Tag: ಹರಿರಾಜ್ ಶೆಟ್ಟಿ

  • ಗ್ಯಾಬ್ಲಿಂಗ್ ಆರೋಪ – ಹರಿರಾಜ್ ಶೆಟ್ಟಿ, ಉದ್ಯಮಿಗಳ ಪತ್ನಿಯರ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆ

    ಗ್ಯಾಬ್ಲಿಂಗ್ ಆರೋಪ – ಹರಿರಾಜ್ ಶೆಟ್ಟಿ, ಉದ್ಯಮಿಗಳ ಪತ್ನಿಯರ ಮೇಲೆ ಚಾರ್ಜ್‍ಶೀಟ್ ಸಲ್ಲಿಕೆ

    ಬೆಂಗಳೂರು: ಗ್ಯಾಂಬ್ಲಿಂಗ್ ನಡೆಸ್ತಿದ್ದ ಆರೋಪದ ಮೇಲೆ ಉದ್ಯಮಿ ಹರಿರಾಜ್ ಶೆಟ್ಟಿಯ ಮೇಲೆ ಸಿಸಿಬಿ  ಪೊಲೀಸರು ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

    ಮುಂಗಾರು ಮಳೆ- 2 ಚಿತ್ರದ ನಟಿ ನೇಹಾ ಶೆಟ್ಟಿಯ ತಂದೆ ಹರಿರಾಜ್ ಶೆಟ್ಟಿ ಕನ್ನಿಂಗ್ ಹ್ಯಾಮ್ ರಸ್ತೆಯ ನಂ15ನೇ ಬೇಸ್ಮೆಂಟ್ ನ ಪೂಲ್‍ಎನ್ ರಿ ಕ್ರಿಯೇಷನ್ ಕ್ಲಬ್ ನಲ್ಲಿ ಜೂಜು ನಡೆಸುತ್ತಿದ್ದರು ಎಂಬ ಆರೋಪದಡಿ ಬಂಧನವಾಗಿದ್ದರು. ಇದನ್ನೂ ಓದಿ: ಮುಂಗಾರುಮಳೆ-2 ಚಿತ್ರದ ನಟಿಯ ತಂದೆ ಅರೆಸ್ಟ್..!

    ಈ ಬಗ್ಗೆ ಸಿಸಿಬಿ ಇನ್ಸ್‍ಪೆಕ್ಟರ್ ಎ.ಪಿ ಕುಮಾರ್ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಕೇಸ್ ದಾಖಲಾಗಿದೆ. ಪೂಲ್‍ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಗ್ಯಾಂಬ್ಲಿಂಗ್, ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸ್ತಿದ್ದ ಆರೋಪದಡಿ ಹರಿರಾಜ್ ವಿರುದ್ಧ ಬರೋಬ್ಬರಿ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

    ಹರಿರಾಜ್ ಜೊತೆಗೆ ಬರೋಬ್ಬರಿ 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧವು ಸಿಸಿಬಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಜೂಜು ಆಡಿಸುತ್ತಿದ್ದ ಹರಿರಾಜ್ ಶೆಟ್ಟಿ, ಬೆಂಗಳೂರು, ಚಿಕ್ಕಬಳ್ಲಾಪುರ, ಬಳ್ಳಾರಿ ಹಾಗೂ ಆಂಧ್ರಪ್ರದೇಶ, ತಮಿಳುನಾಡು ರಾಜ್ಯದ ಜೂಜು ಕೋರರಿಂದ ಲಕ್ಷ, ಲಕ್ಷ ಹಣ ಪಡೆಯುತ್ತಿದ್ದರು ಎಂಬ ಅಂಶ ಬಯಲಾಗಿದೆ. ರೇಡ್ ವೇಳೆ ಸಿಸಿಬಿ ಪೊಲೀಸರು ಲಕ್ಷ ಗಟ್ಟಲೇ ಹಣ ಸೀಜ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು.

    ವಿಚಾರಣೆ ವೇಳೆ ಮಹಿಳೆಯರನ್ನು ಸಹ ಜೂಜಾಟಕ್ಕೆ ಹರಿರಾಜ್ ಶೆಟ್ಟಿ ಕರೆ ತಂದಿದ್ದ ಬಗ್ಗೆ ತಿಳಿದುಬಂದಿದೆ. ಸಿಸಿಬಿ ಪೊಲೀಸರ ರೇಡ್ ಮಾಡುವ ಸಂದರ್ಭ ಬೆಂಗಳೂರಿನ ಉದ್ಯಮಿಗಳ ಪತ್ನಿಯರು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಸಿಕ್ಕಿಬಿದ್ದಿದ್ದಾರೆ. 5 ಮಂದಿ ಮಹಿಳೆಯರಲ್ಲಿ ಇಬ್ಬರು ಉದ್ಯಮಿಗಳ ಪತ್ನಿಯರು, ಇಬ್ಬರು ಅಧಿಕಾರಿಗಳ ಪತ್ನಿಯರು ಮತ್ತೊಬ್ಬ ಮಹಿಳೆ, ಒರ್ವ ರೌಡಿ ಶೀಟರ್ ತಾಯಿ ಎಂದು ಗುರುತಿಸಲಾಗಿದೆ. ಸದ್ಯ ಪುರುಷರ ಜೊತೆ 5 ಮಹಿಳೆಯರಾದ ಮಂಜುಳ, ಸ್ವಾತಿ, ಲಕ್ಷ್ಮಿ, ಗೀತಾದೇವಿ ಮತ್ತು ಕ್ರಿಸ್ಟೀನ್ ಕುಮಾರಿ ವಿರುದ್ಧ ಮಹಿಳಾ ಗ್ಯಾಂಬ್ಲರ್ ಗಳೆಂದು  ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.