Tag: ಹರಿಹರ

  • ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಾ. ವೈ.ನಾಗಪ್ಪ ವಿಧಿವಶ

    ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಡಾ. ವೈ.ನಾಗಪ್ಪ ವಿಧಿವಶ

    ಬೆಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ ಡಾ. ವೈ.ನಾಗಪ್ಪ ವಿಧಿವಶರಾಗಿದ್ದಾರೆ.

    ಶಾಸಕರಾಗಿದ್ದ ವೈ.ನಾಗಪ್ಪ ಅವರು ಧರಂಸಿಂಗ್ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಹರಿಹರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ವೈ.ನಾಗಪ್ಪ ಆಯ್ಕೆಯಾಗಿದ್ದರು. 1989, 1999 ಮತ್ತು 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದ ವೈ.ನಾಗಪ್ಪ ಅವರು ಗೆಲವು ದಾಖಲಿಸಿದ್ದರು. 1985ರ ಚುನಾವಣೆಯಲ್ಲಿ ಸೋತಿದ್ದರು.

    ವೈ.ನಾಗಪ್ಪ ಅವರ ನಿಧನಕ್ಕೆ ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ. ಟ್ವಿಟ್ಟರ್ ನಲ್ಲಿ ವೈ.ನಾಗಪ್ಪ ಅವರ ಫೋಟೋ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವರಾದ ಡಾ.ವೈ.ನಾಗಪ್ಪ ವಿಧಿವಶರಾದ ಸುದ್ದಿ ಮನಸ್ಸಿಗೆ ನೋವುಂಟು ಮಾಡಿದೆ. ಹರಿಹರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ವೈ.ನಾಗಪ್ಪ, ಧರಂಸಿಂಗ್ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದರು. ನಾಗಪ್ಪ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

  • ‘ಈ ಕೂಡಲೇ ಮನೆಯನ್ನು ಖಾಲಿ ಮಾಡಿʼ – ಹೊನ್ನಾಳಿ ತಾಲೂಕು ಆಡಳಿತ ಸೂಚನೆ

    ‘ಈ ಕೂಡಲೇ ಮನೆಯನ್ನು ಖಾಲಿ ಮಾಡಿʼ – ಹೊನ್ನಾಳಿ ತಾಲೂಕು ಆಡಳಿತ ಸೂಚನೆ

    ದಾವಣಗೆರೆ: ಭಾರೀ ಮಳೆಯಿಂದ ತುಂಗಾಭದ್ರೆ ಮೈ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನ ಕೂಡಲೇ ಮನೆಯನ್ನು ಖಾಲಿ ಮಾಡುವಂತೆ ಹೊನ್ನಾಳಿ ತಾಲೂಕು ಆಡಳಿತ ಸೂಚನೆ ನೀಡಿದೆ.

    ಈಗಾಗಲೇ ಹೊನ್ನಾಳಿಯ‌ ಪಟ್ಟಣದಲ್ಲಿ ಮನೆಗಳ‌ ಮುಂಭಾಗಕ್ಕೆ ನೀರು ನಿಂತಿದ್ದು, ಕೂಡಲೇ ಜನರು ಸ್ಥಳೀಯ ಗಂಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ಗುಡ್ಡ ಕುಸಿತ – ಸ್ಥಳೀಯ ನಿವಾಸಿಗಳ ಸ್ಥಳಾಂತರ

    ನೀರಿನ ಮಟ್ಟ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ನದಿ ಪಾತ್ರದ ಮನೆಗಳಿಗೆ‌ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ. ನೆರೆ ಮತ್ತಷ್ಟು ಜಾಸ್ತಿಯಾದರೆ ಹರಿಹರದ ಸಾರಥಿ, ಉಕ್ಕಡಗಾತ್ರಿ, ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತವಾಗುವ ಸಾಧ್ಯತೆಯಿದೆ.

     

  • ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ

    ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ

    ದಾವಣಗೆರೆ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒಂದಲ್ಲೊಂದು ಸಮಸ್ಯೆ ಬರುತ್ತಲೇ ಇವೆ. ಅದರಲ್ಲೂ ಸಚಿವ ಸ್ಥಾನ ತಮ್ಮ ಸಮಾಜದವರಿಗೆ ನೀಡಿ ಎಂದು ಅಯಾ ಸಮಾಜದ ಸ್ವಾಮೀಜಿಗಳು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರಿದ 15 ಜನರಿಗೆ ಸಚಿವ ಸ್ಥಾನ ನೀಡಬೇಕೋ ಮತ್ಯಾರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವ ಗೊಂದಲದಲ್ಲಿ ಸಿಎಂ ಯಡಿಯೂರಪ್ಪನವರು ಇದ್ದಾರೆ. ಇದೇ ವಿಚಾರವಾಗಿ ಸಿಎಂ ಇಂದು ಪಂಚಮಸಾಲಿ ಮಠದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸ್ವಾಮೀಜಿಗಳ ಮೇಲೆಯೇ ಗರಂ ಆದ ಪ್ರಸಂಗ ನಡೆಯಿತು.

    ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಹರ ಜಾತ್ರೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಅವರು ಕೆಂಡಾಮಂಡಲವಾದ ಪ್ರಸಂಗ ನಡೆಯಿತು. ಮೊದಲು ಮಾತನಾಡಿದ ವಚನಾನಂದ ಶ್ರೀಗಳು, ನೀವು ಪವರ್ ಫುಲ್ ಮುಖ್ಯಮಂತ್ರಿಯಾಗಿರುವುದರಿಂದ ಪಂಚಮಸಾಲಿ ಸಮಾಜಕ್ಕೆ ಮೂರು ಜನ ಸಚಿವರನ್ನಾಗಿ ಮಾಡಬೇಕು. ಪ್ರಥಮ ಪ್ರಾಶಸ್ತ್ಯವನ್ನು ಮುರುಗೇಶ್ ನಿರಾಣಿಗೆ ಕೊಡಬೇಕು. ಇಲ್ಲದಿದ್ದರೆ ಸಮಾಜ ನಿಮ್ಮನ್ನು ಕೈಬಿಡುತ್ತದೆ ಎಂದು ಹೇಳಿದರು.

    ಶ್ರೀಗಳ ಹೇಳಿಕೆಯಿಂದ ಕೆಂಡಾಮಂಡಲವಾದ ಸಿಎಂ, ನೀವು ಹೀಗೆ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ ಎಂದು ಗುಡುಗಿದರು. ಆಗ ಶ್ರೀಗಳು ಸಮಾಧಾನದ ಮಾತನಾಡಿ, ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ಕುಳಿತುಕೊಳ್ಳಿ ಎಂದು ಹೇಳಿದರು. ಆದರೆ ಇದಕ್ಕೆ ಒಪ್ಪದ ಸಿಎಂ, ದಯವಿಟ್ಟು ಕ್ಷಮಿಸಿ, ತಾವು ಈ ಮಾತು ಆಡಬಾರದು. ನಿಮ್ಮ ಬಾಯಲ್ಲಿ ಈ ತರ ಮಾತುಗಳು ಬರಬಾರದು. ಹೀಗೆ ಮಾತನಾಡಿದರೆ ನಾನು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ನೀವು ಸಲಹೆ ಕೊಡಬಹುದು ಅಷ್ಟೇ ಎಂದರು.

    ಸಿಎಂ ಮಾತಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ನಾವು ಸಲಹೆ ಕೊಡುತ್ತಿದ್ದೇವೆ ಎಂದರು. ಆಗ ಸಿಎಂ ಬೆದರಿಸಬೇಡಿ ಎಂದು ಗರಂ ಆದರು. ಈ ವೇಳೆ ಸ್ವಾಮೀಜಿಗಳು, ನಾವು ಬೆದರಿಸುತ್ತಿಲ್ಲ. ನಮ್ಮ ಹಕ್ಕು, ನ್ಯಾಯವನ್ನು ಕೇಳುತ್ತಿದ್ದೇವೆ ಎಂದು ಗುಡುಗಿದರು. ಆಗ ಸಿಎಂ ಶಾಂತರಾಗಿ ಆಸನದ ಮೇಲೆ ಕುಳಿತರು. ಮತ್ತೆ ಮಾತು ಮುಂದುವರಿಸಿದ ಶ್ರೀಗಳು, ಇದು ನಮ್ಮ ಬೇಡಿಕೆಯಲ್ಲ. ಸಮಾಜದ ಕೂಗು. ನೀವು ಸಮಾಧಾನದಿಂದ ಕೇಳಬೇಕು ಎಂದರು.

    ಬಳಿಕ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ ಅವರು, ನಾನು ಕುರ್ಚಿಗೆ ಅಂಟಿಕೊಂಡು ಕೂತ್ತಿಲ್ಲ. ಬೇಕಾದ್ರೆ ನಾಳೆಯೇ ರಾಜೀನಾಮೆ ಕೊಡುತ್ತೇನೆ. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ನೇರವಾಗಿಯೇ ಅಸಮಾಧಾನ ಹೊರ ಹಾಕಿದರು.

    ಎಲ್ಲಾ ಸಮಾಜದ ಶ್ರೀಗಳು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು. ಹದಿನೇಳು ಶಾಸಕರು ರಾಜೀನಾಮೆ ನೀಡಿ ವನವಾಸ ಅನುಭವಿಸಿದ್ದಾರೆ. ಅವರಿಗೆ ನ್ಯಾಯ ನೀಡಬೇಕಾಗಿದೆ, ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನನಗೆ ಅಧಿಕಾರದ ಆಸೆ ಇಲ್ಲ. ಬೇಕಿದ್ದರೆ ರಾಜೀನಾಮೆ ಕೊಟ್ಟು ಬರುತ್ತೇನೆ. ಹದಿನೇಳು ಶಾಸಕರ ಋಣ ತೀರಿಸಬೇಕಿದೆ. ಹೀಗಾಗಿ ಎಲ್ಲಾ ಸ್ವಾಮೀಜಿಗಳನ್ನ ಸೇರಿಸೋಣ, ನನ್ನ ಪರಿಸ್ಥಿತಿ ನಿಮಗೆಲ್ಲರಿಗೂ ಅರ್ಥ ಮಾಡಿಸುತ್ತೇನೆ ಎಂದು ಬೇಸರ ಹೊರಹಾಕಿದರು.

  • ಒಳಚರಂಡಿಯಲ್ಲಿ ಸಿಕ್ತು ಮನುಷ್ಯನ ಅಸ್ಥಿಪಂಜರ

    ಒಳಚರಂಡಿಯಲ್ಲಿ ಸಿಕ್ತು ಮನುಷ್ಯನ ಅಸ್ಥಿಪಂಜರ

    ದಾವಣಗೆರೆ: ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಲೇಔಟ್ ಒಂದರ ಒಳಚರಂಡಿ ಛೇಂಬರ್ ನಲ್ಲಿ ಪುರಷನದ್ದು ಎಂದು ಶಂಕಿಸಲಾದ ಅಸ್ಥಿಪಂಜರ ದೊರೆತ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

    ನಗರದ ಶಿವಮೊಗ್ಗ ರಸ್ತೆಯ ಶ್ರೀ ಹರಿಹರರೇಶ್ವರ ಲೇಔಟ್ ಹಿಂಭಾಗದಲ್ಲಿನ ಹೊಸ ಲೇಔಟ್ ನಲ್ಲಿ ಕೆಲಸಗಾರರು ಯುಜಿಡಿ ಛೇಂಬರ್ ಸಂಪರ್ಕ ಕಲ್ಪಿಸಲು ಮುಂಜಾನೆ ಛೇಂಬರ್‍ನ ಮುಚ್ಚಳ ತೆರೆದಾಗ ಅಸ್ಥಿಪಂಜರ ಇರುವುದನ್ನು ನೋಡಿ ಭಯಗೊಂಡು ಕೂಡಲೇ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ನಗರಸಭೆಯ ಪೌರ ಕಾರ್ಮಿಕರಿಂದ ಅಸ್ಥಿ ಪಂಜರವನ್ನು ಛೇಂಬರ್ ನಿಂದ ಮೇಲೆತ್ತಿ, ಪರೀಕ್ಷಿಸಲಾಯಿತು.

    ಪ್ರಾಥಮಿಕ ಪರೀಕ್ಷೆಯನ್ನು ದಾವಣಗೆರೆ ಸಿ.ಜಿ ಆಸ್ಪತ್ರೆಯ ಡಾ. ಮೋಹನ್ ಕುಮಾರ್ ಗುರುತಿಸಿದಂತೆ ಮೃತ ವ್ಯಕ್ತಿಯು ಅಂದಾಜು 5.4 ಅಡಿ ಎತ್ತರ, ಸುಮಾರು 25 ರಿಂದ 30 ವರ್ಷದ ಒಳಗೆ ಇದ್ದಾನೆ. ಸುಮಾರು ಆರು ತಿಂಗಳ ಹಿಂದೆ ಈ ಘಟನೆ ನೆಡೆದಿರಬಹುದು ಎಂದು ಊಹಿಸಿದರು. ವ್ಯಕ್ತಿಯ ಉಡುದಾರ, ಮೆಟಲ್ ಕೈ ಬಳೆ, ಕೊರಳು ದಾರ ಸಿಕ್ಕಿದ್ದು ಪುರುಷನೆಂದು ತಿಳಿದು ಬಂದಿದೆ. ನಂತರ ಅಸ್ಥಿ ಪಂಜರವನ್ನು ವಿಧಿವಿಜ್ಞಾನದ ಪ್ರಯೋಗಾಲಯದ ಅಧಿಕಾರಿಗಳು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವರದಿ ಬಂದ ನಂತರ ಈ ವ್ಯಕ್ತಿ ಯಾರು ಮತ್ತು ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಕೆ.ಗಂಗಲ ತಿಳಿಸಿದರು.

    ಸ್ಥಳಕ್ಕೆ ಆಗಮಿಸಿದ ಸಿಪಿಐ ಶಿವಪ್ರಸಾದ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ ಡಾ. ಭಾರ್ಗವಿ ಮತ್ತಿತರು ಇದ್ದರು.

  • ಎಚ್ಚರಿಕೆ ಕೊಟ್ರೂ ಅಕ್ಕನೊಂದಿಗೆ ಅಕ್ರಮ ಸಂಬಂಧ ಬಿಡದ ವ್ಯಕ್ತಿಯನ್ನ ಕೊಲೆಗೈದ ಸಹೋದರರು

    ಎಚ್ಚರಿಕೆ ಕೊಟ್ರೂ ಅಕ್ಕನೊಂದಿಗೆ ಅಕ್ರಮ ಸಂಬಂಧ ಬಿಡದ ವ್ಯಕ್ತಿಯನ್ನ ಕೊಲೆಗೈದ ಸಹೋದರರು

    – ಕೃತ್ಯಕ್ಕೆ ಸಹಾಯ ನೀಡಿದ್ದ ಸ್ನೇಹಿತ ಸೇರಿ ನಾಲ್ವರು ಅರೆಸ್ಟ್

    ದಾವಣಗೆರೆ: ನಮ್ಮ ಅಕ್ಕನೊಂದಿಗೆ ಅಕ್ರಮ ಸಂಬಂಧ ಬಿಟ್ಟುಬಿಡು ಎಂದು ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ವ್ಯಕ್ತಿಯನ್ನ ಮಹಿಳೆಯ ಸಹೋದರರು ಬರ್ಬರವಾಗಿ ಕೊಲೆಗೈದ ಘಟನೆ ಹರಿಹರದಲ್ಲಿ ನಡೆದಿದೆ.

    ದಾವಣಗೆರೆಯ ದೊಡ್ಡಬಾತಿ ಗ್ರಾಮದ ನಿವಾಸಿ ಹರೀಶ್ (29) ಕೊಲೆಯಾದ ವ್ಯಕ್ತಿ. ನಾಗರಾಜ, ಮಾರುತಿ, ರಾಘವೇಂದ್ರ ಹಾಗೂ ರಮೇಶ ಕೊಲೆಗೈದ ಆರೋಪಿಗಳು. ಹರಿಹರದ ಹೊರ ವಲಯದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದ್ದು, 24 ಗಂಟೆಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಹರಿಹರ ಹೊರ ವಲಯದ ಡಾಬಾದಲ್ಲಿ ಹರೀಶ್ ಅಡುಗೆ ಭಟ್ಟನಾಗಿದ್ದ. ಡಾಬಾ ಸಮೀಪದ ಪ್ರದೇಶದಿಂದ ಮಹಿಳೆಯೊಬ್ಬಳು ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದಳು. ಮಹಿಳೆಯ ಪತಿ ತೀರಿಕೊಂಡಿದ್ದ ಬಗ್ಗೆ ತಿಳಿದುಕೊಂಡಿದ್ದ ಹರೀಶ್ ಆಕೆಯ ಜೊತೆಗೆ ಸಲುಗೆಯಿಂದ ಇದ್ದ. ಈ ವಿಚಾರ ಮಹಿಳೆಯ ಸಹೋದರರಾದ ನಾಗರಾಜ, ಮಾರುತಿ ಹಾಗೂ ರಾಘವೇಂದ್ರ ಗೊತ್ತಾಗಿತ್ತು. ಹೀಗಾಗಿ ಹರೀಶ್‍ಗೆ ಮೂರು ಬಾರಿ ಎಚ್ಚರಿಕೆ ಕೊಟ್ಟಿದ್ದರು.

    ನಮ್ಮ ಅಕ್ಕನ ಜೊತೆಗೆ ಮತ್ತೆ ಕಾಣಿಸಿಕೊಂಡರೆ ಸುಮ್ಮನೆ ಬಿಡುವುದಿಲ್ಲ ಎಂದು ಇತ್ತೀಚೆಗಷ್ಟೇ ಆರೋಪಿಗಳು ವಾರ್ನಿಂಗ್ ಕೂಡ ನೀಡಿದ್ದರು. ಆದರೆ ಇದಕ್ಕೆ ಕ್ಯಾರೇ ಎನ್ನದ ಹರೀಶ್, ಸೋಮವಾರ ರಾತ್ರಿ ಡಾಬಾ ಸಮೀಪದ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಜೊತೆಗೆ ಕುಳಿತಿದ್ದ. ಇದನ್ನು ನೋಡಿದ ಸ್ಥಳೀಯರೊಬ್ಬರು ಮಹಿಳೆಯ ಸಹೋದರರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ನಾಗರಾಜ ಸಹೋದರರು ಸ್ನೇಹಿತ ರಮೇಶ್ ಜೊತೆಗೆ ಸೇರಿ ಡಾಬಾಗೆ ಹೋಗಿ ಹಮೇಶ್‍ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಹರೀಶ್‍ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹರಿಹರ ನಗರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಡಾಬಾ ಮಾಲೀಕರು ಹಾಗೂ ಸಿಬ್ಬಂದಿಯನ್ನು ವಿಚಾರಣೆ ಒಳಪಡಿಸಿದಾಗ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಮಾಹಿತಿ ಲಭ್ಯವಾಗಿತ್ತು. ಈ ಮೂಲಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಹರಿಹರ ನಗರ ಠಾಣೆ ಪೊಲೀಸರ ಕಾರ್ಯಕ್ಕೆ ಎಸ್‍ಪಿ ಅಭಿನಂದನೆ ಸಲ್ಲಿಸಿದ್ದಾರೆ.

  • ಮುಖ್ಯಮಂತ್ರಿ ಚೇಂಜ್ ಆದ್ರೂ ಆಗ್ಬಹುದು: ಶಾಸಕ ಎಸ್.ರಾಮಪ್ಪ

    ಮುಖ್ಯಮಂತ್ರಿ ಚೇಂಜ್ ಆದ್ರೂ ಆಗ್ಬಹುದು: ಶಾಸಕ ಎಸ್.ರಾಮಪ್ಪ

    ದಾವಣಗೆರೆ: ಮುಖ್ಯಮಂತ್ರಿಗಳು ಚೇಂಜ್ ಆದರೂ ಆಗಬಹುದು ಎಂದು ಹೇಳುವ ಮೂಲಕ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ಕಾಂಗ್ರೆಸ್ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಕಾಂಗ್ರೆಸ್ ಎಲ್ಲಿರುತ್ತೋ, ಅಲ್ಲಿ ನಾನಿರುತ್ತೇನೆ. ಹಾಗಾಗಿ ಯಾರು ರಾಜೀನಾಮೆ ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಬದಲಾವಣೆ ಆದರೆ ಆಗಬಹುದು. ಮೈತ್ರಿ ಸರ್ಕಾರ ಮಾತ್ರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾನೋರ್ವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಕೆಲವರು ನನ್ನ ಹಿಂದೆ ಬಿದ್ದಿದ್ದಾರೆ. ಈಗಾಗಲೇ ನಾನು ಪಕ್ಷ ತೊರೆಯಲ್ಲ ಎಂಬುದನ್ನ ಅವರೆಲ್ಲರಿಗೂ ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷ ತೊರೆಯಲು ಸಿದ್ಧ ಎಂದರೆ ಹಣ ನೀಡಲು ತಯಾರಾಗಿದ್ದಾರೆ. ಆದ್ರೆ ನಾನು ಪಕ್ಷ ಬಿಡುವ ವಿಷಯವೇ ಇಲ್ಲಿ ಬರಲ್ಲ. ನಗರಸಭೆ ಸದಸ್ಯನಾಗಿದ್ದ ನನ್ನನ್ನು ಅಧ್ಯಕ್ಷ, ಶಾಸಕನಾಗಿ ಮತದಾರರು ಆಯ್ಕೆ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋದ್ರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ. 64 ಸಾವಿರ ಜನರು ಮತ ನೀಡಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದು, ಮತದಾರರಿಗೆ ಮೋಸ ಮಾಡಲ್ಲ ಎಂದು ತಿಳಿಸಿದರು.

    ಚುನವಾಣೆ ವೇಳೆ ನಾನು ಜನರಿಗೆ ನೀಡಿದ್ದ ಮಾತಿನಂತೆ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಮಾತಿನಂತೆ ನಡೆದುಕೊಳ್ಳುತ್ತೇನೆ. ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ವಿಸರ್ಜನೆ ಆಗಲ್ಲ. ಮಧ್ಯಂತರ ಚುನಾವಣೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನ ಯಾವ ಶಾಸಕರು ಒಪ್ಪಿಕೊಳ್ಳಲ್ಲ. ಸಿಎಂ ಬದಲಾಗಬಹುದು ಅಷ್ಟೇ ಎಂದು ಹೇಳಿದರು.

  • ಗಾಂಜಾ ಗುಂಗಿನಲ್ಲಿ ಮುಂಬೈನಿಂದ ಒಬ್ಬಳೇ ಕಾರು ಚಾಲನೆ ಮಾಡ್ಕೊಂಡು ಬಂದ ಯುವತಿ

    ಗಾಂಜಾ ಗುಂಗಿನಲ್ಲಿ ಮುಂಬೈನಿಂದ ಒಬ್ಬಳೇ ಕಾರು ಚಾಲನೆ ಮಾಡ್ಕೊಂಡು ಬಂದ ಯುವತಿ

    -ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಯುವತಿ ಡಿಮ್ಹಾನ್ಸ್​ಗೆ ಸಿಫ್ಟ್

    ದಾವಣಗೆರೆ: ಗಾಂಜಾ ಗುಂಗಿನಲ್ಲಿದ್ದ ಯುವತಿಯೊಬ್ಬಳು ಕಾರು ಚಾಲನೆ ಮಾಡಿಕೊಂಡು ಒಬ್ಬಳೇ ಬಂದು, ಗ್ರಾಮಸ್ಥರೊಂದಿಗೆ ರಂಪಾಟ ಮಾಡಿಕೊಂಡ ಘಟನೆ ಹರಿಹರ ಸಮೀಪದ ಮಾಕನೂರು ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮನಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಧಾರವಾಡ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದಿದ್ದಾರೆ.

    ಆಗಿದ್ದೇನು?:
    ಯುವತಿಯನ್ನು ಮುಂಬೈ ಮೂಲದವಳು ಎನ್ನಲಾಗಿದ್ದು, ಗಾಂಜಾ ಮತ್ತಿನಲ್ಲಿ ಒಬ್ಬಳೇ ಕಾರು ಚಾಲನೆ ಮಾಡಿಕೊಂಡ ಬಂದಿದ್ದಾಳೆ. ಹರಿಹರ ತಾಲೂಕಿನ ಮಾಕನೂರು ಗ್ರಾಮದ ಹೊರ ವಲಯದಲ್ಲಿ ಕಾರು ನಿಲ್ಲಿಸಿ, ಕಟ್ಟೆಯ ಮೇಲೆ ಮಲಗಿದ್ದಳು. ಈ ವೇಳೆ ತುಂತುರು ಮಳೆಯಾಗಿದ್ದರಿಂದ ಕುಣಿಯಲು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಆಕೆಯನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿ ಉಪಚಾರ ಮಾಡಿದ್ದಾರೆ.

    ನನಗೆ ಸೀರೆ ಬೇಕು ಅಂತಾ ಹಠಹಿಡಿದ ಯುವತಿಗೆ, ಗ್ರಾಮಸ್ಥರು ಹಳೇ ಸೀರೆಯೊಂದನ್ನು ನೀಡಿದ್ದಾರೆ. ಅದನ್ನು ತೊಟ್ಟ ಆಕೆ, ತನಗೆ ತೊಚಿದಂತೆ ಸ್ಥಳೀಯರನ್ನು ನಿಂದಿಸಲು ಆರಂಭಿಸಿದ್ದಾಳೆ. ಆಕೆಯ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು, ಹರಿಹರ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಕೊಟ್ಟಿದ್ದಾರೆ. ಆಗ ತನ್ನಲ್ಲಿದ್ದ ಹಣ ಕಾಣೆಯಾಗಿದೆ, ಮರಳಿ ಕೊಡಿ ಅಂತಾ ಯುವತಿ ಮತ್ತಷ್ಟು ಗಲಾಟೆ ಮಾಡಿದ್ದಾಳೆ.

    ತಾನು ಏನು ಮಾಡುತ್ತಿದ್ದೇನೆ ಅಂತಾ ಯುವತಿಗೆ ಅರಿವಿಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಯೂ ಸುಮ್ಮನಿರದ ಯುವತಿ ಎಲ್ಲರ ಮೇಲೆ ರೇಗಾಡಿದ್ದಾಳೆ. ನನಗೆ ಸಿಗರೇಟ್ ಬೇಕು. ಇಂತಹದ್ದೇ ಬ್ರ್ಯಾಂಡ್ ಬೇಕು ಅಂತ ಪೊಲೀಸರಿಗೆ ಕೇಳಿದ್ದಾಳೆ. ಹೆಚ್ಚಾಗಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದ ಯುವತಿ ಅವಾಚ್ಯ ಪದಗಳಲ್ಲಿ ನಿಂದಿಸುತ್ತಿದ್ದಳು.

    ಪೊಲೀಸರು, ವೈದ್ಯರು ವಿಳಾಸ ಕೇಳಿದರೆ ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಿದ್ದಳು. ನನಗೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಇತ್ತ ಯುವತಿಯ ವರ್ತನೆಯಿಂದ ರೋಸಿಹೋದ ಪೊಲೀಸರು ಅವಳನ್ನು ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹರಿಹರದಲ್ಲಿ ಡಿವೈಡರ್‌ಗೆ  ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಬೆಂಗ್ಳೂರಿನ ನಾಲ್ವರು ಸಾವು

    ಹರಿಹರದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು – ಸ್ಥಳದಲ್ಲೇ ಬೆಂಗ್ಳೂರಿನ ನಾಲ್ವರು ಸಾವು

    ದಾವಣಗೆರೆ: ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಹರಿಹರ ತಾಲೂಕಿನ ಹರಗನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.

    ಬೆಂಗಳೂರು ಇಂದಿರಾನಗರದ ನಿವಾಸಿಗಳಾದ ಸಿದ್ದಪ್ಪ, ಅಜಯ್, ವಿನಯ್, ಸಿದ್ದಪ್ಪ ಮೃತಪಟ್ಟ ವ್ಯಕ್ತಿಗಳು. ಕಿರಣ್ ಹಾಗೂ ಗಿರೀಶ್‍ಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಗೋಕಾಕ್ ಜಲಪಾತವನ್ನು ನೋಡಲು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಡಿಟಿಡಿಸಿ ಕೊರಿಯರ್ ಕಂಪೆನಿಯಲ್ಲಿ ನಲ್ಲಿ ಮೃತರು ಕೆಲಸ ಮಾಡುತ್ತಿದ್ದರು. ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು, ಅಪಘಾತಕ್ಕೆ ಕಾರು ಚಾಲಕನ ವೇಗವೇ ಕಾರಣ ಎನ್ನುವುದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ಕಣ್ಣೀರು ಸುರಿಸಿದ ಆರೋಗ್ಯಮಾತೆ: ನೋಡಲು ಮುಗಿಬಿದ್ದ ಸಾರ್ವಜನಿಕರು

    ದಾವಣಗೆರೆ: ಜಿಲ್ಲೆಯ ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚ್ ನಲ್ಲಿರುವ ಆರೋಗ್ಯಮಾತೆಯು ಕಣ್ಣೀರು ಸುರಿಸಿದ್ದು, ಈ ವಿಸ್ಮಯವನ್ನು ನೋಡಲು ನೂರಾರು ಸಾರ್ವಜನಿಕರು ಚರ್ಚ್ ಗೆ ಆಗಮಿಸಿದ್ದರು.

    ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ದೇವರ ವಿಗ್ರಹದಲ್ಲಿ ಕಣ್ಣಿರು ಬರುತ್ತಿದ್ದು. ಹಲವು ಕುತೂಹಲಕ್ಕೆ ಕಾರಣವಾಗಿದೆ. ಹರಿಹರ ಪಟ್ಟಣದ ಆರೋಗ್ಯಮಾತೆ ಚರ್ಚಿನ ಆರೋಗ್ಯಮಾತೆ ವಿಗ್ರಹದಿಂದ ಕಣ್ಣೀರು ಬರುತ್ತಿರುವ ಸುದ್ದಿ ಹರಡುತ್ತಲೇ, ನೂರಾರು ಭಕ್ತರು ಬಂದು ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೇ ಮಾತೆಗೆ ಕಣ್ಣೀರ ಬರಲು ಕಾರಣವೇನು ಎನ್ನುವ ಕುತೂಹಲ ಭಕ್ತರಲ್ಲಿ ಸೃಷ್ಟಿಯಾಗಿದೆ.

    ಹರಿಹರದ ಆರೋಗ್ಯ ಮಾತಾ ಚರ್ಚ್ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಬಂದು ಮರೀಯಾ ದೇವಿಯ ದರ್ಶನ ಪಡೆದು ಹೋಗುತ್ತಾರೆ. ಆದರೆ ಬುಧವಾರ ಏಕಾಏಕಿ ಮರೀಯಾ ವಿಗ್ರಹದಲ್ಲಿ ಕಣ್ಣಿನಲ್ಲಿ ನೀರು ಬರುತ್ತಿದ್ದು, ಭಕ್ತರ ಮನದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಬುಧವಾರ ಬೆಳಗ್ಗೆ 11.30ಕ್ಕೆ ಸೇಲೀನ್  ಎಂಬವರು  ಪ್ರಾರ್ಥನೆ ಸಲ್ಲಿಸಲು ಚರ್ಚಿಗೆ ಬಂದಿದ್ದಾರೆ. ಈ ವೇಳೆ ಮರೀಯಾ ವಿಗ್ರಹದಿಂದ ಕಣ್ಣೀರು ಬರುತ್ತಿರುವುದನ್ನು ಕಂಡು, ಚರ್ಚಿನ ಫಾದರ್ ಆಂತೋನಿ ಪೀಟರ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಫಾದರ್ ಅದನ್ನು ಪರೀಕ್ಷಿಸಿ ನೋಡಿದಾಗ ವಿಗ್ರಹದ ಎಡ ಭಾಗದ ಕಣ್ಣಿನಿಂದ ಕಣ್ಣೀರಿನ ಹಾಗೆ ನೀರು ತೊಟ್ಟಿಕ್ಕುತ್ತಿದೆ. ಏನಾದರೂ ಬಿದ್ದರಬಹುದೆಂದು ಫಾದರ್ ಅದನ್ನು ಒಂದು ಬಟ್ಟೆಯಿಂದ ಒರೆಸಿದ್ದಾರೆ. ಬಳಿಕ ಕೆಲ ಸಮಯದಲ್ಲಿ ಮತ್ತೆ ಅದೇ ಭಾಗದಲ್ಲಿ ನೀರು ಹರಿಯಲಾರಂಭಿಸಿದೆ ಎಂದು ಚರ್ಚ್ ಫಾದರ್ ತಿಳಿಸಿದ್ದಾರೆ.

    ಮರೀಯಾ ಮಾತೆಯ ಕಣ್ಣಿನಲ್ಲಿ ನೀರು ಬರುತ್ತಿರುದನ್ನು ತಿಳಿದ ಭಕ್ತರು ಮಾತೆಯ ದರ್ಶನ ಪಡೆಯಲು ಮುಗಿದಿದ್ದಾರೆ. ಅಲ್ಲದೇ ಏನಾದರೂ ತಪ್ಪಾಗಿದೆಯೋ, ಇಲ್ಲಾ ತಾಯಿಗೆ ನೋವಾಗುವ ಹಾಗೆ ಯಾರಾದರೂ ನಡೆದುಕೊಂಡಿದ್ದಾರೆಯೋ, ಒಂದು ವೇಳೇ ಆಗೇನಾದರೂ ನಡೆದುಕೊಂಡಿದ್ದರೆ, ಅವರನ್ನು ಕ್ಷಮಿಸು ಎಂದು ಭಕ್ತರು ಪ್ರತಿಮೆಯ ಮುಂಭಾಗ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಚರ್ಚಿನ ಆಡಳಿತ ಮಂಡಳಿಯವರಾದ ಫ್ರಾನ್ಸಿಸ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನ್ನದ ಮೇಲೆ ಜೇನುಗೂಡಿನಂತೆ ಕುಳಿತುಕೊಳ್ತವೆ ನೋಣಗಳು: ಡಿಸಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

    ಅನ್ನದ ಮೇಲೆ ಜೇನುಗೂಡಿನಂತೆ ಕುಳಿತುಕೊಳ್ತವೆ ನೋಣಗಳು: ಡಿಸಿ ಕಚೇರಿ ಮುಂದೆ ಗ್ರಾಮಸ್ಥರ ಪ್ರತಿಭಟನೆ

    ದಾವಣಗೆರೆ: ನೋಣಗಳ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಕೋಳಿ ಪೌಲ್ಟ್ರಿ ಫಾರಂ ಅನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹರಿಹರ ತಾಲೂಕಿನ ಕೆಂಚನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ನೋಣಗಳ ಹಾವಳಿಯಿಂದ ಕಂಗಾಲಾಗಿದ್ದು, ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಳಿತು, ಕೋಳಿ ಫಾರಂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕೆಂಚನಹಳ್ಳಿ ಸಮೀಪದ ಗಿರೀಜಾ ರಮಣ್ ಪೌಲ್ಟ್ರಿ ಫಾರಂನಿಂದ ಗ್ರಾಮದಲ್ಲಿ ನೋಣ ಹೆಚ್ಚಾಗಿದ್ದು, ನಿತ್ಯವೂ ಅವುಗಳ ಕಾಟದಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಊಟ ಮಾಡಲು ಕುಳಿತರೂ, ನಿದ್ರೆಗೆ ಜಾರಿದರೂ, ಮನೆಯಿಂದ ಹೊರಗೆ, ಒಳಗೆ ಎಲ್ಲಿ ಇದ್ದರೂ ನೋಣ ಬಿಟ್ಟು ಬಿಡದೇ ಕಾಡುತ್ತಿವೆ.

    20 ವರ್ಷಗಳ ಹಿಂದೆ ರಮಣ ರೆಡ್ಡಿ ಎಂಬವರು ಬಿಸ್ಕೇಟ್ ಫ್ಯಾಕ್ಟರಿ ನೆಪ ಹೇಳಿ, ಕೋಳಿ ಫಾರಂ ಆರಂಭಿಸಿದರು. ವರ್ಷದಲ್ಲಿ ಎರಡ್ಮೂರು ತಿಂಗಳು ನೋಣಗಳ ಕಾಟ ಹೆಚ್ಚಾಗುತ್ತದೆ. ಇದರಿಂದಾಗಿ ಸಾಂಕ್ರಾಮಿಕ ಕಾಯಿಲೆ ಹರಡುತ್ತದೆ ಎನ್ನುವ ಭೀತಿ ಎದುರಾಗಿದ್ದು, ಗ್ರಾಮ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ಶಾಲೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಬಿಸಿಯೂಟದಲ್ಲಿ ನೋಣ ಬೀಳದಂತೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮಕ್ಕಳಂತು ಗೊತ್ತಿಲ್ಲದೆ ನೋಣಗಳು ಬಿದ್ದ ಆಹಾರವನ್ನು ಸೇವನೆ ಮಾಡವಂತಾಗಿದೆ. ಮನೆಗಳಲ್ಲಿ ಅಡುಗೆ ಸಿದ್ಧಪಡಿಸಿ, ಕೆಳಗೆ ಇಟ್ಟರೆ ಸಾಕು, ಪಾತ್ರೆಗಳ ಮೇಲೆ ಜೇನುಗೂಡಿನಂತೆ ನೋಣಗಳು ಕುಳಿತುಕೊಳ್ಳುತ್ತವೆ. ನಮ್ಮ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.