ಬೆಂಗಳೂರು: ಕಲ್ಲಿದ್ದಲು ಗಣಿ ಹರಾಜಿಗಾಗಿ (Coal Mine Auction) ಹೂಡಿಕೆದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಜನವರಿ 16ರಂದು ರಾಂಚಿಯಲ್ಲಿ (Ranchi) ರೋಡ್ ಶೋ (Road Show) ನಡೆಸಲಿದೆ.
ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ 8 ಸುತ್ತುಗಳ ವಾಣಿಜ್ಯ ಹರಾಜುಗಳ ಅಡಿಯಲ್ಲಿ 39 ಕಲ್ಲಿದ್ದಲು ಗಣಿಗಳನ್ನು ಮತ್ತು 9ನೆಯ ಅಡಿಯಲ್ಲಿ 31 ಕಲ್ಲಿದ್ದಲು ಗಣಿಗಳನ್ನು ಮಾರಾಟ ಮಾಡಲು ಸರ್ಕಾರ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 70 ಕಲ್ಲಿದ್ದಲು ಗಣಿಗಳು ಕಲ್ಲಿದ್ದಲು ಹೊಂದಿರುವ ರಾಜ್ಯಗಳಾದ ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಿಂದ ಬಂದಿವೆ. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಪಾಲಿಸದವರಿಗೆ ಚಿತ್ರಗುಪ್ತನ ಲೆಕ್ಕ, ಯಮನ ಪಾಠ!
ಈ ಗಣಿಗಳಲ್ಲಿ 27 ಸಂಪೂರ್ಣವಾಗಿ ಪರಿಶೋಧಿತವಾಗಿವೆ ಮತ್ತು 43 ಭಾಗಶಃ ಪರಿಶೋಧಿಸಲ್ಪಟ್ಟಿವೆ. ಏಳು ಕೋಕಿಂಗ್ ಕಲ್ಲಿದ್ದಲು ಗಣಿಗಳಾಗಿವೆ. ಆದರೆ ಉಳಿದವುಗಳು ಅಲ್ಲ ಎಂದು ಕೇಂದ್ರ ಗಣಿ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ
ಸಮಗ್ರ ಚರ್ಚೆಯ ನಂತರ ಗಣಿಗಳನ್ನು ಮತ್ತು ಗಣಿ ಹರಾಜು ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ ಮತ್ತು ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸ ಸ್ಥಾನಗಳು, ಶೇ.40ಕ್ಕಿಂತ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಮತ್ತು ಹೆಚ್ಚು ನಿರ್ಮಿಸಲಾದ ಪ್ರದೇಶವನ್ನು ಹೊರಗಿಡಲಾಗಿದೆ ಎಂದು ಕೇಂದ್ರ ಗಣಿ ಸಚಿವಲಯ ತಿಳಿಸಿದೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್
ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ (David Warner) ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾಡಿದೆಯಂತೆ. ಈ ವಿಚಾರವನ್ನು ಸ್ವತಃ ವಾರ್ನರ್ ಅವರೇ ಶೇರ್ ಮಾಡಿಕೊಂಡಿದ್ದಾರೆ.
ಟ್ರಾವಿಸ್ ಹೆಡ್ (Travis Head) ಅವರನ್ನು ಹರಾಜಿನಲ್ಲಿ ಹೈದರಾಬಾದ್ ಇಂದು ಖರೀದಿಸಿದೆ. ದುಬೈನಲ್ಲಿ ನಡೆದ ಐಪಿಎಲ್ 2024 ಹರಾಜಿನಲ್ಲಿ ಟ್ರಾವಿಸ್ ಹೆಡ್ ಅವರನ್ನು ಸನ್‌ರೈಸರ್ಸ್ 6.80 ಕೋಟಿಗೆ ಖರೀದಿಸಿತು. ಹೀಗಾಗಿ ಟ್ರಾವಿಸ್ ಹೆಡ್‌ಗೆ ಡೇವಿಡ್ ವಾರ್ನರ್ ಅವರು ಅಭಿನಂದನೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಇನ್ ಸ್ಟಾ ಹಾಗೂ ಫೇಸ್‌ಬುಕ್ ನಲ್ಲಿ ಬ್ಲಾಕ್ ಆಗಿರೋ ವಿಚಾರ ವಾರ್ನರ್ ಗಮನಕ್ಕೆ ಬಂದಿದೆ. ಇದನ್ನೂ ಓದಿ:IPL ಇತಿಹಾಸದಲ್ಲೇ ದಾಖಲೆ – ಬರೋಬ್ಬರಿ 24.75 ಕೋಟಿ ರೂ.ಗೆ ಬಿಕರಿಯಾದ ಮಿಚೆಲ್ ಸ್ಟಾರ್ಕ್
ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಯಲಿರುವ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಹರಾಜು (Auction) ಪ್ರಕ್ರಿಯೆ ನಾಳೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಲ್ಲಿ ಶಿವರಾಜ್ ಕುಮಾರ್ (Shivaraj Kumar), ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್ ಸೇರಿದಂತೆ ಹಲವಾರು ಕಲಾವಿದರು ಭಾಗಿಯಾಗಲಿದ್ದಾರೆ. ಡಿಸೆಂಬರ್ 23 ರಿಂದ ಕ್ರಿಕೆಟ್ ಪಂದ್ಯ ಆಯೋಜನೆಯಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮೆಗಾ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದೆ. ಕಿಚ್ಚ ಸುದೀಪ್ (Sudeep) ನೇತೃತ್ವದಲ್ಲಿ ಪ್ರತಿ ವರ್ಷವೂ ಆಯೋಜನೆಗೊಳ್ಳುವ ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ (Kannada Film Cup) ಪಂದ್ಯಾವಳಿ ಡಿಸೆಂಬರ್ ನಿಂದ ಆರಂಭವಾಗಲಿದೆ. ಇದರ ಉದ್ಘಾಟನೆ ಸಮಾರಂಭಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಎಂ.ಎಸ್. ಧೋನಿ (MS Dhoni) ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಆಗಮಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಇಬ್ಬರ ಜೊತೆ ಮಾತುಕತೆ ಕೂಡ ನಡೆಸಲಾಗಿದೆ.
ಹಲವಾರು ವರ್ಷಗಳಿಂದ ಕನ್ನಡ ಚಿತ್ರೋದ್ಯಮವನ್ನು ಸಂಘಟಿಸಿಕೊಂಡು ಕ್ರಿಕೆಟ್ (Cricket)) ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬರಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ, ಹುಬ್ಬಳಿಯಲ್ಲೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕನ್ನಡ ಸಿನಿಮಾ ರಂಗದ ಬಹುತೇಕ ಕಲಾವಿದರು ಮತ್ತು ತಂತ್ರಜ್ಞರು ಈ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.
ನಟರು ತಮ್ಮದೇ ಆದ ತಂಡಗಳನ್ನು ಕಟ್ಟಿಕೊಂಡು ಆಟವಾಡುವುದು ಈ ಕ್ರಿಕೆಟ್ ಪಂದ್ಯದ ಉದ್ದೇಶ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕ್ರೀಡೆಗೂ ಉತ್ತೇಜಿಸುವಂತಹ ಕೆಲಸವನ್ನು ಕನ್ನಡ ಚಿತ್ರೋದ್ಯಮ ಮಾಡುತ್ತಾ ಬಂದಿದೆ. ಕೆಸಿಸಿ ಹೆಸರಿನಲ್ಲಿ ಈ ಪಂದ್ಯಗಳು ಆಯೋಜನೆ ಆಗುತ್ತವೆ.
ಶಿವರಾಜ್ ಕುಮಾರ್, ಗಣೇಶ್, ಸುದೀಪ್, ಪುನೀತ್ ರಾಜ್ ಕುಮಾರ್, ಯಶ್, ದರ್ಶನ್, ಉಪೇಂದ್ರ, ಡಾಲಿ ಧನಂಜಯ್ ಹೀಗೆ ಅನೇಕರು ಈ ಪಂದ್ಯದಲ್ಲಿ ಆಡಿದ್ದಾರೆ. ಈ ಕ್ರಿಕೆಟ್ ಪಂದ್ಯದ ಮತ್ತೊಂದು ವಿಶೇಷ ಅಂದರೆ, ನುರಿತ ಕ್ರಿಕೆಟ್ ಆಟಗಾರರು ಕೂಡ ಭಾಗಿ ಆಗಿರುತ್ತಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಆಡಿರುವ ಮತ್ತು ವಿದೇಶಿ ಕ್ರಿಕೆಟ್ ಆಟಗಾರರು ಕೂಡ ಪಂದ್ಯದಲ್ಲಿ ಆಡಿದ್ದಾರೆ.
ಬಹುಕೋಟಿ ರೂಪಾಯಿ ವಂಚನೆಯ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ನೆಚ್ಚಿನ ಐಷಾರಾಮಿ ಕಾರುಗಳನ್ನು ಹರಾಜಿಗೆ ಇಟ್ಟಿದ್ದಾರೆ ಐಟಿ ಅಧಿಕಾರಿಗಳು. ನೂರಾರು ಕೋಟಿ ರೂಪಾಯಿ ವಂಚನೆ ಕೇಸಲ್ಲಿ ಬಂಧನ ಆಗಿರೋ ಸುಕೇಶ್ ಚಂದ್ರಶೇಖರ್, ಸದ್ಯ ದೆಹಲಿ ಕಾರಾಗೃಹದಲ್ಲಿದ್ದಾರೆ. ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರೋ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿತ್ತು.
ಸುಕೇಶ್ ಚಂದ್ರಶೇಖರ್ ಗೆ ಸಂಬಂಧಿಸಿದ 12 ಐಷಾರಾಮಿ ಕಾರುಗಳನ್ನೂ ಜಪ್ತಿ ಮಾಡಿದ್ದ ಐಟಿ ಅಧಿಕಾರಿಗಳು BMW, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿ ಹಲವು ಐಷಾರಾಮಿ ಕಾರುಗಳನ್ನು ಇದೀಗ ಹರಾಜಿಗೆ (Auction) ಇಟ್ಟಿದ್ದಾರೆ. ನ.28 ರಂದು ಹರಾಜು ಹಾಕಲು ಮುಂದಾಗಿದ್ದು, ಸುಮಾರು 308 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರ ಪರಿಣಾಮ ಇದಾಗಿದೆ.
ಈಗ ಕಾರು ಹರಾಜಿನ ಕಾರಣದಿಂದಾಗಿ ಸುದ್ದಿ ಆಗಿರುವ ಸುಕೇಶ್, ಈ ಹಿಂದೆ ಜೈಲಿನಲ್ಲಿದ್ದುಕೊಂಡೇ (Jail) ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಪ್ರೇಮ ಪತ್ರ (Love Letter) ಬರೆಯುವ ಮೂಲಕ ಸುದ್ದಿಯಾಗಿದ್ದ. ನಿನಗಾಗಿ ನಾನು ಎಂತಹ ರಿಸ್ಕ್ ತಗೆದುಕೊಳ್ಳಲೂ ರೆಡಿ ಇರುವುದಾಗಿ ತಿಳಿಸಿದ್ದ. ಈ ಪತ್ರವನ್ನು ಜಾಕ್ವೆಲಿನ್ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಪತ್ರವನ್ನಂತೂ ಬರೆದು, ಜಾಕ್ವೆಲಿನ್ ಗೆ ಪೋಸ್ಟ್ ಮಾಡಿದ್ದ.
ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಡೇಟಿಂಗ್ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಇಬ್ಬರೂ ಜೊತೆಯಾಗಿ ಕಳೆದ ಖಾಸಗಿ ಫೋಟೋಗಳು ಕೂಡ ವೈರಲ್ ಆಗಿದ್ದವು. ಇವರ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಕೋಟಿ ಬೆಲೆಬಾಳುವ ಗಿಫ್ಟ್ ಪಡೆದಿದ್ದಳು ಜಾಕ್ವೆಲಿನ್. ಈ ಉಡುಗೊರೆಗಳೇ ಕೊನೆಗೆ ನಟಿಗೆ ಮುಳುವಾದವು. ಕೋರ್ಟ್ ಮೆಟ್ಟಿಲು ಕೂಡ ಹತ್ತಿಸಿದವು.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಬಂಧನವಾಗುತ್ತಿದ್ದಂತೆಯೇ ಜಾಕ್ವೆಲಿನ್ ಗೂ ಕೂಡ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿತ್ತು. ವಂಚನೆಯ ಹಣದಲ್ಲೇ ನಟಿಗೆ ಉಡುಗೊರೆ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಜಾಕ್ವೆಲಿನ್ ಕೂಡ ಬಂಧನವಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಟಿ ಮಧ್ಯಂತರ ಜಾಮೀನು ಪಡೆದುಕೊಂಡರು. ಆದರೂ, ವಿಚಾರಣೆಗೆ ಹೋಗುವುದು ತಪ್ಪಲಿಲ್ಲ.
ನಂತರದ ದಿನಗಳಲ್ಲಿ ಸುಕೇಶ್ ಗೂ ತಮಗೂ ಸಂಬಂಧವಿಲ್ಲ. ಅವನಿಂದಾಗಿ ನನ್ನ ಜೀವನ ಹಾಳಾಯಿತು ಎಂದು ಜಾಕ್ವೆಲಿನ್ ಆರೋಪಿಸಿದರು. ಈಕೆ ಏನೇ ಆರೋಪ ಮಾಡಿದರೂ, ಸುಕೇಶ್ ಮಾತ್ರ ಇನ್ನೂ ಜಾಕ್ವೆಲಿನ್ ಜಪ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಪ್ರೇಮಿಗಳ ದಿನದಂದು ವಿಶ್ ಮಾಡಿದ್ದ. ಹೋಳಿ ಹಬ್ಬಕ್ಕೂ ಸುಕೇಶ್ ಶುಭಾಶಯಗಳನ್ನು ಹೇಳಿದ್ದಾನೆ. ಜೊತೆಗೆ ಪ್ರೇಮ ಸಂದೇಶ ಕಳುಹಿಸಿದ್ದಾನೆ.
ಕನ್ನಡ ಚಿತ್ರರಂಗದ ನಟರು ಒಟ್ಟಾಗಿ ಆಡುವ ಡಾ.ರಾಜ್ ಕಪ್ ಕ್ರಿಕೆಟ್ (Cricket) ಪಂದ್ಯಾವಳಿ ಸೀಸನ್ 6ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸ್ಮರಣಾರ್ಥವಾಗಿ ಈ ಬಾರಿ ರಾಜ್ ಕಪ್ ( (Dr. Raj Cup)) ಆಯೋಜಿಸಲಾಗಿದ್ದು, ನಿನ್ನೆ ಜೂನ್ 17 ರಂದು ದುಬೈನಲ್ಲಿ (Dubai) ಟೀಮ್ ಹರಾಜು (Auction) ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಸ್ಯಾಂಡಲ್ ವುಡ್ ಅನೇಕ ತಾರೆಯರು ಭಾಗಿಯಾಗಿದ್ದರು.
ಪಂದ್ಯಾವಳಿಯ ಉದ್ಘಾಟನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneet Rajkumar) ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಆಯೋಜಕರಾದ ರಾಜೇಶ್ ಬ್ರಹ್ಮಾವರ, ಅನಿರುದ್ದ, ಮಣಿಕಾಂತ್ ಕದ್ರಿ, ಸಿಂಪಲ್ ಸುನಿ, ರವಿಶಂಕರ್ ಗೌಡ, ಜೇಮ್ಸ್ ಚೇತನ್, ಪವನ್ ಒಡೆಯರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ರಾಜ್ ಕಪ್ ಆಯೋಜಕರಾದ ರಾಜೇಶ್ ಬ್ರಹ್ಮಾವರ (Rajesh Brahmavar) ಮಾತನಾಡಿ, ಕಳೆದ ಬಾರಿ 8 ತಂಡ ಇತ್ತು. ಈ ಬಾರಿ 12 ತಂಡಗಳಾಗಿವೆ. 1000ಕ್ಕೂ ಹೆಚ್ಚು ಅಪ್ಲೀಕೇಷನ್ ಬಂದಿತ್ತು. ಅವುಗಳಲ್ಲಿ ರೂಲ್ಸ್ ಗೆ ತಕ್ಕಂತೆ ಆಯ್ಕೆ ಮಾಡಲಾಗಿದೆ. 12 ತಂಡಗಳಿಗೆ 12 ಕ್ಯಾಪ್ಟನ್, 12 ವೈಸ್ ಕ್ಯಾಪ್ಟನ್, ಸ್ಟಾರ್ ಕ್ಯಾಪ್ಟನ್ ಇರಲಿದ್ದಾರೆ. ರಾಜ್ ಕಪ್ ಸೀಸನ್ 6ನ್ನು ಆರು ದೇಶಗಳಲ್ಲಿ ಮಾಡುವ ಪ್ಲಾನ್ ನಡೆದಿದೆ. ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಬ್ಯಾಂಕಾಕ್ ಮತ್ತು ದುಬೈನಲ್ಲಿ ಪಂದ್ಯ ನಡೆಯಲಿವೆ. ಇನ್ನೊಂದು ದೇಶ ಬಾಕಿ ಉಳಿದಿದೆ.
ನಟ ಅನಿರುದ್ದ (Aniruddha) ಮಾತನಾಡಿ, ಡಾ.ರಾಜ್ ಕಪ್ ಹೆಸರಲ್ಲೇ ಸಕಾರಾತ್ಮಕತೆ ಇದೆ. ಆ ಒಂದು ವ್ಯಕ್ತಿಗೆ ಮಹಾನ್ ಕಲಾವಿದರಿಗೆ ಅವ್ರ ಹೆಸರಲ್ಲಿ ಅವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿರುವುದು ನಿಜಕ್ಕೂ ಸಂತೋಷ. ಅದರಲ್ಲಿ ನಾನು ಭಾಗಿಯಾಗಿದ್ದು, ರಾಜೇಶ್ ಅವಕಾಶ ಕಲ್ಪಿಸಿಕೊಟ್ಟಿದ್ದು, ನನಗೆ ವೈಯಕ್ತಿಕವಾಗಿ ಬಹಳ ಸಂತೋಷವಾಗಿದೆ. ರಾಜೇಶ್ ನನಗೆ ಆತ್ಮೀಯರು. ನನ್ನ ಮೊದಲ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದೇವೆ. ಕ್ರಿಕೆಟ್ ಅನ್ನೋದು ನಿಮಿತ್ತ ಅಷ್ಟೇ. ನಮ್ಮ ಕನ್ನಡ ಚಿತ್ರರಂಗದ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಬಾಂಧವ್ಯ ಇದೆ ಅನ್ನೋದನ್ನು ತೋರಿಸಿಕೊಡುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.
ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಮ್ಯಾಚ್ ಗಳು ನಡೆಯಲಿದೆ. ಡಾಲಿ ಧನಂಜಯ್, ಅನಿರುದ್ದ, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಾಲ್ಗೊಳ್ಳಲಿವೆ. ಇನ್ನು, ರಾಜ್ ಕಪ್ ಸೀಸನ್ 6ರ ಲೀಗ್ ಮ್ಯಾಚ್ ಗಳು ವಿದೇಶದಲ್ಲಿ ನಡೆಯಲಿದೆ. ಈ ಬಾರಿ ಲೀಗ್ ಪಂದ್ಯಗಳು ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ ಬ್ಯಾಂಕಾಕ್ ಮತ್ತು ದುಬೈನಲ್ಲಿ ನಡೆಯಲಿವೆ. ಈ ಮಹತ್ವದ ರಾಜ್ ಕಪ್ ಟೂರ್ನಿಗಾಗಿ ಸ್ಯಾಂಡಲ್ ವುಡ್ ತಾರೆಯರು, ತಂತ್ರಜ್ಞರ, ರಾಜಕೀಯ, ಮಾಧ್ಯಮದವರು ಭಾಗಿಯಾಗಲಿದ್ದಾರೆ.
ಬೆಂಗಳೂರು: ಕರ್ನಾಟಕ ಕರಕುಶಲ ವಸ್ತುಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ (Beluru Raghavendra Shetty) ಮನೆಯನ್ನು ಬ್ಯಾಂಕ್ ಹರಾಜಿಗಿಟ್ಟಿದೆ. ಆದರೆ ಹರಾಜಿಗೂ ಮುನ್ನವೇ ಬ್ಯಾಂಕ್ (Bank) ಕಾವಲಿಗಿಟ್ಟಿದ್ದ ಸೆಕ್ಯುರಿಟಿ ಗಾರ್ಡ್ ಕಣ್ತಪ್ಪಿಸಿ ಅಕ್ರಮ ಪ್ರವೇಶ ಮಾಡಿದ್ದಾರೆ.
ಬೇಳೂರು ರಾಘವೇಂದ್ರ ಶೆಟ್ಟಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 5 ಕೋಟಿ ರೂ.ಗೂ ಅಧಿಕ ಸಾಲ (Loan) ಪಡೆದಿದ್ದರು. ಸಾಲವನ್ನು ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ರಾಘವೇಂದ್ರ ಅವರ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿತ್ತು. ಇದೀಗ ಬ್ಯಾಂಕ್ 3 ದಿನಗಳಲ್ಲಿ ಮನೆಯನ್ನು ಹರಾಜಿಗಿಡಲು ಮುಂದಾಗಿದೆ.
ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಎಸ್‌ಎಂಸಿ ಬೆವರ್ಲಿ ಅಪಾರ್ಟ್ಮೆಂಟ್‌ನಲ್ಲಿ ರಾಘವೇಂದ್ರ ಅವರ ಈ ಫ್ಲ್ಯಾಟ್ ಇದೆ. ರಾಘವೇಂದ್ರ ಮಾಡಿದ್ದ ಸಾಲ ಮರುಪಾವತಿ ಮಾಡದ ಹಿನ್ನೆಲೆ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ಆದೇಶ ನೀಡಿ ಮನೆಯನ್ನು ಬ್ಯಾಂಕ್ ವಶಕ್ಕೆ ನೀಡಿದೆ. ಇದನ್ನೂ ಓದಿ: ಅನ್ಯಕೋಮಿನವರ ವ್ಯಾಪಾರಕ್ಕೆ ನಿರ್ಬಂಧ ಹೇರಿ – ಈಗ ಕಿಗ್ಗಾದಲ್ಲೂ ಧರ್ಮ ದಂಗಲ್
ಇದೀಗ ಬ್ಯಾಂಕ್ ವಶಕ್ಕೆ ಪಡೆದಿರುವ ಮನೆಯನ್ನು ಹರಾಜು ಹಾಕಲು ಸಿದ್ಧತೆ ನಡೆಸುತ್ತಿದೆ. ಆದರೆ ಈ ನಡುವೆ ಬುಧವಾರ ಮಧ್ಯರಾತ್ರಿ ರಾಘವೆಂದ್ರ ಶೆಟ್ಟಿ ಕಡೆಯವರು ಮನೆಗೆ ಹಾಕಲಾಗಿದ್ದ ಸೀಲ್ ಅನ್ನು ಒಡೆದು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ.
ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿರುವುದನ್ನು ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಅಧಿಕಾರಿಗಳು ಮನೆಯೊಳಗಿದ್ದವರಿಗೆ ಬಾಗಿಲು ತೆರೆಯುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಬಾಗಿಲನ್ನು ತೆರೆದಿದ್ದಾರೆ. ಅವರನ್ನು ಬಲವಂತವಾಗಿ ಮನೆಯಿಂದ ಹೊರಹಾಕಲು ಪ್ರಯತ್ನಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡುತ್ತಿದ್ದಾರೆ.
ಮುಂಬೈ: ಮಹಿಳೆಯರ ಪ್ರೀಮಿಯರ್ ಲೀಗ್ (Women’s Premier League) ಹರಾಜಿನಲ್ಲಿ ಪಾಲ್ಗೊಂಡಿರುವ ಆಟಗಾರ್ತಿಯರ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು ಒಟ್ಟು 409 ಆಟಗಾರ್ತಿಯರು ಬಿಡ್‌ಗೆ (Auction) ಅರ್ಹತೆ ಪಡೆದಿದ್ದಾರೆ.
ಒಟ್ಟು 1,525 ಆಟಗಾರ್ತಿಯರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ದಾಖಲೆ ಪರಿಶೀಲನೆ ಮಾಡಿ 409 ಆಟಗಾರ್ತಿಯರ ಹೆಸರನ್ನು ಮಾತ್ರ ಬಿಡ್‌ಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ 246 ಭಾರತೀಯರಾಗಿದ್ದರೆ 163 ವಿದೇಶಿ ಆಟಗಾರ್ತಿಯರು ಇದ್ದಾರೆ.
ಪ್ರತಿ ತಂಡಗಳು 12 ಕೋಟಿ ರೂ. ಒಳಗಡೆ ಕನಿಷ್ಠ 15, ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬೇಕಾಗುತ್ತದೆ. 409 ಆಟಗಾರ್ತಿಯರ ಪೈಕಿ 90 ಮಂದಿ ಹರಾಜಾಗಲಿದ್ದಾರೆ. 5 ತಂಡಗಳಲ್ಲಿ 60 ಭಾರತೀಯ ಮತ್ತು 30 ವಿದೇಶಿ ಆಟಗಾರ್ತಿಯರು ಇರಲಿದ್ದಾರೆ. ಪ್ರತಿ ತಂಡದಲ್ಲಿ ಗರಿಷ್ಠ 12, ಗರಿಷ್ಠ 6 ವಿದೇಶಿ ಆಟಗಾರ್ತಿಯರು ಇರಲಿದ್ದಾರೆ.
ಮುಂಬೈಯಲ್ಲಿರುವ ಜಿಯೋ ಸೆಂಟರ್‌ನಲ್ಲಿ ಫೆ. 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 4 ರಿಂದ 26 ರವರೆಗೆ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
ಮುಂಬೈ: ದೇವರ ನಾಡು ಕೇರಳದಲ್ಲಿ ನಿನ್ನೆ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಕೆಲ ಆಟಗಾರರು ದಾಖಲೆಯ ಮೊತ್ತಕ್ಕೆ ಸೇಲ್ ಆದರೆ, ಇನ್ನೂ ಕೆಲ ಸ್ಟಾರ್ ಪ್ಲೇಯರ್ಸ್ ಎಂಬ ಹಣೆಪಟ್ಟಿ ಹೊಂದಿದ್ದ ಆಟಗಾರರು ಅನ್‍ಸೋಲ್ಡ್ ಆದರು. ಈ ನಡುವೆ ಭರವಸೆ ಮೂಡಿಸಿದ್ದ 15ರ ಬಾಲಕ ಅಲ್ಲಾ ಮೊಹಮ್ಮದ್ ಘಜನ್ಫರ್ (Allah Mohammed Ghazanfar) ಅನ್‍ಸೋಲ್ಡ್ (Unsold) ಆಗಿದ್ದಾನೆ.
ಅಫ್ಘಾನಿಸ್ತಾನ ಮೂಲದ ಅಲ್ಲಾ ಮೊಹಮ್ಮದ್ ಘಜನ್ಫರ್ ಹರಾಜಿನಲ್ಲಿ ಹೆಸರು ನೋದಾಯಿಸಿಕೊಂಡಿದ್ದ ಅತಿ ಕಿರಿಯ ಆಟಗಾರ ಆದರೆ, ಆತನ ಹೆಸರು ಅಂತಿಮ ಪಟ್ಟಿಗೆ ಬರಲೇ ಇಲ್ಲ. ಈ ಮೂಲಕ ಅನ್‍ಸೋಲ್ಡ್ ಆಗಿದ್ದಾನೆ. ಇನ್ನೂ ಈ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದ 40 ವರ್ಷದ ಹಿರಿಯ ಆಟಗಾರ ಎನಿಸಿಕೊಂಡಿದ್ದ ಅಮಿತ್ ಮಿಶ್ರಾರನ್ನು (Amit Mishra) 50 ಲಕ್ಷ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿದೆ.
ಈ ಬಾರಿ ಮಿನಿ ಹರಾಜಿನಲ್ಲಿ ಸ್ಯಾಮ್ ಕರ್ರನ್ (Sam Curran) 18.50 ಕೋಟಿ ರೂ. ದಾಖಲೆ ಮೊತ್ತಕ್ಕೆ ಪಂಜಾಬ್ ಪಾಲಾದರೆ, ಕ್ಯಾಮರೂನ್ ಗ್ರೀನ್ 17.50 ಕೋಟಿ ರೂ. ಮುಂಬೈ, ಬೆನ್‍ಸ್ಟೋಕ್ಸ್ 16.25 ಕೋಟಿ ರೂ. ಚೆನ್ನೈ, ನಿಕೋಲಸ್ ಪೂರನ್ 16 ಕೋಟಿ ರೂ. ಲಕ್ನೋ, ಹ್ಯಾರಿ ಬ್ರೂಕ್ 13.25 ಕೋಟಿ ರೂ. ನೀಡಿ ಹೈದರಾಬಾದ್ ಖರೀದಿಸುವ ಮೂಲಕ ಟಾಪ್ ಬಿಕರಿ ಆಟಗಾರರಾಗಿ ಕಾಣಿಸಿಕೊಂಡರು. ಮೊಹಮ್ಮದ್ ನಬಿ, ಜೆಮ್ಮಿ ನಿಶಾಮ್, ಜೋರ್ಡನ್, ಕುಶಲ್ ಮೆಂಡಿಸ್ ಸಹಿತ ಕೆಲ ಸ್ಟಾರ್ ಪ್ಲೇಯರ್ಸ್ ಅನ್‌ಸೋಲ್ಡ್ ಆದರು. ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು ಹೈಲೈಟ್ಸ್ – ಸುತ್ತಿಗೆಯ ಹೊಡೆತಕ್ಕೆ ಕಾಯುತ್ತಿದ್ದಾನೆ 15ರ ಬಾಲಕ
ಉಳಿದಂತೆ ಯಾವ ತಂಡ ಎಷ್ಟು ಮೊತ್ತಕ್ಕೆ ಯಾವ ಆಟಗಾರರನ್ನು ಖರೀದಿಸಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ರಜತ್ ಪಾಟಿದಾರ್, ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‍ವೆಲ್, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‍ವುಡ್ ಮತ್ತು ಕರಣ್ ಶರ್ಮಾ
ಖರೀದಿಸಿದ ಆಟಗಾರರು: ವಿಲ್ ಜಾಕ್ಸ್ (3.2 ಕೋಟಿ ರೂ.), ರೀಸ್ ಟಾಪ್ಲಿ (1.9 ಕೋಟಿ ರೂ.), ಸೋನು ಯಾದವ್ (20 ಲಕ್ಷ ರೂ.), ಅವಿನಾಶ್ ಸಿಂಗ್ (60 ಲಕ್ಷ ರೂ.), ರಾಜನ್ ಕುಮಾರ್ (70 ಲಕ್ಷ ರೂ.), ಮನೋಜ್ ಭಾಂಡಗೆ (20 ಲಕ್ಷ ರೂ.), ಹಿಮಾಂಶು ಶರ್ಮಾ (20 ಲಕ್ಷ ರೂ.). ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್
ಖರೀದಿಸಿದ ಆಟಗಾರರು: ಬೆನ್ ಸ್ಟೋಕ್ಸ್ (16.25 ಕೋಟಿ ರೂ.), ಕೈಲ್ ಜೇಮಿಸನ್ (1 ಕೋಟಿ ರೂ.), ಅಜಿಂಕ್ಯಾ ರಹಾನೆ (50 ಲಕ್ಷ ರೂ.) ಭಗತ್ ವರ್ಮಾ (20 ಲಕ್ಷ ರೂ.), ಅಜಯ್ ಮಂಡಲ್ (20 ಲಕ್ಷ ರೂ.), ನಿಶಾಂತ್ ಸಿಂಧು (60 ಲಕ್ಷ ರೂ.), ಶೇಕ್ ರಶೀದ್ (20 ಲಕ್ಷ ರೂ.),
ಲಕ್ನೋ ಸೂಪರ್ ಜೈಂಟ್ಸ್
ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ಮನನ್ ವೋಹ್ರಾ, ಆಯುಷ್ ಬಡೋನಿ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಕೈಲ್ ಮೇಯರ್ಸ್, ಕರಣ್ ಶರ್ಮಾ, ಕೆ ಗೌತಮ್, ಅವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಮಾರ್ಕ್ ವುಡ್, ಮಯಾಂಕ್ ಯಾದವ್.
ಖರೀದಿಸಿದ ಆಟಗಾರರು: ನಿಕೋಲಸ್ ಪೂರನ್ (16 ಕೋಟಿ ರೂ.), ಯುಧ್ವೀರ್ ಚರಕ್ (20 ಲಕ್ಷ ರೂ.), ನವೀನ್-ಉಲ್-ಹಕ್ (50 ಲಕ್ಷ ರೂ.), ಸ್ವಪ್ನಿಲ್ ಸಿಂಗ್ (20 ಲಕ್ಷ ರೂ.), ಪ್ರೇರಕ್ ಮಂಕಡ್ (20 ಲಕ್ಷ ರೂ.), ಅಮಿತ್ ಮಿಶ್ರಾ (50 ಲಕ್ಷ ರೂ.), ಡೇನಿಯಲ್ ಸ್ಯಾಮ್ಸ್ (75 ಲಕ್ಷ ರೂ.), ರೊಮಾರಿಯೋ ಶೆಫರ್ಡ್ (50 ಲಕ್ಷ ರೂ.), ಯಶ್ ಠಾಕೂರ್ (45 ಲಕ್ಷ ರೂ.), ಜಯದೇವ್ ಉನಾದ್ಕತ್ (50 ಲಕ್ಷ ರೂ.),
ಸನ್ ರೈಸರ್ಸ್ ಹೈದರಾಬಾದ್
ಉಳಿಸಿಕೊಂಡಿರುವ ಆಟಗಾರರು: ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಏಡೆನ್ ಮಾಕ್ರ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ. ಇದನ್ನೂ ಓದಿ: ಐಪಿಎಲ್‌ನಲ್ಲಿ ಪಾಕ್ ಮೂಲದ ಆಟಗಾರ – ಪಂಜಾಬ್ ಪಾಲಾದ ರಾಜಾ
ಖರೀದಿಸಿದ ಆಟಗಾರರು: ಹೆನ್ರಿಚ್ ಕ್ಲಾಸೆನ್ (5.25 ಕೋಟಿ ರೂ.), ಮಯಾಂಕ್ ಅಗರ್ವಾಲ್ (8.25 ಕೋಟಿ ರೂ.), ಹ್ಯಾರಿ ಬ್ರೂಕ್ (13.25 ಕೋಟಿ ರೂ.), ಅನ್ಮೋಲ್‍ಪ್ರೀತ್ ಸಿಂಗ್ (20 ಲಕ್ಷ ರೂ.), ಅಕೇಲ್ ಹೊಸೈನ್ (1 ಕೋಟಿ ರೂ.), ನಿತೀಶ್ ಕುಮಾರ್ ರೆಡ್ಡಿ (20 ಲಕ್ಷ ರೂ.), ಮಯಾಂಕ್ ದಾಗರ್ (1.8 ಕೋಟಿ ರೂ.), ಉಪೇಂದ್ರ ಯಾದವ್ (25 ಲಕ್ಷ ರೂ.), ಸನ್ವಿರ್ ಸಿಂಗ್ (20 ಲಕ್ಷ ರೂ.), ಸಮರ್ಥ ವ್ಯಾಸ್ (20 ಲಕ್ಷ ರೂ.), ವಿವ್ರಾಂತ್ ಶರ್ಮಾ (2.6 ಕೋಟಿ ರೂ.), ಮಯಾಂಕ್ ಮಾರ್ಕಾಂಡೆ (50 ಲಕ್ಷ ರೂ.), ಆದಿಲ್ ರಶೀದ್ (2 ಕೋಟಿ ರೂ.).
ಖರೀದಿಸಿದ ಆಟಗಾರರು: ಜೋ ರಿಚಡ್ರ್ಸನ್ (1.5 ಕೋಟಿ ರೂ.), ಕ್ಯಾಮರೂನ್ ಗ್ರೀನ್ (17.5 ಕೋಟಿ ರೂ.), ರಾಘವ್ ಗೋಯಲ್ (20 ಲಕ್ಷ ರೂ.), ನೆಹಾಲ್ ವಧೇರಾ (20 ಲಕ್ಷ ರೂ.), ಶಮ್ಸ್ ಮುಲಾನಿ (20 ಲಕ್ಷ ರೂ.), ವಿಷ್ಣು ವಿನೋದ್ (20 ಲಕ್ಷ ರೂ.), ದುವಾನ್ ಜಾನ್ಸೆನ್ (20 ಲಕ್ಷ ರೂ.), ಪಿಯೂಷ್ ಚಾವ್ಲಾ (20 ಲಕ್ಷ ರೂ.)
ಪಂಜಾಬ್ ಕಿಂಗ್ಸ್ ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್, ಜಾನಿ ಬೈರ್‍ಸ್ಟೋವ್, ಭಾನುಕಾ ರಾಜಪಕ್ಸೆ, ಪ್ರಭಾಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಲಿಯಾಮ್ ಲಿವಿಂಗ್‍ಸ್ಟೋನ್, ಹರ್‍ಪ್ರೀತ್ ಬ್ರಾಡ್, ರಾಜ್ ಬಾವಾ, ರಿಷಿ ಧವನ್, ಅಥರ್ವ ತಾಜ್ಡೆ, ಕಗಿಸೊ ರಬಾಡ, ಅರ್ಶ್‍ದೀಪ್ ಸಿಂಗ್, ರಾಹುಲ್ ಚಾಹರ್, ನಾಥನ್. ಬಲ್ತೇಜ್ ಸಿಂಗ್. ಇದನ್ನೂ ಓದಿ: ಕಳೆದ ಬಾರಿ 15 ಕೋಟಿ ರೂ. ನೀಡಿ RCB ಖರೀದಿಸಿದ್ದ ಆಟಗಾರ ಈ ಬಾರಿ 1 ಕೋಟಿಗೆ ಚೆನ್ನೈ ಪಾಲು
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಸಿಕಂದರ್ ರಜಾ (50 ಲಕ್ಷ ರೂ.), ಸ್ಯಾಮ್ ಕುರ್ರಾನ್ (18.5 ಕೋಟಿ ರೂ.), ಶಿವಂ ಸಿಂಗ್ (20 ಲಕ್ಷ ರೂ.), ಮೋಹಿತ್ ರಥಿ (20 ಲಕ್ಷ ರೂ.), ವಿದ್ವತ್ ಕಾವೇರಪ್ಪ (20 ಲಕ್ಷ ರೂ.), ಹರ್‍ಪ್ರೀತ್ ಭಾಟಿಯಾ (40 ಲಕ್ಷ ರೂ.)
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಜೇಸನ್ ಹೋಲ್ಡರ್ (5.75 ಕೋಟಿ ರೂ.), ಜೋ ರೂಟ್ (1 ಕೋಟಿ ರೂ.), ಅಬ್ದುಲ್ (20 ಲಕ್ಷ ರೂ.), ಆಕಾಶ್ ವಶಿಷ್ಟ್ (20 ಲಕ್ಷ ರೂ.), ಮುರುಗನ್ ಅಶ್ವಿನ್ (20 ಲಕ್ಷ ರೂ.), ಆಸಿಫ್ (30 ಲಕ್ಷ ರೂ.), ಆಡಮ್ ಜಂಪಾ (1.5 ಕೋಟಿ ರೂ.), ಕುನಾಲ್ ರಾಥೋರ್ (20 ಲಕ್ಷ ರೂ.), ಡೊನೊವನ್ ಫೆರೇರಾ (50 ಲಕ್ಷ ರೂ.).
ಗುಜರಾತ್ ಟೈಟಾನ್ಸ್
ಉಳಿಸಿಕೊಂಡಿರುವ ಆಟಗಾರರು: ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಸಾಯಿ ಕಿಶೋರ್, ನೂರ್ ಅಹ್ಮದ್. ಇದನ್ನೂ ಓದಿ: RCB ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಿಂಧನೂರಿನ ಮನೋಜ್ ಭಾಂಡಗೆ
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಿವಂ ಮಾವಿ (6 ಕೋಟಿ ರೂ.), ಜೋಶುವಾ ಲಿಟಲ್ (4.4 ಕೋಟಿ ರೂ.), ಕೇನ್ ವಿಲಿಯಮ್ಸನ್ (2 ಕೋಟಿ ರೂ.) ಮೋಹಿತ್ ಶರ್ಮಾ (50 ಲಕ್ಷ ರೂ.), ಉರ್ವಿಲ್ ಪಟೇಲ್ (20 ಲಕ್ಷ ರೂ.), ಭರತ್ (1.2 ಕೋಟಿ ರೂ.), ಓಡೆನ್ ಸ್ಮಿತ್ (1.2 ಕೋಟಿ ರೂ.).
ಹರಾಜಿನಲ್ಲಿ ಖರೀದಿಸಿದ ಆಟಗಾರರು: ರಿಲೀ ರೊಸೊವ್ (4.6 ಕೋಟಿ ರೂ.), ಮನೀಶ್ ಪಾಂಡೆ (2.4 ಕೋಟಿ ರೂ.), ಫಿಲ್ ಸಾಲ್ಟ್ (2 ಕೋಟಿ ರೂ.) ಮುಖೇಶ್ ಕುಮಾರ್ (5.5 ಕೋಟಿ ರೂ.), ಇಶಾಂತ್ ಶರ್ಮಾ (50 ಲಕ್ಷ ರೂ.).
ಹರಾಜಿನಲ್ಲಿ ಖರೀದಿಸಿದ ಆಟಗಾರರು: ಶಕೀಬ್ ಅಲ್ ಹಸನ್ (1.5 ಕೋಟಿ ರೂ.), ಡೇವಿಡ್ ವೈಸ್ (1 ಕೋಟಿ ರೂ.), ಮನ್‍ದೀಪ್ ಸಿಂಗ್ (50 ಲಕ್ಷ ರೂ.), ಲಿಟ್ಟನ್ ದಾಸ್ (50 ಲಕ್ಷ ರೂ.), ಕುಲ್ವಂತ್ ಖೆಜ್ರೋಲಿಯಾ (20 ಲಕ್ಷ ರೂ.), ಸುಯಾಶ್ ಶರ್ಮಾ (20 ಲಕ್ಷ ರೂ.), ವೈಭವ್ ಅರೋರಾ (60 ಲಕ್ಷ ರೂ.), ಜಗದೀಸನ್ (90 ಲಕ್ಷ ರೂ.)
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಪಂಜಾಬ್ ಕಿಂಗ್ಸ್ (Punjab Kings) ಪಾಕಿಸ್ತಾನ ಮೂಲದ ಆಟಗಾರ ಸಿಕಂದರ್ ರಾಜಾರನ್ನು (Sikandar Raza) ಖರೀದಿಸಿದೆ.
ಸಿಕಂದರ್ ರಾಜಾ ಮೂಲತಃ ಪಾಕಿಸ್ತಾನದವರಾದರೂ (Pakistan) ಇದೀಗ ಜಿಂಬಾಬ್ವೆ (Zimbabwe) ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಸಿಕಂದರ್ ರಾಜಾ ಕಾಣಿಸಿಕೊಂಡಿದ್ದರು. ಅವರನ್ನು ಪಂಜಾಬ್ ಕಿಂಗ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿದೆ. ಸಿಕಂದರ್ ರಾಜಾ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‍ನಲ್ಲಿ ಜಿಂಬಾಬ್ವೆ ಪರ ಮ್ಯಾಚ್ ವಿನ್ನಿಂಗ್ ಫರ್ಫಾಮೆನ್ಸ್ ತೋರಿದ್ದರು. ಹಾಗಾಗಿ ಐಪಿಎಲ್‍ನಲ್ಲಿ ಅವಕಾಶ ಪಡೆದಿದ್ದಾರೆ. ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ – 18.50 ಕೋಟಿ ರೂ.ಗೆ ಬಿಕರಿಯಾದ ಸ್ಯಾಮ್ ಕರ್ರನ್
ಈ ಬಾರಿ ಹರಾಜಿನಲ್ಲಿ ಸ್ಯಾಮ್ ಕರ್ರನ್ 18.50 ಕೋಟಿ ರೂ.ಗೆ ಬಿಕರಿಯಾದರೆ, ಕ್ಯಾಮರೂನ್ ಗ್ರೀನ್ 17.50 ಕೋಟಿ ಮತ್ತು ಬೆನ್‍ಸ್ಟೋಕ್ಸ್ 16.25 ಕೋಟಿ ರೂ.ಗೆ ಮಾರಾಟವಾಗಿ ದುಬಾರಿ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ರನ್ ಓಡಲು ಪಂತ್ ನಿರಾಕರಣೆ – ಗುರಾಯಿಸಿದ ಕೊಹ್ಲಿ
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಐಪಿಎಲ್ ಮಿನಿ ಹರಾಜಿನಲ್ಲಿ (IPL Auction 2023) ಇಂಗ್ಲೆಂಡ್‍ನ ಸ್ಟಾರ್ ಆಲ್‍ರೌಂಡರ್ ಸ್ಯಾಮ್ ಕರ್ರನ್ (Sam Curran) 18.50 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಈ ಮೂಲಕ ಐಪಿಎಲ್ (IPL) ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಬಿಡ್ ಆದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ ಬಿಡ್‍ನಲ್ಲಿ ಸ್ಯಾಮ್ ಕರ್ರನ್ ಖರೀದಿಸಲು ಪಂಜಾಬ್ ಹಾಗೂ ಮುಂಬೈ ನಡುವೆ ಬಾರಿ ಜಿದ್ದಾಜಿದ್ದು ಕಂಡುಬಂತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 18.50 ಕೋಟಿ ರೂ. ನೀಡಿ ಕರ್ರನ್‍ರನ್ನು ಖರೀದಿಸಿತು. ಈ ಮೂಲಕ ಕ್ರಿಸ್ ಮೋರಿಸ್ ಅವರ ಈ ಹಿಂದಿನ ದಾಖಲೆಯ ಬಿಡ್ ಪತನಗೊಂಡಿತು. ಈ ಹಿಂದೆ ಕ್ರಿಸ್ ಮೋರಿಸ್ ಅವರನ್ನು 16.25 ಕೋಟಿ ನೀಡಿ ರಾಜಸ್ಥಾನ ತಂಡ ಖರೀದಿಸಿತ್ತು ಇದು ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಬಿಡ್ ಮೊತ್ತವಾಗಿತ್ತು. ಇದೀಗ ಈ ದಾಖಲೆಯನ್ನು ಕರ್ರನ್ ಮುರಿದು ನೂತನ ದಾಖಲೆಯೊಂದಿಗೆ ಬಿಕರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಇದನ್ನೂ ಓದಿ: ರನ್ ಓಡಲು ಪಂತ್ ನಿರಾಕರಣೆ – ಗುರಾಯಿಸಿದ ಕೊಹ್ಲಿ
ಸ್ಯಾಮ್ ಕರ್ರನ್ ಟಿ20 ವಿಶ್ವಕಪ್‍ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಹಾಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿಯಾಗಿದೆ. ದಾಖಲೆಯ ಮೊತ್ತಕ್ಕೆ ಬಿಡ್ ಆಗಿದ್ದಾರೆ.
ಕಳೆದ ಬಾರಿ ಮೆಗಾ ಹರಾಜಿನ ಮೊದಲು ಡ್ರಾಫ್ಟ್ ಪಿಕ್‍ನ ಭಾಗವಾಗಿ ರಾಹುಲ್ ಅವರಿಗೆ ಬರೋಬ್ಬರಿ 17 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಖರೀದಿಯಾದ ಆಟಗಾರನಾಗಿ ರಾಹುಲ್ ಹೊರಹೊಮ್ಮಿದ್ದರು.
Live Tv
[brid partner=56869869 player=32851 video=960834 autoplay=true]