Tag: ಹರಿಪ್ರಸಾದ್

  • ಎರಡು ದಶಕಗಳ ಮುನಿಸಿಗೆ ಬ್ರೇಕ್‌ – ಹರಿಪ್ರಸಾದ್‌ ನಿವಾಸದಲ್ಲಿ ಉಪಹಾರ ಸವಿದ ಸಿಎಂ

    ಎರಡು ದಶಕಗಳ ಮುನಿಸಿಗೆ ಬ್ರೇಕ್‌ – ಹರಿಪ್ರಸಾದ್‌ ನಿವಾಸದಲ್ಲಿ ಉಪಹಾರ ಸವಿದ ಸಿಎಂ

    – ಪವರ್‌ ಶೇರಿಂಗ್‌ ವದಂತಿ ಮಧ್ಯೆ ಅಚ್ಚರಿಯ ಭೇಟಿ

    ಬೆಂಗಳೂರು: ಅಧಿಕಾರ ಹಂಚಿಕೆ ವದಂತಿ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah)  ಎರಡು ದಶಕಗಳ ಮುನಿಸು ಮರೆತು ಕಾಂಗ್ರೆಸ್ ರೆಬಲ್ ನಾಯಕ ಬಿಕೆ ಹರಿಪ್ರಸಾದ್‌ (BK Hariprasad) ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.

    ಜೆಡಿಎಸ್‌ನಿಂದ (JDS)  ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ ಬೆಂಬಲ ಸಿಕ್ಕಿರಲಿಲ್ಲ ಎಂಬ ಕೋಪದಲ್ಲೇ 2 ದಶಕಗಳ ಕಾಲ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದರು.

    ಕಾಂಗ್ರೆಸ್‌ಗೆ (Congress) ಬಹುಮತ ಸಿಕ್ಕಿದ್ದರೂ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ್ದಕ್ಕೆ ಸಿಎಂಗೆ ಸಡ್ಡು ಹೊಡೆದು ಹರಿಪ್ರಸಾದ್‌ ಪ್ರತ್ಯೇಕ ಅಹಿಂದ ಸಮಾವೇಶ ನಡೆಸಿದ್ದರು. ಅಷ್ಟೇ ಅಲ್ಲದೇ ವೇದಿಕೆಯಲ್ಲಿ ಸಿಎಂ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದರು. ಬಹಿರಂಗ ಹೇಳಿಕೆ ಜಾಸ್ತಿ ಆಗುತ್ತಿದ್ದಂತೆ ಹೈಕಮಾಂಡ್‌ ಪ್ರತ್ಯೇಕ ಸಿಎಂ ಹೇಳಿಕೆ, ಪವರ್ ಶೇರಿಂಗ್ ಟಾಕ್ ಬಗ್ಗೆ ಮಾತನಾಡದಂತೆ ಸೂಚನೆ ನೀಡಿತ್ತು.  ಇದನ್ನೂ ಓದಿ: ಕಾಂಗ್ರೆಸ್‌ ಹುದ್ದೆಗಳಿಗೆ ರಾಜೀನಾಮೆ – ಸಿಡಿದ ದಕ್ಷಿಣ ಕನ್ನಡ ಮುಸ್ಲಿಮರು

    ಈ ಎಲ್ಲಾ ಎಲ್ಲಾ ಬೆಳವಣಿಗೆ ನಡುವೆ ಒಮ್ಮೆ ಸಿಎಂ ಅವರನ್ನು ಹರಿಪ್ರಸಾದ್ ಭೇಟಿ ಮಾಡಿದ್ದರು. ಈಗ ಖುದ್ದಾಗಿ ಹರಿಪ್ರಸಾದ್ ನಿವಾಸಕ್ಕೆ ಉಪಹಾರಕ್ಕೆ ಆಗಮಿಸಿ 2 ದಶಕದ ಮುನಿಸಿಗೆ ಸಿಎಂ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಪಕ್ಷದೊಳಗಿನ ತಮ್ಮ ವಿರುದ್ದ ಅಸಮಾಧಾನ ಹೊಂದಿರುವ ನಾಯಕನನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ನಿರ್ಬಂಧ ವಿಧಿಸಿ – ಶಿವರಾಜ ತಂಗಡಗಿ

    ಹೈಕಮಾಂಡ್ ಮಟ್ಟದಲ್ಲಿ ಬಿ .ಕೆ.ಹರಿಪ್ರಸಾದ್ ತಮ್ಮದೇ ಹಿಡಿತವನ್ನು ಹೊಂದಿದ್ದಾರೆ. ಈಗ ದಿಢೀರ್‌ ಆಗಿ ಹರಿಪ್ರಸಾದ್‌ ಅವರನ್ನು ಭೇಟಿಯಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡೂವರೆ ವರ್ಷದ ಪವರ್ ಶೇರಿಂಗ್ ಟಾಕ್ ನಡುವೆಯೇ ಅಸಮಧಾನಿತರನ್ನ ಒಗ್ಗೂಡಿಸಿ ಮಾಸ್ಟರ್ ಸ್ಟ್ರೋಕ್ ಕೊಡಲು ಸಿಎಂ ಮುಂದಾಗುತ್ತಿದ್ದಾರಾ ಎಂಬ ಚರ್ಚೆಯೂ ಆರಂಭವಾಗಿದೆ.

  • ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸರ್ಕಾರಿ ರಜೆ ಕೊಡಲು ಮೀನಾಮೇಷ ಎಣಿಸೋದೇ ತಪ್ಪು: ಸಿ.ಟಿ ರವಿ

    ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸರ್ಕಾರಿ ರಜೆ ಕೊಡಲು ಮೀನಾಮೇಷ ಎಣಿಸೋದೇ ತಪ್ಪು: ಸಿ.ಟಿ ರವಿ

    ಬೆಂಗಳೂರು: ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ (RamLalla Pran Pratishtha) ದಿನ ಸರ್ಕಾರಿ ರಜೆ ಕೊಡಲು ಇಷ್ಟು ದಿನ ಮೀನಾಮೇಷ ಎಣಿಸುವುದೇ ತಪ್ಪು, ರಜೆ ಕೊಡಬೇಕೆಂದು ಹೇಳಿಸಿಕೊಂಡು ಮಾಡಬೇಕಾ? ಎಂದು ಮಾಜಿ ಸಚಿವ ಸಿ.ಟಿ ರವಿ (C.T Ravi) ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಬೇಕು. ಇದೇ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ಕಾಂಗ್ರೆಸ್‍ಗೆ (Congress) ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್‍ನ ನಿಲುವನ್ನ ವಿರೋಧಿಸಿ ಅವರು ರಾಜೀನಾಮೆ ನೀಡಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಲಲ್ಲಾ ವಿಗ್ರಹ, ಸಾಕ್ಷಾತ್ ರಾಮನಂತೆ ಇದೆ: ವಿದ್ಯಾವಲ್ಲಭ ತೀರ್ಥ ಶ್ರೀ

    ರಾವಣನ ಸಹೋದರ ವಿಭೀಷಣ ರಾವಣನ ದುರ್ನಡತೆ ವಿರೋಧಿಸಿ ರಾಮನ ಪರ ಬಂದ. ಅದೇ ರೀತಿ ಕಾಂಗ್ರೆಸ್‍ನಲ್ಲಿ ರಾಮಮಂದಿರ ವಿಚಾರವಾಗಿ ಬೇರೆ ಬೇರೆ ಹೇಳಿಕೆಯನ್ನು ನೀಡಿದ್ದಾರೆ. ಹೀಗಾಗಿ ವಿಭೀಷಣನ ಮನಸ್ಥಿತಿಯ ಕಾಂಗ್ರೆಸ್‍ನವರು ಪಕ್ಷ ತೊರೆದು ಬರುವುದು ಒಳಿತು ಎಂದು ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರ, ಗೋಧ್ರಾ ರೀತಿಯ ಘಟನೆ ಆಗಬಹುದು ಎಂಬ ಹೇಳಿಕೆ ಬಗ್ಗೆ ಅವರು ಪೊಲಿಸರಿಗೆ ಮಾಹಿತಿ ನೀಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆಯ ಬಗ್ಗೆ ಮಾಹಿತಿ ನೀಡಬೇಕು. ನಾಳೆ ಈ ರೀತಿಯ ಘಟನೆ ನಡೆದರೆ, ಆಗ ನಾನು ಮುಂಚೆಯೇ ಹೇಳಿಕೆ ನೀಡಿದ್ದೆ, ನನ್ನ ಬಳಿ ಮಾಹಿತಿ ಕೇಳಲಿಲ್ಲ ಎಂದು ಹೇಳಬಹುದು. ಹೀಗಾಗಿ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಇನ್ನೂ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರದ ಒತ್ತಡ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಹರಿಪ್ರಸಾದ್‍ಗೆ ಹೇಳಿ ಹೇಳಿಕೆ ಕೊಡಿಸಿದ್ರಾ? ಅಥವಾ ಎಐಸಿಸಿ ಪ್ರಚೋದನೇನಾ? ಅವರು ಎಐಸಿಸಿ ಜನರಲ್ ಸೆಕ್ರೆಟರಿ ಆಗಿದ್ದವರು. ಅಲ್ಲದೇ ಪರಿಷತ್ ವಿಪಕ್ಷ ನಾಯಕರಾಗಿದ್ದವರು, ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರು ಹಾದಿಬೀದಿಯಲ್ಲಿ ಹೋಗುವವರಲ್ಲ. ಅಂಥವರು ಈ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.

    ಹರಿಪ್ರಸಾದ್ ಅವರು ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ಜೈಶ್-ಎ-ಮೊಹಮ್ಮದ್ ಸಂಪರ್ಕನಾ? ತಾಲಿಬಾನ್ ಸಂಪರ್ಕನಾ? ದಾವೂದ್ ಇಬ್ರಾಹಿಂ ಸಂಪರ್ಕನಾ? ಯಾರ ಸಂಪರ್ಕದಿಂದ ಈ ಹೇಳಿಕೆ ನೀಡಿದ್ದಾರೆ? ರಾಜ್ಯಪಾಲರು ಸಾವಿಂಧಾನಿಕ ಹುದ್ದೆ, ಅದನ್ನ ಮೀರಿ ಅವರು ಕೆಲಸ ಮಾಡಲ್ಲ. ನಾಳೆ ಈ ರೀತಿಯ ಘಟನೆ ನಡೆದ್ರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕಾಫಿಯಲ್ಲಿ ಅರಳಿದ ರಾಮಮಂದಿರ; ಕೇಕ್‌ನಲ್ಲಿ ಮೂಡಿಬಂದ ಶ್ರೀರಾಮಚಂದ್ರ

  • ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್‌ ಆಗ್ರಹ

    ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್‌ ಆಗ್ರಹ

    ಬೆಂಗಳೂರು: ಕೂಡಲೇ ಕಾಂಗ್ರೆಸ್‌ ನಾಯಕ ಹರಿಪ್ರಸಾದ್‌ (BK Hariprasad) ಅವರನ್ನು ಸರ್ಕಾರ ಬಂಧಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ (DV Sadananda Gowda) ಆಗ್ರಹಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ರಾಮ ಮಂದಿರ (Ram Mandira) ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಸುತ್ತಿದೆ.

     

    ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮಾಧ್ಯಮಗಳ ಜೊತೆ ಮಾತನಾಡಿದ ಡಿವಿಎಸ್‌, ರಾಷ್ಟ್ರೀಯ ನಾಯಕರೊಬ್ಬರು ಹೀಗೆ ಮಾತನಾಡುತ್ತಾರೆ ಅಂದರೆ ದೊಡ್ಡ ಪಿತೂರಿ ಮಾಡಿದಂತೆ ಕಾಣುತ್ತದೆ. ಒಬ್ಬೇ ಒಬ್ಬ ರಾಮ ಭಕ್ತರಿಗೆ ಸಮಸ್ಯೆ ಆದರೆ ಅದಕ್ಕೆ ಕಾಂಗ್ರೆಸ್ ಹೊಣೆ ಆಗುತ್ತದೆ. ಕೂಡಲೇ ಹರಿಪ್ರಸಾದ್‌ ಬಂಧನ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಮಸೀದಿಯವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ, ದೇವಿ ದರ್ಶನಕ್ಕೆ ಸಮಯವಿಲ್ಲ: ಸಿದ್ದು ವಿರುದ್ಧ ಬಿಜೆಪಿ ಕಿಡಿ

     

    ಹರಿಪ್ರಸಾದ್‌ ಹೇಳಿದ್ದೇನು?
    ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಯಾಕೆಂದರೆ ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು. ನಮಗೆ ಮಾಹಿತಿ ಸಿಗುತ್ತಿದೆ. ಮಾಹಿತಿ ಇದ್ದೇ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ರೀತಿ ಆಗಬಾರದು ಎಂದರೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಬೇಕು. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ

    ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು.

     

  • ಪರೇಶ್ ಮೆಸ್ತಾ ಸಾವು ಬಿಜೆಪಿ ಪ್ರೇರಿತ ಸಾವು: ಹರಿಪ್ರಸಾದ್‌

    ಪರೇಶ್ ಮೆಸ್ತಾ ಸಾವು ಬಿಜೆಪಿ ಪ್ರೇರಿತ ಸಾವು: ಹರಿಪ್ರಸಾದ್‌

    ಬೆಂಗಳೂರು : ಪರೇಶ್ ಮೆಸ್ತಾ ಪ್ರಕರಣ ಮತ್ತೆ ಇವತ್ತು ವಿಧಾನ ಪರಿಷತ್‌ನಲ್ಲಿ ಸದ್ದು ಮಾಡಿತು‌. ಆಡಳಿತ – ವಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ ಗಲಾಟೆಗೆ ಕಾರಣವಾಯಿತು.

    ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕರ ಹರಿಪ್ರಸಾದ್‌ ಭಾಷಣ ಮಾಡುತ್ತಿದ್ದರು. ಈ ವೇಳೆ ಪರೇಶ್ ಮೆಸ್ತಾ ಪ್ರಕರಣ ಉಲ್ಲೇಖ ಮಾಡಿದರು. ಬಿಜೆಪಿ ಅವರು ಇದನ್ನು ಕೊಲೆ ಅಂದರು‌. ಆದರೆ ಸಿಬಿಐ ಇದನ್ನ ಆಕಸ್ಮಿಕ ಸಾವು ಅಂತ ಹೇಳಿತು ಎಂದರು.

    ಇದಕ್ಕೆ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ವಿರೋಧ ವ್ಯಕ್ತಪಡಿಸಿದರು. ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಎಂದರು. ಪರೇಶ್ ಮೆಸ್ತಾ (Paresh Mesta) ತಂದೆ ಏನ್ ಹೇಳಿದ್ದಾರೆ ನೋಡಿ ಅಂತ ಹರಿಪ್ರಸಾದ್‌ ವಿರುದ್ಧ ಕಿಡಿಕಾರಿದರು.

    ಈ ವೇಳೆ ಮತ್ತೆ ಹರಿಪ್ರಸಾದ್‌ (BK Hariprasad) ‌ಮಾತನಾಡಿ, ಪರೇಶ್ ಮೆಸ್ತಾ ಸಾವು ಮಾಡಿಸಿದ್ದೇ ಬಿಜೆಪಿ. ಇದು ಬಿಜೆಪಿ (BJP) ಪ್ರೇರಿತ ಕೊಲೆ ಎಂದರು. ಹರಿಪ್ರಸಾದ್‌ ಮಾತಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾತಾಡಬೇಡಿ. 23 ಜನ ಹಿಂದೂ ಸತ್ತಾಗ ಎಲ್ಲಿ ಹೋಗಿದ್ರಿ ನೀವು. ಪರೇಶ್ ಮೆಸ್ತಾ ಕೇಸ್‌ನಲ್ಲಿ ಅವರ ತಂದೆ ಏನು ಹೇಳಿದರು. ಏನೇನೋ ಮಾತಾಡಬೇಡಿ ಎಂದು ಮತ್ತೆ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಸದನದಲ್ಲಿ ಮಾತಿನ ಚಕಮಕಿ ನಡೀತು. ಆಡಳಿತ ಪಕ್ಷ-ವಿಪಕ್ಷ ನಡುವೆ ಗದ್ದಲ ಗಲಾಟೆ ಆಯ್ತು. ಈ ವೇಳೆ ನನಗೆ ರಕ್ಷಣೆ ಬೇಕು. ನನ್ನ ಮಾತಿಗೆ ಯಾರು ಅಡ್ಡಿ ಬರಬಾರದು. ಇಲ್ಲದೆ ಹೋದ್ರೆ ನಾನು ಧರಣಿ ಮಾಡುತ್ತೇನೆ ಎಂದ ಹರಿಪ್ರಸಾದ್‌ ಮುಂದಾದರು.

    ಬಳಿಕ ಪೂಜಾರರನ್ನ ಸಭಾಪತಿಗಳು ಸಮಾಧಾನ ಮಾಡಿದರು. ಮಾತು ಮುಂದುವರೆಸಿದ ಹರಿಪ್ರಸಾದ್, ತಮ್ಮ ಕೆಲಸ ಮಾಡುವುದಕ್ಕೆ ಬಡವರ ಮಕ್ಕಳನ್ನು ಬಲಿ ಕೊಡೋಕೆ ಹೊರಟಿದ್ದಾರೆ. MLA ಮಕ್ಕಳು ಎಂಪಿ ಮಕ್ಕಳನ್ನು ರಕ್ಷಣೆ ಮಾಡಲು ಬಡವರ ಮಕ್ಕಳನ್ನ ಬಾವಿಗೆ ತಳುತ್ತೀರಾ? ಎಂದರು. ಇದನ್ನೂ ಓದಿ: ಜೂನ್ ಅಂತ್ಯಕ್ಕೆ ರಾಜ್ಯದ ಸ್ಮಾರ್ಟ್ ಸಿಟಿ ಕಾಮಗಾರಿಗಳು ಪೂರ್ಣ: ಭೈರತಿ ಬಸವರಾಜ್

    ಮತ್ತೆ ಪೂಜಾರಿ ಹರ್ಷಾ ಕೊಲೆ ಮಾಡಿದಾಗ ಕಾಂಗ್ರೆಸ್ ಅವರು ಖಂಡಿಸಿದ್ರಾ? ಎಂದರು. ಇದಕ್ಕೆ ನಾವು ಖಂಡಿಸಿದ್ದೇವೆ ಎಂದು ಹರಿಪ್ರಸಾದ್‌ ಹೇಳಿದರು. ಈ ವೇಳೆ ಮತ್ತೆ ಗದ್ದಲ ಗಲಾಟೆ ಆಯ್ತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಿಸ್ಟರ್‌ ಹರಿಪ್ರಸಾದ್‌ ನಿಮ್ಮ ಪದ ಬಳಕೆಯ ಸಾಕ್ಷ್ಯ ಇಲ್ಲಿದೆ..!

    ಮಿಸ್ಟರ್‌ ಹರಿಪ್ರಸಾದ್‌ ನಿಮ್ಮ ಪದ ಬಳಕೆಯ ಸಾಕ್ಷ್ಯ ಇಲ್ಲಿದೆ..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಸುಪ್ರಭಾತ ಅಭಿಯಾನ ಆರಂಭಿಸುತ್ತಿರುವವರು ಉಗ್ರರು : ಹರಿಪ್ರಸಾದ್‌

    ಬೆಂಗಳೂರು: ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಲು ಕರೆ ಕೊಟ್ಟವರು ಭಯೋತ್ಪಾದಕರು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್‌ ಹೇಳಿದ್ದಾರೆ.

    ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಯಾರು ಈ ಸುಪ್ರಭಾತ ಅಭಿಯಾನವನ್ನು ಪ್ರಾರಂಭ ಮಾಡುತ್ತಿದ್ದಾರೋ ಅವರು ಭಯೋತ್ಪಾದಕರು. ಅವರನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ (ಯುಎಪಿಎ) ಕಾಯ್ದೆಯ ಅಡಿಯಲ್ಲಿ ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲು ಕರ್ನಾಟಕದಲ್ಲಿ ಮದರಸಾವನ್ನು ಬ್ಯಾನ್ ಮಾಡಿ: ಪ್ರಮೋದ್ ಮುತಾಲಿಕ್

     
    ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರು ಸಂಘ ಪರಿವಾರದ ವಿವಿಧ ಆಕ್ಟೋಪಸ್ ಇದ್ದಂತೆ. ಎಲ್ಲೆಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡುತ್ತಿದ್ದಾರೋ ಅವರನ್ನು ಭಯೋತ್ಪಾದಕರು ಅಂತಾ ಯುಎಪಿಎ ಅಡಿಯಲ್ಲಿ ಬಂಧಿಸಬೇಕು ಎಂದು ತಿಳಿಸಿದರು.

  • ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ

    ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್‌ ಕಲಾಪದಲ್ಲಿ ಗಲಾಟೆ

    ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇಂದು 420 ವಿಷಯದ ಕುರಿತು ಚರ್ಚೆ ನಡೆಯಿತು. ಈ ವೇಳೆ ಗಲಾಟೆಯಾದ ಪ್ರಸಂಗವೂ ನಡೆಯಿತು. ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯ್ತು.

    ಬಜೆಟ್ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕ ಹರಿಪ್ರಸಾದ್ ಇಂಗ್ಲಿಷ್‌ನಲ್ಲಿ ಕೆಲ ವಿಷಯ ಪ್ರಸ್ತಾಪ ಮಾಡಿದರು. ಈ ವೇಳೆ ಎದ್ದು ನಿಂತ ಬಿಜೆಪಿ ಸದಸ್ಯ ಪ್ರಾಣೇಶ್, ಸ್ವಲ್ಪ ಕನ್ನಡದಲ್ಲಿ ಮಾತಾಡೋಕೆ ಹೇಳಿ. ನಮಗೆ ಏನು ಅರ್ಥ ಆಗ್ತಿಲ್ಲ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಇದಕ್ಕೆ ಹರಿಪ್ರಸಾದ್ ನನಗೆ ಹಿಂದಿ, ಸಂಸ್ಕೃತ, ಇಂಗ್ಲಿಷ್ ಮಾತಾಡೋಕೆ ಬರುತ್ತೆ ಎಂದರು. ಈ ವೇಳೆ ಕನ್ನಡ, ಇಂಗ್ಲಿಷ್‌ನಲ್ಲಿ ಮಾತಾಡಿ ಹಿಂದಿ ಬೇಡ ಎಂದ ಸಭಾಪತಿ ಸಲಹೆ ನೀಡಿದರು. ಆಗ ಪ್ರಾಣೇಶ್ ನಮಗೆ ಟ್ರಾನ್ಸ್‌ಲೇಟರ್ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸದನ ಬೀಗರ ಮನೆಯಲ್ಲ – ಸಚಿವರ ಗೈರಿಗೆ ಸಭಾಪತಿಗಳು ಗರಂ

    ಬಳಿಕ ಮಾತು ಮುಂದುವರೆಸಿದ ಹರಿಪ್ರಸಾದ್, ನೀವು 430 ಅಂಶಗಳನ್ನು ಬಜೆಟ್ ಪುಸ್ತಕದಲ್ಲಿ ಮುದ್ರಿಸಿದ್ದೀರಾ. ಇದನ್ನು 420 ಎಂದು ಮಾಡಬೇಕಿತ್ತು ಎಂದರು. ಹರಿಪ್ರಸಾದ್ ಮಾತಿಗೆ ಬಿಜೆಪಿ ರವಿಕುಮಾರ್ ವಿರೋಧ ವ್ಯಕ್ತಪಡಿಸಿದರು. ಹರಿಪ್ರಸಾದ್ ಹೀಗೆ ಮಾತಾಡೋದು ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇರುವವರು 420 ಅಂತ ಸೇರಿಸಿ ಅನ್ನೋದು ಸರಿಯಲ್ಲ. 420 ಯಾರು ಗೊತ್ತಿದೆ ಬಿಡಿ ಎಂದು ಹರಿಪ್ರಸಾದ್‌ಗೆ ತಿವಿದರು.

    ಈ ವೇಳೆ ಮತ್ತೆ ಮಾತು ಮುಂದುವರಿಸಿದ‌ ಹರಿಪ್ರಸಾದ್, ಪದೇ ಪದೇ ನನ್ನ ಮಾತಿಗೆ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಹೀಗೆ ಅಡ್ಡ ಮಾಡಿ ಅಂತ ಅವರ ಅಧ್ಯಕ್ಷರು ಹೇಳಿ ಕಳಿಸಿದ್ದಾರೆ ಎಂದು ಆರೋಪ ಮಾಡಿದರು. ಇದಕ್ಕೆ ಪ್ರಾಣೇಶ್, ನಮ್ಮಲ್ಲಿ ನಿಮಗಿಂತ ಚೆನ್ನಾಗಿ ಮಾತಾಡೋರು ಇದ್ದಾರೆ. ನಿಮ್ಮ ಭಾಷಣಕ್ಕೆ ಯಾಕೆ ಅಡ್ಡಿ ಮಾಡೋಣ. ನಾವು ಹಿಂಬಾಗಿಲ ಮೂಲಕ ಶಾಸಕರು ಆಗಿಲ್ಲ. ನಾವು ಮುಂಬಾಗಿಲ ಮೂಲಕ ಇಲ್ಲಿಗೆ ಬಂದಿದ್ದೇವೆ. ಹಿಂಬಾಗಿಲ ಮೂಲಕ ಬಂದಿಲ್ಲ ಅಂತ ಹರಿಪ್ರಸಾದ್‌ರಿಗೆ ಚಾಟಿ ಬೀಸಿದರು. ಇದನ್ನೂ ಓದಿ: ವಿಧಾನಸಭೆ ಕಲಾಪಕ್ಕೆ ಸಚಿವರು ಗೈರು – ಸ್ಪೀಕರ್ ಗರಂ

    ಇದಕ್ಕೆ ತಿರುಗೇಟು ಕೊಟ್ಟ ಹರಿಪ್ರಸಾದ್, ನಾನು ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯನೂ ಆಗದೇ, ವಿಧಾನಸಭೆಗೆ ಸ್ಪರ್ಧೆ ಮಾಡದೇ, ಎಂಪಿ ಆಗದೇ ಮುಖ್ಯಮಂತ್ರಿ ಆಗಿಲ್ಲ. ಪ್ರಧಾನಿಯೂ ಆಗಿಲ್ಲ ಎಂದು ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸದೇ ಟಾಂಗ್‌ ಕೊಟ್ಟರು. ಈ ವೇಳೆ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ಮಾತಿನ ‌ಚಕಮಕಿ ನಡೆಯಿತು.

  • ಸುಲಭ್ ಶೌಚಾಲಯ ಯೋಜನೆಗೆ ಮೋದಿಯ ಹೆಸರನ್ನು ಇಡಲಿ: ಹರಿಪ್ರಸಾದ್ ವ್ಯಂಗ್ಯ

    ಸುಲಭ್ ಶೌಚಾಲಯ ಯೋಜನೆಗೆ ಮೋದಿಯ ಹೆಸರನ್ನು ಇಡಲಿ: ಹರಿಪ್ರಸಾದ್ ವ್ಯಂಗ್ಯ

    ಬೆಂಗಳೂರು: ಸುಲಭ್ ಶೌಚಾಲಯ ಮೋದಿ ಯೋಜನೆ. ಅದಕ್ಕೆ ಪ್ರಧಾನಿ ಮೋದಿ ಅವರ ಹೆಸರಿಡಬೇಕು ಎಂದು ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ನರೇಂದ್ರ ಮೋದಿ ಗೇಮ್ ಚೇಂಜರ್ ಅಲ್ಲ. ನೇಮ್ ಚೇಂಜರ್ ಆಗಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರನ್ನು ಇವರು ಬದಲಾಯಿಸಬಹುದು. ಆದರೆ ಈ ನೆಲದ ಮೇಲೆ ಬಿದ್ದ ಇವರ ರಕ್ತ ಅಳಿಸಲು ಯಾರಿಗೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

    ಇಂದಿರಾ ಗಾಂಧಿ ಹೆಸರು ಬದಲಾಯಿಸುವುದು ಹೀನ ಕುತಂತ್ರ ಕೆಟ್ಟ ರಾಜಕಾರಣ. ಅವರ ಬೋರ್ಡ್ ಎಲ್ಲೆಲ್ಲಿ ಇರುತ್ತದೋ ಅಲ್ಲೆಲ್ಲ ನಾವು ಮಸಿ ಬಳಿದು ಹೋರಾಟ ಮಾಡಬೇಕಾಗುತ್ತದೆ. ಮೊದಲು ಇವರು ಗೇಮ್ ಚೇಂಜರ್ ಅಂತ ಬಂದರು. ನೇಮ್ ಚೇಂಜರ್ ಆಗಿದ್ದಾರೆ ಎಂದು ಕಿಡಿಕಾರಿದರು.

    ಇವರೆನಾದರೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಿದರೆ ನಾವು ಇವರ ಬೋರ್ಡ್‍ಗೆ ಮಸಿ ಬಳಿಯುತ್ತೇವೆ. ಗಾಂಧಿಯನ್ನು ಕೊಂದು ದೇಶ ದ್ರೋಹದ ಆಪಾದನೆ ಹೊತ್ತಿರುವ ಸಾವರ್ಕರ್ ಬೋರ್ಡ್ ಗೆ ನಾವು ಮಸಿ ಬಳಿಯುತ್ತೇವೆ. ಅವರು ಎಷ್ಟು ದೂರ ಹೋಗ್ತಾರೋ ಹೋಗಲಿ ನೋಡೋಣ ಎಂದರು. ಇದನ್ನೂ ಓದಿ : ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

    ಈಶ್ವರಪ್ಪ ಹೇಳಿಕೆ ರಾಜ್ಯಕ್ಕೆ ಹೊಸತಲ್ಲ. ಸಿಎಂ ಆಗೋಕೆ ಸತತ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈಶ್ವರಪ್ಪನವರಿಗೆ ಹುಚ್ಚು ಹಿಡಿದಿದೆ. ಸುಧಾಕರ್ ಅವರು ಈಶ್ವರಪ್ಪನವರನ್ನು ನಿಮಾನ್ಸ್ ಗೆ ಸೇರಿಸಿ ಒಳ್ಳೆಯ ಚಿಕಿತ್ಸೆ ನೀಡಬೇಕು ಎಂದು ವ್ಯಂಗ್ಯವಾಡಿದರು.

    ಮನೆಯಲ್ಲಿ ನೋಟ್ ಎಣಿಸಿ ಹೈಕಮಾಂಡ್‍ಗೆ ಕೊಟ್ಟು ಸಿಎಂ ಆಗಲು ಹೋದವರಿಂದ ಏನು ನಿರೀಕ್ಷೆ ಸಾಧ್ಯ? ಕೂಡಲೇ ಈಶ್ವರಪ್ಪನವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

  • ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    ಮಲ್ಲೇಶ್ವರದಲ್ಲಿ ದಲಿತರಿಗೆ ಲಸಿಕೆ ನಿರಾಕರಣೆ: ಹರಿಪ್ರಸಾದ್ ಆರೋಪ ಶುದ್ಧ ಸುಳ್ಳೆಂದ ಡಿಸಿಎಂ

    – ಲಸಿಕೆ ಅಭಿಯಾನ ಹಳಿತಪ್ಪಿಸುವುದೇ ಅವರ ದುರುದ್ದೇಶ

    ಬೆಂಗಳೂರು: ನಗರದ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಜಾತಿ ಆಧಾರದ ಮೇಲೆ ಲಸಿಕೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾಡಿರುವ ಆರೋಪವನ್ನು ಕ್ಷೇತ್ರದ ಶಾಸಕರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

    ಈ ಬಗ್ಗೆ ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದೊಂದು ಬೇಜವಾಬ್ದಾರಿ ಹೇಳಿಕೆ. ಅವರಿಗೆ ಜಾತಿ- ಧರ್ಮದ ಹೆಸರೇಳದಿದ್ದರೆ ನಿದ್ದೆಯೂ ಬರಲ್ಲ. ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಲಸಿಕೆ ಅಭಿಯಾನವನ್ನು ಹೇಗಾದರೂ ಹಳಿತಪ್ಪಿಸಬೇಕು ಎಂಬ ಷಡ್ಯಂತ್ರ ಅವರು ಇಟ್ಟುಕೊಂಡಿರುವಂತಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಲಸಿಕೆಯಲ್ಲಿ ಜಾತಿ ತರುವ ಕೆಲಸವನ್ನು ನಾನಾಗಲಿ ಅಥವಾ ನಮ್ಮ ಪಕ್ಷವಾಗಲಿ ಮಾಡಿಲ್ಲ. ಅಂಥ ಯಾವುದೇ ಘಟನೆ ಕ್ಷೇತ್ರದಲ್ಲಿ ನಡೆದಿಲ್ಲ. ಯಾರಿಗೂ ಲಸಿಕೆ ನಿರಾಕರಿಸಿಲ್ಲ” ಎಂದು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

    ಅಂಕಿ- ಅಂಶ ಕೊಟ್ಟ ಡಿಸಿಎಂ:
    ದಾನಿಗಳ ನೆರವಿನಿಂದ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆ ಖರೀದಿ ಮಾಡಿ ಕೊಳೆಗೇರಿಗಳಲ್ಲಿ ವಾಸಿಸುವ 1,000ಕ್ಕೂ ಹೆಚ್ಚು ಬಡವರಿಗೆ, ಆರ್ಥಿಕ ದುರ್ಬಲರಿಗೆ ಲಸಿಕೆ ಕೊಡಿಸಿದ್ದೇನೆ. ಅಲ್ಲದೆ 9,000 ಜನರಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಕ್ಷೇತ್ರದ 7 ಸ್ಲಂಗಳ ಜನರೇ ಹೆಚ್ಚು ಇದ್ದಾರೆ. ಸತ್ಯ ಅರ್ಥ ಮಾಡಿಕೊಳ್ಳದೆ ಸುಳ್ಳು ಆರೋಪ ಮಾಡುವುದು ಎಷ್ಟು ಸರಿ ಎಂದು ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದರು.

    ಮಲ್ಲೇಶ್ವರದ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ದಲಿತರಿಗೆ ಲಸಿಕೆ ನಿರಾಕರಿಸಲಾಗಿದೆ ಎಂದು ಹರಿಪ್ರಸಾದ್ ದೂರಿದ್ದಾರೆ. ಇದು ಶುದ್ಧ ಸುಳ್ಳು. ಅಂದು, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರೂ, ಅವರ ಆರೈಕೆ ಮಾಡುವವರಿಗೆ ಲಸಿಕೆ ನೀಡಲಾಗುತ್ತಿತ್ತು. ಸರ್ಕಾರ ಹೊರಡಿಸಿರುವ ಈ ಮಾರ್ಗಸೂಚಿ ಪ್ರಕಾರ ಯಾರೇ ಬಂದರೂ ಲಸಿಕೆ ಹಾಕಿ ಕಳಿಸಲಾಗುತ್ತಿದೆ. ಪ್ರತಿಯೊಬ್ಬರ ಆಧಾರ್ ಸಂಖ್ಯೆ ದಾಖಲಿಸಿಕೊಂಡು ವ್ಯಾಕ್ಸಿನ್ ನೀಡಲಾಗುತ್ತಿದೆ. ಇಷ್ಟಕ್ಕೂ ಆಧಾರ್ ಕಾರ್ಡ್ ಮೇಲೆ ಜಾತಿ ನಮೂದಾಗಿರುವುದಿಲ್ಲ ಎಂಬ ಅಂಶವನ್ನು ಹರಿಪ್ರಸಾದ್ ಗಮನಿಸಬೇಕು ಎಂದು ಉಪ ಮುಖ್ಯಮಂತ್ರಿ ತಿರುಗೇಟು ಕೊಟ್ಟರು.

    ವೈರಸ್‍ಗೆ ಜಾತಿ- ಧರ್ಮದ ಹಂಗಿಲ್ಲ. ಅದೇ ರೀತಿ ವ್ಯಾಕ್ಸಿನ್‍ಗೆ ಇರುವುದಿಲ್ಲ. ಇದನ್ನು ಹರಿಪ್ರಸಾದ್ ಅವರು ಅರ್ಥ ಮಾಡಿಕೊಳ್ಳಬೇಕು. ಸಂಕಷ್ಟದ ಸಮಯದಲ್ಲಿ ಅವರು ಸರಕಾರಕ್ಕೆ ಸಲಹೆಗಳನ್ನು ನೀಡಿ ಉತ್ತೇಜಿಸಬೇಕೆ ಹೊರತು ಆಗುತ್ತಿರುವ ಕೆಲಸದಲ್ಲಿ ಕಲ್ಲು ಹುಡುಕಿ ನೈತಿಕ ಸ್ಥೈರ್ಯ ಕುಗ್ಗಿಸಬಾರದು. ಇಂಥ ಸೂಕ್ಷ್ಮ ವಿಷಯಗಳಲ್ಲಿ ಜಾತಿ-ಧರ್ಮದಂಥ ಸೂಕ್ಷ್ಮ ಸಂಗತಿಗಳನ್ನು ತರಬಾರದು. ಇವರಿಗೆ ನಾಚಿಕೆಯಾಗಬೇಕು. ಜನ ಪಾಠ ಕಲಿಸಿದ್ದರೂ ಇವರಿಗೆ ಬುದ್ಧಿ ಬಂದಿಲ್ಲ. ಹಾಗಾದರೆ ಇವರ ಪ್ರಕಾರ ಅರ್ಚಕರಿಗೆ ಲಸಿಕೆ ಕೊಡುವ ಹಾಗಿಲ್ಲವೆ? ಎಂದು ಡಿಸಿಎಂ ತರಾಟೆಗೆ ತೆಗೆದುಕೊಂಡರು.