Tag: ಹಬ್ಬಳ್ಳಿ

  • ಶಾಲೆಗೆ ಹೋಗುತ್ತಿದ್ದಾಗ ಕೆನ್ನೆಗೆ ನಾಯಿ ಕಚ್ಚಿ ಗಾಯಗೊಂಡಿದ್ದ ಬಾಲಕ ಸಾವು

    ಶಾಲೆಗೆ ಹೋಗುತ್ತಿದ್ದಾಗ ಕೆನ್ನೆಗೆ ನಾಯಿ ಕಚ್ಚಿ ಗಾಯಗೊಂಡಿದ್ದ ಬಾಲಕ ಸಾವು

    ಹುಬ್ಬಳ್ಳಿ: ಬೀದಿನಾಯಿಯ ದಾಳಿಗೆ ತುತ್ತಾಗಿದ್ದ 7 ವರ್ಷ ಬಾಲಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ವಾಣಿಜ್ಯ ನಗರಿಯಲ್ಲಿ ನಡೆದಿದೆ.

    ಜಿಲ್ಲೆಯ ಮಂಟೂರ ರಸ್ತೆಯಲ್ಲಿರುವ 7 ವರ್ಷದ ಆಫ್ರೀದಿ ಬೇಪಾರಿ ಬಾಲಕ ಮೃತ ದುರ್ದೈವಿ. ನವೆಂಬರ್ 9 ರಂದು ಎಂದಿನಂತೆ ಶಾಲೆಗೆ ಹೋಗುವ ಸಮಯದಲ್ಲಿ  ಬೀದಿನಾಯಿಯೊಂದು ಅಟ್ಟಾಡಿಸಿಕೊಂಡು ಬಂದು ದಾಳಿ ಮಾಡಿತ್ತು.

    ಬಾಲಕನ ಕೆನ್ನೆಗೆ ನಾಯಿ ಬಲವಾಗಿ ಕಚ್ಚಿದ್ದು, ಗಂಭೀರವಾಗಿ ಗಾಯ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಪೋಷಕರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದರು. ಆದ್ರೆ ಮತ್ತೆ ಬಾಲಕನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣ ಪೋಷಕರು ಬಾಲಕನನ್ನು ಮತ್ತೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ.

    ಅವಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಆದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಮಗನ ಸಾವಿಗೆ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ದುಃಖದಿಂದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.