Tag: ಹನ್ಸಿಕಾ ಮೊಟ್ವಾನಿ

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

    ಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾಗಳ ಮೋಡಿ ಮಾಡಿರುವ ನಟಿ ತೆರೆಮರೆಯಲ್ಲಿ ಸೈಲೆಂಟ್ ಆಗಿ ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ತಮಿಳು, ತೆಲುಗು, ಕನ್ನಡ ಸಿನಿಮಾಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ಹನ್ಸಿಕಾ ಹೊಸ ಬಾಳಿಗೆ(Wedding) ಕಾಲಿಡುತ್ತಿದ್ದಾರೆ. ತಮ್ಮ ಮಾದಕ ನೋಟದಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಹನ್ಸಿಕಾ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ಸಮಯದಲ್ಲೇ ನಟಿ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.‌ ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ದಕ್ಷಿಣ ಭಾರತದ ರಾಜಕೀಯ ಮುಖಂಡರೊಬ್ಬರ(Politician) ಮಗನೊಂದಿಗೆ ಮದುವೆಗೆ ನಟಿ ರೆಡಿಯಾಗಿದ್ದಾರೆ. ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ನಟಿ ಹನ್ಸಿಕಾ ಮೋಟ್ವಾನಿ. ಈಗಾಗಲೇ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಪುನೀತ್‌ ರಾಜ್‌ಕುಮಾರ್‌ ನಟನೆಯ ʻಬಿಂದಾಸ್‌ʼ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಛಾಪೂ ಮೂಡಿಸಿದ್ದರು.

    450 ವರ್ಷದ ಹಳೆಯ ಜೈಪುರದ ಪ್ಯಾಲೇಸ್‌ನಲ್ಲಿ(Jaipur Palace) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಸಕಲ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಹನ್ಸಿಕಾ ಮೋಟ್ವಾನಿ ಉದ್ಯಮಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಈ ವಿಚಾರವನ್ನ ಅಧಿಕೃತವಾಗಿ ಹೇಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಚಂದನವನದಿಂದ ಗುರುತಿಸಿಕೊಂಡು ನೆರೆಯ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚಿರುವ ಕನ್ನಡದ ಅನೇಕ ಪ್ರತಿಭೆಗಳಿವೆ. ಆ ಸಾಲಿಗೆ ನವ ಪ್ರತಿಭೆ ಮೈಸೂರಿನ ಅನಿಲ್‌ ಸಿದ್ದು ಸೇರ್ಪಡೆಯಾಗುತ್ತಾರೆ. ಹಾಗಂತ ಇವರಿಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಇದಕ್ಕೂ ಮುನ್ನ ಮಣಿರತ್ನಂ ನಿರ್ದೇಶನದ ’ಕಾರ್ಟ್‌ವಿಲಯಾಡು’, ಎ.ಆರ್.ಮುರಗದಾಸ್ ಅವರ ’ಕತ್ತಿ’ ಹಾಗೂ ಶಂಕರ್ ಆಕ್ಷನ್ ಕಟ್ ಹೇಳಿರುವ ’ಐ’ ಚಿತ್ರಗಳಲ್ಲಿ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ : ಕೃತ್ಯದಲ್ಲಿ ನಾಯಕ ಆಸ್ಕರ್ ಕೃಷ್ಣ ಕೈವಾಡ

    ಅನಿಲ್‌ ಸಿದ್ದು ಮಾಡಲಿಂಗ್‌ ಕ್ಷೇತ್ರದಿಂದ ಬಂದಿರುವ ಇವರು, ’ಮುಮ್ತಾಜ್’ ’ಸಿಲಿಕಾನ್ ಸಿಟಿ’ ಮತ್ತು ’ಪಡ್ಡೆಹುಲಿ’ಸಿನಿಮಾಗಳಲ್ಲಿ ನೆಗಟೀವ್ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲಾ ಅನುಭವ ಹಾಗೂ ತಮ್ಮದೆ ’ಗಾಡ್ ಕಿಸ್ ಯು’ ಎಂಬ ಯೂನಿಕ್ ಸ್ಟೈಲ್ ಮುಖಾಂತರ ಗುರುತಿಸಿಕೊಂಡಿದ್ದರಿಂದ ’ಎ+’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ಹಾಗೆಯೇ ’ವಿರಾಟಪರ್ವ’ದಲ್ಲಿ ನಾಯಕಿ ಅನ್ವಿತಾ ಸಾಗರ್ ಜೋಡಿಯಾಗಿದ್ದು, ಅದು ಇಷ್ಟರಲ್ಲೆ ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ’ವರದ’ದಲ್ಲಿ ವಿನೋದ್ ಪ್ರಭಾಕರ್ ಎದುರು ಭ್ರಷ್ಟ ಶಾಸಕನಾಗಿ ನಟಿಸಿದ್ದರು.

    ವಿಕ್ರಂ, ಸಿಂಬು, ವಿಜಯ್‌ ಸೇತುಪತಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಜಯಚಂದರ್ ಈಗ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ. ಇವರ ನಟನೆಯನ್ನು ನೋಡಿ, ಕರೆಸಿಕೊಂಡು ತಾವು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಕಂಪೆನಿ ಸಿಇಓ ಪಾತ್ರವನ್ನು ನೀಡಿ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇವರ ಅಧೀನದಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಹನ್ಸಿಕಾ ಮೋಟ್ವಾಣಿ ನಟನೆ ಇದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ತಮಿಳನಲ್ಲಿ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಕೆ.ಎಸ್.ರವಿಕುಮಾರ್ ಪುತ್ರರಾದ ಶರವಣ-ಶಬರಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ ಶಕ್ತಿ ಅವರದು. ಹೆಸರಾಂತ ತಂತ್ರಜ್ಘರು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ.

  • ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಇದೇ ಶುಕ್ರವಾರ ತೆರೆಗೆ ಬರಲಿದೆ ರಾಕ್‍ಲೈನ್ ನಿರ್ಮಾಣದ ಮೋಹನ್‍ಲಾಲ್ ಅಭಿನಯದ ವಿಲನ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ 25ಕ್ಕೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ವೆಂಕಟೇಶ್ ಈಗ ಭಾರತೀಯ ಚಿತ್ರರಂಗದ ಹೆಸರಂತ ನಿರ್ಮಾಪಕರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ರವಿತೇಜ, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಚಿತ್ರಗಳಿಗೆ ಬಂಡವಾಳ ಹೂಡಿದ ಹೆಗ್ಗಳಿಕೆ ರಾಕ್‍ಲೈನ್ ವೆಂಕಟೇಶ್‍ಗೆ ಸಲ್ಲುತ್ತದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ರಾಕ್‍ಲೈನ್ ಈಗ ಮಲೆಯಳಂ ನಟ ಮೋಹನ್ ಲಾಲ್ ನಟನೆಯ `ವಿಲನ್’ ನಿರ್ಮಾಪಕರಾಗಿದ್ದು ಚಿತ್ರ ಇದೇ 28ಕ್ಕೆ ಬಿಡುಗಡೆಯಾಗಲಿದೆ.

    ಒಬ್ಬ ಸಾಮಾನ್ಯ ಸಹ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಕ್‍ಲೈನ್ ವೆಂಕಟೇಶ್ ಅವರು ಇಂದು ಆಕಾಶದೇತ್ತರಕ್ಕೆ ಬೆಳೆದು ನಿಂತಿದ್ದಾರೆ. ತಮಗೇ ಯಾವುದೇ ಬೌಂಡರಿ ಲೈನ್ ಹಾಕಿಕೊಳ್ಳದೆ ಟಾಲಿವುಡ್, ಕಾಲಿವುಡ್ ಹಾಗೂ ದೂರದ ಬಾಲಿವುಡ್ ತನಕ ತಮ್ಮ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಇನ್ನೂ ಭಾರತೀಯ ಚಿತ್ರರಂಗದಲ್ಲೇ ಸ್ಟೋರಿ ಬೆಸ್ಟ್ ಸಿನಿಮಾಗಳಿಗೆ ಹೆಸರು ವಾಸಿಯಾಗಿರುವ ಮಾಲಿವುಡ್ ಚಿತ್ರರಂಗಕ್ಕೆ ರಾಕ್‍ಲೈನ್ ವೆಂಕಟೇಶ್ ವಿಲನ್ ಮೂಲಕ ಪ್ರವೇಶವನ್ನು ಪಡೆಯುತ್ತಿದ್ದಾರೆ.

    ಕಳೆದ ವರ್ಷ `ಪುಲಿ ಮುರುಗನ್’ ಚಿತ್ರದ ಮೂಲಕ ಬಾಕ್ಸಾಫೀಸ್‍ನಲ್ಲಿ ಸೆಂಚುರಿ ಬಾರಿಸಿದ ಮೋಹನ್ ಲಾಲ್‍ಗೆ ಈ ಬಾರಿ ಕ್ರೈಂ ಥ್ರಿಲ್ಲರ್ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ಕೇವಲ ಮೋಹನ್ ಲಾಲ್ ಮಾತ್ರವಲ್ಲ ಕಾಲಿವುಡ್‍ನ ಪ್ರಮುಖ ನಟರಾದ ವಿಶಾಲ್, ನಟಿ ಮಂಜು ವಾರಿಯರ್, ಹನ್ಸಿಕಾ ಮೊಟ್ವಾನಿ, ರಾಶಿ ಖನ್ನಾ ರಂಥ ಫೇಮಸ್ ಸ್ಟಾರ್‍ಗಳು ಬಣ್ಣ ಹಚ್ಚಿದ್ದಾರೆ.

    ಮಾಲಿವುಡ್‍ನ ಖ್ಯಾತ ನಿರ್ದೇಶಕ ಬಿ.ಉನ್ನಿಕೃಷ್ಣನ್ ಸಾರಥ್ಯದಲ್ಲಿ ವಿಲನ್ ಮೂಡಿಬಂದಿದ್ದು, ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟ್ರೇಲರ್ ಸೋಷಿಯಲ್ ಮಿಡಿಯದಲ್ಲಿ ಸಖತ್ ಸದ್ದು ಮಾಡಿತ್ತು.

    ರಾಕ್‍ಲೈನ್ ವೆಂಕಟೇಶ್‍ರವರ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ವಿಷಯ ನಿಮಗೇ ಹೇಳಲೇ ಬೇಕು. ಏಕೆಂದರೆ ಇದು ಕನ್ನಡ ಚಿತ್ರರಸಿಕರಿಗೆ ಹೆಮ್ಮೆಯಾಗುವ ಸಮಾಚಾರ. ನಿರ್ಮಾಣದ ಜೊತೆಗೆ ಕೆಲ ಸಿನಿಮಾಗಳಲ್ಲಿ ಡಿಫರೆಂಟ್ ಪಾತ್ರಗಳನ್ನ ಮಾಡುತ್ತಿರುವ ವೆಂಕಟೇಶ್ ಮತ್ತೊಂದು ಸಾಧನೆಯ ಮೈಲುಗಲ್ಲು ಹತ್ತಲೂ ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ರಾಕ್‍ಲೈನ್ ಚೀನಾ ಭಾಷೆಯಲ್ಲೊಂದು ಅದ್ದೂರಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ. ಚೀನಾದಲ್ಲಿಯೇ ಒಬ್ಬ ಹೊಸ ಪ್ರತಿಭೆಯೊಬ್ಬನನ್ನು ತಯಾರಿ ಮಾಡುತ್ತಿದ್ದಾರಂತೆ. ಚೀನಾ ಭಾಷೆಯ ಜೊತೆಗೆ ಜಗತ್ತಿನ ಬೇರೆ ಬೇರೆ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಮಹತ್ತರ ಯೋಜನೆಯಲ್ಲಿ ರಾಕ್‍ಲೈನ್ ಇದ್ದಾರೆ ಎನ್ನಲಾಗುತ್ತಿದೆ.

    ಈಗಾಗಲೇ `ವಿಲನ್’ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳು ಮೂಡಿಸಿರುವ ಸಂದರ್ಭದಲ್ಲಿ ಹೊಸ ಸುದ್ದಿ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. `ವಿಲನ್’ ಸಿನಿಮಾದ ಪೋಸ್ಟರ್ ಹಾಗೂ ಟ್ರೇಲರ್‍ನ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್, ಈ ಸಿನಿಮಾವನ್ನು ನಾನು ಖಂಡಿತ ಮೋಡುತ್ತೇನೆ ಎಂದು ತಿಳಿಸಿದ್ದಾರೆ.