ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ (Darshan) ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದಾರಂತೆ. ಆ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಅವರು ಯೋಗ ಮತ್ತು ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾಗಿದ್ದಾರಂತೆ. ನಿತ್ಯವೂ ಈಗ ಜೈಲಿನಲ್ಲಿ ಕೂತು ದರ್ಶನ್ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಜೊತೆಗೆ ಜೈಲರ್ ಗೆ ಮನವಿ ಮಾಡಿ ಅಲ್ಲೇ ಸಿಗುವ ಪುಸ್ತಕಗಳನ್ನು ಓದುತ್ತಿದ್ದಾರಂತೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಸೇರಿ ಮೂರು ವಾರಗಳು ಕಳೆದಿವೆ. ಒಂದೊಂದು ದಿನವನ್ನೂ ಅವರು ಕಳೆಯೋಕೆ ಕಷ್ಟ ಪಡ್ತಿದ್ದಾರೆ. ಆರೋಗ್ಯದಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ತಿದೆ. ನಿತ್ಯವೂ ಅವರ ತೂಕ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಜೈಲಿನ ಆಹಾರ ಕೂಡ ಅವರಿಗೆ ಒಗ್ಗುತ್ತಿಲ್ಲ. ಇದರಿಂದಾಗಿ ದರ್ಶನ್ ಕುಗ್ಗಿ ಹೋಗಿದ್ದಾರಂತೆ. ಖಿನ್ನತೆಯಿಂದಲೂ ಬಳಲುತ್ತಿದ್ದಾರಂತೆ.
ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮೊನ್ನೆಯಷ್ಟೇ ತನಗೆ ಮನೆ ಊಟ ಬೇಕು ಅಂತ ಮಾನ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ದರ್ಶನ್. ಈ ಅರ್ಜಿಯ ವಿಚಾರಣೆಯನ್ನು ಜುಲೈ 18ಕ್ಕೆ ನ್ಯಾಯಾಲಯ ಮುಂದೂಡಿದೆ. ಅವತ್ತು ಮನೆ ಊಟಕ್ಕೆ ಅನುಮತಿ ಸಿಗತ್ತಾ? ಅಥವಾ ಜೈಲೂಟವೇ ಮುಂದುವರೆಯತ್ತಾ ಅಂತ ಕಾದು ನೋಡಬೇಕು.
ಬೆಂಗಳೂರು: ನಗರದ ನಗರ್ತಪೇಟೆಯ ಎಂಜೆ ರೋಡ್‍ನಲ್ಲಿ ಭಾನುವಾರ ಸಂಜೆ ತನ್ನ ಮೊಬೈಲ್ ಶಾಪ್‍ನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮುಸ್ಲಿಂ ಯುವಕರ ಗುಂಪು ಗಲಾಟೆ ಮಾಡಿತ್ತು.
ಮೊಬೈಲ್ ಶಾಪ್ ಮಾಲಿಕ ಮುಕೇಶ್ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ರು. ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಬೆನ್ನಲ್ಲೇ ಬಿಜೆಪಿ ಸಂಸದರಾದ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಚಾರ್, ಸಿಕೆ ರಾಮಮೂರ್ತಿ ಸೇರಿದಂತೆ ಅನೇಕರು ಮೊಬೈಲ್ ಶಾಪ್‍ಗೆ ಭೇಟಿ ನೀಡಿದ್ದರು. ಹಲ್ಲೆಗೆ ಒಳಗಾದ ಮುಕೇಶ್ ಆರೋಗ್ಯವನ್ನು ವಿಚಾರಿಸಿದ್ರು.
ಬೆಂಗಳೂರು ಕೇಂದ್ರ ಡಿಸಿಪಿಗೆ ಕರೆ ಮಾಡಿದ ತೇಜಸ್ವಿ ಸೂರ್ಯ ನಾಳೆ ವೇಳೆಗೆ ಹಲ್ಲೆ ಮಾಡಿದ ಆರೋಪಿಗಳನ್ನ ಬಂಧಿಸದಿದ್ದರೆ ನಗರ್ತಪೇಟೆ ಬಂದ್ ಮಾಡೋದಾಗಿ ತೇಜಸ್ವಿ ಸೂರ್ಯ (Tejasvi Surya) ಎಚ್ಚರಿಕೆ ನೀಡಿದ್ದಾರೆ. ಆದರೆ ಮೂವರನ್ನು ಬಂಧಿಸಿರೋದಾಗಿ ಪೊಲೀಸರು ಹೇಳಿದ್ದಾರೆ. ಗಾಯಗೊಂಡಿರೋ ಮುಕೇಶ್ ಘಟನೆಯನ್ನು ವಿವರಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದ ನೂತನ ಡಿಜಿಪಿಯಾಗಿ ವಿವೇಕ್ ಸಹಾಯ್ ನೇಮಕ
ಪವನ್ ಕುಮಾರ್ (Pawan Kumar) ನಿರ್ದೇಶನದ ‘ದಿ ಎಂಡ್’ (The End) ಚಿತ್ರದ ಹಾಡೊಂದರ (ಹನುಮಾನ್ ಚಾಲೀಸ) (Hanuman Chalice) ಲಿರಿಕಲ್ ವಿಡಿಯೋ ಮಹಾಶಿವರಾತ್ರಿಯ ಪುಣ್ಯದಿವಸ ಬಿಡುಗಡೆಯಾಯಿತು. ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್, ಮಂಜುನಾಥ್, ಧರ್ಮಶ್ರೀ ಮಂಜುನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವೆಂಕಟೇಶ್ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಕನ್ನಡ ಪ್ರಥಮ ಸೂಪರ್ ಹೀರೋ ಕಾನ್ಸೆಪ್ಟ್ ನ ಚಿತ್ರ ದಿ ಎಂಡ್. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಕೇವಲ ಐದು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ವಿಶೇಷ ಪಾತ್ರದಲ್ಲಿ ನಟಿಸಲು ಅನಂತನಾಗ್ ಅವರ ಜೊತೆ ಮಾತುಕತೆ ನಡೆಯುತ್ತಿದೆ. ಹದಿನೆಂಟು ಪುರಾಣಗಳನ್ನು ಆಧರಿಸಿ ಮಾಡುತ್ತಿರುವ ಈ ಚಿತ್ರ, ಒಂಭತ್ತು ಭಾಷೆಗಳಲ್ಲಿ ಐದು ಭಾಗಗಳಲ್ಲಿ ಬರಲಿದೆ. ಇದು ಮೊದಲ ಭಾಗ. ದಿ ಎಂಡ್ ಚಿತ್ರಕ್ಕೆ PREAMBLE ಎಂಬ ಅಡಿಬರಹವಿದೆ.PREAMBLE ಎಂದರೆ ಪೀಠಿಕೆ ಎಂದು ಅರ್ಥ. ಇನ್ನು ಸರ್ವಕಾಲಿಕ ಸೂಪರ್ ಹೀರೋ ಹನುಮಂತನ ಮಹಿಮೆಯನ್ನು ವರ್ಣಿಸುವ ಹನುಮಾನ್ ಚಾಲೀಸ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಮಹಾಶಿವರಾತ್ರಿ ಪುಣ್ಯದಿವಸ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಐದು ಪ್ರಸಿದ್ದ ಶಿವ ದೇಗುಲಗಳಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ಅರುಣ್ ಆಂಡ್ರ್ಯೂ ಸಂಗೀತ ನೀಡಿರುವ ಈ ಹಾಡನ್ನು ಮಧುಕುಮಾರ್ ಭಾವಪರವಶರಾಗಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಆದರೆ “ದಿ ಎಂಡ್” ಇದೇ ಮೇ ವೇಳೆಗೆ ನಿಮ್ಮ ಮುಂದೆ ಬರಲಿದೆ ಎಂದು ನಿರ್ದೇಶಕ ಪವನ್ ಕುಮಾರ್ ತಿಳಿಸಿದರು.
ಪವನ್ ಕುಮಾರ್ ಅವರು ಆಯ್ದುಕೊಂಡಿರುವ ಕಥೆ ಚೆನ್ನಾಗಿದೆ. ಸೂಪರ್ ಹೀರೋ ಎಂದರೆ ವಿಶೇಷ ಶಕ್ತಿಯುಳ್ಳವನು ಎಂದು. ಚಿತ್ರದಲ್ಲಿ ನಾನು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರವಿಶೇಖರ್.
ನಾಯಕಿ ಪವಿತ್ರ, ವಿಶೇಷ ಪಾತ್ರದಲ್ಲಿ ನಟಿಸಲಿರುವ ನಟಿ ಚೈತ್ರಾ ಕೊಟ್ಟೂರ್, ಸಂಗೀತ ನಿರ್ದೇಶಕ ಅರುಣ್ ಆಂಡ್ರ್ಯೂ, ಗಾಯಕ ಮಧುಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ದಿ ಎಂಡ್” ಕುರಿತು ಮಾತನಾಡಿದರು.
ನೂತನವಾಗಿ ನಿರ್ಮಾಣವಾಗಿರುವ ಲುಲು ಶಾಪಿಂಗ್ ಮಾಲ್‍ಗೆ ಪ್ರವೇಶಿಸಲು ಪ್ರಯತ್ನಿಸಿ ಗಲಾಟೆ ಮಾಡಿದ್ದ ಸುಮಾರು 15 ಮಂದಿಯನ್ನು ವಶಕ್ಕೆ ಪಡೆಯಲಾಯಿತು.
ಈ ಕುರಿತಂತೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ ಅವರು, ಮಾಲ್ ಒಳಗೆ ಪ್ರವೇಶಿಸಿದ ಇಬ್ಬರು ನೆಲದ ಮೇಲೆ ಕುಳಿತು ಹನುಮಾನ್ ಚಾಲೀಸಾ ಓದಲು ಆರಂಭಿಸಿದರು. ಈ ಬಗ್ಗೆ ಮಾಲ್‍ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಇಬ್ಬರನ್ನು ಅರೆಸ್ಟ್ ಮಾಡಲಾಯಿತು. ಇದರಿಂದಾಗಿ ಮತ್ತೊಂದು ಪ್ರತಿಭಟನಾಕಾರರ ಗುಂಪು ಮಾಲ್‍ಗೆ ಪ್ರವೇಶಿಸಲು ಯತ್ನಿಸಿ ಗಲಾಟೆ ಮಾಡಲು ಆರಂಭಿಸಿದರು. ಹೀಗಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂಬ ಉದ್ದೇಶದಿಂದ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು ನಂತರ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು ಎಂದು ತಿಳಿಸಿದ್ದಾರೆ.
Hindus are protesting outside #LULU Mall in Lucknow ????
ಇತ್ತೀಚೆಗಷ್ಟೇ ಲುಲು ಮಾಲ್‍ನ ಒಳಗಡೆ ಮುಸ್ಲಿಮರ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ನಮಾಜ್ ಮಾಡಿದ ಗುಂಪಿನವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯ) ಅಡಿಯಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು.
ನಂತರ ಮಾಲ್ ಅಧಿಕಾರಿಗಳು ಶುಕ್ರವಾರ ಯಾವುದೇ ಧರ್ಮದ ಧಾರ್ಮಿಕ ಪ್ರಾರ್ಥನೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಮಾಲ್‍ನ ಹಲವು ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಹಾಕಿದ್ದಾರೆ. ಬಳಿಕವೂ ಮತ್ತೊಂದು ವೀಡಿಯೊ ಬಿಡುಗಡೆಯಾಗಿತ್ತು. ಇದನ್ನು ಖಂಡಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಮಾಲ್ ಹೊರಗೆ ಪ್ರತಿಭಟನೆಗೆ ಮುಂದಾಗಿತ್ತು. ತಾವೂ ಕೂಡ ಹನುಮಾನ್ ಚಾಲೀಸಾವನ್ನು ಪಠಿಸಲು ಅನುಮತಿ ನೀಡಬೇಕೆಂದು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಈ ಮನವಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಹೀಗಾಗಿ ಮಾಲ್ ಮುಂದೆ ಪ್ರತಿಭಟನೆಯನ್ನು ಆರಂಭಿಸಿದ ಪ್ರತಿಭಟನಾಕಾರರು, ಹನುಮಾನ್ ಚಾಲೀಸಾ ಪಠಿಸಲು ಲುಲು ಮಾಲ್‍ನ ಒಳಗೆ ಬಂದಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಕೆಲ ಪ್ರತಿಭಟನಾಕಾರರು ಓಡಿದ್ದಾರೆ. ಕೊನೆಗೂ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ಎಲ್ಲರನ್ನು ವಶಕ್ಕೆ ಪಡೆದಿದ್ದಾರೆ.
ಜುಲೈ 10ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲುಲು ಮಾಲ್ ಅನ್ನು ಉದ್ಘಾಟಿಸಿದ್ದರು. ಈ ಮಾಲ್ ಅನ್ನು ಭಾರತೀಯ ಮೂಲದ ಬಿಲಿಯನೇರ್ ಯೂಸುಫ್ ಅಲಿ ಎಂಎ ನೇತೃತ್ವದ ಅಬುಧಾಬಿ ಮೂಲದ ಲುಲು ಗ್ರೂಪ್ ತೆರೆದಿದೆ.
Live Tv
[brid partner=56869869 player=32851 video=960834 autoplay=true]
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ರಾಜೀನಾಮೆ ಕೊಡುತ್ತಿದ್ದಂತೆಯೇ ಕಂಗನಾ ರಣಾವತ್, ತುಂಬಾ ಆಕ್ಟಿವ್ ಆಗಿದ್ದಾರೆ. ಠಾಕ್ರೆ ಸಿಎಂ ಖುರ್ಚಿಯಿಂದ ಇಳಿಯುತ್ತಿದ್ದಂತೆಯೇ ವಿಡಿಯೋವೊಂದನ್ನು ಮಾಡಿರುವ ಕಂಗನಾ, ಒಂದಷ್ಟು ಇತಿಹಾಸದ ಪಾಠವನ್ನು ಮಾಡಿದ್ದಾರೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆಯೂ ಮಾತನಾಡಿದ್ದಾರೆ. ಜೆ.ಪಿ ನಾರಾಯಣ್ ಅವರನ್ನು ಅವರು ನೆನಪಿಸಿಕೊಂಡಿದ್ದಾರೆ. 1975ರ ಘಟನೆಯನ್ನೂ ಅವರು ನೆನಪಿಸಿಕೊಂಡಿದ್ದಾರೆ.
ಹನುಮಾನ್ ಚಾಲೀಸ್ ಕುರಿತಾಗಿಯೂ ವಿಡಿಯೋದಲ್ಲಿ ಹೇಳಿರುವ ಕಂಗನಾ ರಣಾವತ್, “ಶಿವನ 12ನೇ ಅವತಾರವೇ ಹನುಮಂತ. ಶಿವನ ಆರಾಧನೆಯನ್ನೂ ಮಾಡುವ ಶಿವಸೇನೆಯು ಹುನುಮಾನ್ ಚಾಲೀಸ್ ಅನ್ನು ಬ್ಯಾನ್ ಮಾಡಲು ಹೊರಟಿತ್ತು. ಹಾಗೇನಾದರೂ ಮಾಡಿದ್ದರೆ ಶಿವನೂ ಅವರನ್ನು ಕಾಪಾಡುವುದಿಲ್ಲ. ಹರಹರ ಮಹಾದೇವ್” ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ. ಅದನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದಾರೆ. ಇದನ್ನೂ ಓದಿ:ಪವಿತ್ರ ಲೋಕೇಶ್ ದೂರು : ತನಿಖೆ ಆರಂಭಿಸಿದ ಸೈಬರ್ ಪೊಲೀಸ್
ಕಂಗನಾ ರಣಾವತ್ ಗೂ ಹಾಗೂ ಉದ್ಭವ ಠಕ್ರೆಗೂ ಎರಡ್ಮೂರು ವರ್ಷಗಳಿಂದ ಮಾತಿನ ಚಕಮಕಿ ನಡೆದೇ ಇದೆ. ಮುಂಬೈನಲ್ಲಿರುವ ಕಂಗನಾ ರಣಾವತ್ ಆಫೀಸಿನ ಕಟ್ಟಡವು ನಿಯಮಬಾಹಿರವಾಗಿ ಕಟ್ಟಿದ್ದಾರೆ ಎಂದು ಆರೋಪಿಸಿ 2020ರಲ್ಲಿ ತೆರೆವುಗೊಳಿಸಲಾಗಿತ್ತು. ಅಲ್ಲಿಂದ ಠಾಕ್ರೆ ಸರಕಾರದ ವಿರುದ್ಧ ಕಂಗನಾ ಸಿಡಿದೆದ್ದಿದ್ದರು. ಶಿವಸೇನೆ ಕಾರ್ಯಕರ್ತರು ಕಂಗನಾ ವಿರುದ್ಧ ಪ್ರತಿಭಟನೆ ಮಾಡಿದ್ದರಿಂದ ಈ ಕಾರಣಕ್ಕಾಗಿ ಕಂಗನಾ ಅವರಿಗೆ ಭದ್ರತೆಯನ್ನೂ ನೀಡಲಾಗಿತ್ತು.
ಬೆಂಗಳೂರು: ಆಜಾನ್ ವಿಚಾರದಲ್ಲಿ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದೆ. ಆದರೆ ಸರ್ಕಾರದಿಂದ ಯಾವುದೇ ಕ್ರಮ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ದೇವಾಲಯಗಳಲ್ಲಿ ಆರತಿ, ಹನುಮಾನ್ ಚಾಲೀಸಾ ಪಠಿಸಲು ನಿರ್ಧರಿಸಿವೆ.
ಈ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಮತ್ತು ಆಂದೋಲ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೂಪರ ಸಂಘಟನೆಗಳು ಆಜಾನ್ ಕೂಗುವುದನ್ನು ನಿಷೇಧಿಸಲು ಮೇ 1 ರವರೆಗೂ ಗಡುವು ನೀಡಿದ್ದವು. ಮೇ 1ರ ಒಳಗೆ ಮಸೀದಿಯ ಧ್ವನಿವರ್ಧಕ ತೆರವಿಗೆ ಶ್ರೀರಾಮಸೇನೆ ಗಡುವು ನೀಡಿತ್ತು. ಆದರೆ ಸರ್ಕಾರ ಮೇ 1 ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಸಾರ್ವಜನಿಕ, ವಸತಿ ಸ್ಥಳಗಳಲ್ಲಿ ಆಜಾನ್ ಕೂಗಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಡೆಸಿಬಲ್ ಕಡಿಮೆ ಇಡಬೇಕು ಅಂತಾ ಸುಪ್ರೀಂ ಕೋರ್ಟ್ ಸ್ಪಷ್ಟವಾದ ಆದೇಶ ನೀಡಿದೆ. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಜರುಗಿಸಿಲ್ಲ. ಸರ್ಕಾರಕ್ಕೆ ನೀಡಿದ್ದ ಗಡುವು ಅಂತ್ಯವಾದ ಹಿನ್ನೆಲೆ ಹಿಂದೂಪರ ಸಂಘಟನೆಗಳಿಂದ ಆಜಾನ್ ವಿರುದ್ಧ ಹೋರಾಟ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
ರಾಜ್ಯಾದ್ಯಂತ ಮೇ 9 ನೇ ತಾರೀಖು ಮೈಕ್ ಪ್ರಾರ್ಥನೆ ತಡೆಯದಿದ್ದರೆ ಹಿಂದೂ ಸಂಘಟನೆಗಳಿಂದ ಸಂಘರ್ಷವಾಗಲಿದ್ದು, ಆಜಾನ್ ವಿರುದ್ಧ ಆರತಿ, ಹನುಮಾನ್ ಚಾಲೀಸಾ ಪಠಣ ಪಠಿಸಲಾಗುವುದು. ಹಿಂದೂ ದೇವಾಲಯಗಳ ಬಳಿ ಶ್ರೀರಾಮನ ಭಜನೆ ಮಾಡಲು ಶ್ರೀರಾಮ ಸೇನೆ ನಿರ್ಧರಿಸಿದೆ.
ಮೇ 9 ರ ಬೆಳ್ಳಗ್ಗೆ 5 ಗಂಟೆಗೆ ದೇಗುಲ, ಮಠದಲ್ಲಿ ಭಜನೆ ನಡೆಸುವ ಪ್ಲ್ಯಾನ್ ಹಾಕಿಕೊಂಡಿದೆ. ಹಿಂದೂಪರ ಸಂಘಟನೆಗಳು ಅಂದು ರಾಜ್ಯದ ದೇವಾಲಯಗಳಲ್ಲಿ ಮೈಕ್ ಹಾಕಿ ಕೀರ್ತನೆ, ಭಜನೆ ಪಠಣೆ ಮಾಡಲಿವೆ.
ಮುಂಬೈ: ಮಸೀದಿಗಳ ಮುಂದೆ ಧ್ವನಿ ವರ್ಧಕಗಳನ್ನು ತೆಗೆಸದಿದ್ದರೆ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದು ಮಹಾರಾಷ್ಟ್ರದ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಭಾನುವಾರ ಮುಂಬೈನ ಘಾಟ್‌ಕೋಪರ್‌ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲೀಸ್ ನುಡಿಸಲಾಗಿದೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಧ್ವನಿವರ್ಧಕಗಳನ್ನು ಬಳಸುವ ಮಸೀದಿಗಳಿಗೆ ಎಚ್ಚರಿಕೆ ನೀಡುತ್ತೇನೆ. ಧ್ವನಿವರ್ಧಕಗಳನ್ನು ತೆಗೆದು ಹಾಕಿ. ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸ್ ನುಡಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸಿ: ರಾಜ್ ಠಾಕ್ರೆ
ನಾನು ಪ್ರಾರ್ಥನೆ ಮಾಡುವುದಕ್ಕೆ ವಿರೋಧಿಸುವುದಿಲ್ಲ. ನೀವು ನಿಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಬಹುದು. ಆದರೆ ಮಸೀದಿಗಳಲ್ಲಿ ಧ್ವನಿವರ್ಧಕಗಳಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಧ್ವನಿವರ್ಧಕಗಳನ್ನು ನಾವೇ ತೆಗೆದುಹಾಕಿ ಮಸೀದಿ ಮುಂದೆ ಹನುಮಾನ್ ಚಾಲೀಸ್ ಅನ್ನು ನುಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಎಚ್ಚರಿಕೆಯ ಬೆನ್ನಲ್ಲೇ ಘಾಟ್‌ಕೋಪರ್‌ನಲ್ಲಿ ಮಸೀದಿ ಹತ್ತಿರುವ ಇರುವ ಎಂಎನ್‌ಎಸ್ ಕಚೇರಿ ಮುಂದಿರುವ ಮರಕ್ಕೆ ಸ್ಪೀಕರ್ ಹಾಕಿ ಹನುಮಾನ್ ಚಾಲೀಸಾ ನುಡಿಸಲಾಗಿದೆ. ಈ ವಿಚಾರ ತಿಳಿದ ಬೆನ್ನಲ್ಲೇ ಪೊಲೀಸರು ಸ್ಪೀಕರ್ ಹಾಕಿದ ಮಹೇಂದ್ರ ಭಾನುಶಾಲಿಯ್ನನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್
MNS leader Mahendra Bhanushali taken into police custody after playing ‘Hanuman Chalisa’ on loudspeakers without permission
“They’ve taken away my amplifier. But I’d like to say, in the coming times, ‘Jai Shree Ram’ will be played on loudspeakers,” he said pic.twitter.com/5xt3f7Hvgz
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಹೇಂದ್ರ ಭಾನುಶಾಲಿ, ರಾಜ್ ಠಾಕ್ರೆ ರಸ್ತೆಯಲ್ಲಿ ‘ಹನುಮಾನ್ ಚಾಲೀಸಾ’ ನುಡಿಸಲು ಆದೇಶಿಸಿದರು. ಈ ಆದೇಶಕ್ಕೆ ನಾನು ಬದ್ಧನಾಗಿರುತ್ತೇನೆ. ಪೊಲೀಸರು ಅನಧಿಕೃತ ಲೌಡ್ ಸ್ಪೀಕರ್ ತೆಗೆಯಿರಿ ಇದರಿಂದ ದ್ವೇಷ ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ಆದರೆ ಹಲವು ವರ್ಷಗಳಿಂದ ಮಸೀದಿಯಲ್ಲಿ ಅನಧಿಕೃತವಾಗಿ ಲೌಡ್‌ಸ್ಪೀಕರ್ ಹಾಕಲಾಗುತ್ತದೆ. ಆದರಿಂದ ದ್ವೇಷ ಬರುವುದಿಲ್ಲವೇ? ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಸರಿಯೇ ಎಂದು ಪ್ರಶ್ನಿಸಿದ್ದಾರೆ.