Tag: ಹನುಮೇಗೌಡ

  • ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲು

    ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎರಡೆರಡು ದೂರು ದಾಖಲಾಗಿದೆ.

    ಸಾಮಾಜಿಕ ಹೋರಾಟಗಾರ ಹನುಮೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತ ಸಿದ್ದರಾಜು ಎಂಬವರು ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ವಿಗ್ರಹ ದಳ (ಎಸಿಬಿ)ಗೆ ದೂರು ಸಲ್ಲಿಸಿದ್ದಾರೆ. ಆಪರೇಷನ್ ಕಮಲ ಡೀಲ್ ಆಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಯಡಿಯೂರಪ್ಪ ಜನ ಪ್ರತಿನಿಧಿಯಾಗಿದ್ದು, ಮತ್ತೊಬ್ಬನಿಗೆ ಹಣದ ಆಮಿಷವೊಡ್ಡಿದ್ದು ಭ್ರಷ್ಟಾಚಾರವಾಗಿದೆ. ಆದ್ದರಿಂದ ಅವರು ಭ್ರಷ್ಟಾಚಾರ ಮಾಡಿದಕ್ಕೆ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶಾಸಕನ ಮಗನನ್ನು ಕಳಿಸಿಕೊಟ್ಟು ಕುತಂತ್ರ- ತಪ್ಪೊಪ್ಪಿಕೊಂಡ್ರು ಬಿಎಸ್‍ವೈ

    ಇತ್ತ ಆಪರೇಷನ್ ಕಮಲದ ವಿರುದ್ಧ ಎಸಿಬಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಶಿವನಗೌಡನಾಯಕ್, ನಾಗನಗೌಡ ಮತ್ತು ಶರಣಗೌಡ ವಿರುದ್ಧ ದೂರು ನೀಡಿದ್ದಾರೆ. ಆಪರೇಷನ್ ಕಮಲದಲ್ಲಿ ಇವರೆಲ್ಲರೂ ಭಾಗಿಯಾಗಿದ್ದಾರೆ. ಹೀಗಾಗಿ ಎಲ್ಲರ ವಿರುದ್ಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

    ಫೆಬ್ರವರಿ 8 ರಂದು ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಾಗಿತ್ತು. ಅಂದಿನ ದಿನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪನವರು ಶಾಸಕ ನಾಗನಗೌಡ ಪ್ರುತ್ರ ಶರಣಗೌಡರಿಗೆ ಹಣದ ಆಮಿಷ ಒಡ್ಡಿದ್ದ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಮೊದಲಿಗೆ ಅದು ಸತ್ಯಕ್ಕೆ ದೂರವಾದ ಮಾತು, ಮಿಮಿಕ್ರಿ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ ತದನಂತರ ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆ ಮಾಚಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಬಿಎಸ್ ವೈ ಆಪರೇಷನ್ ಕಮಲ ನಡೆಸುತ್ತಿರುವ ಸತ್ಯವನ್ನು ಒಪ್ಪಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv