Tag: ಹಬೀಬ್ ಮಿಯಾ

  • 800 ರೂಪಾಯಿಗೆ ಉಗ್ರರರನ್ನು ಗಡಿ ದಾಟಿಸಿದ್ದ ಉಗ್ರ ಹಬೀಬ್ ಮಿಯಾ

    800 ರೂಪಾಯಿಗೆ ಉಗ್ರರರನ್ನು ಗಡಿ ದಾಟಿಸಿದ್ದ ಉಗ್ರ ಹಬೀಬ್ ಮಿಯಾ

    ಬೆಂಗಳೂರು: ಕೇವಲ 800 ರೂಪಾಯಿಗೆ ಉಗ್ರರರನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಗಡಿ ದಾಟಿಸಿದ್ದೇನೆ ಎನ್ನುವ ಸ್ಫೋಟಕ ಮಾಹಿತಿಯನ್ನು ಉಗ್ರ ಹಬೀಬ್ ಮಿಯಾ ಹೊರಹಾಕಿದ್ದಾನೆ.

    ಕಳೆದ 10 ದಿನಗಳಿಂದ ಸಿಸಿಬಿ ಪೊಲೀಸರು ಹಬೀಬ್ ವಿಚಾರಣೆ ಮಾಡುತ್ತಿದ್ದಾರೆ. ಈತ 800 ರೂಪಾಯಿಗಾಗಿ ಉಗ್ರರಿಗೆ ಭಾರತದ ಗಡಿ ಮಾಹಿತಿ ನೀಡಿದ್ದೇನೆ ಎನ್ನುವ ಸತ್ಯವನ್ನು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.

    2005 ರಲ್ಲಿ ಐಐಎಸ್‍ಸಿ (ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್) ಮೇಲೆ ದಾಳಿ ಮಾಡಿದ್ದ 37 ವರ್ಷದ ಹಬೀಬ್ ಮಿಯಾನನ್ನು ಮಾರ್ಚ್ 18 ರಂದು ಬಂಧಿಸಲಾಗಿತ್ತು. ತ್ರಿಪುರದ ಅಗರ್ತಲ ನಗರ ಹೊರವಲಯದ ಜೋಗೇಂದ್ರ ನಗರದಲ್ಲಿ ಹಬೀಬ್ ಮಿಯಾನನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದರು. ಈ ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರಿಗೆ ತ್ರಿಪುರ ಪೊಲೀಸರು ನೆರವು ನೀಡಿದ್ದರು. ನಂತರ ಬೆಂಗಳೂರು ಸಿಸಿಬಿ ಪೆÇಲೀಸರು ಹಬೀಬ್‍ನನ್ನು ವಶಕ್ಕೆ ಪಡೆದಿದ್ದರು.

    2005ರ ಡಿಸೆಂಬರ್ 28ರಂದು ನಡೆದ ಐಐಎಸ್‍ಸಿ ದಾಳಿಯಲ್ಲಿ ನಿವೃತ್ತ ಗಣಿತ ಪ್ರೊಫೆಸರ್ ಮುನೀಷ್ ಚಂದ್ರ ಪುರಿ ಸಾವನ್ನಪ್ಪಿದ್ದರು. ಅಲ್ಲದೆ ಈ ಘಟನೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದರು.

  • 2005ರ ಬೆಂಗಳೂರು ಐಐಎಸ್‍ಸಿ ಉಗ್ರ ದಾಳಿ – ತ್ರಿಪುರದಲ್ಲಿ ಶಂಕಿತನ ಸೆರೆ

    2005ರ ಬೆಂಗಳೂರು ಐಐಎಸ್‍ಸಿ ಉಗ್ರ ದಾಳಿ – ತ್ರಿಪುರದಲ್ಲಿ ಶಂಕಿತನ ಸೆರೆ

    ಬೆಂಗಳೂರು/ತ್ರಿಪುರ: 2005ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಐಐಎಸ್ಸಿ ಉಗ್ರ ದಾಳಿಯ ಪ್ರಮುಖ ಆರೋಪಿಯನ್ನು ಕರ್ನಾಟಕ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ತ್ರಿಪುರದ ಅಗರ್ತಲ ನಗರ ಹೊರವಲಯದ ಜೋಗೇಂದ್ರ ನಗರದಲ್ಲಿ 37 ವರ್ಷದ ಹಬೀಬ್ ಮಿಯಾ ಎಂಬಾತನನ್ನು ಬಂಧಿಸಿರುವುದಾಗಿ ಕರ್ನಾಟಕ ಪೊಲೀಸರು ಖಚಿತಪಡಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ರಾಜ್ಯದ ಪೊಲೀಸರಿಗೆ ತ್ರಿಪುರ ಪೊಲೀಸರು ನೆರವು ನೀಡಿದ್ದಾರೆ.

    ಈ ವಿಚಾರವನ್ನು ಐಎಎನ್‍ಎಸ್ ಸುದ್ದಿ ಸಂಸ್ಥೆಗೆ ಖಚಿತ ಪಡಿಸಿರುವ ತ್ರಿಪುರ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕರ್ನಾಟಕ ಪೊಲೀಸರು ತ್ರಿಪುರ ಪೊಲೀಸರ ನೆರವಿನೊಂದಿಗೆ ಶಂಕಿತ ಉಗ್ರ ಹಬೀಬ್ ಮಿಯಾನನ್ನು ಬಂಧಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.

    ಹಬೀಬ್ ಮಿಯಾ 2015ರಲ್ಲಿ ಬೆಂಗಳೂರಿನ ಐಐಎಸ್‍ಸಿಯಲ್ಲಿ ನಡೆದ ದಾಳಿಯಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನನ್ನು ಶನಿವಾರ ಇಲ್ಲಿನ ಸ್ಥಳೀಯ ಕೋರ್ಟ್‍ಗೆ ಹಾಜರುಪಡಿಸಿ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

    2005ರ ಡಿಸೆಂಬರ್ 28ರಂದು ನಡೆದ ಐಐಎಸ್‍ಸಿ ದಾಳಿಯಲ್ಲಿ ಮ್ಯಾಥ್ಸ್ ನಿವೃತ್ತ ಪ್ರೊಫೆಸರ್ ಮುನೀಷ್ ಚಂದ್ರ ಪುರಿ ಸಾವನ್ನಪ್ಪಿದ್ದರು. ಅಲ್ಲದೆ ಈ ಘಟನೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದರು.