ಕಲಬುರಗಿ: ʻತಾಯಿ ನಮ್ಮ ಅತ್ತೆ ಬೇಗ ಸಾಯಬೇಕುʼ ಅಂತಾ ನೋಟ್ ಮೇಲೆ ಬರೆದು ಹುಂಡಿಗೆ ಕಾಣಿಕೆ ಹಾಕಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರದ ಸುಕ್ಷೇತ್ರ ಘತ್ತರ್ಗಿ ಭಾಗ್ಯವಂತಿ ದೇವಸ್ಥಾನದ ಹುಂಡಿಯಲ್ಲಿ ಈ ನೋಟ್ (currency) ಪತ್ತೆಯಾಗಿದ್ದು, ಕಳೆದ ಕೆಲ ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಹಿಳೆ 20 ರೂ. ನೋಟ್ ಮೇಲೆ ಅತ್ತೆ ಸಾಯಲೆಂದು ಬರಹ ಬರೆದು ಭಾಗ್ಯವಂತಿ ದೇವಿಯ ಹುಂಡಿಗೆ ಹರಕೆ ಮಾಡಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ
ಗುರುವಾರ (ಡಿ.26) ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಹರಕೆ ಹೊತ್ತು ಕಾಣಿಕೆ ಅರ್ಪಿಸಿರುವ ನೋಟ್ ಪತ್ತೆಯಾಗಿದೆ. ಸದ್ಯ ಈ ಲೆಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರ ಬರೆದ ಸೊಸೆ ಯಾರು ಅಂತಾ ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಇದನ್ನೂ ಓದಿ: ಎಲ್‌ಐಸಿ ಹಣಕ್ಕಾಗಿ ತಂದೆಯನ್ನೆ ಕೊಂದ ಮಗ – ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಮಗ ಆತ್ಮಹತ್ಯೆ!
ಕಲಬುರಗಿ: ಪ್ರಸಿದ್ಧ ದೇಗುಲಗಳ ಹುಂಡಿ ಎಣಿಕೆ ಕಾರ್ಯ ಮಾಡುವಾಗ ಅನೇಕ ರೀತಿಯ ಚೀಟಿಗಳು ಸಿಗುತ್ತವೆ. ಇವುಗಳಲ್ಲಿ ಪ್ರೀತಿ-ಪ್ರೇಮ, ಮದುವೆ, ಪತಿ-ಪತ್ನಿ, ಅತ್ತೆ-ಸೊಸೆ ನಡುವಿನ ಜಗಳಗಳು, ಪಕ್ಕದಮನೆಯವರ ವಿಚಾರ ಹೀಗೆ ದೇವರಿಗೆ ಹರಕೆ ಕಟ್ಟಿ ಚೀಟಿ ಬರೆದು ಹಾಕುವುದನ್ನು ನೋಡಿರುತ್ತೇವೆ. ಅಂಥದ್ದೇ ವಿಚಾರವೊಂದು ಇದೀಗ ಕಲಬುರಗಿಯಲ್ಲಿಯೂ ಬೆಳಕಿಗೆ ಬಂದಿದೆ.
ಕೆಲ ದಿನಗಳ ಹಿಂದೆ ಕಲಬುರಗಿ (Kalaburagi) ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ಕ್ಷೇತ್ರ ದೇವಲಗಾಣಗಾಪುರ ದತ್ತನಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಬೇಡಿದ ವರ ಕೊಡುವ ಶ್ರೀಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ವಿಶೇಷ ನೋಟ್ ಸಿಕ್ಕಿದೆ. ಈ ನೋಟಿನಲ್ಲಿ ಬರೆದಿದ್ದನ್ನು ಓದಿದ ಹುಂಡಿ ಎಣಿಕಾರ್ಯ ಮಾಡುತ್ತಿರುವ ಸಿಬ್ಬಂದಿಯೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಿಸಿ ಬಿಸಿ; 4 ವರ್ಷದ ದಾಖಲೆ ಮುರಿದ ಸಿಲಿಕಾನ್ ಸಿಟಿ
ಚೀಟಿಯಲ್ಲಿ ಏನಿತ್ತು..?: ಸೊಸೆಯೊಬ್ಬಳು ತನ್ನ ಅತ್ತೆಯ ಮೇಲಿನ ಸಿಟ್ಟನ್ನು ಈ ನೋಟಿನಲ್ಲಿ ಬರೆಯುವ ಮುಖಾಂತರ ತೋರಿಸಿಕೊಂಡಿದ್ದಾಳೆ. ಅತ್ತೆ ಬೇಗ ಸಾಯಬೇಕು ಎಂದು ಹರಕೆ ಹೊತ್ತಿದ್ದಾಳೆ. ಅಲ್ಲದೆ 50 ರೂಪಾಯಿ ನೋಟಿನ ಮೇಲೆ “ಅತ್ತೆ ಬೇಗ ಸಾಯಬೇಕು” ಎಂದು ಬರೆದು ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಹಾಕಿದ್ದಾಳೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ: ಆಷಾಢ (Ashada) ಮಾಸದಲ್ಲಿ ಶುಭ ಕಾರ್ಯಗಳು ನಿಷಿದ್ಧ. ಆದರೆ ದೇವತೆಗಳಿಗೆ ಈ ಮಾಸದಲ್ಲಿ ಹೆಚ್ಚು ಶಕ್ತಿ ಇರುತ್ತದೆ ಎಂಬ ನಂಬಿಕೆಯಿದೆ. ಅದರಲ್ಲೂ ಆಷಾಢ ಶುಕ್ರವಾರಗಳಂದು ದೇವತೆಗಳಿಗೆ ನಿಂಬೆ (Lemon) ಹಣ್ಣಿನಿಂದ ದೀಪ ತಯಾರಿಸಿ ನಿಂಬೆ ಹಣ್ಣಿನ ದೀಪದಾರತಿ ಮಾಡಿದ್ರೆ ಎಲ್ಲಾ ಕಷ್ಟಗಳು ಮಂಜಿನಂತೆ ಮಾಯವಾಗುತ್ತದೆ ಎಂದು ಇತಿಹಾಸ ಹೇಳುತ್ತದೆ.
ಆಷಾಢ ಶುಕ್ರವಾರ ಬಂತೆಂದೆರೆ ಶಕ್ತಿಯುತವಾದ ದೇವತೆಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪ್ರತಿ ವರ್ಷ ಆಷಾಢ ಮಾಸದ ಪ್ರತಿ ಶುಕ್ರವಾರ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ದೇವತೆಗಳಿಗೆ ಆರತಿ ಮಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಮಹಿಳೆಯರು (Women) ನಿಂಬೆಹಣ್ಣಿನ ಆರತಿ ಸಲ್ಲಿಸಿ ಪೂಜೆ ಮಾಡಿದ್ರು. ದೇವತೆಗಳಿಗೆ ಪ್ರಿಯವಾದ ನಿಂಬೆ ಹಣ್ಣಿನ ದೀಪದಿಂದ ಪೂಜೆ ಸಲ್ಲಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ. ವಿವಾಹಿತೆಯರು ತಮ್ಮ ಮುತ್ತೈದೆ ಭಾಗ್ಯ ದೀರ್ಘಕಾಲ ಉಳಿಯಲಿ ಎಂದು ನಿಂಬೆ ಹಣ್ಣಿನ ಆರತಿ ಮಾಡಿದರೆ, ಯುವತಿಯರು ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರಲಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸುಧಾಕರ್ ಮಾನನಷ್ಟ ಮೊಕದ್ದಮೆ
ಈಶ್ವರ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ. ಆದೇ ರೀತಿ ಚಾಮುಂಡೇಶ್ವರಿ ದೇವಿ ಸ್ತೋತ್ರ ಪ್ರಿಯಳಾಗಿದ್ದಾಳೆ. ಆಷಾಢ ಮಾಸದಲ್ಲಿ ದೇವಿಯನ್ನು ಸ್ಮರಿಸಿ ಸ್ತೋತ್ರ ಹೇಳಿದರೆ ದೇವಿ ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಮಹಿಳೆಯರು ಆಗಮಿಸಿ ಇಷ್ಟಾರ್ಥ ಈಡೇರಲಿ ಎಂದು ನಿಂಬೆಹಣ್ಣಿನ ಆರತಿ ಮಾಡುತ್ತಾರೆ. ಇನ್ನೂ ಕೆಲವರು ಸೇಬು, ನಿಂಬೆ, ಕಿತ್ತಲೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಹಾರ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ನಿಂಬೆಹಣ್ಣಿಗೆ ಆಕರ್ಷಣಾ ಶಕ್ತಿ ಹೆಚ್ಚು. ಹೀಗಾಗಿ ನಿಂಬೆಹಣ್ಣನ್ನು ದೇವತಾ ಪಾದಕ್ಕೆ ಹಿಂಡಿ ಅದರ ಸಿಪ್ಪೆಯಿಂದ ದೀಪ ತಯಾರಿಸಿ ಅದರಿಂದ ಆರತಿ ಮಾಡಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ.
ಒಟ್ಟಾರೆ ಆಷಾಢ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ದೇವಾಲಯದಲ್ಲಿ (Chamundeshwri Temple) ಭಕ್ತರ ದಂಡೆ ನೆರೆದಿತ್ತು. ದೇವಾಲಯದ ಅಂಗಳದ ತುಂಬಾ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ದೇವಿಗೆ ಆರತಿ ಬೆಳಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು. ಒಟ್ಟಾರೆ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಹರಸಿ ಕಾಪಾಡಲಿ ಎಂಬುದು ಎಲ್ಲರ ಆಶಯ.
ಯಾದಗಿರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಅಯ್ಯಪ್ಪ ಸ್ವಾಮಿಗೆ ಅಭಿಮಾನಿಗಳು ಹರಕೆ ಹೊತ್ತಿದ್ದಾರೆ.
ಈ ಬಾರಿ ಕಾಂಗ್ರೆಸ್ ಪಕ್ಷ (Congress Party) ಅಧಿಕಾರಕ್ಕೆ ಬರಲಿ, ಸಿದ್ದು ಸಿಎಂ ಆಗಲಿ ಯಾದಗಿರಿಯ ಶಹಪುರ ಕ್ಷೇತ್ರದಲ್ಲಿ ಶರಣಬಸಪ್ಪಗೌಡ ದರ್ಶನಾಪುರ (Sharanabasappa Gouda Darshanapur) ಮತ್ತೊಮ್ಮೆ ಶಾಸಕರಾಗಲಿ ಎಂದು ತಲೆ ಮೇಲೆ ಇರುಮುಡಿ ಹೊತ್ತು, ಕೈಯಲ್ಲಿ ಸಿದ್ದರಾಮಯ್ಯ, ದರ್ಶನಾಪೂರ ಭಾವಚಿತ್ರ ಹಿಡಿದು ಅಭಿಮಾನಿಗಳು ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಕುಗ್ಗಿ ಹೋಗಿರುವ ನಟಿ ಸಮಂತಾ (Samantha), ಚೈತನ್ಯಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ನಿಯಮಿತ ವ್ಯಾಯಾಮ, ಮಿತ ಆಹಾರ, ಧ್ಯಾನ ಹೀಗೆ ಸಲಹೆ ನೀಡಿದವರ ಪ್ರತಿ ಮಾತುಗಳನ್ನೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಇವಲ್ಲದೇ ದೇವರಿಗೂ ಅವರು ಮೊರೆ ಹೋಗಿದ್ದಾರೆ. ಅಧ್ಯಾತ್ಮವನ್ನು ನಂಬುವ ಸಮಂತಾ ತಮಿಳುನಾಡಿನ ಪಳನಿ ಮುರುಗನ್ (Palani Murugan) ದೇವರಿಗೆ ಹರಕೆ ಹೊತ್ತಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಪಳನಿ ಮುರುಗನ್ ದೇವಸ್ಥಾನಕ್ಕೆ (Temple) ಭೇಟಿ ನೀಡಿ ಹರಕೆ ತೀರಿಸಿದ್ದು, ಈ ಹರಕೆಗಾಗಿ ಅವರು ಆರು ನೂರಕ್ಕೂ ಹೆಚ್ಚು ಮೆಟ್ಟಿಲು ಹತ್ತಿ, ಕರ್ಪೂರ ಹಚ್ಚಿ ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕರು ಮತ್ತು ಅವರ ಆಪ್ತರು ಜೊತೆಯಾಗಿದ್ದರು. ಅಲ್ಲದೇ, ಪೊಲೀಸರು ಕೂಡ ಅವರಿಗೆ ಸೂಕ್ತ ಭದ್ರತೆಯನ್ನು ನೀಡಿದ್ದರು. ಇದನ್ನೂ ಓದಿ: ಮಂಗಳೂರಿನಲ್ಲಿ ರಜನಿ ಜೊತೆ ಶಿವರಾಜ್ ಕುಮಾರ್: ಫೋಟೋ ಲೀಕ್
ಒಂದು ಕಡೆ ಶೂಟಿಂಗ್ ಮತ್ತೊಂದು ಕಡೆ ಶಾಕುಂತಲಂ ಸಿನಿಮಾ ಬಿಡುಗಡೆ. ಆರೋಗ್ಯ ಸುಧಾರಿಸಲಿ ಮತ್ತು ಸಿನಿಮಾ ಗೆಲ್ಲಲಿ ಎಂಬ ಎರಡು ಉದ್ದೇಶ ಇಟ್ಟುಕೊಂಡು ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳು ನಾಡಿನಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಪಳನಿ ಮುರುಗನ್ ದೇವಸ್ಥಾನದ ಭೇಟಿ ಸಮಂತಾಗೆ ನೆಮ್ಮದಿ ನೀಡಿದೆ ಎನ್ನುತ್ತಿದ್ದಾರೆ ಆಪ್ತರು.
ಸಿನಿಮಾಗಳ ಜೊತೆ ಜೊತೆಗೆ ಹಿಂದಿಯ ಸಿಟಾಡೆಲ್ (Citadel) ಸೀರಿಸ್ ನಲ್ಲೂ ಸಮಂತಾ ನಟಿಸುತ್ತಿದ್ದಾರೆ. ಇದೊಂದು ಭಾರೀ ಪ್ರಾಜೆಕ್ಟ್ ಆಗಿದ್ದು, ಈ ಸೀರಿಸ್ ಶೂಟಿಂಗ್ ಗಾಗಿಯೇ ಅವರು ಮುಂಬೈನಲ್ಲಿ ಮನೆ ಕೂಡ ಖರೀದಿ ಮಾಡಿದ್ದಾರೆ. ಮುಂಬೈನಿಂದಲೇ ಅವರು ಚಿತ್ರೀಕರಣಕ್ಕೂ ತೆರಳಲಿದ್ದಾರಂತೆ.
Live Tv
[brid partner=56869869 player=32851 video=960834 autoplay=true]
ಪ್ರೇಮಿಯ ಈ ಚೀಟಿ ಹುಂಡಿ ಎಣಿಕೆ ಸಂದರ್ಭದಲ್ಲಿ ಸಿಕ್ಕಿದೆ. ದೇವರೇ ನನಗೆ ಹೆಣ್ಣನ್ನು ಕರುಣಿಸು ಎಂದು ಬರೆದಿದ್ದ ಪತ್ರ ಮೊನ್ನೆ ಚಾಮರಾಜನಗರದ ಚಾಮರಾಜೇಶ್ವರನ ಹುಂಡಿಯಲ್ಲಿ ಸಿಕ್ಕಿತ್ತು. ಇದೀಗ ಮುಕ್ಕಡಹಳ್ಳಿ ಮಾಯಮ್ಮದೇವಮ್ಮ ದೇವಸ್ಥಾನದ ಹುಂಡಿಯಲ್ಲಿ ಮತ್ತೊಂದು ರೀತಿಯ ಪತ್ರ ದೊರೆತಿದ್ದು, ಗಮನಸೆಳೆದಿದೆ.
Live Tv
[brid partner=56869869 player=32851 video=960834 autoplay=true]
ಬೆಳಗಾವಿ: ಭಕ್ತರೊಬ್ಬ ಬೆಳಗಾವಿ (Belagavi) ಜಿಲ್ಲೆ ವಿಭಜನೆ ಮಾಡುವಂತೆ ಆಗ್ರಹಿಸಿ ಸವದತ್ತಿ ಯಲ್ಲಮ್ಮದೇವಿಗೆ (Savadatti Yallamma) ಹರಕೆ ಪತ್ರ ಬರೆದಿದ್ದು, ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂಗೆ ಒಳ್ಳೆ ಬುದ್ಧಿ ನೀಡಲೆಂದು ಹರಕೆ ಪತ್ರ ಬರೆದು ಬೇಡಿಕೆ ಇಟ್ಟಿದ್ದಾನೆ.
ಬೆಳಗಾವಿ ಜಿಲ್ಲೆ ಸವದತ್ತಿ ಹೊರವಲಯದಲ್ಲಿರುವ ರೇಣುಕಾ ಯಲ್ಲಮ್ಮ ದೇವಿಗೆ ಪತ್ರ ಬರೆಯಲಾಗಿದೆ. ಬೆಳಗಾವಿ ಜಿಲ್ಲೆಯನ್ನು ನಾಲ್ಕು ಜಿಲ್ಲೆಯಾಗಿ ವಿಭಜಿಸುವಂತೆ ಸುದೀರ್ಘ 4 ಪುಟಗಳ ಪತ್ರ ಬರೆದಿದ್ದು, ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂಗೆ ಒಳ್ಳೆ ಬುದ್ಧಿ ನೀಡಲೆಂದು ಬೇಡಿಕೆ ಇಟ್ಟಿದ್ದಾನೆ. ಅದರಲ್ಲಿ ಪ್ರಮುಖವಾಗಿ ಬೆಳಗಾವಿ, ಗೋಕಾಕ, ಚಿಕ್ಕೋಡಿ, ಬೈಲಹೊಂಗಲ ಜಿಲ್ಲೆಯನ್ನು ಮಾಡುವಂತೆ ಹರಕೆ ಹೊತ್ತು ದೇವರ ಕಾಣಿಕೆ ಹುಂಡಿಯಲ್ಲಿ ಪತ್ರ ಬರೆದು ಹಾಕಿದ್ದಾರೆ. ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ 10 ತಾಲೂಕು ಇದ್ದವು.
1997ರಲ್ಲಿ ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿ ಮೂರು ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿತ್ತು. ಈಗ 14 ತಾಲೂಕು ಆಗಿದ್ದು, ಈಗ 4 ಜಿಲ್ಲೆಗಳನ್ನಾಗಿ ಮಾಡಬೇಕು. ಯಾದಗಿರಿಯಲ್ಲಿ 3 ತಾಲೂಕು ಇದ್ದರೂ, ಅದನ್ನು ಜಿಲ್ಲೆ ಮಾಡಿದ್ದಾರೆ. ಕೊಡಗುವಿನಲ್ಲಿ 2 ವಿಧಾನ ಸಭಾ ಕ್ಷೇತ್ರ ಇದ್ದರೂ, ಅದನ್ನು ಜಿಲ್ಲೆ ಮಾಡಿದ್ದಾರೆ. ಹಾಗೇ ನಮ್ಮ ಜಿಲ್ಲೆಯಲ್ಲಿ 14 ತಾಲೂಕು, 18 ವಿಧಾನ ಸಭಾ ಕ್ಷೇತ್ರವಿದ್ದು, 4 ಜಿಲ್ಲೆಗಳನ್ನಾಗಿ ಮಾಡಬೇಕು. 4 ಜಿಲ್ಲೆ ಮಾಡಿ ಎರಡು ಪ್ರತ್ಯೇಕ ಉಪವಿಭಾಗಾಧಿಕಾರಿ ಕಚೇರಿಯನ್ನು ಮಾಡಬೇಕು. ಈಗಾಗಲೇ ಹುಂಡೇಕರ್, ವಾಸುದೇವ, ಗದ್ದಿಗೌಡರ ಸಮಿತಿ ಗೋಕಾಕ ಜಿಲ್ಲೆಗೆ ಶಿಫಾರಸು ಮಾಡಿವೆ. ಇದನ್ನೂ ಓದಿ: PFI ನಾಯಕನ ಮನೆಯಲ್ಲಿ ಸಾವರ್ಕರ್ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ
ಎಲ್‍ಎಲ್‍ಬಿ ಪಾಸ್ ಆದವರಿಗೆ ವಕೀಲರು ಅಂತಾರೆ ಹೊರತು ಎಸ್‍ಎಸ್‍ಎಲ್ಸಿ ಪಾಸ್ ಆದವರಿಗೆ ವಕೀಲರು ಎನ್ನಲಾಗದು. 3 ಸಮಿತಿಗಳು ಮಾಡಿದ ಶಿಫಾರಸ್ಸಿನಂತೆ ಗೋಕಾಕನ್ನು ಜಿಲ್ಲೆಯಾಗಿ ಮಾಡಿ ಎಂದು 4 ಪುಟಗಳ ಸುದೀರ್ಘ ಪತ್ರವನ್ನ ಬರೆದ ಭಕ್ತರು ಸವದತ್ತಿ ಯಲ್ಲಮ್ಮ ದೇವಿಗೆ ಹುಂಡಿಗೆ ಹಾಕಿದ್ದಾನೆ. ಸತತ 5 ದಿನಗಳ ಕಾಲ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಈ ವೇಳೆ ಭಕ್ತರು ಚಿತ್ರ, ವಿಚಿತ್ರ ಹರಕೆ ಪತ್ರ ಪತ್ತೆಯಾಗಿವೆ. ಇದನ್ನೂ ಓದಿ: ಸಾಲದ ಸುಳಿಯಲ್ಲಿ ಬಿಎಂಟಿಸಿ ನಿಗಮ : ಶ್ರೀರಾಮುಲು
Live Tv
[brid partner=56869869 player=32851 video=960834 autoplay=true]
ಕೊಪ್ಪಳ: ದೇವರಿಗೆ ಹರಕೆಗೆಂದು ಬಿಟ್ಟಿರುವ ಕೋಣವೊಂದು ಬೈದು, ಹೊಡೆದ ಕಾರಣಕ್ಕಾಗಿ ವ್ಯಕ್ತಿಯೋರ್ವನಿಗೆ ಬೆಂಬಿಡದೆ ಕಾಡುತ್ತಿರುವ ವಿಚಿತ್ರ ಘಟನೆಯೊಂದು ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್ ಎಂಬಾತ ಬೈದು ಓಡಿಸಿದ್ದಾನೆ. ಆ ಬಳಿಕ ಕೋಣ ಎಲ್ಲೆಂದರಲ್ಲಿ ರೋಷನ್ ಕಂಡೊಡನೆ ತಿವಿಯಲು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಇದನ್ನೂ ಓದಿ: ದೇವರಿಗಾಗಿ ದೇವರಿಂದ್ಲೇ ಹುಡುಕಾಟ- ಹುತ್ತದಲ್ಲಿ ಸಿಕ್ಕೇ ಬಿಡ್ತು 200 ವರ್ಷದ ಹಿಂದಿನ ವಿಗ್ರಹ
ದಾರಿಯಲ್ಲಿ ಸಿಕ್ಕರೆ ಅಟ್ಟಾಡಿಸಿಕೊಂಡು ಮನೆಯ ಮುಂದೆ ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಿಗೆ ಹರಕೆಯಾಗಿ ಬಿಟ್ಟಿರುವ ಕೋಣ ಇದಾಗಿರುವುದರಿಂದ ಇದು ದೇವಿಯ ಪವಾಡ ಹಾಗಾಗಿ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ರೋಷನ್ ಜೊತೆ ಕೋಣದೊಂದಿಗೆ ತಪ್ಪಾಯಿತು ಎಂದು ಬೇಡಿಕೊಳ್ಳಲು ಗ್ರಾಮಸ್ಥರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ – ಬೆಕ್ಕು ಸಾಕಿದ ಪೊಲೀಸರು
ಚಿಕ್ಕಮಗಳೂರು: ದೇವರಿಗೆ ಹರಕೆ ಹೊತ್ತುಕೊಳ್ಳುವ ಭಕ್ತರು ನಾನಾ ರೀತಿ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ. ಅದೇ ರೀತಿ ನಗರದಲ್ಲಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದೇಹವನ್ನ ದಂಡಿಸಿ ಭಕ್ತಿ ಸಮರ್ಪಿಸಿದ್ದಾರೆ.
ನಗರದಲ್ಲಿ ಇಂದು ಕರುಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಿತು. ಈ ಜಾತ್ರೆಯಲ್ಲಿ ಹರಕೆ ಹೊತ್ತಿದ್ದ ಭಕ್ತರು ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿಯನ್ನ ಹಾಕಿಕೊಂಡು ಟ್ರ್ಯಾಕ್ಟರ್, ಲಾರಿ, ಕಾರು, ಆಟೋಗಳನ್ನ ಎಳೆದು ಭಕ್ತಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ದೇವರಿಗೆ ಉಪವಾಸವಿದ್ದು ಅಥವಾ ಮುಡಿ ನೀಡಿ ವಿಶಿಷ್ಟ ರೀತಿಯ ಅಡುಗೆಯನ್ನ ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ವಾಡಿಕೆ.
ಆದರೆ ನಗರದ ಕರುಮಾರಿಯಮ್ಮನ ಭಕ್ತರು ಈ ರೀತಿ ದೇಹವನ್ನ ದಂಡಿಸಿ ದೇವಿಗೆ ಹರಕೆ ತೀರಿಸುತ್ತಾರೆ. ಈ ಬಾರಿ 26 ಜನರು ವಿಭಿನ್ನವಾಗಿ ತಮ್ಮ ಹರಕೆ ತೀರಿಸಿದ್ದಾರೆ. ಜಾತ್ರೆ ಹಿನ್ನೆಲೆ ಶುಕ್ರವಾರ ಬೆಳಗ್ಗೆ ದಂಟರಮಕ್ಕಿಯ ಕೆರೆಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೆರವೇರಿಸಿದರು. ಬಳಿಕ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಮೂರ್ನಾಲ್ಕು ಕೊಂಡಿಗಳನ್ನು ಹಾಕಿಕೊಂಡು ಟ್ರ್ಯಾಕ್ಟರ್, ಆಟೋ, ಕಾರು, ಮಿನಿ ಲಾರಿಯಂತಹ ಬೃಹತ್ ವಾಹನಗಳನ್ನು ಕೆರೆಕೋಡಿಯಮ್ಮ ದೇವಸ್ಥಾನದಿಂದ ಕರುಮಾರಿಯಮ್ಮ ದೇವಸ್ಥಾನದವರೆಗೆ ಎಳೆದುಕೊಂಡು ಹೋಗುವ ಮೂಲಕ ಭಕ್ತಿ ಮೆರೆದರು.
ಈ ವೇಳೆ ಸಂಬಂಧಿಕರು, ಜಾತ್ರೆಯಲ್ಲಿ ಭಾಗವಹಿಸಿದವರು `ಗೋವಿಂದ.. ಗೋವಿಂದ’ ಎಂದು ಕೂಗುವ ಮೂಲಕ ಅವರಿಗೆ ಧೈರ್ಯ ತುಂಬುತ್ತಿದ್ದರು. ಈ ವಿಭಿನ್ನ ಆಚರಣೆಗೆ ಅಳಲು ಹಾಕುವುದು ಎಂದು ಸ್ಥಳೀಯರು ಕರೆಯುತ್ತಾರೆ. ಕೆಲವು ಭಕ್ತರು ತಮ್ಮ ಕಾಲು, ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ದೇವರ ಕಳಸವನ್ನು ಕುತ್ತಿಗೆಗೆ ಹಾಕಿಕೊಂಡು ವಾಹನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನೇತು ಬಿದ್ದಿದ್ದರು.
ಕೆಲವು ಮಕ್ಕಳು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದರು. ಜಾತ್ರೆ ಹಿನ್ನೆಲೆ ಕಳೆದ ಎರಡು ದಿನದಿಂದ ದೇವಸ್ಥಾನದಲ್ಲಿ ಹಲವು ವಿಭಿನ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕೋಲಾರ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾದರೆ ಗ್ರಾಮ ದೇವರಿಗೆ ಪುಷ್ಪಾರ್ಚನೆ ಮಾಡುವುದಾಗಿ ಹರಕೆ ಹೊತ್ತುಕೊಂಡಿದ್ದ ಹಿನ್ನೆಲೆ ಭಕ್ತೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಿ ಹರಕೆ ತೀರಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ದೋಣಿಮಡಗು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳ ಮಹದೇವ್ ಹರಕೆ ತೀರಿಸಿದ ಅಧ್ಯಕ್ಷೆಯಾಗಿದ್ದಾರೆ. ಮಂಜುಳ ಮಹದೇವ್ ಗ್ರಾಮ ಪಂಚಾಯತ್ ಅಧ್ಯಕ್ಷರಾದರೆ ದೇವರ ರಥೋತ್ಸವದ ವೇಳೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡುವುದಾಗಿ ಹರಕೆ ಹೊತ್ತಿದ್ದರು. ಆ ಬಳಿಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷರಾಗಿದ್ದರು. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 4ನೇ ದಿನವೂ ಭಾರೀ ಮಳೆ