Tag: ಹರಿ ವಿನಯ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ನಟಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಪಿಸ್ಸೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಐಶ್ವರ್ಯಾ ಅವರು ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಅವರನ್ನು ಇತ್ತೀಚೆಗಷ್ಟೆ ಮೈಸೂರಿನಲ್ಲಿ ಮದುವೆಯಾಗಿದ್ದಾರೆ. ಹರಿ ವಿನಯ್ ಅವರು ಮೈಸೂರು ಮೂಲದವರಾಗಿದ್ದು, ನಿರ್ಮಾಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರಿಬ್ಬರ ಮದುವೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದು, ನವಜೋಡಿಗಳಿಗೆ ಶುಭಾಶಯ ಕೋರಿದ್ದಾರೆ.

    ಮದುವೆ ಬಗ್ಗೆ ಮಾತನಾಡಿರುವ ಐಶ್ವರ್ಯಾ, “ನಮ್ಮದು ಗುರು ಹಿರಿಯರು ನಿಶ್ಚಯಿಸಿ ಮಾಡಿಸಿರುವ ಅರೇಂಜ್ಡ್ ಮ್ಯಾರೇಜ್ ಆಗಿದೆ. ಈ ಮದುವೆಗೆ ಕೇವಲ ಬಂಧುಮಿತ್ರರು ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು. ಹರಿ ಅವರು ನನ್ನ ಕರಿಯರ್‌ಗೆ ಸಪೋರ್ಟ್ ಮಾಡುತ್ತಾರೆ. ಜೊತೆಗೆ ನನ್ನ ಎಲ್ಲ ಕೆಲಸಗಳಿಗೆ ಪ್ರೋತ್ಸಾಹಿಸುತ್ತಾರೆ. ಅಷ್ಟೇ ಅಲ್ಲದೇ ನಾನು ಕಿರುತೆರೆಯಲ್ಲಿ ಮುಂದುವರಿಯಲು ಹರಿ ಅವರು ಸಪೋರ್ಟ್ ಮಾಡುತ್ತಾರೆ” ಎಂದು ಹರಿಯ ಬಗ್ಗೆ ಸಂತಸದಿಂದ ಹೇಳಿಕೊಂಡಿದ್ದಾರೆ.

    ನಟಿ ಐಶ್ವರ್ಯ ಅವರು `ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಟ ಚಂದನ್ ಕುಮಾರ್ ಸಹ ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

    ಅಷ್ಟೇ ಅಲ್ಲದೇ ಐಶ್ವರ್ಯ ಯಶ್ ಅಭಿನಯದ `ಸಂತು ಸ್ಟ್ರೈಟ್ ಫಾರ್ವಡ್’ ಸಿನಿಮಾದಲ್ಲಿ ಯಶ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಸೀರಿಯಲ್ ಅಭಿನಯಿಸುತ್ತಿದ್ದಾರೆ.

    https://www.instagram.com/p/B0DFa60Az6_/

  • ಗೆಳೆಯನ ಜೊತೆ ‘ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ಐಶ್ವರ್ಯ ಎಂಗೇಜ್

    ಗೆಳೆಯನ ಜೊತೆ ‘ಸರ್ವಮಂಗಳ ಮಾಂಗಲ್ಯೇ’ ಖ್ಯಾತಿಯ ಐಶ್ವರ್ಯ ಎಂಗೇಜ್

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಪಿಸ್ಸೆ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನೆರವೇರಿದೆ.

    ನಟಿ ಐಶ್ವರ್ಯಾ ಅವರು ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಕುಟುಂಬದವರ ಸಮ್ಮುಖದಲ್ಲಿ ರಿಂಗ್ ಬದಲಾಯಿಸುವ ಮೂಲಕ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಬಂದು ಜೋಡಿಗೆ ಶುಭಕೋರಿದ್ದಾರೆ.

    ನಟಿ ಐಶ್ವರ್ಯ ಅವರು ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಟ ಚಂದನ್ ಕುಮಾರ್ ಸಹ ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

    ಅಷ್ಟೇ ಅಲ್ಲದೇ ಐಶ್ವರ್ಯ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವಡ್’ ಸಿನಿಮಾದಲ್ಲಿ ಯಶ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಸೀರಿಯಲ್ ಅಭಿನಯಿಸುತ್ತಿದ್ದಾರೆ.