲ್ಲಿ ಮಾತನಾಡಿದರು.

    ಎಲ್ಲರ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರಿತೀನಿ:
    ಕೆ.ಆರ್ ಆಸ್ಪತ್ರೆಯ ಆಡಳಿತಾಧಿಕಾರಿ ದ್ರಾಕ್ಷಾಯಿಣಿ ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಪಟ್ಟ ಎಲ್ಲರ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಇವತ್ತೇ ಎಲ್ಲರಿಗೂ ನೋಟಿಸ್ ಕೊಡ್ತೀನಿ. ಸಂಜೆಯೊಳಗೆ ಕೆಟ್ಟು ಹೋಗಿರುವ ಲಿಫ್ಟ್ ರಿಪೇರಿ ಮಾಡಿಸುತ್ತೇನೆ, ಮೂರು ದಿನಗಳಲ್ಲಿ ಮುರಿದಿರುವ ಎಲ್ಲಾ ವ್ಹೀಲ್‌ ಚೇರ್‌ಗಳನ್ನ ದುರಸ್ತಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

    ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ:
    ಕೆ.ಆರ್ ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಈ ವಿಚಾರ ಕುರಿತು ಮಾತನಾಡಿ, ನನಗೆ ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ. 10 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ 20ಕ್ಕೂ RTI ಕಾರ್ಯಕರ್ತರು ಬಂದು ಪ್ರಶ್ನೆ ಮಾಡ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

    ಅದ್ವಾನ ನೋಡಿಯೂ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್:
    ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್‌ ಚೇರ್‌ ಇಲ್ಲದೇ ರೋಗಿಗಳ ಪರದಾಟವನ್ನು ಕಂಡ ಶಾಸಕ ಹರೀಶ್‌ಗೌಡ ಕೆಳ ಹಂತದ ಸಿಬ್ಬಂದಿ ವಿರುದ್ಧ ರೇಗಾಡಿದರು. ಆದ್ರೆ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಲ್ಲಿ ಡೀನ್ ಮತ್ತು ಸೂಪರಿಂಟೆಂಡೆಂಟ್ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ ಎಂದು ಅಲ್ಲಿಂದ ಹೊರಟ್ಟಿದ್ದಾರೆ.

  • ರಾಜಕೀಯ ವೈರಿಗಳ ಪುತ್ರರಿಂದ ಜಂಟಿ ಪ್ರಚಾರ

    ರಾಜಕೀಯ ವೈರಿಗಳ ಪುತ್ರರಿಂದ ಜಂಟಿ ಪ್ರಚಾರ

    ಚಾಮರಾಜನಗರ: ರಾಜಕೀಯ ವೈರಿಗಳ ಪುತ್ರರಿಂದ ಇಂದು ಜಂಟಿ ಪ್ರಚಾರ ನಡೆಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ.ದೇವೆಗೌಡ ಪುತ್ರ ಹರೀಶ್ ಗೌಡ ದೋಸ್ತಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ.

    ಮೈಸೂರಿನ ಜನತಾ ನಗರದ ಮಹದೇಶ್ವರ ದೇವಾಲಯದಿಂದ ಪ್ರಚಾರ ಆರಂಭಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಜಿದ್ದಾ ಜಿದ್ದಿನ ಕಣವಾಗಿತ್ತು. ಹೀಗಾಗಿ ಕಳೆದ ಚುನಾವಣೆ ಮುನಿಸು ಮರೆತು ದೋಸ್ತಿ ಅಭ್ಯರ್ಥಿ ಪರ ಜಂಟಿ ಪ್ರಚಾರವನ್ನು ಮಾಡುತ್ತಿದ್ದಾರೆ.

    ಈ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಾಗಿದೆ. ಹೀಗಾಗಿ ನಾವು ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ತಂದೆ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಎಲ್ಲರು ಮೈತ್ರಿ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ತಂದೆ ಸಿದ್ದರಾಮಯ್ಯ ಅವರು ವಿರುದ್ಧವಾಗಿ ಸ್ಪರ್ಧೆ ಮಾಡಿದ್ದರು. ಈಗ ಮೈತ್ರಿ ಅಭ್ಯರ್ಥಿ ಪರ ಮಾಡಬೇಕು ಎಂದು ವರಿಷ್ಠರು ತೀರ್ಮಾನ ಮಾಡಿದ್ದಾರೆ. ನಾವು ಎಲ್ಲವನ್ನು ಮರೆತು ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ ಹೇಳಿದ್ದಾರೆ.

    ನಾನು ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ವರುಣದಲ್ಲಿ ದೃವನಾರಾಯಣ್ ಪರ ಒಳ್ಳೆಯ ಅಭಿಪ್ರಾಯ ಇದೆ. ಮೊದಲು ಮೈತ್ರಿ ವಿಚಾರವಾಗಿ ಸಣ್ಣಪುಟ್ಟ ಗೊಂದಲ ಇತ್ತು. ಇದೀಗ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಎಲ್ಲವು ಬಗೆಹರಿದಿದೆ. ಪಕ್ಷಗಳಲ್ಲಿ ಯಾವುದೇ ಗೊಂದಲ ಇಲ್ಲ. 14 ರಂದು ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೆಗೌಡರು ಜಂಟಿಯಾಗಿ ಪ್ರಚಾರ ಮಾಡುತ್ತಾರೆ. ಪ್ರಧಾನಿ ಮೋದಿ ಆಗಮನದಿಂದ ಯಾವುದೇ ಬದಲಾವಣೆಯಾಗಲ್ಲ. ಮೋದಿ ಹೇಳುವುದೆಲ್ಲ ಸುಳ್ಳು ಎಂದು ಜನರಿಗೆ ಗೊತ್ತಿದೆ ಎಂದು ಮೈಸೂರಿನಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.