Tag: ಹರಿಹರ

  • ವಿಡಿಯೋ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದವನಿಗೆ ಮಹಿಳೆಯಿಂದ ಧರ್ಮದೇಟು

    ವಿಡಿಯೋ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದವನಿಗೆ ಮಹಿಳೆಯಿಂದ ಧರ್ಮದೇಟು

    ದಾವಣಗೆರೆ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಹರಿಹರ ಹೊರಭಾಗದ ಪಿಬಿ ರಸ್ತೆಯಲ್ಲಿ ನಡೆದಿದೆ.

    ಜಾವೇದ್ ಗೂಸಾ ತಿಂದ ವ್ಯಕ್ತಿ. ಮಹಿಳೆ ಮತ್ತು ಆಕೆಯ ಪತಿ ರಸ್ತೆ ಬದಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. ನಾನು ರಸ್ತೆಯ ಕಾವಲುಗಾರ, ನನಗೆ ನೀವು ಹಣ ನೀಡಬೇಕೆಂದು ಜಾವೇದ್ ಧಮ್ಕಿ ಹಾಕಿದ್ದಾನೆ. ದಂಪತಿ ಹಣ ನೀಡದಕ್ಕೆ ಮಹಿಳೆಗೆ ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

    ಬುಧವಾರ ಅಂಗಡಿ ಬಳಿ ಬಂದ ಜಾವೇದ್ ನನ್ನು ಹಿಡಿದ ಮಹಿಳೆ ತಕ್ಕ ಪಾಠ ಕಲಿಸಿದ್ದಾರೆ. ಗೂಸಾ ನೀಡಿದ ಬಳಿಕ ಜಾವೇದ್ ನನ್ನು ಹರಿಹರ ಪೊಲೀಸರ ವಶಕ್ಕೆ ನೀಡಿದ್ದಾರೆ.

    https://youtu.be/q4bVEd5JMmM

     

  • ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆಯಲ್ಲಿ ನವಿಲು ಬೇಟೆಯಾಡಿದ ಇಬ್ಬರ ಬಂಧನ

    ದಾವಣಗೆರೆ: ರಾಷ್ಟ್ರ ಪಕ್ಷಿ ನವಿಲನ್ನು ಬೇಟೆಯಾಡಿದ ಆರೋಪದ ಮೇಲೆ ಹರಿಹರ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ದಾವಣಗೆರೆ ನಗರದ ಎಸ್‍ಎಸ್ ಲೇಔಟ್ ನಿವಾಸಿ ಮೆಹಬೂಬ್ ಬಾಷಾ (55), ಟಿಪ್ಪು ನಗರದ ನಿವಾಸಿ ಇಕ್ಬಾಲ್ (28) ಬಂಧಿತ ಆರೋಪಿಗಳು. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ ಶುಕ್ರವಾರ ತಡ ರಾತ್ರಿ ನವಿಲನ್ನು ಬೇಟೆಯಾಡಲಾಗಿದ್ದು, ಹೆಣ್ಣು ನವಿಲನ್ನು ಗುಂಡಿಟ್ಟು ಕೊಲ್ಲಾಗಿದೆ.

    ಬಂಧಿತರಿಂದ ಲೈಸ್ಸನ್ಡ್ ಎಸ್‍ಬಿಬಿಎಲ್ ಗನ್ (ಸಿಂಗಲ್ ಬ್ಯಾರಲ್ ಬ್ರೀಚ್ ಲೋಡಿಂಗ್ ರೈಫಲ್) ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ನವಿಲು ಮಾಂಸ ಮಾರಾಟಕ್ಕಾಗಿ ಬೇಟೆಗೆ ಇಳಿದಿದ್ದು, ಹರಿಹರ ಸಿಪಿಐ ಜಯಣ್ಣ ಎಸ್.ನೇಮಗೌಡ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

    ಈ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.