Tag: ಹರತಾಳು ಹಾಲಪ್ಪ

  • ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತಾಡೋದು ನಿಲ್ಲಿಸಲಿ, ಇಲ್ಲವೇ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿ: ಹರತಾಳು ಹಾಲಪ್ಪ

    ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತಾಡೋದು ನಿಲ್ಲಿಸಲಿ, ಇಲ್ಲವೇ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿ: ಹರತಾಳು ಹಾಲಪ್ಪ

    ಬೆಂಗಳೂರು: ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ವಿರುದ್ಧ ಕಂಡ ಕಂಡಲ್ಲಿ ಮಾತಾಡುತ್ತಿರೋ ಯತ್ನಾಳ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ (Hartalu Halappa) ಬಿಜೆಪಿ ಹೈಕಮಾಂಡ್‌ಗೆ ಒತ್ತಾಯ ಮಾಡಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯತ್ನಾಳ್ ಅವರು ಪದೇ ಪದೇ ಅಧ್ಯಕ್ಷರ ಬಗ್ಗೆ ಮಾತನಾಡುತ್ತಿದ್ದಾರೆ. ಅನಗತ್ಯವಾಗಿ ಚರ್ಚೆ ಮಾಡುತ್ತಿದ್ದಾರೆ. ಕಂಡ ಕಂಡಲ್ಲಿ ಮಾತಾಡುತ್ತಾರೆ. ಯಡಿಯೂರಪ್ಪ(B S Yediyurappa) ಮಗನನ್ನ ನಾವು ಒಪ್ಪಲ್ಲ ಅಂತಾರೆ. ವಿಜಯೇಂದ್ರ ಅವರನ್ನ ಅಧ್ಯಕ್ಷ ಮಾಡೋದಾಗಿ ನಡ್ಡಾ, ಅಮಿತ್ ಶಾ, ಮೋದಿ ಅವರು ಎಲ್ಲರ ಅಭಿಪ್ರಾಯ, ಸರ್ವೆ, ಸಂಘ ಪರಿವಾರದ ಸಲಹೆ ಪಡೆದು ನೇಮಕ ಮಾಡಿದ್ದಾರೆ. ಹೈಕಮಾಂಡ್ ನೇಮಕ ಮಾಡಿರೋರ ವಿರೋಧ ಮಾಡಿದರೆ ಹೈಕಮಾಂಡ್‌ಗೆ ವಿರೋಧ ಮಾಡಿದಂತೆ ಆಗುತ್ತದೆ. ಏನಾದರು ಇದ್ದರೆ ಹೈಕಮಾಂಡ್ ಬಳಿ ಹೋಗಿ ಮಾತಾಡಲಿ. ಅದು ಬಿಟ್ಟು ಕಂಡ ಕಂಡಲ್ಲಿ ಮಾತಾಡುತ್ತಾರೆ ಇದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ – ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ

    ಪಕ್ಷದಿಂದ ಉಚ್ಚಾಟನೆ ಆಗಿರೋ ಈಶ್ವರಪ್ಪ (K S Eshwarappa) ಅವರನ್ನು ಸಿಎಂ ಮಾಡುತ್ತೇನೆ ಎಂದು ಬಿಜೆಪಿಯಲ್ಲಿ ಇದ್ದು ಹೇಳುತ್ತಾರೆ. ಅಧ್ಯಕ್ಷರ ಬಗ್ಗೆ ಅವರಿಗೆ ಅಪಮಾನ ಆಗಲಿ ಎಂದು ಮಾತಾಡುತ್ತಾರೆ. ಇದರಿಂದ ಏನು ಆಗುವುದಿಲ್ಲ. ಯತ್ನಾಳ್ ತಮ್ಮ ವರ್ತನೆ ತಿದ್ದುಕೊಳ್ಳದೇ ಹೋದರೆ ನಾವು ಹೈಕಮಾಂಡ್ ನಾಯಕರಿಗೆ ದೂರು ಕೊಡುತ್ತೇವೆ ಎಂದರು. ಇದನ್ನೂ ಓದಿ: Delhi| ಕೋಟ್ಯಂತರ ಮೌಲ್ಯದ ಕೊಕೇನ್‌ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್‌ ನಾಯಕ

    ವಿಜಯೇಂದ್ರಗೆ ಈಗ 49-50 ಆಸುಪಾಸು. ಯತ್ನಾಳ್ (Basangouda Patil Yatnal) ರಾಜಕೀಯಕ್ಕೆ ಬಂದಾಗ ಅವರದ್ದು 45 ವಯಸ್ಸು. ಅವತ್ತು ಹೀಗೆ ಎಲ್ಲರು ಮಾತನಾಡಿದ್ದರೆ ಹೇಗೆ. ಯತ್ನಾಳ್ ಹೀಗೆ ಮಾತನಾಡುತ್ತಿದ್ದರೆ ನಾವೇ ಹೈಕಮಾಂಡ್‌ಗೆ ದೂರು ನೀಡುತ್ತೇವೆ. ಕಟೀಲ್, ಪ್ರಮೋದ್ ಸಾವಂತ್, ಫಡ್ನವಿಸ್ ಅವರು ಚಿಕ್ಕ ವಯಸ್ಸಿನಲ್ಲಿ ಅಧ್ಯಕ್ಷರು ಆದವರು. ಅದರಲ್ಲಿ ಏನು ತಪ್ಪಿದೆ. ಯತ್ನಾಳ್ 45 ವರ್ಷಕ್ಕೆ ಮಂತ್ರಿ ಆಗಿರೋದು ಮರೆತು ಹೋದ್ರಾ? ಇವತ್ತು ವಿಜಯೇಂದ್ರ ಸಂಘಟನೆ ಮಾಡಿದ್ದಾರೆ. ಪಾದಯಾತ್ರೆ ಮಾಡಿ ಸಿಎಂ ರಾಜೀನಾಮೆ ಹಂತಕ್ಕೆ ಹೋಗಿದೆ. ವಿಜಯೇಂದ್ರ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಲಗಿದ್ದವನ ಮೇಲೆ ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು

    ಇಡೀ ಸರ್ಕಾರವನ್ನು ತುದಿಗಾಲಲ್ಲಿ ತಂದು ನಿಲ್ಲಿಸಲಾಗಿದೆ. ಇದು ಸಂಘಟನೆ, ಪಕ್ಷದಿಂದ ಆಗಿರೋ ಕೆಲಸ. ವಿಜಯೇಂದ್ರ ಅಧ್ಯಕ್ಷ ಆದ ಮೇಲೆ ಯುವಕರ ಸಂಘಟನೆ ಜಾಸ್ತಿ ಆಗಿದೆ. ಇದೆಲ್ಲವನ್ನು ಹೈಕಮಾಂಡ್ ನೋಡಿದೆ. ಯತ್ನಾಳ್ ಮತ್ತು ಅವರ ಟೀಂ ಏನೇ ಇದ್ದರು ಹೈಕಮಾಂಡ್‌ಗೆ ಹೇಳಲಿ. ಅವರ ಬಳಿ ಮಾತಾಡಿ ಸರಿ ಮಾಡಿಕೊಳ್ಳಲಿ. ಕೂಡಲೇ ಇಂತಹ ಮಾತುಗಳನ್ನಾಡೋದು ನಿಲ್ಲಿಸಬೇಕು. ವಯಸ್ಸು ಅನ್ನೋದು ಅಲ್ಲ. ಸಾಮರ್ಥ್ಯ ಇಲ್ಲಿ ಇರೋದು ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ: ಅಶೋಕ್

    ನಮ್ಮಲ್ಲಿ ಮೊದಲ ಬಾರಿ ಎಮ್‌ಎಲ್‌ಎ ಆದವರು ಸಿಎಂ ಆಗಿದ್ದಾರೆ. ಹೀಗೆ ರಸ್ತೆಯಲ್ಲಿ ಮಾತಾಡೋದು ಸರಿಯಲ್ಲ. ಹೀಗೆ ಆದರೆ ನಾವು ರಸ್ತೆಯಲ್ಲಿ ಅವರ ಭಾಷೆಯಲ್ಲಿ ಹೇಳುತ್ತೇವೆ. ಹೀಗೆ ಮುಂದುವರೆದರೆ ನಾವೇ ಹೈಕಮಾಂಡ್‌ಗೆ ದೂರು ಕೊಡುತ್ತೇವೆ ಎಂದರು. ಯತ್ನಾಳ್, ಕಟೀಲ್, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿ ಅನೇಕರ ಬಗ್ಗೆ ಯತ್ನಾಳ್ ಮಾತಾಡಿದ್ದರು. ಆಗ ಹಿರಿಯರು ಕರೆದು ಮಾತಾಡಿದ್ರು. ಈಗ ಮತ್ತೆ ಅದೇ ಆಗಿದೆ. ಈಗಲೂ ಹಿರಿಯರು ಕರೆದು ಮಾತಾಡಲಿ. ನಾವು ಹೀಗೆ ಬಂದು ಮಾತಾಡೋದು ಸರಿಯಲ್ಲ. ಆದರೆ ಅನಿವಾರ್ಯವಾಗಿ ನಾವು ಮಾತಾಡ್ತಿದ್ದೇವೆ ಎಂದರು. ಇದನ್ನೂ ಓದಿ: ಹತ್ರಾಸ್‌ನ ಸತ್ಸಂಗದಲ್ಲಿ ಕಾಲ್ತುಳಿತದಿಂದ 121 ಸಾವು ಪ್ರಕರಣ; 3,200 ಪುಟಗಳ ಈ ಚಾರ್ಜ್‌ ಶೀಟ್‌ ಸಲ್ಲಿಕೆ

    ಯತ್ನಾಳ್ ಹೇಳಿಕೆ ಕಾರ್ಯಕರ್ತರಿಗೆ ಮುಜುಗರ ಆಗುತ್ತಿದೆ. ಸುಮ್ಮನೆ ಬಾಂಬ್, ಪಟಾಕಿ ಹಚ್ಚುತ್ತಾರೆ ಹೋಗುತ್ತಾರೆ. ಹೀಗೆ ಮುಂದೆ ಆಗಬಾರದು. ಅದಕ್ಕೆ ಹೈಕಮಾಂಡ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಯತ್ನಾಳ್ ಮತ್ತು ಜೊತೆಗಾರು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯತ್ನಾಳ್ ಕಂಡಲ್ಲಿ ಗುಂಡು ಇಡೋದು ಬೇಡ. ಅವರ ವಿರುದ್ಧ ಕ್ರಮ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನಾನು ರಾಜೀನಾಮೆ ಕೊಡ್ತೀನಿ, ಸಿದ್ದರಾಮಯ್ಯನವರೂ ನೈತಿಕತೆ ಹೊತ್ತು ರಾಜೀನಾಮೆ ನೀಡಲಿ – ಆರ್.ಅಶೋಕ್‌

  • ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಹರತಾಳು ಹಾಲಪ್ಪ ಬೀಗರ ಕಾರಿಗೆ ಇಬ್ಬರು ಬಲಿ- ನಾಲ್ವರಿಗೆ ಗಾಯ, ಚಾಲಕ ವಶಕ್ಕೆ

    ಬೆಂಗಳೂರು: ಶಾಸಕ ಹರತಾಳು ಹಾಲಪ್ಪ (Halappa Harathalu) ಬೀಗರ ಕಾರಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಸೋಮವಾರ ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿತ್ತು.

    ಇನ್ನೋವಾ ಕಾರ್ (Innova Car) ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಡ್ರೈವರ್ ಅಪಘಾತವೆಸಗಿ ಇಬ್ಬರ ಜೀವ ಬಲಿ ಪಡೆದಿದ್ದ. ಮಜೀದ್ ಖಾನ್ ಮತ್ತು ಅಯ್ಯಪ್ಪ ಎಂಬವರು ತಮ್ಮದಲ್ಲದ ತಪ್ಪಿಗೆ ಪ್ರಾಣ ಬಿಟ್ರೆ, ರಿಯಾಜ್ ಪಾಷಾ, ಮೊಹಮದ್ ರಿಯಾಜ್, ಮೊಹಮದ್ ಸಲೀಂ, ಮತ್ತು ಶೇರ್ ಗಿಲಾನಿ ಗಾಯಾಳುಗಳಾಗಿ ಆಸ್ಪತ್ರೆ ಸೇರಿದ್ದಾರೆ.

    ಇಷ್ಟಕ್ಕೆಲ್ಲಾ ಕಾರಣ ಶಾಸಕ ಪಾಸ್ ಹೊಂದಿದ್ದ ಇನ್ನೋವಾ ಕಾರ್. ಶಾಸಕ ಹರತಾಳು ಹಾಲಪ್ಪರ ಪಾಸ್ ಕಾರ್‍ನಲ್ಲಿ ಅಂಟಿಸಲಾಗಿತ್ತು. ಅಸಲಿಗೆ ಕೆಎ 50 ಎಂಎ 6600 ನಂಬರಿನ ಇನ್ನೋವಾ ಕಾರ್ ಯಲಹಂಕದ ರಾಮು ಸುರೇಶ್ ಎಂಬವರ ಹೆಸರಲ್ಲಿದೆ. ಈ ರಾಮು ಸುರೇಶ್ ಶಾಸಕ ಹರತಾಳು ಹಾಲಪ್ಪರ ಬೀಗರು ಎನ್ನಲಾಗ್ತಿದೆ.

    ಡ್ರೈವರ್ ಮೋಹನ್ ರ್ಯಾಶ್ ಡ್ರೈವಿಂಗ್ ಮಾಡಿ ಆಕ್ಸಿಡೆಂಟ್ ಮಾಡಿದ್ದ. ವಿಚಾರ ಏನಂದ್ರೆ ಹೀಗೆ ಎಂಎಲ್‍ಎ ಪಾಸ್‍ಗಳನ್ನ ಯಾರು ಬೇಕಾದ್ರು ಬಳಸಬಹುದಾ..? ಶಾಸಕರ ಪಾಸ್ ಬೀಗರ ವೆಹಿಕಲ್ ಗೆ ಹೇಗೆ ಬಂತು..? ಹೀಗೆ ನೆಂಟ್ರು, ಹಿಂಬಾಲಕರು ಅಂತಾ ಎಲ್ರಿಗೂ ಪಾಸ್ ಕೊಡ್ತಿದ್ರೆ ನಿಯಮಗಳಿಲ್ವಾ.. ಒಂದೇ ಪಾಸನ್ನ ಕಲರ್ ಝೆರಾಕ್ಸ್ ಮಾಡಿಸಿ ಯಾರು ಬೇಕಾದ್ರು ಬಳಸಬಹುದಾ ಅನ್ನೊ ಪ್ರಶ್ನೆಯನ್ನ ಸಾರ್ವಜನಿಕರು ಕೇಳ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನ ಮೇಲಿನ ಆರೋಪ ಸುಳ್ಳು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ: ಹರತಾಳು ಹಾಲಪ್ಪ

    ನನ್ನ ಮೇಲಿನ ಆರೋಪ ಸುಳ್ಳು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧ: ಹರತಾಳು ಹಾಲಪ್ಪ

    ಶಿವಮೊಗ್ಗ: ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಶಾಸಕ ಹರತಾಳು ಹಾಲಪ್ಪ ಸವಾಲು ಹಾಕಿದ್ದಾರೆ.

    ವಿಧಾನ ಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲೆಯ ಸಾಗರದ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಟಾಕ್‌ವಾರ್ ಜೋರಾಗಿದೆ. ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಹರತಾಳು ಹಾಲಪ್ಪ ಮರಳು ಲಾರಿಯವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಳೆದ ಎರಡು ದಿನದ ಹಿಂದೆ ಸುದ್ದಿಗೋಪ್ಠಿ ನಡೆಸಿ ಆರೋಪ ಮಾಡಿದ್ದರು. ಇದನ್ನೂ ಓದಿ: ಮಂಡ್ಯದಲ್ಲಿ ಸೋಲಿಗೆ ದುಡ್ಡು ವಿಳಂಬವೇ ಕಾರಣ- ಮೇಲ್ಮನೆ ಸೋಲಿನ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಮಾಜಿ ಶಾಸಕರ ಆರೋಪಕ್ಕೆ ತಿರುಗೇಟು ನೀಡಿರುವ ಹರತಾಳು ಹಾಲಪ್ಪ, ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ. ಈ ಬಗ್ಗೆ ನಾನು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಲು ಸಿದ್ಧ. ನಾನು ಮರಳಿನವರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಫೆಬ್ರವರಿ 13 ರಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪ ಮಾಡಿರುವ ಬೇಳೂರು ಗೋಪಾಲಕೃಷ್ಣ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಬೇಕು ಎಂದು ಸವಾಲು ಹಾಕಿದ್ದಾರೆ.‌ ಇದನ್ನೂ ಓದಿ: ಹಾಸ್ಟೆಲ್‍ಗೆ ಟ್ರಾವೆಲ್ ಬ್ಯಾಗ್‍ನಲ್ಲಿ ಯುವತಿಯನ್ನು ಕರೆತಂದ ಪ್ರಿಯಕರ – ವೀಡಿಯೋ ಮಣಿಪಾಲದ್ದಲ್ಲ

  • ಬಾಲಕಿಯರ ವಸತಿ ನಿಲಯಕ್ಕೆ ಹರತಾಳು ಹಾಲಪ್ಪ ದಿಢೀರ್ ಭೇಟಿ

    ಬಾಲಕಿಯರ ವಸತಿ ನಿಲಯಕ್ಕೆ ಹರತಾಳು ಹಾಲಪ್ಪ ದಿಢೀರ್ ಭೇಟಿ

    ಶಿವಮೊಗ್ಗ: ಜಿಲ್ಲೆಯ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಸಾಗರ ನಗರಸಭೆ ವ್ಯಾಪ್ತಿಯ ಎಸ್.ಎನ್.ನಗರದ ಕಂಬಳಿಕೊಪ್ಪದ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವಸತಿ ನಿಲಯದ ಸ್ವಚ್ಛತೆ, ಆಹಾರ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಸಮಸ್ಯೆಗಳು ಹಾಗೂ ಅವಶ್ಯಕತೆಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ವಸತಿ ನಿಲಯದ ಹೆಣ್ಣು ಮಕ್ಕಳು ಕರೆ ಮಾಡಿ ಹಾಸ್ಟೆಲ್‍ನಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ. ಇಲ್ಲಿನ ವಿದ್ಯಾರ್ಥಿನಿಗಳಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ನೌಕರರ ಸಮಸ್ಯೆ ಇದೆ, ಗೋಧಿ ಹಿಟ್ಟು ಸರಿಯಿಲ್ಲ, ವಿದ್ಯಾರ್ಥಿಗಳಿಗೆ ನೀಡುವ ಕಿಟ್‍ಗಳಲ್ಲಿ ಸರಿಯಾಗಿ ವಸ್ತುಗಳು ಬರುತ್ತಿಲ್ಲ ಎಂದು ದೂರಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ನಿನ್ನೆಗಿಂತ ಇಂದು ಕೇಸ್ ಇಳಿಕೆ – ಒಟ್ಟು 27,156, ಪಾಸಿಟಿವಿಟಿ ರೇಟ್ 12.45%

    ಈ ಬಗ್ಗೆ ತಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರಿಪಡಿಸಲಾಗುವುದು ಹಾಗೂ ಮಕ್ಕಳು ಹೇಳಿರುವ ಎಲ್ಲಾ ಸಮಸ್ಯೆಗಳನ್ನೂ ಅತಿ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಉಪಾಧ್ಯಕ್ಷ ವಿ. ಮಹೇಶ್, ಸ್ಥಳೀಯ ನಗರ ಸಭೆ ಸದಸ್ಯ ಲಿಂಗರಾಜು, ಸಾಗರ ಉಪವಿಭಾಗ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ವಿನೋದ್‍ರಾಜ್, ರವಿ ಇತರರು ಜೊತೆಗಿದ್ದರು. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

  • ನಾಡಗೀತೆಗೆ ಅಗೌರವ ತೋರಿದ ಅಧಿಕಾರಿಗಳಿಗೆ ಹರತಾಳು ಹಾಲಪ್ಪ ಕ್ಲಾಸ್

    ನಾಡಗೀತೆಗೆ ಅಗೌರವ ತೋರಿದ ಅಧಿಕಾರಿಗಳಿಗೆ ಹರತಾಳು ಹಾಲಪ್ಪ ಕ್ಲಾಸ್

    ಶಿವಮೊಗ್ಗ: ನಾಡಗೀತೆಗೆ ಅಗೌರವ ತೋರಿದ ಕಾರಣಕ್ಕೆ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳಿಗೆ ಸರಿಯದ ಪಾಠ ಕಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ನಡೆದಿದೆ.

    ಹೊಸನಗರದ ತಾ.ಪಂ. ಕಚೇರಿಯಲ್ಲಿ ಶಾಸಕ ಹರತಾಳು ಹಾಲಪ್ಪ ಕೆಡಿಪಿ ಸಭೆ ನಡೆಸಿದ್ದಾರೆ. ಆರಂಭಕ್ಕೂ ಮುನ್ನ ಸಭೆಯಲ್ಲಿ ನಾಡಗೀತೆಯನ್ನು ಹಾಡಲಾಗಿತ್ತು. ಈ ವೇಳೆ ಅರಣ್ಯ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ಯಾಪ್ ಧರಿಸದಿರುವುದನ್ನು ಹಾಲಪ್ಪ ಗಮನಿಸಿದ್ದಾರೆ. ಇದನ್ನೂ ಓದಿ: ರೈತರಿಗೆ ಸಹಾಯವಾಗಲು ಕೋಲ್ಡ್ ಸ್ಟೋರೇಜ್ ಮಂಜೂರು: ಬಿ.ಸಿ ಪಾಟೀಲ್

    ನಾಡಗೀತೆ ಮುಗಿಯುತ್ತಿದ್ದಂತೆ ಹಾಲಪ್ಪ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ. ಸರ್ಕಾರ ನಿಮಗೆ ಸಮವಸ್ತ್ರ ಕ್ಯಾಪ್ ಕೊಟ್ಟಿರುವುದು ಏಕೆ? ನಾಡಗೀತೆ ಹಾಡುವ ಸಮಯದಲ್ಲಿ ಕ್ಯಾಪ್ ಧರಿಸಬೇಕು ಎಂಬುದು ನಿಮಗೆ ತಿಳಿದಿಲ್ಲವೇ ಎಂದು ಗದರಿದ್ದಾರೆ. ಇದನ್ನೂ ಓದಿ: ಯುವಕರಿಗೆ ಮಾರ್ಗದರ್ಶನ ನೀಡಲು ನೂತನ ಯುವನೀತಿ: ಬೊಮ್ಮಾಯಿ

  • ನಮ್ಮೊಂದಿಗೆ ರಾಜ ಹುಲಿ ಇದ್ದಾರೆ : ಹರತಾಳು ಹಾಲಪ್ಪ

    ನಮ್ಮೊಂದಿಗೆ ರಾಜ ಹುಲಿ ಇದ್ದಾರೆ : ಹರತಾಳು ಹಾಲಪ್ಪ

    -ವಿರೋಧ ಪಕ್ಷದ ಆರೋಪಗಳಿಗೆ ಬಿಜೆಪಿ ತಲೆಕೆಡಿಸಿ ಕೊಳ್ಳುವುದಿಲ್ಲ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಖುದ್ದಾಗಿ ವಿಧಾನ ಪರಿಷತ್ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ರಾಜಕೀಯ ಅಂದ ಮೇಲೆ ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವಿರೋಧ ಪಕ್ಷಗಳ ಆರೋಪಗಳ ಬಗ್ಗೆ ನಾವು ತಲೆಕೆಡಿಸಿ ಕೊಳ್ಳುವುದಿಲ್ಲ. ಯಾಕಂದರೆ ನಮ್ಮೊಂದಿಗೆ ರಾಜ ಹುಲಿ ಇದ್ದಾರೆ ಎಂದು ಹೇಳಿ ಮತದಾರರಿಗೆ ಶಾಸಕ ಹರತಾಳು ಹಾಲಪ್ಪ ಧೈರ್ಯ ತುಂಬಿದರು.

    ಜಿಲ್ಲೆಯ ಸಾಗರದ ಗಾಂಧಿ ಮೈದಾನದಲ್ಲಿ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಹಲವು ಯೋಜನೆಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿವೆ ಎಂದರು.

    ತಾಲೂಕಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣ ಕಾಮಗಾರಿ ಅಸಾಧ್ಯ ಎನ್ನುವ ಭಾವನೆ ಇತ್ತು. ಅದನ್ನು ಸಾಧ್ಯ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಆನಂದಪುರ ಹೋಬಳಿಗೆ ಕುಡಿಯುವ ನೀರು ಕಲ್ಪಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಚಾಲ್ತಿಯಲ್ಲಿದೆ. ಆವಿನಹಳ್ಳಿ ಹೋಬಳಿಗೂ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

    ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 415 ಮತಗಳಿದ್ದು, ಈ ಪೈಕಿ 269 ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ. ಇದಲ್ಲದೇ ಇತರ ಪಕ್ಷಗಳ ಬೆಂಬಲ ಹೊಂದಿರುವ ಮತದಾರರ ವಿಶ್ವಾಸವನ್ನು ಪಡೆಯುವ ನಿಟ್ಟಿನಲ್ಲಿ ಅವರ ಮನವೊಲಿಸಲಾಗುತ್ತಿದೆ. ನಮ್ಮ ಅಭ್ಯರ್ಥಿ ಡಿ.ಎಸ್. ಅರುಣ್ ಅರವನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ:  ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ

  • ಸಿಎಂ ಬದಲಾವಣೆಗೆ ಸಮಯ ಇದಲ್ಲ: ಶಾಸಕ ಹರತಾಳು ಹಾಲಪ್ಪ

    ಸಿಎಂ ಬದಲಾವಣೆಗೆ ಸಮಯ ಇದಲ್ಲ: ಶಾಸಕ ಹರತಾಳು ಹಾಲಪ್ಪ

    – ಬದಲಾವಣೆ ಬಗ್ಗೆ ಮಾತನಾಡಲು ಸಿ.ಪಿ.ಯೋಗೇಶ್ವರ್ ಯಾರು?

    ಶಿವಮೊಗ್ಗ: ಸಿಎಂ ಬದಲಾವಣೆಗೆ ಸಮಯ ಇದಲ್ಲ. ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಮೂರು ಬಣಗಳಾಗಿವೆ. ನಾಯಕತ್ವ ಬದಲಾಗಬೇಕು ಎಂದು ಹೇಳಲು ಯೋಗೇಶ್ವರ್ ಯಾರು? ಈ ಸಮಯದಲ್ಲಿ ಬದಲಾವಣೆ ಆಗಬೇಕಾದುದು ಸಿಎಂ ಅಲ್ಲ ಕೊರೊನಾ. ಜೊತೆಗೆ ಕೊರೊನಾ ಸೋಂಕಿನಿಂದ ಆಗಬೇಕಾದ ಸಾವು ನೋವುಗಳನ್ನ ಸಹ ತಡೆಯಬೇಕಿದೆ. ಆ ಕೆಲಸದಲ್ಲಿ ರಾಷ್ಟ್ರೀಯ ನಾಯಕರಿಂದ ಗ್ರಾಮ ಪಂಚಾಯತ್ ವರೆಗಿನ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

    ಇಂತಹ ಸಂಕಷ್ಟ ಸಮಯದಲ್ಲಿ ಸಿಎಂ ಯಡಿಯೂರಪ್ಪ ಅವರು ಯುವಕರು ನಾಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಗದರ್ಶನ ನೀಡುತ್ತಿದ್ದಾರೆ. ನಾವು ಕೂಡ ನಮ್ಮ ನಮ್ಮ ಕ್ಷೇತ್ರದಲ್ಲಿ ಅವರು ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ ಸಿಎಂ ಬದಲಾವಣೆ ಸಂದರ್ಭವೇ ಉದ್ಭವಿಸಲ್ಲ ಎಂದರು. ಇದನ್ನೂ ಓದಿ: ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

    ಸಿ.ಪಿ ಯೋಗೇಶ್ವರ್ ಅವರ ಹೇಳಿಕೆಗೆಲ್ಲಾ ನಾವು ಉತ್ತರ ನೀಡುವುದಕ್ಕೆ ಆಗುವುದಿಲ್ಲ. ಅವರು ಎಷ್ಟರ ಮಟ್ಟಿಗೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ್ದಾರೆ ಅಂತ ಗೊತ್ತಿದೆ ಎಂದರು. ಅವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ. ಅವರು ವೈಯಕ್ತಿಕವಾಗಿ ದೊಡ್ಡವರಿರಬಹುದು. ಬೇರೆ ಬೇರೆ ಸ್ಥಾನಮಾನ ಗಳಿಸಿರಬಹುದು. ಅವರಿಗೆ ರಾಜಕೀಯ ಪ್ರಜ್ಞೆ ಎಷ್ಟಿದೆ ಅಂತ ಪ್ರಶ್ನೆ ಮಾಡಬೇಕಿದೆ. ಆದರೆ ಗುಂಪು ಎನ್ನುವ ವಿಷಯ ಹೇಳುವ ಅಧಿಕಾರ ಅವರಿಗಿಲ್ಲ. ಯಡಿಯೂರಪ್ಪನವರ ಬದಲಾವಣೆ ಮಾಡಬೇಕು ಎನ್ನುವುದಕ್ಕೆ ಅವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದರು.

  • ಮಾಜಿ ಸಚಿವ ಹರತಾಳು ಹಾಲಪ್ಪ, ಪತ್ನಿಗೆ ಕೊರೊನಾ ದೃಢ

    ಮಾಜಿ ಸಚಿವ ಹರತಾಳು ಹಾಲಪ್ಪ, ಪತ್ನಿಗೆ ಕೊರೊನಾ ದೃಢ

    ಬೆಂಗಳೂರು: ಸಿಎಂ ಬಿಎಸ್‍ವೈ, ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಮಾಜಿ ಸಚಿವ, ಶಾಸಕ ಹರತಾಳು ಹಾಲಪ್ಪ ಅವರಿಗೂ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಮಾಜಿ ಸಚಿವರು, ಸಾಗರ ಕ್ಷೇತ್ರದ ಜನಪ್ರಿಯ ಶಾಸಕ ಹರತಾಳು ಹಾಲಪ್ಪನವರು ಮತ್ತು ಅವರ ಪತ್ನಿ ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖರಾಗಲಿ, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ಆರೋಗ್ಯದ ಬಗ್ಗೆಯೂ ಶುಭಹಾರೈಸಿರುವ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊರೊನಾ ಸೋಂಕಿನಿಂದ ಶೀಘ್ರದಲ್ಲಿ ಗುಣಮುಖರಾಗಲಿ, ಉತ್ತಮ ಆರೋಗ್ಯದೊಂದಿಗೆ ಮತ್ತೆ ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುವುದಾಗಿ ತಿಳಿಸಿದ್ದರು.

    ಆಗಸ್ಟ್ 2 ರಂದು ರಾತ್ರಿ 11 ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ದಾಖಲಿಸಿಕೊಳ್ಳಲಾಗಿದೆ. ಅವರಿಗೆ ಕೊರೊನಾ ರೋಗ ಲಕ್ಷಣದ ತೀವ್ರತೆ ಕಡಿಮೆ ಇದೆ. ಸದ್ಯಕ್ಕೆ ಸಿಎಂ ಅವರ ಆರೋಗ್ಯ ಉತ್ತಮವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಇತ್ತ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿಸಿದ್ದು, ಪಾಸಿಟಿವ್ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪುತ್ರ ಯತೀಂದ್ರ, ನಿನ್ನೆ ಬೆಳಿಗ್ಗೆಯಿಂದ ತಂದೆಯವರಿಗೆ ಜ್ವರ ಬಂದಿದ್ದು, ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಆಂಟಿಜೆನ್ ಟೆಸ್ಟ್ ಮಾಡಲಾಗಿದ್ದು, ಕೊರೊನಾ ಸೋಂಕು ಬಂದಿರುವುದು ದೃಢಪಟ್ಟಿದೆ. ಇತ್ತೀಚೆಗೆ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು.

  • ಇನ್ನೂ ಗೋದಾಮಿನಲ್ಲೇ ಹಾಳಾಗ್ತಿದೆ ನೆರೆ ಸಂತ್ರಸ್ತರಿಗೆ ಹಂಚಲು ಕೊಟ್ಟಿದ್ದ ಅಗತ್ಯವಸ್ತುಗಳು

    ಇನ್ನೂ ಗೋದಾಮಿನಲ್ಲೇ ಹಾಳಾಗ್ತಿದೆ ನೆರೆ ಸಂತ್ರಸ್ತರಿಗೆ ಹಂಚಲು ಕೊಟ್ಟಿದ್ದ ಅಗತ್ಯವಸ್ತುಗಳು

    ಶಿವಮೊಗ್ಗ: ಕಳೆದ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ನೆರೆ ಹಾವಳಿಗೆ ಜನರು ಮನೆಮಠ ಕಳೆದುಕೊಂಡು ತತ್ತರಿಸಿ ಹೋಗಿದ್ದರು. ಜಿಲ್ಲೆಯ ಸಾಗರ ತಾಲೂಕಿನಲ್ಲೂ ಸಹ ಕೆಲವು ಕುಟುಂಬಗಳು ನೆರೆ ಹಾವಳಿಗೆ ಸಿಲುಕಿದ್ದವು. ಹೀಗಾಗಿ ಸಂತ್ರಸ್ತರಿಗೆ ವಿತರಿಸಲು ಕೆಲವು ದಾನಿಗಳು ನೀಡಿದ್ದ ಅಗತ್ಯವಸ್ತುಗಳನ್ನು ಹಂಚದೆ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ.

    ಕಳೆದ ಸೆಪ್ಟೆಂಬರ್ ನಲ್ಲಿ ಸುರಿದ ವಿಪರೀತ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ವಿತರಿಸಲು ಬೆಂಗಳೂರಿನ ಎಂ.ಎಸ್ ರಾಮಯ್ಯ ಡೆವಲಪರ್ಸ್ ಮತ್ತು ಬಿಲ್ಡರ್ ಸೇರಿದಂತೆ ಇತರೆ ದಾನಿಗಳು ನೀಡಿದ ವಸ್ತುಗಳು ಸಂತ್ರಸ್ತರಿಗೆ ತಲುಪದೇ ಇಲ್ಲಿನ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದ ಗೋದಾಮಿನಲ್ಲಿ ಧೂಳು ಹಿಡಿಯುತ್ತಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಶಾಸಕ ಹರತಾಳು ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ದಾನಿಗಳು ಯಾವ ಉದ್ದೇಶಕ್ಕೆ ದೇಣಿಗೆ ನೀಡಿರುತ್ತಾರೆಯೋ ಅದನ್ನು ಸದುದ್ದೇಶಕ್ಕೆ ಬಳಸಿಕೊಳ್ಳಬೇಕಾದದ್ದು ಆಡಳಿತ ನಡೆಸುತ್ತಿರುವವರ ಧರ್ಮವಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ವಿಪರೀತ ಮಳೆ ಸುರಿದಿದೆ. ನೆರೆಯಿಂದ ಸಾಕಷ್ಟು ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದವು. ಇದನ್ನು ಗಮನಿಸಿದ ದಾನಿಗಳು ಸಂತ್ರಸ್ತರಿಗೆ ಅನುಕೂಲವಾಗಲಿ ಎಂದು ಅಕ್ಕಿ, ಬಟ್ಟೆ, ಔಷಧಿ, ರೈನ್‍ಕೋಟ್, ಟೂಥ್‍ಪೇಸ್ಟ್, ಬಿಸ್ಕೇಟ್, ಬ್ಲಾಂಕೆಟ್, ಪಾತ್ರೆಯನ್ನು ನೀಡಿದ್ದಾರೆ. ಆದರೆ ಇದನ್ನು ಸಂತ್ರಸ್ತರಿಗೆ ಹಂಚದೆ ಗೋದಾಮಿನಲ್ಲಿಯೇ ಇರಿಸಿರುವುದರಿಂದ ಅದು ಸಂಪೂರ್ಣ ಹಾಳಾಗಿದೆ. ಅಕ್ಕಿಯಲ್ಲಿ ಹುಳ ಆಗಿದೆ. ಔಷಧಿ ಮಾತ್ರೆಗಳ ದಿನಾಂಕ ಮುಗಿದಿದೆ. ಹೊಸ ಬಟ್ಟೆಗಳು ಎಂಟು-ಹತ್ತು ತಿಂಗಳಿನಿಂದ ಒಂದೆ ಕಡೆ ಇರಿಸಿ ಉಪಯೋಗಿಸಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಇದು ಅಧಿಕಾರ ಲೋಪಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾಡಿದರು.

    ಇದು ಯಾರು ಕೊಟ್ಟಿದ್ದು? ಯಾರಿಗೆ ತಲುಪಿಸಬೇಕಾಗಿತ್ತು? ಎಷ್ಟು ಬಂದಿದೆ? ಎಷ್ಟು ಕೊಟ್ಟಿದ್ದಾರೆ ಎನ್ನುವ ಯಾವ ಮಾಹಿತಿಯೂ ಇಲ್ಲ. ಇಲ್ಲಿ ವಸ್ತುವಿನ ಬೆಲೆಗಿಂತ ಮಾನವೀಯತೆಯ ಪ್ರಶ್ನೆಯೇ ಪ್ರಮುಖವಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಸಂದರ್ಭ ಬಂದರೆ ಸರ್ಕಾರದ ಗಮನ ಸಹ ಸೆಳೆಯಲಾಗುತ್ತದೆ. ಈ ಸಂಬಂಧ ಸೂಕ್ತ ತನಿಖೆಗೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದರು.

  • ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಸಾಗರ ಗಣಪತಿ ಕೆರೆಗೆ ಕಾಯಕಲ್ಪ – ಬೋಟಲ್ಲಿ ಕುಳಿತು ಹೂಳು ದಬ್ಬಿದ ಶಾಸಕ ಹಾಲಪ್ಪ

    ಶಿವಮೊಗ್ಗ: ಮುಂಜಾನೆಯ ಚುಮು ಚುಮು ಚಳಿಯಲ್ಲೇ ಸಾಗರದ ಗಣಪತಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ನೂರಾರು ಮಂದಿ ಕಸರತ್ತು ನಡೆಸಿದರು.

    ಇಂದು ಮುಂಜಾನೆಯೇ ಗಣಪತಿ ಕೆರೆಯ ದಂಡೆಯ ಮೇಲೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಾರ್ವಜನಿಕರು ಆಗಮಿಸಿ ಕೆರೆಯ ಹೂಳು ತೆಗೆಯುವುದು, ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಯ ನಡೆಸಿದರು. ಈ ವೇಳೆ ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಸಹ ಬೋಟಿನಲ್ಲಿ ಕುಳಿತು ಹೂಳು ದಬ್ಬುವ ಕಾರ್ಯ ಮಾಡಿದರು.

    ಸುಮಾರು 5 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 5 ಬೋಟ್, 1 ಜೆಸಿಬಿ, ಹಾಗೂ ಟ್ರ್ಯಾಕ್ಟರ್‍ಗಳನ್ನು ಬಳಸಲಾಗಿತ್ತು. ಕೆರೆಯಿಂದ ತೆಗೆದ ಹೂಳನ್ನು ಇನ್ನೊಂದು ದಡದಲ್ಲಿ ಸಂಗ್ರಹಿಸಿದ್ದು, ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ಈ ಗಣಪತಿ ಕೆರೆ ಕಾಯಕಲ್ಪಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಮೆಚ್ಚುಗೆ ವ್ಯಕ್ತಪಡಿಸಿದರು.