Tag: ಹನುಮ ವಿಹಾರಿ

  • ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಇಂದೋರ್: ರಣಜಿ ಟ್ರೋಫಿ (Ranji Trophy 2023) ಪಂದ್ಯದಲ್ಲಿ ಆಂಧ್ರಪ್ರದೇಶ (Ranji Trophy 2023) ತಂಡದ ಕ್ಯಾಪ್ಟನ್ ಹನುಮ ವಿಹಾರಿ (Hanuma Vihari) ತನ್ನ ಬಲಗೈ ಮೂಳೆ ಮುರಿದರೂ (Fractured Hand) ಎರಡೂ ಇನ್ನಿಂಗ್ಸ್‌ಗಳಲ್ಲೂ ಎಡಗೈನಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕಾಗಿ ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಆಂಧ್ರಪ್ರದೇಶ (Andhra Pradesh) ಹಾಗೂ ಮಧ್ಯಪ್ರದೇಶ (Andhra Pradesh) ನಡುವಿನ ಕ್ವಾರ್ಟರ್ ಫೈನಲ್ (Quarter-Final) ಪಂದ್ಯದ ಪ್ರಥಮ ಇನ್ನಿಂಗ್ಸ್ ವೇಳೆ ಮೂಳೆ ಮುರಿತಕ್ಕೆ ಒಳಗಾಗಿ ಕೈಗೆ ಪ್ಲಾಸ್ಟರ್ ಹಾಕಿದ್ದರೂ ವಿಹಾರಿ ಆಂಧ್ರಪ್ರದೇಶದ ಬ್ಯಾಟಿಂಗ್ ಸರದಿ ಬಂದಾಗ ಬಲಗೈ ಬ್ಯಾಟರ್ ಎಡಗೈ ಒಂದರಲ್ಲೇ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು. ಪ್ರಥಮ ಇನ್ನಿಂಗ್ಸ್‌ನಲ್ಲಿ 22 ರನ್ (57 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆಗಿದ್ದ ವಿವಾರಿ, ಎರಡನೇ ಇನ್ನಿಂಗ್ಸ್‌ನಲ್ಲಿ ದಿಢೀರ್ ಕುಸಿತ ಕಂಡ ಆಂಧ್ರಪ್ರದೇಶದ ಸ್ಥಿತಿ ಕಂಡು ಮತ್ತೆ ಒಂದೇ ಕೈನಲ್ಲಿ ಬ್ಯಾಟಿಂಗ್ ನಡೆಸಲು ಮುಂದಾದರು. ಇದನ್ನೂ ಓದಿ: T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    ಎರಡನೇ ಇನ್ನಿಂಗ್ಸ್‌ನಲ್ಲಿ ಎಡಗೈ ಒಂದರಲ್ಲಿ ಮೂರು ಬೌಂಡರಿ ಸಹಿತ 16 ಎಸೆತಗಳಲ್ಲಿ 15 ರನ್ ಸಿಡಿಸಿ ತಂಡದ ಮೊತ್ತ 90ರ ಗಡಿದಾಟುವಂತೆ ನೋಡಿಕೊಂಡರು. ಇತ್ತ ತಂಡಕ್ಕಾಗಿ ನೆರವಾಗಲು ವಿಹಾರಿ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಿದನ್ನು ಕಂಡು ಕ್ರಿಕೆಟ್ ಪಂಡಿತರು ಸಹಿತ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ಕೇಂದ್ರ ಸಚಿವ ಸುಪ್ರಿಯೊರನ್ನು ಟ್ರೋಲ್‌ ಮಾಡಿದ ಹನುಮ ವಿಹಾರಿ

    ನವದೆಹಲಿ: ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೂ ತನ್ನ ಆಟವನ್ನು ಟೀಕಿಸಿದ್ದ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ ಅವರನ್ನು ಹನುಮ ವಿಹಾರಿ ಟ್ರೋಲ್‌ ಮಾಡಿದ್ದಾರೆ.

    ಸಿಡ್ನಿ ಟೆಸ್ಟ್ ನಲ್ಲಿ ಭಾರತ ತಂಡದ ಕ್ರಿಕೆಟಿಗ ಹನುಮ ವಿಹಾರಿ ಕ್ರಿಕೆಟ್‌ ಅನ್ನು ಕೊಲೆ ಮಾಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಮತ್ತು ಕೇಂದ್ರ ಪರಿಸರ ಖಾತೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೊ ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ನಲ್ಲಿ ಹನುಮ ವಿಹಾರಿ ಪದವನ್ನು ಬರೆಯುವ ಸಂದರ್ಭದಲ್ಲಿ ಹನುಮ ಬಿಹಾರಿ ಎಂದು ಬರೆದಿದ್ದರು. ಇಂದು ಹನುಮ ವಿಹಾರಿ ಟ್ವೀಟ್‌ ಮಾಡಿ ನಕ್ಷತ್ರ ಗುರುತು ಹಾಕಿ ಹನುಮ ವಿಹಾರಿ ಎಂಬುದಾಗಿ ಟ್ರೋಲ್‌ ಮಾಡಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ತೆಗೆದು ಅಶ್ವಿನ್‌ ROFLMAX!! ಎಂದು ಬರೆದು ಮೂರು ನಗುವ ಇಮೋಜಿ ಹಾಕಿ ಟ್ವೀಟ್‌ ಮಾಡಿದ್ದಾರೆ.

    ಸುಪ್ರಿಯೊ ಟ್ವೀಟ್‌ನಲ್ಲಿ ಏನಿತ್ತು?
    ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಸಿಡ್ನಿಯಲ್ಲಿ ಸೋಮವಾರ ನಡೆದ ಐದನೇ ದಿನದಾಟದಲ್ಲಿ ಭಾರತ ತಂಡ ಟೆಸ್ಟ್ ಡ್ರಾ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಸುದೀರ್ಘ ಓವರ್ ಎದುರಿಸಿದ ಹನುಮ ವಿಹಾರಿ, ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ.

    ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವಿನ ಅವಕಾಶವಿದ್ದರೂ, 109 ಎಸೆತ ಎದುರಿಸಿದ ಹನುಮ ಬಿಹಾರಿ ಕೇವಲ 7 ರನ್ ಗಳಿಸಿ ಕ್ರಿಕೆಟ್‌ ಕೊಲೆ ಮಾಡಿದ್ದಾರೆ. ಕ್ರಿಕೆಟ್‌ ಬಗ್ಗೆ ನನಗೆ ಗೊತ್ತಿಲ್ಲ ಎಂದು ಟ್ವೀಟ್‌ ಮಾಡಿದ್ದರು.

    ಈ ಟ್ವೀಟ್‌ ನೋಡಿ ನೆಟ್ಟಿಗರು ಗರಂ ಆಗಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಬಗ್ಗೆ ತಿಳಿಯದ ನೀವು ರಾಜಕೀಯದಲ್ಲೇ ಇರಿ. ಕ್ರಿಕೆಟ್‌ ಬಗ್ಗೆ ವಿಶ್ಲೇಷಣೆ ನೀಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ.

  • ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    ಪಂತ್ ಉತ್ತಮ ಆಟ – ಭಾರತವನ್ನು ಕಾಪಾಡಿದ ಅಶ್ವಿನ್, ವಿಹಾರಿ

    – ಡ್ರಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಅಂತ್ಯ

    ಸಿಡ್ನಿ: ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಹನುಮ ವಿಹಾರಿಯ ತಾಳ್ಮೆಯುತ ಇನ್ನಿಂಗ್ಸ್ ಆರ್ ಅಶ್ವಿನ್ ಸಾಥ್ ನಿಂದಾಗಿ ಬಾರ್ಡರ್ ಗಾವಸ್ಕಾರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾ ಮೂಲಕ ಅಂತ್ಯವಾಗಿದೆ.

    88.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 272 ರನ್‍ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್ ಮುರಿಯದ 7ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. 407 ರನ್‍ಗಳ ಗುರಿಯನ್ನು ಬೆನ್ನೆಟ್ಟಿದ ಭಾರತ 131 ಓವರ್‍ಗಳಲ್ಲಿ 334 ರನ್‍ಗಳಿಗೆ 5 ವಿಕೆಟ್ ಕಳೆದೆÀಕೊಂಡಿದ್ದಾಗ ಡ್ರಾ ತೀರ್ಮಾನಕ್ಕೆ ಬರಲಾಯಿತು.

    ಭಾರತಕ್ಕೆ ಐದನೇ ದಿನದಾಟ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು. 9 ರನ್ ಹೊಡೆದ ಚೇತೇಶ್ವರ ಪೂಜಾರ ಮತ್ತು 4 ರನ್ ಹೊಡೆದಿದ್ದ ರಹಾನೆ ಐದನೇ ದಿನ ಬ್ಯಾಟಿಂಗ್ ಇಳಿದರು. ಆದರೆ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇತ್ತ ಪೂಜಾರ ಮಾತ್ರ ಮತ್ತೆ ತಾನೂ ಟೆಸ್ಟ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

    ರಹಾನೆ ಔಟ್ ಆದ ಬಳಿಕ ಬ್ಯಾಟಿಂಗ್ ಬಡ್ತಿ ಪಡೆದು ಬಂದ ರಿಷಬ್ ಪಂತ್ ಏಕದಿನ ಪಂದ್ಯಾಟದ ರೀತಿಯಲ್ಲಿ ಬ್ಯಾಟ್ ಬೀಸಿ 97 ರನ್ (118 ಎಸೆತ 12 ಬೌಡಂರಿ 3 ಸಿಕ್ಸರ್) ಸಿಡಿಸಿ ಪೂಜಾರ ಜೊತೆ 4 ನೇ ವಿಕೆಟ್ 148 ರನ್‍ಗಳ ಜೊತೆಯಾಟವಾಡಿದರು. ಪೂಜಾರ 77ರನ್ (205 ಎಸೆತ 12 ಬೌಡಂರಿ,) ಹೊಡೆದು ಭಾರತಕ್ಕೆ ಆಧಾರವಾದರೂ. ಶತಕದ ಹೊಸ್ತಿಲಿನಲ್ಲಿದ್ದ ಪಂತ್ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಪೂಜಾರ ಹ್ಯಾಝಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರೂ ನಂತರ ಬಂದ ಅನುಮ ವಿಹಾರಿ 23 ರನ್ (161 ಎಸೆತ 4 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 39 ರನ್ (128 ಎಸೆತ 7 ಬೌಂಡರಿ) ಹೊಡೆದು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು.

  • ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    -ವಿಹಾರಿ ಶತಕ, ಇಶಾಂತ್ ಅರ್ಧ ಶತಕ

    ಕಿಂಗ್‍ಸ್ಟನ್: ಭಾರತದ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಹೀನಾಯ ಸ್ಥಿತಿಯಲ್ಲಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗಳು ಬುಮ್ರಾ ಬೌಲಿಂಗ್ ತತ್ತರಿಸಿದರು. ಭಾರತದ ಪರ ಹನುಮ ವಿಹಾರಿ ಚೊಚ್ಚಲ ಶತಕ ಮತ್ತು ಇಶಾಂತ್ ಶರ್ಮಾ ಮೊದಲ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು.

    ದ್ವಿತೀಯ ಟೆಸ್ಟ್ ನ ಎರಡನೇ ದಿನದಲ್ಲಿ ಟೀಂ ಇಂಡಿಯಾ 416 ರನ್ ಗಳಿಗೆ ಅಲೌಟ್ ಆಗಿತ್ತು. ಬೃಹತ್ ಮೊತ್ತವನ್ನ ಬೆನ್ನತ್ತಿದ್ದ ವಿಂಡೀಸ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಕಲೆ ಹಾಕಿ ಸಂಕಷ್ಟದ ಪರಿಸ್ಥಿತಿ ತಲುಪಿದೆ.

    ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ವಿಂಡೀಸ್ ಆಟಗಾರರನ್ನು ಬಹುಬೇಗನೇ ಪೆವಿಲಿಯನ್ ನತ್ತ ಕಳುಹಿಸುವಲ್ಲಿ ಯಶಸ್ವಿಯಾಯಿತು. ಬುಮ್ರಾ ಅವರ ವೃತ್ತಿ ಜೀವನದ ಮೊದಲ ಹ್ಯಾಟ್ರಿಕ್ ಇದಾಗಿತ್ತು. ಬುಮ್ರಾ ತಮ್ಮ ನಾಲ್ಕನೇ ಓವರ್ ನಲ್ಲಿ ಡೈರೆನ್ ಬ್ರಾವೋ, ಶಮಾರಾ ಬ್ರೂಕ್ಸ ಮತ್ತು ರೋಸ್ಟನ್ ಚೆಸ್ ಅವರ ವಿಕೆಟ್ ಪಡೆದರು. ಈ ಮೊದಲು ಆಸ್ಟ್ರೇಲಿಯಾ ವಿರುದ್ಧ (2003ರಲ್ಲಿ) ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ವಿರುದ್ಧ (2006ರಲ್ಲಿ) ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು.

    ಹನುಮ ವಿಹಾರಿ ಶತಕ (111 ರನ್) ಬಾರಿಸುವ ಮೂಲಕ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ರಿಷಬ್ ಪಂತ್ ವಿಕೆಟ್ ಬಳಿಕ ಅಂಗಳಕ್ಕಿಳಿದ ಹನುಮ ವಿಹಾರಿ ರವೀಂದ್ರ ಜೊತೆಗೂಡಿ ಆಟ ಆರಂಭಿಸಿದರು. 16 ರನ್ ಗಳಿಸಿದ್ದ ಜಡೇಜಾ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು. ಎಂಟನೇ ವಿಕೆಟ್‍ಗೆ ವಿಹಾರಿ ಜೊತೆಗೂಡಿದ ಇಶಾಂತ್ ಶರ್ಮಾ ತಂಡವನ್ನು ಸುಸ್ಥಿತಿಗೆ ತಂದರು. ವಿಹಾರಿ ಮತ್ತು ಇಶಾಂತ್ ಜೊತೆಯಾಟದಲ್ಲಿ 112 ರನ್ ಸೇರಿಸಿದರು. ಜೋಡಿ ಬೇರ್ಪಟ್ಟ ಬೆನ್ನಲ್ಲೇ ಟೀಂ ಇಂಡಿಯಾ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಅಲೌಟ್ ಆಯ್ತು. ಮೊದಲ ದಿನದಾಟದಲ್ಲಿ ನಾಯಕ ಕೊಹ್ಲಿ 76, ಮಯಾಂಕ್ ಅಗರ್ವಾಲ್ 55 ರನ್ ಗಳೊಂದಿಗೆ 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು.

     

  • ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನುಮ ವಿಹಾರಿ

    ಬಹುಕಾಲದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನುಮ ವಿಹಾರಿ

    ಹೈದರಾಬಾದ್: ಟೀಂ ಇಂಡಿಯಾ ಆಟಗಾರ, ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿರುವ ಹನುಮ ವಿಹಾರಿ ಬಹುಕಾಲದ ಗೆಳತಿ ಪ್ರೀತಿರಾಜ್‍ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಆಂಧ್ರಪ್ರದೇಶದ ವಾರಂಗಲ್‍ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ವಿವಾಹ ನಡೆದಿದೆ. ವಿಹಾರಿ ಹಾಗೂ ಪ್ರೀತಿರಾಜ್ ಕಾಲೇಜಿನಲ್ಲಿಯೇ ಸ್ನೇಹಿತರಾಗಿದ್ದರು. ಹಿರಿಯರ ಆಶೀರ್ವಾದೊಂದಿಗೆ ವಿವಾಹ ಕಾರ್ಯಕ್ರಮ ನಡೆಯಿತು.

    ಪ್ರೀತಿರಾಜ್ ವರಂಗಲ್ ನಿವಾಸಿಯಾಗಿರುವ ಉದ್ಯಮಿ ರಾಜೇಂದರ್ ರೆಡ್ಡಿ ಅವರ ಪುತ್ರಿಯಾಗಿದ್ದು, ವಿವಾಹ ಸಮಾರಂಭದಲ್ಲಿ ಸ್ಥಳೀಯ ರಾಜಕೀಯ ನಾಯಕರು, ಕ್ರಿಕೆಟರ್ ಗಳು ಸೇರಿದಂತೆ ಹಲವು ಮಂದಿ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

     

    View this post on Instagram

     

    I promise to keep that smile on you forever! I love you. ♥️ . . Thanks everyone for you love and wishes.????

    A post shared by hanuma vihari (@viharigh) on

    25 ವರ್ಷದ ಹನುಮ ವಿಹಾರಿ ಟೀಂ ಇಂಡಿಯಾ ಪರ 4 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 167 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕವೂ ಸೇರಿದೆ. ವಿಶ್ವಕಪ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಪ್ರೀತಿರಾಜ್ ವೃತ್ತಿಯಲ್ಲಿ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಹನುಮ ವಿಹಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  • ಒಂದೇ ದಿನ 11 ವಿಕೆಟ್ ಪತನ – ಗೆಲ್ಲಲು ಭಾರತಕ್ಕೆ ಬೇಕಿದೆ 175 ರನ್

    ಒಂದೇ ದಿನ 11 ವಿಕೆಟ್ ಪತನ – ಗೆಲ್ಲಲು ಭಾರತಕ್ಕೆ ಬೇಕಿದೆ 175 ರನ್

    ಪರ್ತ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ನಾಲ್ಕನೇಯ ದಿನ 11 ವಿಕೆಟ್ ಪತನಗೊಂಡಿದ್ದು, ಪಂದ್ಯ ಗೆಲ್ಲಲು ಭಾರತ 5 ವಿಕೆಟ್ ಗಳ ಸಹಾಯದಿಂದ 175 ರನ್ ಗಳಿಸಬೇಕಿದೆ.

    ಪಂದ್ಯದ 4ನೇ ದಿನದಾಟವನ್ನ 4 ವಿಕೆಟ್ ಕಳೆದುಕೊಂಡು 134 ರನ್ ಗಳಿಂದ ಆರಂಭಿಸಿದ ಆಸ್ಟ್ರೇಲಿಯಾ ಇಂದು 109 ರನ್ ಗಳನ್ನು ಸೇರಿಸಿ 93.2 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯ್ತು. ಪರಿಣಾಮವಾಗಿ ಟೀಂ ಇಂಡಿಯಾ ಗೆಲ್ಲಲು 287 ರನ್ ಗುರಿ ಪಡೆದ ಭಾರತ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ.

    ಆಸೀಸ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಖಾತೆ ತೆರೆಯುವ ಮುನ್ನವೇ ಔಟಾಗುವ ಮೂಲಕ ತಮ್ಮ ಕಳಪೆ ಫಾರ್ಮ್ ಮುಂದುವರಿಸಿದರು. ಇದರ ಬೆನ್ನಲ್ಲೇ ಅನುಭವಿ ಆಟಗಾರ ಪೂಜಾರರನ್ನು ಪೆವಿಲಿಯನ್‍ಗಟ್ಟಿದ್ದ ಹಜಲ್‍ವುಡ್ ತಂಡಕ್ಕೆ ಮತ್ತೊಂದು ಆಘಾತ ನೀಡಿದರು.

    ಈ ಹಂತದಲ್ಲಿ ಆರಂಭಿಕ ಮುರಳಿ ವಿಜಯ್‍ರನ್ನು ಕೂಡಿಕೊಂಡ ಕೊಹ್ಲಿ ತಾಳ್ಮೆ ಆಟಕ್ಕೆ ಮುಂದಾದರು. ಈ ಜೋಡಿ ಮೂರನೇ ವಿಕೆಟ್‍ಗೆ 35 ರನ್ ಜೊತೆಯಾಟ ನೀಡಿತು. ಆದರೆ ಈ ವೇಳೆ ದಾಳಿಗಿಳಿದ ನಥನ್ ಲಯನ್ 17 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಹಾಗೂ 20 ರನ್ ಗಳಿಸಿದ್ದ ಮುರಳಿ ವಿಜಯ್ ವಿಕೆಟ್ ಕಿತ್ತು ಡಬಲ್ ಶಾಕ್ ನೀಡಿದರು. ಈ ವೇಳೆ ಟೀಂ ಇಂಡಿಯಾ 55 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಒತ್ತಡ ಸಂದರ್ಭದಲ್ಲಿ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉಪನಾಯಕ ರಹಾನೆ, ಯುವ ಆಟಗಾರ ಹನುಮ ವಿಹಾರಿ ನಿಧಾನಗತಿ ಬ್ಯಾಟಿಂಗ್ ನಡೆಸಿ, ಕೆಟ್ಟ ಎಸೆತಗಳನ್ನು ದಂಡಿಸುವ ಮೂಲಕ 5ನೇ ವಿಕೆಟ್‍ಗೆ ಮಹತ್ವದ 43 ರನ್ ಜೊತೆಯಾಟ ನೀಡಿದರು. 47 ಎಸೆತಗಳಲ್ಲಿ ಆಕರ್ಷಕ ಸಿಕ್ಸರ್ ಸೇರಿದಂತೆ 2 ಬೌಂಡರಿಗಳೊಂದಿಗೆ 30 ರನ್ ಗಳಿಸಿ ಮುನ್ನುಗುತ್ತಿದ್ದ ರಹಾನೆಯನ್ನು ಔಟ್ ಮೂಲಕ ಹಜಲ್‍ವುಡ್ ಮತ್ತೊಮ್ಮೆ ಮಿಂಚಿದರು.

    ಯುವ ಆಟಗಾರರ ಮೇಲೆ ನಿರೀಕ್ಷೆ: ಆಸೀಸ್ ವಿರುದ್ಧ ಟೆಸ್ಟ್ ಟೂರ್ನಿಯಲ್ಲಿ ಮಹತ್ವ ಮುನ್ನಡೆ ಪಡೆಯಲು ಪರ್ತ್ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಅವಕಾಶ ಲಭಿಸಿದ್ದು, ಸದ್ಯ ಅಂತಿಮ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಯುವ ಆಟಗಾರರಾದ ಹನುಮ ವಿಹಾರಿ (24 ರನ್) ಹಾಗೂ ರಿಷಭ್ ಪಂತ್ (9 ರನ್) ಮೇಲೆ ಹೆಚ್ಚಿನ ನಿರೀಕ್ಷೆ ಇದೆ. 41 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿರುವ ಟೀಂ ಇಂಡಿಯಾಗೆ ಗೆಲುವು ಪಡೆಯಲು 5 ವಿಕೆಟ್‍ಗಳ ಸಹಾಯದಿಂದ 175 ರನ್ ಬೇಕಿದೆ. ಉಳಿದಂತೆ ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಹಜಲ್‍ವುಡ್, ನಾಥನ್ ಲಯನ್ ತಲಾ 2 ವಿಕೆಟ್ ಹಾಗೂ ಸ್ಟಾರ್ಕ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದ್ರಾವಿಡ್ ಫೋನ್ ಕಾಲ್ ರಹಸ್ಯ ಬಿಚ್ಚಿಟ್ಟ ಹನುಮ ವಿಹಾರಿ

    ದ್ರಾವಿಡ್ ಫೋನ್ ಕಾಲ್ ರಹಸ್ಯ ಬಿಚ್ಚಿಟ್ಟ ಹನುಮ ವಿಹಾರಿ

    ಲಂಡನ್: ಓವೆಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ಯುವ ಆಟಗಾರ ಹನುಮ ವಿಹಾರಿ (56 ರನ್, 124 ಎಸೆತ, 7 ಬೌಂಡರಿ, 1 ಸಿಕ್ಸ್) ತಮ್ಮ ಮೊದಲ ಅರ್ಧ ಶತಕದ ಹಿಂದೆ ರಾಹುಲ್ ರ ಒಂದು ಫೋನ್ ಕಾಲ್ ಸಾಕಷ್ಟು ಪ್ರಭಾವ ಬೀರಿದ್ದು, ನನ್ನಲ್ಲಿ ಶಕ್ತಿ ತುಂಬಿತ್ತು ಎಂದು ಹೇಳಿದ್ದಾರೆ.

    ಓವೆಲ್ ಟೆಸ್ಟ್ ನ 3ನೇ ದಿನದಾಟದ ವೇಳೆ ಟೀಂ ಇಂಡಿಯಾವನ್ನು ಭಾರೀ ಅಂತರದ ಹಿನ್ನಡೆಯಿಂದ ತಪ್ಪಿಸಲು ನೆರವಾದ ವಿಹಾರಿ, ಜಡೇಜಾ 86* (156 ಎಸೆತ, 11 ಬೌಂಡರಿ, 1 ಸಿಕ್ಸ್) ರೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಸಿಡಿಸಿದ್ದರು. ದಿನದಾಟದ ಬಳಿಕ ಮಾತನಾಡಿದ ವಿಹಾರಿ ಟೆಸ್ಟ್ ತಂಡಕ್ಕೆ ಆಯ್ಕೆ ಬಳಿಕ ರಾಹುಲ್ ದ್ರಾವಿಡ್ ರೊಂದಿಗೆ ನಡೆಸಿದ ಮಾತು ನನಗೆ ಶಕ್ತಿ ತುಂಬಿದ್ದು, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಲು ನೆರವಾಯಿತು ಎಂದು ಹೇಳಿದ್ದಾರೆ.

    ನನ್ನ ಪಾದಾರ್ಪಣೆ ಪಂದ್ಯದ ಮುನ್ನ ಅವರಿಗೆ ಕರೆ ಮಾಡಿ ಕೆಲ ಸಮಯ ಮಾತನಾಡಿದ್ದೆ. ಆ ಮಾತು ನನ್ನಲ್ಲಿನ ಹಿಂಜರಿಕೆಯನ್ನು ದೂರ ಮಾಡಿ ಶಕ್ತಿ ತುಂಬಿತ್ತು. ಅವರು ಕ್ರಿಕೆಟ್ ಗೇಮ್ ಲೆಜೆಂಡ್. ಅವರ ಪ್ರತಿಯೊಂದು ಸಲಹೆಯೂ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದರು.

    ದ್ರಾವಿಡ್ ಅವರು ನನ್ನ ಬ್ಯಾಟಿಂಗ್ ತಂತ್ರಗಾರಿಕೆ ಕುರಿತು ಮೆಚ್ಚಿದ್ದರು, ಅಲ್ಲದೇ ಮೈದಾನದಲ್ಲಿ ನಿನ್ನ ಆಟವನ್ನು ಆನಂದಿಸು ಎಂದು ಸಲಹೆ ನೀಡಿದ್ದರು. ನನ್ನ ಜೀವನದಲ್ಲಿ ದ್ರಾವಿಡ್ ಕೋಚ್ ಮಾಡುತ್ತಿದ್ದ ಟೀಂ ಇಂಡಿಯಾ ಎ ತಂಡದ ಅವಧಿಯ ಜರ್ನಿ ಪ್ರಮುಖವಾದದ್ದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ವಲ್ಡ್ ಕ್ಲಸ್ ಬೌಲರ್ ಗಳಾದ ಜೇಮ್ಸ್ ಆ್ಯಂಡರ್ ಸನ್, ಬ್ರಾಡ್ ಬೌಲಿಂಗ್ ಎದುರಿಸಲು ನಾಯಕ ಕೊಹ್ಲಿ ಅವರ ಬೆಂಬಲವೂ ಈ ವೇಳೆ ಪ್ರಮುಖವಾಗಿದ್ದು, ಜಡೇಜಾರೊಂದಿಗೆ ಉತ್ತಮ ಜೊತೆಯಾಟ ನೀಡಲು ಕಾರಣವಾಯಿತು. ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಅಧಿಕ ರನ್ ಗಳಿಸುವುದು ನನ್ನ ಗುರಿಯಾಗಿದೆ ಎಂದು ಹನುಮ ವಿಹಾರಿ ಹೇಳಿದರು.

  • ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಅರ್ಧ ಶತಕ- ಹನುಮ ವಿಹಾರಿ ಸಾಧನೆ ಏನು?

    ಪಾದಾರ್ಪಣೆ ಪಂದ್ಯದಲ್ಲೇ ಆಕರ್ಷಕ ಅರ್ಧ ಶತಕ- ಹನುಮ ವಿಹಾರಿ ಸಾಧನೆ ಏನು?

    ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಹನುಮ ವಿಹಾರಿ ತಮ್ಮ ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಗಮನಸೆಳೆದಿದ್ದಾರೆ.

    ಟೀಂ ಇಂಡಿಯಾ ಪರ 292ನೇ ಟೆಸ್ಟ್ ಆಟಗಾರನಾಗಿ ಕ್ಯಾಪ್ ಧರಿಸಿದ ಹನುಮ ವಿಹಾರಿ ಅರ್ಧ ಶತಕ ಸಿಡಿಸಿ ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 26ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 1996ರಲ್ಲಿ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ಗಂಗೂಲಿ (131) ಹಾಗೂ ದ್ರಾವಿಡ್ (95) ರನ್ ಸಿಡಿಸಿ ವಿಶ್ವ ಕ್ರಿಕೆಟ್‍ಗೆ ಸಂದೇಶ ರವಾನಿಸಿದ್ದರು.

    ರವೀಂದ್ರ ಜಡೇಜಾ ಅಜೇಯಾ 86 ರನ್ (156 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನ ಹೊರತಾಗಿಯೂ ಟೀಂ ಇಂಡಿಯಾ 292 ರನ್‍ಗಳಿಗೆ ಅಲೌಟ್ ಆಗಿ 40 ರನ್ ಗಳ ಅಲ್ಪ ಹಿನ್ನಡೆ ಪಡೆಯಿತು. ಇನ್ನು ಪಂದ್ಯದ 58 ಓವರ್ ಆ್ಯಂಡರ್ ಸನ್ ಬೌಲಿಂಗ್‍ನಲ್ಲಿ ಜೀವದಾನ ಪಡೆದ ವಿಹಾರಿ 124 ಎಸೆತಗಳಲ್ಲಿ 56 ರನ್ ಗಳಿಸಿ ವಿಕೆಟ್ ಒಪ್ಪಿದರು. ಇದಕ್ಕೂ ಮುನ್ನ ಪ್ರಮುಖ ಬ್ಯಾಟ್ಸ್ ಮನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆಈ ಇಬ್ಬರ ಜೊತೆಗೂಡಿ 77 ರನ್ ಗಳ ಜೊತೆಯಾಟ ನೀಡಿತು.

    ಹನುಮವಿಹಾರಿ ಟೆಸ್ಟ್ ತಂಡದ ಆಯ್ಕೆ ಅಚ್ಚರಿಯಾಗಿ ಆದರು ಮೊದಲ ಪಂದ್ಯದಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದರು. ಇದರೊಂದಿಗೆ ಟೀಂ ಇಂಡಿಯಾ ಮದ್ಯಮ ಕ್ರಮಾಂಕದ ಬ್ಯಾಟಿಂಗ್‍ಗೆ ಶಕ್ತಿ ತುಂಬುವ ಭರವಸೆ ನೀಡಿದರು. ಆದರೆ ಹನುಮ ವಿಹಾರಿ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಸಾಬೀತು ಪಡಿಸುವುದು ಅಗತ್ಯವಿದೆ.

    ವಿಹಾರಿ ಸಾಧನೆ:
    24 ವರ್ಷದ ಹನುಮ ವಿಹಾರಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಸದ್ಯ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಎಂಎಸ್‍ಕೆ ಪ್ರಸಾದ್ ಬಳಿಕ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಆಂಧ್ರಪ್ರದೇಶ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಆಟಗಾರ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 59.45 ಸರಾಸರಿಯಲ್ಲಿ ರನ್ ಗಳಿಸಿದ್ದು, ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ದಾಖಲೆಯಾಗಿದೆ.

    2012 ರ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಕಪ್ ಗೆದ್ದ ಭಾಗವಾಗಿದ್ದ ವಿಹಾರಿ, 2017-18ರ ರಣಜಿ ಟ್ರೋಫಿಯಲ್ಲಿ 94.00 ಸರಾಸರಿಯಲ್ಲಿ 752 ರನ್ ಸಿಡಿಸಿದ್ದರು. ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ರಣಜಿಯಲ್ಲಿ ಆಂಧ್ರಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದು, ಇದುವರೆಗೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 5,142 ರನ್ (63 ಪಂದ್ಯ, 59.79 ಸರಾಸರಿ), ಲಿಸ್ಟ್ ಎ ಕ್ರಿಕೆಟ್ 2268 ರನ್ (56 ಪಂದ್ಯ, 83.90 ಸರಾಸರಿ) ಗಳಿಸಿದ್ದಾರೆ. ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಭಾಗವಾಗಿದ್ದ ಹನುಮವಿಹಾರಿ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಲಂಡನ್: ಇಂಗ್ಲೆಂಡ್ ವಿರುದ್ಧ ಓವೆಲ್‍ನಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಹನುಮ ವಿಹಾರಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ 24 ವರ್ಷದ ಹನುಮ ವಿಹಾರಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದು ಟೀಂ ಇಂಡಿಯಾ 292ನೇ ಟೆಸ್ಟ್ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

    ಈ ಕುರಿತು ಸಂತಸ ವ್ಯಕ್ತಪಡಿಸಿರುವ ವಿಹಾರಿ, ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಆದರೆ ಒಮ್ಮೆ ತಂಡದಲ್ಲಿ ಸ್ಥಾನ ಲಭಿಸಿದರೆ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಾನು ಈ ಕುರಿತು ಹೆಚ್ಚಿನ ಗಮನ ನೀಡಿದ್ದಾಗಿ ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯಕ್ಕೆ ತಂಡದ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಆಗಿದ್ದು, ಆರ್ ಅಶ್ವಿನ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಪಾಂಡ್ಯ ಸ್ಥಾನದಲ್ಲಿ ಹನುಮ ವಿಹಾರಿಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ 2 ಪಂದ್ಯಗಳಿಗೆ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಸಮಿತಿ ಆಯ್ಕೆ ಮಾಡಿತ್ತು.

    ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿದ್ದರು.

    ಹನುಮ ವಿಹಾರಿ ಸಾಧನೆ:
    ಪ್ರಥಮ ದರ್ಜೆ ಕ್ರಿಕೆಟ್ – 63 ಪಂದ್ಯ, 5,142 ರನ್, 59.79 ಸರಾಸರಿ
    ಲಿಸ್ಟ್ ಎ ಕ್ರಿಕೆಟ್- 56 ಪಂದ್ಯ, 2268 ರನ್, 83.90 ಸರಾಸರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ

    ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ

    – ಆರಂಭಿಕ ಮುರಳಿ ವಿಜಯ್, ಕುಲ್‍ದೀಪ್‍ಗೆ ಕೊಕ್

    ಮುಂಬೈ: ಇಂಗ್ಲೆಂಡ್ ವಿರುದ್ಧದ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ ಆರಂಭಿಕ ಆಟಗಾರ ಮುರಳಿ ವಿಜಯ್ ಹಾಗೂ ಕುಲ್ ದೀಪ್ ಯಾದವ್ ಅವರಿಗೆ ಕೊಕ್ ನೀಡಲಾಗಿದೆ.

    ಬಿಸಿಸಿಐ ಈ ಕುರಿತು ತನ್ನ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, 18 ವರ್ಷದ ಪೃಥ್ವಿ ಶಾ ಹಾಗೂ 24 ವರ್ಷದ ಹನುಮ ವಿಹಾರಿ ಆಯ್ಕೆ ಖಚಿತ ಪಡಿಸಿದೆ. ಇಂಗ್ಲೆಂಡ್ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೇ ದೇಶಕ್ಕೆ ವಿಶ್ವಕಪ್ ಗೆದ್ದು ತಂದು ಗೌರವ ಹೆಚ್ಚಿಸಿದ್ದರು.

    ಪೃಥ್ವಿ ಶಾ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಆಟಗಾರರಾಗಿದ್ದು, ಹಲವು ಸ್ಟಾರ್ ಆಟಗಾರರ ಮನ ಗೆದ್ದಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪೃಥ್ವಿ ಶಾ 56.72 ಸರಾಸರಿಯಲ್ಲಿ ರನ್ ಗಳಿಸಿದ್ದು, 7 ಶತಕ, 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ ಭಾರತ ಎ ತಂಡದ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ದುಲೀಪ್ ಟ್ರೋಫಿ ಟೂರ್ನಿಯ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದ ಶಾ, ಟೂರ್ನಿಯಲ್ಲಿ ಶತಕ ಸಿಡಿಸಿದ ಕಿರಿಯ ವಯಸ್ಸಿನ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದರು.

    ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ಸೌತ್ ಅಫ್ರಿಕಾ ತಂಡದ ವಿರುದ್ಧ ಇದೇ ತಿಂಗಳಲ್ಲಿ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದ್ದರು. ಸದ್ಯ ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿರುವ ವಿಹಾರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ತಂಡಕ್ಕೆ ಆಯ್ಕೆ ಆಗಿದ್ದಾರೆ.

    ತಂಡ ತಂದಿದೆ:
    ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್. ಇಶಾಂತ್ ಶರ್ಮಾ, ಶಮಿ, ಜಸ್‍ಪ್ರೀತ್ ಬುಮ್ರಾ, ಪೃಥ್ವಿ ಶಾ, ಜಡೇಜಾ, ರವೀಂದ್ರ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಕರುಣ್ ನಾಯರ್, ದಿನೇಶ್ ಕಾರ್ತಿಕ್, ಹನುಮ ವಿಹಾರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv